೪. ಕಲ್ಕತ್ತಾ ಇಂಡಿಯನ್ ಮ್ಯುಜಿಯಂನಲ್ಲಿರುವ ಶಾಸನ

೧ ಶ್ರೀಸ್ವಯಂಭುನಾಥಾಯನಮಃ || ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ | ತ್ರೈಳೋಕ್ಯ ನಗರಾರಂಭ ಮೂಲಸ್ತಂಭಾಯ ನಮಃ ||

೨. ಜಯತಿ ವಿಶದಕೀರ್ತಿ ಪ್ರಾತ್ಥೀತಾರ್ಥ ಪ್ರಪೂರ್ತ್ಥಿಃ ಸಕಳಭುವನವರ್ತ್ತಿ ದೇವತಾ ಚಕ್ರವರ್ತ್ತಿ | ವಿಗತ ದಿತಿಜ ದಂಭಃ ಪಾರ್ವ್ವತಿ ಪಾರಿರಂಭಃ

೩. ಪ್ರವಿನತ ವಿಧು (ಡು) ಶಂಭುರ್ದ್ದೇವ ಸ್ವಯಂಭೂಃ || ಯಸ್ಯೋದ್ವೃತ್ತ ಪುರತ್ರಯಸ್ಯ ವಿಜಯೇ ಬಾಳೇಕ್ಷಣಾಗ್ನ್ಯರ್ಚ್ಚಿಷಾಸ್ವಿದ್ಚಚ್ಯಂದ್ರಕಳಾ ಸರ್ವದ್ಭಿರಮೃತೈರುಜ್ಜೀವಿತಃ ಸಸ್ತುವನ್ || (|)

೪. (ಮೋ) ದೇ ದೇವರಶಿರಃ ಕರೋತಿ ನಿಕರಸ್ತಜ್ಜಾತರಾವೋದ್ಭಯುದ್ಗೌರ್ಯ್ಯಾಯಃ ಪರಿರಂಭಾಣೇಸ್ಮಿತ ಮುಖಸ್ತಸ್ಮೈನಮಃಶಂಭವೇ || ಗೋರಿ ಪೀಣತ್ಥಣತ್ಥತ್ಥಗಿದ ಘುಸಿಣದಿನ್ನೇಕ ವಣ್ಣೊ (ಣ್ಣು) ಗ್ಘವಚ್ಚೋ

೫. ಕಂದಪ್ಪೊ (ಪ್ಪು)ದ್ದಪ್ಪ ವಿಪ್ಪಾಳಣಣೈಣಿವುಣೋ ವಿಚ್ಚುರನ್ತತ್ತೈಚ್ಚೋ | ಗಿಬ್ಬಾಣೊ (ಣು) ಕ್ಕೇರರ ಖೋತಿಹು ವಣಭವಣಾರಂಭ ಸಂಬನ್ತಖಂಭೋಳಚ್ಚೀಣಾಹಪ್ಪಿಯೋ ಸೋ

೬. ಜೇ ಐಸಐಜಏ ನಮ್ಮ ಶಂಭೂಸ್ವಯಂಭೂ || ಶ್ರೀದೇವೀರಮಣ ಪರಂ (ಪ್ರ)ಣೂತ ಮಹಿಮಂ ಭೂಭೃತ್ಸುತಾವಲ್ಲಭಂ ಪಾದಾನಮ್ರ ಸುರಾಸುರೇಂದ್ರ ಮಕು

೭. ಟೋದ್ಯತ್ಯೋಣ ಮಾಣಿಕ್ಯರುಕ್ಪ್ರಾದುರ್ಭ್ಭೂತದಿಶಂ ಮನೋಮುದದೇ ಸದ್ಯೋಜಾತವಕ್ತ್ರಂ ಸ್ವಯಂಭೂದೇವಂ ನಮಗಾಗಳಂ ಕುಡುಗೆ ಭ

೮. ಕ್ರಿ ಶ್ರೀಯುಮಂ ಶ್ರೀಯುಮಂ ||ಉತ್ಸಾಹಂ| ವಿಳಸದಮರರಾಜಾ ರಾಜರಾಜ ದಿತಿಜ ರಾಜ ಸಂಕುಳ ವಿಶಾಲಮೌಳಿಘೃಷ್ಟ ಚಳನನಳಿನಯುಗ

೯. ಳಕಂ || ಸಳಿಳಧರಣಿ ಪವನ ಗಗನ ದಹನ ತರಣಿ ಶಶಧರಾತ್ಮಲಸದಷ್ಟಮೂರ್ತಿಶಂಭು ಕುಡುಗೆ ನಮಗಭೀಷ್ಟಮಂ ಪದಿನಾಲ್ಕುಂ ಭು

೧೦. ವನಂಗಳಂ ಪಡದು ತನ್ನಿಚ್ಛಾದಿ ಶಕ್ತಿತ್ರಯಾಸ್ಪದದಿಂದಂ ಪರಿಪಾಳಿಸುತ್ತಖಿಳಭೂತಬ್ರಾತದೊಳ್ ಜೀವಿತಾಭ್ಯುದಯಂ ಮಾಡಿದ ಶಂಭು ಭಕ್ತ

೧೧. ಜನತಾ ಚೇತಸ್ತನಾಗಿರ್ದು ಸಮ್ಮದದಿನ್ತಂನನೆ ತೋಱುತಿಕ್ಕೆ ಸತತಂ ಮನ್ಮಾಸಸಾಂ ಬೋಜದೊಳ್ || ಮಹಾಸ್ರಗ್ದರೆ || ಹಿಮವದ್ಧಾತ್ರಿ ಧ

೧೨. ರೇಂದ್ರಾತ್ಮಜೆ ಕಿಱುಪೆಱೆಯಂ ನೋಡೆ ಜೂಟಸ್ತಮಂ ತಾಂ ಕಮನೀಯಾಳೋಕದಿಂ ತನ್ನಯ ಪೆಱೆನೊಸಲೊಳ್ ನೀಳ್ದ ಬೆಳ್ದಿಂಗಳಿಂ ಪೂರ್ಣ್ಣಿಮೆಯಾಗಳ್ ದೇವ | ಬಾಳೇಂದು

೧೩. ವಕಳೆಯತಿಪೂಣ್ಣೇಂದುವಿಂದಾದುದೆಂಬುತ್ತಮ ಮುಗ್ಧತ್ವಕ್ಕೆ ಮೆಚ್ಚಿರ್ದತಿಶಯ ಮಹಿಮಂ ಶಂಭು ರಕ್ಷಿಕ್ಕೆ ನಮ್ಮಂ || ಕಡಲೇಳುಂ ದ್ವೀಪವೇಳುಂ ಕುಳನಾಗಚಯವೇಳುಂ ಸಮಾನವೇಷ್ಟಿಸಲ್ ಚೆಲ್ವೆಡೆ ಜಂ

೧೪. ಬೂದ್ವೀಪವಾದ್ವೀಪದ ಭರತಮಹೀಭೋಗದೊಳ್ನಾಡೆಯುಂನೋರ್ಪ್ಪಡೆ ಕ ಣ್ಗತ್ಯಂತ ಶೋಭಾವ ಹಮೆನೆ ನೆಗಳ್ದೀ ಕುಂತಳ ಕ್ಷಮಾತಳ ಶ್ರೀಗೊಡೆಯಂ ಚಾಳುಕ್ಯ ವಂಶೋತ್ಪಳ ವಿಕಸನ ಚಂದ್ರಂ ವಿಳಾ

೧೫. ಳಾಸಮಾರೇಂದ್ರಂ || ಮತ್ತಂ ತತ್ಪ್ರಶಸ್ತಿಯೆಂತೆಂದಡೆ || ಸ್ವಸ್ತಿ ಸಮಸ್ತಭುವನಾಶ್ರಯಂ ಶ್ರೀಪೃಥ್ವೀವಲ್ಲಭಂ ಮಹಾರಾಜಾಧಿರಾಜಂ ಪರಮೇಶ್ವರ ಪರಮಭಟ್ಟಾರಕಂ ಸತ್ಯಾಶ್ರಯ

೧೬. ಕುಳತಿಳಕಂ ಚಾಳುಕ್ಯಾಭರಣಂ ಶ್ರೀಮತ್ತ್ರಿಭುವನಮಲ್ಲ ವೀರಸೋಮೇಶ್ವರ ದೆವನುತ್ತರೋತ್ತರಾಭಿವೃದ್ಧಿಪ್ರವರ್ದ್ಧಮಾನಮಾಚಂದ್ರಾರ್ಕ್ಕತಾರಂ ಕಲ್ಯಾಣದ ನೆಲೆವೀಡಿಯೊಳ್ ಸುಖಸಂಕಥಾ ವಿನೋದದಿಂ ರಾ

೧೭. ಜ್ಯಂಗೆಯ್ಯುತ್ತಮಿರಲಿತ್ತಲ್ ||ವೃ|| ಜಲಧಿಬ್ಯಾವೇಷ್ಟಿತೋರ್ವ್ವೀಮಹಿಳೆಗೆ ವಿಳಸಲ್ಲೋಳಭಾಳಸ್ಥಳೀ ಕುಂತಳದೇಶನ್ತಾನೆನಿಪ್ಪಂತಿರಲೆಸೆವಲಸತ್ಕುಂತಳಕ್ಷೋಣಿ ಗುದ್ಯತ್ತಿಳಕಂ ತಾಂ ಬಲ್ಲಕುಂದಾವಿಷಯ

೧೮. ಮದಿಕ ಲಕ್ಷ್ಮೀಸಮಾಸೇವಿತಂ ಭೂಲಲನಾ ಲೀಲಾವಿಳಾಸಸ್ಫುರಿತ ಕಬರಿಕಾ ಕುಂದದಂತೊಪ್ಪಿ ತೋರ್ಕ್ಕುಂ ||ಅದೆಂತೆಂದಡೆ|| ಊರೂರ್ದ್ದಪ್ಪದೆಪೂತಭೂತಲತೆಯಿಂ ಮತ್ತಾಳಿಯಿಂ ಶಾಲಿಯಿಂದ ಊರೂರ್ದ್ದಪ್ಪದೆ ಗಂ

೧೯. ಗರಿಂ ಕುಡಿಯರಿಂ ಶ್ರೀಮಂತರಿಂ ಕಾಂತರಿಂದೂರೂರ್ದ್ದಪ್ಪದೆ ದೇವತಾನಿಳಯದಿಂ ಸದ್ಭಕ್ತರಿಂ ಚೆಲವು ವೆತ್ತೂರೂರ್ದ್ದಪ್ಪದೆ ಬಲ್ಲಕುಂದೆನಡುನಾಳ್ಸಂತಂ ಬಸಂತಂಕರಂ || ಅಂತುನಾಡ ನಡುವೆ ||ಕಂ|| ಕೆಲಬಲದ ಜಲ

೨೦. ದ ದುರ್ಗ್ಗಂಗಳನಲೆವುದು ನೆರೆಯ ಹೊರೆಯ ತರುಗಿರಿದುರ್ಗ್ಗಂಗಳನಿಳಿಸಿ ತನ್ನ ಮೆಱವುದು ಕುಲಗಿರಿ ಕುಱುಗೋಡ ದುರ್ಗ್ಗವಾ(ರ್ಗ್ಗು)ಂ ದುರ್ಗ್ಗಂ ||ವೃ|| ಚೋಳನನಾಳವಾಡುವುದು ಗುರ್ಜ್ಜರನಂ ಸಲೆ ತರ್ಜ್ಜಿಕುಂ

೨೧. ಕರಂ ಲಾಳನನಾಳಿಮಾಡುವುದು ಪಾಂಡ್ಯನನಣ್ಡಲೆಗುಂ ತೆಲುಂಗಭೂಪಾಳನ ನೇಳಿದಿರ್ಕ್ಕೆಯನೆ ಮಾಡುವುದೀ ಕುಱುಗೋಡಕೋಟೆ ತಾಂ ಕಾಳಗವೆಂದಡೇಳು ಮಡಿ ಪೆರ್ಚ್ಚುವುದಚ್ಚರಿಯಾರೊ ಕಾಡುವರ್ || ಆ

೨೨. ಕೋಟೆಯ ಪೊಱವೊಳಲೆಂತೆಂದಡೆ || ತಿಳಕ ತಮಾಳ ತಾಳ ಕದಳೀ ವಕುಳಾವಳಿ ಪಾಟಳಾಳಿ ಪಿಪ್ಪಳದಳಮಾತುಳಂಗ ಘನಸಾರಕ ಕೇಸರಕರ್ಣ್ಣಿಕಾರ ಶಾಲ್ಮಿಲಿ (ಳಿ) ಲವಳೀಲವಂಗ ಸಹಕಾರ ಕಕಿಂಶುಕನಾಳಿಕೇರ

೨೩. ಸಂಕುಲ ಸಕಳರ್ತ್ತು ನಂದನದಿನೊಪ್ಪುಗುಮೀ ಕುಱುಗೋಡ ಸುತ್ತಲುಂ || ಮತ್ತವಾ ಪಟ್ಟಣದೊಳ್ || ಕಂ|| ಧನದನನಿಳಪರ್ದ್ಧನಿಕರ್ವ್ವನಧಿಪನಂ ನಗುವರಲ್ಲಿ ರತ್ನವಿವೇಕರ್ಮ್ಮನುವಂ ಪೋಲ್ವರ್ಜ್ಜನ ಪರ್ಜ್ಜನನುತವಿದು ಪೋಲ್ಕುವಲ್ತೆ ಭೋ

೨೪. ಗಾವತಿಯಂ || ಭಕ್ತಿಯಂ ಮನೆ ಭಕ್ತಿಯ ನೆಲೆ ಭಕ್ತಿಯಾವತಿ (ತೆ) ಭಕ್ತಿಯೇಳ್ಗೆ ಭಕ್ತಿಯ ರಾಜ್ಯಂ ಭಕ್ತಿಭಂಡಾರಂ ಶಿವಭಕ್ತಿಯಸಿರಿ ಬಂದು ನೆಲಸಿತೀ ಕುಱುಗೋಡೊಳ್ || ಆ ನಗರಕ್ಕದಿನಾಥಂ ಶ್ರೀನಾರೀಕುಚ ವಿಲೋಳ ಕುಂ

೨೫. ಕುಮವಕ್ಷಂ ಭೂನುತನೆಸೆದಂ ನಿಸದನ್ತಾನಿರ್ಮ್ಮಡಿರಾಚಮಲ್ಲನಪ್ರತಿಮಲ್ಲಂ ||ವ|| ಆ ನೃಪನನ್ವಯ ಮೆಂತೆಂದಡೆ ||ಕಂ|| ಮೃಡನ ನಿಡುದೋಳ ಬಾಳಿನ ಕಡವೊಗರಿನ ಪೊಳಪನುರಗಿ ಗೆತ್ತುರಗೇಂದ್ರನ್ತೊ

೨೬. ಡರ್ದಲ್ಲಿ ಭಾವರತಿಯಿಂದೊಡನೊಗೆದಂ ಸಿಂದನಖಿಳ ಭುವನಾನಂದ (ಂ) || ಅನ್ತನ್ತೆ ಸಿಂದಭೂಪನ ಸಂತತಿಯಡಗುನ್ತಿ ಪೆರ್ಚ್ಚೆ ಪೆರ್ಚ್ಚಿದನತಿ ವಿಕ್ರಾಂತಂ ಜಯಕಾಂತಂ ಶ್ರೀಕಾಂತಂ ಶ್ರೀರಾಚಮಲ್ಲ ಧರಣೀ ಕಾಂತಂ || ಶ್ರೀವನಿತೇ

೨೭. ಶ್ವರಂಗೆ ಶಿವಪಾದಶಿಖಾಮಣಿ ರಾಚಮಲ್ಲದೇವಾನಿಪಾಳಂಕಂಗೆ ಸತಿ ಸೋವಲದೇವಿಗೆ ಪುಟ್ಟಿದಂ ಯಶಃಶ್ರೀ ವರನರ್ತಿಗಳ್ಗೆರೆದ ಪೊಂಗಳನಿಷ್ಟಕರಂಗಳಂ ಸಮಸ್ತಾವನಿ ಭೃತ್ಸಮಂಗಳನಿರುಂಗಳನೀವನು

೨೮. ದಾತ್ತಮಂಗಳಂ || ಮುದದಿಂ ಶ್ರೀಮದಿರುಂಗುಳಕ್ಷಿತಿವಧುನಾಥಂಗವುದ್ಯದ್ಗುಣಾ ಸ್ಪದೆಯಪ್ಪೆ (ಪ್ಪ) ಬಲದೇವಿ ಗನ್ತನಯರಾದರ್ಭ್ಭೀಮನುಂ ಪಾರ್ಥನುಂ ತೊಡಲಿಲ್ಲೆಂಬೆನೆಗಂ ಕ್ರಮೋನ್ನತಿಯೊಳಾ

೨೯. ಶಾವರ್ತ್ತಿಸತ್ಕೀರ್ತ್ತಿಸಂಪದನಿನ್ತಿರ್ಮ್ಮಡಿ ರಾಚಮಲ್ಲನೃಪನುಂ ಶ್ರೀ ಸೋಮಭೂಪಾಳನುಂ || ಆ ಯಿರ್ವ್ವರೊಳ್ ತದಗ್ರಜನ ಮಹಿಮೆಯೆಂತೆಂಡದೆ ||ವೃ|| ಪುಲಿವಾಲಂ ನಲಿದುಂಡ ಶಕ್ತಿಯಹಿಯೇಕ

೩೦. ಛ್ಛತ್ರವಾಗಿರ್ದ್ದ ಪೆಂಪಳವಟ್ಟಾ ಚಮರೀಮೃಗಂ ಚಮರಜಂ ತದ್ಭವಜಾತೀಭಸಂಕುಳ ಭದ್ರಾಸನ ರಾಜ್ಯಚಿಹ್ನಸಹಿತಂ ಶ್ರೀ ಸಿಂದಗೋವಿಂದಾನಾರಳವಲ್ಲಿರ್ಮ್ಮಡಿ ರಾಚಮಲ್ಲನದಟಿಂ ಭೋಗೀಂದ್ರ ವಂಶೋದ್ಭವಂ || ದೃಹಿತಮಹಿಮಂ

೩೧. ಮಹಿನುತಸುಖಾಭಿನವಾತಿಶಯಂ ಯಶಃ ಪ್ರಕಾಶಿತಭುವನಂ ನವಾಬ್ಜನಯನಂ ನಯನಂದನ ಸಂನುತಂ ತನುಕೃತ ಕಳಿಕಾಳಿಮಂ ಮಳಿನದೂರಿತನಿರ್ಮ್ಮಡಿ ರಾಚಮಲ್ಲಭೂಪತಿತಿಳಕಂ ಕಳಾ

೩೨. ಕುಶಳನಾಹವಚಕ್ರದೊಳಾ ತ್ರಿವಿಕ್ರಮಂ ||ಕಂ|| ಪೊಡವಿಯ ಸಮಸ್ತ ಭಕ್ತರನಡುವೆ ಮೃಡಂ ಮೆಚ್ಚಿ ನಿಚ್ಚವರವಂ ಕುಡಲಿಮ್ಮಡಿರಾಚಮಲ್ಲದೇವಂ ಪಡೆದಂ ನಿತ್ಯ ಪ್ರಾಸದರಾಜ್ಯಶ್ರೀಯಂ || ವ || ಅಂತನಿಸಿ ನೆ

೩೩. ಗಳ್ದ ಶ್ರೀಮನ್ಮಹಾಮಂಡಳೇಶ್ವರನಿರ್ಮ್ಮಡಿರಾಚಮಲ್ಲದೇವನ ರಾಜ್ಯಮುತ್ತರೋತ್ತರಂ ಸುಸ್ತಿರಮಾಗುತ್ತಿರೆ | ತತ್ಪಾದಪದ್ಮೋಪಜೀವಿ ಶಿವೈಕಭಾವಿ ಕಾಶ್ಯಪಗೋತ್ರಪವಿತ್ರಂ ಆಚ್ಚರಸನಪುತ್ರಂ ಸರ್ವ್ವಾಧಿ

೩೪. ಕಾರಿ ತೆಲಗರಮಾರಿ ಪತಿಕಾರ್ಯ್ಯಧುರಂಧರನಭಿನವ ಯುಗಂಧರಂ ವಾಜಸನೇಯಕುಳಾಂಭರ ದ್ಯುಮಣಿ ಮಂತ್ರಿಚೂಡಾಮಣಿ ಸ್ವಯಂಭುದೇವಲಬ್ಧವರ ಪ್ರಸಾದಂ ಶ್ರೀಮನ್ಮಾಹಾ ಪ್ರಧಾನಂ ಹಡಪವ

೩೫. ಳಂ ಬೇಚಿರಾಜನ ಮಹಿಮೆಯೆಂತದಡೆ ||ಕಂ|| ಒಡೆಯನೊಡಲಂ ದೇವರ್ಗ್ಗೊಡನೊಡನೆ ನಿವೇದಿಸು (ತ್ತು *) ಶಿವಸನ್ನಿಧಿಯಂ ಪಡೆದಂ ಲೋಕದೊಳೊರ್ವ್ವನಿ ಹಡಪವಳಂ ದಂಡನಾಯಕಂ ಬೇಚರಸಂ ||ವ|| ಅಂತಾ ಬೇಚರ

೩೬. ಸಂ ಶ್ರೀಸ್ವಯಂಭುದೇವರ್ಗ್ಗೇ ದೇವಾಲಯಮನೆತ್ತಿಸಿ ನಿಜಪತಿಗೆ ಧರ್ಮ್ಮಕಾರ್ಯಮಂ ವಿಜ್ಞಾಪಿಸಲು ಶ್ರೀಮನ್ಮಹಾಮಂಡಳೇಶ್ವರಂ ಪಿರಿಯರಾಚಮಲ್ಲದೇವರಸರ್ ಶ್ರೀಸ್ವಯಂಭುದೇವರಂಗಭೋಗರಂಗ ಭೋಗಕ್ಕಂ

೩೭. ಅಲ್ಲಿಯ ಸ್ಥಾನ ಆಚಾರ್ಯ್ಯರು ಸ್ವಸ್ತಿ ಯಮನಿಯಮಸ್ವಾಧ್ಯಾಯಧ್ಯಾನಧಾರಣ (ಮೋ) ಮೌನಾನುಷ್ಠಾನ ಶಿವಪೂಜಾ ತತ್ಪರರಪ್ಪವರ ಮಹಿಮೆಂತೆದಡೆ ||ಕಂ|| ಆ ಲಕುಳೀಶ್ವರಾಗಮ ಕಾಳಾ (ಲಾ) ಮುಖ

೩೮. ದರ್ಶನಂಗಳನ್ತಾಳ್ದಿ ತಪೋಲೀಲೆಗೆ ಮೈವಾಂತಿರ್ಪ್ಪಂ ಬಾಲಶಿವಾಚಾರ್ಯ್ಯವರ್ಯ್ಯನ ಗಣಿತ ಧೈರ್ಯ್ಯನ್ ||ವ|| ಅಂತೆನಿಸಿದ ಬಾಲಶಿವಾಚಾರ್ಯ್ಯರ ಕಾಲಂಕರ್ಚ್ಚಿವಾ (ಧಾ)ರಾ ಪೂರ್ವ್ವಕಂ ಮಾಡಿ ಸ(ಶ)ಕ ವ

೩೯. ರ್ಷ ೧೦೯೫ ನೆಯ ವಿಜೆ(ಜ)ಯ ಸಂವತ್ಸರಧ (ದ) ಮಾರ್ಗ್ಗಶಿರದಮಾವಾಸ್ಯೆ ಸೋಮವಾರ ಸೂರ್ಯಗ್ರಹಣ ತಾ(ತ) ತ್ಕಾಲದಂದು ಶ್ರೀಸ್ವಯಂಭುದೇವರ್ಗ್ಗೆ ಕೊಟ್ಟ ಕೆಯಿ ಕುಱು ಗೋಡಿಂ ಮೂಡವೊಲದಲ್ಲಿ ನೀರ

೪೦. ಹಳ್ಳದಿಂ ಪಡುವಲತಕ್ಕಿಲಮತ್ತರು ೩ ಅರಸರಕಮ್ಮತದಿಂ ಪಡುವಲಸೌಳಮತ್ತರ್ ೧ ಪುಂಡರೀಕನ ಕಱೆಯಿಂ ಮೂಡಣ ಪೂದೋಂಟ ೧ ದೇವರ ಮುಂತಣ ಗಾಣ ೨ ಹಾಹೆಕಲ್ಲ ಮೂ

೪೧. ಡ ವೊಲದ ಬಲ್ಲಕುಂದೆಯ ಹೊಳೊವೇಱಿಯಿಂ ಪಡುವಲು ತಕ್ಕಿಲ ಮತ್ತರ್ ೧೨ ಆ ವೂರ ಎರದ ಕೆಱೆಯಿಂ ತೆಂಕಲು ಕಿಸುವೆತ್ತರ್ ೫ ಭಾಡನಹಟ್ಟಿಯಲು ಧರ್ಮೇತದ ಸ್ಥಳದಿಂ ತೆಂಕಲು ತಕ್ಕಿಲ ಮ ೧

೪೨. ಅಲ್ಲಿ ಬೀಯನಹಟ್ಟಿಯ ದಾರಿಯಿಂ ತೆಂಕಣ ಕಿಸುಕಮ್ಮಂ ೪೫೦ ಬೀಯನಹಟ್ಟಿಯೂರಿಂ ತೆಂಕ ಭೀಮನಾಥದೇವರ ಕೆಯ್ಯಿಂ ಮೂಡಣ ತಕ್ಕಿಲಮತ್ತರ್ ೧ ಕಮ್ಮಂ ೪೫೦ ಅರಕೆ ಱೆಯಲು

೪೩. ದೊಂಡವಟ್ಟಿಯದಾರಿಯಿಂ ಮೂಡಣಸ್ಥಳವೆರಡಕ್ಕಂ ಕಿಸುಕಮ್ಮ ೭೦೦ ಅಲ್ಲಿಯ ಬಾದುಂಬೆಯನಿಂ ಬಡಗಣ ಗದ್ದೆಕಟ್ಟು ೫ ಪುಂಡರೀಕನ ಕೆಱೆಯ ಕೆಳಗೆ ಗದ್ದೆಕಟ್ಟು ೩ ಇಂತಿವಿನಿತುಂ

೪೪. ಹಿರಿಯ ರಾಚಮಲ್ಲದೇವರು ಮುನ್ನಂ ಕೊಟ್ಟಿರ್ದ್ದವು (||*) ಮತ್ತಂ ಸಿಂದಗೋವಿಂದ ಸಿತ (ಗ*) ರಗಣ್ಡಂ ಪಾತಾಳಚಕ್ರವರ್ತಿ ಭೋಗವತಿಪುರವರಾಧೀಶ್ವರಂ ಶ್ರೀವೀರಕಲಿ ದೇವನಿತ್ಯಪ್ರಸಾದಂ ಶ್ರೀ

೪೫. ಮನ್ಮಹಾಮಂಡಲೇಶ್ವರಂ ಯಿರ್ಮ್ಮಡಿರಾಚಮಲ್ಲದೇವರಸರು ಶಕವರ್ಷ ೧೧೦೩ ನೆಯ ಪ್ಲವಸಂವತ್ಸು (ತ್ಸ)ರದ ಕಾರ್ತ್ತಿಕಪುಣ್ಣಮಿ ಸೋಮವಾರಸೋಮಗ್ರಹಣದಂದು ಶ್ರೀಪುರವನಗ್ರಹಾರವಂ ಮಾಡುವ ಕಾಲದಲು ಬಾಲಶಿವದೇವ

೪೬. ರ ಕಾಲಂಕರ್ಚ್ಚಿಧಾರಾಪೂರ್ವ್ವಕಂ ಶ್ರೀಸ್ವಯಂಭುದೇವರಂಗಭೋಗ ರಂಗಭೋಗ ನೈವೇದ್ಯ ಜೀರ್ಣ್ಣೋದ್ಧಾರ ಚೈತ್ರ ಪವಿತ್ರ ಸ್ವಾಧ್ಯಾಯ ವೈಶೇಷಿಕ ಬ್ಯಾಖ್ಯಾನ ಖಣ್ಡಿಕ ಶಿವಧರ್ಮ್ಮಪುರಾಣ ಪಠನವನ್ನದಾನವಿನ್ತಿನಿತಕ್ಕಂ ತೆಕ್ಕೆಕಲ

೪೭. ಹೊಲವೇರೆಯಿಂ ಮೂಡಲ್ ಅರಳಿಯಹಾಳ ಸೀಮೆಯಿಂ ತೆಂಕಲ್ ಹಂಗವೆಯಿಂ ಪಡುವಲ್ ಗೊಱನಹಾಳ ಸೀಮೆಯಿಂ ಬಡಗಲ್ ಬಲ್ಲಕುಂದೆನಾಡ ಬಳಿಯ ಪೂರ್ವ್ವಸೀಮಾನ್ವಿತವಾಗಿ ಕೊಟ್ಟಲ್ ಜಿನ್ತೆಗ್ರಾಮ ೧ (||*)

೪೮. ಮತ್ತಂ ಕುಱುಗೋಡ ಹೊಲದಲು ಉಪ್ಪುವಳ್ಳದಿಂ ಮೂಡಣ ಕಿಸುಮತ್ತರ್ ಒರವಾಯಲೂರಿಂ ಮೂಡಲ್ ಅರಕೆಱೆಯ ಹೊಲವೇರಿಯಿಂ ಪಡುವಲ್ ತಕ್ಕಿಲಮ ೧ ಕಮ್ಮ ೩೦೦ (||*) ಮತ್ತ ೧ ಬೇಚೈಯನೊಡಲೆ ಕೈಲಾಸಕ್ಕೆ ಹೋಹ

೪೯. ಸಮೆ(ಮ)ಯದಲಗ್ನಿ ಪ್ರವೇಶವಂ ಮಾಡುವಲ್ಲಿ ಧರ್ಮಪತ್ನಿ ಪತಿಬ್ರತೆ ಬೈಳಿಯಕ್ಕನುಂ ಮಳ್ಪಾಣಿಯಕ್ಕುನುಂ ಶ್ರೀಮದರಸರಂ ಬೇಡಿಕೊಂಡು ಮಣಿವೂರ ಸ್ಥಳದಲು ತುಂಗಭದ್ರಾ ದೇವಿಯಂ ತೆಂಕಲ ಸೂಗೂರ ಹೊಲೆವೇರೆ

೫೦. ಯಿಂ ಮೂಡುವಲು ಕೊಟ್ಟ ತಕ್ಕಿಲುಮತ್ತರ ೨ ಚಿನ್ನಗೆಯ್ಯದ ನಖರಂಗಳು ಕೂಡಿ ಅಚ್ಚಿನ ಮೊಳೆಯಲ್ಲಿ ಕೊಟ್ಟ ದಳಕ್ಕೆ ವೀಸ ೨ ಕಾಣಿ ೨ ಮತ್ತವರು ಕೊಂಟ (ಡ)ಲ್ಲಿ ಸೊ ೨ ಕೊಟ್ಟಲ್ಲಿ ಸೊ ೨ ಮತ್ತಂ ಅಂಗಡಿಯಲು ಸಟ್ಟ (ಟ್ಟು) ಗಾಯಂ ೧

ಎ.ಇ., XIV, ಪು. ೨೬೫

೫. ಅದೇ ಶಾಸನದ ಹಿಂಬದಿಯಲ್ಲಿ

೧. ಶ್ರೀ ಮದುದ್ಭವರಾಚಮಲ್ಲೇಶ್ವರಾಯ (ನಮಃ||*) ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರಚಾರವೇ | ತ್ರೈಳೋಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ||

೨. ಶ್ರೀಮತ್ ಶೈಲೇಂದ್ರಪುತ್ರೀಪತಿ ನಮಗಭಿವಾಂಚ್ಛಾರ್ತ್ಥಮಂ ಮಾಳ್ಕೆ ತೇಜಸ್ತೋಮಂ ಪ್ರಸ್ತುತ್ಯ ನಿತ್ಯೋದ್ಭವವೆಸರ್ವೆಸವೀ ರಾಚಮಲ್ಲೇಶ್ವರಾ

೩. ಖ್ಯೋದ್ದಾಮಂ ನಿಸ್ವೀಮನಾಮಂಸ್ತುವದಖಿಳ ಲಸತ್ಸಾಮನಾತ್ಮಾಭಿರಾಮಂಭೀಮಂ ಜೂಟಾಗ್ರಸೋಮಂ ವಿನುತಜನ ಮನಃ ಪ್ರೇನುಧ್ರಿಗುಲಲಾಮಂ || ಜಳಕಲ್ಲೋಳಾಳಿಬಾಹಾ

೪. ಯುಗಳ | ವೆಸವಿ (ವ)ಕೂರ್ಮ್ಮಂ ಪದಂ | ಬಾಳಮಿಂ ಕಣ್ | ಪೊಳೆವುನ್ಮು ಕ್ರಾಫಳಂ ಪಲ್ | ಕುಳಿರಮೆ ನಖ | ವಾ ಕಂಬು ಕಂಠಂ | ಸುನೀಳಂವಿಳಸತ್ಕೇಶಾವಕಾಶಂ | ತೊಳಸುವ ಪವಳಂ ಬಾಯ್ | ಕರಂ

೫. ಪದ್ಮರಾಗಂ ತಳಮಾಗಲ್ | ರೇಜಿ ರತ್ನಾಕರನವೊಲೆಸೆಗುಂ ರಾಜಚಂದ್ರಸಮುದ್ರಂ || ಅಂತೆನಿಸಿದ ಗಂಭೀರರ ರತ್ನಾಕರನಿಂ ಪರಿವೃತವಾದ ಜಂಭೂದ್ವೀಪದ ಭರತಕ್ಷೇತ್ರದೊಳು ||

೬. ಕುಂತಳ ವಿಷಯಮಂಟಪಲ್ಲಿ || ಸ್ವಸ್ತಿ ಸಮಸ್ತಭುವನಾಶ್ರಯಂ ಶ್ರೀಪೃಥ್ವಿವಲ್ಲಭಂ ಮಹಾರಾಜಾಧಿರಾಜಂ ಪರಮೇಶ್ವರಂ ಪರಮಭಟ್ಟಾರಕಂ ಸತ್ಯಾಶ್ರಯ ಕುೞ(ಳ) ತಿಳಕಂ ಚಾಳುಕ್ಯಾಭರಣಂ

೭. ಶ್ರೀಮತ್ರಿಭುವನಮಲ್ಲ ವೀರಸೋಮೇಶ್ವರದೇವನ ರಾಜ್ಯ ಮುತ್ತರೋತ್ತರವಾಗುತ್ತಿರಲಿತ್ತಲ್ || ವೃ || ಅನ್ತೆನಿಸಿರ್ದ್ದ ಭಾರತಮಹೀಮಹಿಳಾ ಮಹನೀಯ ಭಾಳದೊಳು ಕಂತಳ

೮. (ದನ್ತೆ) ಶೋಭಿಸುವ ಕುಂತಳಭೂತಳಭಾಮೆಗೋವಗಂ ಕಾಂತಮುಖಾಂತದೊಳ್ವಿಡಿದ ಕಂಣಡಿನಯನ್ನಮೆ ಚೆನ್ನನಾಗಿವೋರನ್ತಿರೆ ಬಲ್ಲಕುಂದೆನಾಡುನಾಳ್ಕರಮೊಪ್ಪುಗುಮೆತ್ತ ನೋಳ್ವೊಡಂ ||ವ|| ಅನ್ತಾನಾ

೯. ಡ ನಡುವೆ ರಾಜದ್ರಾಜನಗರ ರಮಣೀ ರಮಣೀಯಮಣಿದರ್ಪ್ಪಣಾಯಮಾನಮೆನಿಸೆ ಭರ್ಗ್ಗಾದ್ರಿಯಂತಾರ್ಗ್ಗ ವರೀದುರ್ಗ್ಗಮಮಾದ ಕುಱುಗೋಡಗಿರಿದುರ್ಗ್ಗದಪೊಱವೊಳಲ ವಿಳಾಸಮೆಂತೆಂದಡೆ ||ಕಂ||

೧೦. ನಾರದನನತೊಱದೆ ಸರದಿಂತಾರಾಪಥದಂತೆ ರಾಜಹಂಸಾನ್ವಿತದಿಂ ಕ್ಷೀರಾಬ್ಧಿಶಯನ ನುರದವೊಲಾರಮೆಯಿನ್ತುಱುಗಿ ಪೊಱವೊಳಲು ಸಾ(ಸೊ) ಗಯಿಸುಗುಂ|| ಮತ್ತಮಾ ಪುರಾಂತರದ್ಭಾಗಮೆಂತೆ

೧೧. (ಂದಡೆ ||ವೃ|| ಭರದಿಂದೌರ್ವ್ವಾನಲಂ ತಂನೊಳಗಣಜಲಮಂಪೀರ್ವ್ವೆನೆಂದಬ್ಧಿನಾಥಂ ಪಿರಿದೊಂದಾಶಂಕೆಯಿಂದೀ ಪುರದೊಳೆ ನವರತ್ನಂಗಳಂ ಬೈತನೆಂಬಂತಿರಲಿರ್ಕ್ಕುಂ ಕ್ಷತ್ರರತ್ನಂ | ಚತುರಯುವತಿ ರತ್ನಂ |ಸ

೧೨ (… ರ)ತ್ನಂ | ವರರತ್ನಂ | ವೀರರತ್ನಂ | ಸುಜನಪುರುಷರತ್ನಂ | ಗಜಾಶ್ವಾದಿರತ್ನಂ || ವ || ಅಂತಾಪುರಕ್ಕಧೀಶ್ವರಂ ಮಹಾಮಂಡಳೇಶ್ವರಂ ಸಿಂದಕುಳಕಮಳಮಾರ್ತ್ತಂಡಂ ಸಿತಗರಗಣ್ಣನುಮೆನಿಸಿ ನೆಗಳ್ದ ಶ್ರೀಮದ್ರಾಚಮಲ್ಲದೇವನ

೧೩. ಮಹಿಮೆಯೆಂತೆಂದಡೆ || ವ್ರಿ(ವೃ) || ವರಮಾರ್ಗ್ಗಂ | ಶ್ರೀನಿಸರ್ಗ್ಗಂ | ವಿನಯ ವಿನತ ಭರ್ಗ್ಗಂ | ಚಿತಾರಾತಿವಗ್ಗಂ | ಸ್ಥಿರಕಾರ್ಯ್ಯಂ | ಮೇರುಧೈರ್ಯ್ಯಂ | ಸುಜನವನಜಸೂರ್ಯ್ಯಂ | ಮಹೀಪಾಳವರ್ಯ್ಯಂ | ಸಮರೂಪಂ | ಸ

೧೪. ಪ್ರತಾಪಂ ಕೃತ ರಿಪುನೃಪತಾಪಂ ಕಾಳಾಳೀ ಕಳಾಪಂ | ಧರೆಗೆಲ್ಲಂ ರಾಚಮಲ್ಲಂ ಕುಡುತವಿರಲೆ ಬಲ್ಲಂ ಯಶಃ ಶ್ರೀಗೆ ನಲ್ಲಂ || ಅಂತಾ ಸುಖಸಂಕಥಾವಿನೋದದಿನಿರುತ್ತಿರೆ ||ವೃ|| ಧರೆಗಾಶ್ವ

೧೫. ರ್ಯ್ಯದೆ ರಾಚಮಲ್ಲ ಮಹಿಪ (ಂ) ಗೋಭೂಹಿರಣ್ಯಾಂನಪಾನ ರಸಾದ್ಯಾಖಿಳದಾನದಿಂ ತಣಿಪಿಶಿಷ್ಟೇಷ್ಟಾರ್ಥ ಸದುಭಕ್ತರಂ ಪಿರಿದುಂ ಮನ್ನಿಸಲೀಶ್ವರಂ ವರದನಾಗಳ್ ರಾಜ್ಯಮನ್ತಾಳ್ದಿವಿಸ್ತರಿಸುತ್ತೊಪ್ಪಿ

೧೬. ರೆ ದೇವರೊಂದುದಿವಸಂ ಪ್ರತ್ಯಕ್ಷದಿಂ ಬೆ (ಬ) ರ್ಪ್ಪುಧು (ದು)ಂ ||ವ|| ಆಗಳ್ ನಂದಿನಾಥ ನಂದಿ ಮಹಾಕಾೞ (ಳ) ವೀರಭದ್ರ ಪ್ರಮುಖಪ್ರಮಥಯೂಥ ಸಮೇತನುಂಹರಿವಿರಂಚಿ ಸುರಾಸುರೋರಗಾದಿ ಪ್ರಸಿದ್ಧಾ

೧೭. ಮರ ಗಣ ಸೇವಿತನುಮೆನಿಸಿ ಪಾರ್ವ್ವತೀಪತಿಬಂದವತರಿಸಿ ನಿಂದಿರಲ್ ರಾಚಮಲ್ಲರಸಂ ಭೋಂಕನೆ ಕಂಡುಪೊಡವಟ್ಟಾನಂದದಿಂ ಕರಕಮಳಮುಕುಳಿತನಾಗಿರಲ್ ಹರ(ಂ) ದರಹಸಿತವದನಾರವಿಂದಂ ಕೈಲಾಸಾವ

೧೮. ಳೋಕನಾರ್ಥವಭಯ ಹಸ್ತಾವಳಂಬಕನಾಗೆ ಮಹಾಪ್ರಸಾದಮೆಂದು ಮಹಾವಿಭೂತಿಯಿಂ ಗಣಾಡಂಬರವಂ ಮಾಡಿ ಶಿವಾರ್ಚನೆಯನಾಡಿ ||ವೃ|| ಧರೆಗಿಂತತತ್ಯಂತಚೋದ್ಯಾವಹಮೆನೆ ಶಿವಲಿಂಗಾರ್ಚನಂ ಮಾಡಿ

೧೯. ಪೃಥ್ವೀಭರ ರಾಜ್ಯಶ್ರೀಯುಮಂ ಸಂತತಿಗೆ ನಿಲಿಸಿದಂ ರಾಚಮಲ್ಲಂ ಶರೀರಂ ಬೆರೆಸುತ್ತುಂಗಾಶ್ವ ಚಂಚಚ್ಛಾಮರರುಹೆ(ಹ) ಶಿ(ಸಿ)ತ ಛತ್ರಚಿಹ್ನಾನ್ವಿತಂ ಶಂಕರನೊಳ್ ಸಾಲೋಕ್ಯಮಂ ಪೊರ್ದ್ದಿಯುಮವಂಗೆ ಸಾಯು

೨೦. ಜ್ಯದಿಂ ಲಿಂಗವಾಡೆ || ಅಂತು ಕುಱುಗೋಡ ಪಟ್ಟಣದ ಶ್ರೀಸ್ವಯಂಭುದೇವರ ಪಶ್ಚಿಮಾಭಿಮುಖದೊಳು ಬಂದು ನಿಂದು ಸಕಳ ಲೋಕಕ್ಕೆ ಕೌತುಕಮಾಗಿ ಲಿಂಗಮೂರ್ತಿಯಿಂದುದ್ಭವಿಸಲು ಶ್ರೀ

೨೧. ಮದುದ್ಭವರಾಚಮಲ್ಲೇಶ್ವರದೇವರೆಂಬ ಪೆಸರಂ ತಾಳ್ದಿ ಸುಪ್ರಸಿದ್ಧಮಾಗಿರೆ || ಮತ್ತಂ ತದೀಯಂಸಂತತಿ ಯಡಗುಂತಿಯೆಂತೆಂದಡೆ ||ವೃ|| ಮದವದ್ವೈರಿ ಕರೀಂದ್ರ ಕೇಸರಿಯೆನಿಪ್ಪಾ ರಾಚಮಲ್ಲಂಗವಾಸ್ಪ

೨೨. ದದಿಂ ಸೋವಲದೇವಿಗನ್ತುನುಜನಾಗಿರ್ದ್ದಾಂಯಿರುಂಗೋಳ ಭೂವಿದಿತಂಗೇಚಲ ದೇವಿಗಂ ತನಯನಾದಂ ಕ್ಷತ್ರ ಚಾರಿತ್ರ ಸಂಪದನಿಂತಿರ್ಮ್ಮಡಿ ರಾಚಮಲ್ಲಮಹಿಪಂ ಶ್ರೀಸಿಂದನಾರಾಯಣಂ

೨೩.||ವ|| ಅಂತಾತನೊಳು ಬಲಂಗೊಂಡು ಕಲಿತನಳಬಲುಪಿಂ ಕಾದಿ ಗೆಲಲಾರ್ಗ್ಗಮರಿದೆಂತೆನೆ || ವ್ಯ || ಪುಲಿಮೊಲೆವಾಲನೂಡೆ | ಫಣಿಪಂಪೆಡೆಯಂ ಕೊಡೆಯೆತ್ತೆ ಸಿಂಧೂರಂ ಸಲಲಿತ ಭದ್ರವಿಷ್ಟರಮದಾಗೆ |ಚ

೨೪. ಮಚ್ಚಮರೀ ಮೃಗಾಳಿಕೋಮಳ ಚಳಚಾರುಚಾಮರಮನಿಕ್ಕೆ | ದಿಟಂಕಲಿದೇವನಾವಗಂ ಕುಲದಧಿದೈವ ವಾಗೆ | ಗೆಲಲಾರ್ದ್ದೊರೆಯಿರ್ಮ್ಮಡಿರಾಚಮಲ್ಲನೊಳು || ಮತ್ತಂ || ವೀರಶ್ರೀ

೨೫. ಕಲಿದೇವದೇವನಭವಂ ನಿತ್ಯಪ್ರಸಾದೋದ್ಭವೋದಾದ ಶ್ರಿಯನನಾರತಂ ಕುಡುತಿರಲ್ ಶ್ರೀಚಾರುವಾಕ್ಯ್ರೀಲ ಸದ್ವೀರ ಶ್ರೀರುಚಿರೇಂದು ಕುಮುಧ (ದ) ನಿಭಕಿರ್ತ್ತಿ ಶ್ರೀ

೨೬. ಯುಮ (ಂ) ಭಾಗದೊಳ್ | ರಾರಾಜನ್ಮುಖದೊಳ್ | ಭುಜಯುಗಳದೊಳ್ | ದಿಕ್ಚಕ್ರದೊಳ್ | ವರ್ತ್ತಿಸಲ್ ವೀರಂಗಿರ್ಮ್ಮಡಿರಾಚಮಲ್ಲಮಹಿಪಂಗಿನ್ನಾರ್ಪ್ಪರೇಂ ಬಂದಪರ್ || ಇಂತು ನೆಗಳ್ತೆಗಂ ಪೊಗಳ್ತೆಗಂ

೨೭. ನೆಲೆಯೆನಿಸಿ | ಸ್ವಸ್ತಿಸಮಧಿಗತ ಪಂಚಮಹಾಶಬ್ಧಮಹಾಮಂಡಳೇಶ್ವರನುಂ ಬಲ್ಲಕುಂದಾ ದೇಶಾಧೀಶ್ವರನುಂ ಭೋಗಾವತೀಪುರವಾದೀಶ್ವರನುಂ ಸಿಂದಕುಳಕಮೞ (ಳ)

ಮಾರ್ತ್ತಾಂಡನುಂ ಸಿತಗರಗಂಡನುಂ ಶಾರ್ದ್ದೂ

೨೮ ಳವಿಜಯಪತಾಕನುಂ ಸಮುದ್ಧಂಡಮಂಡಳಿ (ಳೀ) ಕಭಯಂಕರ ಚತುರಂಗಾನೀಕನುಂ ದಶದಿಶಾವರ್ತ್ತಿತ ಧವೞ (ಳ) ಕೀರ್ತ್ತಿಯಂ ಪಾತಾಳಚಕ್ರವರ್ತ್ತಿಯುಂ ಶ್ರಿವೀರಕಲಿ ದೇವದಿಬ್ಯಶ್ರೀಪಾದ

೨೯. ಪದ್ಮನಿತ್ಯ ಪ್ರಸಾದಾಸಾದಿ ತಾತ್ಮಪ್ರಭಾವನುಂ ಸಂಗಡದಮಂಡಳೀಕರ ತಲೆಯಂಕಾವನುಂ ಬೇಡಿದರ್ಗ್ಗಿಲ್ಲೆನ್ನದೀವನುಮೆನಿಸಿ ನೆಗಳ್ದ ಶ್ರೀಮದಿರ್ಮ್ಮಡಿರಾಚಮಲ್ಲದೇವಂ ಕುಱು ಗೋಡು ಪಟ್ಟ

೩೦. ಣದೊಳ್ ಸುಖಸಂಕಥಾವಿನೋದದಿಂ ರಾಜ್ಯಮ್ಗೆಯ್ಯುತ್ತಮಿರೆಯಿರೆ ತತ್ಪಾದಪದ್ಮೋದಜೀವಿ ಮಹಾಪ್ರಧಾನಂ ವಿಬುಧೈಕ ಬಾಂಧವಂ ಶ್ರೀಕರಣಂ ರೇಚಿರಾಜನನ್ವಯವೆಂತೆಂದಡೆ ||ವೃ|| ಸ್ವಸ್ತಿಶ್ರೀ

೩೧. ಚಂದ್ರ ವಂಶೋದ್ವವಹಿರತಕುಳಂ ಕಂಮ್ಮೆಸಕ್ತೀರ್ತ್ತಿವಲ್ಲಿ ವಿಸ್ತಾರಾತಾರಾಚಳ ಭುವನತಳಂ ತಾನೆನಲ್ ಸತ್ಕವೀಂದ್ರಪ್ರಸ್ತುತ್ಯಂ ರೇಚಿರಾಜಂಗನುವಶೆಗುಣಿ ರೇಕಾಂಬಿಕಾದೇವಿಗಂ ಸಂತ್ರ

೩೨. ಸ್ತಾರಾತಿಪ್ರಧಾನಂಸುತನುದಯಿಸಿದಂ ಸಾಯಿದೇವಪ್ರಧಾನಂ || ರಾಮಂಗಾರಾಮೆ ಯೆಂತತಮರಪತಿಗೆ ಪೌಳೋಮಿಯೆಂತಂತೆ ಲಕ್ಷ್ಮೀಧಾಮಂಗಾಲಕ್ಷ್ಮೀ (ಕ್ಷ್ಮಿ) ಯೆಂತಂತನುರಿಪುಗು

೩೩. ಮಾದೇವಿಯೆಂತಂತೆ ತಾರಾರಾಮಂಗೆ ರೋಹಿಣೀಪ್ರೇಯಸಿಒ ಸೊಗಯಿಪಳೆಂತಂತಮಾತ್ಯ…. ಓದಾಮಂ ಶ್ರೀಸಾವಿದೇವಂಗತಿಪತಿಹಿತೆ ಸಾವಿತ್ರೆ (ತ್ರಿ) ಯಂತೊಪ್ಪುತಿರ್ದ್ದಳ್ || ಅಂತಾ ಶ್ರೀ

೩೪. ಸ್ವಾಮಿದೇವಂಗಂ ಸಾವಿತ್ರೀದೇವಿಗೆ || ವ್ರಿ (ವೃ) || ರಾಜತ್ ಶ್ರೀಸ್ವಾಮಿದೇವಂಗನುವ ಶಿಗುಣಿ ಸಾವಿತ್ರಿಗಂ ಪುಟ್ಟಿದಂ ಶ್ರೀಭಾಜಂತಿಗ್ಮಾಂಶುತೇಜಂ ಗತಭಯಹೃಧ (ದ) ಯಾಂ ಭೋಜನಾ ಪು

೩೫. ಣ್ಯಬೀಜಂ ಭ್ರಾಜತ್ಕಾಂತಾಮನೋಜಂ ವಿಬುಧವಿಭುಧಭೂಜಂ ಯಶಃಶ್ರೀಸಮಾಜಂ ನೈಜೋನ್ಮಂತ್ರಾಬ್ಧಿರಾಜಂ ಸುವಿಭವ ಸುಮನೋರಾಜನೀ ರೇಚಿರಾಜಂ ||

ಎ.ಇ. XIV. ಪು. ೨೭೯

೬. ಶಾಂತಮಲ್ಲಿಕಾರ್ಜುನ (ಉಜ್ವಾಳೇಶ್ವರ) ದೇವಾಲಯದ ಗರ್ಭಗೃಹದ ಬಾಗಿಲ ಚಾಮರಧಾರಿಯ ಶಿಲ್ಪದ ಕೆಳಗೆ

೧. ಲೋಕಾಹುರದ ಜೋ. ಲದೇವಿ

ಕರ್ನಾಟಕ ಭಾರತಿ ಸಂ.೭

೭. ಅದೇ ಬಾಗಿಲವಾಡದ ಇನ್ನೊಂದು ಬದಿ

೧. ಲೋಕಾಹುರದ ದೇವಲದೇವಿ

ಕರ್ನಾಟಕ ಭಾರತಿ ಸಂ.೭

೮. ದೊಡ್ಡ ಬಸಪ್ಪನ ಗುಡಿಯಲ್ಲಿರುವ ಬಸವಣ್ಣನ ಕಂಬದ ಮೇಲೆ

೧. ಸ್ವಸ್ತಿ ಶ್ರೀ ಜಯಾಭ್ಯುದಯ

೨. ಶಾಲಿವಾಹನ ಶಕ ವ

೩. ರುಸ ೧೪೩೫ ನೆಯ

೪. ಆಂಗೀರಸ ಸಂವಛ

೫. ರದ ಆಸ್ವಿಜ ಶು ೧೪

೬. ಸೋಮಾಪರಾಗ ಪುಂ

೭. ಣ್ಯಕಾಲದಲು ಕುಱು

೮. ಗೋಡ ಬಸವಣ್ಣನಾ

೯. ಯಕರ ಮಕಳು ಮಲ್ಲ

೧೦. ಪನಾಯಕರ ಧರ್ಮ

೧೧. ಪತ್ನಿಯಾದ ಬಲ್ಲಕು

೧೨. ಂದ ಮಾದಪನಾಯಕ

೧೩. ರ ಮಗಳಾದ ಮಲ್ಲಂ

೧೪. ಮನೂ ಕುಱುಗೋಡ ಸಿ

೧೫. ಮಕ್ಕೆ ಯಿಶಾಂನ್ಯ ದಿಕಿ

೧೬. ನ ಹೂಜೆಹಾಳ ಶಾ

೧೭. ಂತಮಲ್ಲಿಕಾರ್ಜುನದೇ

೧೮. ವರ ದೇವಾಲಯ ಬಾ

೧೯. ವಿನು ಜೀಂರ್ನ್ನೂದಾರ

೨೦. ವ ಮಾಡಿ ದೇವರ ಹೂ

೨೧. ವಿನ ತೋಟಕ್ಕೆ ಬಿಟದು

೨೨. ದೇವಸ್ಥಾನಕ್ಕೆ ಮೂಡಲ

೨೩. ಬಾವಿಯಿಂ ಇ ಬಡ

೨೪. ಗಲಾದ ತೋಟಸ್ತಳ

೨೫. ವೊಕುಳದ ಹೊಲಂ

೨೬. ನು ತಮಗೆ..

೨೭. ರಗಳಾಗ ಬಿ…

೨೮. ದೇವರಿಗೆ ಸಮರ್ಪಿಸ್ತಾ

೨೯. ರು ಯೀ ಧರ್ಮ್ಮ

೩೦. ವ ಕಾಉ

೩೧. ದು ಆರು ತಪಿದವರು

೩೨. ವಾರಣಾಸಿ.. ತಡಿಯ

೩೩. ಲ್ಲಿ… ಅನಂತ ಕಫಿ

೩೪. ಲೆ ಕೊಂದ ಪಾಪಕ

೩೫. ಹೋಹರು || ಈ ವಿಧಿ

೩೬. ರ್ಮವ ಉದರಿಸಿ ನಡೆ

೩೭. ಸಿದವರಿಗೆ ಅಸಂ

೩೮. ಖ್ಯ ಲೋಕ…ಟ್ಟು

೩೯. ಫಲವ ಪಡೆವರು ಶ್ರೀ

೪೦. ಶ್ರೀ ಶ್ರೀ ಶ್ರೀ ಶ್ರೀ

ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ೧, ಸಂ ೧೦ (ಬಳ್ಳಾರಿ ತಾ)

೯. ಬಸವೇಶ್ವರ ದೇವಾಲಯದ ದಕ್ಷಿಣಕ್ಕಿರುವ ಬಂಡೆಯ ಮೇಲೆ

೧. ಸ್ವಸ್ತಿ ಶ್ರೀ (||*) ಜಯಾಬ್ಧುದಯಶಾಲಿವಾಹನಶಕವರುಷ

೨. ೧೪೫೦ ಸರ್ವಧಾರಿಸಂವಛರದ ಭಾದ್ರಪದ ಬ ೧ ಲು

೩. ಶ್ರೀವೀರಪ್ರತಾಪ ಶ್ರೀಕೃಷ್ಣದೇವಮಹಾರಾಯರಿಗೆ ಪುಣ್ಯವಾಗಬೇಕೆಂ

೪. ದು ಬಾಗಿಲ ಕೃಷ್ಣರಾಯನಾಯಕರು ದೊಡ್ಡ ಬಸವಣಂನ ಅಮ್ರುತಪಡಿಗೆ

೫. ಕೊಟ್ಟದು ಕುಱಗೋಡ ಮೂಡಲ ಹುರಿಗಲ….ಡೆ ಹಾಳಿ ಪರಮಗೊಂಡನು ಮಾಡಿ

೬. ದ ಹೊಲ ಬೀಜವರಿ ಖ || ಹತ್ತುಗೊಳಗದ…..

೭. ಬೀಜವರಿ ಖ | …… ಬಡಗಲು ಗದೆ……

೮……… ಅಳಿದ ಪಾಪದಲಿ ಹೋಹನು (||*)

ಸೌ.ಇ.ಇ., IX, ಭಾಗ II, ನಂ. ೫೨೪

೧೦. ಉಂಡಲಿ ಸಂಗಮೇಶ್ವರಮ ಗುಡಿಯ ಮುಂದಿನ ಮಂಟಪದಲ್ಲಿ

೧. ಶುಭಮಸ್ತು (||*) ನಮಸ್ತುಂಗಸಿರಚುಂಬಿತಚಂದ್ರಚಾಮರಚಾರವೇ | ತ್ರೈ

೨. ಯಿಲೋಕ್ಯನಗರರಂಭಮೂಲಸ್ತ(ಂ)ಭಯ ಶಂಭವೇ | ಸ್ವಸ್ತಿ ಶ್ರೀವಿಜಯಾದ್ಭುದ

೩. ಯಶಾಲಿವಾಹನಶಕವರುಷ ೧೪೬೬ನೆಯ ಶೋಭಕ್ರುತಸಂವಛರದ

೪ (ದ್ವಿ)ತೀಯಶ್ರವಣ ಸುದ ೧೦ ಮಿಯಲು ಶ್ರೀಮತು ಶ್ರೀಮನ್ಮ ಹಾಮಂಡ

೫. ಲೇಸ್ವರ ರಾಜಾಧಿರಾಜ ರಜಪರ (ಮೇಶ್ವರ *) ಶ್ರೀ ಸದಶಿವಮಹಾರಯರು | ಪ್ರತ್ವೀ

೬. ರಾಜ್ಯಂಗೈಉತಿರಲು | ಪ್ರಾಕು ಕೃಷ್ಣರಾಯಮಹರಯರು ಕು

೭. ಱುಗೋಡ ಸಂಗಮೇಶ್ವರದೇವರಿಗೆ ಸಾಮಾನ್ಯವಾಗಿ ಕೊಟ್ಟ ಚೆನಕುಂಟೆಯ

೮. ಗ್ರಾಮಉ ಅಚುತರಯಮಹರಯರ ಕಲದಲು ಕಿಱುಕುಳ ಉಪ…. .

೯. ವ ಗ್ರಾಮ ಹಳಗಿ ಖಿಲಿವಗಿ ಯಿ(ರ*) ಲಾಗಿ ಸದಶಿವರಯರ ಕರ್ಯಕರ್ತ್ತರ ಗು

೧೦. (ಂಡ) ಯಮಹಾರಾಯನ ಅಳಿಯ ಲಿಂಗರಜಗಳು ಸದಾಶಿವರಯ……

೧೧. ವಾಗಬೇಕೆಂದು ಕುರುಗೋಡ ಸಂಗಮೇಶ್ವರ ದೇವರಿಗೆ ಸ……..

೧೨. ಚೆನಕುಂಟೆಯ ಗ್ರಾ ಕ್ಕೆ ಬಿಟಿ ಕೊಟಣ………

೧೩. ಸದಾಸಿವರಾಯರಿಗೆ ಪುನ್ಯವಗಬೇಕೆಂದು

೧೪. ಚೆನಕುಂಟೆ ಗ್ರಾಮ ತೋಟ ಹಸರುಮಾನ್ಯ ಸಹವಾಗಿ

೧೫…… ನೆರೆದು ಕೊಟೆಉ ತನಿಕನು ಮುದೈಯನು

೧೬. ಇದಕೆ ಆರೊಂಬರು ತಂಪಿದರು ಮತ್ರುಗಳ ಕೊಂದ ಪಾ

೧೭. ಪಕೆ ಹೋಹರು ಸಿವಾಚರಕೆ ಕುಲಚರಕೆ ಹೋಹರು

೧೮. ಶ್ರೀ ಶ್ರೀ ( | *)

ಸೌ.ಇ.ಇ., IX, ಭಾಗ II, ನಂ. ೬೦೬

೧೧. ಅದೇ ದೇವಾಲಯದ ಮುಂದೆ

೧. ಶ್ರೀ ಸಂಗಮೇಶ್ವರದೇವರ ದೇ

೨. ವ ಕಾರ್ಯ್ಯಕ್ಕೆ ಸ್ವದೆಸಿ ಪರ

೩. ದೇಸಿಪಾಧೆ ೧ ಪರಿವರ ಬಿ

೪. ಟ್ಟ ಧರ್ಮ್ಮನೇತ ಅಡುವರು ಜೂ

೫. ಜಡುವರು ಕೊಟ್ಟ ಮೊದಲ ವೊ

೬. ಡವೊಂದೊಂದ ಕೊಟ್ಟ ಧರ್ಮವ ಧರ್ಮ

೭. ಕೈ ಕೇಡು

ಕನ್ನಡ ವಿಶ್ವವಿದ್ಯಾಲಯ ಶಾಸನ ಸಂ.೧, ಸಂ.೧೭, (ಬಳ್ಳಾರಿ ತಾ.)

೧೨. ಹಲುಗೋಡೆಯ ಪಾಳು ದೇವಾಲಯದ ದಕ್ಷಿಣದ ಗೋಡೆಯಲ್ಲಿ

೧. ಶುಭಮಸ್ತು [||*] ಸ್ವಸ್ತಿ ಶ್ರೀಜಯಾಭ್ಯುದಯಶಾಲಿವಾಹನಸಕವರುಷ ೧೪೬೩ ನೆಯ ವಿಶ್ವಾವಸು ಸಂ(ವ)ತ್ಸರದ ಪುಷ್ಯ ಬ ೧೦ ಸೋ ಲು ಶ್ರೀಮ (ಂ)ನ್ ಮಹಾದೇವ ದೇವೋತ್ತಮ

೨. ಕುಱೆಗೋಡ ಬಸ್ತಿಯ ಜಿಂನದೇವರಿಗೆ ಧರ್ಮಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀವೀರಾಪ್ರತಾಪ ಶ್ರೀವೀರಸದಾಶಿವರಾಯಮಹಾರಾಯ ಪೃಥ್ವೀರಾಜ್ಯಂ

೩. ಗೆಯುತ ಯಿರಲು ಶ್ರೀಮ(ಂ)ನ್ ಮಹಾಮಂಡಲೇಶ್ವರ ಕೊಟಗಾರಿ ರಾಮರಾಜವೊಡೆಯರ ಮೊಂಮಕ್ಕಳು ಅಳಿಯ ಲಿಂಗರಾಜಯದೇವ ಮಹಾಅರಸುಗ

೪. ಳ ಅಂಣಂದಿರು ರಾಮರಾಜಯಗಳು ತಂಮ ತಂದೆ ಮಲ್ಲರಾಜವೊಡೆಯರಿಗೆ ಪು(ಂ)ಣ್ಯ ವಾಗಬೇಕುಯೆಂದು ದೇವರ ಅಮ್ರುತಪಡಿನೈವೇದ್ಯಕ್ಕೆ

೫. ಕೊಟ ಹೊಲ ಕೆಳಹುಣಸೇಮರದ ಸ್ತಳದಲು ಮಂಗಜೀಯನವರ ಹೋಬಳಿ (ಪ) ಟ್ಟವಳಿಯವರು ಮಾಡುವ ಎರೆಯಸ್ತಳಂ ವ೧ ಇದರ

೬. ಹೊಲವನು ಹೊಂದಿದ ಮಂಗಜೀಯರ ನೀರಸ್ತಳದ… ಬಿತ್ತ ಬೀಜ ವ ೨ ಉಭಯಂ ಹೊಲಬೀಜ ವ ೩ ತೋಟ ಊರಿಗೆ ಮೂಡಲು ಉಪ್ಪಿನ

೭. ಮೋಳೆಯ ಹೊಂದಿದ ಕೊರವರ ಕನಕನ ತೋಟದ ಸ್ತ ೧ ಕ್ಕೆ ಬೀಜ ವ ೧ ಅಂತು ಸ್ತಳ ೩ ಕೆ ಬೀಜ ೪ ಅಕ್ಷಾರದಲು ನಾಗುಳದ ಬೀಜವರಿ

೮. ಯನು ಜಿಂನದೇವರ ಅಮೃತಪಡಿಗೆ ಕುಱುಗೋಡಗೌಡ ಸೇವಬೋವ ಪಟಣಸ್ವಾಮಿಗಳ ಅನುಮತದಿಂದ ಕೊಟೆಉ ಆಗಿ ಆಚಂ

೯. ದ್ರರ್ಕಸ್ತಯವಾಗಿ ದೇವರ ಅಮೃತಪಡಿ ನಯಿವೇದ್ಯಕ್ಕೆ ಅನುಭವಿಸಬಹುದು ಯಿ ಧ(ಂ)ರ್ಮಕ್ಕೆ ಆರೊಬರು ತಪಿದರೂ ತ(ಂ)ಮ್ಮ ತಂದೆ ತಾಯಿ ಕಾಶಿಯ್ಯಲಿ ಕೊಂದ ಪಾತ

೧೦. ಕಕ್ಕೆ ಹೋಹರು ಗೋಬ್ರಾಂಹ್ಮರ ಕೊಂದ ಪಾತಕಕ್ಕೆ ಹೋಹರು ಎಂದು ಕೊಟ ಧರ್ಮ್ಮದ ಶಿಲಾಶಾಸನ ಸರ್ವಮಾನ್ಯ [||] ಶ್ರೀಮೂಲಸಂಘಬಲಾತ್ಕರಗಣದ ಕಂಮೆವೈಸ್ಯ

೧೧. ಕುಲೋತ್ತಮ ಸೂರಿಯಪ್ಪಸೆಟ್ಟಿರ ಮಗ (ಗೋಮಿ) ಸೆಟ್ಟಿ ತತ್ಸಂವತ್ಸಂರದ ಪಾಲ್ಗುಣ ಶುಧ ೨ ಸೋ ಲು ಜೀರ್ಣೋದ್ಧಾರಣೆಯ ಮಾಡಿಸಿ ಸಮಸ್ತಸ್ರಾವಕರಿಗೆ ಪು(ಂ)ಣ್ಯ ವಾಗಬೇಕೆಂ

೧೨. ದು ಮಾಡಿಸಿದ ಜಿನಶಾಸನ ಶ್ರೀ ಶ್ರೀ ಶ್ರೀ

೧೩. ಪದ್ಮರಸಪಂಡಿತ ಅನುಕೂಲವಾಗಿ ಮಾಡಿಸಿದನು ಶ್ರೀ ||

ಕನ್ನಡ ವಿಶ್ವವಿದ್ಯಾಲಯ ಶಾಸನ ಸಂ.೧, ಸಂ.೧೫, ಬಳ್ಳಾರಿ ಜಿ. (ಬಳ್ಳಾರಿ ತಾ.)

೧೩. ಗ್ರಾಮದ ಸಮೀಪ ಹನುಮಂತನ ಬೆಟ್ಟದಲ್ಲಿನ ಆಂಜನೇಯ ಗುಡಿಯ ಪೂರ್ವದಿಕ್ಕಿನ ಗೋಡೆಯಲ್ಲಿ

೧. ಸ್ವಸ್ತಿ [||*] ಶ್ರೀಜಯಾಭ್ಯುದಯಶಾಲಿವಾಹನಶಕವರುಷಂಗ

೨.ಳು ೧೭೦೨ ನೆಯ ಶಾರ್ವರಿನಾಮ ಸಂ|| ದ ಆಶ್ವೀಜ ಶು ||೧

೩. ಯಲ್ಲು ಶ್ರೀಮತು ನವಾಬಹೈದರಲ್ಲಿಖಾನ ಬಾಹದರ

೪. ವರು ರಾಜ್ಯಂಗೈವುತ್ತಿರಲು ಶ್ರೀಹನುಮಂತ್ತ

೫. ದೇವರ ಗುಡಿ ಕಟಿಸಿದ ಶೇವೆ ಸಂಪೂರ್ಣ ಮಂಗ

೬. ಳ ಮಹಾಶ್ರೀ ಶ್ರೀ ||

ಸೌ.ಇ.ಇ., IX, ಭಾಗ II, ನಂ. ೭೦೬