ಅರ್ಥಶಾಸ್ತ್ರವನ್ನು ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ನೋಡುವುದು ಬಹಳಮಟ್ಟಿಗೆ ನಡೆದುಕೊಂಡು ಬಂದ ಪದ್ಧತಿಯಾಗಿದೆ. ಅದನ್ನು ಸಾಮಾಜಿಕ ಸಂಬಂಧಗಳ ಮೂಲಕ ವಿಶ್ಲೇಷಣೆಗೆ ಒಳಪಡಿಸಲು ಆರ್ಥಿಕ ಸಮಾಜಶಾಸ್ತ್ರ (ಎಕನಾಮಿಕ್‌ಸೋಶಿಯಾಲಜಿ) ಪ್ರಯತ್ನಿಸುತ್ತದೆ. ಈ ನಿಟ್ಟಿನಲ್ಲಿ ಸಾಹಿತ್ಯದ ನೆರವನ್ನು ಹೇಗೆ ಪಡೆಯಬಹುದು ಎಂಬ ಪ್ರಯತ್ನವನ್ನು ಪ್ರಸ್ತುತ ಅಧ್ಯಯನದಲ್ಲಿ ಮಾಡಲಾಗಿದೆ. ಸಾಹಿತ್ಯವನ್ನು ವಿವಿಧ ಆಯಾಮಗಳ ಮೂಲಕ ನೋಡುವುದರಿಂದ ಅನೇಕ ಉಪಯುಕ್ತತೆಯನ್ನು ಕಂಡುಕೊಳ್ಳಬಹುದಾಗಿದೆ. ಅದು ಕೇವಲ ಭಾಷೆ ಮತ್ತು ಸೃಜನಶೀಲತೆಗೆ ಮಾತ್ರ ಸೀಮಿತವಾಗದೆ ಸಮಾಜವಿಜ್ಞಾನಗಳಿಗೆ ಮಹತ್ವಪೂರ್ಣ ಕೊಡುಗೆಯನ್ನು ನೀಡುವಲ್ಲಿ ಕೂಡ ಸಹಕಾರಿಯಾಗಿದೆ.

ಸಾಮಾಜಿಕ ಸಂಬಂಧಗಳು ಆರ್ಥಿಕ ವ್ಯವಸ್ಥೆಯನ್ನು ಪ್ರಭಾವಿಸುತ್ತವೆ. ಅಥವಾ ರೂಪಿಸುತ್ತವೆ ಎಂದೇ ಹೇಳಬಹುದು. ಈ ಸಂಬಂಧಗಳ ಆಮೂಲಾಗ್ರ ಚಿತ್ರಣ ನಮಗೆ ಸಾಹಿತ್ಯದಲ್ಲಿ ಸಿಗುತ್ತದೆ. ಇದರಲ್ಲಿ ಬರುವ ಸಾಮಾಜಿಕ ಚಿತ್ರಣಗಳಿಂದ ಸಮಾಜವಿಜ್ಞಾನಗಳನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಲು ಬಳಸಿಕೊಳ್ಳುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಕುವೆಂಪು ಅವರ ಎರಡು ಕಾದಂಬರಿಗಳ ಮೂಲಕ ಮಲೆನಾಡಿನ ಆರ್ಥಿಕ ವ್ಯವಸ್ಥೆಯನ್ನು ವಿಶ್ಲೇಷಿಸಲು ಪ್ರಯತ್ನಿಸಲಾಗಿದೆ. ಭಾರತದ ಶ್ರೇಣಿಕೃತ ಸಮಾಜ ಜನರ ಸಂಬಂಧಗಳ ಮೇಲೆ ಬೀರುವ ಪ್ರಭಾವ, ಅದರಿಂದ ಉಂಟಾಗುವ ಒಂದು ವ್ಯವಸ್ಥೆ, ಅದಕ್ಕೆ ಇರಬಹುದಾದ ಇನ್ನಿತರ ಕಾರಣಗಳನ್ನು ಕಾದಂಬರಿಗಳ ಆಧಾರದಿಂದ ಪರಿಶೀಲಿಸಲಾಗಿದೆ. ಇದರಿಂದ ಅರ್ಥಶಾಸ್ತ್ರದ ಹಾಗೂ ಸಾಹಿತ್ಯ ಸಾಧ್ಯತೆಗಳನ್ನು ವಿಸ್ತರಿಸುವ ಆಶಯವಿದೆ.

ಅಧ್ಯಯನದ ಸಮಯದಲ್ಲಿ ಸೂಕ್ತ ಸಲಹೆ ― ಸೂಚನೆಗಳನ್ನು ನೀಡಿದ ಡಾ. ಕರೀಗೌಡ ಬೀಚನಹಳ್ಳಿ ಅವರಿಗೆ, ತಮ್ಮ ಹಳೆಯ ಅನುಭವಗಳನ್ನು ನೆನಪಿಸಿಕೊಂಡು ನನ್ನೊಂದಿಗೆ ಹಂಚಿಕೊಂಡ ಶ್ರೀಮತಿ ಲಕ್ಷ್ಮೀದೇವಮ್ಮ, ಶ್ರೀ ಶೇಷಪ್ಪಗೌಡ, ಶ್ರೀ ಹಾಲಪ್ಪ ಅವರಿಗೆ, ಹತ್ತೊಂಬತ್ತನೇ ಶತಮಾನದ ಕೊನೆಯ ದಶಕದ ಮತ್ತು ಇಪ್ಪತ್ತನೇ ಶತಮಾನದ ಆರಂಭದ ದಶಕಗಳ ದಾಖಲೆಗಳನ್ನು ಒದಗಿಸಿದ ಶ್ರೀ ಕಡಿದಾಳ್‌ಪ್ರಕಾಶ್‌ಅವರಿಗೆ, ಶ್ರೀ ಆಲೆಮನೆ ಸುರೇಶ್‌ಅವರಿಗೆ, ಹಳೆಯ ಮೋಡಿ ಅಕ್ಷರಗಳನ್ನು ಓದಿ ಹೇಳಿದ ಶ್ರೀ ಆಲಿಗೆ ಗಣಪಯ್ಯನವರಿಗೆ ತುಂಬು ಹೃದಯದ ಕೃತಜ್ಞೆತಗಳು. ಹಾಗೆಯೇ ಮಲೆನಾಡ ಸಮಾಜವನ್ನು ನಿಕಟವಾಗಿ ಪರಿಚಯಿಸಿದ ಶ್ರೀ ಹೊಸಮನೆ ರಮೇಶ್‌ಹಾಗೂ ಶ್ರೀಮತಿ ಸಬಿತಾ ರಮೇಶ್‌ಅವರಿಗೆ ನನ್ನ ಧನ್ಯವಾದಗಳು. ಅಧ್ಯಯನದ ಸಮಯದಲ್ಲಿ ಸಂದೇಹಗಳನ್ನು ಪರಿಹರಿಸಿದ ಡಾ. ಸಿ. ಆರ್. ಗೋವಿಂದರಾಜು, ಶ್ರೀ ಎಚ್‌ಪಿ. ಶಶಿಧರಮೂರ್ತಿ ಹಾಗೂ ಡಾ. ಕೆ. ಸಿ. ಶಿವಾರೆಡ್ಡಿ ಅವರಿಗೆ ಹಾಗೂ ಪ್ರಕಟಣೆಗೆ ಪ್ರೋತ್ಸಾಹಿಸಿದ ಮಾನ್ಯ ಕುಲಪತಿಗಳಾದ ಡಾ. ಎ. ಮುರಿಗೆಪ್ಪ, ಮಾನ್ಯ ಕುಲಸಚಿವರು ಹಾಗೂ ಪ್ರಸಾರಾಂಗದ ನಿರ್ದೇಶಕರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು.

ಅಧ್ಯಯನಕ್ಕೆ ಪ್ರೋತ್ಸಾಹಿಸಿದ ಮಾನ್ಯ ಉಪಕುಲಸಚಿವರಾದ ಡಾ. ಕೇ. ಪ್ರೇಮಕುಮಾರ. ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಶ್ರೀ ಎಚ್‌. ಬಿ. ರವೀಂದ್ರ, ಶ್ರೀ ಬಿ. ಸುಜ್ಞಾನಮೂರ್ತಿ, ಶ್ರೀ ಕೆ. ಎಲ್‌. ರಾಜಶೇಖರ್, ಡಾ. ಎಸ್‌. ಮೋಹನ್‌ಮತ್ತು ಶ್ರೀ ಶಶಿಕುಮಾರ್ ಅವರಿಗೆ ನನ್ನ ಕೃತಜ್ಞತೆಗಳು. ಗ್ರಂಥಾಲಯ ಬಳಸಿಕೊಳ್ಳಲು ಅನುಕೂಲ ಮಾಡಿಕೊಟ್ಟ ಬೆಂಗಳೂರಿನ ಬಿ. ಎಂ. ಶ್ರೀ ಪ್ರತಿಷ್ಠಾನಕ್ಕೂ, ವರ್ಲ್ಡ ಕಲ್ಚರ್ ಗ್ರಂಥಾಲಯಕ್ಕೂ ನನ್ನ ಕೃತಜ್ಞತೆಗಳು. ಪುಸ್ತಕದ ಮುಖಪುಟ ವಿನ್ಯಾಸ ಮಾಡಿದ ಶ್ರೀ. ಕೆ. ಕೆ. ಮುಕಾಳಿ ಅವರಿಗೆ, ಅಕ್ಷರ ಸಂಯೋಜನೆ ಮಾಡಿದ ಜೆ. ಬಸವರಾಜ ಅವರಿಗೆ ಕೃತಜ್ಞತೆಗಳು.

ಕೆ. ಸಿ. ಚೆನ್ನಮ್ಮ