ಮುನ್ನುಡಿ

ಇತ್ತೀಚಿನ ಐದಾರು ವರ್ಷಗಳಲ್ಲಿ ಆಗಾಗ್ಗೆ ಬರೆದ ಶ್ರೀ ಕುವೆಂಪು ಅವರ ಸಾಹಿತ್ಯಕ್ಕೆ ಸಂಬಂಧಿಸಿದ ಕೆಲವು ಲೇಖನಗಳ ಸಂಗ್ರಹವನ್ನು ‘ಕುವೆಂಪು ಸಾಹಿತ್ಯ : ಕೆಲವು ಅಧ್ಯಯನಗಳು’ ಎಂಬ ಹೆಸರಿನಿಂದ ಈಗ ಪ್ರಕಟಿಸಲಾಗುತ್ತಿದೆ. ಇದು ಎರಡನೆಯ ಸಂಪುಟ. ಮೊದಲನೆಯದು ೧೯೭೧ರಲ್ಲಿ ಬೆಂಗಳೂರಿನ ಕರ್ನಾಟಕ ಸಹಕಾರೀ ಪ್ರಕಾಶನ ಸಂಸ್ಥೆಯಿಂದ ಪ್ರಕಾಶನ ಪಡಿಸಲಾಗಿತ್ತು ಎಂಬ ವಿಷಯವನ್ನು ಓದುಗರ ಗಮನಕ್ಕೆ ತರಲಿಚ್ಛಿಸುತ್ತೇನೆ.

ನಾನು ಊರಲ್ಲಿಲ್ಲದಾಗ ಈ ಸಂಗ್ರಹದ ಕೆಲವು ಪುಟಗಳು ಅಚ್ಚಾದ್ದರಿಂದ ಮುದ್ರಣ ದೋಷಗಳು ಉಳಿದು ಬಿಟ್ಟಿವೆ. ನಾನೇ ಕರಡುತಿದ್ದಿದ್ದರೆ ಅವುಗಳ ಸಂಖ್ಯೆ ಕಡಿಮೆಯಾಗು ತ್ತಿದ್ದುವೇನೋ ಎಂದು ಮನಸ್ಸು ಕಸಿವಿಸಿಗೊಂಡಿದೆ. ನಾನು ಮಾಡಿದ ತಿದ್ದುಪಡಿಗಳೂ ಮೊಳೆ ಜೋಡಿಸುವವರ ಕಣ್ಣಿಂದ ತಪ್ಪಿಸಿಕೊಳ್ಳುವ ಸಂಭವವುಂಟು. ಎದ್ದು ಕಾಣುವ ಕೆಲವು ತಪ್ಪುಗಳನ್ನು ಕೊನೆಗೆ ಒಪ್ರೋಪಟ್ಟಿಮಾಡಿ ಕೊಟ್ಟಿದೆ. ಅನುಮಾನ ಬಂದಾಗ ಓದುಗರು ಸಹನೆಯಿಂದ ಆ ಕಡೆಗೆ ದೃಷ್ಟಿ ಹಾಯಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.

ದೇಜಗೌ
ಮೈಸೂರು ೧೨
೮.೮.೧೯೮೨