ಯಾಕೆ ತಿಳಿಯದೋದೆ ಮನುಜ ನೀನೇಕೆ ತಿಳಿಯದೋದೆ
ಯಾಕೆ ತಿಳಿಯೆ ನಿನಾತ್ಮಾಜ್ಞಾನವ ಮೂರ್ಖನ ಪರಿಯಲಿ
ಮೂಲೆಯನಿಡಿದು ಗಾಣವ ತಿರುಗುತಂ
ಬಳಲುವ ಕೋಣವ ಪರಿಯಲಿ ಕ್ಷೋಣಿಯ ತಿರುಗುತ
ಬಳಲಿದೆಯಲ್ಲದೆ ಕ್ಷೋಣಿಯ ಬೆಳಗುವ ಆತ್ಮನೆ ನಿನ್ನೋಲು || ಯಾಕೆ ||

ಕರತಲ ರತ್ನವನು ಅರಿಯದೆದೆರಮನೆ ಮಕ್ಕಳನು
ಸೆರಗೊಡ್ಡಿ ಬೇಡುವ ಅಂದದಿ ದೇಹದಿ
ಪರಮನು ಇರುತಿಹ ನೆಲೆಯನು ನಿನ್ನೊಳು
ಜಲದೊಳು ಮತ್ತಾದ ಬಳಕವು ಜಲದೊಳು
ಬೆಳೆಯುವದೆ ತಿಳಿಯಲಿ ತಾಪ / ತತ್ವದಿ ಚಿಂತನ
ಇಳೆಯೊಳು ಪುಟ್ಟುವ ಎಂಬುವ ನಿನ್ನೊಳು || ಯಾಕೆ ||

ಕುಲಚಲದಭಿಮಾನ ಕೋಪದ ಮುಳಗುತ
ನಿನಜ್ಞಾನ ಚಳಿಮಳೆ ಬಿಸಿಲಿಗೆ ಅಳುಕದೆ
ಹೊಳೆಯೊಳು ಮುಳುಗುವೆ ಅಲ್ಲದೆ ಆತ್ಮನೆ ನಿನ್ನೊಳು || ಯಾಕೆ ||

ಕರ್ಮಕೂರೆಯ ಬಿಡದೆ ಜ್ಞಾನದ ಮರ್ಮವನೆ ತಿಳಿಸೆ
ಕರ್ಮದ ಧರ್ಮದ ಮರ್ಮವ ತಿಳಿಸುವ
ನಿರ್ಮಾಲ ಗುರು ಹರಿ ಲಿಂಗನೆ ನಿನ್ನೊಳು || ಯಾಕೆ ||