ಬೆಕ್ಕ್ಹಿಂದೇನೆ ಇಲಚಿ ಬೀಳತದ
ಇಲಿಚ್ಚಹಿಂದೇನೆ ಬೆಕ್ಕು ಬೀಳತದ
ಅತ್ತಾಗಿತ್ತಾಗಿನ್ನ ನೋಡ್ತಾರ
ಆಕೆ ಸೀರ್ಯಾಗ ಹೊಕ್ಕಂಡು ಬಿಡ್ತಾದ            || ತಂದಾನ ||

ಕೆಳಗ ಮ್ಯಾಕ ನಿಂತಿರ್ತಾಳ
ಸೀರ್ಯಾಗ ಇನ್ನ ಹೊಕ್ಕಂತಾವ
ಅದ್ರ್ಹಿಂದೆ ಬೆಕ್ಕು ಆಗಿ ತುರ್ತಾವ
ಏಯಮ್ಮಾ ಬರಬರ ಬರಬರ ಸೀರೆ ಬಿಚ್ಚುತಾಳಯ್ಯಾ    || ತಂದಾನ ||

ಬರೇ ಬತ್ತಲಾಂಗ್ಹಾಗಿ ಕುಂತಾಳ
ಎಡಗೈಲಿ ನೀನು ಸೀರೆ ಒಗ್ಯೈಯ್ಯ ಅವ್ಳಿಗೆ ಜನ್ಮಗ         || ತಂದಾನ ||

ಆಗ ಬರೇ ಬತ್ತಲೆ ಹಾಂಗೆ ಕುಂಡ್ರುತಾಳ
ಎಡಗೈಲೆ ಸೀರೆ ಒಗೆದು ಬಿಡು
ಆಗ ಏನು ಅಂದು ಬಿಡು
ಕೇಳವ್ವೆ ಏನಂತ ಸರ್ತಿ ಕಟ್ಟೀಯಿ
ಸೀರೆ ಉಚ್ಚಿ ಕೆಳಗ ಬಿದ್ದಂಗ ಮಾಡಿದವ್ನು
ನನ್ನ ಜೀವಕ್ಕ ಅವ್ನೇ ಜೀವದ ಗಂಡ ಅಂದಿ
ನಾನೇನು ಮುಟ್ಟೀನ ಅಂಟಿನ್ಯ
ನಾನೆಷ್ಟು ದೂರ ಇದೀನಿ
ನೀನೇಷ್ಟು ದೂರ ಐದೀಯಿ

ಸೀರೆ ಬಿಚ್ಚಿ ಕೆಳಗ ಬಿತ್ತ ಇಲ್ಲ
ನಾನೇ ಸೀರೆ ನಿನಗೆ ಒಗ್ದಿನಿಲ್ಲಾ
ಅಯ್ಯಾ ಸೂಟಿ ನೋಡಿ ನೀನು ಏಟು ಹಾಕಿದಯ್ಯಾ
ಕೀಲು ನೋಡಿ ನನ ನರ ತಪ್ಸಿದಯ್ಯ             || ತಂದಾನ ||

ಕೀಲು ಕೀಲು ನೋಡಿ ತಪ್ಸಿಬಿಡ್ತಿನಿ
ಏನ್ರೀ ಇಲಚಿ ಬಿಟ್ಟು ಮಾಡ್ದರೆ
ನಾನ ಬಿಚ್ಚಿಗ್ಯಂಡಿನಿ
ಹಾಂಗಲ್ಲ ನಾನು ಮುಟ್ಟಿನ್ಯ ಮಾಡಿನ್ಯ
ಕೆಳ್ಗ ಬೀಳ್ಬೇಕಂತ ನೀನಾ ವಿಳಾಸ ಹಾಕಿಯಲ್ಲ ಬೋರ್ಡ ಹಾಕಿಯಲ್ಲ
ಕೆಳ್ಗ ಬಿತ್ತಾ ಇಲ್ಲ
ನಾನ ಒಗ್ದಿನ್ಯಾ ಇಲ್ಲ

ಸೋತೀನಯ್ಯ ಇನ್ನು ಅಂಬುತಾಳ
ಗಣ್ಸರಿಗೇನು ಬಹಳ ಯುಕ್ತಿವಯ್ಯ
ಏನುಉಪಯಾ ಮಾಡಿದ್ರೆ ಹೆಣಸೂರು ಕಮ್ಮು ನೋಡಯ್ಯ         || ತಂದಾನ ||

ಎಷ್ಟೂ ಉಪಾಯ ಮಾಡಿದ್ರೂ ಮಣಕಾಲು ಕೆಳಗೆ ಹೆಂಗಸರು
ಏನ್ರೀ ಈಗ ಸೋತಿನಿ ಅಂತಾಳ
ಆಗ ಸೋತೀನಂದ್ರೆ
ಏನಂದು ಬಿಡು
ಈಗ ನೀನ ಏನಂದಿ
ನನ್ನ ಗೆಲಿಬೇಕು ತಾವಾಗಿ ನನ್ನ ಲಗ್ನ ಆಗಬೇಕು ಅಂದಿ
ಸೀರೆ ಉಚ್ಚಿ ಕೆಳಗೆ ಬಿದ್ದೈತಲ್ಲಾ
ನೀನು ಸೋತಿ ನಾನು ಗೆದ್ದಿನಿ ಅಂದು ಬಿಡು
ಹಿಂಗಾದ್ರೆ ಸಿಗತಾಳ ಇಲ್ದಿದ್ರೇ ಇಲ್ಲ
ಸೆರೆಬಿಡು ಐನೋರಿಗೇನು ಹೇಳಿಬಿಟ್ರಿ
ಇಷ್ಟೇನಾ ಪಾತ್ರಗಿತ್ತಿ ಸೋತದ್ದು
ಇಷ್ಟೇ ನೋಡ್ರಿ
ಮತ್ತೆ ಅದರಾಗೇನನ ಬಿಟ್ಟ್ಯೀರ್ಯಾ
ಏನು ಬಿಟ್ಟಿಲ್ಲ ಸ್ವಾಮಿ ಅಂತ
ಹಂಗಾರೆ ಮನಿಗೆ ನಡ್ರಿ
ಆಗ ಮನಿಗ ಬಂದ
ಬಂದು ಹಾಸಿಗೆ ಹಾಸಿದ್ರು
ಆರು ಮಂದಿ ಕುಂತಾರ
ಅವರು ಐನೋರಿಗೆ ಹುಟ್ಟಿದವ್ರು
ನಾನು ಗೊಲ್ರಿಗ ಹುಟ್ಟಿದವ್ನು
ಹ್ಯಾಂಗ ಮಾಡಬೇಕಪ್ಪಾ
ಅವ್ರು ಏನೇನೋ ಓದುತಾರ
ನಾವು ಐನೋರು ಐನೋರು ಗುದ್ದ್ಯಾಡಬೇಕು
ಬಡಿಗೇರು ಮನ್ಯಾಕ ಬಂದು
ಛೇ ಬೇಸಲ್ಲ
ಲೇ ಬಡಿಗೇರ ನನಗೊಂದು ರೂಂ ತೋರಿಸ್ರೀ
ರೂಂನ್ಯಾಗ ಇರ್ತಿನಿ ಅಂದ
ಯಾಕ್ರಿ ಅಂದ್ರು
ನಮ್ಮಪ್ಪ ಬಡಿದಿದ್ದಿಗೆ ಗುರುವ್ಹಿನಿಂದೆ ಹೋಗಿದ್ದೆ
ಗುರುವು ಮಂತ್ರಗಳು ನನಗೆ ಬೇಸು ಕಲಿಸ್ಯಾನ
ನಾನು ಓದುವಾಗ ಮಂತ್ರ ನೀವು ಮಾತಾಡಿ ಬಿಟ್ರೆ ಆಗೋಯ್ತು
ನ್ಯಾಲಿಗೆ ಹಂಗೆ ಕತ್ರಿಸಿಗ್ಯಂಡು ಬೀಳಬೇಕು
ಏನಪ್ಪಾ
ಕಣ್ಣು ತೆರೆದು ನೋಡಿ ಬಿಟ್ರೆ
ಎರ್ಡ ಕಣ್ಣು ಉಚ್ಚಿ ಹಂಗೆ ಬೀಳಬೇಕು
ಅಂಥ ಗುರುವಿನ್ಹಿಂದೆ ಹೊಗಿದ್ದೇ ನಾನು ಅಂದ
ಸರಿ ಬಿಡ್ರೀ ಆ ರೂಂ ಐತಿ ನೋಡ್ರಿ ಅಂದ್ರು
ರೂಂ ನ್ಯಾಗ ಬಂದ
ಬಾಕ್ಲ ಮುಚ್ಚಿಗ್ಯಂಡ
ಚರಿಗೆ ನೀರು ಕೊಡ್ರಿ ಅಂದ
ಚೆರಿಗೆ ನೀರು ಕೊಟ್ರು
ಆಗ ಆ ರೂಮಿನಾಗೆನೈದಾವ
ಕುಳ್ಳು ಹಾಕ್ಯಾರಪ್ಪಾ ಚೀಲ
ಒಂದು ಕುಳ್ಳಿಗೆ ಬೆಂಕಿ ಹಚ್ಚಿದ
ಬೂದಿ ತಗಂಡ
ಆಗ ನೀರದಾಗ ಕಲಿಸಿದ
ಐದುದಾರ ಸುತ್ತೊರೆದ
ಇವ್ರು ಬೇವೂರು ಐನೋರು
ಎದು ದಾರ ಸುತ್ತವರದು ಬಿಟ್ರು
ಆಗ ಶಿವ ಶಿವ ಅಂತ ಜನಿವಾರ ಹಾಕಿದ
ಪಾದ ತೊಳಕಂಡು ನೀರು ಕುಡಿದ್ರು
ಅವ್ರಿಗೆ ಉಂಬಾಕಿಟ್ರು ಕೈಲಿದ್ದ ನಮ್ಗೆ
ಸ್ವಾಮಿ
ಸ್ವಾಮಿ ನಿಮ್ಮ ಕೈಲಿದ್ದ ನಮ್ಗೆ ತುತ್ತು ತುತ್ತು ನೀಡಿದ್ರೆ
ನಿಮ್ಮೆಂಜಲ್ದು ನಾವ್ ಊಟ ಮಾಡಬೇಕ್ರೀ
ಹಿಡ್ಕಿ ಹಿಡ್ಕಿ ನೀಡಿದ್ರು
ಇವ್ರು ಹೆಂಡ್ರು ಮಕ್ಕಳು ಊಟ ಮಾಡಿದ್ರು
ಐದೈದು ರೂಪಾಯಿ ಕಾಣಿಕೆ ಇಟ್ರು
ಪಾದ ಹಿಡ್ಕಂಡ್ರು
ಚೀರಂಜೀವ ಚೀರಜಿವ ದೀರ್ಘಾಯುಷ್ಯ ಅಂದ್ರು
ಬೇವೂರು ಐನೋರು ಹೋದ್ರು

ಇದ್ದೂರೈನೋರು ಇನ್ನಾ ಬಂದಿಲ್ಲ
ಯಾವಾಗ ಬರ್ತಾರ ಯಾವಾಗಿಲ್ಲ ಶಿವನೆ       || ತಂದಾನ ||

ಬರ್ರೀ ಸ್ವಾಮಿ ಐನೋರೇ
ಅಂಬ್ಲೆ ಬಾಯಿ ಕತ್ತರಿಕ್ಯಂಡ ಹೋತಿನಿ
ಸ್ವಾಮಿ ಯಾವಾಗ ಬರುತಾನ
ಯಾವಾಗ ಬರುತಾನ ಅಂದ್ರು
ಆತಗ ಕುಂತು ಕುಂತು ಸಾಕಾತು ರೂಮಿನಾಗ
ಲೇ ಬಡಿಗೇರಾ
ಹೋದ್ರ ಆ ಬೇವೂರು ಐನೋರು ಅಂದ
ಅಯ್ಯೋ ಅವ್ರು ಹೋಗಿ ಅರ್ಧಗಂಟೆ ಆಯ್ತು ಸ್ವಾಮಿ ಅಂದ್ರು
ಏ ಅವ್ರು ಹೋದ ಮ್ಯಾಲೆ ಮಾತಾಡಂತ ಹೇಳಿಲ್ಲ
ಮಾತಾಡಿದ್ರೆ ನಾಲಿಗೆ ಕತ್ರಿಸಿಗ್ಯಂಡು ಹೋತೈತೆ ಅಂದೆ
ಅದಕೆ ನಾವು ಮಾತಾಡಲಿಲ್ಲ
ಆಗ ಬಾಕಿಲ್ಲ ತೆರಕಂಡ ಬಂದ
ಲೇ ಹೆಂಡ್ರು ಮಕ್ಕಳು ಏಸು ಮಂದಿ ಐದಾರ
ಬರ್ರೀ ಎಲ್ಲಾರ ಅಂದ
ಎಲ್ಲರೂ ಬಂದ್ರು
ಏs ಎಲ್ಲರು ಕಣ್ಣು ಮುಚ್ಚಿಗ್ಯಾಬೇಕು
ಕಣಿಲಿ ನೋಡ್ಬಾರ್ದು ಅಂದ
ಎಲ್ಲರೂ ಕಣ್ಣು ಮುಚ್ಚಿಗ್ಯಂಡ್ರು
ಏ ಎಲ್ಲಾರೂ ಬೊಗಸೆ ಒಡ್ರಿ ಅಂದ
ಬೊಗಸೆ ಒಡ್ಡಿದ್ರು
ನಾವು ಮಂತ್ರಿಸಿದ ನೀರು ಹಾಕ್ತಿನಿ
ಮಂತ್ರ ನೀರು ಹಾಕ್ತಿನಿ
ನೀವ್ ಕುಡೀಬೇಕು
ಕಣ್ಣಿಲಿ ನೋಡಿದ್ರೆ
ಎರ್ಡು ಕಣ್ಣು ಬೀಳ್ತಾವ ಕೆಳಗೆ ಉಚ್ಚಿ
ಈಗ ಉಗುಳಿ ಬಿಟ್ರೆ
ಹಂಗೆ ನ್ಯಾಲಗೆ ಕಡಕಂಡು ಬಿಳ್ತದ ಅಂದ
ಆಗ ಬೂದಿ ಕಲಿಸಿದ ನೀರು
ಬಗ್ಗಿಸಿ ಬಗ್ಗಿಸಿ ಹಾಕಿದ
ಆಗ ಅವ್ರು ಕುಡೀವಾಗ
ಹಿಂದಕ್ಕ ಹೋಗುವಲ್ಲು
ಮುಂದೂಕ ಹೋಗವೊಲ್ನು
ಹೋಯಿಕ್ ಅಂತಾರ
ಏ ಹೊಯಿಕ್ ಅಂದ್ರೆ ಸತ್ಹೋಗ್ತಿರಿ ನೋಡ್ರಿ
ಆಗ ಹಾಂಗ ಹಿಂಗ ಮಾಡಿ ಬುಡಕ್ನ್ ನುಂಗಿಬಿಟ್ರು
ಆಗ ಸ್ವಾಮಿನ ಕುಂದ್ರಿಸಿದ್ರು ಪತ್ರಾಳ ಹಾಕಿದ್ರು
ಸ್ವಾಮಿ ತುತ್ತು ನೀಡ್ರಿ
ನಾವು ಹೆಂಡ್ರು ಮಕ್ಕಳು ಉಣುಬೇಕು ಈಗ
ಅಂದ್ರೆ ಪಾತ್ರೋಳಿ ಪಾತ್ರೋಳಿ ಇಟ್ಟ
ಏನ್ ಸ್ವಾಮಿ ನೀನು ಊಟ ಮಾಡಿ ನಮಗಿಡಬೇಕ್ರಿ
ಹಾಂಗಲ್ಲ ಮುವತ್ತಾರುಗಂಟೆ ಎಂಜಲು ಕೈ ಇದು
ಮುಟ್ಟಿದ ಮ್ಯಾಲೆ ಊಟ ಮಾಡಿದಂಗೆ ಅಂತ ಇಟ್ಟ
ಆಗ ಹತ್ತು ರೂಪಾಯಿ ಪಾದಕ್ಕೆ ಇಟ್ರು
ಏನಪ್ಪಾ ಮೂರು ಮೊಳದ ಕೆಬ್ಬಿಣ ಹಾರೆ ಕೋಲು ಕೊಡ್ರಿ ಅಂದ್ರ
ಮೂರು ಮೊಳದ ಕೆಬ್ಬಿಣ ಹಾರೆ ಕೊಟ್ಟು ಮ್ಯಾಲೆ

ಪರಮಾತ್ಮನೇ ಕಾಪಾಡಲಿ
ವಿಷ್ಣುದೇವುರೇ ಕಾಪಾಡಲಿ
ಭೂಮಿತಾಯಿ ಕಾಪಾಡಲಿ
ನಿಮ್ಮ ಪಾಪ ನನಗೇ ಬರ್ಲಿ
ಭೂಮಿ ಮ್ಯಾಲೆ ನೀವು ತಣ್ಣಗ ಬೆಳೀರಲೇ
ಬಡಿಗೇರ            || ತಂದಾನ ||

ಅಂತ ಹೋಗಿಬರ್ರೀ ಸ್ವಾಮಿರೆ ಅಂಬೋತ್ತಿಗೆ
ಜೋಳಿಗೆ ತಗಂಡ
ಆಗ ಮನಿಗೆ ಬಂದ
ಏನಪ್ಪಾ ಇಷ್ಟೋತ್ತಾಯ್ತು
ಜೋಳಿಗೆ ತಗಂಡ
ಆಗ ಮನಿಗೆ ಬಂದ
ಏನಪ್ಪಾ ಇಷ್ಟೋತ್ತಾಯ್ತು
ಅಂಬೋತ್ತಿಗೆ ಏನ್ಮಾರಬೇಕಮ್ಮ
ಬಡಿಗೇರಲ್ಲಿಗೆ ಹೋಗಿ ಪೂಜೆ ಮಾಡಿ
ಬಂದು ಬಿಟ್ಟೆ ಜನಿವಾರ್ಹಾಕಿ
ಆಗ ಯಮ್ಮಾ ನನಗೆ ಹೊಟ್ಟೆ ಹಸಿವು ಆಗತೈತೆ
ಹಸಿಟ್ಟು ಮಾಡಮ್ಮ ಅಂದ
ಏಯಪ್ಪಾ ಬ್ಯಾಡಲೋ ಶಿವರಾತ್ರೀ ಜಾಗರಣೆ
ಯಾರ ಮನ್ಯಾಗ ಅಂತ ಉಂತಿ
ಹೊಟ್ಟೆ ಸಿಟ್ಟು ಪಟ್ಟು ಅಂತೈತಪ್ಪ
ಛೆಜವು ಹಸಿಟ್ಟು ಬ್ಯಾಡಪ್ಪಾ ಅಂದ್ಳು
ಏ ಏನು ಚಿಟ್ಟಿಲ್ಲ ಮಾಡಮ್ಮ ಅಂದ
ಎರಡು ಸೇರು ಹೆಂಚಿನ ಮ್ಯಾಲೆ ಬೆಚ್ಚಗ ಮಾಡಿ
ಸೆಜ್ಜೆ ಬೀಸಿ ಬಿಟ್ಳು
ಆಗ ಬೆಲ್ಲಕಾಸಿ ಒಳ್ಳಿಗ ತಿರುವಿ ಒಣಿಕೀಲೆ ಕುಟ್ಟಿ ಬಿಟ್ಳು
ಆಗ ಪಾವು ಕಡ್ಲಿ ತಂದು
ಉಂಡೆ ಮಾಡಿ ಒಳ್ಳ್ಯಾಡಿಸಿ ಬಿಟ್ಳು ಕಡ್ಲೆದಾಗ
ಆಗ ಉಣಪ್ಪಾ ಅಂತ ಎರಡು ಉಂಡೆ ಇಟ್ಳು
ಯಮ್ಮಾ ನನಗೆ ನೀರು ತಗಂಡು ಬಾ ಅಂದ
ನೀರು ತರಾಕ ಹೋದ್ಳು
ಎರಡು ಹಸಿಟ್ಟು ತಗದು ಜೋಳಿಗ್ಯಾಗ ಹಾಕಿದ
ಕರ್ಡೀಗೆ ಹಾಕಬೇಕು
ಆಗ ಮತ್ತೆ ಹುಡುಗ ನೋಡಿದ
ಯಮ್ಮಾ ನೀರು ತಂದ್ಯಾ ಅಂದ
ಅಯ್ಯೋ ಎರ್ಡು ಹಸಿಟ್ಟು ಆಗ್ಲೇ ತಿಂದ್ಯ
ಏ ಅಪರೂಪ ಐದಾವಮ್ಮ
ಬೇಸುಕುಟ್ಟೀ ಯಮ್ಮಾ
ಆಗ ಒಂದೊಂದು ಹಸಿಟ್ಟು ಬಾಯಗಿಟ್ರೆ
ಹಂಗೆ ಬಳ್ಳ್ಯಾಡಿಕ್ಯಂತ ಹೋತಾವ
ಹಿಂದಕ್ಕ ಬರೋದಿಲ್ಲ
ಏಷ್ಟು ತೇಗ್ಯಾನಂದ್ರೆ ಮುಂದಕೇ ಹೋತಾವು
ಯಮ್ಮ ಇನ್ನೊಂದು ಹಸಿಟ್ಟು ಇಡು ಅಂದ
ಏಯಪ್ಪಾ ಇಲ್ಲೋಲೋ ಎರ್ಡೆ ಮಾಡಿದ್ದು
ಸೇರಿಗೆ ಒಂದು ಮಾಡೀವಿ
ಯಮ್ಮಾ ನಿಮ್ಮಪ್ಪನ ಗಂಟೇನು ಹೋತೈತೆ
ತಂದ್ಹಾಕವ್ನು ನಾನು
ಇಲ್ಲಲೋ ಆಗ ಇನ್ನ ಹೊಳ್ಗಿ ಮಾಡ್ತಿನಿ
ಇನ್ನ ಸ್ವಲ್ಪ ಹೊತ್ತಿಗೆ
ಸೆರೆಬಿಡು ತಾಯಿ
ಆಗಿನ್ನ ಕುರ್ಚಿ ಮ್ಯಾಲೆ ಕುಂತುಗಂಡ
ಯಮ್ಮಾ ನೀನು ಏನೆಂದು ಬಿಟ್ಟ್ಯೇ
ಎರ್ಡು ಹಸಿಟ್ಟು ತಿಂದು ಬಿಟ್ಟೆ
ಹೊಟ್ಟೆ ಗಡಗಡ ಅಂತೈತೆ
ಗುಂಡಾಲಿ ತುಂಬ ನೀರು ಕೊಡಮ್ಮಾ
ಚಂಬು ತಗಂಡು ಹೊತ್ನಿ ಅಂದ
ಸರಿಬಿಡು ಅಂತ
ಗುಂಡಾಲಿ ತುಂಬ ನೀರು ತಂದು ಕೊಟ್ಳು
ಯಮ್ಮಾ ನನಗೆ ಕೇಕ್ ಮಾಡಬೇಕು
ಏನೇನು ಹಾಕಬೇಕಲೋ ಸೋಠಿ ಮೆಣಸು
ಮಸಾಲೆ ಕಾಳು ಬೇಸ್ ಒಳ್ಳೀಗೆ ಹಾಕಿ ಕುಟ್ಟಿ
ಸಕ್ಕರೆ ಹಾಕಿ, ಹಾಲುಹಾಕಿ ಬೇಸು ಕಾಸಿ ಬಿಡು ಅಂದ
ಸರಿ ಬಿಡು ಅಂತ ಆ ಮುದ್ಯಾಕಿ ಮನ್ಯಾಗ ಹುಡಿಕ್ಯಾಡಾಕ ಹೋದ್ಳು
ಈ ಹುಡುಗ ಏನು ಮಾಡಿದ
ಎರಡು ಹಸಿಟ್ಟು ಜೋಳಗ್ಯಾಗ ಹಕ್ಕಂಡಿದ್ದು
ಜೋಳಿಗೆ ತಗಂಡ
ದೊಡ್ಡ ಕೋಲು ಕೆಬ್ಬಣದ ಮೂರು ಮೊಳದ್ದು
ಯವ್ವಾ ಐನೋರು ಯವ್ವಾ

ಹೋತಿನಿ ಹೋತಿನಿ ಊರು ಬಿಟ್ಟು ಯಮ್ಮಾ
ಆಗ ಮಗನೆ ಮನಿ ಬಿಟ್ಟಾನಮ್ಮ
ಐದು ಮಂದಿ ಹೆಂಡ್ರು ಮನೆಗೆ ಬಂದಾನಮ್ಮ ಶರಬಂಧರಾಜ       || ತಂದಾನ ||

ಐದು ಮಂದಿ ಹೆಂಡ್ರತಲ್ಲಿ ಬಂದ
ಉಪಾಸ ಐದಾವ ಹೆಂಗಸರನ್ಹಾಡ
ಏನು ಗಂಗಾಳಿಲ್ಲ
ಚರಿಗಿ ಇಲ್ಲ
ಬರೇ ಎಲುಬೈತಪ್ಪ ಹೆಣ್ಮಕ್ಕನ್ಹಾಡ
ಆಗ ತಿಂದಿದ್ಯಲ ಕರಗಿ ಹೋಗೈತಿ
ಏ ಈ ಎರ್ಡು ಹಸಿಟ್ಟು ತಂದೀನಿ
ನೀವು ತಿಂದೀರಿ ಹಿಂದಗಡೆ
ಇದು ಪಾತ್ರಗಿತ್ತಿ ನಾಟಕ್ಕೆ ಕರ್ಡಿಗೆ ಹಾಕವು
ಆಗಲಿ ಬಿಡ್ರಿ ಅಂದ್ರು
ಏನ್ರೀ ಪಾತ್ರಗಿತ್ತಿದೆಲ್ಲ ಗೊತ್ತಾತ
ಎಲ್ಲಾ ತಿಳಕ್ಯಂಡೀನಿ
ಸೂಟಿ ನೋಡಿ ಎಟು ಹಾಕೋದೆ
ಕೀಲು ನೋಡಿ ನರ ತಪ್ಪಸದೇ
ಹುಡುಗ ಎಲ್ಲಾ ಐನೋರು ಡಿರಸೆಲ್ಲ ಬಿಚ್ಚಿಬಿಟ್ಟ
ಪದರನ ಪಂಚೆ ಶರ್ಟು ಸೆಲ್ಯೇವು ಹಾಕಿದ
ಗೋಲ್ಲರ ಕೃಷ್ಣದವ್ನು
ಆಗ ಶರಬಂದರಾಜ ಏನ್ಮಾಡ್ದ
ಬಜಾರದಾಗ ಬರುತ್ತಿದ್ದ
ಮುದಕಿ ನೋಡಿದ್ಳು
ಏನು ಹುಡುಗ
ನನ್ನ ಮಗ ಚೆಮಬು ತಕಾಂಡು ಗುಂಡಾಲಿ ತಗಾಂಡು ಹೋದ
ಅತ್ತಾಗ ಐದಾನೇನಪ್ಪಾ ಓಣ್ಯಾಗ ಅಂದ್ಳು
ಏ ಮುದುಕಿ ಅಲ್ಲಿಗಲ್ಲಿಗೆ
ಗಣ್ಮಕ್ಕಳು ಕುಂತಾರ
ಎಂಗ್ಹೋತಿ ನೀನು
ನಿನ್ನ ಮಗ ಹೋದರೆ ಎತ್ತಾಗ ಹೋತಾನ
ಆಗ ಚೆಂಬು ತಗಂಡು ಹೋದೋನು ಬರ್ತಾನ
ಏ ನಡೆ ಅಂದ
ಆಗ ಆ ಹುಡುಗ ಅಂತ ಆ ಮೂದ್ಯಾಕೆ ಖೂನ ಹಿಡಿದಿಲ್ಲ
ಬಜಾರು ಕೂಟ ಬಂದ
ಕೆ.ಜಿ. ಮಾಂಸ ಕೊಂಡುಕಂಡ
ಎರ್ಡು ಮಾವಿನ ಹಣ್ಣು ತಗಂಡು
ಆಗ ಕೋರಚರ ಮನಿಗೆ ಬಂದ
ಕೊರಚರ ಎರಡು ರೂಪಾಯಿ ಕೊಡ್ತಿನಿ
ಎರ್ಡು ಇಲಿಚಿ ಹಿಡಕೊಡ್ರಲೇ ಅಂದ
ಹೇ ನಮ್ಮ ಗುಡಿಸಲ್ಯಾಗ ಜಗ್ಗಿ ಐದಾವ ಬಿಡು
ಬಲೆ ವಡ್ಡರು ಕಟ್ಟಿಗೆ ತಗಂಡು ತಿವುದರು ಎರ್ಡು ಬಿದ್ದು
ಒಂದು ಎರ್ಡು ಕಾಲು ಕಟ್ಟಿ ಕೊಟ್ಟರು
ಒಂದು ಗೋಣಿತಿರುವಿದರು
ಎರ್ಡು ಬಕ್ಕಣುದಾಗ ಹಕ್ಯಂಡ

ಪಾತ್ರಗಿತ್ತಿ ಮನಿಗೆ ಬರ್ತಾನೆ
ಇನ್ನು ಮದ್ವೆ ಮಾಡವನೆ ಲೋಕಕ್ಕೆ   || ತಂದಾನ ||