ಭಗವಂತನು ಸೃಷ್ಟಿಸಿರುವ ಪುಷ್ಪಗಳು ಅತ್ಯಂತ ಸುಂದರ ಮತ್ತು ಸುಕೋಮಲ

ಮೇಲಿನ ಚಿತ್ರವನ್ನು ಗಮನಿಸಿ, ನಿಮ್ಮ ಮನಸ್ಸಿಗೆ ಬರುವ ವಿವಿಧ ವಿಚಾರಗಳನ್ನು ಪಟ್ಟಿ ಮಾಡಿ.

‘ಹುಟ್ಟಿದಾಗಿನಿಂದ ಸಾಯುವವರೆಗೆ ಸಂವಹನ ಅನಿವಾರ್ಯ’.

ಈ ಹೇಳಿಕೆಗೆ ನಿಮ್ಮ ಸಮ್ಮತಿ ಇದೆಯೆ? ವಿಮರ್ಶಿಸಿ.

ಅಧ್ಯಾಯದ ಪರಿಕಲ್ಪನೆ:

ಅಧ್ಯಾಯದ ಕಲಿಕೆಯ ಉದ್ದೇಶಗಳು:

 • ‘ಸಂವಹನ-ಕೌಶಲ’ ಎಂದರೇನು ಎಂದು ಅರ್ಥಮಾಡಿಕೊಳ್ಳುವುದು (೫ W’s – 1H ಸಿದ್ಧಾಂತ)
 • ‘ವಿಶ್ವಾಸಾತ್ಮಕ ಸಂವಹನ’ವೆಂದರೇನು ಎಂದು ತಿಳಿಯುವುದು.
 • ವಿಶ್ವಾಸಾತ್ಮಕ-ಸಂವಹನ ಮತ್ತು ಆಕ್ರಮಣಕಾರಿ-ಸಂವಹನಗಳ ವ್ಯತ್ಯಾಸವನ್ನು ಗುರುತಿಸುವುದು.
 • ವಿಶ್ವಾಸಾತ್ಮಕ ಸಂವಹನದ ಪ್ರಾಮುಖ್ಯತೆಯನ್ನು ತಿಳಿಯುವುದು.
 • ವಿವಿಧ ಉಪಾಯಗಳನ್ನು ವಿಶ್ವಾಸಾತ್ಮಕ ಸಂವಹನಕ್ಕೆ ಅನ್ವಯಿಸುವುದು.
 • ವಿಶ್ವಾಸಾತ್ಮಕ ಸಂವಹನದ ತಂತ್ರಗಳು.

ಪೀಠಿಕೆ

ಮಾನವರು ಸಮಾಜಜೀವಿಗಳು. ಸಮಾಜದಲ್ಲಿ ಸೌಹಾರ್ದಯುತವಾದ ಜೀವನವನ್ನು ನಡೆಸಬೇಕಾದರೆ, ಸುತ್ತಮುತ್ತಲಿನ ಜನರೊಂದಿಗೆ ಒಡನಾಡಬೇಕಾಗುತ್ತದೆ, ವ್ಯವಸ್ಥೆ ಮತ್ತು ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಾಮಾಜಿಕ ಪ್ರಕ್ರಿಯೆಯನ್ನೇ ‘ಸಂವಹನ’ ಎಂದು ಗುರುತಿಸಲಾಗಿದೆ.

ಉಸಿರಾಟವನ್ನು ಬಿಟ್ಟರೆ ಮಾನವರು ನಿರಂತರವಾಗಿ ಮಾಡುವ ಕ್ರಿಯೆಯೆಂದರೆ ಸಂವಹನವೆ. ಸಂವಹನದ ಪ್ರಕ್ರಿಯೆ ಜನನಪೂರ್ವದಲ್ಲೇ ಪ್ರಾರಂಭಗೊಳ್ಳುತ್ತದೆ. ತಾಯಿಯ ಗರ್ಭದಲ್ಲಿರುವಾಗಲೇ ಮಗು ತನ್ನ ಸಮಾಧಾನ ಅಥವಾ ಅಸಮಾಧಾನವನ್ನು ಚಲನವಲನಗಳಿಂದ ಹಾಗೂ ಒದೆಯುವುದು ಮುಂತಾದ ಕ್ರಿಯೆಗಳ ಮೂಲಕ ವ್ಯಕ್ತಪಡಿಸುತ್ತದೆ. ಹಿಂದೆ ಅಭಿಮನ್ಯು ತಾಯಿಯ ಗರ್ಭದಲ್ಲಿದ್ದಾಗ ಕೃಷ್ಣನೊಂದಿಗೆ ಸಂವಹನಗೈದ ಕಥೆಯನ್ನು ಪುರಾಣಗಳಲ್ಲಿ ಕೇಳಿದ್ದೇವೆ. ಇಂತಹ ಬಾಹ್ಯ-ಸಂವಹನ ಮತ್ತು ಆವೇಗಗಳು ಮಗುವಿನ ಮೇಲೆ ತುಂಬ ಪ್ರಭಾವ ಬೀರುತ್ತವೆ.

ಮಗು ಹುಟ್ಟುತ್ತಲೆ, ತನ್ನ ಅಸಮಾಧಾನವನ್ನು ಅಳುವುದರ ಮೂಲಕ ತಿಳಿಸುತ್ತದೆ. ಈ ಸಶಬ್ಧ ಅಥವಾ ನಿಶ್ಶಬ್ಧ ಸಂವಹನದ ಪ್ರಕ್ರಿಯೆಯು ಜೀವನ ಪರ್ಯಂತ ಮುಂದುವರೆಯುತ್ತದೆ. ಇನ್ನು ಕೆಲವರು ಮೃತ್ಯು ಹೊಂದಿದವರೊಂದಿಗೂ ಸಂವಹನ ಮಾಡುತ್ತಾರಂತೆ! ಕೆಲವರು ತುಂಬ ಪರಿಣಾಮಕಾರಿಯಾಗಿ ಸಂವಹನ ಮಾಡಿದರೆ ಇನ್ನು ಕೆಲವರು ಅಳುಕಿನಿಂದಲೇ ಸಂವಹನ ಮಾಡುತ್ತಾರೆ; ಕೆಲವರು ವಿಷಯವನ್ನು ತುಂಬ ಸ್ಪಷ್ಟವಾಗಿ ನಮೂದಿಸಿದರೆ, ಮತ್ತೆ ಕೆಲವರು ಏನು ಹೇಳಬೇಕೆಂದಿರುವರೋ ಅದನ್ನು ಹೇಳಲು ತಡಕಾಡುತ್ತಾರೆ. ಬಹುಶಃ ಈ ಎರಡು ವರ್ಗದ ಜನರ ಮನಸ್ಸಿನಲ್ಲೂ ವಿಷಯವು ಒಂದೇ ಆಗಿದ್ದರೂ ಅವರವರ ಅಭಿವ್ಯಕ್ತಿ-ಸಾಮರ್ಥ್ಯ ಮಾತ್ರ ವಿಭಿನ್ನವಾಗಿರುತ್ತದೆ.

ಕೆಲವರು ‘ಜನ್ಮಸಿದ್ಧ ವಾಗ್ಮಿಗಳು’ ಎಂಬ ನಂಬಿಕೆ ಇದೆ. ಸಂವಹನ ಒಂದು ಕಲೆ. ಅದನ್ನು ಸ್ವಲ್ಪ ಪ್ರಯತ್ನ, ಪೂರ್ವಯೋಜನೆ ಮತ್ತು ಪ್ರೋತ್ಸಾಹಗಳಿಂದ ಬೆಳೆಸಿಕೊಳ್ಳಬಹುದು. ಆದ್ದರಿಂದಲೇ ಅದನ್ನು ‘ಕಲೆ’ ಎನ್ನುವುದು.

ಇಂದಿನ ಸ್ವರ್ಧಾತ್ಮಕ ಯುಗದಲ್ಲಿ, ಉತ್ತಮ ಸಂವಹನ ತುಂಬ ಉಪಯುಕ್ತ. ನಿಮಗೆ ಎಷ್ಟು ಗೊತ್ತಿದೆ ಎನ್ನುವುದು ಎಷ್ಟು ಮುಖ್ಯವೋ ನೀವು ಅದನ್ನು ಹೇಗೆ ಸಂವಹನ ಮಾಡುವಿರಿ ಎನ್ನುವುದೂ ಅಷ್ಟೇ ಮುಖ್ಯ. ಸಂವಹನೆಯಲ್ಲಿ ನಿಮ್ಮ ಕ್ಷಮತೆ ಸುಧಾರಿಸಿದಲ್ಲಿ ನಿಮ್ಮ ಕಾರ್ಯನಿರ್ವಹಣೆಯ ಗುಣಮಟ್ಟ ಹೆಚ್ಚುತ್ತದೆ. ಶಿಕ್ಷಕರು, ಮ್ಯಾನೇಜರ್, ಎಕ್ಸಿಕ್ಯೂಟಿವ್, ಬ್ಯಾಂಕರ್, ರೈತ, ಸಮಾಜ-ಸುಧಾರಕ ಅಥವಾ ರಾಜಕಾರಣಿಯೇ ಆಗಿರಬಹುದು, ಎಲ್ಲರೂ ಸಂವಹನ ಕೌಶಲವನ್ನು ಬೆಳೆಸಿಕೊಳ್ಳಬೇಕು. ಸಂವಹನ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆಯಿಂದಾಗಿ ಹಾಗೂ ಆಳವಾದ ಸಂಶೋಧನೆಯಿಂದಾಗಿ ಸಂವಹನ-ಕೌಶಲಗಳನ್ನು ಬೆಳೆಸಿಕೊಳ್ಳಲು ಅನೇಕ ಸಾಧನ ಮತ್ತು ತಂತ್ರಗಳನ್ನು ಆವಿಷ್ಕರಿಸಲಾಗಿದೆ. ಅವುಗಳನ್ನು ತಿಳಿದುಕೊಳ್ಳಲು ಸ್ವಲ್ಪ ಪ್ರಯತ್ನಿಸೋಣ.

 • ಸಂವಹನ ಕೌಶಲಗಳುಮೂಲ ಅಂಶಗಳು
 • ಸಂವಹನಕ್ಕೆ ಸಂಬಂಧಿಸಿದಯಾರು/ಯಾರಿಗೆ, ಏನು, ಯಾವಾಗ, ಎಲ್ಲಿ, ಏಕೆ, ಹೇಗೆ ಎಂಬ ವಿಚಾರಗಳು

ಯಾರು 

 • ಸಂವಹನೆ ಮಾಡುವವರು.
 • ಸೂಕ್ತ ವ್ಯಕ್ತಿ ಮಾತ್ರವೇ ಸಂವಹನ ಮಾಡಬೇಕು.
 • ಪ್ರತಿಯೊಬ್ಬರಿಗೆ ಒಂದು ಮಿತಿ ಇದೆ ಮತ್ತು ಅದನ್ನು ಅವರು ತಿಳಿದುಕೊಂಡಿರಬೇಕು.

ಯಾರಿಗೆ 

 • ಸ್ವೀಕರಿಸುವವರು.
 • ಸರಿಯಾದ ವ್ಯಕ್ತಿಗೆ ಸಂದೇಶ ಹೋಗುತ್ತಿದೆಯೇ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಿ.
 • ಜನರು ತಮ್ಮಲ್ಲಿ ಸಹಾನುಭೂತಿ ವ್ಯಕ್ತಪಡಿಸುವವರೊಂದಿಗೆ ಸಂವಹನ ಮಾಡುತ್ತಾರೆ.
 • ನೀವು ಯಾರೊಂದಿಗೆ ಸಂವಹನ ಮಾಡುತ್ತೀರೋ, ಅವರ ಅಗತ್ಯವನ್ನು ಅರ್ಥಮಾಡಿಕೊಳ್ಳಿ. ಅಬ್ರಹಾಂ ಮ್ಯಾಸ್ಲೋ ಹೇಳಿದ ‘ಅಗತ್ಯತಾ ಶ್ರೇಣಿ’ಯನ್ನು ಅರ್ಥಮಾಡಿಕೊಳ್ಳಿ.

ಏನು

 • ಸಂದೇಶ.
 • ಅದು ಸ್ಪಷ್ಟವಾಗಿರಬೇಕು ಮತ್ತು ದ್ವಂದ್ವಕ್ಕೆ ಎಡೆಗೊಡಬಾರದು.
 • ಆದಷ್ಟು ಸಂಕ್ಷಿಪ್ತವಾಗಿರಬೇಕು.
 • ಒಂದೇ ಶೈಲಿಯನ್ನು ಆಧರಿಸಿಕೊಂಡಿರಬೇಡಿ.
 • ಪಿಸುಗುಟ್ಟುವಿಕೆ ಮುಂತಾದವು ಬೇಡ.
 • ನಿಮ್ಮ ಹೇಳಿಕೆಗಳ ಕುರಿತಾಗಿ ಚೆನ್ನಾಗಿ ಆಲೋಚಿಸಿ. “ನಾನು ಏನು ಹೇಳಬೇಕೆಂದಿದ್ದೆ ಎಂದರೆ—” ಎಂದು ಮತ್ತೆ ಹೇಳಬೇಕಾದ ಸಂದರ್ಭಕ್ಕೆ ಅವಕಾಶ ಮಾಡಿಕೊಡಬೇಡಿ.

ಯಾವಾಗ 

ಸೂಕ್ತವಾದ ಸಮಯ ಮತ್ತು ಸ್ಥಳ.

ಸೂಕ್ತ ಸಮಯದಲ್ಲಿ ಸರಿಯಾದುದನ್ನು ನೆನಪಿಸಿಕೊಳ್ಳಲು ಮರೆಯದಿರಿ.

ಏಕೆ

 • ಸೂಚನೆಗಳನ್ನು ತಿಳಿಸಲು.
 • ಅಭಿಪ್ರಾಯಗಳನ್ನು ಹಂಚಿಕೊಳ್ಳಲು.
 • ಪ್ರಾಧಾನ್ಯತೆ/ ಶ್ರೇಷ್ಠತೆಯನ್ನು ಪ್ರದರ್ಶಿಸಲು.
 • ಸುಖ/ದುಃಖ/ಉದ್ವೇಗಗಳನ್ನು ಹಂಚಿಕೊಳ್ಳಲು.
 • ದಯೆ/ಕನಿಕರ ತೋರಲು.
 • ಭಾವನಾತ್ಮಕ ಗೊಂದಲಗಳನ್ನು ಸೃಷ್ಟಿಸಲು/ತೆಗೆದು ಹಾಕಲು.

ಹೇಗೆ

 • ನೀವು ಒಳ್ಳೆಯ ಸಂವಹನಕಾರರಾಗಲು ನೀವು ಸದಾ ತುಂಬ ‘ಒಳ್ಳೆಯವರೆ’ಂಬಂತೆ ಕಾಣಿಸಿಕೊಳ್ಳಬೇಕಿಲ್ಲ.
 • ಮುಕ್ತ ಮನಸ್ಸಿನಿಂದ ಸಂವಹನ ಮಾಡಿ. ಸಂವಹನ ಮಾಡುವಾಗ ಪಕ್ಷಪಾತದ ಭಾವನೆ ಇರಕೂಡದು.
 • ಸಂಭಾಷಣೆಯನ್ನು ಮುಕ್ತವಾಗಿರಿಸಿ, ವಿಚಾರ-ವಿನಿಮಯವನ್ನು ಪ್ರೋತ್ಸಾಹಿಸಿ.
 • ಅಗತ್ಯಕ್ಕಿಂತ ಹೆಚ್ಚಿನ ಪ್ರತಿಕ್ರಿಯೆ ತೋರಿಸದಿರಿ. ನಿಮ್ಮ ಶ್ರೋತೃಗಳ ವ್ಯಕ್ತಿತ್ವದಿಂದ ಅನವಶ್ಯಕವಾಗಿ ಪ್ರಾಭಾವಿತರಾಗಬೇಡಿ.
 • ಆಹ್ಲಾದಕಾರಿ ಸಂವಹನ ಶೈಲಿಯಿಂದ ಅಸಂತೋಷಕರ ಸತ್ಯವನ್ನೂ ಕೂಡ ಒಪ್ಪುವ ರೀತಿಯಲ್ಲಿ ಹೇಳಬಹುದು.
 • ನಿಮ್ಮ ಮಾತಿನಲ್ಲಿ ನಿಮಗೆ ನಂಬಿಕೆ ಇರಲಿ/ ನಿಮ್ಮ ಹೇಳಿಕೆಗಳಿಗೆ ನೀವೇ ಜವಾಬ್ದಾರರಾಗಿರಿ.

ಸಂವಹನಪ್ರಕ್ರಿಯೆ:

ಸಂವಹನ-ಪ್ರಕ್ರಿಯೆ ಎನ್ನುವುದು ಸಂದೇಶವನ್ನು ಕಳಿಸುವುದು ಮತ್ತು ಸ್ವೀಕರಿಸುವುದನ್ನು ಒಳಗೊಂಡಿದೆ. ಸಂದೇಶವು ಉಕ್ತ (ಶಬ್ದಗಳಿಂದ ಕೂಡಿದ್ದು) ಅಥವಾ ಅನುಕ್ತ (ಶಬ್ದಗಳಿಲ್ಲದೆ) ಇರಬಹುದು. ಕೇವಲ ಸಂವಹನ ಮಾಡಿದರೆ ಸಾಲದು, ಅದನ್ನು ಪ್ರಭಾವಶಾಲಿಯಾಗಿ ಮಾಡುವುದೇ ಇಲ್ಲಿನ ಸವಾಲು. ಪ್ರಭಾವಶಾಲಿ ಸಂವಹನದಲ್ಲಿ ಸಂದೇಶವನ್ನು ಕಳಿಸುವ ಹಾಗೂ ಸ್ವೀಕರಿಸುವ ಎರಡು ಪ್ರಕ್ರಿಯೆಗಳೂ ಸೇರಿವೆ. ಇದರ ಜೊತೆಗೆ ಸಂದೇಶವು ಸರಿಯಾದ ರೂಪದಲ್ಲಿ ತಲುಪಿದೆಯೇ ಇಲ್ಲವೆ ಎನ್ನುವುದನ್ನು ಸ್ಪಷ್ಟಪಡಿಸಲು feedbackನ್ನು (ಹಿಮ್ಮಾಹಿತಿ) ಪಡೆದುಕೊಳ್ಳಬೇಕಾಗುತ್ತದೆ.

ಸಂವಹ ಪ್ರಕ್ರಿಯೆಯ ಹಂತಗಳು:

. ಸಂದೇಶವನ್ನು ಕಳುಹಿಸುವುದು: ಸಂದೇಶವನ್ನು ಕಳುಹಿಸುವ ಪ್ರಕ್ರಿಯೆಯೂ ಕೆಲವು ಅಂಶಗಳನ್ನು ಒಳಗೊಂಡಿದೆ. ಸಂದೇಶ ಕಳುಹಿಸುವವರಾದ ನಾವು ಕಳುಹಿಸಬೇಕಾದ ಸಂದೇಶವನ್ನು ಮೊದಲು ರೂಪಿಸುತ್ತೇವೆ.

. ಸಂದೇಶವನ್ನು ಸ್ವೀಕರಿಸುವುದು: ಸಂದೇಶ ಸ್ವೀಕಾರದಲ್ಲಿ ಕೆಲವು ಅಂಶಗಳು ಸೇರಿವೆ.

. ಸ್ವೀಕರಿಸುವವರು ಮೊದಲು ಕಳುಹಿಸಿದ ಸಂದೇಶವನ್ನು ಕೇಳುವುದು / ನೋಡುವುದು.

. ಬಾಹ್ಯ ಅಡಚಣೆಗಳಿಂದ ಸಂದೇಶವು ಸಾಕಷ್ಟು ಪ್ರಭಾವಿತವಾಗುತ್ತದೆ. ಅಂತೆಯೇ ನಮ್ಮ ಆಂತರಿಕ ಅಡಚಣೆಗಳು (ಅನುಭವದ ಮಟ್ಟ, ಕೇಳಿದ ಮಾತುಗಳನ್ನು ಅರ್ಥಮಾಡಿಕೊಳ್ಳುವ ಪರಿ, ಆ ಪದಾರ್ಥದ ಪ್ರತಿ ನಮ್ಮ ಧೋರಣೆ ಅಥವಾ ನಮ್ಮ ಬಗ್ಗೆ ನಮಗೆ ಏನೆನಿಸುತ್ತದೆ, ಇತ್ಯಾದಿ).

. ನಾವು ಮಾನಸಿಕ ಚಿತ್ರಗಳ ಆಧಾರದ ಮೇಲೆ ಆ ಸಂದೇಶವನ್ನು ಅನುವಾದಿಸುತ್ತೇವೆ. ಉದಾ: ನಾವು ‘ಸರ್ಕಸ್’ ಎಂಬ ಪದವನ್ನು ಹೇಳಿದಾಗ ಕೇಳುಗರು ಆ ಪದದ ಅಕ್ಷರಗಳನ್ನು ಬಿಡಿಬಿಡಿಯಾಗಿ ನೋಡುವುದಿಲ್ಲ. ಬದಲಾಗಿ ಅದಕ್ಕೆ ಸಂಬಂಧಿಸಿದ ಮಾನಸಿಕ ಚಿತ್ರವನ್ನು ಕಾಣುತ್ತಾರೆ. ಹೀಗೆ, ಒಂದೊಂದು ಪದದಿಂದ ನಮ್ಮಲ್ಲಿ ಎಷ್ಟೆಲ್ಲ ಮಾನಸಿಕ ಚಿತ್ರಗಳು ಮೂಡಲು ಸಾಧ್ಯ ನೋಡಿ?! ಸಂವಹನವೆನ್ನುವುದು ಬಹುವಿಧವಾಗಿ ವಿಕಾಸವಾಗಬಲ್ಲ ಒಂದು ಸ್ವಾರಸ್ಯಕರವಾದ ಪ್ರಕ್ರಿಯೆ.

ನಾವು ವಿಶ್ವಾಸಾತ್ಮಕವಾಗಿ ಸಂವಹನ ಮಾಡುತ್ತೇವೆಯೇ….. ನೋಡೋಣ 

ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿ

ಕೆಳಗಿನ ಹೇಳಿಕೆಗಳನ್ನು ಗಮನವಿಟ್ಟು ಓದಿ ನಿಮಗೆ ಅನ್ವಯವಾಗುವಂತಹ ವಾಕ್ಯಗಳನ್ನು ಆಯ್ದು ‘ಹೌದು’ ಅಥವಾ ‘ಇಲ್ಲ’ ಎಂಬುದಾಗಿ ಸೂಚಿಸಿ.

ಕ್ರ ಸಂ  ಹೇಳಿಕೆಗಳು  ಹೌದು  ಇಲ್ಲ 
ಒಂದು ಸಮಸ್ಯೆಯ ಬಗ್ಗೆ ಯಾರೊಂದಿಗಾದರೂ ಮಾತನಾಡುವಾಗ ನಾನು ಆಲಿಸುತ್ತ  ಇರುತ್ತೇನೆ.     
  ಅಸಮ್ಮತಿ ಉಂಟಾದಾಗ ನನಗೆ ಕಿರಿಕಿರಿ ಎನಿಸುವ ವರ್ತನೆಯ ಮೇಲೆಯೇ ನನ್ನ ಗಮನವಿರುತ್ತದೆ. ಆದರೂ ಮಾತಾನಾಡುವ ವ್ಯಕ್ತಿಯನ್ನು ಗೌಣವಾಗಿ ಕಾಣದಂತೆ ಸಂಯಮ ತಾಳುತ್ತೇನೆ.    
  ಅಸಮ್ಮತಿ ಉಂಟಾದಾಗ ರಾಜಿಗಾಗಿ ಅವಕಾಶ ಮಾಡಿಕೊಡುತ್ತೇನೆ.    
  ನನ್ನ ಭಾವನೆಗಳ ಕುರಿತಾಗಿ ನಾನು ಪ್ರಾಮಾಣಿಕನಾಗಿದ್ದೇನೆ.    
  ನಾನು ಇತರರಿಗೆ ಪ್ರತಿಸ್ಪಂದನ ನೀಡಿದಾಗ ನೇರವಾಗಿ ಆದರೂ ವಿನಯದಿಂದ ಹೇಳುತ್ತೇನೆ.    
  ನನಗೆ ಯಾರಾದರೂ ಇಷ್ಟವಿಲ್ಲದ್ದು ಏನನ್ನಾದರೂ ಮಾಡಲು ಹೇಳಿದರೆ ನಾನು ‘ಇಲ್ಲ’ ಎನ್ನಬಲ್ಲೆ.    
  ನನಗೆ ಮುಜುಗರ ಎನಿಸದೆ, ‘ನನಗೆ ಏನು ಬೇಕು’ ಎಂಬುದರ ಬಗ್ಗೆ ಕಾಳಜಿ ಇದೆ ಎಂದು ಜನರಿಗೆ ನಾನು ವಿವರಿಸಬಲ್ಲೆ.    
  ನನಗೆ ಯಾರಾದರೂ ನೋವುಂಟು ಮಾಡಿದಾಗ ಕೋಪಿಸಿಕೊಳ್ಳದೆ, ಏನೂ ಹೇಳದೆ ಒಳಗೊಳಗೇ ನೋವನ್ನು ಅನುಭವಿಸುತ್ತ ಅವರೊಂದಿಗೆ ಮಾತಾಡಬಲ್ಲೆ.    
ನೀವು ಯಾವ ಹೇಳಿಕೆಗಳಿಗೆ ‘ಹೌದು’ ಎಂದು ಗುರುತಿಸಿದ್ದೀರೋ ಆ ಕ್ರಮ ಸಂಖ್ಯೆಯ ಹೇಳಿಕೆಗೆ ಒಂದು ಅಂಕ ಕೊಡಿ. ಅದನ್ನು ಒಟ್ಟುಗೂಡಿಸಿ. 
ಸ್ವಯಂ – ಮೌಲ್ಯಮಾಪನ ಮಾಡಿಕೊಳ್ಳಿಹೌದು – 

ಇಲ್ಲ  – 

ಒಟ್ಟು ಅಂಕಗಳು =

೦-೨ ಈ ಅಂಕಗಳು ಸೂಚಿಸುವುದೇನೆಂದರೆ – ನೀವು ವಿಶ್ವಾಸಾತ್ಮಕವಾಗಿ ಸ್ವಮತವನ್ನು ಮಂಡಿಸಲಾರದೆ ಒಳಗೊಳಗೇ ತೊಳಲುತ್ತೀರಿ. 
೩-೫ ಈ ಅಂಕಗಳು ಸೂಚಿಸುವುದೇನೆಂದರೆ- ಸ್ವಮತ ಮಂಡನೆ ಮಾಡುವಲ್ಲಿ ನಿಮಗೆ ಸ್ವಲ್ಪ ತೊಡಕುಗಳಿವೆ ಎಂದರ್ಥ. ಈ ತೊಡಕುಗಳು ನಿಮ್ಮ ದೈನಂದಿನ ಜೀವನಕ್ಕೇನೂ ಅಡ್ಡ ಬರದಿರಬಹುದು.
೬-೮ ಈ ಅಂಕಗಳು ಸೂಚಿಸುವುದೇನೆಂದರೆ – ನೀವು ಇತರರೊಂದಿಗೆ ನೇರವಾಗಿ ಮಾತಾಡಬಲ್ಲಿರಿ ಮತ್ತು ಮುಖ್ಯ ವಿಷಯಗಳನ್ನು ಹಂಚಿಕೊಳ್ಳಬಲ್ಲಿರಿ ಎಂದು.
   

ನಿಮಗೆ ಕಾಲೇಜಿನಲ್ಲಿ ಯಾರೊಂದಿಗಾದರೂ ಮನಸ್ತಾಪವಿದೆಯೆ? ಹಾಗೇನಾದರೂ ಇದ್ದಲ್ಲಿ ಅದರ ಕುರಿತಾಗಿ ಕೆಳಗೆ ಕೊಟ್ಟಿರುವ ಸ್ಥಳದಲ್ಲಿ ಬರೆಯಿರಿ. ಆ ಉದ್ವೇಗಗಳನ್ನು ಹೇಗೆ ಸಂವಹನ ಗೈಯುವಿರಿ ವಿವರಿಸಿ? 

——————————————————————————————-

——————————————————————————————-

——————————————————————————————-

——————————————————————————————-

——————————————————————————————-

——————————————————————————————-

——————————————————————————————-

——————————————————————————————-

——————————————————————————————-

——————————————————————————————-

——————————————————————————————-

——————————————————————————————-

——————————————————————————————-

 

ಸಂವಹನ ಉಂಟಾಗುವುದು ಕಳುಹಿಸುವ ಮತ್ತು ಪಡೆಯುವವರ ನಡುವೆ.  ಆದರೆ ‘ವಿಶ್ವಾಸಾತ್ಮಕ ಸಂವಹನ’ ಏಕೆ ಬೇಕು? ಸಂವಹನದ ವಿವಿಧ ಶೈಲಿಗಳಾವವು? 

 

ವಿಶ್ವಾಸಾತ್ಮಕ ಎಂದರೆ ಇದೇ ಏನು?

ವಿಶ್ವಾಸಾತ್ಮಕತೆ ಎಂದರೇನು?

ವಿಶ್ವಾಸಾತ್ಮಕತೆ ಎಂದರೆ ಪರರೊಂದಿಗೆ ವಿನಿಮಯಕ್ಕೆ ಅವಕಾಶ ಕೊಡುತ್ತ ನಮ್ಮ ಅಗತ್ಯಗಳನ್ನೂ ಯೋಗ್ಯವಾಗಿ ವ್ಯಕ್ತಪಡಿಸುವಂತಹ ಶೈಲಿಯಲ್ಲಿ ವಿಚಾರ ಹಾಗೂ ಭಾವನೆಗಳನ್ನು ಮಂಡಿಸುವ ಸಾಮರ್ಥ್ಯ.

ವಿಶ್ವಾಸಾತ್ಮಕತೆ ಎಂದರೆ-

 • ತನ್ನ ಹಾಗೂ ಇತರರ ಕುರಿತಾಗಿ ಗೌರವ ಇರುವುದು.
 • ತನ್ನ ವಿಚಾರಗಳನ್ನು, ಭಾವನೆಗಳನ್ನು ಮತ್ತು ನಂಬಿಕೆಗಳನ್ನು ಪ್ರಾಮಾಣಿಕವಾಗಿ ವ್ಯಕ್ತಪಡಿಸುವ ಸಾಮರ್ಥ್ಯ.
 • ಪರಿಣಾಮಕಾರಿಯಾಗಿ ಪ್ರಭಾವಗೊಳಿಸುವುದು, ಆಲಿಸುವುದು ಮತ್ತು ಇತರರೊಂದಿಗೆ ಒಪ್ಪಂದ ಮುಂತಾದವನ್ನು ಸಾಧಿಸುವ ಸಾಮರ್ಥ್ಯ.

ವಿಶ್ವಾಸಾತ್ಮಕ ಸಂವಹನವೆನ್ನುವುದು ಅತ್ಯಂತ ಪ್ರಭಾವಪೂರ್ಣ ವಿಧಾನ. ಸಂಘರ್ಷಕ್ಕೆ ಎಡೆಯಾಗುವಂತಹ ‘ಬಳಸು ಮಾತು’ ಅಥವಾ ‘ಸುಮ್ಮನಿರುವಿಕೆ’ಗಳಿಗೆ ಎಡೆಗೊಡದೆ ನಮ್ಮ ವಿಚಾರ, ಭಾವನೆ ಮತ್ತು ನಂಬಿಕೆಗಳನ್ನು ನೇರವಾಗಿ ಅಭಿವ್ಯಕ್ತ ಪಡಿಸುವುದು ಎಂದರ್ಥ. ಇದು ‘ಕೇಳುಗರ ಭಾವನೆ-ಒಲವುಗಳಿಗಿಂತ ನನ್ನವೇ ಮುಖ್ಯ’ ಎಂಬ ಧೋರಣೆಯ ಆಕ್ರಮಣಕಾರಿ-ಸಂವಹನ ಎಂದು ತಪ್ಪು ತಿಳಿಯಬಾರದು. ಆಕ್ರಮಣಕಾರಿ-ಸಂವಹನವು ಸಮಸ್ಯೆಯನ್ನು ಪರಿಹರಿಸುವುದಕ್ಕಿಂತ ಹೆಚ್ಚಾಗಿ ವಾದ-ವಿವಾದಗಳನ್ನೇ ಹುಟ್ಟಿಸುತ್ತದೆ.


ವಿಶ್ವಾಸಾತ್ಮಕ ಸಂವಹನವನ್ನು ಏಕೆ ಬಳಸಬೇಕು?  

ನಾವೆಲ್ಲ ವಿಶ್ವಾಸಾತ್ಮಕ ವರ್ತನೆಯನ್ನು ಆಗಾಗ ಬಳಸಿಕೊಳ್ಳುವುದುಂಟು. ಹಲವೊಮ್ಮೆ ನಾವು ಆತ್ಮವಿಶ್ವಾಸದ ಕೊರತೆಯಿಂದ ಬಳಲುತ್ತಿದ್ದಾಗ, ಅಸುರಕ್ಷೆಯ ಭಾವ ಮೂಡಿದಾಗ, ದೈನ್ಯದ, ಅನಿಶ್ಚಿತತೆಯ ಅಥವಾ ಆಕ್ರಮಣಕಾರಿಯಾದ ವರ್ತನೆಯನ್ನು ಪ್ರದರ್ಶಿಸುತ್ತೇವೆ.

ವಿಶ್ವಾಸಾತ್ಮಕ ಸಂವಹನದಲ್ಲಿ ತರಬೇತಿ ಪಡೆಯುವುದರಿಂದ ಈ ವರ್ತನೆಯನ್ನು ಸಂಸ್ಕರಿಸಿಕೊಳ್ಳಬಹುದು. ತನ್ಮೂಲಕ ನಮ್ಮ ವರ್ತನೆಯ ದೋಷಗಳನ್ನು ಗೆದ್ದು ಜೀವನದ ಬಗ್ಗೆ ಹೆಚ್ಚಿನ ಸಕಾರಾತ್ಮಕ ಪ್ರವೃತ್ತಿಯನ್ನು ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ. ನನ್ನ ಸುತ್ತಲ ಜನರ (ಸಹೋದ್ಯೋಗಿಗಳ, ಗ್ರಾಹಕರ, ಹಾಗೂ ಪರಿವಾರದವರ) ವಿಷಯದಲ್ಲಿ ನನ್ನ ಪ್ರತಿಕ್ರಿಯೆಯ ಶೈಲಿಯನ್ನು ಸುಧಾರಿಸಿಕೊಳ್ಳುವುದು ನನ್ನ ಪಾಲಿಗೆ ಒಂದು ಉತ್ಸಾಹಜನಕ ಅನುಭವವಾಗುತ್ತದೆ.

ವಿಶ್ವಾಸಾತ್ಮಕ ಸಂವಹನದ ಲಾಭಗಳು ಮುಖ್ಯವಾಗಿ

 • ನಮ್ಮ ಮತ್ತು ಇತರರ ಬಗ್ಗೆ ಒಳ್ಳೆಯ ಭಾವನೆಯನ್ನು ಮೂಡಿಸುತ್ತದೆ.
 • ಪರಸ್ಪರ ಗೌರವ ಭಾವನೆ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ.
 • ಸ್ವಾಭಿಮಾನವನ್ನು ಹೆಚ್ಚಿಸುತ್ತದೆ.
 • ಗುರಿಗಳನ್ನು ತಲುಪಲು ಸಹಾಯ ಮಾಡುತ್ತದೆ.
 • ಇತರರನ್ನು ನೋಯಿಸುವುದು ಅಥವಾ ಅವರಿಂದ ದೂರ ಸರಿಯುವುದು ಕಡಿಮೆಯಾಗುತ್ತದೆ.
 • ಉದ್ವೇಗವನ್ನು ಕಡಿಮೆ ಮಾಡುತ್ತದೆ.
 • ಇತರರು ನಮ್ಮ ದುರುಪಯೋಗ ಮಾಡಿಕೊಳ್ಳದಂತೆ ನಮ್ಮನ್ನು ರಕ್ಷಿಸುತ್ತದೆ.
 • ನಮ್ಮ ಜೀವನದಲ್ಲಿ ನಿರ್ಣಯಗಳನ್ನೂ ಮುಕ್ತ ಆಯ್ಕೆಗಳನ್ನೂ ಮಾಡಲು ಸಾಧ್ಯ.

ಉಕ್ತವಾಗಿ (ಮಾತಿನ ಮೂಲಕ) ಮತ್ತು ಅನುಕ್ತವಾಗಿ (ಮಾತಿಲ್ಲದೆಯೆ) ನಮ್ಮ ಅನೇಕ ಸಕಾರಾತ್ಮಕ ಮತ್ತು ನಕಾರಾತ್ಮಕ ಭಾವನೆ/ ವಿಚಾರಗಳನ್ನು ವ್ಯಕ್ತಪಡಿಸಲು ಇದು ಸಹಾಯ ಮಾಡುತ್ತದೆ.

ಕೆಲವು ಅನಾನುಕೂಲತೆಗಳೂ ಇವೆ:

ಈ ಸಂವಹನ ಶೈಲಿಯನ್ನು ಎಲ್ಲರೂ ಒಪ್ಪದೇ ಹೋಗಬಹುದು, ಅಥವಾ ನಮ್ಮ ಅಭಿಪ್ರಾಯವನ್ನೇ ಒಪ್ಪದಿರಬಹುದು. ಮತ್ತೊಬ್ಬರ ಭಾವನೆಗಳಿಗೆ ಆದರ ತೋರುವುದರಿಂದ ಕೆಲವೊಮ್ಮೆ ‘ನಮಗೆ ಬೇಕಾದದ್ದು’ ಸಿಗದೇ ಹೋಗಬಹುದು. ನಮ್ಮ ಅಭಿಪ್ರಾಯವೇ ತಪ್ಪಾಗಿತ್ತು ಎಂದು ನಮಗೇ ಆಮೇಲೆ ಅನಿಸಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಹಿಂದೆ ಹೇಳಿದಂತೆ ಬೇರೆಯವರು ನಮ್ಮನ್ನು ಅರ್ಥಮಾಡಿಕೊಳ್ಳದೇ ಹೋಗಬಹುದು. ಆದ್ದರಿಂದ ನಮ್ಮ ಈ ಶೈಲಿಯ ಸಂವಹನವನ್ನು ಇಷ್ಟಪಡದೇ ಹೋಗಬಹುದು.

 ವಿಶ್ವಾಸಾತ್ಮಕ ಸ್ವಮತ ಮಂಡನೆಯ ಬಗ್ಗೆ ಇರುವ ತಪ್ಪು ಕಲ್ಪನೆಗಳು

 • ಇತರರ ಭಾವನೆ ಮತ್ತು ಹಕ್ಕುಗಳಿಗಿಂತ ನಮ್ಮವುಗಳೇ ಬಹಳ ಮುಖ್ಯ.
 • ಈ ಸಂವಹನ ಶೈಲಿಯಿಂದ ನೀವು ಬೇರೆಯವರ ಮನನೋಯಿಸಬಹುದು.

ನಿಮ್ಮ ಭಾವನೆಗಳನ್ನು ಮತ್ತು ಹಕ್ಕುಗಳನ್ನು ನೀವು ವ್ಯಕ್ತ ಪಡಿಸುವಷ್ಟು ಮುಖ್ಯ ವ್ಯಕ್ತಿಗಳಲ್ಲ.

ಯಾವುದು ವಿಶ್ವಾಸಾತ್ಮಕ ಸ್ವಮತ ಮಂಡನೆ ಅಲ್ಲ ಎಂದರೆ

 • ವಿಶ್ವಾಸಾತ್ಮಕ ಸ್ವಮತ ಮಂಡನೆ ಎನ್ನುವುದು ‘ಆಕ್ರಮಣಕಾರಿ-ಭಾವ’ ಅಥವಾ ಸ್ವಾರ್ಥ ಅಲ್ಲ.
 • ವಿಶ್ವಾಸಾತ್ಮಕ ಸ್ವಮತ ಮಂಡನೆ ಎಂದರೆ ಇತರರನ್ನು ಅವಹೇಳನ ಮಾಡುವುದಾಗಲಿ, ಅವರ ಹಕ್ಕುಗಳನ್ನು ಕಸಿದುಕೊಳ್ಳುವುದಾಗಲಿ ಅಲ್ಲ.
 • ವಿಶ್ವಾಸಾತ್ಮಕ ಸ್ವಮತ ಮಂಡನೆ ಅಂದರೆ ಇತರರ ಹಕ್ಕುಗಳನ್ನು ಉಲ್ಲಂಘಿಸುವುದಾಗಲೀ ಅಥವಾ ಇನ್ನೊಬ್ಬರ ಹಾನಿಯಿಂದ ಲಾಭ ಪಡೆಯುವುದಾಗಲಿ ಅಲ್ಲ.

ವಿಶ್ವಾಸಾತ್ಮಕ ಸ್ವಮತ ಮಂಡನೆ ಮಾಡುವಲ್ಲಿ ಇರುವ ತಡೆಗಳೇನು?

 • ಪರಿವರ್ತನೆಯ ಭಯ.
 • ಇತರರ ಮುಂದೆ ದೈನ್ಯವನ್ನು ಅಂಗೀಕರಿಸಲು ಇಷ್ಟವಿಲ್ಲ.
 • ಮನಸ್ಸು ಬಿಚ್ಚಿ ಮಾತನಾಡಿದರೆ ಸಂಬಂಧಗಳು ಮುರಿದುಬಿದ್ದಾವು ಎಂಬ ಭಯ.
  ವಿಶ್ವಾಸರಹಿತ ಸಂವಹನ  ಆಕ್ರಮಕಾರಿ ಸಂವಹನ  ವಿಶ್ವಾಸಾತ್ಮಕ ಸಂವಹನ 
ಸಾಮಾನ್ಯ  ಬಹಳ ನಿಷ್ಕ್ರಿಯ,ಪದಗಳ ಬದಲು ಕೇವಲ ಕ್ರಿಯೆಗಳು,

‘ನಾವು ಹೇಳುತ್ತಿರುವುದು ನಮ್ಮ ನಿಜ ಭಾವನೆಯಲ್ಲ’ ಎಂಬಂತೆ ವರ್ತಿಸುವುದು.

ವ್ಯಂಗ್ಯ,ಕಠೋರ ನುಡಿ,

“ನನಗೆಲ್ಲ ಗೊತ್ತು” ಎಂಬ ಧೋರಣೆ

ಮೇಲರಿಮೆ

ಒಪ್ಪಂದದದೃಢ ಸಂದೇಶಗಳು

 

ಧ್ವನಿ  ದುರ್ಬಲ, ತೊದಲು, ಮೃದು, ಏಕತಾನದ ಧ್ವನಿ. ಜೋರಾಗಿ, ಚೀರುವ ಧ್ವನಿ, ತಣ್ಣನೆಯ ಸಂವೇದನಶೂನ್ಯ ಭಾವ,ಬಲವಂತದ ಕೋರಿಕೆ ದೃಢ, ಆತ್ಮೀಯ,ಆತ್ಮ ವಿಶ್ವಾಸಯುತ
ದೃಷ್ಟಿ ಕಣ್ಣೀರು, ಕೆಳಮುಖ ನೋಟ, ದೈನ್ಯದಿಂದ ಬೇಡಿಕೊಳ್ಳುವುದು ಸಂಕುಚಿತ, ಕಂಪಿತ, ದುರುಗುಟ್ಟುವುದು ಭಾವನೆಶೂನ್ಯ ಉತ್ಸಾಹಿ, ಸರಿಯಾದ ದೃಷ್ಟಿಸಂಪರ್ಕ
ದಿಗ್ಭ್ರಮೆ  ಬಾಗುವುದು,ಆಸರೆಗಾಗಿ ಒರಗಿಕೊಳ್ಳುವುದು ಸೊಂಟದ ಮೇಲೆ ಕೈಗಳು, ಪಾದಗಳು ದೂರ, ಬೆರಳನ್ನು ತೋರಿಸುವುದು ವಿಶ್ರಾಂತ ಭಂಗಿ
ಕೈಗಳು  ಬೆವರುವಿಕೆ,  ಅದರಿಂದಾಗಿ ಒದ್ದೆ-ಅಂಟಂಟು,ಚಡಪಡಿಕೆ/ ಗಡಿಬಿಡಿ ಬೆರಳೆತ್ತಿ ತೋರುವುದು,ಮುಷ್ಟಿ ಬಿಗಿಯುವುದು ಸಮಯ ಸಂದರ್ಭಕ್ಕೆ ಹೊಂದುವ ಸಹಜ ಹಾವಭಾವಗಳು

ಎಲ್ಲಾ ಶೈಲಿಗಳ ಹೋಲಿಕೆ ಮಾಡಿ, ಪ್ರತಿಯೊಂದು ಶೈಲಿಯನ್ನು ವರ್ಣಿಸುತ್ತ ಕೆಳಗೆ ಕೊಟ್ಟಿರುವ ಚಾರ್ಟ್ನಲ್ಲಿ ವಾಕ್ಯಗಳನ್ನು ಸೇರಿಸೋಣ

ಸಂವಹನ ಶೈಲಿಗಳ ಗುಣಲಕ್ಷಣಗಳು 
  ನಿಷ್ಕ್ರಿಯ  ಆಕ್ರಮಣಕಾರಿ  ನಿಷ್ಕ್ರಿಯಆಕ್ರಮಣಕಾರಿ  ವಿಶ್ವಾಸಾತ್ಮಕ  
ತಲುಪುವ ಹುಮ್ಮಸ್ಸು ಕ್ರಿಯಾಶೀಲತೆ   ಪರಿಣಾಮಕಾರಿಯಾದ ತಂತ್ರವಿಲ್ಲ  ಹೌದು – ತಂತ್ರವಿದೆ ಆದರೆ ಮತ್ತೊಬ್ಬರಿಗೆ ತೊಂದರೆ ತರುವಂತಹದ್ದು ಹೌದು- ಆದರೆ  ಕಾಲವಿಳಂಬ ಹಾಗೂ ಸೂಕ್ತವಲ್ಲದೆ ಹೋಗಬಹುದು ಹೌದು – ವಿಶ್ವಾಸಾತ್ಮಕ ತಂತ್ರವಿದೆ ಹಾಗೂ ಸೂಕ್ತವಾಗಿಯೂ ಇದೆ 
ಗೌರವ ಪೂರ್ವಕ  ದೈನ್ಯ ಅಥವಾ ಔದಾಸೀನ್ಯವನ್ನು ಪ್ರಕಟ ಪಡಿಸುವುದು ಹೌದು – ಇನೊಬ್ಬರನ್ನು ನೋಯಿಸುವುದೇ ಉದ್ದೇಶ ದೂರುವುದು ಮತ್ತು ಅಪರಾಧಿ ಪ್ರಜ್ಞೆಯಿಂದಾಗಿ ಮತ್ತೆ ಮತ್ತೆ ಪ್ರಯತ್ನ ಹೌದು, ತಮ್ಮ ಸುರಕ್ಷೆಯನ್ನು ಕಾಪಾಡಿಕೊಳ್ಳುವ ವಿಷಯದಲ್ಲೂ ಕೂಡ
ಬೇರೆಯವರು ಹೇಳುವದನ್ನು ಆಲಿಸುವುದು  ಇರಬಹುದು, ಆದರೆ ಕ್ರಿಯಾಶೀಲವಾಗಿ ಪ್ರತಿಸ್ಪಂದಿಸುವುದಿಲ್ಲ ಹೌದು – ಬಹುಶಃ ತಮ್ಮ ದೃಷ್ಠಿಕೋನದ ಬಗ್ಗೆಯೇ ಹೆಚ್ಚು ಕಾಳಜಿ ಇರಬಹುದು,ಆದರೆ ಗುಪ್ತವಾದ ಸ್ವಂತ  ಉದ್ದೇಶಗಳಿರುತ್ತವೆ ಹೌದು, ಆದರೆ ಸೂಕ್ತ ಸಮಯದಲ್ಲಿ ಪ್ರತಿಕ್ರಯಿಸುವುದು
ಆತ್ಮವಿಶ್ವಾಸವನ್ನು ಪ್ರಕಟಪಡಿಸುವುದು  ಇಲ್ಲ ಹೌದು ಬಹುಶ: ಅತಿಯಾಗಿ ಆಕ್ರಮಣಕಾರಿಯಾಗಿ ವರ್ತಿಸುವಾಗ ಇರಬಹುದು ಹೌದು,  ಉತ್ತಮ ಸೀಮೆಗಳನ್ನು ನಿರ್ಮಿಸಲು ಬೇಕಾಗಬಹುದು ಸೂಕ್ತ ಸೀಮೆಗಳು
ಅನುಕ್ತ ಸಂವಹನ ಮಾಧ್ಯಮವನ್ನು ಬಳಸಬಹುದು  ಹೌದು, ದೌರ್ಬಲ್ಯ ಹಾಗೂ ಸುಲಭದಲ್ಲಿ ಬಲಿಯಾಗುವ ಲಕ್ಷಣಗಳನ್ನು ಪ್ರಕಟಪಡಿಸುವುದು ಹೌದು ಬೆದರಿಸುವ ಹಾವಭಾವ ಹಾಗೂ ಇತರರನ್ನು ನೋಯಿಸುವುದು ಹೌದು- ಇತರರನ್ನು ಯುಕ್ತಿಯಿಂದ ನಿಭಾಯಿಸುವುದು ಹೌದು- ಸೂಕ್ತ ಉಕ್ತ ಸಂವಹನವನ್ನು ಸ್ಥಾಪಿಸಲು
ಇತರರಲ್ಲಿ ಮೂಡಿಸುವ ಅಭಿಪ್ರಾಯ  ದೈನ್ಯ, ಔದಾಸೀನ್ಯ “ಹಠಾತ್ತನೆ ಬರುವ ಹೊಳಹುಗಳು”/ “ಸಾಧನಗಳು” ನಿಮ್ಮ ವಿಚಾರಕ್ಕೆ ಬರುವುದು ಓದಲು ಕಷ್ಟ, ಹೀಗೇ  ಎಂದು ನಿರ್ದಿಷ್ಟವಾಗಿ ಹೇಳಲಾಗದು ಸುಲಭವಾಗಿ ಹೊಂದಿಕೊಳ್ಳುವದು, ಆತ್ಮವಿಶ್ವಾಸ ಮತ್ತು ಸಹಕಾರ
ಗುರಿಸಾಧನೆಯ ಮೂಲಕ ಬಲಪಡಿಸುವುದು  ಹೌದು, ತಾತ್ಕಾಲಿಕವಾಗಿ, ಸಂಘರ್ಷವನ್ನು ತಡೆಯುವುದೇ ಗುರಿಯಾದಲ್ಲಿ ಹೌದು, ತಕ್ಷಣ ತೃಪ್ತಿಪಡಿಸುವುದು, ಕಾಲಾಂತರದಲ್ಲಿ ಹೀನ ಪ್ರತಿಫಲ ಹೌದು, ಸಂಬಂಧಗಳನ್ನು ಬಲಿತೆತ್ತು ಹೌದು, ಸಂಬಂಧಗಳನ್ನು ಉತ್ತಮಪಡಿಸುವುದು
ಮಾತಿನ ಮೂಲಕ ಮಾಡುವ ಅಭಿವ್ಯಕ್ತಿಗೆ ಉದಾಹರಣೆಗಳು  ಏನಾದರೂ ಆಗಲಿ, ನನಗೇನು? ಮೌನ ನಿನ್ನನ್ನು ಸಾಯಿಸುತ್ತೇನೆ ನೀನು ಮೂರ್ಖ ಇದು ನಿನ್ನ ತಪ್ಪು—– ವ್ಯಂಗ್ಯ ‘ನಾನು’ ವಾಕ್ಯಗಳುಮಾತನಾಡಲು ಉತ್ತಮ ಸಮಯ ಯಾವುದು?

ವಿಶ್ವಾಸಾತ್ಮಕ ಸಂವಹನದ ಆರು ತಂತ್ರಗಳನ್ನು ನೋಡೋಣ

) ವರ್ತನೆಯ ಪೂರ್ವಾಭ್ಯಾಸ: ನಾವು ಹೇಗೆ ಕಾಣಬೇಕು, ಹೇಗೆ ಮಾತಾಡಬೇಕು ಎಂಬುದನ್ನು ಅಭ್ಯಾಸಿಸುವುದು. ಇದಕ್ಕಾಗಿ ಕನ್ನಡಿ ನೋಡಿ ಪೂರ್ವಾಭ್ಯಾಸ ಮಾಡುವುದು ಅತ್ಯಂತ ಪರಿಣಾಮಕಾರಿ.

) ಮಾತುಗಳ ಪುನರುಚ್ಚಾರಮುಖ್ಯ ವಿಷಯವನ್ನು ಮಂಡಿಸುವಾಗ ಮಧ್ಯೆ ಅನವಶ್ಯಕ ಮಾತಿನ ಬಲೆಗೆ ಬೀಳುವುದು, ವಾದದಲ್ಲಿ ಇಳಿಯುವುದು ಹಾಗೂ ಅಸಂಬದ್ಧ ತರ್ಕಕ್ಕೆ ಸಿಗುವುದು ಮುಂತಾದುವನ್ನು ಇದು ತಡೆಗಟ್ಟುತ್ತದೆ. ಈ ತಂತ್ರದ ಪ್ರಕಾರ ‘ಪುನರುಚ್ಚಾರ’ವೇ ಕ್ರಮ- ಹೇಳಬೇಕಾದ್ದನ್ನು ಸಂಪೂರ್ಣ ಗಮನವಿರಿಸಿ, ತದೇಕಚಿತ್ತದಿಂದ ಹೇಳುವುದೇ ಆಗಿದೆ. ಈ ತಂತ್ರಕ್ಕಾಗಿ ಹೆಚ್ಚಿನ ಪೂರ್ವಾಭ್ಯಾಸ ಬೇಕಿಲ್ಲ ಹಾಗೂ ಅತಿಯಾದ ‘ಮನಸೆಳೆಯುವ’ ಪ್ರಯತ್ನವೂ ಮಾಡಬೇಕಿಲ್ಲ.

) ಟೀಕೆಯ ಸಕಾರಾತ್ಮಕ ಸ್ವೀಕರಣೆ: ಆತಂಕ ಪಡದೆ, ಆತ್ಮಸಮರ್ಥನೆಗೆ ಇಳಿಯದೆ, ಅತಿಯಾದ ಯುಕ್ತಿಯ ಟೀಕೆಗೆ ಎಡೆಗೊಡದೆ, ನಮ್ಮ ಮೇಲಿನ ಟೀಕೆಯನ್ನು ಸಮಾಧಾನದಿಂದ ಸ್ವೀಕರಿಸಲು ಈ ತಂತ್ರ ಸಹಾಯ ಮಾಡುತ್ತದೆ. ಈ ತಂತ್ರದಲ್ಲಿ ನಾವು ಟೀಕೆಯನ್ನು ಅಂಗೀಕರಿಸಿ, ಅದರಲ್ಲೂ ಸತ್ಯಾಂಶವಿದ್ದೀತು ಎಂದು ಒಪ್ಪಬೇಕು. ಆದರೆ ನಮ್ಮ ಕಾರ್ಯವಿಧಾನವನ್ನು ನಾವೇ ನಿರ್ಣಯಿಸಬೇಕು.

) ನಕಾರಾತ್ಮಕ ವಿಚಾರಣೆ: ನಮ್ಮ ಹತ್ತಿರದ ಸಂಬಂಧಗಳಿಂದ ನಮ್ಮ ಕುರಿತಾದ ಪ್ರಾಮಾಣಿಕ ಅಥವಾ ನಕಾರಾತ್ಮಕ ವಿಮರ್ಶೆಯನ್ನು ಪಡೆದು ನಮ್ಮ ಸಂವಹನ-ಕೌಶಲವನ್ನು ಉತ್ತಮಪಡಿಸಿಕೊಳ್ಳುವುದು. ಈ ತಂತ್ರದ ಪ್ರಕಾರ ನಾವು ವಿಮರ್ಶಾತ್ಮಕ ಟೀಕೆಯನ್ನು ಆಲಿಸಬೇಕು, ಅದರ ಕುರಿತಾದ ನಮ್ಮ ಅರ್ಥಗ್ರಹಣವನ್ನು ಸ್ಪಷ್ಟಪಡಿಸಿಕೊಳ್ಳಬೇಕು ಮತ್ತು ಆ ಮಾಹಿತಿಯನ್ನು ಬಳಸಿಕೊಳ್ಳಬೇಕು.

) ನಕಾರಾತ್ಮಕ ವಿಚಾರಣೆಈ ತಂತ್ರವು ನಕಾರಾತ್ಮಕ ಅಂಶವನ್ನು ಕೈಬಿಟ್ಟು, ಸಂವಹನವನ್ನು ಸುಧಾರಿಸಿಕೊಳ್ಳುವ ಉದ್ದೇಶದಿಂದ, ಆತ್ಮೀಯರಿಂದ ‘ತನ್ನ ಕುರಿತಾದ ಪ್ರಾಮಾಣಿಕ ಟೀಕೆಯನ್ನು ಅಪೇಕ್ಷಿಸುವುದೇ’ ಆಗಿದೆ. ಇದಕ್ಕಾಗಿ ತಾಳ್ಮೆಯಿಂದ ನಮ್ಮ ಕುರಿತಾದ ಅನಿಸಿಕೆಗಳನ್ನು ಆಲಿಸಬೇಕು, ಅವುಗಳ ಹಿನ್ನಲೆಯ ವಿಚಾರವನ್ನು ಸ್ಪಷ್ಟವಾಗಿ ಗ್ರಹಿಸಬೇಕು ಹಾಗೂ ಬಳಸಿಕೊಳ್ಳಬೇಕು.

) ನಕಾರಾತ್ಮಕ ಸ್ವಮತ ಮಂಡನೆ ಆತ್ಮಸಮರ್ಥನೆ ಅಥವಾ ಆತಂಕಕ್ಕೆ ಎಡೆಗೊಡದೆ ನಮ್ಮ ವ್ಯಕ್ತಿತ್ವ ಹಾಗೂ ವರ್ತನೆಯಲ್ಲಿನ ನಕಾರಾತ್ಮಕ ಅಂಶಗಳನ್ನು ನಾವೇ ಆರಾಮವಾಗಿ ಗುರುತಿಸಬಲ್ಲ ತಂತ್ರವಿದು. ಇದರಿಂದಾಗಿ ನಮ್ಮನ್ನು ಟೀಕಿಸುವವರ ಮನಸ್ಸೂ ಹಗುರವೆನಿಸುತ್ತದೆ. ನಮ್ಮ ತಪ್ಪುಗಳನ್ನು ಸುಮ್ಮನೆ ಅಂಗೀಕರಿಸಬೇಕು ಆದರೆ ಕ್ಷಮೆ ಯಾಚಿಸುವ ಅಗತ್ಯವಿಲ್ಲ. ಬದಲಾಗಿ ತಾತ್ಕಾಲಿಕವಾಗಿ ನಮ್ಮ ತಪ್ಪನ್ನು ಒಪ್ಪಿ, ಅದರ ಕುರಿತಾದ ನಕಾರಾತ್ಮಕ ಟೀಕೆಯನ್ನು ಸಂವೇದನಶೀಲರಾಗಿ ಮನ್ನಿಸಬೇಕು.

) ಕಾರ್ಯಗತವಾಗಬಲ್ಲ ರಾಜಿ ನಮ್ಮ ಆತ್ಮಗೌರವಕ್ಕೆ ಧಕ್ಕೆ ಬಾರದಿದ್ದಲ್ಲಿ ಅಥವಾ ನಮಗೆ ನಷ್ಟವಾಗದಿದ್ದಲ್ಲಿ ರಾಜಿಗೆ ಮುಂದಾಗಬಹುದು. ಆದರೆ ಅಂತಿಮ ಗುರಿ ಆತ್ಮಗೌರವವನ್ನು ಬಲಿ ತೆತ್ತು, ಯೋಗ್ಯತೆಯನ್ನು ಪ್ರತಿಷ್ಠಾಪಿಸುವುದನ್ನು ಕೈಬಿಟ್ಟು ರಾಜಿಗೆ ಮುಂದಾಗಬಾರದು.

ಪ್ರತಿಯೊಬ್ಬರಲ್ಲಿ, ಒಬ್ಬ ವಿಶ್ವಾಸಾತ್ಮಕ ವ್ಯಕ್ತಿ ಇದ್ದಾನೆ ಮತ್ತು ಹೊರಗೆ ಬರಲು ಪ್ರಯತ್ನಿಸುತ್ತಿದ್ದಾನೆ.

ವಿಶ್ವಾಸಾತ್ಮಕಭಾವನೆ, ವಿಚಾರ ಮತ್ತು ನಂಬಿಕೆಗಳು ಪ್ರಾಮಾಣಿಕ, ನೇರ ಮತ್ತು ಸೂಕ್ತ ಅಭಿವ್ಯಕ್ತಿ.

ಅಹಂಸಂದೇಶಗಳು = ಯಶಸ್ಸಿಗೆ ಸೂತ್ರ

ಇನ್ನೊ ವ್ಯಕ್ತಿಯನ್ನು ದೂರದೆ ಅಥವಾ ಅವರ ಕುರಿತಾಗಿ ಹೇಳಿಕೆಗಳನ್ನು ಕೊಡದೆ ನಮ್ಮ ನಿಲುವನ್ನು ಸ್ಪಷ್ಟವಾಗಿ ವ್ಯಕ್ತ ಪಡಿಸುವುದು ವಿಶ್ವಾಸಾತ್ಮಕ ಸಂವಹನದ ಕೀಲಿಕೈ. ಅಭಿವ್ಯಕ್ತಿಗೆ ವಿಶ್ವಾಸಾತ್ಮಕ ಸಂವಹನ ಒಂದು ಸಂಕೇತ.

ಅಹಂಸಂದೇಶ ವಿನ್ಯಾಸ: “ಯಾವಾಗಆವಾಗನನಗನಿಸುತ್ತದೆ—-”
ಯಾವಾಗ ಬೇರೆ ವ್ಯಕ್ತಿಯ ನಡವಳಿಕೆಯನ್ನು (ಕಾರ್ಯದೃಷ್ಟಿಯಿಂದ) ವರ್ಣಿಸಿ ಯಾವಾಗ ನೀವು ನನ್ನನ್ನು ಕರೆಯುವೆ ಎಂದು ಹೇಳಿಯೂ ಕರೆಯದಿದ್ದಲ್ಲಿ, ಆವಾಗ ನನ್ನನ್ನು ಕರೆಯದಂತೆ ನಿಮಗೆ ಯಾವುದೋ ದುರ್ಘಟನೆ ನಡೆದಿರಬಹುದು ಎಂದು ಊಹಿಸುತ್ತೇನೆ. ನನಗೆ ಭಯವಾಗುತ್ತದೆ. ನೀವು ಕರೆ ಮಾಡಲಿ, ಬಂದು ಪಡೆದುಕೊಂಡುಹೋಗಲಿ  ಎಂದು ಆಶಿಸುತ್ತೇನೆ (ವಿಶ್ವಾಸಾತ್ಮಕ)
ಆವಾಗ (ಪ್ರಭಾವ ಏನೆಂದರೆ) ನಿಮ್ಮ ಮೇಲೆ ಆ ನಡವಳಿಕೆಯ ಪ್ರಭಾವ
ನನಗನಿಸುತ್ತದೆ  ನಿಮ್ಮ ಭಾವನೆಗಳು; ದೋಷಾರೋಪಣೆ ಮಾಡಬೇಡಿ
ನನ್ನ ಒಲವು/ ಆಯ್ಕೆ  ನಿಮಗೆ ಬೇಕೆನಿಸುವ ನಡವಳಿಕೆಯನ್ನು ವರ್ಣಿಸಿ

ವಿಶ್ವಾಸಾತ್ಮಕ ಸಂವಹನವನ್ನು ಅಭ್ಯಸಿಸೋಣ!

ಸೂಚನೆಗಳು:

ಕೆಳಗಿನ ಸಂದೇಶಗಳನ್ನು (ಯಾವಾಗ—— ಆವಾಗ—— ನನಗನ್ನಿಸುತ್ತದೆ—— ನನಗೆ ಬೇಕು / ಇಷ್ಟಪಡಬಹುದಾದ) “ಅಹಂ” ಸಂದೇಶದ ನಮೂನೆಯಲ್ಲಿ ವ್ಯಕ್ತಪಡಿಸಿರಿ.

ಸಂದೇಶ:

“ನೀವು ಏನು ಮಾಡುತ್ತೀರಿ ಎಂದು ನೀವು ನನಗೆ ಹೇಳಿದ್ದೀರೋ, ಅದನ್ನು ನೀವು ಮಾಡುವಿರಾ ಎಂದು ನನಗೆ ಅನುಮಾನ”. “ಅಹಂ” ಸಂದೇಶ ನಮೂನೆಯಲ್ಲಿ ಪುನಃ ಬರೆಯಿರಿ.

 

ಸಂದೇಶ:

“ಬನ್ನಿ ನಮ್ಮೊಂದಿಗೆ, ಹೋಗೋಣ. ನಿಮ್ಮ ಪ್ರಾಜೆಕ್ಟ್‌ನ್ನು ಆಮೇಲೆ ಮಾಡಬಹುದು” (ನೀವು ಅದನ್ನು ಸಮರ್ಪಿಸಲು ಕೊನೆಯ ದಿನಾಂಕ ಹತ್ತಿರವಾಗುತ್ತಿದೆ ಮತ್ತು ಅದನ್ನು ಪೂರ್ಣಗೊಳಿಸಬೇಕಾಗಿದೆ) ಇದನ್ನು “ಅಹಂ” ಸಂದೇಶ ನಮೂನೆಯಲ್ಲಿ ಪುನಃ ಬರೆಯಿರಿ.

 

 

ಸಂದೇಶ:

“ನೀವು ಹುಲ್ಲು ಕತ್ತರಿಸುವಿರಿ ಎಂದು ನನಗೆ ವಚನ ಕೊಟ್ಟಿದ್ದೀರಿ. ನೀವು ಸಂಪೂರ್ಣವಾಗಿ ಬೇಜವಾಬ್ದಾರರು”- “ಅಹಂ” ಸಂದೇಶ ನಮೂನೆಯಲ್ಲಿ ಪುನಃ ಬರೆಯಿರಿ.

 

 

ಸಂದೇಶ:

ಇಂದು ರಾತ್ರಿ ನಿಮಗೆ ಸಹಾಯ ಮಾಡಲಿಕ್ಕಾಗುವುದಿಲ್ಲ’ ಎಂದು ನಿಮಗೆ ಆಗಲೇ ಹೇಳಿದ್ದೆ. ನನ್ನನ್ನು ಒಬ್ಬಂಟಿಯಾಗಿ ಬಿಟ್ಟುಬಿಡಿ!”- “ಅಹಂ” ಸಂದೇಶ ನಮೂನೆಯಲ್ಲಿ ಪುನಃ ಬರೆಯಿರಿ.

 

 

ಸಂದೇಶ:

“ನನ್ನ ಬೆನ್ನ ಮೇಲಿಂದ ಕೆಳಗಿಳಿ”- “ಅಹಂ” ಸಂದೇಶ ನಮೂನೆಯಲ್ಲಿ ಪುನಃ ಬರೆಯಿರಿ.

 

 

ಸಂದೇಶ:

“ನಾನು ನಿಮ್ಮೊಂದಿಗೆ ಮಾತಾಡುವಾಗ, ನೀವು ಕೇಳುವುದೇ ಇಲ್ಲ”- “ಅಹಂ” ಸಂದೇಶ ನಮೂನೆಯಲ್ಲಿ ಪುನಃ ಬರೆಯಿರಿ.

 

 

ಸಂದೇಶ:

“ಸುಮ್ಮನೆ ಮಧ್ಯೆ ತೊಂದರೆ ಕೊಡಬೇಡ”- “ಅಹಂ” ಸಂದೇಶ ನಮೂನೆಯಲ್ಲಿ ಪುನಃ ಬರೆಯಿರಿ.

 

 

ಸಂದೇಶ:

“ನಾನು ಏನೇ ಮಾಡಿದರೂ ನೀವು ನನ್ನನ್ನು ಮೆಚ್ಚುವುದಿಲ್ಲ”- “ಅಹಂ” ಸಂದೇಶ ನಮೂನೆಯಲ್ಲಿ ಪುನಃ ಬರೆಯಿರಿ.

 

“ಏನಾಶ್ಚರ್ಯ! ಈ ಸಲ ನೀವು ಒಂದು ಗಂಟೆಯಷ್ಟು ಮಾತ್ರ ತಡವಾಗಿ ಬಂದಿದ್ದೀರಿ!”- “ಅಹಂ” ಸಂದೇಶ ನಮೂನೆಯಲ್ಲಿ ಪುನಃ ಬರೆಯಿರಿ

 

ವಿಶ್ವಾಸಾತ್ಮಕ ಸಂವಹನದ ಬೆಳೆವಣಿಗೆಯ ತಂತ್ರಗಳು / ಯೋಜನೆಗಳು-

ವಿಶ್ವಾಸಾತ್ಮಕತೆಯ ಏಣಿಯೆನ್ನುವುದು ಒಂದು ನಿರ್ದಿಷ್ಟ ಸಂದರ್ಭದಲ್ಲಿ ಸಹಾಯಕವಾಗುವಂತೆ ಮಾಡುವ ವಿಶ್ವಾಸಾತ್ಮಕ ಸಂವಹನದ ಒಂದು ಪ್ರಕ್ರಿಯೆ. ಏಣಿ(LADDER) ಎನ್ನುವ ಶಬ್ದದ ಅಕ್ಷರಗಳನ್ನು ಬಳಸಿ ಹಂತಗಳನ್ನು ನೆನೆಪಿಟ್ಟುಕೊಳ್ಳಿ.

L Look at our rights— ನಮ್ಮ ಹಕ್ಕುಗಳನ್ನು ಗಮನಿಸಬೇಕು, ನಮಗೇನು ಬೇಕು, ನಮ್ಮ ಅಗತ್ಯವೇನು. ನಮಗೇನು ಬೇಕೆಂದು ‘ನಿರ್ವಚಿಸ’ಬೇಕು. ಅದನ್ನು ಮನದಲ್ಲಿರಿಸಿಕೊಂಡೇ ಒಪ್ಪಂದದ ಮಾತುಕತೆ ಮಾಡಬೇಕು.

A Arrange a time and place to discuss the situation. ಮಾತುಕತೆಗೆ ಸೂಕ್ತವಾದ ಸಮಯ ಹಾಗೂ ಸ್ಥಳವನ್ನು ನಿರ್ಧರಿಸಿ. ಆದರೆ ಇದ್ದಕ್ಕಿದ್ದ ಹಾಗೆ ಒದಗಿ ಬರುವ ಸಂದರ್ಭಗಳಲ್ಲಿ ಈ ಹಂತವು ಇಲ್ಲದೇ ಹೋದರೂ ಪರವಾಗಿಲ್ಲ. ಉದಾಹರಣೆಗೆ- ಹೋಟಲಿನಲ್ಲಿ ಕಳಪೆ ಆಹಾರ ತಂದುಕೊಟ್ಟಾಗ ಆ ಕ್ಷಣದಲ್ಲೇ ನಾವು ಬಲವಾಗಿ ಖಂಡಿಸಬೇಕಾದೀತು.

D Define the problem for the other person, ನಿಮ್ಮ ಪ್ರತಿವಾದಿಗೆ ಸಮಸ್ಯೆಯನ್ನು ಅರ್ಥವಾಗುವಂತೆ ಸರಳ ಸ್ಪಷ್ಟ ಮಾತುಗಳಲ್ಲಿ ಖಚಿತವಾಗಿ ವಿವರಿಸಿ. ಬೇರೆಯವರು ಆ ಸಮಸ್ಯೆಯ ಕುರಿತಾಗಿ ಏನು ಭಾವಿಸಿರಬಹುದು ಎಂಬುದನ್ನು ನೀವೇ ಊಹಿಸಿಕೊಳ್ಳಬೇಡಿ.

D Describe our feelings using “I” messages——‘ಅಹಂ’ ಎನ್ನುವ ಸಂದೇಶಗಳ ಮೂಲಕ ನಿಮ್ಮ ಭಾವನೆಗಳನ್ನು ವ್ಯಕ್ತ ಪಡಿಸಿ. ಈ ‘ಅಹಂ’ ಸಂದೇಶವು ಯಾರನ್ನೂ ದೂಷಿಸದೆ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಹಾಯಕ. ‘ನನಗೆ ಜುಗುಪ್ಸೆಯಾಗುತ್ತಿದೆ’, ‘ನಿನ್ನಿಂದ ಜುಗುಪ್ಸೆಯಾಗುತ್ತಿದೆ’.

E Express our request specifically—— ನಿಮ್ಮ ವಿನಂತಿಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿ. ಅದು ದೃಢವೂ ಸಂಕ್ಷಿಪ್ತವೂ ಆಗಿರಲಿ. ಉದಾ: ನಿಮ್ಮ ಸೋದರ/ ಸೋದರಿಗೋ ಸೌಜನ್ಯದಿಂದ ಮೊದಲೇ ತಿಳಿಸಿಬಿಡಿ- ‘ತಡವಾಗುವುದಿದ್ದರೆ ದಯವಿಟ್ಟು ಮೊದಲೆ ಕರೆ ಮಾಡಿ ೧೫ ನಿಮಿಷ ತಡವಾಗುತ್ತದೆ ಎಂದು ತಿಳಿಸಿ’ ಎಂದು.

R Reinforce the idea—— ನಮ್ಮ ವಿನಂತಿಯು ನಮಗೂ ಅವರಿಗೂ ಒಳ್ಳೆಯದೇ ಮಾಡುತ್ತದೆ ಎನ್ನುವುದನ್ನು ಸೂಚಿಸುವಂತಹ ರೀತಿಯಲ್ಲಿ ನಿಮ್ಮ ಅಭಿಮತವನ್ನು ಪುನಃ ಸ್ಥಾಪಿಸಿ.

ಕೆಲವು ನಿಯಮಗಳನ್ನು ಪಾಲಿಸೋಣ ಮತ್ತು ವಿಶ್ವಾಸಾತ್ಮಕ ವ್ಯಕ್ತಿಗಳಾಗೋಣ

 • “ಇಲ್ಲ” ಎನ್ನುವ ಹಕ್ಕು ನನಗಿದೆ.
 • ಅರ್ಥ ಮಾಡಿಕೊಳ್ಳದಿರಲೂ ಕೂಡ ನನಗೆ ಹಕ್ಕಿದೆ.
 • ನನಗೆ ತಪ್ಪುಗಳನ್ನು ಮಾಡುವ ಹಕ್ಕಿದೆ.
 • ಹೇಳುವುದನ್ನು ಆಲಿಸುವ ಹಕ್ಕು ನನಗೆ ಇದೆ.
 • ನನ್ನ ಬೇಡಿಕೆಗಳನ್ನು ಈಡೇರಿಸಿಕೊಳ್ಳವ ಹಕ್ಕು ನನಗಿದೆ.
 • ಕಾಣಿಕೆ / ಕೊಡುಗೆ ನೀಡುವ ಹಕ್ಕು ನನಗಿದೆ.
 • ನನಗೆ ಆದರವನ್ನು ಪಡೆಯುವ ಹಕ್ಕು ಇದೆ.
 • ಸ್ವಂತ ನಿರ್ಣಯಗಳನ್ನು ತೆಗೆದುಕೊಳ್ಳವ ಹಕ್ಕು ನನಗಿದೆ.
 • ಇತರರ ಬಗ್ಗೆ ಕಾಳಜಿ ಮಾಡುವ ಹಕ್ಕು ನನಗಿದೆ.
 • ನನಗೆ ಇತರರನ್ನು ಅವರ ಘನತೆಗನುಗುಣವಾಗಿ ಸಮಾನರಾಗಿ, ಪ್ರಾಮಾಣಿಕವಾಗಿ ಮತ್ತು ಗೌರವಪೂರ್ವಕವಾಗಿ ಕಾಣುವ ಜವಾಬ್ದಾರಿ ಇದೆ.
 • ನನ್ನ ಸ್ವಂತ ಕ್ರಿಯೆಗಳು ಮತ್ತು ಅವುಗಳ ಪರಿಣಾಮಗಳ ಬಗ್ಗೆ ನಾನು ಜವಾಬ್ದಾರನಾಗಿದ್ದೇನೆ.
 • ಇತರರ ಹಕ್ಕುಗಳನ್ನು ಸಾಧ್ಯವಾಗುವಷ್ಟು ಸಂರಕ್ಷಿಸುವ ಜವಾಬ್ದಾರಿ ನನಗಿದೆ.
 • ನಾನು ನನ್ನ ಜೀವನದ ಕುರಿತು ಜವಾಬ್ದಾರಿಯನ್ನು ಸ್ವೀಕರಿಸುತ್ತೇನೆ, ನನಗೇನಾಗುತ್ತದೆಯೊ ಅದು ಸಾಮಾನ್ಯವಾಗಿ ನನ್ನ ನಿರ್ಣಯದ ಪರಿಣಾಮವೇ.

ವಿಶ್ವಾಸಾತ್ಮಕ ಸ್ವಮತಮಂಡನೆ ಮಾಡುವಾಗ ನಾನು ದರ್ಪ/ ಬಲ ತೋರಬೇಕೆ?

ಸುಮ್ಮನಿರುವಿಕೆಯು ನಮ್ಮ ವೈಯಕ್ತಿಕ ಹಕ್ಕುಗಳನ್ನು ಪ್ರತಿಪಾದಿಸುವಲ್ಲಿ ಅನುಕೂಲಕರವಲ್ಲ. ಹಾಗೆಂದು ನಾವು ಆತ್ಮಸಮರ್ಥನೆಯ ಮತ್ತೊಂದು ಅತಿರೇಕದವರೆಗೂ ಹೋಗಬೇಕೆಂದಲ್ಲ. ಮೃದು-ಮಾತಿನ ಜನರೂ ಕೂಡ ವಿಶ್ವಾಸಾತ್ಮಕರಾಗಿರಬಹುದು. ವಿಶ್ವಾಸಾತ್ಮಕತೆಗೆ ‘ಒಂದೇ ಮಾರ್ಗ’ ಎಂದೇನಿಲ್ಲ. ಆದರೆ ನಾವು ಎಚ್ಚರವಹಿಸಿ ದೂರವಿಡಬೇಕಾದ ಅಂಶಗಳೂ ಬಹಳ ಇವೆ.


ನೆನಪಿಡಬೇಕಾದ ಮಾತುಗಳು

ಸಂವಹನ ಮಾಡಿ ಮಾಹಿತಿ, ಸಮಾಚಾರ ಅಥವಾ ಉಪಾಯಗಳನ್ನು ವಿನಿಮಯ ಮಾಡಿಕೊಳ್ಳಿ.
ಸಂವೇದನೆ ಬೇರೆಯವರ ಭಾವನೆಗಳನ್ನು ಅರ್ಥಮಾಡಿಕೊಳ್ಳಿರಿ.
ಪಿಸುಮಾತು ಉಸಿರನ್ನು ಬಳಸಿ ಮೃದುವಾಗಿ ಮಾತಾಡುವುದನ್ನು ಅಭ್ಯಸಿಸಿ.
ಪ್ರಾಧಾನ್ಯತೆ ಮೇಲರಿಮೆ.‘ಇತರರಿಗಿಂತ ನಾನು ಮೇಲು’ ಎಂಬ ಭಾವನೆಯನ್ನು ಪ್ರದರ್ಶಿಸುವುದು.
ಸಹಾನುಭೂತಿ ಬೇರೆಯವರ ದೌರ್ಭಾಗ್ಯದ ಕುರಿತಾಗಿ ಕನಿಕರ ಮತ್ತು ವ್ಯಥೆ ಪಡುವುದು. ಬೇರೆಯವರ ಭಾವನೆಗಳನ್ನು ಹಂಚಿಕೊಳ್ಳುವುದು.
ಪೂರ್ವಾಗ್ರಹದ ಭಾವ ಹಾನಿ ಉಂಟು ಮಾಡುವುದು – (ವ್ಯವಹಾರದ ಸ್ಥಿತಿ) ಮುಂಚಿತವಾಗಿಯೇ ಬೇರೆಯವರ ಅಭಿಪ್ರಾಯದ ಮೇಲೆ ಪ್ರಭಾವ ಬೀರುವುದು.
ಪ್ರತಿಸ್ಪಂದನ ಸುಧಾರಣೆಗಾಗಿ ಒಂದು ವಸ್ತುವಿನ ಪ್ರಯೋಜನ ಅಥವಾ ವ್ಯಕ್ತಿಯ ಕಾರ್ಯಕೌಶಲದ ಬಗ್ಗೆ ಮಾಹಿತಿ ಮತ್ತು ಪ್ರತಿಕ್ರಿಯೆಗಳನ್ನು ಸಂಗ್ರಹಿಸುವುದು.
ಅಪರಾಧಿ ಮನೋಭಾವ ತಪ್ಪು ಮಾಡಿದ ಭೀತಿ ಅಥವಾ ಮುಜುಗರ.
ಪೌರಾಣಿಕ ಒಬ್ಬ ಮನುಷ್ಯನ ಪೂರ್ವ ಜೀವನದ ಅಥವಾ ಯಾವುದಾದರೂ ಸಹಜ ನೈಸರ್ಗಿಕ ಘಟನೆಯನ್ನು ವಿವರಿಸುವ ಅಥವಾ ಅತೀಂದ್ರಿಯ ಶಕ್ತಿಗಳನ್ನು ಒಳಗೊಂಡಂತೆ ವಿವರಿಸುವ ಕಥನ.
ಜವಾಬ್ದಾರಿ ನಂಬಿಕೆಗೆ ಅರ್ಹ.
ಘನತೆ ಗೌರವಕ್ಕೆ ಅರ್ಹರಾಗಿರಲು ಬೇಕಾದ ಗುಣಮಟ್ಟ. ಆತ್ಮಗೌರವ.
ತಂತ್ರ ಒಂದು ಕಾರ್ಯವನ್ನು ಮಾಡುವ ವಿಶೇಷ ವಿಧಾನ, ವಿಶೇಷವಾಗಿ ಕಲಾತ್ಮಕ ಅಥವಾ ವೈಜ್ಞಾನಿಕ ಪ್ರಕ್ರಿಯೆಯನ್ನು ಮಾಡುವಾಗ.

 


ಗ್ರಂಥ ಮೂಲ:

Basic Managerial Skills for ALL- E.H.McGrath, S.J.

 
ಅಂತರ್ಜಾಲ ಮೂಲ: