ಕುಮಾರರಾಮ ಮತ್ತು ಕೃಷ್ಣಗೊಲ್ಲರ ಬುಡಕಟ್ಟು ಮಹಾಕಾವ್ಯಗಳ ಸಂಗ್ರಹಣೆ, ಸಂಪಾದನೆ ಹಾಗೂ ಪ್ರಕಟಣೆಗಾಗಿ ನೇರ ಅಥವಾ ಅನೇರವಾಗಿ ಸಹಕಾರಿಯಾದ ಈ ಕೆಳಗಿನ ಮಹನೀಯರಿಗೆ ಕೃತಜ್ಞನಾಗಿರುವೆ. ಕಾವ್ಯಗಳ ಸಂಪಾದನಾ ಕಾರ್ಯಕ್ಕೆ ಮುನ್ನುಡಿ ಬರೆದು, ಚೈತನ್ಯ ನೀಡಿದ ನಮ್ಮ ನೆಚ್ಚಿನ ಕುಲಪತಿಗಳು ಹಾಗೂ ಬುಡಕಟ್ಟು ಮಹಾಕಾವ್ಯ ಮಾಲೆಯ ಪ್ರಧಾನ ಸಂಪಾದಕರಾದ ಡಾ.ಚಂದ್ರಶೇಖರ ಕಂಬಾರವರಿಗೆ

ಕಾವ್ಯಗಳಿಗೆ ಪ್ರಸ್ತಾವನೆಯನ್ನು ಬರೆದು ಮಾರ್ಗದರ್ಶನ ನೀಡಿದ ಬುಡಕಟ್ಟು ಅಧ್ಯಯನ ವಿಭಾಗದ ಮುಖ್ಯಸ್ಥರು ಹಾಗೂ ಬುಡಕಟ್ಟು ಮಹಾಕಾವ್ಯ ಮಾಲೆಯ ಗೌರವ ಸಂಪಾದಕರಾದ ಪ್ರೊ. ಹಿ. ಚಿ. ಬೋರಲಿಂಗಯ್ಯನವರಿಗೆ

ಕಾವ್ಯವನ್ನು ಸುಶ್ರಾವ್ಯವಾಗಿ ಹಾಡಿ ಹೇಳಿದ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಹಳೆ ದರೋಜಿಯ ಬುಡ್ಗ ಜಂಗಮ ಸಮುದಾಯದ ಬುರ್ರಾ ಕಥಾ ಕಲಾವಿದೆ ಶ್ರೀಮತಿ ಈರಮ್ಮ (೫೮) ಹಾಗೂ ಅವರಸಂಗಡಿಗರಾದ ಶ್ರೀಮತಿ ಅಶ್ವಿ ಪಾರ್ವತಮ್ಮ (೫೬) ಮತ್ತು ಶ್ರೀಮತಿ ಅಶ್ವಿ ಶಿವಮ್ಮ (೫೦) ಅವರಿಗೆ

ಕಾವ್ಯಗಳನ್ನು ಸಂಪಾದಿಸುವಲ್ಲಿ ಸಹಕರಿಸಿದ ಹಳೆ ದರೋಜಿಯ ಬುಡ್ಗ ಜಂಗಮ ಸಮುದಾಯದ ವೇಷಗಾರರಾದ ಮಲ್ಲಿಕಾಜುನ ಎಡವಲಿ (೪೮) ರಾಮಣ್ಣ ಅಶ್ವಿ (೩೫) ಮತ್ತು ವೆಂಕಟಾಪುರ ಬಸಪ್ಪ ಅಶ್ವಿ (೪೮) ಅವರುಗಳಿಗೆ

ಕಾವ್ಯಗಳ ಸಂಗ್ರಹಕ್ಕೆ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀ ಅ.ರಾ. ಚಂದ್ರಹಾಸ ಗುಪ್ತ, ನಿರ್ದೇಶಕರಾಗಿದ್ದ ಶ್ರೀ ವೈ.ಕೆ. ಮುದ್ದುಕೃಷ್ಣ, ಸಹನಿರ್ದೇಶಕರಾಗಿದ್ದ ಡಾ. ಸಿ.ರಾಂ. ಹೊನ್ನಲಿಂಗಯ್ಯ ಅವರುಗಳಿಗೆ

ಕಾವ್ಯಗಳು ಕೃತಿಗಿಳಿಯುವಲ್ಲಿ ಸಹಕರಿಸಿದ ನನ್ನ ವಿಭಾಗದ ಸಹೋದ್ಯೋಗಿ ಸ್ನೇಹಿತರಾದ ಡಾ. ಕೇಶವನ್ ಪ್ರಸಾರದ, ಚೆಲುವರಾಜು, ಎ.ಎಸ್. ಪ್ರಭಾಕರ, ಗಂಗಾಧರ್ ದೈವಜ್ಞ, ಜಿ. ಶಿವಕುಮಾರ, ಕೆ. ಗಣೇಶ, ಹನುಮಂತರಾಯ, ಮಾರಪ್ಪ ಅವುಗಳಿಗೆ ಮತ್ತು ಜಾನಪದ ವಿಭಾಗದ ಪ್ರೊ. ಪುರುಷೋತ್ತಮ ಬಿಳಿಮಲೆ, ಕುಮಾರಿ ಸಾವಿತ್ರಿ ಅವರುಗಳಿಗೆ

ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಎ.ವಿ. ನಾವಡ ಹಾಗೂ ಅವರ ಸಹೋದ್ಯೋಗಿಗಳಿಗೆ ಮತ್ತು ಕುಲಸಚಿವರಾದ ಡಾ. ಕೆ.ಎಂ. ಸುರೇಶರವರಿಗೆ ಹಾಗೂ ಬೆಂಗಳೂರಿನ ಎಕ್ಸಲೆಂಟ್ ಗ್ರಾಫಿಕ್ಸ್‌ನ ಆರ್. ನಾಗರಾಜು ಮತ್ತು ಕುಮಾರಿ ಗಂಗಮ್ಮ, ಕೃಪಾಶಂಕರ ಹಾಗೂ ವಿಜಯೇಂದ್ರ ಹಾಗೂ ಮುದ್ರಕರಾದ ಎನ್. ಜಿ. ಗೋಪಾಲಗೌಡ ಅವರುಗಳಿಗೆ

ಕನ್ನಡ ವಿಶ್ವವಿದ್ಯಾಲಯದ ಎಲ್ಲ ಸಹೋದ್ಯೋಗಿ ಸ್ನೇಹಿತರಿಗೆ ಹಾಗೂ ನನ್ನ ಪತ್ನಿ ಶ್ರೀಮತಿ ದಾಕ್ಷಾಯಿಣಿ ಅವರಿಗೆ

ಡಾ. ಕೆ.ಎಂ. ಮೈತ್ರಿ
ವಿದ್ಯಾರಣ್ಯ
೧೦-೧೨-೧೯೯೭