ಗುರುವೇ ಗತಿಯನ್ನು ಮನವೇ | ತತ್ವ | ಗುರು
ವಿನ ಪದಕ್ಕಿಂತ ಪೆರತೊಂದು ಘನವೇ
ಮರೆವೆಯಿಂ ಮರುಳನಾಗಿರುವೆ | ಮೂರ್ತಿ |
ನರಮಾಂಸ ತನುವ ನಾನೆಂಬುದು ತರವೆ
ಅರಿಯದೆ ಹಿಂದೆ ನೊಂದಿರುವೆ | ಮುಂದೆ
ಕೊರತೆಯಿಲ್ಲದೆ ನಿಜಾನಂದದೊಳಿರುವೆ || ಗುರುವೆ ||
ಧನ ಧಾನ್ಯ ಬಂಧು ಭಾಗ್ಯಗಳು | ನಿನ್ನ | ಘನ
ನೀನರಿಯದ ಮಾಯ ಕಾರ್ಯಗಳು ಕೊನೆಗಾಣದಿರುವೋ
ದುಃಖಗಳು ಅಲ್ಲಿ | ಮನವಿಟ್ಟ ನೆರನಿಗೆ
ಬಿಡದು ಕೊಳಗಳು || ಗುರುವೆ ||
ತನ್ನ ತಾ ತಿಳಿವ ಸಾಹಸವ | ಬಿಟ್ಟು ನೀನೆಂದು
ಅದೃಶ್ಯವಾಗುವ ಬೀದಿ ಕಸವ | ಧ್ಯಾನಿಸುತ್ತಿರುವೋ
ಮಾನಸವ | ಬಿಟ್ಟು | ನೀನೆ ಆದರೆ
ಸೇವಿಸುವೆ ಸಿದ್ದರಸವ || ಗುರುವೆ ||
ಕುರುಹಿಲ್ಲದು ಶೂನ್ಯವೆಲ್ಲಾ | ನಿತ್ಯ ನಿರತಿಶಯಾನಂದ
ನುಡಿಯೊಳಗಿಲ್ಲ ಪರವಾದಿ ಇದನೇನ ಬಲ್ಲ |
ಅಲ್ಲಿ ಗುರು ಶಂಕರನ ಬಿಟ್ಟು ಪೆರೆತೆಂಬುದಿಲ್ಲ || ಗುರುವೆ ||
Leave A Comment