ತಾಯಿ ಪಾದ ಮುಗುದು
ಸುಡುಗಾಡು ರುದ್ರಭೂಮಿಲಿದ್ದ
ಚಾಂಪುರು ಪಟ್ಣಕ್ಕ ಬಂದ ಶರಬಂಧರಾಜ
ಅಗಸ್ಯಾಗ ಏನಂತಾನ

ಅಯ್ಯಾ ಮದ್ದಯ್ಯ ಮದ್ದಯ್ಯ
ಕಾಶಿಲೋಕ ನನ್ನ ಲೋಕ
ಮೇಟೌಷಧ ತಂದಿನಿ ನಾನು
ಅಣ್ಣಾ ಹುಣ್ಣು ಹೊಟ್ಟೋರು ಬ್ಯಾನಿ ಬಂದರ
ಕಾಲು ಮುರುದೋರ ಕಣ್ಣು ಹೋದ್ವರುಗ
s ಅವುಷಧ ಕೊಡೊನು ಐದಿನಿ
s ಇನ್ನ ಬ್ಯಾರೆ ಖಾಸ್ ಮದ್ದು || ತಂದಾನ ||

ಅಂತಾ ಅನಕಂತ ಮೆಣಸು ಒಣಿಗೆ ಬಂದ
ಮೆಣಸು ಓಣಿಗೆ ಬಂದ್ರೆ
ಚಿತ್ತಿ ಶಂಕಿನಿ ಹಸ್ತಿನಿ ಪದ್ಮಿನಿ ಜಾತಿ
ಮನೆಗುಳಾಗಿದ್ದೋರು ತಳ್ಳಕ್ಕ್ ಅಂತಾ ಮಿಂಚ್ಹೋಡುದ್ರು

ಬಾರಲೇ ಅವುಷಧ
ಮೇಟೌಷಧ ಮಾರವನೆ
ಯಮ್ಮಾ ಏನಕ್ಕ ಏನಜ್ಜಿ
ಹುಡುಗಾಗ ಅಂತಾನ || ತಂದಾನ ||

ಏ ಬಾರಲೆ ಅಂದ್ರು
ಏನಜ್ಜಿ ಏನ ಮುದುಕಿ ಅಂತ ಬಂದ
ಬಂದ್ಹೊತ್ತಿಗೆ ಏ ಮನ್ಯಾಕ ಬಾರೋ ಅಂದ್ಳು
ಇಲ್ರೀ ಮನ್ಯಾಕ ಬರಾಂಗಿಲ್ಲ
ಮನ್ಯಾಕ ಬಂದ್ರೆ ಮೇಟೌಷಧ
ಯಾರಿಗೆ ಅರ್ಥಾಗಬೇಕು
ಯಾರಿಗಿನ್ನವರತಾವ ನೋಡಬೇಕು
ಬಂಕದಾಗ ಕುಂತಗಂಡ್ರೆ
ಮನಿಮುಂದೆ ಹೋಗೋರು ಬರೋರು
ದಾರಿಕೂಟ ಏನು ಇಷ್ಟು ಮಂದಿ ಸುತಿಗ್ಯಾಂಡಾರಂತ
ಬಂದು ನೋಡ್ತಾರ
ಆಗ ನನಗೆ, ಯಾಪಾರ ಆಗ ಬೇಕಲ್ಲಮ್ಮ
ನನಗೆ ಲಾಭ ಆಗಬೇಕಲ್ಲ ಅಂದ
ಹಂಗಾರೆ ಬಂಕದಾಗ ಕುಂತಗ ಅಂದ್ಳು
ಬಂಕದಾಗ ಕುಂತ್ಗಂಡ್ರು
ನಾಲೋರು ಹೆಣ್ಮಕ್ಕಳು ಬಂದ್ರು
ಆಗಿನ್ನವರ ಅವರಿಗೆ ನೋಡಿದ್ರೆ
ಈಗ ಚೆಂದಾಗೈದಾರ
ಗಂಡು ನೋಡಿದ್ರೆ
ಏನೊ ಇನ್ನ ತಮ್ಮನೋರು ಕಳೀಬಾರದಂತ
ಆಸ್ತಿ ಇದ್ದೋರಂತ ಮದ್ವಿ ಮಾಡ್ಯಾರ
ಆಸ್ತಿ ಏನು ಮಸ್ತ ಐತಿ
ಈ ಗಣ ಮಕ್ಕಳು ಬೇಸಿಲ್ಲ
ಏ ತಮ್ಮಾ
ಆಗ ನಿಂದು ಕಾಶಿ ಪಟ್ಟಣ
ಹೌದ್ರೀಯಮ್ಮಾ
ನಿಮ್ಮ ತಾಯಿ ಹೆಸರೇನು
ನಮ್ಮ ತಾಯಿ ಔಷಧ ಮಾರೋ ಸುಬ್ಬಮ್ಮ
ನಿಮ್ಮಪ್ಪನ ಹೇಸರೇನು
ಮಾರೆಪ್ಪಾ
ನಿನ್ನ ಹೇಸರೇನು
ಮದ್ದು ಮಾರೋ ರಾಮಜೋಗಿ
ತಮ್ಮಾ ಏನು ಮಾಡ್ತೀಯಪ್ಪಾ
ಗಣ ಮಕ್ಕಳು ಚೆಂದ ಇದ್ರೆ ಮನಿ ಚೆಂದ
ಹೆಣ್ಣುಮಕ್ಕಳು ಯಂಗಾನ ಇರಲಿ
ಗಣಮಕ್ಕುಳು ಚೆಂದ ಇರಬೇಕು ನಮಗೆ
ಏನ ಆಸ್ತಿ ಇದ್ರೇನು ಮಾಡ್ತಿ
ಮನ್ಯಾಗ ಕುಂತ್ಗರಿ ಮನ್ಯಾಗೆ ಉಣ್ರಿ ಅಂತಾರೆ
ಆಗ ಓಣ್ಯಾಗ ಏನಂತಾರ ನಮ್ಮ ಗಂಡ ಬರತಿದ್ರೆ
ಅಯ್ಯೋ ಕುಂಟಿಗಂಡ ಕುಣುಕಾಂತ ಬರತಾನ
ನೋಡಮ್ಮ ನಿನ್ನ ಮನಿಗೆ ಅಂತಾರ
ತಮ್ಮಾ ಏಟು ಉಂಡ್ರೇನು ನನಗೆ
ಜಲ್ಮ ನಿಧಾನ ಆಗದಿಲ್ಲ
ಅರ್ಧ ಜೀವ ಸತ್ತಂಗ ಆಗೈತಿ
ಯಮ್ಮಾ ನೀನು ಕೇಳಿದ್ದು ಕೊಡ್ತೀನಪ್ಪ
ನನ್ನ ಗಂಡಗ ಕಾಲು ಮುರಿದು ಹೋಗೇತಿ
ಕುಂಟಿಗ್ಯಂತ ಕುಂಟಿಗ್ಯಂತ ಬರತಾನ
ಕಾಲು ನೆಟ್ಟಗ ಬರಂಗ ಮೇಟೌಷಧ ಕೊಡು

ಯಕ್ಕಾ ನಿನ್ನ ಗಂಡ ಕುಂಟೋನಾದ್ರೆ
ಊರು ಮುಂದೆ ಹುಣಿಸೇ ಗಿಡಕ್ಕಾಗಿ
ಗಂಡ್ನೆ ಕರಕಂಡು ಹೋಗಿ
ಅಕ್ಕಾ ಕುತ್ತಿಗಿಗ ಹಗ್ಗ ಹಾಕಿಬಿಡು
ಯಕ್ಕಾ ಗಿಡಕ್ಕಾಗಿ ಕಟ್ಭೇಕು
ಯಕ್ಕಾ ಕುಂಟುಕಾಲು ನೆಟ್ಟಗ ಜಗ್ಗು
s ಕುದ್ರಿಕಾಲು ಬಂದಂಗ
ತೋಥಡಿ ಜಟಪಟ ನಡೀತಾನ
ಅಬ್ಬಾಬ್ಬ ಬೇಸ್ಹೇಳ್ತಿಯಿ ನನ್ನ ಹುಡುಗ || ತಂದಾನ ||
s ರೊಕ್ಕವಿಲ್ದ ಅವುಷಧ

ಮೇಟಿ ಔಷಧ
ರೊಕ್ಕ ಇಲ್ಲದ ಅವುಷದ
ಬೇಸಿ ಹೇಳ್ತೀಯಿ ತಮ್ಮ
ಇಲ್ಲಾ ಕುತಿಗೆಗೆ ಹಗ್ಗ ಹಾಕಿದಮ್ಯಾಲೆ
ಅವನು ಸುತ್ತು ಹೋತಾನ
ಇಲ್ಲ ನೆಟ್ಟಗ ಬರತಾವ
ಕುದುರಿ ಗಾಡಿ ನಡೆದಂಗ ನಡೆತಾನ ಅಂತೀಯಿ
ಇದ್ದ ಗಂಡನ್ನ ಕಳಕೋ ಅಂಬೋನಪ್ಪ ನೀನು
ಇಲ್ಲಕ್ಕ ಈಗ ನೈಯಾ ಪೈಸ ಬ್ಯಾಡ
ನೋಡು ನೆಟ್ಟಿಗ ಬರತಾವ ಕಾಲು ಅಂದ
ಏಯಮ್ಮಾ ನಿನ್ನ ಗಂಡಂದು ಇರಲಿ ನಿಂದ್ರೆ
ನನ್ನ ಗಂಡಂದು ಹೇಳ್ಲಿ
ಯಮ್ಮ ನಿನ್ನ ಗಂಡಂದೇನು
ಯಪ್ಪ ಗೂನಿ ಹೊಂಟೈತಿ ನೋಡ ನನ್ನ ಗಂಡಗೆ
ಗೂನಿಗಂಡ ಗೂನಿಗಂಡ ಅಂತಾರಪ್ಪ
ತಮ್ಮಾ ಗೂನಿ ಬೇಸು ಮಾಡು

ಯಕ್ಕ ಗಂಡನ ಬಕ್ ಬಾರ್ಲ ಮಲಗ್ಸಿ
ಒಣಕಿ ಕೈಯಾಗ ಹಿಡಿದು ಬಿಡು
ಅಕ್ಕ ಗೂನುಮ್ಯಾಲೆ ಕುಟ್ಟುಬಿಡು
ಅಕ್ಕ ಗೂನು ಒಳಕ್ಕೆ ಹೋಗುತೈತಿ
ಅಕ್ಕ ಬೆನ್ನು ಸಾಪು ಆಗುತೈತಿ
ಅಬ್ಬಬ್ಬ ಬೇಸಿ ಹೇಳ್ತಿ ನನ್ನ ಹುಡುಗ
s ಮೇಟೌಷಧ ಒಳ್ಳೆ ಅವುಷ್ದ
ಅಮ್ಮ ರೊಕ್ಕವಿಲ್ಲದ ಅವುಷದ್ದ || ತಂದಾನ ||

ಇದ್ದ ಗಂಡ್ರು ಕಳೆಯೋದು
ತಮ್ಮ ಗೂನುಮ್ಯಾಲೆ ಕುಟ್ರೆ
ಗೂನು ಒಳಕ್ಕ ಹೋಗುತೈತಿ
ಸಾಯೋದಿಲ್ವಾ
ಎಂಥಾ ಹುಡುಗಪ್ಪ
ಇಲ್ಲಕ್ಕ ಗೂನು ಒಳಕ್ಕೆ ಹೋಗುತೈತಿ
ಬೆನ್ನು ಸಾಪು ಆಗುತೈತಿ
ಅಯ್ಯೊಯ್ಯಪ್ಪ ಮೇಟಿ ಔಷಧ
ಏ ನಿನ್ನ ಗಂಡ ಇರಲಿ
ನನ್ನ ಗಂಡಂದು ಹೇಳಲಿ
ಏನಮ್ಮಾ ಪದ್ಮ ಜಾತಿ
ಏನಿಲ್ಲಪ್ಪ ನನ್ನ ಗಂಡ ಕುರುಡ ಗಂಡ
ಒಂದು ಕಣ್ಣು ಲೋಟ ಬಿದೈತಲೋ
ಏನಂತಾರ ಓಣ್ಯಾಗ
ಕುರುಡಿ ಗಂಡ ತಾರಯಾಡಿಕಂತ ಬರತಾನ
ನೋಡಕ್ಕ ನಿನ್ನ ಗಂಡ ಅಂತಾರ
ನನ್ನ ಮುಂದೆ ಹಾಡುತ್ತಿದ್ದರೆ
ನನ್ನ ಜೀವ ಸತ್ತು ಹೋದಂಗಾಗೇತಿ
ಯಕ್ಕಾ ನಿನ್ನ ಗಂಡ ಕುರುಡಿಯವನಾದ್ರೆ

ಊರು ಮುಂದೆ ಐತಲ್ಲ
ಕಳ್ಳಿ ಗಿಡಕ್ಕೆ ಕರಕಂಡ್ಹೋಗು
ಕಳ್ಳಿಗಿಡಕ್ಕೆ ಕರಕಂಡ್ಹೋಗಿ
ಯಕ್ಕಾ ಕುರಡಿ ಕಣ್ಣೇ ಬಿಟ್ಟು ಬಿಡು
ಒಳ್ಳೆ ಕಣ್ಣು ತುಂಬ ಹೊಡ್ದುಬಿಡು
ಕಳ್ಳಿ ಹಾಲು ಹೊಡ್ದು ಬಿಡು
ಯಕ್ಕ ಮುಂಜಾನೆದ್ದು ಗಂಡನ ನೋಡು
ನೋಡು ಕಣ್ಣು ಹೊರಗ ಬರುತಾವ
ಅಬ್ಬಬ್ಬ ಮೇಲುಗುಡ್ಡೆ ಬಂದಾಂಗ || ತಂದಾನ ||

ಲೋಕೆಲ್ಲ ಕಣ್ಣು ಕಾಣ್ತಾವ
ಅಯ್ಯೋಯ್ಯಪ್ಪಾ ಬೇಸಿ ಹೇಳ್ತೀ ತಮ್ಮ
ಇಲ್ಲಾ ಕುರಡಿ ಕಣ್ಣಿಗೆ ಹೊಡಿ
ಅಂತಾ ಹೇಳ್ತಾರಪ್ಪ ಯಾರನ್ನ
ಅರೇ ಕುರಡಿ ಕಣ್ಣು ಬಿಡುಬೇಕಂತೆ
ಒಳ್ಳೆ ಕಣ್ಣ ತುಂಬ ಕಳ್ಳೆ ಹಾಲು ಹೊಡಿಬೇಕಂತೆ
ಮುಂಜಾನೆದ್ರ ಎರಡು ಕಣ್ಣು
ಮೇಳ್ಳಿಗುಡ್ಡೆ ಬಂದ್ಹಂಗೆ ಬರುತಾವಂತೆ
ತಮ್ಮಾ ಇದ್ದ ಕಣ್ಣುಗೂಡ ಕಳೆಯೋನಪ್ಪ ನೀನು
ಏಯಮ್ಮಾ ನಿನ್ನ ಗಂಡಂದು ಇರಲಿ
ನನ ಗಂಡಂದು ಹೇಳ್ತಿನಿ
ಇನ್ನೇನ್ನಮ್ಮ ಪದ್ಮ ಜಾತಿ ನಿಂದೇನು?
ಯಪ್ಪಾ ಹೊಟ್ಟೆಬ್ಯಾನಿ ಹೊಟ್ಟೆಬ್ಯಾನಿ ಅಂತಾನ
ಸೇರು ಅನ್ನ ತಿಂತಾನ
ಕೌದಿ ಹೊದಕಂಡು ಮಕ್ಕಂತಾನ
ಯಪ್ಪಾ ಸತ್ರೆ ಹೊಲಕ್ಕೆ ಹೋಗೋದಿಲ್ಲ
ಏಯಮ್ಮಾ ಪುನೆಮ್ಮ ಐದಾನ ನಿನ ಗಂಡ

ಗಣಸರಿಗೆ ಇರಬಾರದು
ಸುಲಿಬ್ಯಾನಿದು ಒಳ್ಳೇದ ಅಲ್ಲ
s ಎಗರಿಬಿದ್ದೇ ಸತ್ತು ಹೋತಾನ
ನೀನು ಹರೆದಾಕಿ ಚೆಲುವಿ ಐದೀಯಿ
ಗಂಡನ್ನ ಕಳ್ದು ಮ್ಯಾಲೆ ಸಿಗಂಗಿಲ್ಲ
ಜೀವದಾಗೆ ಇರೋ ಗಂಡ
ಇನ್ನ ಗಂಡ ಹೋದಮ್ಯಾಲೆ ನೋಡು
ಹೇ ಕಡೆಲೋದರೆ ತಾಸು ಗಂಡ
ಇದು ಜೀವ ಗಂಡ ಜಲ್ಮಕ ನಿನಗೆ || ತಂದಾನ ||

ಈ ಗಂಡ ಕಳ್ಳಂಡ ಮ್ಯಾಲೆ ನಿನಗೆ ಸಿಗದಿಲ್ಲ
ಜೀವದ ಗಂಡ ಸಾಯೋತನಕ ಇರೋನು
ಈ ಗಂಡ ಸತ್ಯಮ್ಯಾಲೆ ತಾಸಗಂಡ
ಅವನು ಶರಣು ಆಗೋನಲ್ಲ
ಏನಕ್ಕಾ ಗಂಡ ಮಕ್ಕಳಿಗೆ ಇರಬಾರದು
ಹೊಟ್ಟೆಬ್ಯಾನಿ
ಅಚ್ಚೇರು ಮಜ್ಜಿಗೆದಾಗ
ಸೇರು ಸೋರುಪ್ಪು ಹಾಕು
ಬೇಸಿ ತಿರುವಣ ಮಾಡಿ

ಗಂಡಗಾಗೆ ಕುಡಿಸಿಬಿಡು
ಕಂಬಳಿ ಮ್ಯಾಲೆ ಕಂಬಳಿ ಹೊದಿಸು
ನೀನು ಗಂಟೇತನಕ ಎಬ್ಬಿಸಬ್ಯಾಡ
ಗಂಟೆಗೆಲ್ಲಾ ಎಬ್ಬಿಸಿಬಿಡು
ಯಮ್ಮಾ ಕುದುರಿಗೂಟ ಎದ್ದಂಗ
ನಿನ್ನ ಗಂಡ ಎದ್ದುತಾನ
ಥೋತಡಿ ಸಾಯೋತನಕ ಇನ್ನ ಗಂಡ
ಈಗ ಹೊಟ್ಟಿಬ್ಯಾನಿ ಎದ್ದೇಳದಿಲ್ಲ
ಸೂಲಿಬ್ಯಾನಿ ಗಂಡಸರಿಗ್ಯಾಗಿ ಇರಾದಿಲ್ಲ || ತಂದಾನ ||

ಇಲ್ಲಾ ತಮ್ಮಾ
ಅಚ್ಚೇರು ಮಜ್ಜಿಗಿದಾಗ ಸೇರು ಸೋರುಪ್ಪು ಹಾಕಿದಮ್ಯಾಲೆ
ಹೊಟ್ಟ್ಯಾಗ ಕಳ್ಳುವೆಲ್ಲಾ ಸೇರಿಕೊಂಡು ಹೋತಾವ
ಆಗ ಗಂಟೆ ಹೊತ್ತಿಗಿ ಎಬ್ಬಿಸಿದ್ರೆ
ನಿಗ್ರಿಸಿಕೊಂಡು ಹೋಗಿರತಾನ

ಇನ್ನ ಸತ್ತೋನು ಎದ್ದೇಳದಿಲ್ಲ
ಇದ್ದ ಗಂಡನ್ನ ಕಳೆಯುವನು
ಬೇಸಿ ಹೇಳ್ತಿ ನನ್ನ ಹುಡುಗ || ತಂದಾನ ||

ಒಳ್ಳೆ ಅವುಷದ್ಧ ಐತಿ ನಿನತಲ್ಲಿ
ತಮ್ಮಾ ಇಂಥ ಗಂಡ್ರು ಕೊಟ್ಟಾರ
ಇಂಥ ಮನೆಗಳು ತಗೊಂಡು ಏನ್ಮಾಡಬೇಕು
ಮನೇನ್ ಮಾಡ್ಬೇಕು ಗಂಡೇನ ಮಾಡಬೇಕು
ಆಸ್ತಿನ ಮಡ್ಭೇಕು
ಗಂಡ ಮಕ್ಕಳು ಚೆಂದ ಇದ್ರೆ ಸಾಕು
ತಮ್ಮಾ ನೀನು ಕುಂತ್ರೆ ಚೆಂದ
ನಿಂತ್ರೆ ಚೆಂದ
ತಮ್ಮಾ ಮಾಡಿಕ್ಯಂಡ್ರೆ ಗಂಡ್ರು ಬಿಟ್ಟು

ನಿನ್ಹಿಂದೇ ನಾವಾಗಿ ಬರುತ್ತೀವಣ್ಣಾ
ನಾಲೋರು ನಿನ್ನ ಹಿಂದೆ ಬರುತೀವಪ್ಪ
ಆಗ ನೀವು ಎಲ್ಲೆನ್ನ ಕುಂದ್ರಿಸು ನಮ್ಮನ್ನ
ಅಕ್ಕಿ ಒಂದು ತಂದು ಕೊಡೋ ನಾವು ಅಡಿಗೆ ಮಾಡಕೋತಿವಿ || ತಂದಾನ ||

ನೋಡಿದ ಹುಡುಗ
ಇವರಿಗೇನು ಬಂದೈತಿ ಬೇಸು ತಿಂಬೋದು
ಮಕ್ಕೊಂಬೋದು ಹೊಳ್ಯಾಡೋದು
ಆಗ ಒಳ್ಳೆ ಗಂಡ್ರು ಆಗಿದ್ರೆ
ಎಳಕಂಡು ಹೋಗಿ
ಬಿಸಿಲಾಗ ಬಗ್ಗಿಸಿದ್ರೆ ಅಮ್ನೋರು ಬಗ್ಗುತಿದ್ರು
ತಿಂದು ತಿಂದು ಇವರಿಗೆ ನೋಡು ಬಂದೈತಿ
ನನ್ಹಿಂದ ಬರತಾರಂತೆ ಇವ್ರು
ಸೇರಕ್ಕಿ ತಂದು ಕೊಡಬೇಕಂತೆ
ಅಡಿಗೆ ಮಾಡಿಕ್ಯಂಡು ಉಣ್ತಾವಂತೆ
ಯಕ್ಕಾ ನಾನು ತಮ್ಮ
ನೀವು ಅಕ್ಕನೋರು
ನಾನು ಎಂಜಲ ಹಾಲು ಕುಡಿದೋನು

ಯಮ್ಮಾ ತಮ್ಮನ್ಹಿಂದೇ ಬಂದರೇನ
ನಿಮ್ಮ ಗಂಡ್ರು ನೋಡಿದರೇನ
ನನ್ನ ಕಂಬಕ್ಕೆ ಕಟ್ಟೇ ಬಡೀತಾರ
ನನ್ನ ಕಡಿದು ಹಾಕಿ ಜಲ್ಮಕ್ಕೆ
ನನ್ನ ಕರೇಕಾಕಿ ಗುಗ್ಗುತಾರ
ಯಮ್ಮೋ ಒಲ್ಲೆ ಒಲ್ಲೆ ದೊಡ್ಡವರು
ಯಮ್ಮ ನಿಮ್ಮ ಗೊಡುವೆ ನಮಗ್ಯಾಕ
ನಾನು ಮೇಟೌಷಧ ಮಾರಿಕ್ಯಂಬೋನು || ತಂದಾನ ||

ನಾನು ಬಡವ
ಅಂಬೋತ್ತಿಗೆ ಇಲ್ಲ ತಮ್ಮ
ಈಗ ನಮ್ಮ ಗಂಡ್ರು
ಎಲ್ಲ ಹೊಲಕ್ಹೋಗ್ಯಾರ
ಊರ ಮುಂದೆ ಹಳ್ಳ
ಇಚುಲಗಿಡ ತಾಳೇ ಗಿಡಗಳೈದಾವ

ತಮ್ಮ ಹಳ್ಳದಾಗ ಬೀಳಾನ
ನಿಮ್ಮ ಕಾಶಿಪಟ್ಣಣಕ್ಕ ಹೋಗಿಬಿಡಾನ
ಕಾಶಿಗೆ ಹೋದ ಮ್ಯಾಲೆ ಯಾರು ಬರುತಾರ
ಸುತ್ತ ಅಲ್ಲೆ ನೋಡುತಾರ
ಇಲ್ಲೇ ಹಳ್ಳದಾಗ ಬಿದ್ದಳೇನು
ಎಲ್ಲಿ ಬಾಯಾಗ ಬಿದ್ದಳೇನು || ತಂದಾನ ||

ಅಂತಾಗ ಸುಮ್ನಾಗತಾರ ಅಂದ್ರು
ಹಂಗಾರೆ ನನ್ನ ಬಿಡ್ರಿ ಅಕ್ಕ
ನೀವ್ಹಿಂಥ ಮಾತುಗಳೆಲ್ಲ ಮಾತಾಡುಬ್ಯಾಡ್ರಿ
ನಾನು ಹೋತಿನಕ್ಕ ಅಂದ
ಇಲ್ಲ ತಮ್ಮ ನಿನ್ನ ಬಿಡೋದಿಲ್ಲ
ನಾವು ಬರತೀವಿ ಅಂದ್ರು
ಛೇ ಇವರಿಗೆ ತಕ್ಕಂತ ಮಾಡ್ಬೇಕು ನಾನು
ಇನ್ನೊಬ್ರು ಮುಸಿ ನೋಡಬಾರದು ಇವ್ರನ್ನ
ಇವ್ರು ಮಕ ನೋಡಿದ್ರೆ
ಇನ್ನು ತಾವು ಜೀವಕ್ಕ ಹೇಲು ಬರಾಂಗಿಲ್ಲ
ಹಿಂತೋವ ಇಷ್ಟು ಹೆಂಗುಸುರು
ಇಷ್ಟು ಉರೀತಾವಲ್ಲ ಅಂತ
ಸರೆಮ್ಮಾ ಅತ್ತಾಗ ಪುಟ್ಟಿ ಇಬ್ರು ಹಿಡ್ಕರಿ
ಇತ್ತಾಗ ಪುಟ್ಟಿ ಇಬ್ರು ಹಿಡ್ಕರ್ರಿ
ಬಿದಿರು ಪುಟಿಗೆ
ಮತ್ತೆ ನನ್ನ ಹಿಂದೆ ಬರತಾ ಇದ್ರೆ
ಊರಾಗಿನ ಮಂದೆಲ್ಲ ನೋಡಿ ಹೇಳೋದಿಲ್ಲ
ಈ ನಿಮ್ಮ ಒಣ್ಯಾಗಲಿದ್ದ
ಹಳ್ದಾಗ ಒಂದೇ ಸರತಿ ಎಗರಿಬಿಡ್ತಿನಿ
ಹಳ್ಳ ಹಿಡ್ಕಂಡು ಹೋಗಿಬಿಡಾಣ್ರಿ
ನೋಡು ಬಿಗಿ ಇರಬೇಕು ನೀವ ಹೆಣ್ಮಕ್ಳು
ಕೆಳ್ಗ ಬಿದ್ರೆ ನನಮ್ಯಾಲಿಲ್ಲ
ಹೇ ಸುಖದಲ್ಲಿ ತಿಂದು ತಿಂದು
ಎಮ್ಮೆ ಗುಂಡು ದಪ್ಪ ಅದೀವಿ
ಏನು ಬಿಗಿ ಅದೀವಿ ನಾವು ಅಂದ್ರು
ಸರಿಯಾಗಿ ಹಿಡ್ಕರ್ರಿ ಅಂದ
ಅತ್ತಾಗಿಬ್ರು ಇತ್ತಾಗಿಬ್ರು
ಚಿತ್ತಿ ಶಂಕಿನಿ ಹಸ್ತಿನಿ ಪದ್ಮಿನಿ ಹಿಡ್ಕಂಡ್ರು

ಮಗವಂದೇ ಶಿವನ ಭಕ್ತ ಅವ್ನು
ಕೊಟ್ಟದೇವರು ಎಲ್ಲಿ ಒಯ್ದಿ
ಇವ್ರು ಮದುವಿ ಮಾಡ್ತಿನಿ ನಾನು ತಾತ
ಮತ್ತೆ ಕುಂತತಲ್ಲಿ ಊಟ ಇವ್ರಿಗೆ
ಹೇ ಮೊಗ ಒಂದೇ ನೋಡಿ ಬುಟ್ಟೂ
ಥತ್ ಕುಪ್ಪಳೀಸಿ ಮ್ಯಾಕ ಎಗರಿದ
ಏಳು ಮಣಷ್ಯರ ಮ್ಯಾಕ ಎಗರಿದ
ಆಗ ಇನ್ನು ಪುಟ್ಟಿ ಗ್ಯರ್ ತಿರುಗಿಸಿದ
ದಬ್ ದಬ್ ದಬ್ಬಿದ್ದು ಬಿಟ್ರು
ಅಣ್ಣಾ ಮಾಳಿಗೆ ಮ್ಯಾಲೆ ಬಿದ್ದೋರು
ಅಣ್ಣಾ ಓಣ್ಯಾಗ ಬಿದ್ದೋರು
ಲಕ್ಷ್ಮಿ ಬಿಜಾರಾಗ ಎಗರಿಬಿಟ್ಟ
ಮೆಣಸು ಬಜಾರಿಲಿದ್ದ ನೋಡು || ತಂದಾನ ||

ಆಗ ಏಳು ಮಣ್ಸರೆತ್ತರ ಎಗಿರಿಬಿಟ್ಟ
ಪುಟ್ಟಿ ತಿರುಗಿಸಿ ಬಿಟ್ಟ
ದಬ್ ದಬ್ ದಬ್ ದಬ್ ಬಿದ್ದು ಬಿಟ್ರು
ಮಂಡಾಳು ಬಿದ್ದಂಗ
ಒಣ್ಯಾಗ ಬಿದ್ದೋರು
ಮಾಳಿಗಿ ಮ್ಯಾಲೆ ಬಿದ್ದೋರು
ಆಗ ಅನ್ನವತಾವ ಲಕ್ಷ್ಮಿ ಬಜಾರದಾಗ ಎಗರಿಬಿಟ್ಟ
ಹೆಣ್ಣು ಮಕ್ಕಳು ನೋಡಿದ್ರು
ಯಮ್ಮಾ ಹುಡುಗನ್ನೆಗೆ ಮಾಡಿಕ್ಯಂಬೇಕಂದ್ರೆ
ನಮಗೆ ಮಾಡಿ ಹೋದ್ನಲೆ ಮೇಟೌಷದೌವ್ನು
ಹಾಂ ನಮಗೆ ಮದುವೆ ಮಡಿ ಹೋದ
ಯಮ್ಮಾ ಒಬ್ಬರತಲ್ಲಿ ಹೋಗಲಾರದ್ಹಂಗ
ಮುಸಿ ನೋಡಲಾರದ್ಹಂಗ ಮಾಡೋದ್ನಮ್ಮ
ಯಮ್ಮಾ ನನ್ನ ಗಂಡ ಬಂದ್ರೆ ನಾನು ಏನು ಹೇಳಲೇ
ಹೇ ನನ್ನ ಗಂಡ ಬಂಗಾರದ ಅಂತ್ವನು ಬಿಡು
ಏನ್ಹೇಳ್ತಿಯಿ
ಇಲ್ರೀ ಒಂದು ಆಕಳು ತಗಂಡು ಬಾ ಅಂದ್ರೆ
ಆಕಳ ಕೊಟ್ರೆ ಅಚ್ಚೇರು ಹಾಲು ಕೊಡ್ತೈತಿ
ಎಮ್ಮೆ ಆದ್ರೆ ಮೂರಸೇರು ನಾಕ್ಸೇರು ಕೊಡ್ತೈತಂತಾ
ಆಗ ಕಳವೇ ಮಾರಿಕ್ಯಂಬುತೀವಿ
ಬೆಕಾದ್ಹಂಗ ಕುಡಿತಿವಿ ಅಂತ
ಮುನ್ನೂರು ರೂಪಾಯಿ ಕೊಟ್ಟು
ಇನ್ನುವರತಾ ಎಮ್ಮೆ ತಂದಾನ
ಏಮ್ಮೇನ ಅವನ್ನ ಮಾರಲಿಕ್ಕೆ
ನಾನೇನು ಮಾಡಿದೇ
ಎಮ್ಮೆ ಮುಂದೆ ಕುತ್ಗಂಡು ಹಿಂಡುತಿದ್ದೆ
ಫಕಾ ಅಂತ ಒದ್ದು ಬಿಡ್ತು

ಯಮ್ಮ ಬಲಗೈ ಹೋಯಿತಮ್ಮ ಎಡಗೈಯೇ ಇತ್ತಮ್ಮಾ || ತಂದಾನ ||

ಯಮ್ಮಾ ಎಡಗೈ ಉಳಕಂತು
ಎಂಗ ಮಾಡ್ಬೇಕಮ್ಮ
ಅಂದ್ರೆ ನನ್ನ ಗಂಡ ಏನಂತಾನ
ಕೇಳವೇ ಎದಕ್ಕಾಗಿ ದೇವರು ಇನ್ನವರತಾವ ಕಳದಾನ
ನೀನು ಬಹಳ ಉರಿತಿಯಂತ
ಬಲಗೈ ಮುರಿದು ಹೋಗೇತಿ
ಒಂದೇ ಕೈ ಕೊಟ್ಟಾನ
ಯಾವುದು ಮುಗುಳಿ ಕೈ

ಇದೇ ಮುಗುಳಿ ಇದೇ ಬಾಯಾಲೇ
ಇದೇ ಕೈಯಿಲಿ ಊಟ ಮಾಡಬೇಕೊ
ಇದೇ ಕೈಯಿಲಿ ನಿನಗೆ ಕೊಟ್ಟಾನಲೇ
ಯಡಗೈ ಕೊಟ್ಟಾನ ನಿನಗೆ || ತಂದಾನ ||

ಏ ಪದ್ಮ ಜಾತಿ ನೀನೇನ್ಹೇಳ್ತಿಯಲೆ
ನಾನು ನೋಡು
ಸಣ್ಣ ಕೊಡ ತಂಗಡು ಬಾರಯ್ಯಾ ಅಂದ್ರೆ
ಒಂದು ಪಡಗಿಡೋ ಕೊಡ ತಂದಾನ
ಕೊಡ ಹಿಡಕಂಡು ಬಡ ಬಡ ಬಡ ಬಡ
ಅತ್ತಾಗಿತ್ತಾಗ ನೋಡಿಕ್ಯಾಂತ ಹೋತಿನಿ
ಕೆಳಗಿರೋದು ಕೊಲ್ಲು ನೋಡಿಲ್ಲ
ಧೋಪ್ಪನಂತ ಬಿದ್ದು ಬಿಟ್ಟೆ

ಯಮ್ಮ ಎರಡು ನಡುವು ಮುರುದು ಹೋಗೆವಮ್ಮಾ
ಅನ್ನ ನೀರೇ ಒಂತಲ್ಲಾಯಿತು || ತಂದಾನ ||

ಬೇಸ್ ಮಾಡ್ಯಾನ
ಮನಿ ಮನಿ ಮನಿ ಮನಿ ತಿರುಗಾಡುತೀಯ
ಹಗಲೆಲ್ಲ ಅಂತ
ಭಾಳ ಉರಿತೀಯಂತ
ಒಂದೇ ತಲ್ಲಿ ಕುಂಡ್ರಂಗ ಮಾಡ್ಯಾನ ದೇವ್ರು
ಬೇಸಾಯ್ತು ಬಿಡು
ಎಲ್ಲರು ತಂದು ಕೂಳಹಾಕಂಗ
ಅಂತಾನ ಬಂಗಾರಹಂತವನು
ನೀನೇನು ಹೇಳ್ತಿಯಮ್ಮ
ಏನ್ರಿ ಒಂದು ಕೊರಡು ಐತೆ ಕಡದಿಕ್ರಿ
ಬರೇ ಹತ್ತಿಕಟ್ಟಿಗೆ ಒಡಿರಿ
ಕಣ್ಣಾಕ್ ಮೂಗಿನ್ಯಾಕ ಹೋಗುತೈತಿ
ಹೇ ಕತ್ತೆರಂಡಿ ಹೊಲ್ಕ ಹೋಗ್ಬೇಕು ಕಟ್ಟಿಗೆ ಒಡ್ಯಾಕ
ಯಾವನ್ನಾಗಲಿ ಮುರಕಂಡು ಇಟ್ಕೋ ಅಂದ
ಹತ್ತಿಕಟ್ಟಿಗಿ ಮಕ ಮುಂದೆ ಇಟ್ಗಂಡು
ಪಟ ಪಟ ಪಟ ಪಟ ಮುರೀತಿದ್ರೆ
ಹತ್ತಿ ಕಟ್ಟಿಗೆ ಎಗರಿ ಇನ್ನ ಕಣ್ಣಾಕ ಹೋಯಿತು
ಏಯಮ್ಮ ಕಣ್ಣಾಗ ಚುಚ್ಚಿಗಂತು ಅಂತ ಕಟ್ಟಿಗೆ ಕೆತ್ತಿದೆ

ಕಣ್ಣು ಕಿತ್ಗಂಡು ನನಗೆ ಬಂತು ಎಲ್ಲಾ
ಅಂತಾ ನನ ಗಂಡಗ ನಾನು ಹೆಳ್ತಿನಲ್ಲಾ || ತಂದಾನ ||

ಏನ್ ಅಂತಾನ ನನ್ನ ಗಂಡ
ಬೇಸ್ ಮಾಡ್ಯಾನ ಬಿಡು ದೇವ್ರು
ಎರಡು ಕಣ್ಣು ಇದ್ದಾಗ ಭಾಳ ಉರಿತಿದ್ದೆ
ಗಭಾಕ್ಷಿಲಿದ್ದ ಬಗ್ಗಿ ಬಗ್ಗಿ ನೋಡುತಿದ್ದಿ
ಯಾರು ಚೆಲುವೆಯರು ಬರತಾರಂತ
ಬೇಸಿ ಮಾಡ್ಯಾನ ದೇವ್ರು
ಉರಿಯೋರಿಗೆಲ್ಲಾ
ಹಿಂಗ್ ಮಾಡ್ಬೇಕು ನೋಡು ದೇವ್ರು
ಇಲ್ಲಾ ನಮಗೇ ನಾಕು ಕಣ್ಣು ಇರಬಾರದಂತ
ನಾವು ದಿನಾ ಒಲೆ ಗುಂಡಿ ಏರಿಸಿಡ್ತಿವಿ
ಮೂರೇ ಇಡೋದು

ಇಬ್ರು ನಡುವಿಲಿ ಮೂರು ಕಣ್ಣು ಅದ್ಯಾವ
ತಗಾಲೇ ನನ್ಗೆ ಮೂರು ಲೋಕ ನನಗೇ
ಭೂಮಿಮ್ಯಾಲೆ ನಾವು ಇದ್ದು ಸಾಯೋನಲೆ || ತಂದಾನ ||

ಏನಮ್ಮಾ ನಿಂದಾಯ್ತು
ಇನ್ನೋಬಾಕೀದು ಹೇಳಮ್ಮ ನೀನು
ಏಯಮ್ಮಾ ಏನ್ರಿ ಆಗ ನವಣಿ ಅದ್ಯಾವ
ಆಗ ಎರಡು ಸೇರು ಕುಟ್ಟಾನ ಬರ್ರಿ
ನನ್ನ ಒಬ್ಬೋಳ ಕೈಲಾಗೋದಿಲ್ಲ
ಏ ಎರಡು ಸೇರಿಗೆಲ್ಲ ಗಣಮಗ ಹಿಡಿಬೇಕೇನು
ಮ್ಯಾಲೆ ಒಣಿಕಿ
ಹತ್ತು ಸೇರು ಒಣಗಿಡು ಮ್ಯಾಳಿಗೆ ಮ್ಯಾಲೆ
ಹತ್ತು ದಿನ ಬರತೈತಿ ನಮಗೆ
ಅಂತಾ ಅಂತಿದ್ದ
ಸರಿಬಿಡಂತ ನವಣಿ ತಗಂಡ್ರು ನಿಚ್ಚಣೇರುತ್ತಿದ್ದೆ

ನಿಚ್ಚಣ್ಯಾಗಲಿದ್ದ ಧೋಪ್ ಬಿದ್ನೇಮ್ಮಾ
ಯಮ್ಮ ಹದ್ನಾರಲ್ಲು ಉದುರಿ ಬಿದ್ದಾವಮ್ಮಾ || ತಂದಾನ ||

ಹದ್ನಾರಲ್ಲು ಜಳಜಳ ಆದವು
ಬಕಂ ಬಕಂ ಬಕಂ ಅಂಬೋದು
ನೋಡಿದಾ ಏನಂತಾನ ನನ ಗಂಡಾ
ಬೇಸಾಯ್ತು ಬಿಡು
ಈಗ ಒಣಗಿದ ರಟ್ಟಿ ತಿನ್ನಲಾರದಂಗ
ಆಗಿನ್ನ ಕಡಿಲಾರದ್ಹಂಗ
ಬರೇ ಮುದ್ದಿ ತಿಂಬಂಗ ಮಾಡ್ಯಾನ

ಹಲ್ಲಿದ್ದಾಗ ಎಷ್ಟು ಉರಿತ್ತಿದ್ದಲ್ಲೇ
ಬಕ್ ಬಾಯಿ ಈಗ ಯಾರು ನಂಬಾಂಗಿಲ್ಲ
ಬೇಸುಮಾಡ್ಯಾನ ನಿನ್ನದಾಗಿ ಬಾ
ಆಗ ಒಂದು ಬೇಸು ಮಾಡ್ಯಾನಲೇ
ಅಂತ ನನ ಗಂಡ ನನ್ನ ಅಂತಾನಮ್ಮ || ತಂದಾನ ||

ನಾಲೋರಿಗೆ ನಾಕು ಖೂನ ಇಟ್ಟಬಿಟ್ನಪ್ಪ ಮಗ
ಆ ಹುಡುಗನ್ನ ಮಾಡಿಕ್ಯಾಬೇಕಂದ್ರೆ
ಈ ಹುಡುಗೆ ಮಾಡ್ಹೊದ ಅವರಿಗೆ
ಇನ್ನೊಬ್ರದ ಮುಸಿ ನೋಡಲಾರದ್ಹಂಗ
ಹುಣಿಸೇಕಾಯಿ ಆದಂಗ ಉಳ್ಳಗಾದ್ರು
ಗಂಡ್ರು ಹೋಗಿಬಿಟ್ಟಾರ
ಆಗ ಮನ್ಯಾಗ ಕುಂತ್ಗಂಡವು