ಆಗ ಅಬ್ಬರಿಸಿ ಹೆದರಿಕ್ಯಣ ಬಂದ್ರು
ಲೇಯ್ ನಿಮ್ಮಮ್ಮನ್ನಾಡ
ಬರ್ರೆಲೇ ನಿಮ್ಮಮ್ಮರಸನಾಡ
ಹೋತೈತಿ ಮೀನಂದ್ರು
ಹೇಯ್ ಬಾರಲು ಬಿಳಲೇ
ಮೀನ್‌ಮ್ಯಾಲೆ ಬಾರಲು ಬಿಳಲೆ ಅಂದ್ರು
ಆಗಿನ್ನವರ್ತಾವಾಗಿ ಬಲೆ ಅಬರಿಸಿಗ್ಯಂಡು ಬಂದ್ರು
ಬಲೆಮ್ಯಾಲೆ ಬಲೆ ವಗ್ದು ಬಿಟ್ರು
ವಗ್ದ ಹೊತ್ತಿಗೆ
ಆಗ ಏಳು ಬಲ್ಯಾಗ ಬಿದ್ದು ಬಿಡ್ತು ಪೆಟ್ಟಿಗೆ
ಹೇಯ್ ಕ್ವಾಣ್ದಪ್ಪ ಇರಲಲೆ ಮೀನು ಹೋಗಂಗಿಲ್ಲ
ಏಳು ಬಲ್ಯಾಗ ಹಾರಕಂಡು ಹೋತೈತ್ಯಾ ಅದು ಆಂತ
ಮೊಣಕಾಲಷ್ಟು ನೀರದಾಗ ಎಳ್ದರು
ಲೇಯ್ ಥಳಥಳ ಅಂತಾತೆಲೇ
ದೋಡ್ಡ ಮೀನು ಬಿದೈತೆಲೇ ಅಂದ್ರು
ಇನ್ನ ಮ್ಯಾಕೆಳ್ದ್ರು
ಲೇಯ್ ನಿಮ್ಮಮ್ಮರಸನ್ಹಾಡ ಮೀನಲ್ಲಲೇ
ಆಗ ದೊಡ್ಡು ಪೆಟ್ಟಿಗೇಲಿ ಸಂದೂಕು ಪಟ್ಟಿಗೆ ಬಿದೈತಿದರಾಗ
ಟ್ರಂಕು ಸ್ಟೀಲುಪೆಟ್ಟಿಗೆ
ಇದರಾಗ ಎಷ್ಟು ದೊಡ್ಡ ಸಾವುಕಾರ ಮನೆ
ಬಡುಕಂಡು ಬಂದೈತೋ ಗಂಗಮ್ಮಾ
ಮಕ್ಕಳು ಸತ್ತೋತಾರ
ಮೀನು ಹಿಡಿದೂ ಹಿಡಿದೂ ಹಾಳಾಗೋತಾರಂತ
ಪೆಟ್ಟಿಗಿ ಸಿಕ್ಕೇತ
ಇದರಾಗ ಬೆಳ್ಳಿ ಬಂಗಾರಿ ವಜ್ರ ಮಾಣಿಕ್ಯ ಎಷ್ಟೈತೋ
ಹೇಯ್ ಈವೊತ್ತಿಗೋಯ್ತಪ್ಪಾ ನಮ್ಮದರಿದ್ರ
ಹೇಯ್ ನನ್ನ ಆಪ್ಲಗುಡ್ಸಿಲಿ ಬೆಂಕಿಟ್ಟಬಿಡ್ತಿನಿ
ಲೇಯ್ ಬರೇ ಕೋಳಿತತ್ತೆ ಸೀಮೆಂಟು ಕೂಟ ಕೆಬ್ಬಿಣ ಕಡ್ಡಿ
ಉಕ್ಕ ಕಂಬಕೂಟ ಕಟ್ಟಿಸ್ತೀನಲೆ ಮನಿ
ಅವ್ರು ಪರಾಕ್ರ ಅಂಬಿಗುರು
ಮೀನ್ಹಿಡಿಯೋರು
ಅಂತ ಆವಾಗ ಇನ್ನಲೆ ತಮ್ಮಾ
ಇಲ್ಲೇ ಹಂಚಿಗ್ಯಾಂತಿದ್ರೆ ಕುರಿ ಕಾಯೋರು ಬರತಾರ
ಆಗ ಏ ನಮ್ಮೂರ ಗೌಡ್ರುದು ಅಂತಾರ
ಆಗ ಅದುರುಸ್ತಾರ ಅವರು ಇನ್ನ ವಡ್ಕಂಡ್ಹೋತಾರ
ಅವ್ರು ತಗಂಡ್ಹೋತಾರ
ಅಂಗಲ್ಲ ಹಳೇ ಬಾಯಿ ಕುಣೈತಿ
ಆ ಕಣ್ಯಾಗ
ಅಂಬ್ರೆಗಿಡ ಎಕ್ಕೆಗಿಡ ಬೆಳದಾವ
ಅದರಾಕ ವತ್ತ್ ಗಂಡ್ಹೋಗಾಣ
ತಗ್ಗನ್ಯಾಗ ಕುಣ್ಯಾಗ ಕಂತ್ಕೊಂಡು ಬೀಗ ಮುರದು
ಹಂಚಿಕ್ಯಂಡು ಹೋಗಾನಲೆ ಏಳುಮಂದಿ
ಏಳುಭಾಗ ಅಂದ್ರು
ಅಂದ್ರೆ ಹಂಗಾರೆ ವತ್ಕೋಣಾ ಅಂದ
ಹೇ ತಮ್ಮಾ ನಿನ್ಗೇ ಸಿಕ್ಕೈತಿ ಧನಲಕ್ಷ್ಮಿ
ನಿನ ಗುಣ ನೋಡಿ ಹಣಾ ಬಂದೈತಪಾ
ಈಗ ನಿನ್ಗೇ ತಲೆ ಮ್ಯಾಲೆ ಹೊರಿಸ್ತೀವಾಂದ್ರು
ಹೇಯ್ ಎಲ್ಲರಂಗ ನನಗೊಂದು
ತಲೇವಂದು ಭಾಗ ಕೊಡ್ತೀರಿ
ನನ್ಗೇನನ್ನ ಹೆಚ್ಚು ಕೊಡ್ತೀರಯಾ
ನನ್ನ ಗುಣ ನೋಡಿ ಹಣಾ ಬಂದ್ರೆ
ನನ್ಗೇನನ್ನಾ ಹಣಾ ಹೆಚ್ಚು ಕೊಡ್ತೀರಯಾ
ಹಂಗಲ್ಲ ನನ್ಗೆ ಒಂದೂವರೆ ಭಾಗ ಕೊಡ್ರಿ
ರೂಪಿಯಿ ಎಂಟಾಣೆ ಹೆಚ್ಚ ಕೊಡ್ರಿ
ಅಂಗಾದ್ರೆ ಹೊತ್ತಂಡು ಬರತೀನಿ
ತಮ್ಮಾ ಒಂದೂವರೆ ಭಾಗ ನಿನ್ಗೆ
ತೆಲಿಗೊಂದು ಭಾಗ ನಮ್ಗೆ
ಹಂಗಾಗ್ಲಪ್ಪಾ ಅಂತ ಅತ್ತಾಗ್ ಮೂವ್ವಾರು
ಇತ್ತಾಗ ಮೂವ್ವಾರು ಯ್ಯಾತ್ತಿ ತಲಿ ಮ್ಯಾಲಿಟ್ಟು ಬಿಟ್ರು
ವಲ್ಲೆ ಸಿಂಬೆ ಮಾಡಿಕ್ಯಂಡು ಇಟಗಂಡಾನ
ಇಬ್ರು ಹೊರಬೇಕಂದ್ರೆ ಸಾಮಾನ್ಯವಾ
ಮಣಸೇನ್ನ ಪೆಟ್ಟಿಗೆ
ಏನ್ ಗೋಣು ಅಂಗೇ ಕದೆ ಬಿದ್ದು ಬಿಟ್ಟು
ಹಲ್ಲಲ್ಲ ಅಂಗೆ ಕದೆಬಿದ್ದು ಬಿಟ್ಟು
ಏನು ಪಾದಯೆತ್ತಿ ಪಾದ ಇಡಬೇಕಂದ್ರೆ
ಮುಂದುಕ ಬರವಲ್ದು ದಾರಿ
ಆಗ ಕಿವಿಗೆ ಪೆಟ್ಟಿಗೆ ಎಷ್ಟಪಾ ವಂದೇ ಗೇಣು
ಈಕಿ ಎಲ್ಲಾ ಲೆಕ್ಕ ಮಾಡಿ ಕೊಡ್ತಿದ್ಳಪ್ಪಾ
ಆಯಿತಾರ ಆಯಿತಾರ ಅವ್ರಿಗೆ ಬಟುವಾಡಿ
ತಂದಿ ಎರ್ಡು ಸಾವಿರ ಮೂರುಸಾವಿರ ಕೊಟ್ರೆ
ನಿನಗೀಟು ನಿನಿಗೀಟು ಅಂತ ಕೊಟ್ಟುತಿದ್ರು
ಆವತ್ತು ಎಲ್ಲಾ ಹೆಸರು ಇವ್ರಿಗೆ ಗೊತ್ತಪಾ ತಿಳುವರಿಗೆ ಆಕಿಗೆ
ಆಕಿ ಕೂದುಲು ಬಿಟುಗಂಡು ಕುಂತಾಳಪಾ ಪೆಟಿಗ್ಯಾಗ
ಈತ ಕೈಚೀಲ ಚಂದ್ರಾಯುದ್ಧ ಹಿಡ್ಕಂಡು ಕುಂತುಗಂಡಾನ
ಆಕಿ ಹೇಳ್ದಂಗಲ್ಲಾ ಅವ್ರು ಹೆಸರು
ಈತ ಹೂಂ ಹೂಂ ಅಂತಾನಪಾ ಪೆಟ್ಟಿಗ್ಯಾಗ
ಈ ಪಟ್ಟಿಗಿ ವತ್ತಗಂಡವ್ನು ಬೇಸು ಕೇಳ್ತಾನ
ಏನ್ರೀ ಯರಂತಿಳಿದೀಯಿ
ಟಂಕಬೈನಾ ನರಸಬೈನಾ ಚಿಕ್ಕತಿರುಪತಿ
ನಾಗ ತಿರುಪತಿ ದೇವಿತಿರುಪತಿ
ನಮ್ಮನ್ಹೊತ್ತೊಗೊಂಡ್ಹೊಗೊನು
ಪೆಟ್ಟಿಗಿ ಹೋರೋನು
ಚಿಕ್ಕತಿರುಪತಿ ಅಂದ
ಬೇಸ್ ಕೇಳ್ದ

ಲೇಯ್ ಬೀಸ್ಹಾಕ್ತಿನಿ ಬೀಸ್ಹಾಕ್ತಿನಿ
ಇದರಾಗ ಬೆಳ್ಳಿಲ್ಲಾ ಬಂಗಾರಿಲ್ಲಾ ಏನಿಲ್ಲಾ ಇದರಾಗ
ದೊಡ್ಡ ದೆವ್ವುಗುಳು ಐದೆವಪ್ಪೋ
ಗಂಡುದೆವ್ವ ಹೂಂ ಅಂತದೆ
ಹೆಣ್ಣದೆವ್ವ ಹೆಸುರೇಳ್ತದ || ತಂದಾನ ||

ಲೇಯ್ ಪೆಟ್ಟಿಗಿ ಬಿಸ್ಹಾಕ್ತಿನಿ ಅಂದ
ಹಂಗಲ್ಲಪ್ಪಾ
ಹಣಾ ಸಿಕ್ಕಿದ ಮ್ಯಾಲೆ
ಈಗ ಇದು ಏನಂತೈತಿ ಧನಲಕ್ಷ್ಮಿ
ಹೂಂ ನನ್ಗೆ ಮಾಡ್ರೀ ಅಂತೈತಿ ಶಾಂತಿ ಮಾಡ್ಬೇಕು
ಹಣ ಸಿಕ್ಕಿದ ತಾಯಿಗೆ ಶಾಂತಿ ಮಾಡ್ಬೇಕು
ಏನ್ ಶಾಂತಿ ಮಾಡ್ತರಲೆ
ಏನಿಲ್ಲ ಬ್ಯಾಟೆಗೀಟೆ ಕಡಿಬೆಕು ಆ ತಾಯಿಗೆ
ಅಂತ ಯಪ್ಪಾ ಬಂತು ಬಾರಲೋ ಅಂತ
ಹಳೇ ಬಾಯಿ ಕುಣ್ಯಾಗಿಳ್ಸಿಕ್ಯಂಡ್ರು
ಏನ್ ಮಾಡ್ತೀರಲೆ ಸತ್ರೆ ಪಿಂಡಾ ಕೂಳಿಗ್ ಗತಿಲ್ಲಾ
ಏನ್ ಮಾಡ್ತೀರಿ ಆ ದೆವ್ವುಗಳಿಗೆ ಅಂದ
ಅಣ್ಣಾ ಇದರಾಗ ಗಂಡು ಹೆಣ್ಣು ಎರಡು ಅದ್ಯಾವಣ್ಣಾ
ಬೆಳ್ಳಿಲ್ಲ ಬಂಗಾರಿಲ್ಲಾ ಅಂದ
ಅಂಗಲ್ಲಾ ತಮ್ಮಾ
ಪೆಟ್ಟಿಗೆ ಒಳಗ ಐದರವರು
ಈಗ ಮೀನುಗಾರರು
ಏನು ಅಂತಾರ ತಾವು ಜೀವಕ್ಕೆ
ಚಿಕ್ಕವನು ತಮ್ಮಾಗಿ
ಯಣ್ಣಾ ಈಗ ಏನು ಪೂಜೆ ಮಾಡ್ತೀರಣ್ಣ
ನೀವು ತಂದು
ತಿಂಬಾಕೆ ಕೂಳಿಲ್ಲ
ಉಟ್ಟಾಕ ಬಟ್ಟಿ ಇಲ್ಲಾ
ತಮ್ಮಾ ನಮ್ಗ ದೇವ್ತಿ ಧನಲಕ್ಷ್ಮಿ ಬಂದು ಬಿಟ್ಟಾಳಪ್ಪಾ
ಹಣ ಸಿಕ್ಕೈತೆ
ಈಗ ಇನ್ನ ನಾವು ಬ್ಯಾಟಿ ತಂದು ಮಾಡಾನ
ಓಹೋ ಎಲ್ಲಿ ತಂದು ಮಾಡ್ತಿರಣ್ಣಾ
ನೋಡಪ್ಪಾ ಎಲ್ಲಾರು ಏಳುಮಂದಿ
ಅಣ್ಣ ತಮ್ಮರು ನಾವು
ಏಳು ಮಂದಿ ಹೆಂಡ್ರ ಕೊಳ್ಳಾಗಿರೋ
ತಾಳಿ ಹರಕಂಡು ಬರಾಣ
ತಾಳಿ ಮಾರಿ ಒಂದು ಬ್ಯಾಟಿ ತರಾನ
ಆಗ ಇನ್ನ ಪೂಜೆ ಮಾಡಾನ
ಧನಲಕ್ಷ್ಮಿ ಬಂದೈತಿ ನಮ್ಮ ಪಾಲಕ
ಬಡವರ್ನ ನೋಡಿ
ನೋಡಪ್ಪಾ ನನ್ಗೆ
ಆಗ ಒಂದುವರೆ ಭಾಗದಾಗ
ನಯಾ ಪೈಸಾ ವಲ್ಲೆ
ಆದ್ರಾಗ ಬೆಳ್ಳಿ ನಿಮ್ದೆ
ಹಣ ನಿಮ್ದೆ
ಗುಣ ನಿಮ್ದೆ
ಇದೋ ನನ್ನ ಹೆಣ್ತಿ ತಾಳಿ ಹರೀಬ್ಯಾಡ್ರೀ
ನಾನು ಬಲೇ ಕೊಡೋದಿಲ್ಲ
ಲಾಭ ಆದ್ರೆ ನಿಮ್ದೆ
ನಷ್ಟಾದ್ರೆ ನಿಮ್ದೆ
ಅದ್ರಾಗ ನನಗೆ ನಯಾಪೈಸಾ ಬ್ಯಾಡ
ಹಾಂಗಲ್ಲ ತಮ್ಮ
ಧನಲಕ್ಷ್ಮಿ ನಿನ್ನ ಗುಣ ನೋಡಿ
ಬಂದೈತಪ್ಪಾ ದೇವಿ
ಬಡವುರಿಗೆ ಸಿಗಬೇಕಂದ್ರೆ
ಸಾಮಾನ್ಯವ ಗಂಗದ ಒಳಗೆ
ಈ ಸಮುದ್ರದೊಳಗೆ
ಪೆಟಿಗೆ ಬರಬೇಕಂದ್ರೆ ಸಾಮಾನ್ಯವಾ
ತಮ್ಮಾ ನೋಡಿಕ್ಯಪ್ಪಾ ಕಳಕಾಬ್ಯಾಡ
ಇಲ್ಲಪ್ಪಾ ಒಲ್ಲೆ
ಅಂದ್ರೆ ಬಲೆ ಕೊಡಲಿಲ್ಲಾ
ಚಿಕ್ಕ ತಮ್ಮ ತಿರುಪತಿ
ಆರು ಬಲೆ ತಗಂಡ್ರು
ಏ ಅಣ್ಣೋರೆ
ನೀವು ಆರು ಮಂದಿ ಹೋಗಬ್ಯಾಡ್ರಿ
ಮೂವರು ಹೋಗ್ರಿ ಮೂವರು ಇರ್ರೀ ನನ್ನ ಕಾಯಾಕ
ಯಾಕ ತಮ್ಮಾ
ಪೆಟ್ಟಿಗ್ಯಾಗ್ಲಿದ್ದ ಎರ್ಡು ದೆವ್ವ ಬಂದು
ನನ್ನ ಬಾಯಿಗಿಟ್ಕಂಡ್ರೆ ನಾನೇನು ಮಾಡ್ಲಿ
ಅಷ್ಟು ಇನ್ನ ಎದೆ ಬಿದ್ಹೇನಪ್ಪಾ ತಮ್ಮಾ
ಸರಿಬಿಡು ಹೋತಿವಂತ
ಆಗ ಮೂವರು ನಿಂತಕಂಡ್ರು
ಮೂವರು ಬಂದ್ರು ಊರಿಗೆ
ಚಾವುಲರಾಜ ಪಟ್ಣಕ್ಕೆ ಬಂದು
ಈಗ ಅವ್ರು ಏನ್ಮಾದ್ರು
ಈಗ ಕುರಿ ಹಟ್ಟಿಗೆ ಬಂದ್ರು
ಲೇ ನಾವು ದ್ಯಾವ್ರು ಮಾಡಬೇಕು
ಅಂತ ಆಗ ಬಲೆ ಕೊಟ್ರು
ಎರ್ಡು ಬಲೆ ಕೊಟ್ಟು
ಒಂದು ಹೋತು ಮರಿ ತಗಂಡ್ರು
ಕುಂಬಾರು ಮನಿಗೆ ಬಂದು
ಒಂದು ಬಲೆ ಕೊಟ್ಟು
ಎರ್ಡು ಪಡಗ ತಗಂಡ್ರು
ಆಗ ಮುಚ್ಚಳ ಇನ್ನ ಗಡಿಗೆ ತಗಂಡ್ರು
ಇನ್ನು ಎರ್ಡು ಬಲೆ ಕೊಟ್ಟು
ಎಲ್ಲಿಗೆ ಬಂದ್ರು
ಆಗ ಹೆಂಡ ಕುಡಿಯೋತಲ್ಲಿ ಬಂದ್ರು
ಕುಡುಕುರಪ್ಪ ಅವ್ರು
ಮುಂಚ್ಯಾಗಿವ್ರ ಪೂಜೆ ಆದ್ಮೇಲೆ
ದೇವ್ರು ಪೂಜೆ
ಏ ಈಡಿಗರೇ
ನಮ್ಗೆ ಈಚಲ ಹೆಂಡ ಹಾಕ್ರಿ
ನಾವು ದೇವ್ರು ಮಾಡ್ತಿವಿ
ಏನ ದೇವ್ರು
ನಮ್ಮ ಮನೆದೇವ್ರು
ಹಣ ದೇವ್ರ ಮಾಡ್ತಿವಿ
ಲಕ್ಷ್ಮಿ ಪೂಜೆ ಮಾಡ್ತಿವಿ
ಏನಪ್ಪಾ ಕುಡ್ದು ದೇವ್ರು ಪೂಜೆ ಮಾಡ್ತೀರ್ಯಾ
ಹಾಂ ಮತ್ತ ನಮ್ಗೆ ಕುಡ್ದ್ರೇನೆ
ದೇವ್ರು ಹೊರಗ ಬರಾದು
ಸರಿ ಬಿಡಂತ ಬಲೆ ಒತ್ತಿದಿದ್ರು
ಆಗ ಈಚಲ ಹೆಂಡ ಕುಡುದ್ರು
ಆಗ ಏಳುಮಂದಿ ಹೆಂಡ್ರತಲ್ಲಿ ಬಂದ್ರು
ಲೇ ನಮ್ಗೆ ಹಣ ಸಿಕೈತೆ
ಈ ತಾಳಿ ನಯಾ ಪೈಸಾ ತಾಳಿ ಅಂತ
ಈತ ತಾಳಿ ಹರ್ದು ಕೊಡ್ರೀ ಅಂದ್ರು
ಅಯ್ಯಯ್ಯೋ ಕೆಳ್ಗ ಮ್ಯಾಕ್ಕೈದಿರಿ
ಗುಡ್ಡ ಇದ್ದಂಗ ಗಂಡ್ರು
ನೀವ್ ಕಟ್ಟಿದ ತಾಳಿ
ನೀವೆ ವಯ್ತಿರ್ಯಾ
ಈಗ ನೀವೇ ಹರಕಂಡು ಹೋಗ್ರಿ ಅಂದ್ರು
ಆಗ ಆರು ತಾಳಿ ಹರಕಂಡ್ರು
ಮಾರವಾಡಿ ಶೇಠಿ ಮನಿಗೆ ಬಂದ್ರು
ಏನಪ್ಪಾ ಏಟು ಕೊಡ್ಸೀಯ ಅಂದ್ರು
ಏ ಬರೀ ಟಂಕಪ್ಪ
ಇದಕ ಬಂಗಾರದ ನೀರು ಕುಡಿಸ್ಯಾರ ಅಂದ
ಈಗ ಮುವತ್ತು ರೂಪಾಯಿ ಕೊಡ್ತಿನಿ
ಬೇಕಾದ್ರೆ ಕೊಡ್ರಿ ಇಲ್ದಿದ್ರೆ ಇಲ್ಲ
ಅರೇ ಆರು ತಾಳಿ
ನಿಂತಲ್ಲೆ ವಯ್ದಿವಿ
ಇಪ್ಪತ್ತು ರೂಪಾಯಿಗೊಂದು ತಾಳಿ
ಏ ಹೋಗೋ ತಿಕ್ಕ
ಅಂಥ ಕಂತ್ರಿ ತಾಳಿಗಳು ತಗೊಂಡಿರಿ
ನಾನ ಕೊಟ್ಟಿಲ್ಲಪ ಅಂದ
ಯಪ್ಪ ಲಕ್ಷ್ಮಿ ಪೂಜೆ ನಿಂತಗಂಡೊತೈತಿ ಅಂತ
ತಾಳಿ ಕೊಟ್ಟು ರೊಕ್ಕ ತಗಂಡು ಬಂದ್ರು
ಅಂಗ್ಡಿ ಈರಶೆಟ್ಟಿ ಅಂಗ್ಡಿಗ ಬಂದ್ರು
ಅಕ್ಕಿ ಬ್ಯಾಳೆ ಎಲ್ಲ ಕಾಯಿ ಕರ್ಪುರ ತಗಂಡು
ತಗಂಡು ಹೋತು ಮರಿ ತಗಂಡ್ರು
ನಿಶದಮ್ಯಾಲೆ

ಲಕ್ಷ್ಮಿ ಪೂಜೆ ಮಾಡಾಕ
ದೇವರು ಒಂದು ಮಾಡಾಕ
ತೋಥಡಿ ಅವರು ಹೊಂಟು ಬರತಾರ
ದೇವ್ರು ಮಾಡಾಕ
ಪೆಟ್ಟಿಗೆ ತಲ್ಲಿಗೆ ಇನ್ನು ಬಂದಾರು        || ತಂದಾನ ||

ಹೊಳೆ ದಂಡಿಗೆ ಬಂದು
ಆಗ ಸಮುದ್ರದಾಗ ಸ್ನಾನ ಮಾಡಿಕ್ಕಂಡ್ರು
ತಣ್ಣೀರೋಳಗೆ ಸ್ನಾನ ಮಾಡಿಕೊಂಡು
ಆಗ ಜೀವದಲ್ಲಿ
ಈಗ ಇನ್ನ ಪಡಗದಾಗ
ಗುಂಡಾಳಾಗ ಏನು ಮಾಡಿದ್ರು
ಅಕ್ಕಿ ಬ್ಯಾಳಿ ಕಲೇಸಿ ಅನ್ನ ಮಾಡಿದ್ರು
ಅನ್ನ ಮಾಡಿ ಪೆಟ್ಟಿಗೆ ತೊಳ್ದ್ರು
ಅರಿಸಿಣ ಬಂಡಾರ ಕುಂಕುಮ ಹಚ್ಚಿದ್ರು
ಊದಿನ ಕಡ್ಡಿ ಹಚ್ಚಿ ಕಾಯಿ ಒಡೆದ್ರು
ಯಮ್ಮಾ ತಾಯಿ
ಆಗ ಹಣ ಸಿಕ್ಕಿದ ತಾಯಿ
ನೀನು ಮುಂದಕ್ಕ ಮೂರು ಗೇಣು ಬಂದ್ರೆ
ಆಗ ನಿನ್ಗ ಬ್ಯಾಟಿ ಕಡಿತಿವಿ ತಾಯಿ
ಹೋತ ಮರಿಗಿ ಮೈ ತೊಳಕಂಡು ಬಂದ್ರು
ಆಗ ನೀರದಾಗ ತೊಳ್ದ ಮ್ಯಾಲ
ಮೈ ಝಾಡ್ಸಲಾರದಂಗ ಇರತೈತ್ಯಾ
ಹೋತಮರಿ ಮೈ ಜಾಡಿಸಿ ಬಿಡ್ತು

s ವರವು ಕೊಡ್ತು ನಮ್ಮತಾಯಿ
ಹಣ ಗುಣ ನೋಡಿದ್ದೆ
ತೋಥಡಿ ನಮ್ಮ ಜೀವ ಬಂದಿವೆ
ಅವ್ರು ಇನ್ನ ನೋಡಣ್ಣಾ
ಆಗ ಗಂಡ್ರ ಕೋಡಲಿ ಹಿಡ್ದಾರ
ಅಂಬಿಗರು ಮೀನು ಹಿಡಿಯೋ ಅಂಬಿಗರು
ತೋಥಡಿ ಗರ್ರಗ್ನಂಗ ಕಡಿದಾರ     || ತಂದಾನ ||

ಕತ್ತ್ರಿಸಿಕೊಂಡು ಬಿತ್ತು
ಆಗ ಇನ್ನ ಏನು ಮಾಡಿದ್ರು
ತೊಗಲೆಲ್ಲಾ ಬಿಡಿಸಿಬಿಟ್ರು
ಆಗ ಇನ್ನ ಕೊಯ್ದು ಗಡಿಗ್ಯಾಗ ಹಾಕಿದ್ರು
ತಮ್ಮಾ ಅಡ್ಗಿ ಮಾಡೋರದಾಗ
ನೀನು ಹೆಸರಾಗಿ ಪಡ್ಡಿಯಪ್ಪ ಭೂಮಿಮ್ಯಾಲೆ
ಮದ್ವಿ ಆಗ್ಲಿ ದ್ಯಾವ್ರು ಮಾಡ್ಲಿ
ಈಗ ನೀನು ಅಡಿಗೆ ಮಾಡಪ್ಪಾ ತಮ್ಮಾ
ನೋಡಪ್ಪಾ ನನಗೆ ಉಂಬಾಕಿಟ್ರೆ
ನಾನು ಮಾಡ್ತಿನಿ
ನನ್ನ ಬಲೆ ಕೊಟ್ಟಿಲ್ಲ
ನನ್ನ ಹೆಣ್ತಿ ತಾಳಿ ಕೊಟ್ಟಿಲ್ಲ
ನೀವೇ ಹಂಚಿಕ್ಯಂತಿರಿ
ಹಣಗುಣ ನೀವೇ ತಿಂತಿರಿ
ನನಗೇನಾ ಕೊಡ್ತೀರ್ಯಾ
ನಯಾ ಪೈಸಾ
ಅನ್ನ ನೀಡಿದ್ರೆ ಅನ್ನ ಮಾಡ್ತಿನಿ
ಇಲ್ದಿದ್ರೆ ಇಲ್ಲ
ತಮ್ಮಾ ಮಾಡ್ತಿವಿ ಬಿಡಪ್ಪ ನಿನ್ಗೆ
ನಿನ್ನ ಬಿಟ್ಟು ನಾವು ಉಂತಿವ್ವಾ
ಎಲ್ಲಾರು ಉಂಬಾಣಪ್ಪಾ ಅಂದ
ಆಗ ಮೂರು ಸೇರು ಅಕ್ಕಿ
ಒಂದ ಒಲೆ ಮ್ಯಾಲೆ ಏರಿಸಿದ
ಆಗಿನ್ನ ಹೋತಮರಿ ಕೊಯ್ದುದ್ದು
ಒಂದು ಪಡಗನಾಗ್ಹಾಕಿ ಒಂದ ಒಲೆ ಮ್ಯಾಲಿಟ್ಟ
ಎರ್ಡು ಒಲೆ ಮುಂದೆ ಕುತ್ಗಂಡು
ಎಡಗೈಲಿ ಬಲಗೈಲಿ ಕಟ್ಟಿಗೆ ಚುಚ್ತಾನ ಅದರಾಗ
ಕೊತ ಕೊತ ಕುದಿವಾಗ
ಕುದ್ದೈತೋ ಕುದ್ದಿಲ್ಲೋ ಅಂತ

ಸೌಟೀಲೆ ಹಕ್ಯಂತಾನ
ಅವ್ನು ಒಲೆ ಮುಂದೆ ತಿಂತಾನ
ಅಣ್ಣೋರು ನನಗೆ ಇಡೋದಿಲ್ಲಪ್ಪಾ
ಈಗ್ಲೇ ಒಲೆ ಮುಂದೆ ಹೊಟ್ಟೆ ತುಂಬಸ್ಲೆ           || ತಂದಾನ ||

ಅಣ್ಣವ್ರು ನನ್ಗ ಉಂಬಾಕಿಡಾದಿಲ್ಲ
ಈಗ್ಲೇ ಒಲೆ ಮುಂದೆ
ಇನ್ನ ಹಸೆ ಪಸೆದು
ಹೊಟ್ಟೆ ತುಂಬಿಸ್ಕೋಬೇಕು ಅಂತ
ಸೌಟಿಲಿ ಹಾಕ್ಯಂಡ
ಹಿರೇ ಅಣ್ಣ ನೋಡಿದ
ಲೇ ದೇವ್ರು ಪೂಜೆ ಇಲ್ದಂಗ
ಮಿಂಡ್ರ ಪೂಜೆ ಮುಂಚ್ಯಾಗ ಆಯ್ತು
ಏನಪ್ಪಾ ಹಾಂಗ ತಿಂತಿ
ಇಲ್ಲಣ್ಣಾ ಕುದ್ದೈತೋ
ಕುದ್ದಿಲ್ಲಂತ ನೋಡ್ತಿನಿ

ಅಣ್ಣಾ ಇನ್ನು ಇಷ್ಟು ಕುದೀಬೇಕು
ಅಣ್ಣಾ ಉಪ್ಪು ಖಾರ ಕಮ್ಮೈತ್ಯೋ
ಇನ್ನೂಟು ಖಾರವಾಕ್ಯಾನ
ಇನ್ನುಟು ಉಪ್ಪು ಹಾಕ್ಯಾನ  || ತಂದಾನ ||

ಮತ್ತೇ ಸವುಟು ಹಾಕ್ಯಂಡ
ಏನ್ತಮ್ಮ
ನೋಡ್ತೀನಿ ಶಾಂಪೂಲ್ ನೋಡ್ತೀನಿ
ಆಗ ಉಪ್ಪು ಖಾರ
ಎಲ್ಲ ಸರೀಗೆ ತುಂಬಿಕೆಬೇಕಲ್ಲ
ನಿಮ್ಗೆ ಶಾಂತಿ ಆಗಾಕ
ಚಂದ ಇದ್ರೆ ಬಾಯಿಗೆ ಕುಚಿಕಂಡ್ರೆ
ಮೈಗೆ ಶಾಂತಿ
ಸರಿಬಿಡು ತಮ್ಮ ಅಂದ
ಹಸೇದು ಪಸೇದು ಹೊಟ್ಟಿಗೆ ಹಾಕಿದ
ಏನಪ್ಪಾ ಅಡಿಗೆ ಏನು ಮಾಡಿನಿ
ಈಗ ನಮ್ಗೆ ಉಂಬಾಕಿಡ್ರಿ
ಎಲ್ಲಾರುಂಬಾನ
ನಾನು ಎರ್ಡು ಹೊಲ ಪಟ್ಟು ಓಡಿ ಹೋಗ್ತೀನೀ
ಓಡ್ಹೋಗಿ ದೊಡ್ಡ ಬೇನ ಗಿಡ ಏರ್ತಿನಿ
ಈಗ ನೀವು ಒಳ್ಳಾಡಿ ಒಳ್ಳಾಡಿ ಶರಣು ಮಾಡ್ರಿ
ಪೆಟ್ಟಿಗೆ ಮುಂದೆ
ಪೆಟ್ಟಿಗೆ ಮುರ್ದೇ ಬಿಡ್ರಿ
ನಿಮ್ಗೆ ಬೆಳ್ಳಿ ಬಂಗಾರ
ಹಣ ಗುಣ ಎಲ್ಲ ಹಂಚಿಗ್ಯರ್ರೀ ಅಂದ
ಎದ್ಕ ತಮ್ಮಾ ಅಷ್ಟು ಹೆದರಿಕೆ
ಯಪ್ಪೋ ನನ್ಗೆ ಕೈಕಾಲು ನಡುಕ್ತಾವ
ಅದ್ರಾಗ ಏನಿಲ್ಲ
ಹೆಣ್ಣುಗಂಡು ದೆವ್ವ ಐತೆ
ಗಂಡು ದೆವ್ವ ಹೂಂ ಅಂತೈತೆ
ಹೆಣ ದೆವ್ವ ಹೆಸರೇಳೈತೆ
ಹಂಗಲ್ಲ ತಮ್ಮ
ನನಗೇನನ್ನ ಪೂಜೆ ಮಾಡ್ರಿ
ರಕ್ತ ಅಂತ ಇನ್ನ ಬ್ಯಾಟಿ ಕಡಿರಂತ
ಅದ್ಕ ಹೇಳೈತಿ
ಇವಾಗ ಶಾಂತಿ ಆಗೈತಪ್ಪಾ
ಸಪ್ಳ ಇಲ್ಲದಾಂಗೈತೆ ನೋಡು ಪೆಟ್ಟಗ್ಯಾಗ
ಏನನ್ನಾಗ್ಲಪ್ಪ ಉಂಬಾಕಿಡ್ರಿ
ಇಲ್ಲ ತಮ್ಮಾ
ಒಳ್ಳ್ಯಾಡಿ ಒಳ್ಳ್ಯಾಡಿ ಶರಣು ಮಾಡಿ
ಬೆಳ್ಳಿ ಬಂಗಾರ ಹಂಚಿಗ್ಯಂಡ ಮ್ಯಾಲೆ
ಏಳು ಮಂದಿ ಊಟಾ ಮಾಡಿ ಹೋಗಾನ
ಇಲ್ಲಪ್ಪಾ ನನ್ಗೆ ಉಂಬಾಕಿಡಾದಿಲ್ಲವಾ
ಇಡಾದಿಲ್ಲ
ದೇವ್ರು ಪೂಜೆ ಆಗಬೇಕಲ್ಲ ಮುಂಚ್ಯಾಗ
ಸರಿ ನೀವೇನನ್ನ ಊಟ ಮಾಡ್ರಿ ಅಂತ
ಬಲೆ ಬಗಲಾಗಿಟ್ಕಂಡ
ಏರ್ಡು ಹೊಲದೋಟ ಬಂದ
ಬೇವಿನ ಗಿಡ ಏರಿದ
ಇವ್ರು ಏನು ಮಾಡಿದ್ರು
ತಣ್ಣೀರಾಗ ಮತ್ತೇ
ಮುಣಿಗಿ ಬಂದ್ರು
ಆರು ಮಂದಿ ಅಣ್ಣೋರು
ಎಡೆ ಹಾಕಿದ್ರು
ಬ್ಯಾಟೆ ಕೊಯ್ದಿದ್ದು
ಎಡೆ ಹಾಕಿ ಒಳ್ಳ್ಯಾಡಿ ಬಳ್ಳ್ಯಾಡಿ ಶರಣು ಮಾಡಿದ್ರು
ಯಮ್ಮಾ ಗಂಗಾದೇವಿ
ಬಡವುರ್ನ ನೋಡಿ
ಗುಣ ನೋಡಿ
ಹಣ ಬಂದೀಯಿ ತಾಯಿ
ನಮ್ಮ ಮನೀಗೆ ಬಾರೆ ದೇವಿ
ನಮ್ಮ ಮನ್ಯಾಗ ಕುಂತಗಳ್ಳೆ ತಾಯಿ
ಅಂತ ಶರಣು ಮಾಡಿ
ಆಗ ಕೆಳಗೊಂದು ಕೊಲ್ಲು
ಮ್ಯಾಲೊಂದು ಕಲ್ಲಿಟ್ಟು
ಬೀಗ ಮುರ್ದು ಬಿಟ್ಟು
ಆಗ ಎಡಗೈಲಿ ಹಿಂಗ ತೆರೆದು ಬಿಟ್ರು

ಕಪ್ಪಳಿಸಿ ಹಾರ್ಯಾರ
ಏಯಪೋ ದೆವ್ವಗಳು ಆದಾವ ಇದ್ರಲೇ
ಅಣ್ಣಾ ನೀನು ಓಡು ನಾನು ಓಡು
ಅಣ್ಣ ದಪ್ನಾಂಗ ಬೀಳ್ತಾರ
ಮೊಣಕಾಲು ಚಕಚಕ
ಹಂಗೆ ಬಾರ್ಲ ಬೀಳತಾರ
ಹಲ್ಲೆಲ್ಲ ಝಳಝಳ
ನಿಂದ್ರಾಲೆ ಟಂಕ ಬೈಯಿನಾ
ಅಂಬಿಗ್ರಾಲೆ ನಿಂದ್ರಲೆ
ಚಿಕ್ಕ ತಿರುಪತಿ ನಾಗ ತಿರುಪತಿ
ಇದ್ದೂರು ದೆವುಗಳವೇ
ಬೇವೂರು ದೆವ್ವುಗಳಲ್ಲಾ
ಹೆಸರಿಟ್ಟು ಕರೀತಾವ
ಆಯ್ತು ನಾವಾಗಿ ಉಳ್ಯೋದಿಲ್ಲಾ      || ತಂದಾನ ||