ಕಡೂರು ಡಿಸ್ಟ್ರಿಕ್ಟ್ಕೊಪ್ಪ ತಾಲೂಕು II ಕ್ಲಾಸ್
ಮ್ಯಾಜಿಸ್ಟ್ರೇಟ್ಕೋರ್ಟಿಗೆ

            ಫಿರ್ಯಾದಿ
ಕೊಪ್ಪ ಹೊರಬೈಲ್‌ಆಲೆಮನೆ,
ಸುಬ್ಬಯ್ಯನಾಯ್ಕ

ಅಪರಾಧಿ
ಚಲುವಾದಿ ಜಾತಿ ತಿಮ್ಮಯ್ಯನ ಮಗ
ಮಂಜ

ಫಿರ್ಯಾದಿ ಪ್ರಾರ್ಥನೆ, ತಾರೀಕು ೧೬೧೯೧೧

ಮೇಲ್ಕಂಡ ಅಪರಾಧಿಯು ನನ್ನ ತೋಟದಲ್ಲಿ ಕೂಲಿ ಕೆಲಸ ಮಾಡಿ ತೀರಿಸುವುದಾಗಿ ಖಂಡಿತ ಮಾಡಿಕೊಂಡು ಮಾಹೆಯಾನ ನಾಲ್ಕು ರೂಪಾಯಿ ತಲಬು ನಿಷ್ಕರ್ಷ ಮಾಡಿಕೊಂಡಿರುವ ಪ್ರಕಾರ ಹೊಟ್ಟೆ ಖರ್ಚಿಗೆ ಮೂರು ರೂಪಾಯಿ ಅಡ್ವಾನ್ಸ್‌ತೆಗೆದುಕೊಳ್ಳಲು ಜಾತಾ ಒಂದು ರೂಪಾಯಿ ತೀರ್ಗಡೆ ಮಾಡುವುದಾಗಿ ಬರ್ಸಿ ನನ್ನಿಂದ ಸನ್‌೧೯೧೦ನೇ ಇಸವಿ ದಶಂಬರ ತಿಂಗಳು ತಾರೀಖು ಮೂರರಲ್ಲೂ ನಗದಿ ಇಪ್ಪತ್ತೈದು ರೂಪಾಯಿ ತೆಗೆದುಕೊಂಡವನು ನನ್ನಲ್ಲಿ ಬರೆದು ಕೊಟ್ಟಿರುವ ನೌಕರಿ ಕರಾರು ಪ್ರಕಾರ ಕೆಲಸ ಮಾಡದೆ ಪರಾರಿಯಾಗಿದ್ದಾನೆ. ಸದರಿ ಅಪರಾಧಿಗೆ ಬ್ರಿಚ್‌ಆಫ್‌ಕಾಂಟ್ರಾಕ್ಟ್‌ಯ್ಯಾಕ್ಟ್‌ಪ್ರಕಾರ ವಾರಂಟು ಮೂಲಕ ಹಿಡಿದು ತರಿಸಿ ಸದರಿ ಅವನಿಂದ ನನ್ನ ಹಣ ಕೊಡಿಸುವದೇ ಆಗಲಿ, ಕೆಲ್ಸ ಮಾಡಿಸಿ ತೀರಿಸುವುದೇ ಆಗಲಿ ಈ ಬಗ್ಗೆ ಫೈಸಲು ಕೊಡಿಸಬೇಕಾಗಿ ಬೇಡಿಕೊಂಡಿದ್ದೇನೆ.

ಸುಬ್ಬಯ್ಯನಾಯ್ಕನ ರುಜು

(ಆಲೆಮನೆ ಸುರೇಶ್‌, ಆಲೆಮನೆ, ಕೊಪ್ಪ ತಾಲೂಕು, ಚಿಕ್ಕಮಗಳೂರು ಜಿಲ್ಲೆ ಇವರಲ್ಲಿ ದೊರೆತ ದಾಖಲೆ, ಒಪ್ಪಂದವನ್ನು ಮುರಿದು ಸಾಲವನ್ನು ತೀರಿಸದ ಆಳುಗಳ ವಿರುದ್ಧ ಜಮೀನ್ದಾರರು ಕೋರ್ಟಿನಲ್ಲಿ ದಾವಾ ಹಾಕುತ್ತಿದ್ದರು.)