ಆ ಹುಣುಮ್ಯಾಲೆ ಕೈಯಿಟ್ಟು ಶರಬಂಧರಾಜ
ನೋಡವೋ ಕಾಂಭೋಜರಾಜ
ನಾನು ಸತ್ರೆ ಹುಣ್ಣು ಉರಿತೈತೆ
ಸತ್ತೇನಪ್ಪಾ ಮೊದ್ದು ಮಾರೋ ಹುಡುಗಾ
ಕಾಶಿನಾಗ ಅಂತ ದುಃಖ ಮಾಡು
ಈಗ ನಾನಿದ್ರೆ ಭೂಮಿ ಮ್ಯಾಲೆ
ನಿನ್ನ ಹುಣ್ಣು ತಣ್ಣಗಿರತೈತೆ
ಈ ಹುಳೇನು ಸಾಯಾದಿಲ್ಲ
ಈ ಹುಣ್ಣು ಶನಿಮಾತ್ಮ ಬಿಟ್ಟೋಗಾದಿಲ್ಲ
ಅವುಷದ್ಧ ತರಬೇಕು
ಇನ್ನವರ ಹುಣ್ಣಿಗ್ಹಾಕ್ಬೇಕು
ಶನಿಮಾತ್ಮ ಭಗ್ಗನುರಿಬೇಕು
ಬೆಂಕಿ ತಿಂಬಾ ಪಕ್ಷಿ ರಕ್ತ ಕೂಟ
ತಯಾರ ಮಾಡಬೇಕೆಂದ್ರೆ ಸಾಮಾನ್ಯವಾ
ಬೆಂಕಿ ಉರಿದಂತ ಶನಿಮಾತ್ಮ
ಬಗ್ಗನ ಉರುದ್ದೋತಾನ
ಅಷ್ಟಾಗಲಪ್ಪಾ ತಮ್ಮ
ನನ ಮಕ್ಕಳು ತರತಾರಪ್ಪಾ
ಬಿಡೋದಿಲ್ಲ ಆರು ಮಂದಿ
ತರತಾರೋ ಅತ್ತಾಗ್ಹೋತಾರೋ
ಯಾರಿಗೋತ್ತು ಅಂತಾ
ಹೋಗಿಬರತೀನ್ರೀ
ತಮ್ಮ ನಿನ್ಹೆಸರು ನಿಮಮ್ಮನ್ಹೆಸುರು ನಿಮಪ್ಪನ್ಹೆಸರು
ಮರೋಗಿ ಬಿಟ್ನಲ್ಲಪ್ಪ
ಹೇಳಿದನಲ್ಲ
ತಮ್ಮಾ ಏನೋ ಮರತೋದೆಪ್ಪಾ
ತಿರಿಗಿ ಹೇಳು
ಆಗ ಯಾರನ್ನ ಮೇಟೌಷದ ಬಂದ್ರೆ
ಇಂತಾ ಹುಡುಗಂತೆ
ಅವ್ರು ತಾಯಿ
ತಂದೆ ಎಲ್ಲಿದ್ದಾರಾ
ಆಹುಡುಗ ಎಲ್ಲಿದಾನ ಅಂತ ಕೇತ್ತೀನಪ್ಪಾ
ನೋಡಪಾ ನನ್ಹೆಸರು ಮದ್ದು ಮಾರೋ ರಾಜ ಜೋಗಿ
ನಮಪ್ಪ ಮೊದ್ದು ಮಾರೋ ಮಾರೆಪ್ಪ
ನಮ್ಮ ತಾಯಿ ಆದ್ರೇನಾ
ಈಗ ಜೀವಕ್ಕೆ

ಎಪ್ಪಾ ಸವತಿ ಮಕ್ಕಳ ಮೊದ್ದು ಕೊಡೋ ತಾಯಿ
ಮಕ್ಕಳಿಗೆ ಅವಷದ ಕೊಟ್ಟು ಲೋಕ ಕೊಲ್ಲಾಕಿಯಪ್ಪಾ
ಮೊದ್ದು ಮಾರೋ ಸಿರಿದೇವಿ || ತಂದಾನ ||

ಕೇಳವೋ ಮೇಟೌಷದ್ದ ನಮಮ್ಮ
ಮಕ್ಕಳು ಕೊಟ್ಟು ಕೊಲ್ಸಾಕಿ
ನಮ್ಮ ತಾಯಿ ಸಿರಿದೇವಿ
ಮೊದ್ದು ಮಾರೋ ಸಿರಿದೇವಿ
ಅಂದ್ರೆ ಎನಂತಾನ

ಭಾಮಾ ಇಲ್ಲಿ ಸತ್ತು ಭಾಮಾ
ಮೊದ್ದು ಮಾರೋರು ಹೊಟ್ಟ್ಯಾಗ
ನೀನು ಹುಟ್ಟಿ ಬೆಳಿದಿಯೇನಾಲೆ || ತಂದಾನ ||

ಭಾಮಾ ಚಿಕ್ಕೇಣ್ತಿ ಸಿರಿದೆವಿ
ಇಲ್ಲಿ ಸತ್ತು ಭಾಮಾ
ಮದ್ದು ಮಾರುತಿದ್ದಿಯೇನೇ || ತಂದಾನ ||

ಹೇ ತಿರುಗಾಗಿ ಹುಟ್ಟೀಯಾ ಲೋಕದಾಗ ಓಭಾಮೋ
ಭಾಮಾ ನಿನ ಮಗ ಬಂದಾನ ನನ್ನ ಮಕ ನೋಡ್ಯಾನೆ || ತಂದಾನ ||

ಅಂತ ದುಃಖ ಮಾಡ್ತಾನ
ಈ ಹುಡುಗ ನೋಡಿದ
ಎನ್ರೀ
ಭಾಮಾ ಅಂದ್ರೆ ಎನಂದ್ಹಂಗ
ಹೇಣ್ತಿ ಅಂದ್ಹಂಗ
ಆಗ ಹಂಗಾಂದ್ರೆ ನಮ್ಮ ಅಮ್ಮ
ಇಲ್ಲಿ ಸತ್ತು
ಮದ್ದು ಮಾರೋರ ಹೊಟ್ಟ್ಯಾಗ್ಹುಟ್ಟ್ಯಾಳ
ಆಗ ನಿನ್ಗೆ ಭಾಮಾಂದ್ರೆ ಹೇಣ್ತಂದ್ದಂಗ

ಹಂಗಾರೆ ನಮ್ಮಮ್ಮ ನಿನ್ಗೇ ಹೇಣ್ತಿ ಆಗ ಬೇಕಾ
ನಾನು ನಿನ್ಗೆ ಮಗಾ ಆಗಬೇಕಾ
ಎರೆ ಹೆಣುಮಕ್ಕಾಳ ಅಕ್ಕಾತಂಗಿ ಅನಬೇಕು || ತಂದಾನ ||

ಎರೆ ಹೆಣ್ಣು ಮಕ್ಕಳ ನೋಡಿ
ಯಕ್ಕಾ ಯಮ್ಮಾ ಅಜ್ಜಿ ಅನ್ಬೇಕು
ಭಾಮಾ ಅಂತಿಯಾ
ಅಲ್ಲಿ ಸತ್ತು ಇಲ್ಲಿ ಉಟ್ಟೀಯಾ ಅಂತಿಯಾ
ನೋಡ್ರಿ ಅದಕಾಗೇ ನಿನ್ಗೆ ಹುಣ್ಣು ಉಟ್ಟೈತೆ
ತಮ್ಮಾ ಸರ್ವತಪ್ಪಾಗೈತಪ್ಪಾ
ನಿಮ್ಮ ತಾಯಿ ನನ್ಗ ತಂಗ್ಯಾಗಬೇಕಪ್ಪಾ
ನನ್ಗೆ ಅಕ್ಕ ಆಗಬೇಕಾಪ್ಪಾ
ನನ್ಹೆಣ್ತಿ ಹೆಸ್ರು ಅದೇ ಆಪ್ಪ ಚಿಕ್ಹೆಣ್ತಿ
ಅಂಗಾರೆ ನಿನ್ಹೆಸುರು ಯಾರಿಗಿಲ್ಲೇನು
ನನ್ಹೆಸುರು ಯಾರಿಗಿಲ್ಲೇನು
ಆಗ ಹೆಸರಿದಂಗ ಹೆಸರಿರತದ
ನಿನ್ನಂಗ ಯಾರ ಬಣ್ಣಲ್ಲೇನು
ನಿನ್ನಂಗೈದನ
ಅಂಗಾದ್ರೆ ಆತಲ್ಲ ಬಿಡು
ನೀನೇ ನಮ್ಮ ಕ್ಕ
ತಮ್ಮಾ ಯೇಸು ಮಂದಿ
ಎಲ್ಲರದು ಅದೇ ರೂಪಿರ್ತೈತಿ
ಎಲ್ಲಾರಿಗೆ ಅದೇ ಹೆಸರು ಇರತಾವ
ತಮ್ಮ ಭೂಮಿಮ್ಯಾಲೆ
ಅಂದ್ರೆ ಸರ್ವತಪ್ಪಪ್ಪ
ನಿಮ್ಮಮ್ಮನ ಅಂದಿಲ್ಲ ನಾನು
ಹೋತಿನ್ರಿ ನಾನಂದ
ಹೋಗಿ ಬಾರಪ್ಪ ಅಂದ
ಆಗ ಮೊದ್ದು ಇನ್ನು ಪುಟ್ಟಿ
ಆಗ ಹೆಲಗಮ್ಯಾಲಿಟ್ಕಂಡು
ಮೆಣಸು ಓಣಿಗೆ ಬಂದ

ಯಮ್ಮಾಬರ್ರಿಯಕ್ಕ ಬರ್ರಿಯಕ್ಕ
ಚಿತ್ತಿ ಶಂಕಿನಿ ಹ್ಯಾಂಗ ವೈದಿರಿ
ಯಮ್ಮಾ ಹಲ್ಲು ಮುರದವ್ರಿಗೆ ಹಲ್ಲುವಾಕ್ತಿನಿ
ಯಮ್ಮಾ ಕೈಮುರದರಿಗೆ ಕೈಕಟ್ತಿನಿ
ಯಮ್ಮಾ ನಡುವು ಮುರದವ್ರಿಗೆ ನಡುವು ಕಟ್ಟಿನಿ || ತಂದಾನ ||

ಬೊಗ್ಗಿ ನೋಡಿದ್ರು
ಏ ಯಮ್ಮಾ

ಯಾರಲ್ಲಾ ಆತಪ್ಪ
ಯಪ್ಪೋ ವಲ್ಲೆವಲ್ಲೆ ನಿನ್ನ ಮೊದ್ದು
ಯಪ್ಪಾ ಮೇಟೌಷದ ವಲ್ಲಿವಿ ನಾವು || ತಂದಾನ ||

ನಮ್ಗೆ ಮದುವೆ ಮಾಡಿಹೋದೆ
ಒಬ್ಬಾಕೆನ್ನ ಯಪ್ಪಾ ಹಿಂಗ ನಡುವು ಮುರದಾವ
ಹಿಂಗ ಕೈಮುರದಾವ ಅನುವಲ್ರು
ಯಪ್ಪೋ ಈತನ್ನ ತಂಟೆಗೆ ಹೋದ್ರೆ
ಆಯೀತು ನಮ್ಮ ಪೂಜಿ ತಯಾರಾಗ್ತ
ಒಬ್ರು ತಿರುಗಿ ನೋಡಿಲ್ಲ
ಮೆಣಸು ಓಣಿ ತಟಾದು
ಆಗಿಸಿಗ ಬಂದ
ಆಗಿಸಿ ತಟಾದು
ಸುಡುಗಾಡು ರುದ್ರಭೂಮಿಗೆ ಬಂದ