ಸೆಲ್ಲುಗುರೀಲ್ ಪ್ರಾಣಾ ಕಳಕಂಬೆ
ಸೆಲ್ಲುಗುರೀಲ್ ಪ್ರಾಣಾ ಕಳಕಂಬೆ ಅಂದೇಳಿ
ತೆನ್ನಾಲಗಿಳಿಗೋಳಾ ದೆನಿಮಾಡಿ
ತನ್ನಾಲ ಗಿಳಿಗೋಳಾ ದೆನಿಮಾಡಿ ಕರ‍್ವದ್ನು
ಕರ್ದಕಾರಣಕ್ಕೆ ಬರೋವಾರು
ಕರ್ದ ಕಾರಣಕ್ಕೆ ಬಂದಾವೇ ಗಿಳಿಗೋಳೂ

ನಿಂದವು ಕುಸ್ಮಾಲಿ ಒಡನಲ್ಲಿ
ನಿಂದವು ಕುಸ್ಮಾಲಿ ಒಡ್ನಲ್ಲಿ ಕುಸ್ಮಾಲಿ
ಕೊಟ್ಟಾಳೆ ಬಲಗಯ್ಲೀ ಬರದೂಲಿ
ಕೊಟ್ಟಾ ವಾಲಿಯಾ ರಟ್ಟೆಯಲಡಗಸಗಂಡಿ
ಹಾರಿದವಂಬರಕೆ ಸೆರಿಯಾಗಿ
ಹಾರಿದವಂಬರಕೆ ಸರಿಯಾಗಿ ಗಿಳಿಗೋಳು

ಸೂಲಿ ಸುಕ್ರಮ್ನ ರಾಜ್ಯಕ್ಕೆ ನೆಡದಾರೆ
ಸೂಲಿ ಸುಕ್ರಮ್ನ ರಾಜ್ಯಕ್ಕೆ ನೆಡ್ದಾರೆ ಗಿಳಿಗೋಳು
ಹೋಗಿ ಮಿಳಿಮೆನೆ ಕುಳತಾರೆ
ಹೋಗಿ ಮಿಳಿಮೆನೆ ಕುಳತಾರೆ ಗಿಳಿಗೋಳು
ಗಿಳಿಯಾಗೇ  ಮಿಳಿಯಾ ಅಲಸಾರೆ
ಗಿಳಿಯಾಗೇ ಮಿಳಿಯಾ ಅಲಸಾರೆ ಗಿಳಿಗೋಳು

ಸೂಲಿ ಸುಕ್ರಮ್ನ ತೊಡಿಮೆನೆ ಮಡಗಾರೆ
ಮಡಗೀದ ಒಲಿಯಾ ಮರ್ಚಿಕ್ಕಿ ನೋಡಾರ
ಪನ್ನೀ ಮರಿಯಲ್ಲೇ ಮುಗುಳುನಗ್ಗೆ
ಪನ್ನೀ ಮರಿಯಲ್ಲೇ ಮುಗುಳುನಗ್ಗೆ ಸೂಲಿಸುಕ್ರಾ
ಅಟ್ ಮುರ್ದಿ ಗೊಟೆ ಕುಳತಾರೆ
ಆಟ್ ಮುರ್ದಿ ಗೂಟೆ ಕುಳುವುದ್ನು ಒಳಗಿದ್ದ

ತಾಯಮ್ಮ ಹೆರುಗೆ ಬರುವಾದು
ತಾಯಮ್ಮ ಹೆರುಗ್ ಬಂದೀ ಏನಂಬಾದು
ಏನೇ ಮಕ್ಕಳೇ ಹೊತ್ತು ಮಜ್ಜನಾ ಗಳೀಲಿಲ್ಲ
ಹೊತ್ತು ಮಜ್ಜನಾ ಗಳೀಲಿಲ್ಲ ಈ ಗಿನ್ನು
ಆಟ್ ಮುರ್ದಿ ಗೋಟೆ ಕುಳತೀರಿ

ಇಬ್ಬರಾ ನೆಡುಗೆ ಒಬ್ಬಳೇ ಕಿರ್ದಂಗಿ
ಮಜ್ಜನ ಗಳಗ್ಯಲ್ಲಿ ಬರೋಬೇಕು
ಮಜ್ಜನ ಗಳಗ್ಯಲ್ಲಿ ಬರಬೇಕು ಅಂದೇಳಿ
ಸೆಳ್ಳುಗರೀಲೊಲಿ ಬರದಾಳೆ
ಮಜ್ಜನ ಗಳೀಲಿ ಬಾರದೇ ಇದ್ದಾರೆ
ಸೆಳ್ಳುಗರೀಲಿ ಪರಣಾ ಕುಳಕಂತೆ ”

“ಹೆಣ್ಮಕ್ಳಮಲ್ಲಿ ಹೇಳೂರು ಕೇಳೂರು
ಹೊತ್ತೀಗ್ ಹನ್ನೆಯ್ಡಾ ನೆನಸೂರು
ಹೊತ್ತೀಗ್ ಹನ್ನೆಯ್ಡಾ ನೆನಸೂರು ಮಗನೆ ಕೇಳು
ಹೆಣ್ಮಕ್ಳ ಮಾತಾ ಹೊರಬಾರಾ
ಹೆಣ್ಮಕ್ಳ ಮಾತಾ ಹೊರಬಾರಾ ಮಗನೇ ಕೇಳು
ಮುರ್ದೀದಾ ಆಟಾ ಮರ್ಚಾಡಿ ”

“ಹೋದಂಕು ಕೆಮಿಸಾಲ ಕಂಡಂಕು ಕಣ್ ತುಂಬಾ
ಹೋಗಿ ಬಂದಂಕಾ  ಮನ್ಸಕೇಳಾ
ಹೋಗಿ ಬಂದಂಕಾ ಮನ್ಸ ಕೇಳಾ ತಾಯೆ ಕೆಳೆ
ಹೋಗ್ಬೇಕು ತಂಗೀಯಾ ಅರ‍್ಮನ್ಗೆ ”
ಅಟ್ಟಂಬಾ ಮಾತಾ ಕೇಳಾಳೆ ತಾಯವ್ವಿ
ಮಾಳೂಗಿ ಒಳಗೆ ನೆಡದಾಳೆ
ಮಾಳೂಗಿ ಒಳಗೆ ನೆಡ್ದಾಳೆ ತಾಯವ್ವಿ

ಹಾಲ್ ತಟ್ಟೀಗ್ ಹಾಲಾ ಎರದಾಳೆ
ಹಾಲ್ ತಟ್ಟೀಗ್ ಹಾಲಾ ಎರ‍್ವಾಳೆ ತಾಯವ್ವಿ
ಬಾಳೀ ಹಣ್ಣೇಳಾ ಸುಲೀದಾಳೆ
ಬಾಳೀ ಹಣ್ಣೇಳಾ ಸುಲೀದಾಳೆ ತಾಯವ್ವಿ
ಈಳೀ ಹೆಣ್ನಾಳಾ ಸುಲಿದಾಳೇ
ಈಳೀ ಹೆಣ್ಣೇಳಾ ಸುಲ್ದಾಳೇ ತಾಯವ್ವಿ

ಹಾಲೊಳಗಣ್ಣಾ ನುಳೀದಾಳೇ
ಹಾಲೊಳಗಣ್ಣಾ ನುಳೀದಾಳೇ ತಾಯವ್ವಿ
ಮಾಳಗ್ಗಿಂದೆರಗೇ ಬರೋವಾಳೇ
ಮಾಳಗ್ಗಿಂದೆರಗೇ ಬರೋವಾಳೇ ತಾಯವ್ವಿ

ಗಿಳಿಗೋಳೊಡನೋಗಿ ನಿಲೋವಾಳೇ
ಗಿಳಿಗೋಳೋಡನೋಗಿ ನಿಲುವುದ್ನು ತಾಯವ್ವಿ
ಗಿಳಿಗೋಳಿಗಣ್ಣಾ ಕೊಡೋವಾಳೇ
ಗಿಳಿಗೋಳೀಗಣ್ಣಾ ಕೊಡುವದ್ನು ಗಿಳಿಗೋಳು
ಹಾರಿದವಂಬರ ಕೇ ಸೆರಿಯಾಗಿ.
ಹಾರಿದವಂಬರಕೇ ಸೆರಿಯಾಗಿ ತಾಯವ್ವಿ.

ಮಾಳೂಗೀ ಒಳಗೆ ನೆಡದಾಳೆ.
ಮಾಳೂಗೀ ಒಳಗೆ ನಡ್ದಾಳೆ ತಾಯವ್ವಿ
ಅಟ್ಟಕ್ಕೆ ಏಣೀ  ಇಡೋವಾಳೆ.
ಅಟ್ಟದ ಮೇನಿನ ಹಾಲೂ ಹಳ್ಳಗನಕ್ಕಿ
ಅನ್ನಮೆಗರಕೆ ಅನೂಮಾಡಿ.
ಅಟ್ಟದ ಮೆನಿನ ಪುಟ್ಟುಳ್ಳ ಸಣ್ಣಕ್ಕಿ

ಹಾಲೂ ಪಾಯ್ಸಕ್ಕೆ ಅನುಮಾಡಿ.
ಹರ್ದುಟ್ಟು ಹಾಗೀಲ ಮುರ್ದುಟ್ಟು ತೊಂಡೀಲಾ
ಪಲಬರು ಸೊಪ್ಪು ಬಸಳೀಯೂ.
ಪಲಬರು ಸೊಪ್ಪು ಬಸಳಿಯೂ ಕೂಡಿಟ್ಟಿ
ತುಪ್ಪಾದಲ್ಲಿದರಾ ಬೇಯೀಸಿ.
ಎಲ್ಲ ಕಲ್ಲೀಕಾಯಿ ಎಲ್ಲ ಗುಳ್ಳೀಕಾಯಿ

ಕಲ್ಲೊಡದಿ ಬರವಾ ಕಣಲೀಯಾ
ಕಲ್ಲೊಡದಿ ಬರುವಾ ಕಣಿಲೀಯಾ ಸೂಸಿಕಾ
ಎಲ್ಲಾ ಮೆಗ್ರಕೂ ಕಡುರೂಚಿ.
ಎಲ್ಲಾ ಮೆಗ್ರಕೂ ಕಡುರುಚಿ ತಾಯವ್ವಿ
ಜೋಡಲ್ ಕೊಡಪಾನಾ ತಡದಾಳೆ.
ಜೋಡಲ್ ಕೊಡ್ಪಾನಾ ತಡ್ದಾಳೆ ತಾಯವ್ವಿ

ಬಚ್ಚಲರುಮನಗೇ ನೆಡದಾಳೆ.
ಬಚ್ಚಲರು ಮನಗೆ ನೆಡ್ದಾಳೆ ತಾಯವ್ವಿ
ಬಚ್ಚಲ್ಲೇ ನೀರಾ ಎರ‍್ದಾಳೆ.
ಬಚ್ಚಲ್ಲೇನೀರಾ ಎರ್‌ದಾಳೆ ತಾಯವ್ವಿ
ಬಚ್ಚಲ್ಗೆ ಕಿಚ್ಚಾ ಉರಿಸಾಳೆ.
ಬಚಲ್ಗೆ ಕಿಚ್ಚಾ ಉರಿಸ್ವದ್ನು ಸೂಲೀಸುಕ್ರಾ

ಬಚ್ಚಲರಮನಗೆ ನೆಡದಾನೆ.
ಬಚ್ಚಲರಮನಗೆ ನೆಡ್ದಾನೆ ಸೂಲಿಸುಕ್ರಾ
ಮಿಂದೋಗ್ದಾನೊಂದು ಗಳಗ್ಯಲಿ
ಮಿಂದೋಗ್ದಾನೊಂದು ಗಳಗ್ಯಲೆ ಸೂಲಿಸುಕ್ರಾ
ಮಿಂದೀಸೆಳಗೆಂಟಾ ಇಡೋವಾನೇ
ಮಿಂದೀ ಸೆಳಗೆಂಟಾ ಇಡ್ವಾನೇ ಸೂಲಿಸುಕ್ರಾ

ತಮ್ಮಾಲರಮನಗೆ ಬರೋವಾನೇ
ತಮ್ಮಾಲರಮನಗೇ ಬರೋವಾನೇ ಸೂಲಿಸುಕ್ರಾ
ದೆವರ ಮುಂದೇ ನಿಲೋವಾನೇ.
ದೆವರ ಮುಂದೂಗಿ ನಿಲ್ವಾನೆ ಸೂಲಿಸುಕ್ರಾ
ದೆವರ ಪೂಜೀಯಾ ಮಾಡುವಾರೆ
ದೇವರ ಪೂಜಿಯಾ ಮಾಡಾರೆ ಸೂಲಿಸುಕ್ರಾ

ಹೊಂಗರಗೆ ಕಯ್ಯಾ ಮುಗದಾರೆ.
ಹೊಂಗರಗೆ ಕಯ್ಯಾ ಮುಗ್ದಾನೆ ಸೂಲೀಸುಕ್ರಾ
ಕಾಯೊಡೆದೇ ಕಯ್ಯಾ ಮುಗಿದಾನೆ
ಕಾಯೊಡೆದೇ ಕಯ್ಯಾಮುಗಿದಾನೆ ಸೂಲಿಸುಕ್ರಾ
ನೊಸಲಿಗೆ ಸಿರಿಗಂದಾ ಇಡೋವಾನೆ.
ನೊಸಲಿಗೆ ಸಿರಿಗಂದಾ ಇಡ್ವಾನೆ ಸೂಲಿಸುಕ್ರಾ

ಮಾಳೂಗೀ ಒಳಗೆ ನೆಡದಾನೆ.
ಮಾಳೂಗೀ ಒಳಗೆ  ನೆಡ್ವದ್ನು ತಾಯವ್ವಿ
ಹೊನ್ನಾಮಣಿ ಎಯ್ಡಾ ಮಡಗಾಳೆ
ಹೊನ್ನಾಮಣಿ ಎಯ್ಡಾ ಮಡಗ್ವದ್ನು ಅವ್ರಣ್ಣಾ ತಮ್ಮಾ
ಮಣಿಯಾ ಮೆನೋಗೀ ಕುಳತಾರೆ
ಮಣಿಯಾ ಮೆನೋಗಿ ಕುಳುವದ್ನು ತಾಯವ್ವಿ

ಕಿರುಳು ಬಾಳೆಲಿಯಾ ತೊಳದಾಸಿ
ಕಿರ‍್ಳ ಬಾಳೆಲಿಯಾ ತೊಳ್ದಾಸಿ ತಾಯವ್ವಿ
ಅನ್ನಾ ಮೆಗ್ರನಾ ಬಡಸಾಳೆ
ಅನ್ನಾ ಮೆಗ್ರವಾ ಬಡಸಾಳೆ ತಾಯವ್ವಿ

ತುಪ್ಪಾ ಸಕ್ಕರೆಯಾ ಎರವಾಳೆ
ತುಪ್ಪಾ ಸಕ್ಕೆಯಾ ಎರವೀ ತಿರುಗೊಟ್ಗೆ
ಉಂಡೆದ್ದರೊಂದು ಗಳಗ್ಯಲ್ಲಿ
ಉಂಡೆದ್ದರೊಂದು ಗಳಗ್ಯಲ್ಲಿ ಸೂಲಿಸುಕ್ರಾ
ಪನ್ನೀರಲಿ ಮೊಕವಾ ತೊಳದಾನೆ
ಪನ್ನೀರಲಿ ಮೊಕವಾ ತೊಳ್ದಾನೆ ಸೂಲಿಸುಕ್ರಾ

ತೂಗು ಮಂಚಲ್ಲೆ ಕುಳೋವಾನೆ
ತೂಗು ಮಂಚಲ್ಲೇ ಕುಳ್ವಾನೆ ಸೂಲಿಸುಕ್ರಾ
ಕೂತಾ ಗದ್ದಗಿಯಾ ಜಡೋದೆದ್ದಿ
ಕೂತಾ ಗದ್ದಗಿಯಾ ಜಡದೆದ್ದಿ ಸೂಲಿಸುಕ್ರಾ
ಮಾಳೂಗೀ ಒಳಗೆ ನೆಡದಾನೆ
ಮಾಳೂಗೀ ಒಳಗೆ ನೆಡ್ದಾನೆ ಸೂಲಿಸುಕ್ರಾ

ಅಟ್ಟಕ್ಕೆ ಏಣೀ ಇಡೋವಾನೆ
ಅಟ್ಟಕ್ಕೆ ಏಣೀ ಇಡ್ವಾನೆ ಸೂಲಿಸುಕ್ರಾ
ಅಟ್ಟದ ಪೆಟ್ಟಗಿಯಾ ತಗೆದಾನೆ
ಅಟ್ಟದ ಪೆಟ್ಟಗಿಯಾ ತಗದಾನೆ ಸೂಲಿಸುಕ್ರಾ
ತನ್ನಾ ನೆರಿಯಂಗೀ ಬುಜಕಿಟ್ಟಿ
ತನ್ನಾ ನೆರಿಯಂಗೀ ಬುಜಕಿಟ್ಟಿ ಸೂಲಿಸುಕ್ರಾ

ಕೋಲು ನೆವಳವಾ ಇಳಲಿಟ್ಟಿ
ಕೋಲು ನೆವಳವಾ ಇಳಲಿಟ್ಟಿ ಸೂಲಿಸುಕ್ರಾ
ಉಂಗೀಲಾ ದುಂಬಾನೆ ಬೆರಳೀಗೆ
ಉಂಗೀಲಾ ದುಂಬಾನೆ ಬೆರಳೀಗೆ ಸೂಲಿಸುಕ್ರಾ
ಬೆಳ್ಳಿಯ ಬಾಂಕಾ ತಡತಾನೆ
ಬೆಳ್ಳಿಯ ಬಾಂಕಾ ತಡ್ದಾನೆ ಸೂಲಿಸುಕ್ರಾ

ಮಾಳಗ್ಗಿಂದೆರಗೇ ಬರೋವಾನೆ
ಮಾಳಗ್ಗಿಂದೆರಗೇ ಬರೋವಾನೆ ಸೂಲೀಸುಕ್ರಾ
ಬೋರೀನೇ ಅನೀ ನಗೆದತ್ತೀ
ಬೋರೀನೇ ಆನೀ ನೆಗ್ದತ್ತೀ ಸೂಲಿಸುಕ್ರಾ

ರಾಜಮಾರ್ಗದಲೇ ನೆಡದಾನೆ.
ರಾಜಮಾರ್ಗದಲೇ ನೆಡ್ದಾನೆ ಸೂಲಿಸುಕ್ರಾ
ಗೋವೀನಾಡ್ ಮೆನೇ ಹೊಡದಾನೆ.
ಗೋವಿನಾಡ್ ಮೆನೇ ಹೊಡುವದ್ನು ಸೂಲಿಸುಕ್ರಾ
ಗೋವಿನಾಡ್ ಗೋಳಿ ತರಗದೆ.
ಗೋವಿನಾಡ್ ಗೋಳಿ ನೀವೇಕೆ ಬತ್ತೀರಿ

ಪಾಲ್ಗುಣನಾ ಮೆನೆ ಕತನಕೆ
ಪಾಲ್ಗುಣ್ನಾ ಮೇನೆ ಕತ್ನಾಕೋಗಿ ಬಿತ್ತೇ
ಇದ್ದೊರಿದ್ದಲ್ಲೇ ಇರೋಬೇಕು.
ಇದ್ದೂರಿದ್ದಲ್ಲೇ ಇರ‍್ಬೇರು ಅಂದೇಳಿ
ಗುತ್ತೀನಾಡ್ ಮೆನೇ ಹೊಡದಾನೇ
ಗುತ್ತೀನಾಡ್ ಮೆನೇ ಹೂಡುವುದ್ನು ಸೂಲಿಸಕ್ರಾ

ಗುತ್ತಿನಾಡ್‌ ಗೋಳಿ ತಿರುಗದೇ
ಗುತ್ತಿನಾಡ್ ಗೋಳಿ ನೀವೆಕೆ ಬತ್ತೀರಿ
ಪಾಲ್ಗುಣನಾ ಮನೆ ಕತನಕೆ
ಪಾಲ್ಗುಣ್ನ ಮೆನೆ ಕತ್ನಾ ಕೋಗಿಬತ್ತೇ
ಇದ್ದೋರು ಇಲ್ಲೇ ಇರಬೇಕು.
ಇದ್ದೋರು ಇಲ್ಲೇ ಇರ‍್ಬೇಕು ಅಂದೇಳಿ

ತನ್ನಾ ರಾಜ್ಯವಾ ಗಳೀದಾನೆ.
ತನ್ನಾ ರಾಜ್ಯವಾ ಗಳಿದಾನೆ ಸೂಲಿಸುಕ್ರಾ
ತಂಗೀ ರಾಜ್ಯಕ್ಕೆ ನೆಡದಾನೆ.
ತಂಗೀ ರಾಜ್ಯಕೆ ನೆಡುವುದ್ನು ಕುಸುಮಾಲಿ
ಮಾಳೂಗಿ ಒಳಗೆ ನೆಡದಾಳೆ
ಮಾಳೂಗೀ ಒಳಗೆ ನೆಡ್ದಾಳೆ ಕುಸ್ಮಾಲಿ

ಪನ್ನೀರಾಗಿಂಡೀ ತಡಗಾಳೆ
ಪನ್ನಿರಾಗಿಂಡೀ ತಡ್ದಾಳೆ ಕುಸ್ಮಾಲಿ ಕುಸ್ಮಾಲಿ
ಮಾಳಗ್ಗಿಂದೆರಗೇ ಬರುವಾಳೆ
ಮಾಳಗ್ಗಿಂದೆರೆ ಗೇ ಬರ‍್ವಾಳೆ ಕುಸ್ಮಾಲಿ
ಜೋಗಿಗಮೃತ ತಳದಾಳೆ
ಜೋಗೀಗ ಅಮೃತಾ ತಳ್ವದ್ನು ಜೋಗಿಯು
ಮಿಯ್ಯಾಮುರುದೆದ್ದಿ ಕುಳತಾನೆ
ಮಿಯ್ಯಾ ಮುರುದೆದ್ದಿ ಕುಳ್ತಾನೆ ಜೋಗಿಯು
ಹಳ್ಳಕೆ ಆಗಿ ನೆಡದಾನೆ
ಹಳ್ಳಕ್ಕೆ ಆಗೀ ನೆಡ್ದಾನೆ ಜೋಗಿಯು

ಹಳ್ಳ ತಡಿಮೆನೇ ಕುಳತಾನೆ
ಹಳ್ಳ ತಡಿಮೆನೆ ಕುಳ್ತಾನೆ ಜೋಗಿಯು
ಕಂತೆ ಜೋತರವಾ ಬಳಕೊಟ್ಟಿ
ಕಂತೆ ಜೊತ್ರವಾ ಬಳ್ಕೊಟ್ಟಿ ಜೋಗಿಯು
ಕಂತೆ ನೆರಿಯಂಗಿ ಬಳಕೊಟ್ಟಿ
ಕಂತೆ ನೆರಿಯಂಗಿ ಬಳಕೊಟ್ಟಿ ಜೋಗಿಯು

ಕಂತೆ ಜೋಳಗಿಯಾ ಬಳಕೊಟ್ಟಿ
ಕಂತೆ ಜೋಳಗಿಯ ಬಳ್ಕೊಟ್ಟಿ ಜೋಗಿಯು
ರಾಗದ ಚೆನ್ನುಡಿಯಾ ಬಳಕೊಟ್ಟಿ
ರಾಗದ ಚೆನ್ನುಡಿಯಾ ಬಳ್ಕೊಟ್ಟಿ ಜೋಗಿಯು
ಈ ಬತ್ತಿ ಉಂಡೀ ಬಳಕೊಟ್ಟಿ
ಈ ಬತ್ತಿ ಉಂಡೀ ಬಳ್ಕೊಟ್ಟಿ ಜೋಗಿಯು

ತನ್ನಾ ಕಯ್ಚಂಚೀ ಬಳಕೊಟ್ಟೆ
ತನ್ನಾ ಕಯ್ಚಂಚೀ ಬಳ್ಕೊಟ್ಟೆ ಜೋಗಿಯೂ
ಸಣ್ಣಾ ಗಂಬಳಿಯಾ ಬಳಕೊಟ್ಟಿ
ಸಣ್ಣಾ ಗಂಬಳಿಯಾ ಬಳ್ಕೊಟ್ಟಿ ಜೋಗಿಯು
ಮುರೊತ್ತರಲ್ಗೆ ಮುಳುಕೆದ್ದಿ
ಮೂರೊತ್ತರಲ್ಗೆ ಮುಳಕೆದ್ದಿ ಆ ಜೋಗಿ

ಆಗೊಂದು ಮಾತಾ ನುಡೀದಾನೆ
“ಜೋಗಿ ಅಂಬೆಸ್ರು ಇದರ್ಕಿಂದಿತ್ತಾಗಿರಲಿ
ಅರ್ಜೀನಾ ನಂಬೆಸ್ರು ನೆಡಿಯಾಲಿ
ಅರ್ಜೀಣಾ ನಂಬೆಸ್ರು ನೆಡಿಯಾಲ್ಂದರ್ಜೀನಾ

ಹುಟ್ದ ರೂಪ್ದಲ್ಲೇ ಬರೋವಾನೆ
ಹುಟ್ದ ರೂಪ್ದಲ್ಲೇ ಬರುವುದ್ನು ಕುಸ್ಮಾಲಿ
ಹೀತರ್ಕೆ ಪಟ್ಟೀ ಒಗುದಾಳೆ
ಹೀತರ್ಕೆ ಪಟ್ಟೀ ಒಗ್ವುದ್ನು ಅರ್ಜೀಣಾ
ಬಂದೀ ಬಾಗಲ್ಲೇ ನಿಲೋವಾನೆ
ಬಂದೀ ಬಾಗಲ್ಲಿ ನಿಲ್ವದ್ನು ಸೂಲಿಸುಕ್ರಾ

ಆಗೊಂದು ಮಾತಾ ನುಡೀದಾನೆ
“ಹಿಡ್ರ ಬಾಳ್ಸೂವವ್ರು ಪುಂಡ್ ತನ್ಕೀ ಗೆಳ್ ಸ್ವವ್ರು
ಗಂಡೂ ರೂಪ್ದಲ್ಲಿ ಚಲುವಂವ
ಗಂಡೂ ರೂಪ್ದಲ್ಲಿ ಚಲುವಂವ ಬಾವಾ ಕೇಳು
ಬೆಡಾರ್ ನನ್ತಂಗೀ ಬಿಡೋಬವ್ದು
ಬೇಡರ ನನ್ತಂಗೀ ಬಿಡ್ಯವ್ದು ಅಂಬುದ್ನು ಅರ್ಜೂಣಾ

ಆಗೊಂದು ಮಾತಾ ನುಡೀದಾನೆ.
“ಬಾವಾ ನಿನ್ನೆಣ್ತಿ ನೀ ಬಿಟ್ಟಿದ್ದುಂಟಾದರೆ
ನಿನ್ನ ತಂಗೀ ನಾನು ಬಿಡೋತೀನೋ
ನಿನ್ ತಂಗಿ ನಾನು ಬಿಡ್ತೀನೋ ಅಂಬುದ್ನು ಸೂಲಿಸುಕ್ರಾ
ಬೆಳ್ಳಿಯಾ ಬಾಂಕಾ ತಡದಾನೆ.
ಬೆಳ್ಳೀಯಾ ಬಾಂಕಾ ತಡ್ವದ್ನು ಕುಸ್ಮಾಲಿ

ಸೂಲಿಸುಕ್ರನೆದ್ರೋಗಿ ನಿಲೋವಾಳೇ
“ಸಿಟ್ಟೀನಾ ಅಣ್ಣಾ ಹುಟ್ಟೀದ ಬೂಲೋಕಾಗೆ
ಸಿಟ್ಟ ಸಯರಿಸೋ ಮನದಲ್ಲಿ
ಸಿಟ್ಟ ಸಯ್ ರೀಸೋ ಮನ್ದಲ್ಲಿ ನನ್ನಾಲಾ
ಮುತ್ತಯ್ತನವೊಂದು ಉಳೀದಾವೋ”
ಮುತ್ತಯ್ಯಯ್ತನವೊಂದು ಉಳಿದಾವೋ ಅಂಬುದ್ನು ಸೂಲಿಸುಕ್ರಾ

ಆಗೊಂದು ಮಾತಾ ನುಡೀದಾನೆ.
ಹೆಣ್ಮಕ್ಳ ಮಲ್ಲಿ ಹೇಳೂರು ಕೇಳೂರು
ಹೊತ್ತಿನನ್ನೆರಡಾ ನೆನಸೂರು
ಹೊತ್ತಿನಗನ್ನೆರಡಾ ನೆನೆಸೂರು ಅಂದೇಳಿ

ಆಗೇ ನನ್ನಮ್ಮಾ ನುಡದೀತು
ಆಗೇ ನನ್ನಮ್ಮಾ ಏನಂದಿ ನುಡದೀತು
ಹೆಣ್ಣಕ್ಳ ಮಾತಾ ಹೊರಬಾರಾ”
“ಮುಂದೇ ಮಾಡಿದ ಬಾಂಕಾ ಹಿಂದೇ ಮಡಿಬಾರಂದಿ
ಅಲ್ದ ಮರ‍್ನ ಕಡ್ದಿ ಕೆಡಗಾದೆ.
ಆಲ್ದ ಮರ‍್ನ ಕಡ್ದಿ ಕೆಡಗ್ವದ್ನು ಕುಸ್ಮಾಲಿ

ಮಾಳೂಗೀ ಒಳಗೆ ನೆಡದಾಳೆ
ಮುತ್ತನ್ನೇ ಕುಟ್ಟಿ ಹುಡಮಾಡಿ ಪಡಮಾಡಿ
ಹಗಳದಾರತಿಯಾ ಗೆಯೀದಾಳೇ
ಹಗಳದಾರತೀಯಾ ಹೆಯ್ದಾಳೇ ಕುಸ್ಮಾಲಿ
ಮಾಳಗ್ಗಿಂದೆರಗೇ ಬರೋವಾಳೇ
ಮಾಳಗ್ಗಿಂದೆರಗೇ ಬರ‍್ವಾಳೆ ಕುಸ್ಮಾಲಿ

(ಗ)ದಂಡಗ್ಗಾರತಿಯಾ ಬೆಳಗಾಳೆ
ದಂಡಗ್ಗಾರತಿಯಾ ಬೆಳಗ್ವದ್ನು ಸೂಲಿಸುಕ್ರನ
ಬಂದ್ ದಂಡು ಹಿಂದೇ ತಿರಗದೆ.
ಬಂದ ದಂಡು ಹಿಂದೆ ತಿರುಗ್ವದ್ನು ಅರ್ಜೀಣ
ಮಾಳೂಗಿ ಒಳಗೇ ನೆಡದಾನೆ
ಮಾಳೂಗಿ ಒಳಗೆ ನೆಡದಾನೆ ಅರ್ಜೀಣಾ

ದೆವರ ಮುಂದೋಗಿ ನಿಲೋವಾನೆ
ದೆವರ ಮುಂದೋಗಿ ನಿಲ್ವಾನೆ ಅರ್ಜೀಣ
ದೆವರ ಪೂಜ್ಯವ ಮಾಡ್ವಾನೆ ಅರ್ಜೀಣ
ದೇವರ್ಗೆ ಕಯ್ಯಾ ಮುಗದಾನೆ
ದೇವರ್ಗೆ ಕಯ್ಯಾ ಮುಗ್ದಾನೆ ಅರ್ಜೀಣಾ

ತೂಗು ಮಂಚದ ಮೆನೆ ಕುಳೋವಾನೆ
ತೂಗು ಮಂಚದ ಮೆನೆ ಕುಳುವುದ್ನು ಕುಸುಮಾಲಿ
ಮಾಳೂಗೀ ಒಳಗೆ ನೆಡದಾಳೆ
ಅಟದ ಮೆನನ ಹಾಲೂ ಹಳ್ಗನಕ್ಕಿ
ಹಾಲೂ ಪಾಯ್ಸಕೆ ಅನುಮಾಡಿ
ಅಟ್ಟದ ಮೆನನ ಪುಟ್ಟುಳ್ಳ ಸಣ್ಣಕ್ಕಿ
ಅನ್ನಾ ಮೆಗರಕೆ ಅನೂಮಾಡಿ
ಹರ್ದುಟ್ಟು ಹಾಗೀಲಾ ಮುರ್ದುಟ್ಟು ತೊಂಡೀಲಾ
ಪಲಬರು ಸೊಪ್ಪು ಬಸಳೀಯಾ
ಪಲಬರು ಸೊಪ್ಪು ಬಸಳೀಯಾ ಕೂಡಿಟ್ಟಿ
ತುಪ್ಪದಲ್ಲದರಾ ಬೆಗುರಿಸಿ ಕುಸ್ಮಾಲಿ

ಅನುಮಾಡಿದಳೊಂದು, ಗಳಗ್ಯಲಿ
ಅನುಮಾಡಿದಳೊಂದು ಗಳಗ್ಯಲಿ ಕುಸುಮಾಲಿ
ಹೊನ್ನಾ ಮಣಿ ಒಂದು ಮಡಗಾಳೆ
ಹೊನ್ನಾ ಮಣಿ ಒಂದಾ ಮಡಗ್ವದ್ನು ಅರ್ಜೀಣಾ
ಮಣಿಯಾ ಮೆನೋಗಿ ಕುಳತಾನೆ
ಮಣಿಯಾ ಮೆನೋಗಿ ಕುಳ್ತಾನೆ ಅರ್ಜೀಣಾ

ಆಗೊಂದು ಮಾತಾ ನುಡೀದಾನೆ
“ಅನ್ನಾ ಬಡಸ್ವಂಗೆ ಯಾರೆಲ್ಲಾ ನೆನಸೀದೆ
ಅನ್ನಗಳು ನನಗೆ ಮಿಗಿಲಾದೋ
ಅನ್ನಗಳು ನನಗೆ ಮಿಗಿಲಾದೋ ಕುಸುಮಾಲಿ
ನಾನು ನೀನುಂಬೋ ಒಡನಲ್ಲಿ

ತುಪ್ಪಾ ಬಡಸ್ವಂಗೆ ಯಾರೆಲ್ಲಾ ನೆನಸೀದೆ
ತುಪ್ಪಗಳು ನನಗೆ ಮಿಗಿಲಾದೋ
ತುಪ್ಪಗಳು ನನಗೆ ಮಿಗಿಲಾದೋ ಅಂದೇ ಅರ್ಜೀಣಾ
ಹಿಡ್ದಾನೆ ಬಳಿಯಾ ನಳಿತೋಳಾ

“ಬಡಸ್ವಾಕೆ ಬಡಸೀದೆ ನೂರೊಂದಾ ಬಡಸೀದೆ
ಉಪ್ಪಾ ಬಡಸ್ವದಕೆ ಮರತೀದೆ
ಉಪ್ಪಾ ಬಡಸ್ವದಕೆ ಮರತೀದೆ ಅಂದ್ ಕುಸ್ಮಾಲಿ
ಉಪ್ಪಾಯ್ದಲ್ ತೊಳಾಬಿಡಸ್ಕಂಡಿ
ಉಪ್ಪಾಯ್ದಲ್ ತೋಳಾ ಬಿಡಸ್ಕಂಡೀ ಕುಸ್ಮಾಲಿ
ಹಿತ್ಲ ಕಣ್ಣ ಬಾಗಲ್ಲೇ ನೆಡದಾಳೆ
ಹಿತ್ಲಕಣ್ಣ ಬಾಗಲ್ಲೇ ನೆಡ್ದಾಳೆ ಕುಸ್ಮಾಲಿ

ಹಣ್ನೂ ಈಳ್ಯವಾ ತಡದಾಳೆ.
ಹೆಣ್ಣು ಈಳ್ಯವಾ ತಡ್ದಾಳೆ ಕುಸ್ಮಾಲಿ
ದೀಪದೂಪೆಲ್ಲಾ ತಡದಾಳೇ
ದೀಪ ದೂಪೆಲ್ಲಾ ತಡದಾಳೆ ಕುಸ್ಮಾಲಿ
ಬಸ್ತೀ ಅರಮನಗೇ ನೆಡದಾಳೆ
ಬಸ್ತಿ ಅರಮನಗೇ ನೆಡ್ದಾಳೆ ಕುಸ್ಮಾಲಿ

ಹಣ್ಣು ಈಳ್ಯವ ಅರಗಾಳೆ
ಹಣ್ಣು ಈಳ್ಯವ ಅರ‍್ಗಾಳೆ ಕುಸ್ಮಾಲಿ
ದೀಪ ದೂಪೆಲ್ಲಾ ಕಸೀದಾಳೆ.
ದೀಪ ದೂಪೆಲ್ಲಾ ಕಸಿದಾಳೆ ಕುಸ್ಮಾಲಿ
ತೆಂಗಿನೆಳಗಾಯಿ ಒಡದಾಳೆ.
ಕಾಯೋಡದೆ ಕಯ್ಯಾ ಮುಗ್ದಾಳೆ ಕುಸ್ಮಾಲಿ.

ನಾಬತ್ತೇ ಬಸ್ತಿ ಒಡನಲ್ಲಿ
ಬಸ್ತಿ ಹತ್ತರ ಮೆನೆ ಬಲಗೋಳ್ ತಿಂದರಮೆನೆ
ಬಸ್ತಿಕಿಂದ ಕೆಳಗೆ ಇಳೀಬಾರಾ
ಬಸ್ತಿ ಕಿಂದ್ ಕೆಳಗೆ ಇಳಿಬಾರಾ ಕುಸುಮಾಲಿ
ನೀನೋನಗೇ ನಿನ್ನಾ ಅರಮನಗೆ”

“ಬಸ್ತಿ ಹತ್ತರ ಮೆನೆ ಬಲಗೂಳ್ ತಿಂದರ ಮೆನೆ
ಬಸ್ತಿ ಕಿಂದ್ ಕೆಳಗೆ ಇಳುವಾದಿಲ್ಲ
ಬಸ್ತಿಕಿಂದ್ ಕೆಳಗೆ ಇಳೂದಿಲ್ಲ ಬಸ್ತಿ ಕೇಳೇ
ನಾಬತ್ತೆ ನಿನ್ನಾ ಒಡನಲ್ಲ”

“ನಿನ್ನಾ ಮನಿಯಲ್ಲಿ ಅತ್ತಿರ್ಗು ಮಾವಿರ್ಗು
ಕಯ್ತಡಾ ಪುರಿಸರು ಮನಿಲಿರ್ಗು
ಕಯ್ತಡ್ದಾ ಪುರಿಸರು ಮನಿಲಿರ್ಗು ಕುಸುಮಾಲಿ
ನೀ ಹೋಗೇ ನಿನ್ನಾ ಅರಮನಗೆ ”

“ನನ್ನಾ ಮನಿಯಲ್ಲಿ ಅತ್ತಿಲ್ಲ ಮಾವಿಲ್ಲ
ಕಯ್ತಡ್ಡಾ ಪುರಿಸರು ಮನಿಲಿಲ್ಲ
ಕಯ್ತಡ್ದಾ ಪುರಿಸರು ಮನಿಲಿಲ್ಲ ಬಸ್ತಿ ಕೆಳೆ

ನಾಬತ್ತೆ ನಿನ್ನಾ ಒಡನಲ್ಲಿ
ನಾಬತ್ತೇ ನಿನ್ನಾ ಒಡ್ನಲ್ಲಿ ಅಂದೇಳಿ ಕುಸ್ಮಾಲಿ
ಬಸ್ತಿಯ ಕಲ್ಲಾ ನೆಗದಾಳೆ
ಬಸ್ತಿಯ ಕಲ್ಲಾ ನೆಗ್ವದ್ನು ಗಿಳಿಗೋಳು
ಹಾರೀದವಂಬರಕೇ ಸೆರಿಯಾಗಿ.

“ಮಾಳೂಗೀ ಒಳಗೆ ಹಾಲೊಗರುಂಬರ್ಜೀಣಾ
ಕೇಳೀ ಬಾರೊಂದು ಹೊಸಸುದ್ಧಿ.
ಕೇಳಿ ಬಾರೊಂದು ಹೊಸಸುದ್ಧಿ ಕುಸುಮಾಲಿ
ಬಸ್ತಿಯ ಕಲ್ಲಾ ನೆಗದಾಳೆ”
“ಉಪ್ಪಿ ಗೋದೆಣ್ಣೇ ಉಪ್ಪರಗಿ ನೆಗೆದೀಯ.
ಮತ್ತೇ ಸಾಗರವಾ ಇಳದೀಯಾ”
ಮತ್ತೇ ಸಾಗರವಾ ಇಳದಿಯಾ ಅಂದೇಳ್ ಅರ್ಜೀಣಾ

ಉಣುವಾ ಕಯ್ಯಲ್ಲೇ ಕುಡೋಗೆದ್ದಿ
ಉಣುವಾ ಕಯ್ಯಲ್ಲೆ ಕುಡ್ಗೇದ್ದಿ ಅರ್ಜೀಣ
ಪನ್ನೀರಲೆ ಮೊಕವಾ ತೊಳದಾನೆ
ಪನ್ನೀರಲೆ ಮೊಕವಾ ತೊಳದಾನೆ ಅರ್ಜೀಣಾ
ಬಸ್ತಿ ಅರಮನಗೇ ನೆಡದಾನೆ.
ಬಸ್ತಿ ಅರ‍್ಮನಗೇ ನೆಡ್ದಾನೆ ಅರ್ಜೀಣಾ
ಬಸ್ತೀಗೇ ಕಯ್ಯಾ ಮುಗದಾನೆ.

“ಕುಸ್ಮಾಲಿ ಮಿಯ್ಯೋರಣಾ ಈಳೀ ಹಣ್ಣಿನೋರಣಾ
ಮೀಯ್ಯೋ ಸಾಜೊಂದು ಕಲೀಇಲ್ಲ
ಮಿಯ್ಯೋ ಸಾಜೊಂದು ಕಲಿಇಲ್ಲ ಕುಸ್ಮಾಲಿ
ಹಿಂಗಿರುವೆ ಅಂದೀ ಅರಿಯಾವೇ
ಹಿಂದಿರುವೆ ಅಂದೀ ಅರಿಯಾವೇ ಕುಸುಮಾಲಿ
ಈಗರು ಬಾಮನಿ ಗೋಪಾ

ಕುಸ್ಮಾಲಿ ಮಿಯ್ಯೋರಣಾ ನಿಂಬೀ ಹಣ್ಣೀನೊರಣಾ
ಮಿಯ್ಯೊ ಸಾಜೊಂದು ಕಲಿಇಲ್ಲ
ಮಿಯ್ಯೊ ಸಾಜೊಂದು ಕಲಿಇಲ್ಲ ಕುಸುಮಾಲಿ
ಹಿಂಗಿರುವೆನಂದಿ ಅರಿಯಾವೆ.
ಹಿಂಗಿರುವೆನಂದೀ ಅರಿಯಾವೆ ಕುಸುಮಾಲಿ
ಈಗರು ಬಾ ಮನಿಗೋಪಾ”

“ಬಸ್ತಿ ಹತ್ತರ ಮೆನೆ ಬಳಗೂಳ್ ತಿಂದರಮೆನೆ
ಬಸ್ತಿಕಿಂದ್ ಕೆಳಗೆ ಇಳೂದಿಲ್ಲ
ಬಸ್ತಿಕಿಂದ್ ಕೆಳಗೆ ಇಳೂದಿಲ್ಲ ದೆವಾರೆ
ನೀವೋಗಿ ನಿಮ್ಮಾ ಅರಮನಗೆ.

ಕಟ್ದ ಮೆನದೆ ಹೂಡೀದೊಲದೆ
ಕೂಡಾಡ್ವರವ್ರೆ ಒಡನಲ್ಲಿ
ಕೂಡಾಡ್ವರವ್ರೆ ಒಡನಲ್ಲಿ ದೆವರೆ
ನೀವೋಗಿ ನಿಮ್ಮಾ ಅರಮನಗೆ”

“ಕುಸ್ಮಾಲಿ ಮಿಯ್ಯೋರಣಾ ಬಾಳೀ ಹಣ್ಣೀನೋರಣಾ
ಮಿಯ್ಯೊ ಸಾಜೊಂದು ಕಲೆಯಿಲ್ಲ
ಮಿಯ್ಯೊ ಸಾಜೊಂದು ಕಲೆಯಿಲ್ಲ ಕುಸುಮಾಲಿ
ಹಿಂಗಿರುವೆ ನಂದೀ ಅರಿಯಾವೆ
ಹಿಂಗಿರುವೆ ನಂದೀ ಅರಿಯಾವೆ ಕುಸುಮಾಲಿ

ಈಗರೂ ಬಾರೇ ಮನಿಗೋಪಾ
ಈಗರು ಬಾರೆ ಮನಿಗೋಪಾ ಅಂದೇಳಿ
ರಟ್ಟೀಯಾ ತಟ್ಟೇ ಎಳದಾರೆ
ರಟ್ಟೀಯಾ ತಟ್ಟೇ ಎಳ್ವದ್ನು ಕುಸುಮಾಲಿ
ಅರ‍್ಶಿಣೆಲಿಯಾಗಿ ಹುಸದ್ ಬಂದಿ
ಆರ‍್ಸಿಣೆಲಿಯಾಗಿ ಹುಸದ ಬರ‍್ವದ್ನು ಅರ್ಜೀಣಾ

ಜುಟ್ಟವ ತಟ್ಟೇ ಎಳದಾನೆ
ಜುಟ್ಟವ ತಟ್ಟೇ ಎಳ್ವದ್ನು ಕುಸುಮಾಲಿ
ದುರ್ವಿ ಜಡ್ಡಾಗಿ ಹುಸದ್ ಬಂದಿ
ದುರ್ವಿ ಜಡ್ಡಾಗಿ ಹುಸದ್ ಬರ‍್ವದ್ನು ಕುಸುಮಾಲಿ
ಆಗೊಂದು ಮಾತಾ ನುಡೀದಾಳೆ

“ವರ್ಸಾ ಕೊಂದ್ ಬಾರೀಯ ಸೂಲ್ಯಮ್ ಉದ್ಯಪ್ಪಾಗೆ
ಸುರ್ಗಿ ಹೊಂಗಾಗಿ ಬರತೇನೆ
ನಾರಿಯೋರ್ ಕಟ್ಟಿದ ಸೆರಮುಡಿಯಾ ಸೆಳಗಂಟ್ನ ಮೇಲರಿಯಂತೆ
ಕಂಡೆ| ಸಂತಸವಾ ಬಿಡಲಕ್ಕಿ
ಕಂಡೇ | ಸಂತಸವಾ ಬಿಡಲಕ್ಕಿ ದೇವಾರೇ

ನೀವೋಗಿ ನಿಮ್ಮಾ ಅರಮನಗೆ
ನೀವೋಗಿ ನಿಮ್ಮಾ ಅರ‍್ಮನಗೆ ಅಂಬುದ್ನು
ತನ್ನಾ ಅರಮನಗೆ ಬರವನೆ.

* * *