ಏನು ಯುದ್ಧ ಮಾಡ್ತಿ
ಇಲ್ರೀ ನಾನು ಯುದ್ಧ ಮಾಡೋ ತನಕ ಬಿಡೋದಿಲ್ಲ
ಅಂದೇನು ಯುದ್ಧವು
ನನ್ನನ್ನು ಓಡಿಸಿ ನೀನು ಮದ್ದು ಒಯ್ಯಿ
ನಿನ್ನನ್ನು ಓಡಿಸಿ ನಾನು ಮದ್ದು ಒಯ್ತೀನಿ
ಅಂತ ಯುದ್ಧ ಮಾಡ್ದಿವಿ
ಕೇಳವ್ವೆ ಯುದ್ಧ ಮಾಡಂತ ಹೇಳ್ತಿಯಾ
ಸರಿಬಿಡು ಅಂತ

ಅಲ್ಲಿಗೆ ಬರುತೇನಿ ಅಂದ
ಇಲ್ಲಿಗೆ ಬರುತೇನಿ ಅಂದ
ಅರವತ್ತು ಆಗಿ ನೋಡು ಅಯ್ಯಗಳು ಒಗ್ದ        || ತಂದಾನ ||

ಆರವತ್ತಾರು ಬಾಣ ಹಾಕಿದ
ಬಾಣಬಾಣಕ್ಕೆ ಬಂದು ಬಿಡ್ತು
ನನ್ಮ್ಯಾಲೆ ಬಿದ್ದು ಸಾಯ್ತಿನಂತ
ಮ್ಯಾಕ ನೋಡ್ತಾಳ

ಆಹಾ ನೋಡಣ್ಣಾ
ಮೂರ್ಛೆ ಬಾಣ ಬಿಟ್ಟಾನೋ
ಮೂರ್ಛೆ ಹೋಗಿ ನಿಂತಾಳ
ಹಿಡಿದು ಹಿಡಿದು ಕೆಳಗ್ಹಾಕಿದರೋ
ಒಂದು ಬಾಣ ತಟ್ಲಾರ್ದ ಹಿಡಿದಿಡಿದು ತೆಳ್ಗ ಹಾಕ್ಯಾರ     || ತಂದಾನ ||

ತಾತ ಹೇಳಿದಂಗ ಕೇಳಿಕ್ಕಂತ ಬರಬೇಕಂತ
ತಾತ ಕೊಟ್ಟಿದ ಆಧಾರ ಉಗ್ಗಿ ಬಟ್ಟ
ಹನ್ನೆರಡು ಕೈದಾಗ
ಎಲ್ಲ ಉಚ್ಚಿ ಬಿದ್ದು
ಎರ್ಡ ಕೈ ಉಳಕಂಡುವು
ಏನ್ರೀ ನಿನ್ನ ಪಾದಕ ಶರಣು
ಈಗ ಮದ್ದಿದ್ರೆ ನಿದ್ಹೆ ಅಂತ
ಆಗ ಇನ್ನ ತಾತ ಹೇಳಿದಂಗ ಎಲ್ಲ
ಕೇಳಿಕ್ಯಂಡು ಬರಬೇಕಲ್ಲ
ಕೇಳೋನ ಹಂಗಾದ್ರೆ ನಿನ್ಹಿಂದೆ ಬರ್ತಾಳ
ಕರಕೊಂಡು ಹೋಗಂತ
ಆಗ ತಾ ಬರ್ತೀನಿ ಅಂಬೋತ್ತಿಗೆ
ಹಾಂಗಲ್ಲ ನಾನು ಮದ್ದು ಗೆದ್ದಿನಿ
ನೀನು ನನಗೆ ಬೇಕಿಲ್ಲ
ಇಲ್ರೀ ಬೇಕಿಲ್ಲದ್ರೆ ಹ್ಯಾಂಗ
ಇಲ್ಲ ನೀನು ನನಗೆ ಬೇಕಿಲ್ಲ
ಅಂಬೋತ್ತೀಗೆ
ಇಲ್ರೀ ಮದ್ದಿದ್ರೆ ನಿದ್ದೆ
ಈಗ ನನ್ಹಿಂದೆ ಬರಬೇಕಂದ್ರೆ
ಹಗಲೂ ರಾತ್ರಿ ನನ್ನೂರಿಗೆ ದಾರಿ ನಡೆಸಬೇಕಾ ನಾ
ಈಗ ನಾನು ನೀರು ಕೇಳಂಗಿಲ್ಲ
ಅನ್ನ ಉಂಬಂಗಿಲ್ಲ
ಈಗ ನೀನು ಬೇಸ್ ಹೊರಸು
ಮ್ಯಾಲೆ ಸುಖದಲ್ಲಿ ನಿದ್ದೆ ಮಾಡಿದಾಕೆ
ಈಗ ಬಜ್ಜೆ ಮ್ಯಾಲೆ ಬಜ್ಜೆ
ತೊಗಲು ಮ್ಯಾಲೆ ತೊಗಲು ಬಿದ್ದೈತೆ
ನನ್ಹಿಂದೆ ಬರಬೇಕಂದ್ರೆ
ನಿನ್ನ ಹೋಟ್ಯಲ್ಲ ಕರಗಿ ಹೋಗಬೇಕು
ಎದ್ಯಾಗ ಎಲುಬು ಕಾಣಬೇಕು
ಊರಿಗೆ ಹೋಗೋತನಕ ನೀರು ಕೇಳಬಾರದು
ಸ್ವಾಮಿ ನಿಮ್ಮ ಗಣ್ಮಕ್ಕಳಿಗೆನ್ನ
ನಾನು ಹೆಚ್ಚು ಬಂದೇನೆನು ಸ್ವಾಮಿ
ನೀನು ಎಲ್ಲಿ ಊಟ ಮಾಡ್ತಿಯೋ
ಅಲ್ಲೆ ಊಟ ಮಾಡ್ತಿನಿ
ನೀನು ಎಲ್ಲಿ ನೀರು ಕುಡಿತಿಯೋ
ಅಲ್ಲೇ ನೀರು ಕುಡಿತಿನಿ ಸ್ವಾಮಿ
ನಿನ್ನಿಷ್ಟ ಬಾ ಅಂಬೋದಿಲ್ಲ
ಹೋಗಾಂಬೋದಿಲ್ಲ
ಇಲ್ರೀ ನಾನೊಂದು ಮಾತು ಕೇಳ್ತಿನ್ರೀ ಅಂದ್ಳು
ಏನು ಕೇಳ್ತಿ ಅಂದ
ಏನಿಲ್ರೀ ನಾನು ಹಿಂದೆ ಬರ್ತಿರ್ತೀನಿ
ನೀನು ಕೈಚೀಲದಾಗ ಗಾಜಿನ ಬುಡ್ಡೆ
ಇಟ್ಕಂಡು ನೀನು ಹೋತಿ
ನೋಡೋರು ದಾರ್ಯಾಗ ಬಂದ್ರೆ
ಲೇ ಯಾವಳೋ ಹೆಣ್ಮಗಳು
ನೀಟ ಹೆಣ್ಮಗಳ ಕರಕಂಡ್ಹೋತಿ ಅಂತ
ನಾನು ಬರೋವಳಗೆ
ಎರಡೇಟು ಬಡಕಂತಾರ
ನೋಡ್ರೀ ಕೈ ಚೀಲ ನನಗೆ ಕೊಡ್ರಿ
ಆಗ ನೀವು ಮುಂದೆ ನಡ್ರೀ
ಆಗ ನಾನು ಬರೇ ಕೈಲಿ
ದಾರಿ ನಡ್ಯಾಕ ಬರಾದಿಲ್ರಿ ಅಂತ ಕೆಳ್ದುಳು
ಇವ್ರ್ನ ಕೈಚೀಲ ನನಗೆ ಕೊಟ್ರೆ
ಇವ್ರಪ್ಪಗೇ ನಾಮ ಹಚ್ಚಿ
ನಾನು ಹಿಂದಕ ಓಡ್ಹೋತೀನಿ ಅಂತ ಆಕೆ
ಆಗ ಇನ್ನ ಇವ್ನು ಹೆಣ್ಮಕ್ಕಳೀಗೆ ಕೈಚೀಲ ಕೊಡ್ಬಾರ್ದು
ಹೆಣ್ಮಕ್ಳಿಗೆ ದರ್ಬಾರು ಕೊಡಬಾರ್ದಂತೆ
ಈ ಗೊಲ್ರ ಹುಡುಗ
ಆಗ ಉದ್ದನಾಮ ಇಡೋನಪ್ಪ
ಅಡ್ಡಾನಾಮ ಹಚ್ಚಾಕ ಹೋತಾಳ ಈಕೆ
ಏನ್ರೀ ಕೈಚೀಲ ಕೊಡು
ನಾನು ಹ್ಯಾಂಗ ಬರೇಕೈಲಿ ಬರ್ಲಿ ಅಂತ ಕೇಳಿದ್ಳು
ನೋಡವ್ವೆ ಈ ಭೂಮಿಮ್ಯಾಲೆ
ಹೆಂಗಸರಿಗೆ ದರ್ಬಾರು ಕೊಡ್ತಾರ
ನಾವು ಗೊಲ್ರು ಕೊಡಂಗಿಲ್ಲ
ಗಣ್ಮಕ್ಕಳಿಗೇನು ಚಂದ
ಕೈಚೀಲ ಚಂದ
ಹೆಣ್ಮಕ್ಕಳಿಗೆ ಏನು ಚಂದ
ತಲೆ ಮ್ಯಾಲೆ ಗಂಟು ಚಂದ
ಗಂಡಸರು ಹಿಡ್ಯೋ ಕೈ ಚೀಲ
ಹೆಂಗಸರಿಗೆ ಕೊಟ್ರೆ
ನಾವೇ ದರ್ಬಾರು ಕೊಟ್ಟಂಗ ಹೆಂಗಸರಿಗೆ
ಮುಂದಿರೋ ಗಣ್ಮಗ್ನ ನೋಡೋದಿಲ್ಲ
ಬಗಲಾಗಿದ್ದ ಗಣ್ಮಗ್ನ ನೋಡೋದಿಲ್ಲ
ಬಗಲಾಗಿದ್ದ ಗಣ್ಮಗನ ನೋಡೋದಿಲ್ಲ
ಕಾಲು ತುಳಕೊಂತ ಹೋತ್ರಿ
ಕೈ ತಟ್ಟಿಕ್ಯಾಂತ ಹೋತಿರಿ
ನಾವು ಹ್ಯಾಂಗ ಕೊಡೊದಿಲ್ಲ
ಈಗ ಬೇಕಿದ್ರೆ ಬರಬಹುದು
ಬೇಕಿಲ್ಲದಿದ್ರೆ ಇಲ್ಲ
ಇಲ್ರೀ ಬರೇ ಕೈಲಿ ಹ್ಯಾಂಗ ನಡಿಬೇಕು
ನೀನು ಬರೇ ಕೈಲಿ ನಡೆಯಾಕ ಬರೋದಿಲ್ಲಲ್ಲಾ
ನನ್ನ ಶಲ್ಯೇವು ಐತಿ ಮಣ್ಣು ಹಾಕಿ ಗಂಟು ಕಟ್ತಿನಿ
ತೆಲೆ ಮ್ಯಾಲೆ ಹೊರಿಸ್ತಿನಿ
ನನ್ನ ಮನೆ ಮುಂದೆ ತಂದ್ಹಾಕು
ಮಳೆಕಾಲ ಗಟ್ಟಿ ಆಗುತೈತಿ ಓಡ್ಯಾಡಕ ಅಂದ
ಇಲ್ರೀ ಮನಿಬಿಟ್ಟು
ನನ್ನ ಕೈಯಾಗಿರೋವೆಲ್ಲ ಕಳ್ಕಂಡು
ನನ್ನ ಜೀವದ ಮದ್ದು ಕೊಟ್ಟು
ನನ್ನ ಜೀವ ನಿನ್ನ ಹಿಂದೆ ಬರ್ತೈತಿ
ಮತ್ತೆ ನಿನ್ನ ಗಂಟು ಹೋರಬೆಕಾ ನಾಣು
ಕೇಳವ್ವೆ ನಾನು ಗಂಟು ಹೊತ್ತುಗಂಡು
ಬಾ ಅಂತ ಹೇಳಿಲ್ಲ
ಈಗ ನಿನಿಷ್ಟ
ಬಾರಾದಿದ್ರೆ ಬರಬಹುದು ಇಲ್ದಿದ್ರೆ ಇಲ್ಲ
ನಾನು ಕೈ ಚೀಲ ಕೊಡೋದಿಲ್ಲ
ನನ್ಗ ಕೈಚೀಲ ಇದ್ರೇನೆ ದಾರಿ ನಡ್ಯಾಕ ಬರಾದು
ಬರೇ ಕೈಲೆ ನನ್ಗ ನಡ್ಯಾಕ ಬರಾದಲ್ಲ

ಬೇಕಿದ್ರ ಬರಬಹುದು ಸಾಕಾದ್ರೆ ಹೋಗಬಹುದು
ನಮಪ್ಪ ಸಾಯ್ತಾನ ನಾನು ಹೋಗ್ತೀನಿ ಹೋಗಲೇ
ಹೋಗಿ ಬಿಡ್ತಿನಿ ನಾನು        || ತಂದಾನ ||

ಏದಿನಗಂದಿನ ಬಿಟ್ಟು ಮುಂದೆ ಹೋತಾನಪ್ಪ
ಹೊಲಪೆಟ್ಟು ಮುಂದೆ ಆ ಹುಡುಗ
ಹೊಲಪೆಟ್ಟು ಹಿಂದೆ ಆಕಿ
ಬಕಾಸುರ ಮಹಿರಾಮ ಬಂದ
ಯಾರು ತಂದೆ ಅಣ್ಣ ಬಂದ
ಮಗಳಿಲ್ಲೆ ಮಾಳಿಗೆ ಮ್ಯಾಲೆ
ನಿದ್ದೆ ಮಾಡಿ ಹೋತಿದ್ರು
ಸಾವಿರ ಲಕ್ಷ ಮೃಗವು ಕಡ್ದಾರ
ನಾತ ಹಿಡಕಂಡು ಬಂದ್ರು
ಏನಮ್ಮ ಮಗಳಾ
ಆಗ ಅಂಗ್ಹೋತಿದಿಯಾ ಅಂತ
ಬಕಾಸುರ, ಮಹಿರಾಮ ಅಣ್ಣ ಮಾತಾಡಿದ್ರು
ಅಣ್ಣ ಬಂದೆ ಬಕಾಸುರ
ಬಂದೆಪ್ಪಾ ತಂದೆ ಮಹಿರಾಮ
ಏನಮ್ಮ ಮಗಳಾ
ಇಲ್ಲಿ ಮನಿ ಬಿಟ್ಟು
ಎಲ್ಲ ಸಾವಿರ ಲಕ್ಷ ಮೃಗವೆಲ್ಲ ಕಡ್ದು ಹೋತಾನೆ
ಆಗೋ ಅಲ್ಲಿಗೊಲ್ಲರವನು ಹೋತಾನ ಮಾಯಿ ಕೃಷ್ಣ
ನನ್ನ ತಲೆ ಆಸೇಲಿ ಗಾಜಿನ ಬುಡ್ದೆ ಮದ್ದು ಒಯಿತಾನ
ಆಗ ಕೊಡುವಲ್ಲ ಅವನೇನ
ಅವನೆ

ಲೇ ಬಾಯಿಲಿ ಗುದ್ದಿ ಬಿಟ್ಟೇವ
ಮದ್ದು ಒಯ್ಯೋ ಕಳ್ಳರವ್ನೆ
ನಿಂದ್ರಲೇ ನನ ಮಗನೆ      || ತಂದಾನ ||

ಅಂತ ಬಕಾಸುರ ಬರುತಾನ
ನೋಡಿದ ಹುಡುಗ ಹಿಂದಕ ತಿರುಗಿ
ಲೇ ಬಕಾಸುರ

ಬಕ್ಕೆ ಬಿದ್ದಂಗ ತಿವುದೇನು
ಯಾರಂತ ತಿಳಿದೀಯೋ
ಮೂರು ಲೋಕ ಕೃಷ್ಣಾಲೇ
ನಾನು ಹಾಲು ಗೊಲ್ರ ಗೊಲ್ಲರವ್ನು
s ಪಟಪಟ ರೆಕ್ಕೆ ಬಡಿವಾಗ
ಬಕಾಸುರನ ರೆಕ್ಕೆ
ಭಲ್ಲೆವು ತಗಂಡ ಹೊಟ್ಟಿಗೆ ತಿವಿದಾನ
ಯಮ್ಮಾ ಬಕಾಸುರಗ ಬಕ್ಕೆ ಬಿತತಾ
ಅಬ್ಬಾ ಸತ್ತೇನಂದಾನೆ       || ತಂದಾನ ||

ಬಾರ್ಲು ಬಿದ್ದೂ ಜೀವ ಬಿಟ್ಟ
ಏದಿನಗಂದಿ ಅಣ್ಣ ಬಕಾಸುರ
ಬಕ್ಕೆ ಬಿದ್ದಂಗ ತಿವುದು ಬಿಟ್ಟ
ಆಗಿನ್ನ ಅಮ್ಮಾ ಅಂತ ಜೀವ ಬಿಟ್ಟ
ಮಹಿರಾಮ ತಂದೆ ನೋಡಿದಾ
ಅಬಾಬಾ ನನ್ನ ಮಗನ್ನ ಬಕ್ಕೆ ಬಿದಂಗ
ತಿವುದು ಬಟ್ನೇ

ಲೇ ನಿನ್ನ ನಾಣು ಬಿಡೋದಿಲ್ಲ
ಗೊಲ್ಲರ ಕೃಷ್ಣದವನಾಲೇ
ಹೇ ಬಾರಲೇ ಮಹಿರಾಮ
ನಿನ್ನ ಮೈ ಹೊಡೇ ಬಡಿದೇನು          || ತಂದಾನ ||

ಮಹರಾಮ ನೋಡಿದ
ಅಬಾ ನನ ಮಗನ ಕೊಲ್ಲಿ ಬಿಟ್ಟ
ಅಂತ ಮ್ಯಾಕ ಬರತಾನ
ಏs ನಿನ್ನ ಕಡ್ದು ತುಂಡು ಮಾಡ್ತಿನಿ
ಏ ಯಾರಂತ ತಿಳ್ದಿ
ನಿನ ಮೈ ಹೊಡಿಬಡಿತಿನಿ
ನೋಡೋಣಂತ

ಮ್ಯಾಕ ಎಗ್ರಿ ಬಿಟ್ಟಾನ
ಮುರು ದಡೆ ಚಂದ್ರಾಯುಧ
ಗದ್ಗದ್ಗದ್ಗದ್ತಿರುಗಿಸ್ಯಾನ
ಗರಗ್ ನಂಗೆ ಕಡಿದಾನ
ಎರ್ಡು ತುಂಡು ಬಿದ್ದಾವ     || ತಂದಾನ ||

ಎರ್ಡು ತುಂಡು ಕಲತುಗಂಡು
ಮತ್ತೆ ಇನ್ನ ಎದ್ದಾ
ನೋಡಿದ ಹುಡುಗ
ಎರ್ಡು ತುಂಡು ಕಡಿದ್ರೂನು
ಅವೆರಡೂ ಕಲಿತುಗಂಡು ಮ್ಯಾಕ ಎದ್ದು ಬಿಟ್ನೆ
ಅಲೆಲೆ ಇವನೇನಂದಿದ್ದ
ನನ್ನ ಹೆಸರು ಮಹಿರಾಮ ಅಂದಿದ್ದ
ಅಲೆಲೆ ಇವ್ನು ಜೀವ ಎಲ್ಲೈತಂದ್ರೆ
ಆಗ ಬೆನ್ನದಾಗ
ಇವ್ನ ಬೆಳ್ಳಿ ತಾಯಿತ ಐತಿ
ಈ ತಾಯಿತ ಎಗ್ಗರಿಸಿ ಬಿಟ್ರೆ
ಇವ್ನು ಸಾಯಿತಾನ
ಇಲ್ದಿದ್ರಾ ಸಾಯೋದಿಲ್ಲ ಅಂತ

ಮೂರು ದಡೆ ಚಂದ್ರಾಯುಧ
ಮಗನ ಕೈಲಿ ಹಿಡಿದಾನ
ಬೀಸಿ ಬೆನ್ನಿಗ್ಯಾಗಿ ಹೊಡೆದಾನ
ಬೆನ್ನು ಪಠ ಅಂತ ಒಡೆದೈತೋ
ಬೆಳ್ಳಿ ತಾಯಿತ ಚಟ್ ಎಗರೈತೋ
ಆಗ ಒಂದ ಇವ್ನಾಗಿ ಮಹಿರಾಮ       || ತಂದಾನ ||

ರಾಮ ಅಂತ ಜೀವ ಬಿಟ್ಟು ಬಿಟ್ಟ
ಆಗ ಬಿಡೋ ಹೋತ್ತಿಗೆ
ನೋಡಿಬಿಟ್ಳು ಅವ್ಳು
ಹನ್ನೆರಡು ಕೈ ಆದಿಶಕ್ತಿ ಕಾಡಿನಾಗಿರಾಕಿ
ಮೇಟ ಔಷಧ ಮಾರಾಕೆ ಎದಿನಗಂದಿ
ಅಬ್ಬಾಬ್ಬ ನೋಡಾಕೆ ಗಾಳಿಪಟರವುದಿ
ಎಷ್ಟ ಎಷ್ಟು ಬಿಗಿ ಬಲ ಇರಬಹುದು

ಈತನ ಬಲ ಅಲ್ಲ ನೋಡಮ್ಮ
ಇವ್ನು ಹಾಲಗೊಲ್ರವಲ್ಲಮ್ಮಾ
ಇವ್ನೂ ಮಾಯ ಕೃಷ್ಣ ಐದಾನ          || ತಂದಾನ ||

ಲೋಕ ಹುಟ್ಟಿ ಬಿಟ್ಟಾನ
ಲೋಕ ನೋಡಿತ್ತಿದಾನ ಈತ
ಯಮ್ಮಾ ದುಷ್ಟರಲ್ಲ ನಮ್ಮಾನ
ಓಡಿಸಲಿಕ್ಕೆ ಬಂದಾನ ಈತ || ತಂದಾನ ||

ಈತ ಮಾಯಿಕೃಷ್ಣ
ಲೋಕ ಹುಟ್ಟಿ
ದುಷ್ಟರನೆಲ್ಲ ಓಡಿಸಕ ಬಂದಾನ ಈತ
ಓಹೋ ಈಗ ಕೇಳ್ರಿ
ಬಕಾಸುರ ನಮ್ಮಣ್ಣನ ಕೊಲ್ಲಿ ಬಿಟ್ಟೆ
ಈಗ ಮಹಿರಾಮನ ಮೈ ಹೊಡೆ ಬಡಿದೆ
ಇನ್ಯಾರು ಐದಾರ ಅಣ್ಣನ ಕೊಲ್ಲಿದೆ
ಈಗ ತಂದಿನಿ ಕೊಲ್ಲಿದೆ
ನಾನು ಹುಟ್ಟಿರುವಾಗ ನನ್ನ ತಾಯಿ ಜೀವ ಬಿಟ್ಟಾಳ
ಇನ್ಯಾರು ಇದಾರ ನನ್ಗ
ನೋಡ್ರಿ ಈಗನ್ನ ಕೈ ಚೀಲ ಕೊಡ್ರಿ ನನಗೆ
ಛೀ ಛೀ ಛೀ ಕೈ ಚೀಲ ಕೇಳು ಬ್ಯಾಡ
ನನ್ನ ಜೀವ ಕೇಳು ಕೊಡ್ತಿನಿ

ಜೀವನ್ನ ಕೊಟ್ಟೇನು ಕೈ ಚೀಲ ಕೊಡೋದಿಲ್ಲ
ಹೆಣ್ಸರಿಗೆ ಕೊಡೊದಿಲ್ಲ ನಾವು
ನಮ್ಮ ಹಾಲು ಕೃಷ್ಣ ಗೊಲ್ಲಂದ್ರೆ
ಹೆಂಗಸರಿಗೆ ದರ್ಬಾರು ತೋರಿಸೋರಲ್ಲಾ
ಕೊಡೊದಿಲ್ಲ ಹೆಂಗ್ಸರಿಗೆ      || ತಂದಾನ ||

ಆಗ ಕೈ ಚೀಲ ಕೇಳಬ್ಯಾಡ
ನನ್ನ ಜೀವ ಕೆಳು ಕೊಡ್ತಿನಿ
ನಾವು ಹೆಂಗ್ಸರು ದರ್ಬಾರ ಕೊಡೋರಲ್ಲ
ನಾವು ಗೊಲ್ರು
ಗಂಡ್ಸರಿಗೆ ಕೈ ಚೀಲ ಚೆಂದ
ಹೆಂಗ್ಸರಿಗೆ ತೆಲಿಮ್ಯಾಲ ಗಂಟ ಚೆಂದ
ನಾವು ದರ್ಬಾರು ಕೊಟ್ಟಂಗ
ಆಗ ಬಂದ್ರೆ ಬರಬಹುದು ಇಲ್ದಿದ್ರೆ ಇಲ್ಲ

ಆಗ ಮಗ ಮುಂದೆ ನಡೆತಾನಮ್ಮ
ಗೈ ಚೀಲದಾಗ ಮದ್ದು ಐತಿ ಶಿವನೆ
ಮದ್ದು ಕೈಯಗಿದ್ದರೆ ಇವ್ನು ಮನಿ ದೇವ್ರಿಗೆ ನಾಣು ಸಿಗೋದಿಲ್ಲ
ಯಮ್ಮ ಮೋಸ ಬೀಳಂಗಿಲ್ಲಮ್ಮಾ
ಇವ್ನು ಕೈಗೆ ಸಿಗಾಂಗಿಲ್ಲಮ್ಮಾ ನನಗೆ  || ತಂದಾನ ||

ಅಂತ ಎದಿನಗಂಧಿ ಚಿಂತೆ ಮಾಡಿಕ್ಯಾಂತ ಬರುತಾಳೆ
ಚಿತ್ರಗಿರಿ ಪಟ್ನಕ ಬಂದ್ರು