ಕುರುಗೋಡು ಶಾಸನಗಳು

೧. ಗುಡ್ಡದಲ್ಲಿರುವ ಕತ್ತೆ ಬಂಡೆಯ ಮೇಲೆ

೨. ಸ್ವಸ್ತಿಶ್ರೀ (||*) ಸತ್ಯಾಶ್ರಯದತ್ತಿಯ ಪಡೆದ ಕುಱು

೩. ಂಗೋಡ ವ್ಯ(ವ)ಸ್ಥೆ ಎನ್ತೆನ್ದೊಡೆ ಪದಿನೆಣ್ಟು ಗೇಣ ೧೮

೩. ಕೋಲು ಪೊನ್ನು ನವಿಲಪೊನ್ನು ಈ ದಣ್ಣ…

೪. ದಾತ ಕವಿಲೆಯುಮ ನಾ

೫. ರಣಾಸಿಯಲು ಬ್ರಾಹ್ಮಣರುಮನಱಿದಾತ (II)

೨. ಕಲ್ಲೇಶ್ವರ ದೇವಾಲಯದ ಮುಂದಿನ ಮಂಟಪದಲ್ಲಿ ದಕ್ಷಿಣ ಭಾಗದಲ್ಲಿ ಶಾಸನದ ಮುಂಭಾಗ

೧. ಶ್ರೀ ಕಲಿದೇವ (II*) ನಮಸ್ತುಂಗಶಿರಶ್ಚುಂಬಿಚಂದ್ರಚಾಮರಚಾರವೇ | ತ್ರೈಳೋಕ್ಯನಗರಾ

೨. ರಂಭಮೂಲಸ್ತಂಭಾಶಯ ಶಂಭವೇ || ಶ್ರೀರಾಮಾರಮಣಪ್ರಣುತಮಹಿ

೩. ಮಂ ಬೃಂದಾರಕೋದಾರಬೃನ್ದಾರಾಧ್ಯಂ ತ್ರಿದಶಾಧಿನಾಥನಗಜಾಚಂಚತ್ಕುಚಾಲೋಲ ಕಾಶ್ಮೀರೋರಸ್ಥಳ

೪. ನಬ್ಜಸಂಭವನತಂ ತ್ರೈಳೋಕ್ಯನಿಸ್ತಾರವಿಸ್ತಾರಂ ಶ್ರೀಕಲಿದೇವನೊಲ್ದು ನಮಗೀಗಿಷ್ಟಾರ್ತ್ಥ ಸಂಸಿದ್ಧಿಯಂ ||ವ|| ಅನ್ತು ಜಗತ್ಕರ್ತ್ತ

೫. ನೆನಿಸಿದ ಮಹಾದೇವನೆಂದುದ್ಭಾವಿತಮಾದಿಳಾವನಿತೆಗೆ ಕಾಂ(ಚೀ) ಮುದ್ರೆಯಂತೆ ಚಕ್ರಮೆನಿಸಿದ ಸಮುದ್ರಮೆನ್ತೆನೆ ||

೬. ವೃ|| ಮದವ (ಂ) ನ್ನೀರೇಭನೀರಾಶ್ವಕಕರಿಮಕರೋಚ್ಚಂಡಮಂಡೂಕುಗಂಡೂ (ಷದ) ನಾನಾನಚ್ರಚಕ್ರಕ್ರಕ

೭. ಚ ಕಮಠಲೋಠತ್ಸಪಾಠೀನರಾಜೀವಿದಿ ತಕ್ಷುದ್ರೋದರಾದಿಪ್ರಬಳಜಳಚರಾನೀಕ ಸಂಕ್ಷೋಭ

೮. ಪುಚ್ಛಚ್ಛದವಾತಾಘಾತಭೂತೋದ್ವಹಳಲಹರಿಕಾಸ್ಫಾರಭದ್ರಂ ಸಮುದ್ರಂ ||ವ|| ಶ್ರೀ ಮಜ್ಜಂಬೂದ್ವೀಪ

೯. ದೊಳ್ ಭರತಮಹೀಕಾನ್ತೆಯ ಕುಂತಳದಂತೆಸವುತಿರ್ದ್ದ ಕುಂತಳದೇಶದ ತುಂಗಭದ್ರಾ ನದಿಯಿತೆಂಕಲ್ ||ವೃ|| ವ

೧೦. ನರುಹಷಂಡಂದಿ ಬೆಳೆದ ಕೆಯ್ವೊಲದಿಂ ಸಹಕಾರಸಾರಸತ್ಪನಸ ಲವಂಗ [ಕೌ]ಂಗ ಲವಲೀತಿಳಕಪ್ರತ

೧೧. ಳಪ್ರವಾಳ ನೂತನಕರನಾಗಪೂಗ ಸಕಳರ್ದ್ಧಕನನ್ದನದಿನ್ದವೆಯ್ದೆ ತಾನೆ ನಲಿದು ಬಲ್ಲಕುನ್ದೆ ನಡುವಿಕ್ಕುತ ವೊಪ್ಪುಗು

೧೨. ವೆತ್ತ ನೋರ್ಪ್ಪಡಂ || ಅಲ್ಲಿ ಪಟ್ಟಣಂ ಕುಱುಗೋಡುದುರ್ಗ್ಗಮೆಂತೆನೆ

೧೩. ವೃ|| ಚೋಳನನಾಳುಮಾಡುವುದು ಗೂರ್ಜ್ಜರರಂ ಸಲೆ ತರ್ದ್ದಿಕುಂ ಕ

೧೪. ರಂ ಲಾಳನನಾಳಿಮಾಡುವುದು ಪಾಂಡ್ಯನನಂಡಲೆಗುಂ ತೆಲುಂಗಭೂಪಾಲನನೇಳಿದಿಕ್ಕೆಯನೆ ಮಾಡುವುದೀ ಕುಱುಗೋಡಕೋ

೧೫. ಟೆ ತಾಂ ಕಾಳೆಗವೆಂದಡೇಳುಮಡಿ ಪೆರ್ಚ್ಚುವುದಚ್ಚರಿ ಯಾರೂ ಕಾದುವರ್ ||ಕಂ|| ಆ ಪುರಮಂ ಪ್ರತಿಪಾಳಿಪ ಭೂಪಶಿ

೧೬. ಖಾಮಣಿ ಶಿವೈಕಚೂಡಾಮಣಿ ದಿಗ್ಬ್ಯಾಪಿ ಯಶೋದರ್ಪ್ಪಮಣಿ ತಾಪಿತರಿಪು ರಾಚಮಲ್ಲನ ಪ್ರತಿಮಲ್ಲಂ ||ವ|| ಸ್ವ

೧೭. ಸ್ತಿ ಸಮಧಿಗತಪಂಚಮಹಾಶಬ್ದ ಮಹಾಮಣ್ದಳೇಸ್ವರನುಂ ಭೋಗಾವತೀಪುರ ವರಾಧೀಶ್ವರನುಂ ಸಿತಗರಗ

೧೮. ಣ್ಡನುಂ ಸಿಂದಗೋವಿಂದನುಂ ಪಾತಾಳಚಕ್ರವರ್ತ್ತಿಯ ಶ್ರೀವೀರಕಲಿದೇವರ ಪಾದಾರಾಧಕನುಮೆನಿಸಿದ ರಾಚ

೧೯. ಮಲ್ಲದೇವನ ರಾಜ್ಯಮುತ್ತರೋತ್ತರವಾಗುತ್ತಿರಲು ತತ್ಪುರನಿವಾಸಿಗಳಪ್ಪ ಮುಂಮುರಿದಂಡಗಳ ಮಹಿಮೆ

೨೦. ಯೆನ್ತೆಂದೆಡೆ ||ರಗಳೆ|| ಸ್ವಸ್ತಿ ಗವಱೇಶ ಪದಪದ್ಮ ಷಟ್ಚರಣರುಂ | ವಿಸ್ತೀರ್ಣವಸ್ತುಗುಣ ವಿನಿಹಿತಾ ಚರಣರುಂ (I)

೨೧. ಪಂಚಶತ ವೀರಶಾಸನಗುಣೋದ್ಧರಣರುಂ | ಸಂಚಿತಮಸ್ತ ಧರ್ಮ್ಮೃಕನಿಸ್ತರ (ಗು)ಣರುಂ | ಬ್ಯವಹಾರನಯವಿ

೨೨. ನಯವಿಜ್ಞಾನವಿದ್ಯರುಂ | ನವರತ್ನವಾಹನಪರೀಕ್ಷಾನವದ್ಯರುಂ | ಶರಣೆಂದುಕಂಡರಂ| ಕರುಣದಿಂ ಕಾವರುಂ|

೨೩. ಬಿರುದಿಂಗೆ ಬೀಗುವರ ಹರಣವಂ ಸೋವರುಂ | ತೋಟಿಯೆಂದಡೆ ಕೋಟಿಲಾಭವೆಂದುಲಿವರುಂ ಆಟಂದಬವರಕ್ಕೆ ನಾ

೨೪. ಟಕಂ ನಲಿವರುಂ | ಅಯ್ಯಾವೊಳೆಯ ತಳದಿನಿದುವೆನೆರ್ಗ್ಗಿಱಿದೆನಿಪ|| ರಯ್ಯಮಾದ್ವಾರಾವತೀ ಪುರಕೆ ಕುಱುವೆನಿಪ |

೨೫. ಕುಱುಗೋಡತಳದೊಳಗೆತಳರದಯ್ನೂರ್ವ್ವರುಂ (|) ನೆಱಿನೋರ್ಪ್ಪಡವರೊಳಗೆ ಪಗೆಗಂಡರೊರ್ವರುಂ ||ವ|| ಆ ಮು (ಂ)ಮ್ಮುರಿ

೨೬. ದಂಡಂಗಳೊಳ್ ಮಹಾವಿನಹಾಳ ಕಲ್ಲಿಸೆಟ್ಟಿಯನ್ವಯವೆನ್ತೆನೆ ||ಕಂ|| ಎಳೆಯೊಳಗೆ ಸಿಂದವಾಡಿಗೆ ತಿಲಕದವೊಲೆಸೆ

೨೭. ವ ಮುದಿಯನೂರೊಳ್ಪೆಂಪಗ್ಗಳದ ಬಣಂಜಿಗನೆನೆ ಮೂಗುಳಬುದ್ಧಿಯಕೇತಿಸೆಟ್ಟಿಯ ಪೊಗಳದರಾರ್ ||ವೃ|| ಮೂ

೨೮. ಗುಳಬುದ್ಧಿಯೆಂಬ ಪೆಸರಂ ಪಡದೊಪ್ಪುವ ಕೇತಿಸೆಟ್ಟಿಗಂ ಭಾಗಿನಿ ಚಂದಿಕಬ್ಬೆಗೊಗೆದಿರ್ದ್ದ ಸುತರ್ಗ್ಗೆಣೆಯಾರು ಲೋಕದೊ

೨೯. ಳ್ ನಾಗಮಸೆಟ್ಟಿಗಂ ನೆಗಳ್ದ ಮಾಧವಸೆಟ್ಟಿಗೆ ಬೇಡಿಸೆಟ್ಟಿಗುದ್ಯೋಗದ ರುದ್ರಸೆಟ್ಟಿಗೆ ನೆಗಳ್ತೆ ಪೂಗಳ್ತೆಯ ಚೀಲಿಸೆಟ್ಟಿಗಂ ||

೩೦. ಕಂ|| ಅಂತೆನಿಪ ನಾಗಿಸೆಟ್ಟಿಗೆ ಕಾಂತೆಪತಿಬ್ರತೆಗೆ ಮಾಕಣಬ್ಬೆಗೆ ಸುತರತ್ಯಂತಗುಣಿ ಮಾದಿಸೆಟ್ಟಿಯುಮಂತಾ

೩೧. ಕಲಿದೇವಸೆಟ್ಟಿಯುಂ ಪೆಸೆರ್ವ್ವಡೆದರ್ | ಅಂತಿರ್ವ್ವರೊಳಗೆ ಬಿರುದಬಣಂಜಿಗರಯ್ನೂರ್ವ್ವರ ಪುತ್ರಂ ಕಲ್ಲಿಸೆಟ್ಟಿ ಗೋತ್ರಪವಿತ್ರಂ |

೩೨. ಹರಿಯಳದಪುರದ ಕಲಿದೇವರ ವರಪುತ್ರಂ ಪರಾಂಗನಾಜನಪುತ್ರಂ ||ವೃ|| ಹುಸಿಯದ ಮತು ಕೊಟ್ಟಳಿಪ

೩೩. ದಾರ್ಪ್ಪು ಕಳಂಕದೊಳ್ಗುಂದದೊಳ್ಜೆಸಂ | ಕುಸಿಯದ ಧೈರ್ಯ್ಯಂ ವೋಜೆಗಿಡದೊಳ್ಗುಣ ವಂಜದ ಬೀರವೆಗ್ಗಿನಿಂ ಮುಸುಕದ

೩೪. ರೂಪು(ದ)ಣವಣವೆಳ್ಳನಿತಿಲ್ಲದೆ ಶಂಭುಭಕ್ತಿ ಭಾವಿಸೆ ಕಲಿದೇವರೀಯಲಿವು ಸಂದಪುವೀ ಕಲಿದೇವ ಸೆಟ್ಟಿದೊಳ್ ||

೩೫. ಕಂ || ಕಲಿದೇವಸೆಟ್ಟಿಯುತ್ತಮಕುಲವನಿತೆ ಕುಲೀನೆ ಪತಿಹಿತಾಳಂಕ್ರಿತೆ ತಾಂ ಕಲಿದೇವಪದಾರಾಧಕಿ ಸಲೆ ಕೀ

೩೬. ತಾಂಬಿಕೆಯೆ ಧನೈ ಧರಣೀತಳದೊಳ್ || ಕಲಿದೇವಸೆಟ್ಟಿಗಂ ಕೇತಲೆಗುಂ ಮಕ್ಕಳ್ ವಿನೂತ ವಾಗಾಂಬಿಕೆ ಯಾಚಲೆ ಸ

೩೭. ಕಲಗುಣನಿಧಾನಂ ಕಲಿದೇವನೆನಲ್ಕೆ ಧನ್ಯರಾರಿವರಿದಂದಂ ||ವೃ|| ಸತ್ಯದ ಬಿತ್ತು ಸಾಹಸದ ಸಾಗರವೊಳ್ಗುಣ

೩೮. ದಾಗರಂ ಜನಸ್ತುತ್ಯತೆಯೊಳ್ಪು ಧರ್ಮ್ಮದ ತವರ್ಮ್ಮನೆ | ಮಾಂತನದಿರ್ಕ್ಕೆದಾಣ ವೌಚಿತ್ಯದ… ಜಸದ ಸಯ್ಪು ನೆ

೩೯. ಗಳ್ತೆಯ ಲೊಕದೇಳ್ಗೆಯೌನ್ನತ್ಯದೆ ಗೊತ್ತೆನುತ್ತೆ ಧರೆ ಬಣ್ನಿಪುದೀ ಕಲಿದೇವಸೆಟ್ಟಿಯಂ || ಮತ್ತಮಾತನಬ್ಯವಸಾಯ

೪೦. ಬ್ಯವಹಾರವೆನ್ತೆನೆ ||ಕಂ|| ಭಕ್ತಿಯ ಭಂಡ ಮೊದಲ್ ನಿಜಭಕ್ತಿಯೆ ಕೋಟಾನು ಕೋಟಿಲಾಭಂ ಶಿವಸದ್ಭಕ್ತಿಯ ಬೆಳಸಿ

೪೧……. ಭಕ್ತ ಕಲಿದೇವಸೆಟ್ಟಿ ನೆಗಳ್ದಂ ಧರೆಯೊಳ್ ||ವ|| ಆತನ ಹೃದಯಕಮಳದೊಳ್ ಮನಃಪ್ರೇರಕ ಮಹಾದೇವಂ ಜೀವ

೪೨. ನಾಗಿರ್ಪ್ಪನೆನ್ತೆನೆ ||ಕಂ|| ಚಿನ್ತಾಮಣಿಲಿಂಗು ಹೃದಯಾನ್ತರದೊಳ್ನಿನ್ದು ಕಲ್ಲಿಸೆಟ್ಟಿಗೆ ದಯೆಯಿಂದಿನ್ತು ನಡೆಯಿನ್ತು ನುಡಿ

೪೩. ಯೆಂದಿಂತು ಸದಾ ಶಿಕ್ಷಿಸುತ್ತೆ ರಕ್ಷಿಸುತ್ತಿರ್ಪ್ಪಂ ||ವ|| ಅಂತು ನಿಜಾಂತರಂಗದೊಳಿರ್ದ್ದು ಭಕ್ತಿಯ್ಮಂ ಶಕ್ತಿಯ್ಮಂಕು

೪೪. ಡೆ ಬಹಿರಂಗಕೆ ವರಪ್ರಸಾದಮ್ಬಳೆದು ಕುಱುಗೋಡ ತೆಂಕಣ ಭಾಗದಲ್ ಮಾಟಕೂಟಪ್ರಸಾದ ದೇಗು

ಶಾಸನದ ಹಿಂಭಾಗ

೪೫. ಲಮಂ ಮಾಡಿಸಿ ತಂನಿಷ್ಟವಪ್ಪ ||ಕಂ|| ಕಲಿದೇವರ್ಗ್ಗೆ ಶಿವೋತ್ಸವದೊಲವಿಂದೆ ಕಳಾಪ್ರ

೪೬. ತಿಷ್ಟೆಯಂ ಮಾಡಿದ ದೇಗುಲಮುಮನೆತ್ತಿಸಿದೀ ನಿರ್ಮ್ಮಳಧಾರ್ಮ್ಮಿಕನೆನಿಪ ಕಲ್ಲಿಸೆಟ್ಟಿ ಕೃತಾರ್ತ್ಥಂ ||

೪೭. ಭೂತೇಶನ ಪಡುವಣ ವಿಖ್ಯಾತಿಯ ಕೆಱೆ ಬಡಗಲೆಸೆವ ತೀರ್ತ್ಥಂ ತೆಂಕಲು ಶೀತಳಭಾವಿಯ

೪೮. ನಗಳಿಸಿದಾತಂ ಕಲಿದೇವನಸೆಟ್ಟಿ ಧನ್ಯಂ ಜಗದೊಳ್ ||ಅನ್ತು|| ಕಟ್ಟಿಸಿದ ಕೆಱೆ ಮನೋಮುದ ದಿಟ್ಟಾರವೆ ಪ

೪೯. ಸಿಯಲೀಯದಿಕ್ಕುವ ಸತ್ರ ಬಿಟ್ಟ ಬೆಳಗೆಯ್ಗಳೆಱೆವಱವಟ್ಟಿಗೆ ಕಲಿದೇವಸೆಟ್ಟಿ ಮಾಡಿದ ಧರ್ಮ್ಮಂ ||

೫೦. ವ||ಅನ್ತು ಧರ್ಮ್ಮಮೂರ್ಜ್ಜಿತವಾಗುತ್ತಿರಲ್ ಸಮಸ್ತಭುವನಾಶ್ರಯಂ ಪೃಥ್ವೀವಲ್ಲಭಂ ಮಹಾರಾಜಾ

೫೧. ಧಿರಾಜಂ ಪರಮೇಶ್ವರಂ ಪರಮಭಟ್ಟಾರಕಂ ಕಳಚುರ್ಯ್ಯಕುಳತಿಳಕಂ ಭುಜಬಳಮ

೫೨. ಲ್ಲಂ ಕುಂತಳದೇಶದ ಚಕ್ರವರ್ತ್ತಿ ರಾಯಮುರಾರಿ ಸೋವಿದೇವನ ರಾಜ್ಯಂ ಪ್ರವರ್ತ್ತಿಸುತ್ತ

೫೩. ಮಿರಲು ಸಕವರ್ಷದ ೧೦೯೭ ನೆಯ ಮನುಮಥಸಂವತ್ಸರದ ಪುಷ್ಯ

೫೪. ದಮಾವಾಸ್ಯೆ ಸೋಮವಾರ ಸೂರ್ಯಗ್ರಹಣ ಉತ್ತರಾಯಣಸಂಕ್ರಮ

೫೫. ಣದ ಪುಣ್ಯತಿಥಿಯಲು ಶ್ರೀಮನ್ಮಹಮಂಡಳೇಶ್ವರಂ ಪರಮಮಾಹೇಶ್ವರಂ ರಾಜಮಲ್ಲದೇವರು ಕಲ್ಲಿಸೆ

೫೬. ಟ್ಟಿಯಿಂ ಸುಪ್ರತಿಷ್ಠಿತಮಾದೀ ಶ್ರೀಕಲಿದೇವರ್ಗ್ಗೆ ಭಕ್ತಿಪೂರ್ವ್ವಕವಾಗಿಯಲ್ಲಿಯ ಸ್ಥಾನಾಚಾರ್ಯ್ಯ (||)

೫೭. ರು ||ಕಂ|| ಶಿವಶಕ್ತಿಸುತಂ ಕಲಿದೇವರಾಂಘ್ರಿಸರೋಜ ಪೂಜಕಂ ಸಕಲಗುಣೋದ್ಭವ ಕಾಳಾಮುಖತಿ

೫೮. ಳಕಂ ಭುವನಸ್ತುತನೆನಿಪನಮೃತರಾಶಿಮುನೀಂದ್ರ || ಅಮೃತಗುಣನಮೃತಮಾನಸ ನಮೃತೋತ್ತ

೫೯. ಮವಾಣಿಯಮೃತಹಸ್ತಾಂಬುಜನನ್ತಮ್ರಿತಮತಿಯಮೃತಮಹಿಮಾಪ್ರಮಿತನೆನಿಪ್ಪಮೃತ ರಾಶಿಮುನಿ ಕ್ರಿ

೬೦. ತಕೃತ್ಯಂ ||ವೃ|| ಅನ್ತೆನಿಸಿದಮೃತರಾಶಿದೇವರವರ ಜೀಯರ ಕಾಲಂ ಕರ್ಚ್ಚಿ ಧಾರಾಪೂರ್ವ್ವಕಂ ಕಲ್ಲಿಸೆಟ್ಟಿ ಮು

೬೧. ಖ್ಯವಾಗಿ ಕುಱುಗೋಡ ಬಡಗಣರಳಿಯಕೆಱೆಯಿಂ ಮೂಡಲ್ ನೀರಹಳ್ಳದಿಂ ಗವಱೇ ರೇಶ್ವರದ ಭೋಗದ ಸ್ಥ

೬೨. ಳದಂ ತೆಂಕಲ್ ಪರಂಜ್ಯೋತಿದೇವರ ಕೆಯ್ಯಿಂ ಪಡುವಲ್ ಕಲಿದೇವರಂಗಭೋಗ ರಂಗಭೋಗ ಖಂಡಸ್ಫುಟಿ

೬೩. ತ ಜೀರ್ಣ್ನೋದ್ಧಾರವಿನ್ತಿನಿತಕ್ಕಂ ಬಿಟ್ಟ ತಕ್ಕಿಲಮತ್ತರ್ ೨ ಆ ಸ್ಥಳದ ನಡುವೆ ಸಂಕಿಮೆಯಂಗೆ ಕಂಬ ೨೨೫||

೬೪. ದೇವರ ಹಾಡುವಾತಂಗೆ ಕಂಬ ೨೨೫ ಶ್ರೀಮನ್ಮ ಹಾಮಣ್ಣಳೇಶ್ವರಂ ಬಳ್ಳಾರೆಯಜ್ಜರಸರು ಹಟ್ಟ

೬೫. ಣದ ಹೊಲದೊಳಗೆ ಸಿಂಗದೇವಿಯ ದಾರಿಯಿಂ ಮೂಡಲ್ ಗೌಡೊಕ್ಕಲ ದೇವಗೆಯ್ಯಿಂ ಬಡಗಲ್ ಕೊಪ್ಪೇಶ್ವರದ

೬೬. ಕೆಯ್ಯಿಂ ತೆಂಕಲ್ ಅಱವಟಿಗೆ ಸತ್ರವಂಬಲಿಯಿನಿತಕ್ಕಂ ಬಿಟ್ಟ ತಕ್ಕಿಲಮತ್ತರ್ ೧ ಚೈತ್ರಪವಿತ್ರ ಅತಿಥಿ

೬೭. ಯಭ್ಯಾಗತ ತಪೋಧನರ ಗ್ರಾಸಕ್ಕೆ ಬಿಟ್ಟ ತಕ್ಕಿಲಮತ್ತರ್ ೧ | ಅಲ್ಲಿಂ ಪಡುವಲು ಸಮಸ್ತ ಪ್ರಾಣಿಗಳ್ಗೆ ಬಿಟ್ಟ

೬೮. ಧರ್ಮ್ಮವಣ್ನಿಗೆಗೆ ಕಂಬ ೪೫೦ ಮತ್ತಮಾ ಹೊಲದ ದೇವರಂಗಭೋಗನೈವೇದ್ಯಕ್ಕೆ ಕುಱುಗೋಡ ಹೊಲವೇರೆಯಿಂ ಮೂ

೬೯. ಡಣ ಕಿಸುಮತ್ತರ್ ೨ ಕುಱುಗೋಡ ತೆಂಕಣ ಹೊದೋಂಟ ೧ ದೇವರ ಪುರದೊಳಗೆ ನಂದಾ ದೀವಿಗೆಗೆ ಗಾಣ ೨ ಮ

೭೦. ತ್ತಂ ನಖರಂಗಳು ಹೊಂಗಳದಲ್ಲಿ ಕೊಟ್ಟಲ್ಲಿ ಭತ್ತ ಸೊಳಸೆ ೨ ಕೊಂಡಲ್ಲಿ ಸೊಳೆಸೆ ೨ ಮುಂಮುರಿ ದಂಡಗಳಯ್ಸಂ

೭೧. ಬರದಲ್ಲಿ ದೇವರ್ಗ್ಗೆ ಹೊಂಗೆ ಕೊಟ್ಟಲ್ಲಿ ಕಾಣಿ ೧ ಕೊಂಡಲ್ಲಿ ಕಾಣಿ ೧ ತಂಬುಲಿಗ ಸಾಸಿರ್ವ್ವರು ದೇವರ್ಗ್ಗೆ ಹೇಱಿಂ

೭೨. ಗೆಲೆ ೧೦೦ ಹೊಱೆಗೆಲೆ ೫೦ ಸ್ಥಾನಾಚಾರ್ಯರಿಬ್ಬರುಂ ಸೀತಾಳಗದ್ದುಗೆಗೆ ಕೊಡ ೨೦ ವಸುಧಾರೆ ೨

೭೩. ಮಂ ನಡಸುವರ್ ಯಿಂತೀ ಧರ್ಮ್ಮವನರಸುಗಳುಂ ಮುಮ್ಮುರಿದಂಡಂಗಳುಂ ಪ್ರತಿಪಾಳಿಸುವರು

೭೪. ಅವರ್ಗ್ಗೆ ಗಂಗೆ ವಾರಣಾಸಿ ಕುರುಕ್ಷೇತ್ರ ದಿಬ್ಯತೀರ್ಥಂಗಳಲು ಸಾಸಿರ ಕಪಿಲೆಗಳಂ ಸಾಸಿರ ಬ್ರಾಹ್ಮಣ

೭೫. ರ್ಗ್ಗಂ ಸಾಸಿರತಪೋಧನರ್ಗ್ಗಳಂಕಾರಸಹಿತಂ ಕೊಟ್ಟ ಪುಣ್ಯದಫಳಂಗಳಕ್ಕು || ಯಿನ್ತೀ ಧರ್ಮ್ಮಂಗಳಂ ಕಿ

೭೬ ಡಿಸಿದವರಿಗೆ ಗಂಗೆ ವಾರಣಾಸಿ ಕುರುಕ್ಷೇತ್ರ ಪ್ರಯಾಗೆಯಗ್ಫ್ಯತೀರ್ತ್ಥಂಗಳಲು ಸಾಸಿರ

೭೭. ಕಪಿಲೆಗಳಂ ಸಾಸಿರಬ್ರಾಹ್ಮಣರುಮಂ ಸಾಸಿರ ತಪೋಧನರುಮಂ ಕೊನ್ದ ಮಹಾಪಾತಂಕಗಳವರಿಗಕ್ಕು ||

೭೮. ಮತ್ತಂ ನಾಲ್ಕುಂ ನಾಡುಗಳುಂ ನೆರೆದಾವನಾಡಲು ಹೇಱಿದಡಂ ಕೋಣ ೧೦ ಎತ್ತು ೧೦ ಎತ್ತೆ ೧೦ ಅನ್ತು ೩೦

೭೯. ಕ್ಕಂ ಹಾರಿಕಾಯ ಸುಂಕಮಂ ಶ್ರೀಕಲಿದೇವರಿಗೆಯಂಗಭೋಗ ಪೂಜೆಪುನಸ್ಕಾರಕ್ಕೆ ಮಾನ್ಯವಾಗಿ ಧ

೮೦. ರ್ಮ್ಮಕ್ಕೆ ಕೊಟ್ಟರ್ ||ಶ್ಲೋಕ|| ಸಾಮಾನ್ಯೋಯಂ ಧರ್ಮ್ಮಸೇತುರ್ನೃಪಾಣಾಂ ಕಾಲೇ ಕಾಲೇ ಪಾಲನೀಯೋ

೮೧. ಭವದ್ಭಿಃ | ಸರ್ವ್ವಾನೇತಾನ್ ಭಾವಿನಃ ಪಾರ್ತ್ಥಿವೇನ್ದ್ರಾನ್ ಭೂಯೋ ಭೂಯೋ ಯಾಚತೇ ರಾಮಚಂದ್ರಃ || ಸ್ವದ

೮೨. ತ್ತಾಂ ಪರದತ್ತಾಂ ವಾ ಯೋ ಹರೇತಿ ವಸುನ್ಧರಾಂ ಷಷ್ಠಿರ್ವರ್ಷಸಹಸ್ರಾಣಿ ವಿಷ್ಟಾಯಾಂ ಜಾಯತೇ ಕ್ರಿಮಿಃ [II*]

ಸೌ.ಇ.ಇ IX, ಭಾಗ I, ನಂ. ೨೯೬

೩. ಬಸವೇಶ್ವರ ದೇವಾಲಯದ ದಕ್ಷಿಣ ಭಾಗದಲ್ಲಿ

ಶಾಸನದ ಮುಂಭಾಗ

೧. ಓಂ ನಮಶ್ಯಿವಾಯ (||) ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರಚಾರವೇ | ತ್ರೈಳೋಕ್ಯನಗರಾರಂಭ ಮೂಲಸ್ತಂಭಾಯ ಶಂಭವೇ ||

೨. ಜಯಂತಿ ಭುವನಕರ್ತ್ತಾ ದುರ್ಧರಾಘೌಘಹರ್ತ್ತಾ ಸಕಲಸುರವರಿಷ್ಠಃ ಸನ್ತತೌದಾರ್ಯ್ಯನಿಷ್ಠಃ | ಪರಮಸುಖಸುಮೂರ್ತ್ತಿರ್ದ್ದೇವ

೩. ತಾಚಕ್ರವರ್ತ್ತಿಃ | ಇತಿ ಸುರವರಬ್ರಿಂದಸ್ತೋತ್ರಪಾತ್ರಂ ನಮಾಮಿ (||*) ಶ್ರೀಮದಮನರೇನ್ದ್ರಯಕ್ಷ ಸ್ತೋಮಾರ್ಚ್ಚಿತಚರಣನವನಿವನವಹ್ನಿಮ

೪. ರುದ್ವ್ಯೋಮಾತ್ಮೇಂದ್ವಿನತನುವಿಂಗೀ ಮುಂಮುರಿದಣ್ಡದಿಷ್ಟಮಂ ಗವಱೀಶಂ || ಸ್ವಸ್ತಿ ಸಮಸ್ತ ಭುವನಾಶ್ರಯ ಶ್ರೀ ಪೃಥ್ವೀವಲ್ಲಭಂ ಮಹಾರಾಜಾಧಿರಾಜ

೫. ಕಳಚುರ್ಯ್ಯಕುೞಕಮಳಮಾರ್ತ್ತಣ್ಡಂ ಶ್ರೀಮತ್ಯಂಖವರ್ಮ್ಮದೇವಚಕ್ರವರ್ತ್ತಿ ವಿಜಯರಾಜ್ಯಮುತ್ತರೋತ್ತರಾಭಿವೃದ್ಧಿ ಪ್ರವರ್ದ್ಧಮಾನಮಾಚನ್ದ್ರಾ

೬. ರ್ಕ್ಕತಾರಂಬರಂ ಸಲುತ್ತಮಿರೆ ಕಲ್ಯಾಣಪುರದ ನೆಲೆವೀಡಿಯೊಳು ಸುಖಸಂಕಥಾವಿನೋದದಿಂ ರಾಜ್ಯಂಗೆಯ್ಯುತ್ತಮಿರಲಿತ್ತಲು || ಶ್ರೀಜಂ

೭. ಬೂದ್ವೀಪಲಕ್ಷ್ಮೀವದನ ತಿಳಕಮಿರ್ಪ್ಪಂತೆ ಚೆಲ್ವಾಗಿ ಲಕ್ಷ್ಮೀಭಾಜಂ ಶ್ರೀತುಂಗಭದ್ರಾಹ್ವಯ ಸುರನದಿಯಿನ್ತೆ (೦*) ಕ್ಕಲೊಪ್ಪುತ್ತಮಿರ್ಕ್ಕಂ ರಾ

೮. ಜೀವೋತ್ಕೀರ್ಣ್ನಷಂಡಪ್ರತತಿಗಳಿನಶೋಕಾಮ್ರ ಪುನ್ನಾಗ ತಾಳೋರ್ವ್ವಿಜಾನೀಕಂಗಳಿಂ ಕಿಕ್ಕಿಱಿಗಿಱಿದು ಜಗತ್ಸೇವ್ಯ ಮತ್ಯನ್ತಭಬ್ಯತಿಳಿಗೊಳದಿಂ ಮಡಲ್ತು ತ

೯. ಳಿತಾರಮೆಯಿಂ ನೆಱೆ ಪೂತು ಕಾಯ್ತು ಪಣ್ತೆಳೆಗೆ ವಿಳಾಸಮಪ್ಪ ವನದಿಂ ಪಥಿಕರ್ಗ್ಗೆ ತೃಷಾಶ್ರಮ ಕ್ಷುಧಾರವಳಿಯನಂದಾಗಲೀಯವನಾವಾರ್ಗ್ಗವೆನಲ್ಕಡುರಂ

೧೦. ಯ್ಯಮಾಗಿ ಕಣ್ಗೊಳಿಸುವ ಬಲ್ಲಕುಂದೆವೆಸರಿನ್ದೆಸೆವಾ ಸೆವಾ ವಿಷಯಾನ್ತರಾಳದೊಳು || ಬಳೆದು ಮಡಲ್ತ ಶಾಳಿವನದಿಂ ಬೆಳದಾಗಸಮನ್ತುಡುಂಕುತುಂ

೧೧. ಗಿಳಿಗಳ ಪಿಣ್ಡಿನಿನ್ದೆಸೆವ ಕೆಯ್ಯ್ವಲದಿಂ ಮುಗಿಲುದ್ದವಾಗಿ ಮೂವಳಿಸಿದ ಕೋಟೆಯಿಂ ಧನದ ಧಾನ್ಯದ ಸೊಮ್ಮಿನ ಸೊಕ್ಕಿನಿನ್ದಮಾರ್ಗಳದೊಮ್ಮ ನಮ್ಮೊ

೧೨. ಳೆಂಬ ಕುಡಿಯೊಕ್ಕಲ ಮಕ್ಕಳಿನೂರ್ಗ್ಗಳೊಪ್ಪುಗು || ಆ ನಾಳ್ಗೆ ರಾಜಧಾನಿ ಧರಾನಾರೀಹಾರಲುಳಿತ ನಾಯಕಮಣಿವೋಲ್ನಾನಾರತ್ನಾಕೀರ್ಣ್ನ

೧೩. ನಗಾನೀಕದ ಬಳಸಿನಿಂದ ಕುರುಗೋಡೆಸಗು || ಮತ್ತ ಮೆನ್ತಿರ್ದ್ದುದೆಂದೆಡೆ || ಕುಲಗಿರಿಗಳ್ಗೆ ಮೇರುಗಿರಿಯಿರ್ಪ್ಪವೊಲಿರ್ದ್ದುದು ತಾಂ ನದೀನದಾವಳಿಗೆ

೧೪. ಪಯಃಪಯೋಧಿ ನೆಗಳ್ದಿರ್ಪ್ಪವೊಲಿರ್ದ್ದುದು ತಾರಕಾಸಮಾಕುಳತೆ ಹಿಮಾಂಶುಬಿಂಬಮೆ ಸದಿರ್ಪ್ಪವೊಲಿರ್ದ್ದುದಾ ವಸುನ್ಧರಾಲಲನೆಗೆ ವಕ್ತ್ರಪಂಕರುಹ

೧೫. ಮಿರ್ಪ್ಪವೊಲಿರ್ದುದು ನೋರ್ಪ್ಪಡಾ ಪುರ || ಆ ಪುರದೆ || ನಳನಳಿಸುತ್ತಮಿರ್ಪ್ಪ ಲತೆಯಿಂ ಪರಿಪಕ್ವಫಳಪ್ರಚಾರದಿಂ ಬಳಬಳ ಬಳ್ಕುವಾಂಬ್ರವನದಿನ್ದತಿನಿರ್ಮ್ಮ

೧೬. ಳ ಪದ್ಮಷಂಡದಿಂ ತಿಳಕ ತಮಾಳ ವಕುಳದೃಮಲೋಧ್ರಲವಂಗಭೂರುಹಾವಳಿಗಳಿ ನೀಕ್ಷಿಪರ್ಗ್ಗತಿ ಮನೋಹರವಲ್ತೆ ಬಹಿಃಪುರಂ ಕರಂ | ಅಲ್ಲಲ್ಲಿಗೆ ತಿಳಿಗೊಳ

೧೭. ನುಂ ಮಲ್ಲಿಗೆಯುಂ ಮಾಧವೀಲತಾಮಣ್ಡಪಮುಂ ಪಲ್ಲವಿತಚೂತವನಮುಂ ಸಲ್ಲಲಿತಂ ನೋಡಲೆತ್ತಲುಂ ಪೊಱವೊಳಲೊಳ್ | ಅಂಚೆಗಳಿಂಚರಮುಂ ಸುತ್ತು ಚೆಲ್ವೆನಿ

೧೮. ಸಿರ್ದ ಗಂಧಶಾಲಿಗಳೇಂ ಮತ್ತಂ ಚಕ್ರವಾಕಹಂಸೀಸಂಚರದಿಂದೆಸೆವ ಬಹುತಟಾಕ ದಿನೆಸೆಗುಂ || ಉರವಣಿಯಿಂದ ಬಂದ ಮಗಧಾಂಧ್ರಕಳಿಂಗ ಚಳುಕ್ಯ ಪಾಂಡ್ಯ ಗೂರ್ಜ್ಜರ

೧೯. ರೆನಿಪಗ್ಗದಣ್ನಲೆಗಳೆನ್ನೊಳೆ ಭಂಗಮನಾಂತು ಪೋದರಾರ್ದೊರೆಯೆನಗೆಂಬಹಂ ಕೃತಿಯಿನುನ್ನತಿ ವೆತ್ತುದೆನಲ್ಕೆ ಪೆರ್ಚ್ಚಿಯಂಬರಮನದಾದಗಳ್ಳಿಱಿಗುಮೇವೊ

೨೦. ಗಳ್ವೆಂ ಕುಱುಗೋಡ ಕೋಟೆಯಂ | ಧನದಿಂ ಧನದನಿನಗ್ಗಳಮೆನಿಸುವ ಪರದರಿನಮೂಲ್ಯರತ್ನಂಗಳಿ ನತ್ಯನುಪಮವಿಚಿತ್ರವಸ್ತ್ರಾದ್ಯನೇಕದಿಂದೊಪ್ಪುಗು ವಣಿಗ್ವಾಟಂಗಳ್ ವಿವಿಧೋ

೨೧. ತ್ತುಂಗಲತ್ಸುಧಾಧವಳಸಂಕಾಶಾಚ್ಛ್ಯಸುಚ್ಛಾಯೆಯಿಂ ಭುವನಾಳಂಕೃತಮಪ್ಪ ದೇವಭವನಾನೀಕಂಗಳಿಂ ತರ್ಕ್ಕಶಾಸ್ತ್ರವಿವಾದಂಗಳಿನುದ್ಘವೇದರವದಿಂದಂ ಹೋಮಧೂಮಂ(ಗ)ಳಿಂ

೨೨. ದವನೀಶೋಭಿತಮಾಗಿ ಕಣ್ಗೊಳಿಸುಗುಂ ವಿಪ್ರೇಂದ್ರವಾಟಂಗಳು || ಸ್ಮರರಾಜಧಾನಿಯೊ ಸುರವನಿತಾ ಜನ್ಮಭೂಮಿಯೋ ಚೆಲ್ವಂಗಾಗರಮೋ ಪೇಳೆಂಬಿನೆಗಂ ಕರಮೆ

೨೩. ಸೆಗುಂ ಸೂಳೆಗೇರಿಗಳು ತತ್ಪುರದೊಳ್ || ಆ ಪುರಮನಾಳ್ವನಖಿಳಕಳಾಪರಿಪೂರ್ಣ್ನಂ ಫಣೀಂದ್ರಕುಲ ಸಂಭವನಾಜ್ಞಾಪರನುದ್ಘಸುಚಾರಿತ್ರೋಪಮಿತಂ ವಿಶದ

೨೪. ಕೀರ್ತ್ತಿವಿಜಯವಿನೋದಂ || ಸ್ವಸ್ತಿ ಶ್ರೀಸಿಂದವಂಶಪ್ರಣುತಕಮಳಮಾರ್ತ್ತಂಡನು ಗ್ರಾರಿಮಸ್ತನ್ಯಸ್ತಾಂಘ್ರಿದ್ವಂದ್ವನಾರಾಧಿತನುಕಲಿದೇವಾಂಪದ್ಮಂ ಧರಿತ್ರೀಪ್ರಸ್ತು

೨೫. ತ್ತ್ಯಂ ಶತ್ರುಭೂಭ್ರಿಜ್ಜಯಪಟುಪಟಹಾಘೋಷಣ ಬ್ಯಾಘಚಿಹ್ನಂ ವಿಸ್ತೀರ್ಣ್ನೋರ್ವ್ವೀ ತಳೇಶಂ ನೃಪಕುಳ ತಿೞಕಂ ರಾಚಮಲ್ಲಕ್ಷಿತೀಶಂ || ಸಿತಗರಗಂಡ

೨೬. ನುತ್ಸವಕರಂಡನವಂ ಕದನಪ್ರಚಂಡನಾಶ್ರಿತಸುರಭೂಜನುಜ್ಜಳಿತತೇಜನನೂನ ಸುಖೈಕಭಾಜನರ್ಚ್ಚಿತ ಶಿವಪಾದನಾಹವವಿನೋದನಶೆಷಜನಪ್ರಮೋದನಾನತ

೨೭. ರಿಪುಮಂಡಳೇಶ್ವರನೀಳೇಶ್ವರ ಭೋಗವತೀಪುರೇಶ್ವರ || ಉದ್ವೃತ್ತಮಂಡಲಿಕತಾರ ಕಷಡಾನನಂ ವಿದ್ವಡ್ಬೞಧ್ವಂಸ ಸಬಳಪಂಚಾನನಂ ಅಸದಳಂಕಾರಾ (ಂ)ನ್ಯನಾರೀ ವಿದೂರಂ ಅ

೨೮. ಸದೃಶಮಹಾಘೋರಸಂಗ್ರಾಮಧೀರಂ ವಿಪುಲವಿದ್ವದ್ವಿನುತ ಸಾಹಸೋತ್ತುಂಗಂ ನೃಪತಿಳಕ ಸಾಯಿದೇವನ ವೀರಸಿಂಗಂ ಕಲಿದೇವದಿಬ್ಯಪದಪಂಕಜಾರಾಧಕಂ | ಬಲ

೨೯. ವದರಿಭೂಪಾಳಕುಳಸೈನ್ಯಸಾಧಕಂ || ಇಂತೆನಿಸಿ ನೆಗಳ್ದಧಾತ್ರೀಕಾಂತೋತ್ತಮ ರಾಚಮಲ್ಲನೃಪನನು ಮತದಿಂದ ತತ್ಪುರಮೂಲಸ್ತಂಭಂ ತಾಮೆನಿಸಿರ್ದ್ದರ

೩೦. ಲ್ತೆ ಮು (ಂ) ಮುರಿದಂಡಂ || ಅವರ ಪ್ರತಾಪಮೆಂತೆದಡೆ || ಕಡುಮುಳಿಸಿಂದೆ ಬಯ್ದಡೆ ದಿಟಂ ಬಿಡಿತಾನೆ ಕನಲ್ದುಬಯ್ದು ನಾಳ್ದುಡಿದಡೆ ವೋಲೆಯಂ

೩೧. ಜವನುಮಾತನ ಬಾಳ್ಕೆಯ ಲೆಕ್ಕದೋಲೆಯಂ ತೊಡದು ಬಿಸುಟ್ಟನೆಂದೆಱಿವುದೆನ್ದಡವೇಂ ಪೊಗೞ್ದಪ್ಪನೇಂ ಬಣ್ನಿ ದಿದಪನೇನನಾಪುರದ ವೀರಬಣಿಂಜಗರುಗ್ರತೇಜಮಂ ನೇರಿದರಲ್ಲದು

೩೨. ದ್ಧತರನೀಗಳೆ ಸಿಕ್ಷಿಪೆಮೆಂದು ನಿಂದಾರಭಸಪ್ರಭಾವಮನದೆವೆಸಗೊಂಡಪೆಯಣ್ನ ಲೋಕಸಂಹಾರಕ ಮೂರ್ತ್ತಿ ರುದ್ರನಿಟಿಳಾಕ್ಷಿಗಮಾಪ್ರಲಯೋಗ್ರವಹ್ನಿಗಂ ಮಾರಿಯ

೩೩. ರಿಗಂ ಜವನಂ ಬಾರಿಗಮಗ್ಗಳಮಾಗಿ ತೋಱುಗುಂ || ರಗಳೆ || ಶ್ರೀಮದಾರ್ಯ್ಯಾನಾಮಪುರ ಮುಖ್ಯ ಭೂತರೆನಿಪಯ್ನೂರ್ವ್ವರಿಂದೊದವಿದನ್ವಯಾಯಾ

೩೪. ತರುಂ || ಭಗವತೀಲಬ್ಧವರದಾನಪ್ರಸಾದರುಂ | ಅಗಣಿತಮಹಾತ್ಸೌಖ್ಯಸಂಪತ್ಪ್ರ ಮೋದರುಂ | ಚಕ್ರಧರದತ್ತಚಕ್ರಧ್ವಜವಿರಾಜರುಂ | ಪ್ರಾರ್ತ್ಥಿತಾರ್ತ್ಥಿಪ್ರಕರ

೩೫. ಸುರರಾಜಭೂಜರುಂ | ಸಾಹಸೋತ್ತುಂಗರುಂ | ಹರಪಾದಭೃಂಗರುಂ | ಚಲದಙ್ಕರಾಮರುಂ ಬಲಗರ್ವ್ವಭೀಮರುಂ | ಅಸಹಾಯಸೌರ್ಯ್ಯರುಂ ಮೇರುಗಿರಿಧೈರ್ಯ್ಯರುಂ | ಏಕೈ

೩೬. ಕವೀರರುಂ ಲೋಕಯ್ಯಸೂರರುಂ ಪರವಧೂದೂರರುಂ ಭುವನನಿಸ್ತಾರರುಂ | ಚಲದರ್ತ್ಥಿಗಣ್ಡರುಂ ಸಂಗ್ರಾಮಶೌಣ್ಡರುಂ ಅಧಿಕಪ್ರಚಣ್ಡರುಂ ನುಡಿದನ್ತೆಗಣ್ಡರುಂ |

ಶಾಸನದ ಹಿಂಭಾಗ

೩೭. ಶರಣಾಗತರಕ್ಷಕರ್ದ್ದುಷ್ಟಜನಶಿ‌ಕ್ಷಕರು (ಂ) ಸಿಡಿಲ ನಡಿಗಿಸುವರ್ತ್ತೋಡರ್ದರಂ ಕೊಲಿಸುವರ್ | ಕೀರ್ತ್ತಿ ನಾರಾಯಣರು | ಉದ್ಯಮಪರಾಯಣರ್ದ್ದುಷ್ಟರ್ಗ್ಗೆ ದುಷ್ಟರ್ | ಸಿ

೩೮. ಷ್ಟರ್ಗ್ಗೆ ಸಿಷ್ಟರುಂ ಗವಱೀಶದಿಬ್ಯಚರಣಾಂಬುಜಾರಾಧಕರ್ಭ್ಬುವನದೊಳು ದುಷ್ಟರಿಪುಕುಳಸೈನ್ಯಸಾಧಕರ್ ಅಭಿನವದ್ವಾರಾವತೀಪುರಮಿದೆನಿಸಿರ್ದ್ದ | ಕುಱುಗೋಡ

೩೯. ಪಟ್ಟಣಸ್ವಾಮಿಗಳ್ಕೂಡಿೞ್ದು ||ಕ|| ಅನ್ತೊಸೆದಿರ್ದ್ದು ಮಾಡಿ ಗವಱೇಶ್ವರದೇವರ ಸುಪ್ರತಿಷ್ಠೆಯಂ ಸಂತೋಸದಿಂ ತದೀಶ್ವರನೆ ತಾರನಗೇಂದ್ರಮನರ್ತ್ಥಿಯಿಂದೆ ಮೂಱುಂ ತೆಱನಾಗಿ ನಿ

೪೦. ರ್ಮ್ಮಿಸಿದನೊ ಮುದದಿಂ ನೆಲಸಿೞ್ದನಕ್ಕುಮೆಂಬನ್ತೆಸೆಯಲು ತ್ರಿಕೂಟಮನೆ ಮಾಡಿಸಿದರ್ಪ್ಪರಮಾನು ರಾಗದಿಂ ||ವ|| ಅನ್ತಾ ತ್ರಿಕೂಟದ ಪ್ರಥಮಸ್ಥಳದ ಶ್ರೀಮದ್ಗ ವಱೀಶ್ವರದೇವರ್ಗ್ಗೆ

೪೧. ನಿತ್ಯನೈವೇದ್ಯಕ್ಕುಂ ನಂದಾದೀವಿಗೆಗುಂ ಜೀರ್ಣ್ನೋದ್ಧಾರಕುಂ ಶ್ರೀಮದ್ಗವಱೇಗಳೆಲ್ಲ ಕೂಡಿೞ್ದು ಶ್ರೀಮನ್ಮ ಹಾಮಣ್ಡಳೇಶ್ವರಂ ರಾಚಮಲ್ಲದೇವಪ್ರಮುಖವಾಗಿ ಸಕವರ್ಷ ೧೦೯೯ ನೆಯ

೪೨. ಹೇಮಳಂಬಿಸಂವತ್ಸಂರದದಾಷಾಢ ಬಹುಳ ಕೃಷ್ಣಾಂಗಾರಚತುೞ್ದಶಿ ಮಹಾತಿಥಿಯಂದು ಶ್ರೀಮಹಾದೇವ ಸನ್ನಿಧಾನದಲು ಧಾರಾಪೂರ್ವ್ವಕಂ ಮಾಡಿ ಕೊಟ್ಟ ಕೆಯಿ ಕುಱು

೪೩. ಗೋಡ ಹೊಲದಲು ಮಂಚಿಮರಸನ ದೆವರ ಕೆಯ್ಯಿಂ ಮೂಡಲು ಹಟ್ಟಣದ ದಾರಿಯಿಂ ತೆಂಕಲು ತಕ್ಕಿಲು ಒಡ್ಡಿಹಟ್ಟಿಯ ಗಡಿಂಬದ ಘಳೆಯಲು ಮತ್ತರು | ಮತ್ತಂ ಮುದ್ದೇಶ್ವರ ದೇವರ ತೋಟ

೪೪. ದಿಂ ತೆಂಕಲು ಭೋಗೇಶ್ವರದ ತೋಂಟದಿಂ ಬಡಗಲು ಕೊಟ್ಟ ಹೂದೋಂಟ ೧ ಅಲ್ಲಿಂ ತೆಂಕಣ ಮೂಡಣ ದೆಸೆಯ ಹೂದೋಂಟ ೧ ಪರದೇಶಿಗಳು ಅಳವ ತೂಗುವಯ್ಸಂಬರಂಗಳಲುಂ ಏಣಿಸುವ ದವ

೪೫. ಸಂ ಮಾಱಿದಲ್ಲಿ ಕೊಟ್ಟ ಹೊಂಗೆ ಹಾಗ ೧ ಮುಮ್ಮರಿದಣ್ಡಂಗಳು ಭಣ್ಡವಂ ತೂಗಿಸಿ ಕೊಂಡಲ್ಲಿ ಕೊಟ್ಟ ಬೆಳೆ ಹೊಂಗೆ ಹಾಗ ೧ ನಾನಾದೇಶಿಗಳು ಸಮಸ್ತದವಸವಂ ಮಾಱಿ ದಲ್ಲಿ ಹೊಂಗೆ ಕೊಟ್ಟ ಕಾಣಿ ೨ ಮತ್ತಂ

೪೬. ಮಾಱೆದ ದವಸದಲು ಕೊಟ್ಟಲ್ಲಿ ಹೊಂಗೆ ಮಾನ ೧ ಪಟ್ಟಣದ ನಖರುಗಳು ಕೊಂಡಲ್ಲಿ ವ ೨೧ ಅಂಗಡಿಯಲು ಹಾನೆಯಲುಂ ಸಟ್ಟುಗ ಭತ್ತ | ಸಾಸಿರ್ವ್ವರುಂ ಹೇಱಿಂಗೆಲೆ ೧೦೦ ಹೊಱಿಗೆ ೫೦ ಕೊಟ್ಟರು

೪೭. ಮತ್ತಂ ಲಾಡ ಚೋಳ ಮಲಯಾಳ ತೆಲುಂಗ ಕ(ಂ)ನ್ನಡ ಸಮಸ್ತನಾನಾದೇಶಿಗಳು ಪೇಳಾವಿಗ ಸೆಟ್ಟಿಯದ್ದೇವರ್ಗ್ಗೆ ಕೊಟ್ಟಾಯ ಕುದುರೆಗೆ ಹಾಗ ೧ ದೇವರ ಪುರದೊಳಗೆ ನನ್ದಾದೀವಿಗೆಗೆ ನಾಡುಗಳ್ಕೊಟ್ಟ

೪೮. ಗಾಣ ೨ ಭೈರವದೇವರ ದೀವಿಗೆಗೆ ಗಾಣ ೧ ಕಮ್ಮಟದಲ್ಲಿ ಹೋವ ಹೊಂಗೆ ದಳಕೆ ಪೆ ೨ ಕಾ.. ಮತ್ತಂ ಮೆಣಸಳದಲ್ಲಿ ಹೊಂಗೆ ಮಾನ ೧ ದಳಕೆ ೪ ಕೊಂಬು ಬೆಲ್ಲಕೆ ನೂಱು ಕೊಂಡು

೪೯. ಮತ್ತಮಾ ತ್ರಿಕೂಟದೊಳು ಶ್ರೀಮನ್ಮಲ್ಲಿಕಾರ್ಜ್ಜುನದೇವರ ಸುಪ್ರತಿಷ್ಠೆಯಂ ಮಾಡಿದ ಶ್ರೀಮನ್ಮಹಾವಡ್ಡಬ್ಯವಹಾರಿ ಮಲ್ಲಿಸೆಟ್ಟಿಯನ್ವಯಮೆಂತೆದೆಡೆ ||

೫೦. ವ್ರಿತ್ತ || ಸರಧಿಗಭೀರನೂರ್ಜ್ಜಿತವಿಭೂತಿಕುಲಜಾತನುದಾರನಪ್ಪ ಭಾಸುರಮಣಿ ಬಾಗಿಸೆಟ್ಟಿಯ ಸುತಂ ಸುಜನಾಗ್ರಣಿ ಸೂರಿಸೆಟ್ಟಿ ಸೌಂದರತನು

೫೧. ರೇಚಿಸಿಟ್ಟಿಯೆನಿಸಿರ್ದ್ದವರಗ್ರಜನುದ್ಘಸದ್ಗುಣಾಕರನೆನೆ ಮಲ್ಲಿಸೆಟ್ಟಿ ನಿಜವಂಶ ಸುಧಾರ್ಣ್ನವಪೂರ್ಣ್ನ ಚಂದ್ರಮಂ || ಭೂವಿನುತ ಮಲ್ಲಿಕಾರ್ಜ್ಜುನದೇವರ ಸಮ್ಯ ಕ್ಪ್ರತಿಷ್ಠೆಯಂ ಮಾಡಿ

೫೨. ಸಿ ಸದ್ಭಾವದಿನೆತ್ತಿಸಿ ವಿನುತಶಿವಾವಸಥಮನುತ್ತರಾಭಿಮುಖದಿನ್ದೆಸೆಯಲ್ || ಆ ಉತ್ತರಾಭಿಮುಖದ ಮಲ್ಲಿಕಾರ್ಜ್ಜುನದೇವರ್ಗ್ಗೆ ನಿತ್ಯನೈವೇದ್ಯಕ್ಕಂ ನನ್ದಾದೀವಿಗೆಗಂ ಜೀರ್ಣ್ನೋದ್ಧಾರಕ್ಕಂ ಶ್ರಿಮನ್ಮಹಾ

೫೩. ಮಂಡಳೇಶ್ವರ ರಾಚಮಲ್ಲಪ್ರಮುಖವಾಗಿ ಮಲ್ಲಿಸೆಟ್ಟಿಯಾ ತಿಥಿಯಲು ದೇವರ್ಗ್ಗೆ ಧಾರಾಪೂರ್ವ್ವಕಂ ಮಾಡಿ ಕೊಟ್ಟ ಕೆಯಿ ಕುಱುಗೋಡ ಹೊಲದಲು ಮಂಚಿಮರಸನ ಕೆಱೆಯ ಹಿಂದೆ ಸಿರಿಗೆಱೆಯ ದಾರಿಯಿಂ

೫೪. ಮೂಡಲು ಮುದ್ದೇಶ್ವರದೇವರ ಕೆಯ್ಯಿಂ ತೆಂಕಲು ಮಂಜೇಶ್ವರದ ಕೆಯ್ಯಿಂದಂ ಹಟ್ಟಣದ ದಾರಿಯಿಂದಂ ಬಡಗಲು ಅಂಡಗೆಱೆಯ ದಾರಿಯಿನ್ತಂಕಲು ಕಿಸುಕಾಡು ಮತ್ತರು ೨ ತಕ್ಕಿಲು ಮತ್ತ್‌ರ್ ೨ ಪರಂಜ್ಯೋತಿದೇವರ

೫೫. ತೋಂಟದಿಂ ಬೆನಕನ ತೋಂಟದಿಂ ಪಡುವಲು ಹಳ್ಳದಿಂ ಬಡಗಲು ಕೊಟ್ಟ ಹೂದೋಟ ೧ ದೇವರ ಪುರದೊಳಗೆ ನಂದಾದೀವಿಗೆಗೆ ಗಾಣ ೧ ಸಮಸ್ತನಾನಾದೇಶಿ ಪೇಳಾವಿಗ ಸೆಟ್ಟಿಯರ್ದ್ದೇವರ್ಗ್ಗೆ ಕೊಟ್ಟಾ

೫೬. ಯ ಕುದುರೆಗೆ ವೀಸ ೨ ಕಾಣಿ ೨ ಮತ್ತಂ ಮಸ್ತದವಸದಲುಂ ಕೊಟ್ಟಲ್ಲಿ ಹೊಂಗೆ ಸೊಳಸ ೨ ಕೊಂಡಲ್ಲಿಸೊಳಸ ೨

೫೭. ಮತ್ತಮಾ ತ್ರಿಕೂಟದೊಳ್ || ವೃ || ಶ್ರೀಮತ್ಕೌಂಡಿಲ್ಯಗೋತ್ರೋದ್ಭವನೆನಿಸಿದ ಮಾರ್ತ್ತಣ್ಡದೇವಂಗೆ ಲಕ್ಷ್ಮೀಪ್ರೇಮಾಳಂಕಾರ ಚಾಕಾಂಬಿಕೆಗುದಿಯಿಸಿದಗ್ರಾತ್ಮಜಂ ಸಾಯಿದೇವಂ

೫೮. ಶ್ರೀಮನ್ತಂ ರೇಚದೇವಂ ಸಕಳಗುಣಯುತಂ ಕಾಳಿದಾಸಂ ಪ್ರಮುಖ್ಯಂ ಶ್ರೀಮನ್ಮುದ್ದೇಶ್ವರಾಂಘ್ರಿದ್ವಯನುತಸುಮನೋರಂಜಿತಂ ಮುದ್ದರಾಜಂ || ಸ್ವಾಮಿ ವೆಸರೆಸವ ವಣಿಜ

೫೯. ಸ್ವಾಮಿಗಳಯ್ನೂರ್ವ್ವರೊಸೆದು ಕೊಟ್ಟಣ್ನಗೆ ಪ್ರಾಮಾಣ್ಯಮಾಗೆ ಗೌಡಸ್ವಾಮಿ ವೆಸರ್ವ್ವಡೆದ ಮುದ್ದರಾಜನೆ ಧನ್ಯಂ || ವಡ್ಡಾಚಾರವ ನುಡಿದಂದೆಡ್ಡವೆ ಪೊಗಳ್ವಂಗೆ ಗುಡ್ಡ ಶಾಸ್ತ್ರಾನ್ವಿತಸಂವಡ್ಡಿಯನೆ

೬೦. ನ್ದು ಪೊಗಳ್ವುದು ವಡ್ಡಬೃವಹಾರಿ ಮುದ್ದನಂ ಧರೆ ಸತತಂ || ಬಲದೇವ ನಿನ್ನ ಕರುಣದ ಬಲವುಂಟೆನಗೆಂದು ಸಾಯಿದೇವನ್ನಂ ಬಲು ಸಲೆ ತೊತ್ತುಗೊಣ್ಡದಯಕೇಂ ಸಲೆವುಂಟೆ ಮುದ್ದುಲಿಂಗ ಸಿರಿಗಳಗೇಶಾ||

೬೧. ಹರ ಶರಣೆಂಬಂ ಭಕ್ತರ ಕರುಣವೆ ಶರಣೆಂಬ ಶಿವನಡಿಂಗರನೆಂಬಂ ಹಿರಿಯಣ್ನ ಸಾವಿದೇವನ ಪರಿಮಾನುಜ್ಞೆಯನೆ ತಾಳ್ದಿದಂ ಮುದ್ದರಸಂ || ಕರಮರ್ತ್ಥಿಯಿನ್ದೆ ಮುರ್ದ್ದೇಶ್ವರದೇವರ ನಿತ್ಯನೈವೇದ್ಯಕ್ಕಂ ನನ್ದಾದೀವಿಗೆಗಂ ಜೀರ್ಣ್ನೋದ್ಧಾರಕ್ಕಂ ಶ್ರೀಮನ್ಮಹಾಮಂಡಳೇಶ್ವರಂ ರಾಚಮ

೬೩. ಲ್ಲದೇವಪ್ರಮುಖವಾಗಿ ಮುದ್ದರಸನಾ ತಿಥಿಯಲು ಧಾರಾಪೂರ್ವ್ವಕಂ ಮಾಡಿಕೊಟ್ಟ ಕೆಯಿ ಕುಱುಂಗೊಡ ಹೊಲದಲು ಸಿರಿಗೆಱೆಯ ದಾರಿಯಿಂ ಮೂಡಲು ಮಲ್ಲಿಕಾರ್ಜ್ಜುನ ದೇವರ ಕೆಯ್ಯಿಂ ಬಡಗಲು ಪರಂ

೬೪. ಜ್ಯೋತಿದೇವರ ಕೆಯ್ಯಿಂ ತೆಂಕಲು ಅಭಿನವಸಿದ್ಧನಾಥದೇವರ ಕೆಯ್ಯಿಂ ಪಡುವಲು ಕಟಿಕೂರದಾರಿಯಲಿ ಕಿಸುಕಾಡು ಮತ್ತರ್ ೨ ತಕ್ಕಿಲು ಮತ್ತರ್ ೨ ಗವಱೇಶ್ವರದ ತೋಂಟದಿಂ ಬಡಗಲು ಹೂದೋಂಟ ೧ ದೇವ

೬೫. ರಪುರದೊಳಗೆ ನನ್ದಾದೀವಿಗೆಗೆ ಗಾಣ ೨ ಸಮಸ್ತನಾನಾದೇಶಿ ಪೇಳಾವಿಗಸೆಟ್ಟಿಯ ರ್ದ್ದೇವರ್ಗ್ಗೆ ಕೊಟ್ಟಾಯ ಕುದುರೆಗೆ ವೀಸ ೨ ಕಾಣಿ ೨ ಸಮಸ್ತದವಸಗಳಲುಂ ಕೊಟ್ಟಲ್ಲಿ ಹೊಂ

೬೬. ಗೆ ಸೊಳಸ ೨ ಕೊಂಡಲ್ಲಿ ಸೊಳಸ ೨

೬೭. ಮತ್ತಮನ್ತೆಲ್ಲರುಂ ಕೂಡಿರ್ದ್ದಾ ಮೂಱುಂ ಸ್ಥಾನದ ಪಾತ್ರಪಾವುಳಕ್ಕೆ ಶ್ರೀಮನ್ಮಹಾಮಂಡಳೇಶ್ವರಂ ರಾಚಮಲ್ಲದೇವಪ್ರಮುಖವಾಗಿ ಗವಱೇಶ್ವರದೇವರ ಮಲ್ಲಿಕಾರ್ಜುನದೇವರ ಮುದ್ದೇಶ್ವರದೇವರ

೬೮. ಸನ್ನಿಧಾನದಲಾ ತಿಥಿಯೊಳು ಧಾರಪೂರ್ವ್ವಕಂ ಮಾಡಿ ಕೊಟ್ಟಕೆಯಿ ಕುಱುಂಗೋಡ ಹೊಲದಲು ಕೊಂಚಗೆಱೆಯ ದಾರಿಯಿಂ ಮೂಡಲು ಕಲಿದೇವರ ಕೆಯ್ಯಿಂದಂ ಬಡಗಲು ಕೋಣೆಯ ಸಿದ್ಧನಾ

೬೯. ಥದೇವರ ಕೆಯ್ಯಿಂ ತೆಂಕಲು ನಡುವೆ ಕರಿವೂರ ದಾರಿಯಾಗಲು ಹಿರಿಯ ಕೋಲ ಗಡಿಂಬದಲು ಕಿಸುಕಾಡು ಮತ್ತರ್ ೯ ತಕ್ಕಿಲು ಮತ್ತರು ೧೦

೭೦. ಇಂತೀ ತ್ರಿಕೂಟದ ದೇವಸ್ಥಾನದ ಧರ್ಮ್ಮಕಾರ್ಯ್ಯವಂ ಶ್ರೀಮನ್ಮಹಾಮಣ್ಣಳೆಶ್ವರಂ ರಾಚಮಲ್ಲ ದೇವರಸನುಂ ಪಟ್ಟಣದ ಸಮಸ್ತಮುಮ್ಮರಿದಣ್ಡಂಗಳು ಉಭಯನಾನಾದೇಶಿಗಳುಂ ಪ್ರ

೭೧. ಮುಖದೇವಪುತ್ರಕರಾಗಿರ್ದ್ದು ದೇವಕಾರ್ಯ್ಯಂ ಪೂಜೆಪುನಸ್ಕಾರವಂಗಭೋಗ ರಂಗಭೋಗ ನಿತ್ಯನೈಮಿತ್ತಿಕಂಗಳಂ ಭಕ್ತಿಪೂರ್ವ್ವಕಂ ಸ್ವಧರ್ಮ್ಮದಿಂ ಪ್ರತಿಪಾಳಿಸಿ ನಡಸುವರು ||

ಸೌ. ಇ.ಇ.IX, ಭಾಗ ೧, ನಂ.೨೯೭