ಸುಡುಗಾಡು ರುದ್ರುಭೂಮಿ ತಯಿ ಮನೀಗೆ ಬರುತಾನ ಮಗ || ತಂದಾನ ||

ತಾಯಿ ಮನಿಗೆ ಬರಹೋತ್ತಿಗೆ ನೀರು ತಂದ್ಳು
ಯಪ್ಪಾ ಈಗ ಕಾಲು ಮಕ ತೊಳಕೊ ಮಗ್ನೆ ಅಂದ್ರೆ
ಆ ಮಗ ಇನ್ನ ಎರಡು ಪುಟ್ಟಿ ಕೆಳಗಿಟ್ಟು
ತಾಯಿ ಪಾದವಿಡಕಂಡು
ಆ ಮಗ ಏನಂತ ದುಃಖ ಪಡಿತನ
ಆಗ ನೋಡಿ ಬಂದು
ತಂದಿ ಕೂಟ ಮಾತಾಡಿ ಬಂದವನು
ಆಗ ತಾಯೀಗೆ ನೋಡಾಕಿಲ್ಲಲ್ಲ
ಆಗ ಮಗ ಏನಂತಾನ

ಯಾಮ್ಮಾ ತಂದಿ ಕಷ್ಟ ನಾನು ನೋಡಲಾರೇ
ಯಮ್ಮಾ ತಂದಿ ವನವಾಸ ನಾನು ಕಂಡಿನಮ್ಮಾ
ಅಮ್ಮಾ ತಂದಿ ವನವಾಸ ನೋಡಲಾರೆ ದೇವಿ || ತಂದಾನ ||

ಅಮ್ಮಾ ತಂದಿ ವನವಾಸ ನೋಡಲಾರೆ ದೇವಿ
ಈಗ ಬೆನ್ನಗಲಾಗ ಹುಣ್ಣು
ಈಗ ಹುಣ್ಣುವಳಗೇ
ಯಮ್ಮಾ ಶನಿಮಾತ್ಮ ಸೇರಿ ಬಿಟ್ಟನೇ
ಈಗ ಹೊಟ್ಟ್ಯಾನ ಕಳ್ಳು ಕಿತ್ತಿಬರತವೇ
ಗಲೀಜು ನಾತು
ಅಂದ್ರೇ ತಾಯಿ ಏನಂತಾಳ
ಮಗನಾ ನನ್ನ ಪಾದ ಹಿಡ್ಕಂಡು ದುಃಖ ಮಾಡ್ತೀ

ಯಪ್ಪಾ ನಿಮ್ಮಪ್ಪ ನನಿಗ್ಯಪ್ಪಾ ದೇವ್ರಾಗಿ ಕಲಿಸಿಲ್ಲ
ಋಣ ಎಲ್ದ ನಿನೂನು
ನನ್ನ ಪಾದ ಹಿಡ್ದಪ್ಪಾ
ದುಃಖ ಮಾಡ್ತಿ ನನ್ನ ಮಗನೇ || ತಂದಾನ ||

ಮಗನಾ ನಿಮ್ಮಪ್ಪಗೆ ನನ್ಗೆ
ಋಣವಿಲ್ಲದೆ ಯಾಕ ಪಾದ ಹಿಡ್ಕೊಂಡು
ದುಃಖ ಮಾಡ್ತೀ ಮಗನಾ
ನಾನೇನು ಮಾಡ್ಲ್ಯೋ ಮಗನೇ
ಹತ್ರ ಇದ್ರೆ ನೋಡ್ತಿದ್ದೆ
ಋಣ ಇಲ್ಲಾ ನಾನೇನು ಮಾಡ್ಲಿ
ಅಮ್ಮಾ ಈಗ ಏನಿಲ್ಲ ತಾಯಿ
ನಿನ ಪಾದುಗೆ ಶರುಣು
ಈಗ ತಂದಿಗಿ ಮಗ ಹುಟ್ಟೀನಿ
ಮಗ್ಹುಟ್ಟಿ ಕುಲುದ್ದಾರ ಮಾಡ್ಬೇಕು
ಮಗುಳ್ಹುಟ್ಟಿ ಕೀರ್ತಿ
ತರಬೇಕಂತ ಭೂಮಿ ಮ್ಯಾಲ್ಹೆಳ್ತಾರ
ಇಗೋ ಈಗ ನಮ್ಮಪ್ಪಗೆ
ಏಳು ಸಮುದ್ರ ಆ ಕಡಿಗೆ
ಮೇಟೌಷದ್ಧ ತರತೀನಿ ನಾನು
ಅಯ್ಯೋ ಮಗನ

ಏಳು ಸಮುದ್ರದ್ದಾಗ ಹೊಗಿ ಬಿಡ್ತಿ ಮಗನಾ
ಬ್ಯಾಡಪ್ಪಾ ನೀನು ಹೋಗು ಬ್ಯಾಡ ಮಗನಾ
ನಾನು ಒಬ್ಬಳು ಹೆಂಗ ಇರಲಿ ಮಗನಾ
ಸುಡುಗಾಡು ರುದ್ರಭೂಮಿ ನಾನು ಹೆಂಗ ಇರಲಿ ನನ್ನ ಮಗಾ || ತಂದಾನ ||

ಮಗನಾ ನಾನ್ಹೆಂಗಿರಬೇಕಪ್ಪಾ
ಆರು ಮಂದಿ ನಮ್ಮಕ್ನೋರು
ಆರು ಮಂದಿ ನಿಮ್ಮಣ್ಣೋರ ಇದಾರ
ಅವ್ರುಹೋಗಿ ತರತಾರ
ಯಮ್ಮಾ ಅವ್ರು ಕೈಲಾಗಾದಿಲ್ಲ
ನಾನು ಹುಟ್ಟಿದಾಗ ಹುಣ್ ಹುಟೈತೆ
ನಾನೇ ಹೋಗಿ ತರಬೇಕು ಅಂತ
ಮಗನಾ ಊಟ ಮಾಡು ಬಾ ಅಂದ್ರೆ
ಹಾಲು ಸ್ಯಕ್ರನ್ನ ಊಟ ಮಾಡ್ತಾನ
ಈ ಮಗ ಊಟ ಮಾಡಾಕ ಕುಂತಾನ
ಈ ಮಗನ ಕಥೆ ಹಂಗಿರಲಿ