T. J. Mudligiri Rao & Co.,
ಅಕ್ಕಿ ಮಂಡಿ ಶಿವಮೊಗ್ಗ
೨೫
೧೯೨೩

ಮಹಾಶೀ ಶ್ರೀ ಕಡಿದಾಳು ಸುಬ್ಬಣ್ಣಗೌಡರು ಹುಳವಳ್ಳಿ ದಾಸಪ್ಪ ಗೌಡರು ಇವರ ಸ. ಕ್ಕೆ. ನಮಸ್ಕಾರಗಳು. ಕ್ಷೇಮ ಸಂಪ್ರಾತ.

ತಮ್ಮ ಕಡೆಯಿಂದ ಕ್ಷೇಮ ಸಮಾಚಾರ ಪತ್ರಗಳು ಇಲ್ಲ. ಭರ್ತಿಯಾದ ಸರಕು ಸಹ ರವಾನಿಸಲಿಲ್ಲ. ಭರ್ತಿಯಾದ ಸರಕು ಸಹ ಒಡನೆ ಅಭಿಮಾನ ಬಿಟ್ಟು ಭಾರಿಯಾಗಿ ಖಂಡಿತ ರವಾನಿಸಬೇಕಾಗಿ ಅಪೇಕ್ಷಿಸುತ್ತೇವೆ.

ಹಾಲಿ ಪ್ಯಾಟೆಧಾರಣೆ ತೀರ್ಥಹಳ್ಳಿ ದೇಶಾವರ ೧೩ರ ಲಾಗಾಯ್ತು (೧ ಮಣಕ್ಕೆ ೧೩ ರೂ.-೧೪ ರೂ. ವರೆಗೆ) ಕೊಪ್ಪ ಶೃಂಗೇರಿ ದರ ಲಾಗಾಯ್ತು ೧೦-೧೩ ರವರೆಗೆ. ಬೆಟ್ಟೆ ದರ ೭.೫೦ ಲಾಗಾಯ್ತು ೮.೫೦ ವರೆಗೆ. ಈ ರೀತಿ ಈವತ್ತಿನವರೆಗೆ ಮಾಲು ಇದ್ದಂತೆ ಧಾರಣೆ ಇರುತ್ತದೆ. ಮುಂದಾಗುವ ವ್ಯಾಪಾರದ ಮಾತು ಕಂಡವರಿಲ್ಲ. ಅಭಿಮಾನವಿರಲಿ.

(ಶ್ರೀ ಕಡಿದಾಳು ಪ್ರಕಾಶ್‌, ಕಡಿದಾಳು, ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಜಿಲ್ಲೆ. ಅವರ ಮನೆಯಲ್ಲಿ ಏಪ್ರಿಲ್೨೦೦೭ರಂದು ದೊರೆತದ್ದು ಅಡಕೆಯ ಪೇಟೆ ಧಾರಣೆಯಲ್ಲಿ ಏರಿಳಿತ ಉಂಟಾಗುತ್ತಿತ್ತು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.)