ಯರ್ಡು ಕೈ ಹೋದ್ವಮ್ಮಾ
ಕೈಕೊಯ್ಯವನು ಬಂದಾನ
ಅಂದ್ರೆ ದೇವಸ್ಥಾನಿ ಎಡಕ್ಕಲಿದ್ದ ಬಲಕೈದ್ಳು
ಎದ್ದು ಇನ್ನವರತಾವಾಗಿ
ಕರ್ಡಿ ಹುಲಿ ಕೊಯ್ದವನು
ಕಡ್ದವನು ಯಾವೋನಿರಬೋದು
ಇನ್ನವರತಾವಾಗಿ ಕುಲಕ್ಕಾಗಿ

ಅವನು ಯುದ್ದಕ್ಕಾಗಿ ಬರಬೇಕು
ಹೆಣಸರ ಮ್ಯಾಲೆ ಗೆಲಿಬೇಕು
ಅವ್ನುನ ಸೈ ಗಣ್ಸು ಅಂದೇನ
ಇಲ್ಲದಿದ್ರೆ ಹೆಣ್ಸಲ್ಲ ಗಣಸಲ್ಲ
ಆಕೆ ವಂದು ನುಡಿತಾಳ || ತಂದಾನ ||

ದೇವಸ್ತಾನಿ
ಅರವತ್ತಾರು ಬಾಣ ಹಿಡಕಂಡ್ಳಪ್ಪ
ಬೆಂಕಿ ಬಾಣ ಒತ್ತಿ ಬಾಣ ಜವಾರಿ ಬಾಣ
ಆಗ ನೀಲಿ ಬಾಣ
ಹಿಡ್ಕೊಂಬೊತ್ತೀಗೆ
ಈತೇನು ಮಾಡ್ದ

ಎಲ್ಲೈದಿಯಿ ಪರಮಾತ್ಮ
ಜೀವ ಕೊಟ್ಟ ನನ ದೇವ್ರ
ಆಗ ನೆನಿಸಿ ಬಿಟ್ಟಾನ || ತಂದಾನ ||

ಆಗ ನೆನಸೋವೊತ್ತೀಗೆ
ಆಗ ಜೀವ ಕೊಟ್ಟಿದ ತಾತ ಬೆನ್ನಿಂದ ಆದ್ಯಾನಪ್ಪ
ಯಾರಿಗೇ ಶರಬಂದ ರಾಜಗ
ಲೇಯ್ ಬೆನ್ನಿಂದೈದೀನಿ
ನಿನ್ಗೆ ನಾನ ಕಾಣಂಗಿಲ್ಲ
ನನ್ಗೆ ನೀನ ಏನ ಕಾಣಬೇಕು
ನನ ಮುಂದೇ ನೀನಿರಬೇಕು
ಏನ್ ಹೆದುರಬ್ಯಾಡ
ಇಗೋ ತಗೋ ಇನ್ನವರ ಬೆಂಕಿಬಾಣ
ಒತ್ತಿಬಾಣ ಜವಾರಿಬಾಣ ಬಿಳೆಬಾಣ ನೀಲಿಬಾಣ
ಆಕಿಗನ್ನ ಮುಂಚೇಗಿ ನೀನೆ ವಗೀಬೇಕು
ಆಕ್ಗಿ ನಾಕ್ ಕೈ ನಿನ್ಗ ಎರಡು ಕೈ
ವಂದೇ ಸರ್ತಿಗ ವಗ್ದಬಿಡು
ನನಗೆ ಮೈ ತಟ್ಟಿದ್ರೆ
ಸುಟ್ಟು ಸುರುಮಂಡಲಾಗ್ತೀನಾಂತ
ಬಾಣ ಬಾಣಕ್ಕೆ ಎದುರು ಬಿಡಬೇಕಲ್ಲ
ಮ್ಯಾಕ ನೋಡ್ತಾಳ
ಮೂರ್ಚೆ ಬಾಣ ಎದಿಗೆ ಬಿಟ್ಟು ಬಿಡು
ಎದಿಗೆ ನಾಟಿಕ್ಯಂತೈತಿ ಮೂರ್ಚ್ಯಾಗಿ ನಿಂದ್ರತಾಳ
ಈಗಿನವರ ಕುಲಕ್ಕಾಗಿ
ನಾನಿನ್ನವರ ವಿಭೂತೀ ಕೊಡ್ತಿನಿ
ವಗ್ದುಬಿಡು
ವಗ್ದರೆ ಆಗ ಯಾರಡು ಕೈ ವುಚ್ಚಿ ನೆಲಕ್ಕ ಬೀಳ್ತಾವ
ಯರಡೇ ಕೈ ವುಳಕಂತಾವ

ಅಯ್ಯಾ ಗಣಸ್ತಿಗೆ ಹೆಣಸ್ರಿಗೆ ಈಡಲ್ಲಾ
ಎಂತ ವಯ್ಸು ಚಕ್ಕವನೂ
ಗಣಸುಲೋಕ ದೊಡ್ಡವ್ನೇ
ನಾನು ಹೆಣಸು ಆನೆ ಇದ್ದಂಗ
ಹುಲಿ ಎದ್ದ ಗಣಸಯ್ಯಾ || ತಂದಾನ ||

ಹುಲಿಗೆ ನಾನು ಸೋತು ಬಿಟ್ಟೆ
ಆನೆ ಇದ್ದಂಗ ಹೆಣಸು
ಹೆಣ್ಸಿಗ ಗಣ್ಸಿಗೆ ಏನು ಸಂಬಂಧ
ಹುಲಿ ಇದ್ದಂಗ ನೀನು
ಹುಲಿ ಸಣ್ಣದೇ ಅಲ್ಲ
ಆನ್ಯೆಂದ್ರೆ ದೊಡ್ಡದು ಅಲ್ಲ
ಆಗಿನ್ನವರ್ತಾ ಹುಲಿಗೆ ನಾನು ಸೋತು ಬಿಟ್ಟೆ

ಶರಣು ಗಣಸುರು ನಿಮಗಯ್ಯಾ
ನನ್ನ ಪಾದ ಹಿಡಿತಾಳೋ || ತಂದಾನ ||

ಕರಕಂಡು ಹೋಗು ದೇವಸ್ಥಾನಿಗಿ ಅಂಬೊತ್ತಿಗೆ
ಅಷ್ಟಾಗ್ಲಿ ತಾತ ಅಂತ
ಆಗಿನ್ನವರ ಶರಣಬಂದರಾಜ ಕುಂತ್ಕೊಂಡ
ಆಕಿ ದೇವಸ್ಥಾನಿ ಬಂದ್ಳು
ಯುದ್ಧ ಮಾಡಾಕ
ಆಗ ಧಗಧಗ ಧಗ ಜ್ಯೋತಿ ಉರಿತೈತಿ
ಹೇ ಕಳ್ಳದವನೆ ಇನ್ನವರ ಕರ್ಡಿ ಕೊಲ್ಲವನೆ
ರಾಕ್ಷಾಸಿನ ಕೊಲ್ಲವನೆ
ಕಳ್ಳತನವನೆ ಎದ್ದು ಯುದ್ಧ ಮಾಡು
ಹೆಣಮಕ್ಕಳ ಮ್ಯಾಲೆ ಅಂದ
ಆಬಾಬಾಬಬಾ
ಮೂರುಕಾಸ್ ಹೆಣುಮಗಳು
ಆಗ ಯುದ್ಧಕ್ಕ ಬಂದ್ರೆ
ನಾನು ಸಮ್ಮನಿರ್ಲ ಗಣಮಗ

ಬರ್ತಾ ನೋಡು ನನ್ನ ಈದ್ಯೇವು
ಎಡಕ್ಕ ಬಲಕ್ಕ ತೋರ್ಸ್ಯಾನ
ಅರ್ರವತ್ತಾರು ಬಾಣ ವಗದಾನ
ಅಬ್ಬ ನಾನು ಸಾಯ್ತೀನಿ
ಬಾಣ ಬಾಣ ಬಿಡಿಯಾಕ
ಆಕೆ ಮ್ಯಾಕು ನೋಡುವಾಗಲ್ಲ
ಮೂರ್ಚೆ ಬಾಣ ಎದಿಗೆ ಬಿಟ್ಟಾನ || ತಂದಾನ ||

ಮೂರ್ಚ್ಯಾಗಿ ನಿಂತ್ಕೊಂಡ್ಳು
ಅರವತ್ತು ಬಾಣ
ವಂದು ಬಾಣ ಆಕಿಗ ತಟಲಾರ್ದಾಂಗ
ಎರ್ಡು ಕೈಲ್ಹಿಕಂಡು ಕೆಳಾಗ ಹಾಕಿದ ಅವು
ಗೊಲ್ರು ಹುಡ್ಗ
ಕೆಳಗ್ಹಾಕಿ ತಾತ ವಿಭೂತಿ ಕೊಟ್ರ ವಗ್ದು ಬಿಟ್ಟ.
ಆಗ ಎರ್ಡು ಕೈ ವುಚ್ಚಿ ನೆಲಕ್ಕ ಬಿದ್ವು

ಅಯ್ಯಾ ಹೆಣ್ಸುರು ಗಣ್ಸರು ಸಂಬಂಧಾ
ಆನೆಯಂಥ ನಾನೆಣಸು
ಹುಲಿಯಂತ ಗಂಡಪ್ಪಾ
ಸೋತೆ ನಿನ್ನ ಜಲ್ಮಕ್ಕೆ || ತಂದಾನ ||

ಆಗ ಪಾದಕ್ಕೆ ಬಿದ್ಳು
ಏನ್ರೀ ಸೋತು ಬಿಟ್ಟೀನ್ರಿ ನಾನು
ನಿನ ಪಾದಕ್ಕೆ ಶರಣು ಅಂಬೊತ್ತಿಗೆ
ನಡ್ರೀ ನಿನ್ಹಿಂದೆ ಬರತಿನಿ
ಛೀ ಛೀ ಛೀ ನಿನ ನನ್ಗೆ ಬೇಕಿಲ್ಲ
ನಿನೇನು ಬಂಡಿ ಗುಗ್ಗುರಿ ಬಂಡಿ ಕೊಡುಬು
ಒಂದು ಮಣ್ಸೇನು ಬೇಕಂತ
ಊರೆಲ್ಲ ಹಾಳು ಮಾಡಿದ್ದಕೆ
ಊರೆಲ್ಲ ಉದ್ದಾರ ಆಗ್ಬೇಕು
ಹುಟ್ಟಿದವರು ಹುಟ್ಟಿದ್ಹಂಗೆ ಇರಬೇಕು
ರ್ವಾಗ ಬಂದ್ರೆ ಸಾಯ್ಬೇಕು
ಇಲ್ಲದಿದ್ರೆ ಬೆಳಿಬೇಕಂತ
ಈಗ ನೀನಿಷ್ಟು ಉಪಾಯ ಮಾಡಿದಾಕಿ
ಈಗ ನಿನ್ನ ಕಡ್ದೇ ಹೋಗಬೇಕಂತ ಬಂದೀನಿ ನಾನು
ಏನ್ರೀ ನನಗಲ್ರೀ
ಈ ಕರ್ಡೀಗೆ ರಾಕ್ಷಾಸಿಗೆ ಯಾರು ಕೊಡ್ತಾರಂತ
ನಾನ ಮಾಡಿದ್ದೆ
ಆ ಹುಡ್ಗ ಏನು ಮಾಡಿದನಂದ್ರೆ
ಜೀವಕ್ಕಾಗಿ
ನೀನು ನನ್ಗೆ ಬೇಕಿಲ್ಲ
ನಾನು ಹೋಗಿ ಬಿಡ್ತೀನಿ
ಇಲ್ರೀ ಹಾಗ ನನ್ನ ಅಧ್ವಾನ ಮಾಡಿ ಹೋಗಬ್ಯಾಡ
ಈಗ ನಾಗೇಂದ್ರಗ ಹುಟ್ಟ್ಯಾಳ
ತಾಯಿಲ್ಲ ತಂದಿಲ್ಲ
ಅಂಬೋತ್ತಿಗೆ ಆಗ ಊರಾಗಿದ್ದ ಮಂದೀ
ದೇವಿ ಆ ದೇವಸ್ತಾನಿ ಪಟ್ಲದಾಗ
ದೇವಸ್ತಾನಿ
ಯಪ್ಪಾ ಈಕೇನೆ
ಬಂಡಿ ಗುಗ್ರಿ ಬಂಡಿ ಕೊಡಬು ತಿಂಬಾಕೆ
ಏಯಪ್ಪಾ ನಮ್ಮೂರೆಲ್ಲ ಹಾಳು ಮಾಡಿದಳಪ್ಪ
ದೇವಿಗಿರಿ ಪಟ್ಲ
ನೋಡಮ್ಮಾ ಹೆಣುಮಕ್ಕಳು ಗಣಮಕ್ಕಳು
ದೇವಿಗಿರಿ ಪಟ್ಲದವ್ರೆ
ಆಕಿ ತಿಂಬಾಕಲ್ಲ
ನೋಡ್ರಿ ಹೆಂಗ್ ಬಿದ್ದೈತಿ ರಾಕ್ಷಾಸಿ
ನೋಡ್ರಿ ಹೆಂಗ್ ಬಿದ್ದೈತಿ ಕರ್ಡಿ ಅಂಬೋತ್ತಿಗೆ
ಯಪ್ಪಾ ನಮ್ಮೂರಿಗೆ ಬೇಸು ಮಾಡಿದ್ಯಪ್ಪ
ಹುಟ್ಟಿದವರು ಹುಟ್ಟಿದಂಗ ಬೆಳಿತಾರ
ನಮ್ಮೂರು ಇಂತಾ ಊರು ಎಲ್ಲೂರು ಆತಾವ
ಇನ್ನ ಯೇಸ್ ಮಂದಿ ಹಡಿತಾರೋ
ಅದಕ್ಕೆ ಒಳ್ಳ್ಯೊರಂತ
ನಾನು ನಡಕಾಂತ ಬಂದೀನಮ್ಮಾ
ನಾನು ಕೆಟ್ಟದಂತ ನಾನ ಕೆಡಿಸಲಿಲ್ಲ
ಯಪ್ಪಾಒಳ್ಳೇದಂತ ಉದ್ದಾರ ಮಾಡಿ
ಊರೆಲ್ಲ ಕಲ್ತು ಮನಿಗೆರಡು ಸೇರು
ಇನ್ನವರತಾವಾಗಿ ಆಗ ಅಕ್ಕಿ ಬ್ಯಾಳೆ ತೆಗ್ದು

ನಿನ್ಗೆ ದೇವಸ್ತಾನಿ ಮಟದಾಗ
ದೇವ ಮಟದಾಗಪ್ಪಾ ನಿನ್ಗೆ ಲಗ್ನ ಮಾಡಿ ಕಳಿಸೇವಾ || ತಂದಾನ ||

ದೇವ ಮಟದಾಗ ತಾಳಿಕಟ್ಸಿ ಖಳಿಸ್ತಿವಿ
ಅಂತ ಆಗ ಈಶ್ವರ ಮಟ ಮುಂದೆ ಹಂದ್ರ ಹಾಕಿದ್ರು
ಹಂದ್ರ ಹಾಕಿ
ಆಗ ಬಣ್ಣರಗ್ಗ ಹಾಕಿ
ಈಗ ನಾಗೇಂದ್ರ ಹೊಟ್ಟಿದಾಗ ಹುಟ್ಟಿದಾಕಿ
ದೇವ ಮಟದಾಗ ದೇವ್ರು ಮಟದಾಗೇನೆ ಮದುವಿ
ಯಾರು ಗೊಲ್ರು ಹಾಲುಕೃಷ್ಣ ಗೊಲ್ರವಂದು

ಆಗ ವಂದೇ ಶ್ಯಾನುಭೋಗ ಬಂದ್ರೂ
ಬೆಳ್ಳಿ ತಟ್ಟಿದಾಗ ತಾಳಿ ಮುತ್ತುವಣ್ಣಾ
ಅರ್ಧಗಂಟೆ ತಾಳೀ ನೋಡಾಣ್ಣಾ
ಒಂದೇ ದವ್ಸ ಮದುವಿ || ತಂದಾನ ||

ಆಗ ಬಣ್ಣದ ರಗ್ಗ ಹಾಕಿದ್ರು
ಆಗ ಎದ್ದೇಳಮ್ಮಾ ದೇವಸ್ಥಾನಿ ದೇವ ಮಡದಾಗ
ಆಗ ಇನ್ನ ಎದ್ದು ಬಿಟ್ಳು
ಆಗ ಅರಿಷಿಣ ವಿಭೂತಿ ಗಂಧವಿಟ್ಳು
ಅಕ್ಕಿ ಹಾಕಿ ಶರಣು ಮಾಡಿ ಕುಂತ್ಳು
ಎದ್ದೇಳಪ್ಪಾ ಶರಬಂದ ಶರಣು
ಆಗ ಎದ್ದಾ
ಮೂಗುಮುತ್ತು ಹಾಲಕಡಗ ತಾಳಿ

ಆಗ ಇನ್ನುವಾಗಿ ನೋಡಮ್ಮಾ ಈಶ್ವರಂತ ತಾಳಿ ಕಟ್ಟ್ಯಾನಾ
ಯಮ್ಮಾ ದೇವಸ್ತಾನಿ ವಂದ್ಹಾನ ದೆವರ ಮಟದ ತಾಳ್ಯೆಮ್ಮಾ
ದೇವ್ರು ಗುಡ್ಯಾಗ ತಾಳಿ || ತಂದಾನ ||

ಆಗ ಮಟದಾಗ ಲಗ್ನ ಆಯ್ತು
ಮಠ ಸುತ್ತ ತಿರುವಣ ಮಾಡಿದ್ರು
ಆಗ ಇನ್ನ ಪ್ರದಕ್ಷಣೆ ಮಾಡಿಕ್ಯಂಡ್ರು
ಊಟ ಮಾಡುದ್ರು

ಆಗ ಬೇಗೆಲ್ಲ ನೋಡಣ್ಣಾ ಮದುವೇ ಆಗ್ಯಾತ || ತಂದಾನ ||

ಮದುವೆ ಆದ ಮ್ಯಾಲೆ
ಆವೊತ್ತು ಒಂದು ದಿನ ಇದ್ದ
ದೇವಿಗಿರಿ ಪಟ್ಣದಾಗ
ತಿರುಗ ದಿವ್ಸ ವಂದೇ ದಿನ ಮದುವೆ
ದೇವಿಗಿರಿ ಪಟ್ಣದಾಗ
ದೇವಸ್ತಾನಿ ಮಟದ ಮುಂದೆ
ಹೋತಿನೀ ದೇವಸ್ತಾನಿ
ಇಲ್ರೀ ನಾನು ಬರ್ತಿನಿ ನಡ್ರಿ
ಛೀ ಛೀ ಛೀ
ನಿನ್ನ ಕೂಟ ಬರಾಕ ನಿನ್ಗೆ ಸಾಧ್ಯವಿಲ್ಲ
ನಾನು ಊರಿಗೋಗಂಗಿಲ್ಲಾ
ತಾಯಿ ತಂದಿ ಜೀವ ಬಿಟ್ಟು ಜೀವಕ್ಕ
ಅವಷದ್ದ ಮೇಟೌಷಧ್ಗಿ ಹೋತಿನಿ ನಾನು
ಏಳು ಸಮುದ್ರದ ಆಕಡೆಗಿ ಬಕಾಸುರ್ನತಲ್ಲಿ
ಕೈಚೀಲದಾಗಿರೋ ಅವಷದ್ದ ತರಾಕೋತಿನಿ
ಸರ್ರೀ ಮತ್ತೆ ನನ್ನ ಕರಿಲಾರದಂಗ ಬಿಟ್ಟೋಗ ಬ್ಯಾಡ
ಛೀ ಛೀ ಛೀ
ಊರೆಲ್ಲ ಕಲ್ತು ದೇವ ಮಟದಾಗ ಲಗ್ನ ಮಾಡಿದ್ರೆ
ದೇವಸ್ತಾನ್ಗಿ ನಾನ್ಹೇಗ ಬಿಟ್ಟೋತಿನಿ
ಸರೆ ಹೋಗಿಬರ್ರೀ ಅಂತಾ
ಪಾದಕ ಶರಣ ಮಾಡಿದ್ಳು
ಹೋಗಿ ಬರತಿನಪ್ಪ ದೇವಿಗಿರ್ಯೋರೆ
ಆ ಹೆಣ್ಣು ಗಂಡು
ತಮ್ಮಾ ಕರ್ಕಂಡ್ಹೋಗಪ್ಪ ದೇವಸ್ತಾನಿಗಿ
ಇಲ್ರೀ ಮತ್ತೆ ಬಂದು ವಾಪ್ಪಸು ಹೋಗುವಾಗ
ಕರ್ಕಂಡು ಹೋತಿನಿ
ಮೇಟೌಷಧಿಗಿ ಹೋತಿನಿ
ಏಯಪ್ಪ ನೀನ್ಹೋದ ಮ್ಯಾಲೆ
ಬಂಡಿ ಗುಗ್ರಿ ಬಂಡಿ ಕೊಡುಬು
ಒಂದ ಮಣ್ಸೇನ್ನ ಕೇಳ್ತಾಳಪ್ಪೋ
ವೋಟು ಬೇಶ್ ಹೇಳ್ಹೋಗು
ಆಯಮ್ಮ ಹೆಣ ಮಗಳಿಗೆ
ಇಲ್ರೀ ಆಕಿಗೇನು ಅರಪಾವು ಅಕ್ಕಿ ಆದ್ರೆ ಸಾಕು
ಆಕೆ ಉಂಬಾಕಲ್ಲ
ಈ ಕರ್ದಿಗೆ ರಾಕ್ಷಸಿಗೆ ತಂದ್ಹಾಕಲಾರದ ಮಾಡಿ ಬಿಟ್ಟಾಳ
ಏನನ್ನಾಗ್ಲಿ ಬೇಶ್ ಹೇಳಪ್ಪೋ
ನೀನು ಯಾವ್ಹಾರಿ ಹಿಂಡ್ಕೊಂಡ ಹೋತಿ
ಅಂದ್ರೆ ಏಳು ಸಮುದ್ರದಾಚೆ
ಯಾವ ಪಟ್ಣ ಐತ್ಯೋ ಯಾಪಟ್ನ ಇಲ್ಲೋ
ಏಳು ಸಮುದ್ರಗ ಹೋಗೊ ದಾರಿಹಿಡ್ಕಂಡು ಹೋತೀನಿ
ತಮ್ಮಾ ನಾವ ಓಡ್ಯನ್ನ ಬರ್ತಿವಿ ಹಿಂದೆ
ಬಂಡಿ ಗುಗ್ರಿ ಕೇಳ್ಹೊತ್ತಿಗೆ ಓಡಿ ಬರ್ತಿವಿ ನಾವು
ಅಷ್ಟಾಗಲ್ರಿ ಅಂದ
ಆಗ ಕೈಚೀಲ ಹಿಡಕಂಡು ನಡ್ದ