ಭಾಮಾಕಲಾಪವನ್ನು ವೀಕ್ಷಿಸಲು, ಪರಿಪೂರ್ಣವಾಗಿ ಆನಂದಿಸಲು ಕೂಚಿಪುಡಿ ನೃತ್ಯದ ಕೆಲವು ವೈಶಿಷ್ಟ್ಯಗಳನ್ನು ತಿಳಿಯುವುದು ಅವಶ್ಯವಿದೆ. ನೋಡಲು ಶಾಸ್ತ್ರದ ಆಧಾರಬೇಕಿಲ್ಲ. ಆದರೆ ಅದರ ಅಂತರಾರ್ಥವನ್ನು ಕವಿಯ ಕಲ್ಪನೆಯ ಪರಾಕಾಷ್ಟತೆಯ ಅನುಭವಕ್ಕೆ ಶಾಸ್ತ್ರದ ಆಕಾರವನ್ನು ತಿಳಿಯುವುದು ಅವಶ್ಯ. ಸುಮಾರು ನಾನೂರು ವರ್ಷಗಳಷ್ಟು ಪ್ರಾಚೀನತೆಯನ್ನು ಪಡೆದ ಈ ನೃತ್ಯ ಸಂಪ್ರದಾಯದ ಜನಕ ಋಷಿ ಸಿದ್ದೇಂದ್ರಯೋಗಿ. ಈ ಯತಿವರ್ಯರು ನಮ್ಮ ರಾಜ್ಯದ ಉಡುಪಿಯಲ್ಲಿ ಹತ್ತಾರು ವರ್ಷ ವಾಸಿಸಿ ಇಲ್ಲಿಯ ಯಕ್ಷಗಾನಗಳನ್ನು ಕಣ್ತುಂಬ ನೋಡಿ ಆನಂದಪಟ್ಟು ಅದರಿಂದ ಪುಲುಕಿತರಾಗಿ ತಮ್ಮ ಕಲ್ಪನಾ ವೈಖರಿಯಿಂದ ಒಂದು ನೃತ್ಯ ಪರಂಪರೆಯನ್ನೇ ಹುಟ್ಟಿ ಹಾಕಿದರು. ವಿಜಯನಗರದ ಕಾಲದಲ್ಲಿ ಕಲೆಯು ತನ್ನ ಅತ್ಯಂತ ವೈಭವದ ಶಿಖರತೆಯನ್ನು ಮುಟ್ಟಿತು. ಮೇಲೆ ಹೋದದ್ದು ಕೆಳಕ್ಕೆ ಬರಲೇಬೇಕು. ಅಂದರೆ ಸೃಷ್ಟಿ ನಿಯಮದಂತೆ ಕಾಲಚಕ್ರದಂತೆ ವೈಪರೀತ್ಯಗಳು ಸಹಜ. ಆಧ್ಯಾತ್ಮ ಸಾಧನೆಗೆ, ರಸಿಕರಿಗೆ ಉದಾತ್ತ ಮನರಂಜನೆಯಾದ ನೃತ್ಯ ವಿರೂಪ ಪಡೆಯುತ್ತಾ ಕೇವಲ ವಾರಾಂಗನೆಯರ ಕೈ ಬಂದಿಯಾಗಿ ಸಿಕ್ಕಂತೆ ಅಂಗಾಗಗಳನ್ನು ಕುಣಿಸಿ, ಕಾಲಿಗೆ ಕಟ್ಟಿದ ಹೆಜ್ಜೆಗಳ ನಾದ ಮಾಡಿ ಪುರುಷರನ್ನು ರಂಜಿಸುವುದೇ ನೃತ್ಯ ಕಲೆ ಎಂಬ ಅವನತಿಯ ಒಂದು ವರ್ವಕಾಲವು ಉಂಟಾಗಿರಬೇಕು. ಇಲ್ಲದಿದ್ದಲ್ಲಿ ಯತಿಗಳು ಪರತತ್ವ ಚಿಂತನೆಗೆ ಈ ಮಾರ್ಗವನ್ನು ಆಯ್ದಕೊಳ್ಳುವ ಕಾರಣವಿರಲಿಲ್ಲ. ಶ್ರೀ ಕಾಕುಳೇಶ್ವರದ ಹೊರಬದಿಯ ಒಂದು ಹಳ್ಳಿಯಲ್ಲಿ ತಮ್ಮ ಶಿಷ್ಯರೊಂದಿಗೆ ಸಿದ್ದೇಂದ್ರಯೋಗಿಗಳಉ ವಾಸಿಸಿ ; ಅವರನ್ನು ಈ ಕಲೆಯಲ್ಲಿ ತರಬೇತುಪಡಿಸಿ ಭಾಮಕಲಾಪವನ್ನು ಆದಿಶಂಕರರೆದುರು ಆಡಿ ತೋರಿಸಿದರೆಂದು ಪ್ರತೀತಿ. ಕೇವಲ ಬ್ರಾಹ್ಮಣರನ್ನೇ ಆಯ್ದುಕೊಂಡಿರುವುದರ ಕಾರಣವೇನಿರಬಹುದು? ನನಗೆ ಹೊಳೆದಂತೆ ಕೆಳಗಿನ ಕೆಲವು ಕಾರಣಗಳನ್ನು ಸೂಚಿಸಬಯಸುವೆ:

ಯಾವ ಕಾಲಕ್ಕಾದರೂ ಈ ಜನ ಉಳಿದವರಿಗಿಂತ ನೃತ್ಯ ಸಂಗೀತದ ಪಾರಂಪರೆಯಲ್ಲಿ ಹೆಚ್ಚು ನಂಬುಗೆಯುಳ್ಳವರು, ಉಪಜೀವನಕ್ಕೆ ಇತರ ಜನಾಂಗವು ನಿರ್ಧಿಷ್ಟವಾಗಿ ಅನುಸರಿಸುವ ಕುಲಕಸುಬು ಹೆಚ್ಚಾಗಿ ಇವರಲ್ಲಿ ಇಲ್ಲದ್ದು ಇದಕ್ಕೆ ಉತ್ತೇಜನಕಾರಿಯಾಗಿದೆ. ರಾಜಮರ್ಯಾದೆ ಹೊಂದುವಂತಹ ಆ ಬ್ರಾಹ್ಮಣ ಕಲಾವಿದರು ಮತ್ತು ಕಲಾವಿದೆಯರ ಸಂಖ್ಯೆ ಚರಿತ್ರೆಯಲ್ಲಿ ಹೆಚ್ಚಿಲ್ಲ. ಗಣಿಕೆಯರು ನೃತ್ಯವನ್ನು ಸ್ವಾಧೀನಪಡಿಸಿಕೊಂಡು ಅದನ್ನು ವಿಷಯಲಂಪಟಕ್ಕೆ ಉಪಯೋಗಿಸಿದ್ದು ಯೋಗಿಗಳಿಗೆ ನೋವನ್ನುಂಟು ಮಾಡಿರಬೇಕು. ಆ ಬ್ರಾಹ್ಮಣ ಕಲಾವಿದರಿಗೆ ದೊರೆತ ಕೆಲವೊಂದು ಉಂಬಳಿಗಳು ಅವರಿಗೆ ದೊರೆತ ಮಾನ ಗೌರವಗಳಿಂದ ಕೈಗೊಂಡಿರಬೇಕು. ಇನ್ನು ಕೇವಲ ಪುರುಷರನ್ನೇ ಕಲಾವಿದರನ್ನಾಗಿ ಏಕೆ ತಯಾರಿಸಿದರು? ಸಿದ್ದೇಂದ್ರ ಯೋಗಿಗಳು ಸ್ತ್ರೀ ದ್ವೆಷಿಯೇ? ಅಲ್ಲ. ಅವರು ಸ್ತ್ರೀಯನ್ನು ಸೇರಿಸದಿರುವುದರ ಸಂಭಾವ್ಯ ಕಾರಣಗಳು:  ರಂಗದಲ್ಲಿ  ಬ್ರಾಹ್ಮಣ ಸ್ತ್ರೀ ಕಾಣಿಸಿಕೊಳ್ಳುವುದು ಸಂಪ್ರದಾಯಸ್ಥರನ್ನು ಎದುರು ಹಾಕಿಕೊಂಡಂತೆ. ಒಂದಿಲ್ಲ ಒಂದು ರೀತಿಯ ಕಾಮ, ಪ್ರೇಮದ ಅಂಕುರಾಟಗಳು ಅನಿವಾರ್ಯ.ಎಳೆಯದರಲ್ಲಿಯೇ ಕಲಹ, ಮನದ್ವೇಶ ಉಂಟಾದರೆ ಕಲೆಯ ಪ್ರಗತಿ ಎಂತು? ಒಬ್ಬ ಕಲಾವಿದನನ್ನು ಅವರು ತಯಾರಿಸಲು ಅನುಸರಿಸಿದ ಕ್ರಮಬದ್ಧವಾದ ಅಧ್ಯಯನ, ಸಂಸ್ಕ್ರತ, ವ್ಯಾಕರಣ ಕಂಠಪಾಠ ಇವು ಸುಮಾರು ಹತ್ತರು ವರ್ಷ ನಡುಯುವುದು ಅವಶ್ಯವಿದ್ದು, ಕುಣಿತದ ಅಧ್ಯಯನವನ್ನು ಹಸ್ತಗತಮಾಡಿಕೊಳ್ಳುವ ಹೊತ್ತಿಗೆ ಬಾಲೆ ಯೌವ್ವನಾಸ್ಥಿತಿಯನ್ನು ಮುಟ್ಟಿ ಮದುವೆಯ ಹಂತದಲ್ಲಿದ್ದು, ಅವಳಿಗೆ ಮದುವೆಯಾದರೆ ಅವಳ ಪತಿ, ರಂಗದಲ್ಲಿ ಕುಣಿಯಲು ಸುತಾರಾಂ ಒಪ್ಪುವುದಿಲ್ಲ. ಅಂದರೆ ಅಲ್ಲಿಯವರೆಗಿನ ಅಧ್ಯಯನ, ಹೇಳಿದ ಶ್ರಮ ವ್ಯರ್ಥವಲ್ಲ್ಲವೆ? ಆದರೆ ಇಷ್ಟೇ ಶ್ರಮದಿಂದ ಒಬ್ಬ ಕಲಾವಿದನನ್ನು ತಯಾರಿಸಿದರೆ ಆತ ಈ ಕಲೆಗೊಂದು ಆಸ್ತಿ. ಆತನೇ ಗುರುವಾಗಿ ಇನ್ನಷ್ಟು ಜನ ಶಿಷ್ಯರನ್ನು ನೃತ್ಯ ಸಂಪ್ರದಾಯದ ಹರಡುವಿಕೆಯಲ್ಲಿ ನಿಯೋಜಿಸಬಹುದಲ್ಲವೆ? ಅ ಬ್ರಾಹ್ಮಣ ಸ್ತ್ರೀಯನ್ನು ಸೇರಿಸಿಕೊಳ್ಳಲು ಅವಕಾಶವಿದ್ದರೂ ಅವರೊಂದಿಗೆ ಈ ಕಲಾವಿದರು ಬೆರೆತರೆ? ಮನಸೋತರೆ? ಇಂಥ ಮಾನಸಿಕ ತಳಮಳವನ್ನುಂಟು ಮಾಡುವ ಪರಿಸ್ಥಿತಿಯನ್ನೇ ಮೂಲದಲ್ಲಿಯೇ ಚಿಗುಟಿದ್ದಾರೆ ಈ ಕಲಾಗುರುಗಳು. ಇದಕ್ಕೆ ಆಧಾರವೆಂದರೆ ಭಾಮಕಲಾಪದ ಅ ಬ್ರಾಹ್ಮಣ ತಂಡದಲ್ಲಿ ನಟಿ ಅವಶ್ಯವಾಗಿ ಮೊದಲಿನಿಂದಲೂ, ಇಂದೂ ಇರುವುದೇ ಆಗಿದೆ.

ಇಂದಿಗೂ ಕೂಚಿಪುಡಿಯಲ್ಲಿ ಉಂಬಳಿಪಡೆದ ಬ್ರಾಹ್ಮಣ ಕುಟುಂಬಗಳಿದ್ದು ಕ್ರಮಬದ್ಧವಾದ ೧೦ ವರ್ಷದ ವ್ಯಾಸಂಗ ಪಡೆಯುತ್ತಾರೆ. ಒಂದೂಂದು ಮನೆತನ ಒಂದೂಂದು ಪಾತ್ರಕ್ಕೆ ಸೀಮಿತವಾಗಿದೆ ಅಂದರೆ ಒಂದು ಕುಟುಂಬ ಕಲಾವಿದರು ಒಂದೇ ಪಾತ್ರವನ್ನು, ಆತನ ಮಗನೂ ಅದೇ ಪಾತ್ರವನ್ನೂ ಕಲಾತ್ಮಕವಾಗಿ ಮುಂದೊರೆಯಿಸಿಕೊಂಡು ಹೋಗುತ್ತಾರೆ. ಇತರ ಪಾತ್ರಗಳು ಬರುವುದಿಲ್ಲ, ಒಪ್ಪುವುದಿಲ್ಲವೆಂದಲ್ಲ, ಇದರಷ್ಟು ಕಳಗಟ್ಟಲಾರದೆಂದೇ ಅಲ್ಲಿಯ ಕಲಾವಿದರ ಹೇಳಿಕೆ. ಈ ಹಳ್ಳಿಯಲ್ಲಿ ಸಿದ್ದೇಂದ್ರಯೋಗಿಗಳ ಇಷ್ಟದೇವತಾ ರಾಜಗೋಪಾಲಸ್ವಾಮಿಯ, ಅಂಬಾದೇವಿಯ ಪುರಾತನ ದೇವಾಲಯಗಳಿವೆ. ಪಕ್ಕದ ಶ್ರೀಕಾಕುಳದಿಂದ ಯೋಗಿಗಳು ಶಿಷ್ಯರೊಂದಿಗೆ ಇಲ್ಲ್ಲಿಗೆ ಒಲಸೆ ಬಂದು ಒಂದು ಪುಟ್ಟ ಹಳ್ಳಿಯನ್ನು ಕಟ್ಟಿ ” ಕುಶೀಲವಪುರಿ”-ನಟರ ಊರು ಎಂದು ಹೆಸರಿಟ್ಟಿದ್ದಾರೆ. ಇದೇ ಅಪಬ್ರಂಸವಾಗಿ “ಕೂಚಿಪುಡಿ”ಯಾಗಿದೆ. ಈ ಕಲಾವಿದರು ಅನುಸರಿಸುವ ನೃತ್ಯ ಸಂಪ್ರದಾಯವೇ “ಕೂಚಿಪುಡಿ”ಯಾಗಿದೆ. ಇಂದು ಕೂಚಿಪುಡಿಯ ಕಲಾಕ್ಷೇತ್ರದಲ್ಲಿ, ಏಲುರು ಕಲಾಕ್ಷೇತ್ರದಲ್ಲಿ, ಬಾಲಕರೊಂದಿಗೆ ಬಾಲಕಿಯರೂ ನೃತ್ಯ ತರಬೇತಿ ಪಡಿಯುತ್ತಿದ್ದಾರೆ. ಸುಮಾರು ೧೦ ವರ್ಷಗಳ ಅಧ್ಯಯನದ ವ್ಯವಸ್ಥೆ ಇದ್ದು ವ್ಯವಸ್ಥಿತ ನೃತ್ಯ ಶಿಕ್ಷಣ ನಡೆದಿದೆ. ೧೯೭೬ ರಲ್ಲಿ ನಾನು ಭೇಟಿ ನೀಡಿದಾಗ್ಗೆ ನಡೆದ ನಾಟ್ಯೋತ್ಸವದಲ್ಲಿ

ತಿಲ್ಲಾಣ:  ಕು.ವಾಸಗಂಟಿ ಪದ್ಮ
ರಾಜಶ್ರೀಶಬ್ದಮು :  ಕು.ವಿಷ್ಣುಪ್ರಿಯ
ಝಣುತಶಬ್ದಮು :  ಕು. ಸಂಪತ್ ಕುಮಾರಿ, ಕು. ಕೃಷ್ಣಕುಮಾರಿ
ಸ್ವರಜತಿ :  ಕು. ಜಯಪ್ರದ
ಪದಂ :  ವಿ. ಮಾಣಿಕ್ಯಲರಾವು ಇತ್ಯಾದಿ.

ಒಂದು ಮನೆತನದವರು ಒಂದು ಪತ್ರಕ್ಕೆ ಪ್ರಸಿದ್ಧಿಯನ್ನೂ, ಪಾತ್ರದ ಕೌಶಲ್ಯವನ್ನೂ ಹೊಂದಿದ್ದಾರೆಂಬುದಕ್ಕೆ ವೇದಾಂತಂ ಪ್ರಹ್ಲಾದಶರ್ಮ- ಈ ಮನೆತನ ಭಾಮೆ ಪಾತ್ರಕ್ಕೆ ಹೇಳಿ ಮಾಡಿಸಿದಂತಿದೆ. ಶ್ರೀ ಸತ್ಯನಾರಾಯಣ ಶರ್ಮರ ಭಾಮಾ ಪಾತ್ರ ಅದ್ವಿತೀಯ. ಈಗ ಪ್ರಹ್ಲಾದ ಶರ್ಮತ ಚಿರಂಜೀವಿ, ಭಾಮೆ ಪಾತ್ರ ಮುಂದೊರೆಸುತ್ತಿದ್ದಾರೆ.

ಕೂಚಿಪುಡಿ ನೃತ್ಯ ಕಲಾವಿದರು ೧೬೭೮ರಲ್ಲಿ ಮಚ್ಚಲೀಪಟ್ಟಣಕ್ಕೆ ಗೋಲ್ಕೊಂಡದ ನವಾಬರು ಹೋಗುತ್ತಿರುವಾಗ್ಗೆ ರಂಜಿಸಿದ್ದರಿಂದ ನವಾಬರು ಈ ಹಳ್ಳಿಯನ್ನೇ ಕಲಾವಿದರಿಗೆ ಇನಾಮಾಗಿ ಕೊಟ್ಟರು. ಬಂಗನಪಲ್ಲಿ ನವಾಬರು ಈ ಕಲಾವಿದರನ್ನು ಬರಮಾಡಿಕೊಂಡು ನೃತ್ಯದಿಂದ ತಣಿದು ‘ಕೋಟಿಕೊಂಡ’ ಎಂಬ ಹಳ್ಳಿಯನ್ನು ಇನಾಮಾಗಿ ಕೊಟ್ಟಿದ್ದಾರೆ. ಇವು ಐತಿಹಾಸಿಕ ಸಂಗತಿಗಳು.

ಕೂಚಿಪುಡಿಯು ಭರತನಾಟ್ಯಶಾಸ್ತ್ರದ ವೈಖರಿಯಲ್ಲಿಯೇ ಸಾಗುತ್ತದೆ. ಇಂದು ಇದೇ ಭರತನಾಟ್ಯ ಎಂದು ಯಾವುದನ್ನೂ ಸ್ಥಿರವಾಗಿ ಹೇಳುವಂತಿಲ್ಲವಾದರೂ ತಂಜಾವೂರು ಪದ್ಧತಿಯನ್ನೇ ಆಧಾರವಾಗಿಟ್ತುಕೊಂಡರೂ ಸೂಕ್ಷ್ಮವಾಗಿ ಅವಲೋಕಿಸಿದಲ್ಲಿ ಕೂಚಿಪುಡಿಯ ನೃತ್ಯದಲ್ಲಿ ಅಲ್ಲಲ್ಲಿ ಕೆಲವು ಭಿನ್ನತೆಗಳು ಕಂಡುಬರುತ್ತವೆ. ತಂಜಾವೂರ ಪದ್ದತಿಯಲ್ಲಿಯ ಒಂದು ನಿಶ್ಚಿತ ಕಟ್ಟುನಿಟ್ಟು ಇಲ್ಲಿ ಸಡಿಲಾಗಿ ಕಲಾವಿದರ, ರಸಿಕರ ಅನುಕೂಲಕ್ಕೆ ಕೆಲವೂಂದು ಪ್ರಾಶಸ್ತಿ ಕೊಟ್ಟಿರುವುದು ಗಮನಾರ್ಹ. ಈಗ ಭಾಮಾಕಲಾಪದಲ್ಲಿ ಕಂಡು ಬರುವ ಕೆಲವೂಂದು ಘಟಕಗಳ ವಿಶ್ಲೇಷಣೆಯು ಅವಶ್ಯವಿರುವುದರಿಂದ ಸಂಕ್ಷಿಪ್ತವಾಗಿ ಇಲ್ಲಿ ವಿವರಿಸಿದೆ.

ಭರತನಾಟ್ಯ ಈ ಪದದ ಅರ್ಥವೇ ಭ-ಭಾವದಿಂದ ಕೂಡಿದ, ರ-ರಾಗದಿಂದ ಕೂಡಿದ, ತ-ತಾಳ-ಲಯಬದ್ಧತೆಯಿಂದ ಕೂಡಿದ ನಾಟ್ಯವೆಂದಾಗುತ್ತದೆ. ನಾಟ್ಯ ಇದು ಸಂಸ್ಕ್ರತದ ನಟು ಧಾತುವಿನಿಂದ ಉತ್ಪತ್ತಿಯಾಗಿದ್ದು – ನಟಿಸು – ಅಭಿನಯಿಸು – ಅನುಕರಿಣಿಸು ಎಂಬ ಅರ್ಥವನ್ನು ಹೊಂದಿದೆ. ರಸರಹಿತ ನರ್ತನವು ‘ನೃತ್ತ’, ರಸಪೂರಿತ ನರ್ತನ ‘ನೃತ್ಯ’, ರಸ. ಕಥೆಯನ್ನೊಳಗೊಂಡ ನರ್ತನ ನಾಷ್ಯ. ಭಾಮಾಕಲಾಪದಲ್ಲಿ ರಸ, ಕಥೆ, ಭಾವ ಇರುವುದರಿಂದ ಪರಿಪೂರ್ಣವಾದ ನಾಷ್ಯವೆಂದು ಭಾವಿಸಬಹುದು. ನಾಟ್ಯ ಪ್ರಸಾರಕ್ಕೆ ಕರಣ, ಚಾರಿ, ಅಂಗಹಾರ, ಹಸ್ತಪಾದಾದಿಗಳ ಚಲನೆ, ರಸಭರಿತ ನರ್ತನಗಳು ಅವಶ್ಯವಲ್ಲದೆ ಇದಕ್ಕೆ ಗೀತ, ಹಸ್ತ, ಚಕ್ಷು ಮತ್ತು ತಾಳಗಳ ಅವಶ್ಯಕತೆ ಇದೆ. ಇಲ್ಲಿ ಗೀತವೆಂದರೆ ಹಾಡುವ ಹಾಡು. ಭಾಮಾಕಲಾಪದಲ್ಲಿ ಅನೇಕ ಹಾಡುವ ಹಾಡುಗಳಿವೆ. ಹಾಡದ ಹಾಡುಗಳೂ ಉಂಟು – ಇಲ್ಲಿ ಹಾಡುವುದು ಎಂದರೆ ಅಭಿನಯಯೋಗ್ಯ ಪದವೆಂದೇ ಅರ್ಥಮಾಡಲಾಗಿದೆ. ಸಂಗೀತ ಮಾರ್ಗದ ಕ್ಷೇತ್ರಯ್ಯ ಮತ್ತು ಮುಕ್ಕು ತಿಮ್ಮಣ್ಣನ ಮುದ್ದು ಪಳನಿ ಈ ಕವಿಗಳ ಭಾವಪೂರ್ಣ ಹಾಡುಗಳನ್ನು ನಾವು ಕಾಣಬಹುದು ಹಸ್ತವೆಂದರೆ ಗಿಋಈತೆಯ ಭಾವವನ್ನು ಸೂಚಿಸಲು ಕೈಗಳನ್ನು ಉಪಯೋಗಿಸುವುದು. ಇದನ್ನು ವಿವಿಧ ಹಸ್ತಮುದ್ರೆಗಳೆಂದು ಗುರ್ತಿಸಿ, ನಿಶ್ಚಿತ ಅರ್ಥಕ್ಕೆ ಶಂದು ಸ್ಥಿರವಾದ ಹಸ್ತಮುದ್ರವನ್ನೇ ಉಪಯೋಗಿಸುತ್ತಾರೆ. ಉದಾಹರಣೆಗಾಗಿ ಪತಾಕ, ತ್ರಿಪತಾಕ ಇತ್ಯಾದಿಗಳು. ಒಂದು ಹಸ್ತದ ಮುದ್ರೆಗಳು. ಪತಾಕವೆಂದರೆ ಎಆಲ್ಲ ಬೆರಳುಗಳನ್ನು ನೇರವಾಗಿ ಹಿಡಿಯುವುದು. ಇದು ಸಂತೋಷಮಳೆ, ಪುಷ್ಪವೃಷ್ಟಿಯ ಸೂಚಕ. ಆದರೆ ಬೆರಳನ್ನು ಅಲ್ಲಾಡಿಸಿದರೆ ಅದು ನೀರಿನ ಅಲೆಯನ್ನು ಸೂಚಿಸುತ್ತದೆ. ಭಾಮೆಯು ವಿರಹದಿಂದ ಪ್ರಲಾಪಿಸುವಲ್ಲಿ ಆಲಿಂಗನ ಮತ್ತು ದುಃಖಸೂಚಕಗಳನ್ನು ತೋರಿಸಲು ಕಿರಿಬೆರಳನ್ನು ಬರ್ಧ್ವಮುಖವಾಗಿಯೂ ಹೆಬ್ಬೆರನ್ನು ಸಂಕುಚಿಸಿ ಉಳಿದವುಗಳನ್ನು ಒಂದಿಷ್ಟು ಡೊಂಕಾಗಿಸಿ ನಿರೂಪಿಸುವುದು ಒಂದು ಹಸ್ತಮುದ್ರೆ ಇದನ್ನು ಹಂಸಪಕ್ಷವೆಂದು ಕರೆಯುತ್ತಾರೆ. ಎರಡೂ ಕೈಗಳನ್ನು ಉಪಯೋಗಿಸಿ ತೋರುವ ಹಸ್ತಮುದ್ರೆಗಳು ೧೩ ಇವೆ. ಉದಾಹರಣೆಗಾಗಿ ಅಂಜಿಲಿಹಸ್ತ ಎರಡು ಕೈಗಳನ್ನು ಪತಾಕವಾಗಿ ಹೊಂದಿರುವುದು. ಇದು; ದೇವತಾ, ಗುರು ವಂದನೆಯನ್ನು ಸುಚಿಸುತ್ತದೆ. ಕಪೋತ ಹಸ್ತ, ಕರ್ತಟ ಹಸ್ತ, ಉತ್ಸುಂಗ, ಪುಷ್ಪಪುಷ ಮಕರ ಹಸ್ತ ಇತ್ಯಾದಿ. ಭಾಮೆಯು ರುಕ್ಮಿಣಿ, ರಾಧೆಯರನ್ನು ಅಣಕಿಸಿ ಅವರಿಗೆ ಧಿಕ್ಕರಿಸಿ ತನ್ನ ಅಭಿಮಾನವನ್ನು ಸೂಚಿಸುವಾಗ ಅವಳು ಎಡ ಹಸ್ತದಿಂದ ಬಲ ಭುಜವನ್ನೂ, ಬಲಹಸ್ತದಿಂದ ಎಡ ಭುಜವನ್ನೂ ಮೊಳಕೈಯಲ್ಲಿ ಬೆರಳುಗಳನ್ನೂ ಮಡಿಚಿ ಹಿಡಿದಿರುವುದು ನಿಷಧವೆಂಬ ಸಂಯುಕ್ತ ಹಸ್ತಮುದ್ರ ಬೆರಳುಗಳು ಚಲನವಲನಕ್ಕೂ ಇಂಥ ಬೆರಳು ಹಿಂದಕ್ಕೆ ಬಾಗಿದರೆ ಈ ಅರ್ಥ. ಇನ್ನೊಂದು ಬೆರಳು ಹಿಂದಕ್ಕೆ ಬಾಗಿದರೆ ಬೇರೊಂದು ಅರ್ಥ. ಹೀಗೆ ಕಟ್ಟು ನಿಟ್ಟಾದ ಹಸ್ತಲಕ್ಷಣ ಭೇದಗಳನ್ನೂ, ಕರ್ಮಭೇದಗಳನ್ನೂ, ನಂದಿಕೇಶ್ವರರ ಸೂತ್ರದಲ್ಲಿ ಹೇಳಿರುವಂತೆ ಇಲ್ಲಿ ಅಭಿನಯಿಸಲಾಗುತ್ತದೆ.

ಚಕ್ಷು: ಅಂದರೆ ಮಾತಿನ ಪದ್ಯದ ಅರ್ಥವನ್ನು ಕಣ್ಣಿನ ಚಲನೆಯಿಂದ ಸೂಚಿಸುವುದು, ಕಣ್ಣಿನ ಚಲನೆಗೆ ಹುಬ್ಬು, ರೆಪ್ಪೆ, ಗುಡ್ಡೆಗಳೂ ಸಹಕಾರಿ. ಉತ್ಪ್ರೇಕ್ಷೆ, ಪಾತನ, ಭ್ರುಕುಟ, ಚತುರ ಇತ್ಯಾದಿಯಾಗಿ ಏಳು ವಿಧದ ಹುಬ್ಬುಗಳ ಚಲನೆಯಿದೆ. ಕೃಷ್ಣನು ಮಧುರವಾಗಿ ಎರಡೂ ಹುಬ್ಬನ್ನು ಮೆಲ್ಲಗೆ ಕದಲಿಸುವುದು ಶೃಂಗಾರ ಸೂಚಕವಾಗಿ ಇದನ್ನು ಚತುರ ಎಂದು ಕರೆಯಲಾಗುತ್ತದೆ ರೆಪ್ಪೆಗಳ ಚಲನೆಗೂ ನಿಯಮ, ಉನ್ಮೇಶ, ವೇಶ ಎಂಬುದಾಗಿ ಒಂಭತ್ತು ವಿಧಗಳು. ರೊಧವನ್ನು ತೋರಿಸಲು ರೆಪ್ಪೆಗಳನ್ನು ಮೇಲಕ್ಕೆತ್ತುವುದು ವಿವರ್ತಿತ ಎಂದು ಕರೆಯಲ್ಪಡುತ್ತದೆ.

ಕಣ್ಣುಗಳ ಚಲನೆಯಲ್ಲಿ ಒಂಭತ್ತು ಪ್ರಕಾರಗಳಿವೆ. ಭ್ರಮಣ, ವಲನ, ಪಾತನ ಇತ್ಯಾದಿ, ಕಣ್ಣಾಲಿಗಳು ರೆಪ್ಪೆಯಲ್ಲಿ ಹುದುಗಿಕೊಂಡುವಂತೆ; ಮಾಧವಿಯು ತೋರಿಸುವುದು ಸಂಪ್ರವೇಶಿತ. ಇದರಂತೆ ನಾಸಿಕ, ಅಧರ (ತುಟಿ) ಕೆನ್ನೆಗಳ ಚಲನೆ, ದೃಷ್ಟಿ ಚಲನೆಗೂ ಅನೇಕ ವರ್ಗ ಉಪವರ್ಗಗಳಿದ್ದು ಅತ್ಯಂತ ಶಾಸಿಯ ಅಧ್ಯಯನವನ್ನು ಕಲಾವಿದರು ಭಾಮಾಕಲಾಪದಲ್ಲಿ ಹೊರಸೂಸುತ್ತಾರೆ. ಈಗ ತಾಳದ ವಿಚಾರ. ತಾಳವೆಂದರೆ ಕಾಲದ ಮಾನ. ತಾಳಲಯವನ್ನು ಅನುಸರಿಸಿಯೇ ಅಭಿನಯವು ಸಾಗುತ್ತದೆ. ಗೀತೆ, ಹಸ್ತ, ಶರೀರದ ಇತರ ಅವಯಶಗಳ ಚಲನೆಯ ನಿಯಂತ್ರಣವೇ ತಾಳ ಲಯ.

ಇನ್ನು ಭಾಮಾಕಲಾಪದ ನಾಯಕ, ನಾಯಕಿಯರ ವಿಚಾರ. ನಾಯಕ ಕೃಷ್ಣ. ಭರತನಾಟ್ಯಶಾಸ್ತ್ರದಲ್ಲಿ ನಾಯಕರು ಮುಖ್ಯವಾಗಿ ನಾಲ್ಕು – ಪ್ರತಿಯೊಂದರಲ್ಲಿ ಹದಿನಾಲ್ಕು ಉಪಭೇದಗಳಿವೆ. ಇಲ್ಲಿ ಕೃಷ್ಣ ದೀರೋದ್ಧತ. ನಾಯಕಿಯರು ಎಂಟು ವಿಧ – ಸ್ಪಿಯೇ, ಖಂಡಿತೆ, ಕಲಹಂತರಿ, ಇತ್ಯಾದಿ. ಭಾಮೆಯು ಪತಿಯನ್ನು ನಿರ್ಲಕ್ಷಿಸಿ ವಂತರ ಚಿಂತಿಸುವವಳಾದ್ದರಿಂದ ಈಕೆ ಕಲಹಂಕರಿ ವರ್ಗದವಳು. ಮಾಧವಿಯ ಹಾಸ್ಯ ರಸವು ಸ್ಥಾಯೀ ಭಾವದಿಂದ ಜನಿಸಿದ್ದು. ಅಭಿನಯದಲ್ಲಿ ಬಹುಮುಖ ಪಾತ್ರವನ್ನು ವಹಿಸುತ್ತದೆ. ಮಾತು ಕುಚೇಷ್ಟೆಗಳಲ್ಲಿ ತೊಡಗುವುದು. ತಾನು ನಗದೆ ಎರಡನೆಯವರನ್ನೇ ಮಾಧವಿ ನಗಿಸುವುದರಿಂದ ಇದನ್ನು ಪರಸ್ಥ ಎಂದು ವರ್ಗೀಕರಿಸಬಹುದು.