ನಿಂದಾರೆ ಕುಸ್ಮಾಲಿ ಒಡ್ನಲ್ಲಿ
ನಿಂದಾರೆ ಕುಸ್ಮಾಲಿ ಒಡ್ನಲ್ಲಿ ದಾದಿಯೋರು
ಏನು ಕಾರಣ್ಣಿ ಕರದೀಯೇ
ಏನು ಕಾರಣ್ಣಿ ಕರ್ದಿಯೇ ಅಕ್ಕಾ ಕೇಳು

ಕರ್ದಾ ಕಾರಣವಾ ತಿಳದೇಳು
ಎಂದೂ ಇಲ್ಲದ ಜೋಗಿ ಇಂದೊಂದ್ ಜೋಗೀಬರ್ತಾ
ಜೋಗೀಯಾ ಲೂಟೀ ಹೆರೀದಕ್ಕು
ಜೋಗೀಯಾ ಲೂಟೀ ಹೆರ್ದಕ್ಕು ದಾದಿಯೋರೆ

ಪಡಿಯಾ ಕೊಟ್ಟವನಾ ಕಳುಗೀಸಿ
ಅಟ್ಟಂಬಾ ಮಾತಾ ಕೇಳಾರೆ ದಾದಿಯೋರು
ಮಾಳೂಗೀ ಒಳುಗೆ ನೆಡುದಾರೆ
ಸಣ್ಣ ಹಚ್ಚುಗಲಿ ಸೆಣ್ಣಕ್ಕಿ ಹೊಯ್ಕಂಡಿ

ತೆಂಗೀನಾ ಕಾಯೀ ಪಲಾ ದೋಸ್ತಾ
ತೆಂಗೀನಾ ಕಾಯಿ ಪಲದೋಸ್ತಾ ತಡಕಂಡಿ
ಮಾಳಗ್ಗಿಂದೆರಗೇ ಬರೋವಾರು
ಮಾಳಗ್ಗಂದೆರಗೇ ಬರುವಾರು ದಾದಿಯೋರು

“ಇಕ್ಕೊಳ್ಳೋ ಜೋಗಿ ಪಡಿದಾನಾ”
“ನಿಮ್ಮಾ ಕಯ್ಪಡಿಯಾ ಕಿಟ್ಟೂ ಜೋಗಿಯಲ್ಲಾ
ನಿಮ್ಮಮ್ಮನ ಕಯ್ಪಡಿಯೇ ಬರೋಬೇಕು”
ನಮ್ಮ ಅಮ್ಮನು ನಿಮ್ಮಂತೋರಿಗ ಪಡಿ ಅಳಿಯಾ

ಮಟ್ಟಾದಲ್ಲಿರುವಾ ಹೆರಿಗುರು
ಮಟ್ಟಾದಲ್ಲಿರುವಾ ಹೆರಿಗುರುಗಲ್ಲದೇ
ಮಿಕ್ಕೀ ದೋರಿಗ್ ಪಡಿಯಾ ಅಳೂದಿಲ್ಲಾ

“ಮಟ್ಟಾದಲ್ಲಿರುವ ಹೆರಿಗುರು ತಾನೇ ಸರಿಯೇ
ನಿಮ್ಮಮ್ಮನ ಕಯ್ಪಡಿಯೇ ಬರೋಬೇಕು”
ಅಟ್ಟಂಬಾ ಮಾತಾ ಕೇಳಾರೆ ದಾದಿಯೋರು
ಮಾಳೂಗಿ ಒಳಗೇ ನೆಡದಾರೆ.

ಮಾಳೂಗೀ ಒಳಗೇ ನೆಡದಾರೆ ದಾದಿಯೋರು
ಸೆಣ್ಣಾ ಹಚ್ಚಗಿಯಾ ಮಡಗಾರೆ
ಸಣ್ಣಾ ಹಚ್ಚಗಿಯಾ ಮಡಗಾರೆ ದಾದಿಯೋರು
ಹೋಗಿ ತಮ್ಮಕ್ಕಗೇ ಒರದಾರೆ

“ನಿಮ್ಮಾ ಕಯ್ಪಡಿಯಾ ಕಿಟ್ಟೂ ಜೋಗಿಯಲ್ಲಾ
ನಿಮ್ಮಕ್ಕನ ಕಯ್ಪಡಿಯೇ ಬರೋಬೇಕು”
ನಮ್ಮ ಅಕ್ಕಾನು ನಿಮ್ಮಂತೋರಿಗ ಪಡಿಕೊಡಾ
ಮಟ್ಟಾದಲ್ಲಿರುವಾ ಹೆರಿಗುರು
ಮಟ್ಟಾದಲ್ಲಿರುವಾ ಹೆರಿಗುರುಗಲ್ಲದೇ

ಮಿಕ್ಕೀದೋರಿಗ್ ಪಡಿಯಾ ಅಳುವಾದಿಲ್ಲ
“ಮಟ್ಟಾದಲ್ಲಿರುವಾ ಹೆರಿಗುರು ತಾನೇ ಸಯ್ಯೆ
ನಿಮ್ಮಕ್ಕನ ಕಯ್ಪಡಿಯೇ ಬರೋಬೇಕು”
ಅಟ್ಟಂಬಾ ಮಾತಾ ಕೇಳಾದೇ ಕುಸುಮಾಲಿ

ಮುತ್ತೀನಾ ಕಣ್ಣೀರಾ ಸೆಡದಾಳೆ
ಮುತ್ತೀನಾ ಕಣ್ಣೀರಾ ಸೆಡದಾಳೆ ಕುಸ್ಮಾಲಿ
ಮಾಳೂಗೀ ಒಳಗೇ ನೆಡದಾಳೆ

ಆ ಪಟ್ಟೀ ಉಟ್ಟರೆ ಆ ಜೋಗಿ ಮರಳಾಗ್ವಾನಂದಿ
ಆ ಪಟ್ಟೀ ಬಿಚ್ಚಿ ಬದ್ಲಾ ಉಟ್ಟಿ
ಆ ರವ್ಕೀ ಇಟ್ಟಾರೆ ಆ ಜೋಗಿ ಮರಳಾಗ್ವಾನಂದಿ
ಆ ರವ್ಕೀ ತೆಗದೀ ಬದಲಿಕ್ಕಿ

ಆ ಮಂಡೀ ಕಟ್ಟರೆ ಆ ಜೋಗಿ ಮರಳಾಗ್ವಾನಂದಿ
ಆ ಮಂಡೀ ಬಿಚ್ಚೀ ಬದ್ಲ ಕಟ್ಟಿ
ಆ ವಾಲೀ ಇಟ್ಟಾರೆ ಆ ಜೋಗಿ ಮರಳಾಗ್ವಾನಂದಿ
ಆ ವಾಲಿ ತೆಗದೀ ಬದ್ಲಾ ಇಕ್ಕಿ

ಆ ಮುಗುಳಿಟ್ಟಾರೆ ಆ ಜೋಗಿ ಮರಳಾಗ್ವಾನಂದಿ
ಆ ಮುಗುಳಾ ತಗದಿ ಬದ್ಲಾ ಇಕ್ಕಿ
ಆ ಉಂಗೋಲಿಟ್ಟಾರೆ ಆ ಜೋಗಿ ಮರಳಾಗ್ವಾನಂದಿ
ಆ ಮುಗುಳಾತಗದಿ ಬದ್ಲಾ ಇಕ್ಕಿ

ಆ ಉಂಗೀಲಾ ತಗ್ಲಿ ಬದ್ಲಿಕ್ಕಿ ಕುಸ್ಮಾಲಿ
ಮಾಳೂಗೀ ಒಳಗೆ ನೆಡದಾಳೆ
ದೊಡ್ಡಾ ಹಚ್ಚಗಲಿ ದೊಡ್ಡಕ್ಕಿ ಹೊಯ್ಕಂಡಿ

ಮೊದಲಕಾಯಾ ಪಲದೋಸ್ತಾ
ಮೊದಲ ಕಾಯಾ ಪಲದೋಸ್ತಾ ತಡಕಂಡಿ
ಮಾಳಗಿಂದೆರಗೇ ಬರೋವಾಳು
ಮಾಳಗ್ಗಿಂದೆರಗೇ ಬರುವಾಳು ಕುಸುಮಾಲಿ

“ಇಕ್ಕೊಳ್ಳೋ ಜೋಗಿ ಪಡೀದಾನಾ”
ಅಲ್ಲಿಂದ ಕೊಟ್ಟಾರೆ ಪುಣ್ಣಿಲ್ಲಾ ಪಲವಿಲ್ಲಾ
ಮತ್ತೊಂದು ಮೆಟ್ಟಾ ಇಳ್ದೇ ಬಂದೀ
ಮತ್ತೊಂದು ಮೆಟ್ಟಾ ಇಳ್ದ ಬಂದೀ  ಕೊಟ್ಟಾರೆ
ನಿನ್ನ ಮುತ್ತಯ್ದ ತನಕ ಹರಸೂವೆ”

“ಮುತ್ತಯ್ದ ತನಕೆ ನೀ ಏನಾ ಹರಸುವೆ ಜೋಗಿ
ಮಾವಾನೋರ್ ಮಗನೆ ಸುಕಾಬಾಳಿ
ಮಾವಾನೋರ್ ಮಗನೆ ಸುಕ್ಬಾಳಿ ಇದ್ದಾರೆ
ಮುತ್ತಯ್ದೆ ತನಕೆ ತೆರಣಿಲ್ಲ”

ಅಟ್ಟಂಬಾ ಮಾತಾ ಹೇಳಾದೆ ಕುಸ್ಮಾಲಿ
ಮತ್ತೊಂದು ಮೆಟ್ಟಾ ಇಳದದೆ
ಮತ್ತೊಂದು ಮೆಟ್ಟಾ ಇಳದದೆ ಕುಸ್ಮಾಲಿ
“ಇಕ್ಕೊಳ್ಳೋ ಜೋಗೀ ಪಡಿದಾನಾ ”

“ಅಲ್ಲಿಂದ್ ಕೊಟ್ಟಾರೆ ಪುಣ್ಣಿಲ್ಲ ಪಲವಿಲ್ಲ
ಮತ್ತೊಂದಾ ಮೆಟ್ಟಾ ಇಳ್ದೇ ಬಂದಿ
ಮತ್ತೊಂದಾ ಮೆಟ್ಟಾ ಇಳ್ದ ಬಂದೀ ಕೊಟ್ಟಾರೆ
ನಿನ್ ಪುತ್ರ ಸಂತಾನ್ಕೆ ಹರಸೂವೆ

“ಪುತ್ರ ಸಂತಾನಕ್ಕೆ ನೀಏನ ಹರಸುವೆ ಜೋಗಿ
ಅತ್ತಿಯೋರಾ ಮಗನೆ ಸುಕಬಾಳಿ
ಅತತಿಯೋರ್ ಮಗನೆ ಸುಕಬಾಳಿ ಇದ್ದರೆ
ಪುತ್ರ ಸಂತಾನ್ಕೆ ತೆರಣಿಲ್ಲ
ಪುತ್ರ ಸಂತಾನ್ಕೆ ತೆರಣಿಲ್ಲ ಅಂದೇಳಿ

ಮತ್ತೊಂದು ಮೆಟ್ಟಾ ಇಳದಾಳೆ
ಮತ್ತೊಂದು ಮೆಟ್ಟಾ ಇಳ್ದಾಳೆ ಕುಸ್ಮಾಲಿ
“ಇಕ್ಕೊಳ್ಳೋ  ಜೋಗಿ ಪಡೀದಾನಾ”
“ಪಡಿಯಾ ತಕ್ಕಂಬೂಕೆ ಜೋಳುಗಿ ತರಲಿಲ್ಲ
ಅಕ್ಕೀ ಕೊಡಕ್ಕಿ ತೂಳದೆತ್ತು”.

“ಅಕ್ಕೀ ಎತ್ತೂವಕೆ ಅತ್ತಿಲ್ಲ ಮಾವಿಲ್ಲ
ಕಯ್ತಡ್ದಾ ಪುರಿಸರು ಮನಿಲಿಲ್ಲ
ಕಯ್ತಡ್ದಾ ಪರಿಸರು ಮನಿಲಿಲ್ಲ ಎಲೆಜೋಗಿ
ನೀ ಹೋಗೋ ಮಟ್ಟದಾ ಜಗುಲೀಗೆ ”

“ನಿನ್ನಾ ಮಟ್ಟವೆ ಎತ್ತಾಂಗದ್ ಅರಿಯಾನೆ
ಅಕ್ಕೀ ಕೂಡಕ್ಕಿ ತೊಳದೆತ್ತು”
“ದಾರಿ ಗೊತ್ತಿಲ್ಲಾರೆ ದಾದಿಯೋರ್ ಕಳಗೂತೆ
ನೀ ಹೋಗೋ ಮಟ್ಟದಾ ಜಗುಲೀಗೆ ”

“ನಿನ್ನಾ ದಾದಿಯೋರು ಜುಳ್ಳುಳ್ಳಿ ಜಂವ್ತೀರು
ಮುಳ್ಳೋಳಗೆ ನನ್ನಾ ಎಳೆವಾರು
ಮುಳ್ಳೋಳಗೆ ನನ್ನಾ ಎಳೆವಾರು ಎಲೆಣ್ಣೆ
ಅಕ್ಕೀ ಕೊಡಕ್ಕಿ ತೊಳದೆತ್ತು”

“ಅಕ್ಕಿ ಎತ್ತೂವಾಕಿ ಅತ್ತಿಲ್ಲ ಮಾವಿಲ್ಲ
ಕಯ್ತಡ್ದ ಪುರಿಸರು ಮನಿಲಿಲ್ಲ
ಕಯ್ತಡ್ದ ಪುರಿಸರು ಮನಿಲಿಲ್ಲ ಎಲ್ಜೋಗಿ
ನೀ ಹೋಗು ಮಟ್ಟದಾ ಜಗೂಲೀಗೆ”

ಕಟ್ಟಾ ಮನೀ ಯಾರಿದೆ ಹೂಡಿದ ಒಲೀ ಯಾರೀದೆ
ಕರ್ದುಂಬು ಎಮ್ಮೀ ಯಾರು ಬಳವರಿ ”
“ಕಟ್ಟಿಮನಿ ಮಾವಂದು ಯಾರಾ ಬಳವರಿ ”
ಕರ್ದುಂಬು ಎಮ್ಮಿ ನನ್ಬಳವರೀ”

“ಕಟ್ದಾ ಮನಿಯಾರೀದೆ ಹೂಡೀ ದೊರೆಯಾರೀದೆ
ಬೆಳಗುಂಬೇ ಹರಿವಾಣ ಯಾರು ಬಳವರಿಯೆ | ”
ಕಟ್ದಾ ಮನೆ ಮಾವಂದೂ ಹೂಡಿ ದೊಲತ್ತಿದು
ಬೆಳ್ಗುಂಬೂ ಹರ‍್ವಾಣ ನನ್ಬಳವರೀ
ಬೆಳ್ಗಂಬೂ ಹರ‍್ವಾಣಾ ನನ್ಬಳವರಿ ಎಲ್ಜೋಗಿ

ನಿನ್ನೊಟ್ಟೀಲೆಕೆ ಉರದಾವೋ
ನಿನ್ನೋಟ್ಟೀಲೆಕೆ ಉರ‍್ದಾವೂ ಎಲ್ಜೋಗಿ
ನೀನೋಗೋ ಮಟ್ಟದಾ ಜಗುಲೀಗೆ”
:”ಗೋವಿಗೆ ಹೋಗ್ವಾ ಬತ್ತಯಾ ಗೋವೀತೀರತಮೀವಾ
ಗೋವಿಯಾ ದಂಡೀ ಹದಿನಾರಾ
ಗೋವೀಯಾ ದಂಡೀ ಹದ್ನಾರ್ ತೆಗೆಸಿ ಕೊಡ್ತೇ
ಬತ್ತೀಯಾ ಹೆಣ್ಣೇ ಒಡ್ನಲ್ಲಿ?”

“ಗೊವೀ ಗೋಗ್ವಕ್ಕೆ ಗೋವಿತೀರ‍್ತ ಮೀವಕ್ಕೆ
ಮಾವಬನೋರ್ ಮಗ್ನೆ ಸುಕಬಾಳ
ಮಾವನೋರ್ ಮಗ್ನೆ ಸುಕಬಾಳಿ ಇದ್ತಾರೆ
ಗೋದೀ ದಂಡೀಗೆಗೆ ಬರಾಬಂತು ?”

ಗುತ್ತೀ ಗೋಗ್ವಾ ಬತ್ಯಾ ಗುತ್ಗೀ ತೀರುತಮೀವಾ
ಗುತ್ತಿಯಾ ದಂಡೇ ಹದಿನಾರು
ಗುತ್ತೀಯಾ ದಂಡೇ ಹದ್ನಾರ್ ತಗ್ಸಿ ಕೊಡ್ತೆ
ಬತ್ತೀಯಾ ಹೆಣ್ಣೆ ಬಡನಲ್ಲಿ ”
ಗುತ್ತಿಗ್ ಹೋಗ್ವಕ್ಕೆ ಗುತ್ತೀ ತೀರುತ ಮೀವಕ್ಕೆ
ಅತ್ತಿಯೋರ್ ಮಗನೆ ಸುಕಬಾಳಿ
ಅತ್ತೀಯೋರ್‌ ಮಗನೇ ಸುಕಬಾಳಿ ಇದ್ದಾರೆ
ಗುತ್ತಿದಂಡೀಗೆಕೆ ಬರಾಬಂತು

ಅಡಾಡ್ದಾ ಮಾತೀಗೆ ಸೆಲ್ಲು ಗುರೀಲಿ ಗೆದ್ದೀಯೆ
ಹಳ್ಳಾದಾಟ್ವಲ್ಲಿ ನೆನಕಂಬ್ಯೇ
ಹಳ್ಳಾದಾಟ್ವಲ್ಲಿ ಅತ್ತೀನೆನುವಾನೋ ಮಾವನ ನೆನುವಾನೋ
ಕಯ್ತಡ್ದಾ ಪುರಿಸಾರ ನೆನವಾನೋ
ಕಯ್ತಡ್ದಾ ಪುರಿಸಾರಾ ನೆನುವಾನೋ ಎಲ್ಜೋಗಿ

ನಿನ್ನೆರು ನೆನುವಾರೋ ಸಿರು ಬುಯ್ಡೀಯ”
ಅಟ್ಟಂಬಾ ಮಾತಾ ಹೇಳಾದೆ ಕುಸುಮಾಲಿ
ಮಾಳೂಗಿ ಒಳಗೆ ನೆಡುದಾದೆ
ಮಾಳೂಗಿ ಒಳಗೆ ನೆಡ್ದಾಳೆ ಕುಸುಮಾಲಿ
ದೊಡ್ಡ ಹಚ್ಚಗೀಯಾ ಮಡಗಾಳೆ
ದೊಡ್ಡ ಹಚ್ಚಗಿಯಾ ಮಡಗಾಳೆ ಕುಸ್ಮಾಲಿ
ಅಮೃತ ಗಿಂಡೀಯಾ ತಡದಾಳೆ
ಅಮೃತ ಗಿಂಡೀಯಾ ತಡ್ದಾಳೆ ಕುಸ್ಮಾಲಿ

ಮಾಳಗ್ಗಿಂದೆರುಗೇ ಬರೂವಾಳು
ಮಾಳಗ್ಗಿಂದೆರಗೇ ಬರುವಾಳು ಕುಸ್ಮಾಲಿ
ಜೋಗಿಗ್ ಅಮರೂತ ತೊಳುದಾಳೆ
ಜೋಗಿಗ್ ಅಮರೂತ ತೊಳ್ವದ್ನು ಜೋಗೀಗೆ
ಸುಮ್ ನಿದ್ರಿ ಬಂದೀ ಕಮೀದಾವೆ
ಸುಮ್ ನಿದ್ರಿ ಬಂದೀ ಕಮುವದ್ನು ಕುಸುಮಾಲಿ
ಮಾಳೂಗೀ ಒಳಗೆ ನೆಡದಾಳೆ
ಮಾಳೂಗೀ ಒಳಗೆ ನೆಡದಾಳೆ ಕುಸುಮಾಲಿ

ಅಮರುತದಾ ಗಿಂಡೀ ಮಡೂಗಾಳೆ
ಅಮರೂತದಾ ಗಿಂಡೀ ಮಡೂಗಾಳೆ ಕುಸುಮಾಲಿ
ಹಿತ್ಲ ಕಣ್ನ ಬಾಗಲ್ಲೆ ಹೊರೂಟಾಳೆ
ಹಿತ್ಲ ಕಣ್ನ ಬಾಗಲ್ಲೇ ಹೊರಟಾಳೆ ಕುಸುಮಾಲಿ
ಅತ್ ಕುಂತೀಯೋರ್ ಅರ‍್ಮನಗೇ ನೆಡದಾಳೆ
ಅತ್ ಕುಂತಿ ಅರ‍್ಮನೆಗೆ ನೆಡದಾಳೆ ಕುಸುಮಾಲಿ

ಹೋಗೀ ರಾಜಂಗ್ಳಾ ನೆಗದತ್ತೀ
ಹೋಗಿ ರಾಜಂಗ್ಳಾ ನೆಗದತ್ತೀ ಕುಸ್ಮಾಲಿ
ಮಾಳೂಗೀ ಒಳಗೇ ನೆಡವಾಳು
ಮಾಳೂಗೀ ಒಳಗೆ ನೆಡವಾಳು ಕುಸ್ಮಾಲಿ
ತೂಗು ಮಂಚದಲೇ ಕುಳುವಾಳು
ತೂಗು ಮಂಚದ್ಲೆ ಕುಳುವುದ್ನು ಒಳಗಿದ್ದ
ಆತ್ ಕುಂತೀ ಹೆರುಗೇ ಬರುವಾಳು

“ಯಾವಾಗ್ಗು ತನ್ನಾ ಅರಮಲ್ಲಿ ಇರುವಾಳು
ಏನ್ ಬಂದೇ ತನ್ನಾ ಅರಮನ್ಗೆ ”
ಎಂದೂ ಇಲ್ಲದ ಜೋಗಿ ಇಂದೋದ್  ಜೋಗಿ ಬಂದಾ
ಜೋಗಿಯಾ ಲೂಟಿ ಹೆರ್ದಾಯ್ತು
ಜೋಗಿಯಾ ಲೂಟಿ ಹೆರ್ದಾಯ್ತು ಅತ್ತಿಯೋರೆ
ಏನಾ ಮಾಡವ್ನಾ ಕಳಗಲಿ
ಏನಾ ಮಾಡವ್ನಾ ಕಳಗಲಿ ಅತ್ತೀಯೋರೆ

ಹೊಡ್ಡೀ ಬಡ್ದವ್ನಾ ಕಳಗಾಲೋ
“ಹೋಡ್ದೀ ಬಡ್ದವ್ನಾ ಕಳ್ಗದ್ದುಂಟಾದರೆ ನಿನ್ನಾ
ಸೋಲಿ ಸುಕ್ರಮ್ಗೆ ಕುಂದೂ ಬರುವಾದು
ಸೂಳಿ ಸುಕ್ರಮ್ಗೆ ಕುಂದು ಬರುವಾದು ಕುಸ್ಮಾಲಿ
ಅಡಿಗಾಯಾ ಮಾಡೀ ಬಡಸಂದೀ”
ಆಟ್ಟೊಂದು ಮಾತಾ ಕೇಳಾದೆ ಕುಸ್ಮಾಲಿ
ಆಗೊಂದು ಮಾತಾ ನುಡದಾಳೆ

“ಹಿಂಡ್ರ ಬಾಳ್ಸವವ್ರು ಪುಂಡತನ್ಕೀಗ್ಸಳವವ್ರು
ಗಂಡೂ ರೂಪ್ದಲ್ಲಿ ಚಲುವಂವ
ಗಂಡೂ ರೂಪ್ದಲ್ಲಿ ಚಲುವಂವ ಅತ್ತಿಯೋರೆ
ನಿಮ್ಮೂಲಮಗ ಹಿಂಡ್ರ ಬಳ್ಸೂನ ಅಸ್ಮಾಮಾನಾ
ಹಿಂಡ್ರ ಬಾಳ್ಸೂವಾ ಅಸ್ಮಾನಾ ಅಂದೇಳಿ ಕುಸ್ಮಾಲಿ
ಸಿಟ್ಟಿನಲ್ಲೆದ್ದೇ ಬರುವಾಳೆ
ಸಿಟ್ಟಿನಲ್ಲೆದ್ದೇ ಬರುವಾಳೆ ಕುಸ್ಮಾಲಿ

ಬಾವ್ ದರ್ಮರರ ಮನಗೇ ಬರೋವಾಳೆ
ಬಾವ್ ದರ್ಮರ ಮನೆಗೇ ಬರುವಳೆ ಕುಸ್ಮಾಲಿ
ಹೋಗಿ ರಾಜಂಗ್ಳ ನೆಗದತ್ತೀ
ಹೋಗಿ ರಾಜಂಗ್ಳಾ ನೆಗದತ್ತೀ ಕುಸ್ಮಾಲಿ
ತೂಗು ಮಂಚದ್ಲೆ ಕುಳತಾಳೆ
ತೂಗುಮಂಚದ್ಲೆ ಕುಳುವುದ್ನು ಬಳಗಿದ್ದಾ
ಬಾವದರ್ಮರೆರಗೆ ಬರುವಾರು

“ಯಾವಾಗೂ ಅರ‍್ಮಲ್ಲಿ ಇರ‍್ವಳು ಕುಸುಮಾಲಿ
ಏನ್ ಬಂದೆ ನನ್ನ ಅರ್ಮನಗೆ
“ಎಂದೂ ಇಲ್ಲದ ಜೋಗಿ ಇಂದೋಂದ್ ಜೋಗೀಬಂದಾ
ಜೋಗಿಯಾ ಲೂಟೀ ಹೆರ್ದಕ್ಕ
ಜೋಗೀಯಾ ಲೂಟಿ ಹೆರ್ದಕ್ಕೂ ಬಾವ್ನೋರೆ
ಏನಾ ಮಾಡಾವ್ನಾ ಕಳಗಾಲಿ
ಏನಾ ಮಾಡಾವ್ನಾ ಕಳಗಾಲಿ ಬಾವ್ನೋರೆ
ಹೊಡ್ದಿ ಬಡ್ದವ್ನಾ ಕಳಗಾಲೋ”

“ಹೊಡ್ದಿ ಬಡ್ದವ್ನಾ ಕಳ್ಗದುಂಟಾದರೆ ನಿನ್ನಾಲಾ
ಸೂಲಿಸುವ ಕ್ರಮ್ಗೆ ಕುಂದೂ ಬರುವಾದು
ಸೂಲಿಸುಕ್ರಮ್ಗೆ ಕುಂದೂ ಬರುವಾದು ಕುಸ್ಮಾಲಿ
ಅಡಗೀಯಾ ಮಾಡಿ ಬಡಸಂದಿ ”
“ಹಿಂಡ್ರಬಾಳಸ್ವಿರು ಪುಂಡತನ್ಕೀಗಳ ಸ್ವರಂ
ಗಂಡೂ ರೂಪಲ್ಲೆ ಚಲುವಂವ
ಗಂಡೂ ರೂಪ್ದಲ್ಲಿ ಚೆಲುವಂವ ಬಾವಾಕೇಳೋ

ನಿನ್ನಾಲತಮ್ಮಾ ಹಿಂಡ್ರ ಬಳ್ಸೂವಾ ಅಸ್ಮಾನಾ
ಹಿಂಡ್ರ ಬಾಳ್ಸೂವಾ ಅಸ್ಮಾನಾ ಅಂದೇಳಿ ಕುಸ್ಮಾಲಿ
ಸಿಟ್ಟಿನಲ್ಲೆದ್ದೇ ಬರುವಾಳು
ರಾಜಂಗ್ಳ ಮೆಟ್ಟಾ ಇಳೂದಾಳೆ
ರಾಜಂಗ್ಳ ಮಟ್ಟಾ ಇಳುದಾಳೆ ಕುಸ್ಮಾಲಿ
ರಾಜ ಮಾರ್ಗಲೇ ಬರೂವಾಳೆ
ರಾಜ ಮಾರ್ಗಲೇ ಬರುವಾಳೆ ಕುಸ್ಮಾಲಿ

ಕೆಂದೂಗಿ ಬನವಾ ಇಳೋವಾಳೇ
ಕೆಂದೂಗೀ ಬನವಾ ಇಳುವಾಳೆ ಕುಸ್ಮಾಲಿ
ಕೆಂದೂಗೊಂದೋಲೀ ಕೋಯೀದಾಳೆ
ಕೆಂದೂಗೊಂದೂಲಿ ಕೊಯ್ದಾಳೆ ಕುಸ್ಮಾಲಿ

ಸೆಳ್ಳುಗುರಿಲೋಲಲೀ ಬರದಾಳ
“ಇಬ್ಬರು ನೆಡುಗೆ ಒಬ್ಬಳೆ ಕಿರ‍್ದಂಗಿ
ಮಜ್ಜನ ಗಳಗ್ಯಲೇ ಬರೋಬೇಕು
ಮಜ್ಜನ ಗಳಗ್ಯಲ್ಲೆ ಬಾರಾದೇ ಇದ್ದರೆ