ಏಯ್ ಭೂಪತಿ ಮಾವಾ
ನೋಡು ಹುಲಿಬಾಲಾ
ಹುಲಿ ಉಗುರು ಛತ್ರಿದವನೇ
ಈ ಕಾಲ್ದವರಾದ್ರೆ ಗಂಟಿಗೊಂದು ಬುದ್ದಿ
ಗಂಟೆಗೊಂದು ಗ್ಯಾನ
ಹೋಗ್ಹೋಗಲೇ ದೊಡ್ಡು ರಾಜನ ಮಗಳು
ಕಂಡೋರು ಬಟ್ಟೆಗಳು ಹಿಂಡವನಿಗೆ
ಕೊಡಬೇಕಾ ಮೈಲು ಬಟ್ಟೆಗುಳೋನಿಗೆಲ್ಲ
ಏ ಕೊಡಾದಿಲ್ಲ ಹೋಗಲೇ
ಆಗ ಮೂರೊರಸ್ ಹಿಂದೆ ಅಂದಿದ್ದೆ
ಆವಾಗ ಕಡ್ಡೀಯಾ
ಈಗ ಕಡ್ದರೆ ನಾನೇನು ಮಾಡ್ಲಿ
ಕೊಡಾದಿಲ್ಲಾಂತಿದ್ರಿ
ಮಾತುಕೊಟ್ಟು ತಪ್ಪೋದಿಲ್ಲ
ಜೀವನ್ನ ಬಿಡ್ತಾರ ಅವ್ರು
ಎಂತೋನಿಗಾಗಲಿ ಮಾತುಕೊಟ್ಟು ಮ್ಯಾಲ
ಆಗ್ಯೋತು ಏಸೊರ್ಸಾಗಲಿ
ಈಗಿನ್ನ ಮಡಿವಾಳೊನಿಗ ಕೊಡುಬೇಕಾತೀತಂತ
ಆಭೂಪತಿರಾಜ ಏನಂತ ಅಳ್ತಾನ

ಮಗಳಾ ಮನೇ ಮನೇ ತಿರುಗೋ ಕಾಲಬಂತೂ
ಮನೇಮನೆ ತಿರುಗೋದು ಬಂದು ಬಿಡ್ತು ನಿನ್ಗೇ || ತಂದಾನ ||

ಯಮ್ಮಾ ಕಂಡೋರು ಬಟ್ಟೆಗುಳು ಹಿಂಡೊ ಕಾಲಾವಾಯ್ತೋ
ಅಮ್ಮಾ ಕಂಡೋರು ಬಟ್ಟೆಗುಳು ಹಿಂಡೊ ಕಾಲಾಯ್ತು ನಿನಗೆ
ಯಾರ ಕೈವಳಗೆ ಹುಲಿ ಸಾಯಿಬಾರದೋ
ಯಾರ ಕೈಯಾಗ ಜೀವ ಬಿಡಬಾರದು ಹುಲಿರಾಜ || ತಂದಾನ ||

ಪರಮಾತ್ಮ ನನ್ನ ಮಗಳು ಮನ್ಯಾಗಿರಾಕಿ
ಮನೀಮನಿಗೆ ತಿರುಗೋ ಕಾಲ ಬಂತೂ
ಕಂಡೋರು ಬಟ್ಟೆಗೊಳು ಹಿಂಡೋ ಕಾಲ ಬಂತು
ಈ ಹುಲಿ ಯಾರ ಕೈಯಾಗ ಜೀವ ಬಿಡಬಾರದು
ಅವನ ಕೈಯಾಗೇ ಜಲ್ಮ ಕಳಿಬೇಕಾ
ಹೇಯ್ ನನ್ನ ಕೈಯಾಗಿದ್ದೋರು
ಈಗ ನನ್ಗ ಶಾಂತಿ ಇಲ್ಲಾ
ಈಗ ಮಾತು ಕೊ ಟ್ಟು ಕಳಿಯಂಗಿಲ್ಲ
ನನ ಮನಿ ಮುಂದೆ ಹಂದ್ರ ಹಾಕಬ್ಯಾಡ್ರಿ
ನನ ಮನ್ಯಾಗಿದ್ದ ಮಗಳು ಕರಕಂಡ್ಹೋಗಿ
ಅವನು ಇನ್ನ ಮಡಿವಾಳೋನ
ಮನಿ ಮುಂದೆ ಹಂದ್ರಹಾಕಿ
ಈಗ ಅವನಿಗೆ ತಾಳಿ ಕಟ್ಟಿ ಕೊಟ್ಟು ಬರೆಪ್ಪಾ
ತಾಳಿ ಕೊಟ್ಟು ಖಳ್ಸಿ
ಆಗ ಕಟ್ಟಿಸಿ
ಆಗ ಬಿಟ್ಟು ಬರ್ರಿ
ಈ ಊರಾಗಿಲ್ಲದಂಗ
ಈಗಿನ್ನ ಯಾವೂರಿಗನ್ನ
ನನ ಮಗಳ ಕರಕಂಡ್ಹೋಗಂತ ಹೇಳ್ರಿ
ಕರಕಂಡ್ಹೋಗಿ ಅಲ್ಲಿ ರಾಜ್ಯೇವಾಳನ್ರಿ
ಮಡೆಲವ್ನು
ಇಲ್ಲೇ ಇದ್ದೂರಾಗಿದ್ರೆ
ಯಪ್ಪಾ ಬಟ್ಟೆಗುಳ್ಹಾಂತ ಬಂದ್ರೆ

ಮಗಳ ನೋಡಿ ನಾನು ಸತ್ತು ಹೋತಿನಪ್ಪಾ
ಮಗಳ ನೋಡಿ ಜೀವ ಬಿಡ್ತೀನಿ ನಾನು
ಮಗಳ್ನ ಮಾತಾಡ್ಸಿದ್ರೆ ಜಲ್ಮ ನಿಂದ್ರದಿಲ್ಲೋ
ನೋಡಿ ನೋಡಿ ಮಗಳಗೆ ಹೆಂಗ ಇರಲೆಪ್ಪಾ ನಾನು || ತಂದಾನ ||

ಅಂತಾ ಭೂಪತಿರಾಜ ದುಃಖ ಮಾಡ್ದ
ಎಂಥಾ ಮದವ್ಯಾಗ್ಲಿ
ಹೂವಿದ್ರೆ ಅಲ್ಲ ಮದುವಿ ಆಗಾದಿಲ್ಲಲ್ಲಪ್ಪಾ
ಹೂವಿಲ್ಲದೆ ಮದುವ್ಯಾಗಾದು
ಹೂಗಾಗಿ ಯಾರು ತಲ್ಲೀಗ್ಹೋಗಬೇಕು
ಈಗ ಜೂರುಗುರು ಸುಬ್ಬಮ್ಮನ ಮನೀಗೆ ಹೋಗ್ಬೇಕು
ಅವ್ರು ಏನು ಮಾಡಿ ಬಿಟ್ರು
ಈಗಿನ್ನ ಏನಯ್ಯಾ
ಮದುವಿ ಮಾಡ್ತೀವಯ್ಯ
ಅಗಸರ ತಿಪ್ಪಯ್ಯ ಮಡಿವಾಳವ್ನೆ ಅಂದ್ರು
ಮಾಡಬೇಕಪ್ಪಾ ಅರ್ಜೆಂಟ್ ಮಾಡ್ಬೇಕು
ಮಧ್ಯಾಹ್ನ ಒಳಗ್ನೇ ತಾಳಿ ಕಟ್ಟಬೇಕು
ಈಗ ಯೇಷ್ಟು ಮಂದೀ ತಿಂದೋದ್ರೆ ನಮ್ಗೇನು ಲಾಭಿಲ್ಲ
ನಮ್ಮ ರೊಕ್ಕ ಹಾಳಾಗ್ಯೋಗ್ತಾದ
ಕಷ್ಟ ಬಂದ್ರೆ ನಮ್ಗೆ ಬರತ
ದುಃಖ ಬಂದ್ರೆ ನಮ್ಗೆ ಬರತಾದ
ಐಯ್ದೇಸೇರು ಅಕ್ಕಿ ಮಾಡೋದು
ಐದು ಮಂದಿ ಗಣಂಗಳ್ಳು ಕರಕಂಬರೋದು
ಊಟ ಮಾಡ್ಸೋದು ತಾಳಿಕಟ್ಟೋದು ಅಷ್ಟೆ
ಮಧ್ಯಾಹ್ನಗೆಲ್ಲ ಛಟ್ನ ಆಗಬೇಕು
ಹೊತ್ತುಟ್ಲೆ ಐದು ಗಂಟೇಗಿ ತಾಳಿ ಕಟ್ಬೇಕು
ಮಧ್ಯಾಹ್ನಗ ಊಟ ಮಾಡೋದು
ಬೇಗಿನ್ಯಾಗ ಹಂದ್ರಕಿತ್ತಿ ತಿರುವ್ಹಾಕಾದೆ ಅಂದ
ಸರೆಬಿಡಪ್ಪಾಅಂದ್ರು
ಆಗಿನ್ನ ಈ ಉಡುಗ ಏನು ಮಾಡ್ದ
ಎಡುಕಲಿದ್ದ ಬಲಕ್ಕ ಎದ್ದು ಬಿಟ್ಟ
ಹೊತ್ತುಕಡೀಗೆ ನೋಡ್ದ
ಯವ್ವಾ ಜೆರಗೂರು ಸುಬ್ಬಮ್ಮ
ನಿನಗೇನು ಬಂದೈತವ್ವ
ರಾತ್ರಿ ಸಟ್ಟು ಸರಿಹೊತ್ನ್ಯಾಗ
ಕೋಳಿಕೂಗುವಾಗ ಎಬ್ಬಿಸ್ತಿದ್ದೇ
ಹೊತ್ತು ಅಲ್ಲಿಗೇರೆತಲ್ಲವ್ವಾ
ಆಗ್ಲೆ ಎಬ್ಬಿಸಿದ್ರೆ
ತಣ್ಣ ಒತ್ನಾಗೆ ಹೊತ್ತು ಹುಟ್ಟೊತ್ತಿಗ್ಯಲ್ಲ
ಒಂದು ಗಾವುದ ನಡೀತಿದ್ದೆ
ನೀನ್ಹೆಂತಾಕಿ ಮುದುಕಿ
ಏಳು ಸಮುದ್ರುಕ ಹೋಗಬೇಕು ಅಂದ
ಹೋಗಪಾ ಎಬಿಸಿದ್ರೆ ಕಡಿತೀನಂದಿ
ಅದಕ್ಕೆ ಎದೆ ಬಿದ್ದೆ
ಯವ್ವಾ ಕೈ ಚೀಲ ಕೊಡವ್ವ ಹೋತಿನಿ
ಯ್ಯೆಯಪ್ಪಾ ಹಾಳುಮಕಲಿದ್ದ ಹೋತಿಯೆನಲೊ
ಕಾಲುಮಕ ತೊಳ್ಕೋ ದ್ವಾಸೆಮಾಡೀನಿ
ಉರಲುಗಡ್ದೆ ಮಾಡಿನಿ
ಊಟಮಾಡ್ಹೋಗು ಅಂದ್ಳು
ಸ್ನಾನಾ ಮಾಡಿಕ್ಯಂಡ
ಆಗಿನ್ನವರ ನಾಕು ದ್ವಾಸೆ ಕೊಟ್ಟು
ಸೌಟೆ ಉರಲುಗಡ್ಡೆ ಹಾಕಿದ್ಳು
ಊಟ ಮಾಡ್ದ
ಇನ್ನಾ ಊಟಾ ಮಾಡಪ್ಪಾ
ಹೊಟ್ಟೆ ತುಂಬಾ ಅಂದ್ಳು
ಇಲ್ಲವ್ವ ಸಾಕಪ್ಪಾ ಇಷ್ಟೆ ಅಂದ
ಆಗ ಕೈಚೀಲ ಕೊಡವ್ವ ಅಂದ
ಕೈಚೀಲ ಕೊಟ್ಟು
ಆಗ ಪಾದ ಮುಗುದ್ನು
ಹೋಗಿ ಬಾರಪ್ಪಾ ಅಂದ್ಳು
ಆಗ ಹುಡುಗ ಕೈಚೀಲ್ಹಿಡಕಂಡು
ಕಳ್ಳಿ ದಾರಯಾಗ ಹೋತನಪ್ಪಾ ಬಡಿಮಟ್ಟ್ಯಾಗ
ದಾರಹಿಡಕಂಡು
ಹೋತಿದ್ರೆ
ಈಗ ಮೂವ್ವಾರು ಬಂದ್ರಪ್ಪಾ ಹುವ್ವಾ ಕಟ್ಸಾಕ
ಯಾರೂ
ಭೂಪತ ರಾಜ್ನ ಕೈಯಾಗಿರೋರು
ಏನವ್ವಾ ಜಿರಗೂರ ಸುಬ್ಬವ್ವಾ ಅಂದ
ಏನ್ರಪ್ಪಾ ಅಂದ
ಈಗ ಊರು ಮಾಡೋ ಗೌಡ್ನ ಮಗಳ ಮದುವಿ ಆತೈತಿ
ಏನ್ ಹುವ್ವ ಜಗ್ಗೀ ಕಟ್ಬೇಕವ್ವಾ
ಎರಡು ಪುಟ್ಟಿ ಆಗಬೇಕು ಅಂದ
ಏ ಯಪ್ಪಾ ಯಾರಿಗ್ ಕೊಟ್ಟೋರಲೋ ಅಂದ್ಳು
ಯಾರಿಗೇ
ಮಡೇಲೋನಿಗೆ ಅಗಸೂರು ತಿಪ್ಪಯ್ಯಗೆ ಅಂದ್ರು
ಏ ಯಪ್ಪಾ ಇಬ್ಹ್ರೆಂಡ್ರು ಇದಾರ ಮತ್ತೆ ಹ್ಯಾಂಗ್ ಕೊಟ್ನಲೋ
ಏನನ್ನ ಬಟ್ಟೆಗೊಳು ಒಗದಿದ್ಕೆ ಒಪ್ಪಿಗಲ್ಲಾಗಿ ಕೊಟ್ಟಾನ
ಇಲ್ಲವ್ವಾ ನಿನಗೇನು ಬಂದೈತಿ
ಸೀ ನೀರು ಬಾಯಿತಲ್ಲಿ ಹುಲಿಕಡ್ದು ಬಂದಾನಂತೆ
ಅಂಗೇ ಬಾಯಿತೆರಕಂಡು ನಿದ್ದಿ ಮಾಡ್ತೀತಂತೆ
ಅಂಗೇ ತಿವಿದು ಬಿಟ್ಟಾನ
ಅಲೆಲೆಲೆಲೇ
ಇವ್ನು ಹೋದ ಮ್ಯಾಲೆ
ನನ್ನ ಅಳಿಯ್ಗ ಮಾಡಿಕೇಬೇಕಂತ
ನಾನು ಉಪಾಯ ಮಾಡಿದ್ದೆ
ನನೆಗ್ಯಾನ್ನ ಅಗಸೋರನು ಮಾಡ್ಯಾನ
ನನ್ನ ಅಳೀಯಗೆ ಬ್ಯಾಡ
ಅಗಸುರು ಮಡೇಲವ್ನಿಗೆ ಬ್ಯಾಡ

ಕಡುದವನಿಗೇ ಕರದು ಕೋಡಾನಪ್ಪಾ
ಆಗ ಕೊಲ್ಲಿದವ್ನಿಗೆ ಕರದು ಕೋಡಾನಪ್ಪಾ
ಪುಣ್ಯಾನ್ನ ಬರತೈತೋ ನನ್ಗೆ ದರ್ಮನ್ನ ಬರುತ್ಯೆತೋ || ತಂದಾನ ||

ನನ್ಗೇ ಬ್ಯಾಡ ಅವ್ನಿಗೆ ಬ್ಯಾಡ
ಕಡ್ಡವ್ನಿಗೆ ಮಾಡಾನ ಪಾಪ
ಪುಣ್ಯಾನ್ನ ಬರ‍ಲಿ ಪಾಪನ್ನ ಬರಲಿ
ಹೇ ತಳವಾರ
ಅಲ್ಲಿ ಹೋತಾನಾ
ಒಬ್ಬುಡುಗ ತೆಳ್ಳಗೈದನಾ ಕೈಚೀಲ್ಹಿಡಕಂಡು
ಆ ಹುಡುಗನ್ನ ಬಿಡಬ್ಯಾಡ್ರಿ

ಕರಕಂಡೆ ಬರಯೆಪ್ಪಾ ವಾಪಾಸು ಹುಡುಗನ್ನಾ || ತಂದಾನ ||

ಓಡಿ ಬರತಿದ್ರೆ
ಗಾಳಿಪಟ ಹೋದಂಗ ಹೋತಾನಪಾ
ಕೈ ಚೀಲ್ಹಿಡಕಂಡು
ಚಂದ್ರಾಯುಧ ಹಿಡ್ಕಂಡು
ಏ ಹುಡುಗಾ

ಗೊಲ್ರು ಹುಡುಗಾ ಗೊಲ್ರು ಹುಡುಗಾ
ಕೈ ಚೀಲ್ಹುಡುಗ ಕೈಚೀಲೊ ಹುಡುಗಾ
ನಿಂದ್ರಪ್ಪ ನಿಂದ್ರಪ್ಪ ಶರಣಾಲೋ ನನ್ನ್ಹುಡುಗ || ತಂದಾನ ||

ಹುಡುಗ ಕಿವಿಲಿ ಕೇಳ್ದ
ಕೈಚೀಲಂಬೋದು ನಾನೆ
ಆಗ ನಿಂದ್ರಲೋ ಅಂತಾರೆ
ಅಂತ ನಿಂತ್ಕಂಡ
ಹಿಂದಕ್ಕ ತಿರುಗಿ ನೋಡ್ದ
ಏನಪ್ಪಾ ಅಂದ
ಇಗೋ ಜಿರುಗೂರು ಸುಬಮ್ಮ ಅನ್ನಿಟ್ಟ್ಯಾಕಿ
ಮನ್ಯಾಗ ನಿದ್ದಿ ಮಾಡ್ದೋನು
ಆಯವ್ವ ಕರಿತಾಳ ಬಾರಪ್ಪಾ ಅಂದ್ರು
ಅಜ್ಜಿ ಕರಿತಾಳ ಬಾ ಅಂದ್ರು
ಏ ಯಪ್ಪಾ ನಾನೇನು ಮರತಿಲ್ಲ
ಕೈಚೀಲ ತಗಂಡು ಬಂದೀನಿ
ಆ ಮುದಿಕೀಕೊಟ್ಟ ತಗಂಡು ಬಂದೆ
ಮನ್ಯಾಗಿಟ್ಟಿದ್ಳು ಕೊಟ್ಟು
ತಗಂಡ ಬಂದೆ
ನಾನೇನು ಕಳ್ಳತನ ಮಾಡಿಲ್ಲ
ನಡೆಪ್ಪಾ ಅಂತ ಬಂದ
ಏನವ್ವಾ ಅಂದ
ಏನಿಲ್ಲಪಾ ಸುಮ್ನೆ ಬಾ
ಗೌಡ್ರು ಮನೀಗ್ಹೋಗಾನು ಅಂದ್ಳು
ಯವ್ವಾ ಗೌಡ್ರತಲ್ಲಿ ಹೋದುರ್
ನನ್ನ ಕಡಿತಾರೋ ಬಡಿತಾರೊ
ಯವ್ವಾ ನಾನೇನು ತಂದಿಲಲ್ಲವ್ವಾ
ನೀನು ಕೈಚೀಲ ಕೊಟ್ಟೆ ನಾನ್ ಒಯ್ದೆ
ಏನ್ ಪರಿವಿಲ್ಲ ಬಾಪ್ಪಾ ಅಂದ್ಳು
ಬೆಳ್ಳಿ ತಟ್ಟ್ಯಾಗ
ಹುಲಿಬಾಲ ಹುಲಿ ಮೂಗು ಹುಲಿ ಉಗುರು
ತಟ್ಯಾಗಿಟ್ಟಕೊಂಡು ಬಟ್ಟ್ಯಾಗ ಮುಚಗಂಡ್ಳು ಮುದುಕಿ
ಆಗ ಹುಡುಗುನ್ನ ಕರಕಂಡು

ರಾಜಕಚೇರಿಗೆ ಬಂದು ಬಿಟ್ಟಳಮ್ಮಾ
ಆಗ ಇನ್ನ ವಳಕ್ಕ ಬಂದಳಮ್ಮಾ || ತಂದಾನ ||

ವಳಕ್ಕ ಬಂದ್ಳು
ಶರಣ್ರೀ ಭೂಪತಿರಾಜ
ಅಂತ ಮುಂದಿಟ್ಟು
ಬಟ್ಟೆ ತೆಗ್ದುಳು
ಏನಾವ್ವಾ ಅಂದ್ರು
ನೋಡಪ್ಪಾ ನೀನು ಓದು ಕಲ್ತವ್ನು
ಊರಿಗೆ ಗೌಡ ರಾಜ
ಕೆಟ್ಟವು ಯಾವು ಒಳ್ಳೇವು ಯಾವು
ಮಂಡವು ಯಾವು ತುಂಬಿದುವು ಯಾವು
ನಿನ್ಗೆ ಅರ್ಥ ಆಗದಿಲ್ಲಾ ಅಂದ್ಳು
ತುಂಬಿದ ಬಾಲ ತುಂಬಿದ ಉಗುರು ಮುದ್ಯಾಕೀದು
ಮೊಂಡ ಬಾಲ ಮೊಂಡ ಉಗುರು
ಅವಂದು ಮಡೇಲವಂದು
ನೀ ನಿಂತಾಗ ಯಾರು ತಿವಿದಿದ್ರವ್ವಾ ಅಂದ
ಈಗ ನೋಡಪಾ ನನ್ನಳಿಯ್ಗ ಮಾಡುಕೇಬೇಕಂತ
ನಾನ್ ಯುಕ್ತಿ ಮಾಡಿದ್ದೆ
ನನ್ನಳಿಯ್ಗ ಬ್ಯಾಡ ಮಡೇಲವ್ನಿಗೆ ಬ್ಯಾಡ
ಈಗೊ ಈ ಹುಡುಗ ನೋಡು ಕಡಿದಿದ್ದು ಅಂತ ಹೇಳ್ದಳು
ಮೇಘಾದಾಗ ವಜ್ರ ಕಾಣ್ದಾಂಗ ಕಾಣ್ತಾನ
ಬಾರಪ್ಪಾ ಕುರ್ಚಿಮ್ಯಾಲ ಕೂಡು ಅಂದ
ಕುರ್ಚಿಮ್ಯಾಲ ಕುತ್ಕೊಂಡ
ನಿಂದು ಯಾವೂರು ಅಂತ ಕೇಳ್ದ
ನಂದು ಚಾಂಪುರ ಪಟ್ಣ
ನಮ್ಮ ತಂದಿ ಕಾಂಭೋಜರಾಜ
ನಾವು ಹಾಲುಗೋಲ್ರು
ನನ್ನ್ಹೆಸರು ಶರಬಂದುರಾಜ
ಮತ್ತೆದುಕಾಗಿ ಬಂದಿದ್ದಿ ಈ ಊರಿಗೆ
ಏಳು ಸಮುದ್ರದ ಆಕಡೀಗೆ ಮೇಟೌಷಧ ತರಾಕ
ನಮಪ್ಪಗ ಬೆನ್ನಗಲಾಗ ಹುಣ್ಣು ಹುಟೈತೆ
ರಾಜ್ಯವಾಳೋನಿಗೆ ರಾಕ್ಷಿ ಹುಣ್ಣುದಾಗ
ಶನಿಮಾತ್ಮ ಸೇರಯಾನ
ರಾಜಗ ಹುಟ್ಟಿದೋನು ಉಳಿಸಿಗ್ಯಾಬೇಕಂತ
ನಾನು ಪ್ರಯತ್ನಾಗಿ ಬಂದಿನಯ್ಯಾ ಅಂದ
ಹುಲಿ ಕಡಿದಿದ್ದು ನೀನೇನ ಅಂದ
ನಾನೇ ಅಂದ್ರೆ
ಸರೆಪ್ಪಾ ಹುಲಿಕಡ್ದೋರಿಗೆ
ಮಗಳುಕೊಡತೀನಿ ಆಂದೀನಿ
ಈಗ ಮಗಳು ಕೊಟ್ಟು
ನಿನ್ಗ ಲಗ್ನಾ ಮಾಡ್ತಿನಿ
ನಿನ್ಹ್ನಿಂದೆ ಖಳಿಸ್ತಿನಿ
ಕರ್ಕಂಡು ಹೋಗುವಂತಯಾ ಅಂದ
ಅಯ್ಯೋ ಮದುವಿ ಅಂದ್ರೆ ಐದಿವ್ಸ ತಡ
ಐದವ್ಸಗೆ ಐದು ಗಾವುದ ಹೋತಿನಿ
ಏನ್ರಿ ನಾನು ಮದುವೆ ಮಾಡಿಕ್ಯಂತಿದ್ರೆ
ನಮಪ್ಪ ಸತ್ತೋದುಮ್ಯಾಲೆ ಹೊಂಟೋದ ಮ್ಯಾಲೆ
ನಾನು ಅವುಷದ್ದ ಓಯ್ದು
ಏನ ಮಾಡಬೇಕ ನಾನು
ಏನ್ರೀ ಯ್ಯಾ ಮದುವಿ ಬ್ಯಾಡ
ಕಡ್ದರೆ ಸಂತೋಷ
ನಿಮ್ಮೂರಿಗೆ ಸೀ ನೀರು ಕುಡ್ಯಂಗ ಮಾಡೀನಿ
ಒಳ್ಳೇದು ಮಾಡೀನಿ
ನಾನೇನು ಕೆಟ್ಟದು ಮಾಡಿಲ್ಲ
ಏನ್ರೀ ಯಾರಿಗನ್ನ ಕೊಟ್ಟು ಲಗ್ನ ಮಾಡ್ರಿ
ಅಯ್ಯೋ ಹಂಗಲ್ಲಪ್ಪಾ
ನಿನಗೇ ಕೊಟ್ಟು ಲಗ್ನ ಮಾಡ್ತೀನಿ ಅಂದ
ಯಜಮಾನ್ರ ಮಾತು ಕೇಳಪ್ಪಾ
ನೀನು ಮಾತು ತಟಾದು ಹೋಗ್ ಬ್ಯಾಡ ಅಂದ್ರು
ಈ ಹುಡುಗ ಆಲೋಚ್ನೆ ಮಾಡ್ದ ಹುಡುಗ
ಇನ್ನ ಯೆಜಮಾನ್ರು ಇಷ್ಟು ಮಂದಿ ಹೇಳುವಾಗ
ನಾನು ಮುಂದ್ಕು ಹೋದ್ರೆ ಬೇಸಲ್ಲ

ಆಗಲ್ರಿ ಅಂದೇ ಬಿಟ್ಟಾನಮ್ಮಾ
ತಂದಿಲ್ಲಾ ತಾಯಿಲ್ಲಾ ಮಗನಮ್ಮಾ
ಪರದೇಶಿವಾಗೇ ಬಂದ್ವನಮ್ಮಾ ಮಗನಾಗಿ || ತಂದಾನ ||

ಆಗ ಪರದೇಶಿ ಆಗಿ ಬಂದನಪ್ಪ ಮಗ
ಏನು ಒಳ್ಗ ಹೋರ್ಗ ಮನಿ ಸಾರಿಸಿದ್ರು
ಆಗ ಹಂದ್ರ ಹಾಕ್ಸಿ ಬಿಟ್ರು
ಕಾಣಿಗಿ ತಪ್ಪಲಾ ಟೆಂಗಿನ ಗಿಡುಗಳು
ಬಾಳೇ ಗಿಡುಗುಳು
ಆಗಿನ್ನು ಹಂದ್ರ ಹಾಕಿದ್ರು
ಹಾಕಿ
ಆಗ ದೇವ್ರಿಗೆಲ್ಲ ಮಟಕ್ಕೆ
ಇನ್ನ ಕಾಯಿಹೂವ್ವಾ ಮುಡಿಸಿದ್ರು
ಆಗ ಹುಡುಗನಿಗಾಗಿ

ಬಣ್ಣದ ರಗ್ಗೆ ಇನ್ನುವಾಸೆರಲಾ
ಬೆಳ್ಳಿತಟ್ಟ್ಯಾಗ ತಾಳಿಮುತ್ತುವಣ್ಣಾ
ಶ್ಯಾನುಭಾಗರ್ನ ಕರಕಂಡು ಬಂದರಮ್ಮಾ || ತಂದಾನ ||

ಆಗ ಬಣ್ಣದ ರಗ್ಗ ಮ್ಯಾಲೆ ಸಾಸಿವೆ ಹೊಯ್ದುರು
ಶಾನಭಾಗ್ರು ಬಂದು ಚಿರಂಜೀವ ವಿಷ್ಣು ಈಶ್ವರಾ ಆದಿಶಕ್ತಿ ಅಂತಾ
ಎದ್ದೇಳಮ್ಮಾ ಇನ್ನ ತಾಯಿ

ಭೂಪ್ತರಾಜ್ನ ಮಗಳಮ್ಮಾ
ಎದ್ದೇಳೆ ಮಾಣಿಕ್ಯವ್ವಾ || ತಂದಾನ ||

ಮಾಣಿಕ್ಯಮ್ಮ ಎದ್ದು ಆಗ ಅರಿಷಿಣ ವಿಭೂತಿ ಗಂಧವಿಟ್ಟು
ಆಗ ಅಕ್ಕಿ ಹಾಕಿ
ಮುತ್ತಿನ ಸೆರಗೀಲಿ ಶರಣು ಮಾಡಿ ಕುಂತ್ಳು
ಆಗಿನ್ನ ಶಿವಾ ಅಂತ ಮ್ಯಾಕೆದ್ದು ಬಿಟ್ಟ ಹುಡುಗ
ತಾಯೀ ತಂದ್ಯೆಂತ ಕೈಮುಗ್ದ
ಮೂಗು ಮುತ್ತು ಹಾಲು ಕಡಗ
ಆಗ ತಾಳಿ ಹಿಡ್ದು ಅರಿಷಣ ಗಂಧವಚ್ಚಿ

ಆಗ ಬಂದು ನೋಡಮ್ಮ ಶಿವಾ ಅಂತ ಕಟ್ಟ್ಯಾನ ತಾಳಿ
ಯಮ್ಮಾ ಹಾಲು ತುಪ್ಪ ಕಲಿಸ್ಯಾರ ಎಲೆಡಿಕೆ ತಿರುವಾಣ ಮಾಡಿದ್ರು || ತಂದಾನ ||

ಎಳೇ ತಿರುವಣ ಮಾಡ್ದ್ರು
ಆಗಿನ್ನವರು ಊರುಮಂದಿ ಊಟ ಮಾಡಿದ್ರು
ಆಗಿನ್ನ ಐದಿವ್ಸಕ್ಕೆ ಹಂದ್ರ ಕಿತ್ತಿದ್ರು
ಆರೋ ದಿನದಲ್ಲಿ ಏನಂದಾ
ಹೋತೀನಿ ಮಾವಾ ಮಗಳು ಕೊಟ್ಟಿದ ಭೂಪತಿರಾಜ ಇಲ್ಲೇ ಇದ್ರೆ
ನಮ್ಮ ತಂದಿ ಹುಣ್ಣು ನೋಡವರ ಯಾರು
ಅವುಷದ್ದ ತರೋವ್ರು ಯಾರು
ಏನಪಾ ನನ ಮಗಳ್ನ ಖಳಿಸ್ತೀನಿ
ಕರ್ಕಂಡು ಹೋಗು ಅಂದ ಛಿಛೀ ಛೀ ಬ್ಯಾಡ ಮಾವ
ನಾನೇನು ಊರಿಗೆ ಹೋತಿದ್ನ್ಯಾ
ಏಳು ಸಮುದ್ರದ ಆ ಕಡಿಗೆ
ಮೇಟೌಷಧಿಗೆ ಹೊತಿದ್ನಿ
ಜೀವನದಲ್ಲಿ ತಣ್ಣಗಾಗಿ ನಾನು ಹಿಂದಕ ಬಂದ್ರೆ
ನಿನ ಮಗಳ್ನು ಕರ್ಕಂಡು ಹೋತೀನಿ
ನನ್ನೂರಿಗ್ಹೋಗುವಾಗ
ಆ ಕಾಲಕ್ಕ ಹೊಟ್ಟೆ ಹಿಡಿದೈತಂತೆ
ಮನೀ ಹಿಡಿದೈತಂತೆ
ನಿನ ಮಗಳು ನಿನ ಮನ್ಯಾಗ
ಉಳಿಸಿಗ್ಯಂಬಾಕ ನಿನಗೇನು ಭಯ
ಮಾವಾ ನಿನ ಮಗಳು ನಿನ ಮನ್ಯಾಗಿರಲಿ
ಈಗ ನಾನು ಹೋಗಿ ಬರತೀನಿ ಅಪ್ಣೆಕೊಡು ಮಾವ ಅಂದ
ಯಮ್ಮಾ ಜೀವದ ಗಂಡ ಹೋತಾನ
ಜೀವ ಮುತ್ತಿನ ಸೆರಗಾಸಿ
ಇನ್ನ ಪಾದಕ್ಕ ಶರಣುಮಾಡು ಅಂದ್ರು
ಮುತ್ತಿನ ಸೆರಗಾಸಿ ಶರಣ್ರೀ ಜೀವದವನೆ ಅಂದ್ಳು
ದೀರ್ಘಾಯುಷ್ಯ ಎದ್ದೇಳು ಭಾಮಾ ಅಂದ
ಆಗ ಕೈಚೀಲ ಕೊಡ್ಹೊತ್ತಿಗೆ
ಮಾವನ ಪಾದ ಅತ್ತೆಪಾದ ಮುಗ್ದು
ಆಗ ಅವ್ವನ ಪಾದ ಮುಗ್ದ
ಹೂವ್ವಾ ಕಟ್ಟುವ ಜಿರಗೂರ ಮುದುಕಿದು