ಒಪ್ಪಂದಸಾಧನೆ ಎಂದರೇನು?

‘ಸಮಾನ ಗುರಿ’ ಮತ್ತು ‘ಹಂಚಿಕೊಳ್ಳುವ ಆಸಕ್ತಿ’ ಹೊಂದಿರುವ ವ್ಯಕ್ತಿಗಳು ಮತ್ತು ವ್ಯಕ್ತಿಗಳ ಸಮೂಹದಲ್ಲಿ ನೆಲೆನಿಲ್ಲುವ ಸಕಾರಾತ್ಮಕ ಸಂವಹನ ಪ್ರಕ್ರಿಯೆಯೇ ‘ಒಪ್ಪಂದ ಸಾಧನೆ’.


ಚಟುವಟಿಕೆ- ೧

 • ಮೇಲಿನ ಚಿತ್ರದಲ್ಲಿ ವ್ಯವಹರಿಸುತ್ತಿರುವುದು ಮಗುವೊ, ತಾಯಿಯೊ ಅಥವಾ ಇಬ್ಬರೂ ವ್ಯವಹರಿಸುತ್ತಿರುವರೊ? ನಿಮಗೇನೆನ್ನಿಸುತ್ತದೆ?
 • ಈ ವ್ಯವಹಾರದಲ್ಲಿ ಯಾರು ಗೆದ್ದರು ಎಂದು ನಿಮಗನ್ನಿಸುತ್ತದೆ- ಮಗುವೊ, ತಾಯಿಯೊ ಅಥವಾ ಇಬ್ಬರೋ?

ಒಪ್ಪಂದ-ಸಾಧನೆಯನ್ನು ‘ಚೌಕಾಶಿ’ ಎಂದು ತಪ್ಪು ತಿಳಿಯುವುದುಂಟು. ಆದರೆ ನಿಜಕ್ಕೂ ಅದು ‘ಕೂಡಿ ಮಾಡುವ ಸಮಸ್ಯಾ-ಪರಿಹಾರ’ವೇ ಆಗಿದೆ.

ಚೌಕಾಶಿಯ ಸಂದರ್ಭದಲ್ಲಿ ಸಾಮಾನ್ಯವಾಗಿ ‘ಹಣವೋ ಅಥವಾ ಸ್ವಾರ್ಥವೋ ಮುಖ್ಯ ವಿಷಯವಾಗಿರುತ್ತದೆ. ಹೀಗೆ ಒಪ್ಪಂದದ ಮಾತುಕತೆಯಲ್ಲಿ ಒಂದೇ ವಿಷಯವಿದ್ದಲ್ಲಿ ಅದರ ಪರಿಣಾಮವೂ ಏಕಮುಖ – ಒಬ್ಬರು ಗೆಲ್ಲಬೇಕು ಮತ್ತೊಬ್ಬರು ಸೋಲಬೇಕು. ಆದ್ದರಿಂದ ವಾದದ ಒಂದು ಕಡೆ ಹಣ, ಮೌಲ್ಯ ಅಥವಾ ಉದ್ದೇಶ ಸಿಗಲಿಲ್ಲವೆಂಬ ತಕರಾರು ಉಳಿದೇ ಉಳಿಯುತ್ತದೆ. ಪ್ರತಿಪಕ್ಷದವರೂ ಇದೇ ತಂತ್ರವನ್ನು ಬಳಸಿದರಂತೂ ಎರಡು ಕಡೆಯವರಿಗೂ ಉದ್ದೇಶವಾಗಲಿ ಗೆಲುವಾಗಲಿ ಸಿದ್ಧಿಸದು; ಯಾರಿಗೂ ಒಪ್ಪಿಗೆಯಾಗದಂತಹ ಪರಿಣಾಮ ಬಂದೊದಗುತ್ತದೆ.

ಅಧ್ಯಾಯದ ಪರಿಕಲ್ಪನೆ

ಅಧ್ಯಾಯದ ಕಲಿಕಾ ಉದ್ದೇಶಗಳು

 

 • ವ್ಯವಹರಿಸುವಿಕೆಯ ಮಹತ್ವ ಮತ್ತು ಲಾಭಗಳನ್ನು ತಿಳಿಯುವುದು.
 • ವ್ಯಾವಹಾರಿಕ ಅವಕಾಶಗಳನ್ನು ಗುರುತಿಸುವುದು.
 • ವ್ಯಾವಹಾರಿಕ ಯೋಜನೆಯ ಪ್ರಕ್ರಿಯೆ, ಸಿದ್ಧತೆ ಮತ್ತು ಯಶಸ್ವಿ ವ್ಯವಹಾರದ ಹಂತಗಳ   ಅರಿವು.
 • ವ್ಯಾವಹಾರಿಕ ಗೆಲವು – ಗೆಲವಿನ ಮನೋಭಾವನೆಯನ್ನು ಬೆಳೆಸಿಕೊಳ್ಳುವುದು.

ವ್ಯವಹರಿಸುವುದು ಏಕೆ?

 • ಸಮಸ್ಯೆಯನ್ನು ಪರಿಹರಿಸಲು
 • ವ್ಯವಹಾರ ಚಾತುರ್ಯದಿಂದ ಇತರರಿಂದ ಬೇಕಾದುದನ್ನು ಪಡೆಯುವುದು.
 • ಒಳ್ಳೆಯ ವ್ಯವಹಾರವನ್ನು ಇನ್ನೂ ಉತ್ತಮವಾಗಿಸಲು
 • ಅನಾಕರ್ಷಕ ಪ್ರಸ್ತಾವವನ್ನು ಆಕರ್ಷಕವಾಗಿಸಲು.

ನಾವು ಏಕೆ ವ್ಯವಹರಿಸುವುದಿಲ್ಲ?

 • ಸೋಲಿನ ಭಯ.
 • ಸಂಬಂಧಗಳ ಕಾಳಜಿ.
 • ಒಲವುಗಳ ಸಂಘರ್ಷ.
 • ಅವಕಾಶಗಳನ್ನು ಗುರುತಿಸದೇ ಇರುವುದು.
 • ‘ನಾವು ಅದಕ್ಕೆ ಅರ್ಹರಲ್ಲ’ ಎಂಬ ಭಾವನೆ.
 • ಇನ್ನೂ ಸಮಯ ಬೇಕಾಗುತ್ತದೆ ಎಂಬ ನಂಬಿಕೆ.
 • ಸಕಾರಾತ್ಮಕ ಮನೋಭಾವನೆ ಹೊಂದಿರುವ ವ್ಯಕ್ತಿ ವ್ಯವಹಾರದಲ್ಲಿ ಯಶಸ್ವಿಯಾಗಲು ಸಾಧ್ಯ. ಅವನು / ಅವಳು ಸಂಘರ್ಷವನ್ನು ಸಹಜವೂ ಮತ್ತು ರಚನಾತ್ಮಕವಾದದು ಎಂಬುದಾಗಿ ಗುರುತಿಸಲು ಸಾಧ್ಯ.

ಚಟುವಟಿಕೆ

ನೀವು ಹೇಗೆ ಪ್ರತಿಕ್ರಿಯಿಸುವಿರಿ?

ಅಸಮ್ಮತಿ ಮತ್ತು ಸಂಘರ್ಷದ ಪ್ರತಿ ವೈಯಕ್ತಿಕ ಪ್ರತಿಕ್ರಿಯೆಗೆ ಸಂಬಂಧಿಸಿದ ಕೆಲವು ಹೇಳಿಕೆಗಳು ಕೆಳಗಿವೆ. ನಿಮ್ಮನ್ನು ಅತ್ಯುತ್ತಮವಾಗಿ ವರ್ಣಿಸುವ ಸಂಖ್ಯೆಗೆ ವೃತ್ತಾಕಾರದ ಚಿಹ್ನೆ ಹಾಕಿ. ಸಂಖ್ಯೆ ಹೆಚ್ಚಾದರೆ, ಹೇಳಿಕೆಗೆ ನಿಮ್ಮ ಸಮ್ಮತಿ ಇದೆ ಎಂದರ್ಥ. ನೀವು ಮುಗಿಸಿದ ನಂತರ, ಎಲ್ಲಾ ಸಂಖ್ಯೆಗಳನ್ನು ಒಟ್ಟುಗೂಡಿಸಿ ಕೆಳಗೆ ಕೊಟ್ಟಿರುವ ಸ್ಥಳದಲ್ಲಿ ಬರೆಯಿರಿ.

೧. ಬೆಲೆಯ ಬಗ್ಗೆ ಅಥವಾ ಇನ್ನೂ ಹೆಚ್ಚಿನ ವಿನಾಯತಿ ಅಥವಾ ಇನ್ನು ಉತ್ತಮವಾದ ಕೊಡುಗೆಯ ಬಗ್ಗೆ ನನಗೆ ಚಿಂತೆ ಇಲ್ಲ. ೧೦
೨. ಬುದ್ದಿಯುತವಾಗಿ ಮಾಡಿದಲ್ಲಿ ಉತ್ತಮವಾದ ಉಪಾಯವನ್ನು ಹುಡುಕುವುದರಲ್ಲಿ ನನಗೇನೂ ನಷ್ಟವಿಲ್ಲ. ೧೦
೩. ಒಪ್ಪಂದ-ಸಾಧನೆ ಜೀವನದ ಒಂದು ಭಾಗ ಮತ್ತು ಅದನ್ನು ನಿಭಾಯಿಸಲು ಶ್ರಮ ಪಡುತ್ತೇನೆ. ೧೦
೪. ಒಪ್ಪಂದ-ಸಾಧನೆ ಸಕಾರಾತ್ಮಕವಾದುದು. ಏಕೆಂದರೆ ಅದರಿಂದ ನಮ್ಮ ವಿಚಾರಗಳನ್ನು ಜಾಗರೂಕತೆಯಿಂದ ನೋಡಲು ಸಾಧ್ಯ. ನಮ್ಮ ದೃಷ್ಟಿಕೋನವನ್ನು ಪರೀಕ್ಷಿಸಲು ಇದೊಂದು ಮಾರ್ಗ. ೧೦
೫. ನಾನು ಒಂದು ಸಮಸ್ಯೆಯನ್ನು ಪರಿಹಾರ ಮಾಡುವಾಗ ಬೇರೆಯವರ ಬೇಡಿಕೆಗಳನ್ನು ಪರಿಗಣಿಸುತ್ತೇನೆ. ೧೦
೬. ಸಮಸ್ಯೆಗಳಿಗೆ ಉತ್ತಮ ಪರಿಹಾರಗಳನ್ನು ಒಪ್ಪಂದ ಸಾಧನೆ ನೀಡುತ್ತದೆ. ೧೦
೭. ಒಪ್ಪಂದ-ಸಾಧನೆ ನನ್ನ ವೈಚಾರಿಕತೆಯನ್ನು ಮತ್ತು ನನ್ನ ತೀರ್ಮಾನವನ್ನು ಚುರುಕುಗೊಳಿಸುತ್ತದೆ. ೧೦
೮. ಸಂಧಾನ ದೌರ್ಬಲ್ಯದ ಸಂಕೇತ ಅಲ್ಲ ೧೦
೯. ತೃಪ್ತಿಕರವಾಗಿ ಪೂರ್ಣಗೊಳಿಸಿದ ಒಪ್ಪಂದ ಸಾಧನೆ ಯಾವಾಗಲೂ ಸಂಬಂಧಗಳನ್ನು ಬಲಿಷ್ಠಗೊಳಿಸುತ್ತದೆ  

ಒಟ್ಟು ಮೊತ್ತ = _________

ನಿಮ್ಮ ಎಣಿಕೆ ೭೦ ಅಥವಾ ಅದಕ್ಕಿಂತ ಹೆಚ್ಚಾಗಿದ್ದಲ್ಲಿ ‘ಒಪ್ಪಂದ-ಸಂಧಾನದ ಬಗ್ಗೆ ನಿಮಗೆ ವಾಸ್ತವಿಕ ಕಲ್ಪನೆ ಇದೆ ಮತ್ತು ಇಚ್ಛೆಯಿಂದ ಕಾರ್ಯಮಾಡಲು ಸಿದ್ಧರಿದ್ದೀರಿ’ ಎಂದರ್ಥ.  ನೀವು ೫೦ ರಿಂದ ೬೯ ರಷ್ಟು ಅಂಕ ಪಡೆದಲ್ಲಿ ‘ನೀವು ನ್ಯಾಯಯುತವಾಗಿ ವ್ಯವಹರಿಸುತ್ತಿದ್ದೀರಿ, ಆದರೆ ಇನ್ನೂ ಹೆಚ್ಚು ಸಕಾರಾತ್ಮಕವಾಗಿ ಕಾರ್ಯ ನಿರ್ವಹಿಸಬೇಕಾಗಿದೆ’ ಎಂದರ್ಥ.

ನೀವು ೪೦ಕ್ಕಿಂತ ಕಡಿಮೆ ಅಂಕ ಪಡೆದರೆ, ನೀವು ಒಪ್ಪಂದ-ಸಾಧನೆಯ ತಂತ್ರಗಳ ಬಗ್ಗೆ ತುಂಬ ತಿಳಿಯಬೇಕಿದೆ’ ಎಂದರ್ಥ. ನೀವು ಈ ಅಧ್ಯಾಯವನ್ನು ಓದಿ ಮುಗಿಸುವುದರೊಳಗೆ, ಈ ಅಭ್ಯಾಸವನ್ನು ಮಾಡಲು ಪ್ರಯತ್ನಿಸಿ.

ಅಭ್ಯಾಸ

ಈ ಚಿತ್ರದ ಭಾಗಗಳನ್ನು ಗಮನಿಸಿ. ಯಾವ ಸನ್ನಿವೇಶ ಅತ್ಯುತ್ತಮವಾದುದು ಎಂದು ಅನ್ನಿಸುತ್ತದೆ? ನಿಮಗೇಕೆ ಹೀಗೆ ಅನ್ನಿಸುತ್ತದೆ?

ವ್ಯವಹಾರದ ಮೂಲ ಮೆಟ್ಟಲುಗಳು (ಉದಾಹರಣೆಯೊಂದಿಗೆ) 

ಸನ್ನಿವೇಶ – ನಾನು ಪದವಿಯ ಮೊದಲನೆಯ ವರ್ಷದ ವಿದ್ಯಾರ್ಥಿ. ನನ್ನ ಪಾಲಕರು ನನಗೊಂದು ಬೈಕ್ ಕೊಡಿಸಬೇಕು.
ಹಂತ – ೧: ಪರಸ್ಪರರನ್ನು ತಿಳಿದುಕೊಳ್ಳುವುದು –
ನಾನು ಯಾರೊಂದಿಗೆ ವ್ಯವಹರಿಸಬೇಕಾಗಿದೆಯೊ, ಆ ವ್ಯಕ್ತಿಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸುವೆ. ಇದರಿಂದ ಬೇರೆ ಹಂತಗಳನ್ನು ಪೂರ್ವತಯಾರಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಮಾತುಕತೆಯ ಸಂದರ್ಭದಲ್ಲಿ ನಾನು ಮೊದಲು ಸ್ನೇಹ ಹಾಗೂ ಶಾಂತಿಯಿಂದ ವ್ಯವಹರಿಸುತ್ತೇನೆ.
ಹಿನ್ನಲೆಯ ಮಾಹಿತಿಯನ್ನು ಸಂಗ್ರಹಿಸುವುದು –
ಈ ಮಧ್ಯೆ, ಬೈಕ್ ಕೊಂಡುಕೊಡಲು ನನ್ನ ಪಾಲಕರಲ್ಲಿ ಸಾಕಷ್ಟು ಹಣವಿದೆಯೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸುವೆ. ಅಂತೆಯೇ ನನಗೆ ಯಾವ ಮಾದರಿಯ ಬೈಕ್ ಬೇಕು ಮತ್ತು ಅದರ ಲಾಭಗಳೇನು ಎಂಬುದನ್ನು ನಿರ್ಣಯಿಸುತ್ತೇನೆ.
ಹಂತ-೨ – ಗುರಿ ಹಾಗೂ ಧ್ಯೇಯಗಳ ಘೋಷಣೆ- ಪ್ರತಿಪಕ್ಷದೊಂದಿಗೆ ನನ್ನ ಗುರಿ ಹಾಗೂ ಧ್ಯೇಯಗಳನ್ನು ಪ್ರಕಟ ಪಡಿಸುತ್ತೇನೆ. ಅಂತೆಯೇ ಅವರ ಗುರಿ ಹಾಗೂ ಧ್ಯೇಯಗಳನ್ನೂ ಮನಸ್ಸಿಗೆ ತಂದುಕೊಳ್ಳುತ್ತೇನೆ. ತನ್ಮೂಲಕ ಅವರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಅನುಕೂಲವಾಗಿ ಉತ್ತಮ ವಿಶ್ವಾಸವು ಏರ್ಪಡಲು ಸಾಧ್ಯ.
ಪಾಲಕರಿಗೆ ನನ್ನ ಅಗತ್ಯವೇನೆಂದು ವಿವರಿಸಿ, ಕಾಲೇಜಿಗೆ ಪ್ರಯಾಣ ಮಾಡಲು ಸಾಧನವಾಗಿ ವಾಹನವನ್ನು ಉಪಯೋಗಿಸುತ್ತೇನೆ, ಇದರಿಂದ ಸಮಯದ ಉಳಿತಾಯ, ಅದು ಕೊಡುವ ಮೈಲೇಜ್‌ನ ಉಪಯೋಗ, ಇತ್ಯಾದಿಗಳ ಬಗ್ಗೆ ವಿವರಿಸುವೆ. ಇದರಿಂದ ಹಣದ ಉಳಿತಾಯ ಹೇಗೆ ಎಂದು ಹಾಗೂ ಬೈಕ್ ಕೊಳ್ಳುವುದು ಒಳ್ಳೆಯ ಬಂಡವಾಳ ಎಂಬುದನ್ನು ಮನಗಾಣಿಸಲು ಪ್ರಯತ್ನಿಸುವೆ.
ಹಂತ-೩ – ಪ್ರಕ್ರಿಯೆಯನ್ನು ಪ್ರಾರಂಭಿಸುವುದು –
ಪ್ರಕ್ರಿಯೆಯನ್ನು ಪ್ರಾರಂಭಿಸುವಾಗ ಕೆಲವು ವಿಚಾರಗಳು ಹುಟ್ಟಿಕೊಳ್ಳುತ್ತವೆ. ಬೈಕನ್ನು ಪಡೆಯುವುದರ ಅನುಕೂಲ ಪ್ರತಿಕೂಲಗಳಿಗೆ ಸಂಬಂಧಿಸಿದ ಎಲ್ಲ ಬಗೆಯ ಪ್ರಶ್ನೆಗಳನ್ನು ಹಾಕಿ ನನ್ನ ಲಾಭ ಏನು ಎಂದು ತಿಳಿಯುವ ಪ್ರಯತ್ನ ಮಾಡುವೆ. ಇದು ಆದಮೇಲೆ ಮುಂದಿನ ವಿಚಾರಗಳನ್ನು ಒಂದೊಂದಾಗಿ ನೋಡುತ್ತ ಮುಂದುವರೆಯಬಹುದು.
ನನ್ನ ಪಾಲಕರು ನನ್ನ ಅಭಿಪ್ರಾಯವನ್ನು ಒಪ್ಪದಿದ್ದರೂ ಈ ಸಂದರ್ಭದಲ್ಲಿ ಅವರ ಮಾತನ್ನು ಗಮನವಿಟ್ಟು ಆಲಿಸುತ್ತೇನೆ. ಆಲಿಸುವುದು ಬಹಳ ಮುಖ್ಯ ಏಕೆಂದರೆ ಅದು ಹೊಸ ಉಪಾಯಗಳನ್ನು ನೀಡಿ ನನ್ನ ಅಭಿಪ್ರಾಯವನ್ನು ನಾನೇ ಮತ್ತೊಮ್ಮೆ ಅವಲೋಕಿಸುವಂತೆ ಮಾಡಿಕೊಡಬಹುದು. ಅಂತೆಯೇ ಆ ವ್ಯಕ್ತಿಗೂ ‘ತನಗೆ ಪ್ರಾಶಸ್ತ್ಯ ಸಿಗುತ್ತಿದೆ’ ಎನ್ನುವ ಭಾವನೆ ಮೂಡಿಸುತ್ತದೆ.
ಹಂತ – ೪ ಅಸಮ್ಮತಿಯ ಅಭಿವ್ಯಕ್ತಿ –
ಒಮ್ಮೆ ವಿಷಯವನ್ನು ಸ್ಪಷ್ಟ ಪಡಿಸಿ ಆದಮೇಲೆ, ಅಭಿಪ್ರಾಯ-ಭೇದಗಳ ಕುರಿತಾಗಿ ನೋಡಬೇಕು. ಆಗ ಮಾತ್ರವೇ ಎರಡು ಕಡೆಯವರಿಗೂ ಒಪ್ಪಿಗೆಯಾಗುವಂತಹ ಪರಿಹಾರ ಸಿಗಲು ಸಾಧ್ಯ.
ಆ ಬಳಿಕ ಆ ಬೈಕ್ ನನಗೆ ಎಷ್ಟು ಅಗತ್ಯ ಹಾಗೂ ಉಪಯುಕ್ತ ಎನ್ನುವುದನ್ನು ಮನಗಾಣಿಸುತ್ತೇನೆ. ಅದಲ್ಲದೆ ನನ್ನ ಎಲ್ಲ ಸ್ನೇಹಿತರೂ ತಮ್ಮದೇ ಆದ ಬೈಕ್‌ಗಳನ್ನು ಹೊಂದಿದ್ದಾರೆ ಎನ್ನುವುದನ್ನೂ ಅಲ್ಲಿ ಪ್ರಸ್ತಾಪಿಸುತ್ತೇನೆ.
ಹಂತ -೫ – ಪುನಃ ಸಮರ್ಥನೆ ಹಾಗೂ ರಾಜಿ- ಎರಡು ಪಕ್ಷದವರೂ ಪರಿಣಾಮವನ್ನು ಪರೀಕ್ಷಿಸಿ ಒಪ್ಪಿಗೆಯಾಗುವಂತಹ ಕೊಟ್ಟು ತೆಗೆದುಕೊಳ್ಳುವುದು ಸಾಧ್ಯವಾಗಿದೆ ಎನ್ನುವುದನ್ನು ಅಂಗೀಕರಿಸಿದಾಗಲೇ ಯಶಸ್ವೀ ಒಪ್ಪಂದ ಸಾಧನೆ ಸಿದ್ಧಿಸುವುದು.
ಅವರು ನನಗೆ ಬೈಕ್‌ನ್ನು ತಕ್ಷಣ ಕೊಡಿಸಲು ಒಪ್ಪಬಹುದು, ಅಥವಾ ತಡವಾಗಿ ಕೊಡಿಸಬಹುದು ಅಥವಾ ನಾನು ಬಯಸಿದ್ದನ್ನೇ ಕೊಡಿಸಬಹುದು ಅಥವಾ ಅದಕ್ಕಿಂತ ಕಡಿಮೆ ಬೆಲೆಯದನ್ನು ಕೊಡಿಸಬಹುದು.
ಹಂತ- ೬ – ಒಪ್ಪಂದ
ಕೊನೆಯ ಹಂತದಲ್ಲಿ ಎರಡು ಕಡೆಯವರೂ ಒಂದು ಒಪ್ಪಂದಕ್ಕೆ ಬಂದಿರುತ್ತಾರೆ. ಮುಂದೆ ಯಾವುದೇ ಅಪಾರ್ಥಗಳು ಮೇಲೇಳದಂತೆ ಅದನ್ನು ಅಂದೇ ಒಪ್ಪಂದ-ಪತ್ರವಾಗಿ ಬರೆದಿಡುತ್ತೇನೆ. ಹೀಗೆ ಹಂಚಿಕೊಂಡ ಒಪ್ಪಂದವೇ ಯಾವುದೇ ಒಪ್ಪಂದದ ಮಾತುಕತೆಗೆ ಅಂತಿಮ ಘಟ್ಟ.
ನನ್ನದೇ ಬೈಕ್‌ನಲ್ಲಿ ಕಾಲೇಜಿಗೆ ಹೋಗುವ ದಿನಕ್ಕಾಗಿ ನಾನು ಇದಿರು ನೋಡುತ್ತಿರುವೆ ಎನ್ನುವುದನ್ನು ಮತ್ತೆ ಹೇಳುತ್ತೇನೆ. (ಸಂದರ್ಭವು ಔದ್ಯಮಿಕವಾಗಿದ್ದಲ್ಲಿ ಪರಿಣಾಮವನ್ನು ಬರವಣಿಗೆಯಲ್ಲಿ ತರುವುದೇ ಸೂಕ್ತ)
ಒಪ್ಪಂದ-ಸಾಧನೆ ಚದುರಂಗದ ಆಟದಂತೆ- ಯಾವುದೇ ಹೆಜ್ಜೆ ಹಾಕುವ ಮುನ್ನದಲ್ಲಿ ಬಹಳ ಚಿಂತನೆ ಹಾಗೂ ಯೋಜನೆಗಳನ್ನು ಮಾಡಿರಬೇಕಾಗುತ್ತದೆ—–

ಕ್ರಿ.ಶ. ೧೭೮೩-೧೮೦೧ ದವರೆಗೂ ಬ್ರಿಟೆನ್ನಿನ ರಾಜನೀತಿಜ್ಞರೂ ಪ್ರಧಾನಮಂತ್ರಿಗಳೂ ಆಗಿದ್ದ ವಿಲಿಯಂ ಪಿಟ್ಸ್‌ರವರ (೧೭೫೯-೧೮೦೬) ಜೀವನದ ಒಂದು ಪ್ರಸಂಗವಿದು- ಫ್ರಾಂಸ್‌ನ ವಿರುದ್ಧ ತೆಗೆದುಕೊಳ್ಳಬೇಕಾದ ಮುಖ್ಯ ನಿರ್ಣಯವೊಂದರ ಕುರಿತಾಗಿ ಬಹಳ ಮುಖ್ಯವಾದ ಒಂದು ಒಪ್ಪಂದದ ಮಾತುಕತೆಯನ್ನು ತ್ವರಿತಗೊಳಿಸಲು ಪ್ರಯತ್ನಿಸುತ್ತಿದ್ದರು. ರಾಷ್ಟ್ರೀಯ ಖಜಾನೆಯ ಮುಖ್ಯಸ್ಥರಾಗಿದ್ದ (Chancellor of the Exchequer) ಲಾರ್ಡ್ ನ್ಯೂಕ್ಯಾಸಲ್‌ರವರೊಂದಿಗೆ ಕೆಲವು ಅಭಿಪ್ರಾಯಭೇದಗಳನ್ನು ಬೇಗನೆ ಚರ್ಚಿಸಿ ಒಮ್ಮತಕ್ಕೆ ಬರಬೇಕಿತ್ತು. ಆದರೆ ಆ ಸಮಯದಲ್ಲಿ ಚಾನ್ಸೆಲ್ಲರ್‌ರವರು ಕಾಯಿಲೆಯಿಂದಾಗಿ ಹಾಸಿಗೆ ಹಿಡಿದಿದ್ದು ಖಿನ್ನರಾಗಿದ್ದರು. ಅವರನ್ನು ಕಾಣಲು ಪಿಟ್ಸ್‌ರವರು ಅಲ್ಲಿಗೇ ಹೋದರು. ಅಲ್ಲಿ ಹೋದಾಗ ‘ಮಲಗುವ ಕೋಣೆ ತುಂಬ ತಣ್ಣಗಿದೆ’ ಎಂದು ಪಿಟ್ಸ್‌ರವರು ಉದ್ಗರಿಸಿದರು. ಆಗ ನ್ಯೂಕ್ಯಾಸಲ್‌ರವರು ನುಡಿದರು- “ಈ ಚಳಿಯಿಂದಾಗಿ ಕಾರ್ಯ-ಪ್ರಣಾಳಿಯನ್ನು (task force) ಚಾಲನೆ ಮಾಡುವ ಮಾತಿರಲಿ, ಅದರ ಕುರಿತಾದ ಚರ್ಚೆಯನ್ನೂ ಮಾಡಲು ಸಾಧ್ಯವಾಗದಂತೆ ನನ್ನ ಈ ಸಂಧಿವಾತ ತಡೆ ಒಡ್ಡುತ್ತಿದೆ’ ಎಂದು. ಪಿಟ್ಸ್‌ರವರು ಈ ಮಹತ್ವದ ಚರ್ಚೆಗೆ ಇವರ ಸಂಧಿವಾತವೇ ಮುಖ್ಯ ಅಡ್ಡಿ ಎಂದು ಅರಿತರು. ಸರಿ, ತಕ್ಷಣ ತಮ್ಮ ಪಾದರಕ್ಷೆಗಳನ್ನು ಬಿಚ್ಚಿ, ತಾವೂ ಪಕ್ಕದ ಹಾಸಿಗೆಯೇರಿ, ಹೊದಿಕೆಯನ್ನು ಹೊದ್ದುಕೊಂಡರು. ಅಲ್ಲೇ ಹಾಗೇ ಕುಳಿತು ಇಬ್ಬರೂ ಸಮಸ್ಯೆಯನ್ನು ಪೂರ್ಣವಾಗಿ ಚರ್ಚಿಸಿ, ಸೂಕ್ತ ಪರಿಹಾರವನ್ನೂ ನಿರ್ಧರಿಸಿಯೂ ಬಿಟ್ಟರು!

ಅಭ್ಯಾಸ – ೪

ನೀವು ವಿಲಿಯಂ ಪಿಟ್ಸ್‌ರವರ ಸ್ಥಾನದಲ್ಲಿದ್ದರೆ ಏನು ಮಾಡುತ್ತಿದ್ದಿರಿ?

ಅಭ್ಯಾಸ – ೫

ಅಧ್ಯಯನದ ಪುನರವಲೋಕನ

 • ನೀವು ಓದಿರುವುದನ್ನು ಪುನರವಲೋಕನ ಮಾಡಲು ಇದು ಒಂದು ಒಳ್ಳೆಯ ಸಮಯ.
 • ಈ ಅಭ್ಯಾಸವನ್ನು ಪೂರ್ಣಗೊಳಿಸುವುದರಿಂದ ನಿಮ್ಮ ಚಿಂತನೆ ಪ್ರಚೋದನೆಗೊಳ್ಳುತ್ತದೆ.
 • ನಿಮಗೆ ಅತ್ಯಂತ ಸೂಕ್ತವಾಗಿರುವ ಆಯ್ಕೆಗೆ ( √ ) ಚಿಹ್ನೆ ಹಾಕಿ. 

. ಒಪ್ಪಂದಸಾಧನೆಯ ನೆಯ ಹಂತವು ವ್ಯಕ್ತಿ ಅಥವಾ ಸಮೂಹಕ್ಕೆ ಕೊಡುವಂತಹದ್ದು

 • ಪರಸ್ಪರರ ಸ್ಥಾನಮಾನಗಳನ್ನು ಸವಾಲೊಡ್ಡುವ ಅವಕಾಶ
 • ಸ್ವಂತ ಧ್ಯೇಯೋದ್ದೇಶಗಳನ್ನು ವ್ಯಕ್ತಪಡಿಸುವ ಅವಕಾಶ

. ಒಪ್ಪಂದಸಾಧನೆಯಲ್ಲಿ ಕೊಟ್ಟು ತೆಗೆದುಕೊಳ್ಳುವುದು

 • ದೌರ್ಬಲ್ಯದ ಲಕ್ಷಣ.
 • ನಿಮಗೆ ಬೇಕಾದ್ದನ್ನು ಪಡೆಯಲು ಅದು ಅವಶ್ಯವಾಗಿರಬಹುದು.

. ಒಪ್ಪಂದಸಾಧನೆಯಲ್ಲಿ ಸಂಘರ್ಷ ಉಂಟಾದರೆ, ಮಾಡಬೇಕಾದದ್ದು

 • ಪರಿಣಾಮಕಾರಿ / ರಚನಾತ್ಮಕ ಪರಿಹಾರಕ್ಕಾಗಿ ಶ್ರಮಿಸುವುದು
 • ಕಡಿಮೆ ವಿವಾದವಿರುವ ವಿಷಯಕ್ಕೆ ಹೋಗುವುದು.

. ಒಪ್ಪಂದದ ಮಾತುಕತೆಯನ್ನು ಪ್ರಾರಂಭಿಸಲು ಬೇಕಾದ ಧೈರ್ಯ ಹಾಗೂ ಆತ್ಮವಿಶ್ವಾಸಗಳು

 • ವ್ಯಕ್ತಿಯಲ್ಲಿ ಜನ್ಮಗತವಾದ ಗುಣಗಳು
 • ಕೌಶಲವನ್ನು ಕಲಿಯಬೇಕು ಹಾಗೂ ತಯಾರಿಮಾಡಿಕೊಳ್ಳಬೇಕು ಎನ್ನುವ ಇಚ್ಛೆಯಿದ್ದಲ್ಲಿ ಬೆಳೆಯುತ್ತದೆ.

. ಒಪ್ಪಂದ ಸಾಧನೆಯಲ್ಲಿ ಫಲಕಾರಿಯಾದ ಅಂಶಗಳು ಯಾವುವೆಂದರೆ

 • ಇನ್ನೊಬ್ಬ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿ
 • ಚರ್ಚೆಯನ್ನು ತಕ್ಷಣವೇ ಪ್ರಾರಂಭಿಸಿ.

ಉತ್ತರಗಳಿಗಾಗಿ ಅಧ್ಯಾಯದ ಕೊನೆಯ ಪುಟವನ್ನು ನೋಡಿ

ಅಭ್ಯಾಸಸಂಘರ್ಷ ಪರಿಹಾರಕ್ಕೆ ೫ ಮೂಲ ಮಾರ್ಗಗಳಿವೆ. ಅವುಗಳನ್ನು ಸಾರವತ್ತಾಗಿ ಹೇಳಲಾಗಿದೆ. ನೀವು ಒಪ್ಪಂದದ ಮಾತುಕತೆಗೆ ಯಾವುದನ್ನು ಬಳಸಿಕೊಳ್ಳಲು ಇಷ್ಟ ಪಡುವಿರಿ ಎನ್ನುವುದನ್ನು ಸೂಚಿಸಿ.

ಶೈಲಿ  ವಿಶೇಷ ಗುಣ / ವರ್ತನೆ  ಬಳಸುವವರ ಸಮರ್ಥನೆ 
ನುಣುಚಿಕೊಳ್ಳುವಿಕೆ

 
ವಿಚಾರವನ್ನೇ ಅಲಕ್ಷಿಸುವುದು ಅಥವಾ ಒಪ್ಪಂದ ಸಾಧನೆಯ ಅವಕಾಶದಿಂದ ನುಣುಚಿಕೊಳ್ಳುವುದು ಅತಿ ಸಣ್ಣ ಅಥವಾ ಅತಿ ದೊಡ್ಡ ವ್ಯತ್ಯಾಸಗಳು. ಇದರಿಂದಾಗಿ ಸಂಬಂಧಗಳನ್ನು ಮುರಿಯಬಹುದು ಅಥವಾ ಇನ್ನೂ ಹೆಚ್ಚಿನ ಸಮಸ್ಯೆಗಳು ಹುಟ್ಟಬಹುದು.
ಹೊಂದಿಕೊಳ್ಳುವುದು ಒಪ್ಪಬಹುದಾದದ್ದು, ಹಠಮಾರಿತನವಿಲ್ಲದ್ದು. ವೈಯಕ್ತಿಕ ಗುರಿಗನ್ನೇ ಅಲಕ್ಷಿಸುವ ಮಟ್ಟಕ್ಕೆ ಸಹಕರಿಸುವುದು. ಒಂದು ಸಂಬಂಧವನ್ನೇ ಹಾಳುಮಾಡುವಂತಹ ಅಥವಾ ಶಾಂತಿಯನ್ನು ಕೆಡಿಸುವಂತಹ ಅಪಾಯಕಾರಿ ಸಾಹಸ ಮಾಡಬೇಕಾಗಿಲ್ಲ.
ಗೆಲವು / ಸೋಲು ದೃಢ ಮತ್ತು ಬಲಪೂರ್ವಕ. ಹೇಗಾದರೂ ಗೆಲ್ಲಲೇಬೇಕು. ಸಮರ್ಥರ ಉಳಿವು. ನೈತಿಕವಾಗಿ ಮತ್ತು ಔಪಚಾರಿಕವಾಗಿ ಸರಿ.
ರಾಜಿ ಮಾಡುವುದು ಎರಡು ಕಡೆಯವರು ಮೂಲ ಗುರಿಸಾಧನೆ ಮಾಡಿ, ಒಳ್ಳೆಯ ಸಂಬಂಧವನ್ನು ಇರಿಸಿಕೊಳ್ಳುವುದು ಮುಖ್ಯ.

ಧೃಡ ಮತ್ತು ಸಹಕಾರಿ.
ಯಾವುದೇ ಒಬ್ಬ ವ್ಯಕ್ತಿ ಅಥವಾ ಒಂದು ವಿಚಾರವೇ ಪರಿಪೂರ್ಣ ಎಂದಲ್ಲ. ಯಾವುದೇ ಕಾರ್ಯವನ್ನು ಮಾಡಲು ಒಂದಕ್ಕಿಂತ ಹೆಚ್ಚು ಒಳ್ಳೆಯ ಹಾದಿಗಳಿವೆ.

ಪಡೆಯಲು ನೀವೂ ‘ಕೊಡಬೇಕು’.
ಸಮಸ್ಯಾ-ಪರಿಹಾರ ಎರಡು ತಂಡಗಳ ಅಗತ್ಯಗಳೂ ಹಾಗೂ ಬೇಡಿಕೆಗಳೂ ನ್ಯಾಯಸಮ್ಮತ ಮತ್ತು ಮುಖ್ಯ. ಪರಸ್ಪರ ಬೆಂಬಲವನ್ನು ಆದರದಿಂದ ಕಾಣುವುದು. ದೃಡ ಮತ್ತು ಸಹಕಾರಿ. ಎರಡು ತಂಡಗಳು ಮುಕ್ತವಾಗಿ ವಿಷಯವನ್ನು ಚರ್ಚಿಸಿದಾಗ, ಇಬ್ಬರಿಗೂ ಹೆಚ್ಚಿನ ನಷ್ಟವಿಲ್ಲದೆ ಇಬ್ಬರಿಗೂ ಉಪಯುಕ್ತವಾದ ಪರಿಹಾರ ಕಂಡುಕೊಳ್ಳಲು ಸಾಧ್ಯ. ಯಾರೇ ಆಗಲಿ ಮುಖ್ಯವಾಗಿ ರಾಜಿ ಮಾಡಿಕೊಳ್ಳದೆ ಪರಸ್ಪರ ಲಾಭದಾಯಕ ಪರಿಹಾರವನ್ನು ಕಂಡುಕೊಳ್ಳಬಹುದು.

ರಾಜಿ ಮಾಡಿಕೊಳ್ಳುವ ಮತ್ತು ಸಮಸ್ಯಾ-ಪರಿಹಾರದ ಶೈಲಿಗಳನ್ನು ಶಿಫಾರಸ್ಸು ನಿರ್ದೇಶಿಸಲಾಗಿದೆ-

ಚಿತ್ರ ಈ ಪ್ರಶ್ನೆಗೆ ಉತ್ತರ – ಬೇರೆ ಬೇರೆ ಜನರ ಬೇಡಿಕೆಗಳು ಬೇರೆ ಬೇರೆಯಾಗಿರುತ್ತವೆ.  ನಮ್ಮ ಬೇಡಿಕೆಗಳಿದ್ದಂತೆಯೆ ಎಷ್ಟು ಜನರ ಬೇಡಿಕೆಗಳು ಇದ್ದಾವು?

ಒಪ್ಪಂದ ಸಾಧನೆಯ ಯೋಜನೆ ಮತ್ತು ಸಿದ್ದತೆ

. ಯಶಸ್ವಿ ಒಪ್ಪಂದ ಸಾಧನೆ ಆಕಸ್ಮಿಕವಾಗಿ ಆಗುವುದಿಲ್ಲ, ಅದು ಒಂದು ಕೌಶಲಪೂರ್ಣ ಯೋಜನೆಯಿಂದ ಜಾರಿಗೆ ಬರುವಂತಹದ್ದು.

 • ಮಾರ್ಕೆಟ್ಟಿನ ಒಬ್ಬ ರಿಕ್ಷಾ ಓಡಿಸುವವನಾಗಲಿ, ರಾಷ್ಟ್ರೀಯ ಗುತ್ತಿಗೆದಾರನಾಗಲಿ ಅಥವಾ ಕುಟುಂಬದ ಸದಸ್ಯರೇ ಆಗಲಿ ಒಪ್ಪಂದಕ್ಕಾಗಿ ವ್ಯವಹರಿಸುವಾಗ ಉತ್ತಮ ಯೋಜನೆಯಿಂದಾಗಿ ಸಫಲ ಪರಿಣಾಮ ಪಡೆಯುವ ಹಾಗೂ ಭಿನ್ನಾಭಿಪ್ರಾಯವನ್ನು ಕಳೆಯುವ ಅನುಭವದ ಅರಿವಾಗುತ್ತದೆ.
 
ಯೋಜನೆಯನ್ನು ಪ್ರಾರಂಭಿಸುವುದು ಹೇಗೆ?

 • ನಿಮ್ಮ ಉದ್ದೇಶಗಳ ಬಗ್ಗೆ ವಿಚಾರ ಮಾಡಲು ಪ್ರಾರಂಭಿಸಿ.
 • ನಿಮಗೇನು ಬೇಕು? ಅದಕ್ಕಾಗಿ ನೀವು ಏನನ್ನು ಕೊಡಲು ಇಚ್ಛಿಸುವಿರಿ?
 • ನಿಮ್ಮ ಅಗತ್ಯವೇನು? ಅದಕ್ಕಾಗಿ ನೀವು ಏನನ್ನು ಕೊಡಲು ಇಚ್ಛಿಸುವಿರಿ?
ಉದ್ದೇಶಗಳು ಸ್ಪಷ್ಟವಾದರೆ, ವಿಷಯದ ಮೇಲೆ ಏಕಾಗ್ರತೆ ವಹಿಸಿ, ಮತ್ತು ಅದನ್ನು ದೊಡ್ಡದು ಮತ್ತು ಚಿಕ್ಕದು ಎಂಬುದಾಗಿ ವರ್ಗೀಕರಿಸಿ. ಇದನ್ನು ಕೇವಲ ವಿಷಯದ ಒಂದು ಭಾಗಕ್ಕೆ ಮಾತ್ರ ಅಲ್ಲ, ಇನ್ನಿತರರ ಸಂಭವನೀಯ ವಿಷಯಗಳ ಬಗ್ಗೆ ಕೂಡ ಚಿಂತಿಸಿ. ಪರಸ್ಪರರಿಗೆ ಸಂಬಂಧಿಸಿದ ಸಮಾನ ವಿಷಯಗಳ ಬಗ್ಗೆ ಅಲಕ್ಷ್ಯ ಬೇಡ. 
. ವಿಷಯದ ವಿಶ್ಲೇಷಣೆ

 • ಪಕ್ಷಗಳ ಮೇಲೆ ಆರ್ಥಿಕ ಪ್ರಭಾವ.
 • ಸಮಯದ ಇತಿಮಿತಿ.
 • ಕಾನೂನು.
 • ಪೂರ್ವಾನುಭವ ಮತ್ತು ಕ್ರಮಬದ್ಧ ಅಭ್ಯಾಸ.
ಧೀರ್ಘಾವದಿ ಮತ್ತು ಅಲ್ಪಾವಧಿ ಅನುಕೂಲಗಳು ಮತ್ತು ಪ್ರತಿಕೂಲಗಳು.
. ಎಲ್ಲಿಂದ ಮಾಹಿತಿ ಪಡೆಯವುದು 

 • ಗ್ರಾಹಕರ ಮಾರ್ಗದರ್ಶಿ ಮತ್ತು ಇತರ ಪ್ರಕಾಶಿತ ಸಾಧನಗಳು
 • ವರ್ತಮಾನ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು.
 • ಸೂಚನಾ ಮತ್ತು ಶೈಕ್ಷಣಿಕ ಪುಸ್ತಕಗಳು / ಕರಪತ್ರಗಳು.
 • ಸರಕಾರ ಹಾಗೂ ಕೈಗಾರಿಕೆ ಕೇಂದ್ರಗಳ ವರದಿಗಳು
 • ಕಾರ್ಪೋರೇಟ್‌ಗಳ ವಾರ್ಷಿಕ ವರದಿಗಳು
 • ಸಾರ್ವಜನಿಕ ಗ್ರಂಥಾಲಯಗಳಲ್ಲಿ ಲಭ್ಯವಿರುವ ಎಲೆಕ್ಟ್ರಾನಿಕ್ ಡೇಟಾ-ಬೇಸ್
 • ಸ್ನೇಹಿತರ ವಲಯ
 • ವೃತ್ತಿ-ಪರಿಣತರಿಂದ ಪ್ರಕಾಶನ ಮತ್ತು ಸಮೀಕ್ಷೆ
 
. ಸಮಯ 

 • ಎಷ್ಟು ಸಮಯ ಮೀಸಲಿಡಬಹುದೆಂದು ನಿರ್ಧರಿಸಿ
 • ಸಿದ್ಧತೆಯಿಲ್ಲದ ಒಪ್ಪಂದಸಾಧನೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ.
 • ಇದಕ್ಕಾಗಿ ಸಾಕಷ್ಟು ಸಮಯ ಇರಲಿ, ಅವಸರ ಮಾಡಬೇಡಿ.
 • ಸ್ನೇಹ ಬೆಳೆಸಲು ಸಮಯ ತೆಗೆದುಕೊಳ್ಳಿ.
 • ಯಾವಾಗ ಮೌನವಾಗಿರಬೇಕೆನ್ನುವುದನ್ನು ಅರಿಯಿರಿ
 • ಯಾವಾಗ ಅಂತ್ಯಗೊಳಿಸಬೇಕು ಎಂಬುದು ತಿಳಿದಿರಲಿ.
 • ಸಂಭಾಷಣೆಯನ್ನು ಧೀರ್ಘಕಾಲ ಮುಂದುವರೆಸಬೇಡಿ.
 • ವಿರೋಧ ಶಮನವಾಗದಿದ್ದರೆ ಅಥವಾ ಹೆಚ್ಚಿನ ಸಂಶೋಧನೆಯ ಅಗತ್ಯವಿದ್ದರೆ ತಾತ್ಕಾಲಿಕವಾಗಿ ವ್ಯವಹಾರವನ್ನು ನಿಲ್ಲಿಸಿ.
 • ಮುಖ್ಯಾಂಶಗಳ ಸುಧಾರಿತ ಪುನರವಲೋಕನಕ್ಕಾಗಿ ಸಾಕಷ್ಟು ಸಮಯವನ್ನು ನೀಡಿ.
 
. ಶಕ್ತಿಯ ಮೂಲಗಳನ್ನು ಗುರುತಿಸಿರಿ.

 • ಧೀರ್ಘ ಪ್ರಯತ್ನ – ಸಂಘರ್ಷವನ್ನು ಮೊದಲ ಸಂಕೇತದಲ್ಲಿಯೇ ಬಿಡಬೇಡಿ.
 • ಸ್ಪರ್ಧೆ – ಇದ್ದೇ ಇರುತ್ತದೆ, ಆದರೆ ಅನೇಕ ಆಯ್ಕೆಗಳಿವೆ ಎನ್ನುವುದನ್ನು ಎಂದೂ ಮರೆಯದಿರಿ.
 • ನೈಪುಣ್ಯವನ್ನು ಬಳಸಿ- ಜ್ಞಾನಕ್ಕಿಂತ ನೈಪುಣ್ಯಕ್ಕೆ ಹೆಚ್ಚಿನ ಆದ್ಯತೆ
 • ನ್ಯಾಯಸಮ್ಮತವಾದ ಬೆಂಬಲವಿರುವ ದಾಖಲೆಗಳನ್ನು ಉಪಯೋಗಿಸಿ. ಇದು ಹೆಚ್ಚು ಪ್ರಭಾವಶಾಲಿ.
 • ಕಾರ್ಯದಲ್ಲಿ ತೊಡಗಿಸಿಕೊಳ್ಳುವಿಕೆ- ಎಲ್ಲರನ್ನು ತೊಡಗುವಂತೆ ಮಾಡಿ. ಅದು ವ್ಯಕ್ತಿಗತವಾಗಬಾರದು.
 • ಮನೋಭಾವ- ಇನ್ನೊಬ್ಬ ಒಪ್ಪಂದಕಾರನ ಮೇಲೆ ನಿಮ್ಮ ಬೇಸರವನ್ನು ವ್ಯಕ್ತಪಡಿಸಬೇಡಿ. ಸಕಾರಾತ್ಮಕ ಭಾವವನ್ನು ಹೊಂದಿರಿ.
 

ಅಭ್ಯಾಸ 

ಕೆಳಗಿನ ಸನ್ನಿವೇಶದಲ್ಲಿ ನೀವು ಏನು ಮಾಡುವಿರಿ? ಕೆಳಗೆ ಕೊಟ್ಟಿರುವ ಸ್ಥಳದಲ್ಲಿ ಸಂಭಾಷಣೆ ಬರೆಯಿರಿ-

೧. ನೀವು ಒಬ್ಬಂಟಿಗರಾಗಿ ಈಗ ತಾನೆ ಬಿಜಾಪುರದಿಂದ ಬೆಂಗಳೂರಿಗೆ ಬಂದಿಳಿದಿದ್ದೀರಿ. ತುಂಬಾ ತಡವಾಗಿದೆ. ಸಂಬಂಧಿಕರ ಸ್ಥಳಕ್ಕೆ ತಲುಪಲು ಇರುವುದು ಒಂದೇ ಬಸ್. ಬಸ್‌ನ ಪ್ರಯಾಣ ದರ ಕೊಡಲು ನಿಮ್ಮ ಬಳಿ ಸ್ವಲ್ಪವೂ ಹಣವಿಲ್ಲ ಎಂದು ಈಗತಾನೆ ಮನವರಿಕೆ ಆಗಿದೆ. ನಿಮ್ಮ ಬ್ಯಾಂಕ್ ಕಾರ್ಡ್‌ನ್ನು ATM ಯಂತ್ರ ಸ್ವೀಕರಿಸುತ್ತಿಲ್ಲ. ನಿಮಗೆ ೧೦೦ ರೂಪಾಯಿಯ ಅವಶ್ಯಕತೆ ಇದೆ. ನಿಮಗೆ ಯಾರಾದರೂ ಹಣ ಕೊಟ್ಟರೆ, ನೀವು ಅವರಿಗೆ ಮರುದಿನವೇ ಕಳುಹಿಸಿಕೊಡುವಿರಿ. ನೀವು ಒಬ್ಬ ವ್ಯಕ್ತಿಯನ್ನು ಕಂಡು ಅವರನ್ನು ಕೇಳಲು ನಿರ್ಧರಿಸುವಿರಿ.

ಸನ್ನಿವೇಶ 

ನೀವು                                                                              ಅಪಚರಿತ

೨. ನೀವು ಅಂತಿಮ ವರ್ಷದ ಪದವಿ ವಿದ್ಯಾರ್ಥಿ ಮತ್ತು ಈ ವರ್ಷದ ಸ್ನಾತಕೋತ್ತರ ತರಗತಿಗೆ ಪ್ರವೇಶ ಪರೀಕ್ಷೆ ತೆಗೆದುಕೊಳ್ಳಲಿದ್ದೀರಿ. ನೀವು ಬೆಂಗಳೂರಿನಲ್ಲಿ ಒಬ್ಬರೇ ಇರಬೇಕೆಂದಿರುವಿರಿ ಮತ್ತು ನೀವು ಅವಶ್ಯವಾಗಿ ಹೋಗಲೇಬೇಕೆಂದಿರುವ ವಿಶ್ವವಿದ್ಯಾಲಯವು ಬೆಂಗಳೂರಿನಲ್ಲಿಯೇ ಇದೆ. ನಿಮ್ಮ ಪೋಷಕರಿಗೆ ಇದು ಇಷ್ಟವಿಲ್ಲ. ಆದರೂ ಜೀವನವನ್ನು ನಿಮ್ಮ ಇಷ್ಟದಂತೆ ನಡೆಸಲು ಇಚ್ಛಿಸಿದ್ದೀರಿ. ನಿಮ್ಮ ಪೋಷಕರನ್ನು ಒಪ್ಪಿಸಬೇಕಾಗಿದೆ.

ಸನ್ನಿವೇಶ 

೩. ನಿಮ್ಮ ಸ್ನೇಹಿತರು ತರಗತಿಗೆ ಹಾಜರಾಗುವುದನ್ನು ಬಿಟ್ಟು, ತಮ್ಮೊಡನೆ ಚಲನಚಿತ್ರ ನೋಡಲು ನಿಮ್ಮನ್ನು ಆಹ್ವಾನಿಸಿದ್ದಾರೆ. ಆದರೆ ನಿಮಗೆ ಚಲನಚಿತ್ರಕ್ಕೆ ಹೋಗಲು ಇಷ್ಟವಿಲ್ಲ, ಏಕೆಂದರೆ ಆ ತರಗತಿಗೆ ಹಾಜರಾಗುವುದು ನಿಮಗೆ ಬಹಳ ಮುಖ್ಯವೆನಿಸಿದೆ. ಈಗ ನೀವು ತರಗತಿಗೆ ಹಾಜರಾಗಬೇಕೆಂದು ಮತ್ತು ಅವರೊಂದಿಗೆ ಚಲನಚಿತ್ರಕ್ಕೆ ಬರುವುದಿಲ್ಲ ಎಂದು ಹೇಗೆ ಸಮಾಧಾನವಾಗುವಂತೆ ಹೇಳುವಿರಿ?

ಸನ್ನಿವೇಶ 

ನೆನಪಿಡಬೇಕಾದ ಅಂಶಗಳು:

 • BATNA (Best Alternative To a Negotiated Agreement) ::
 • ನಿಮ್ಮ ಪ್ರತಿಪಕ್ಷಿ ಒಪ್ಪದಿದ್ದರೆ ಏನಾಗುತ್ತದೆ? ಬೇರೆ ಉಪಾಯಗಳನ್ನು ಚಿಂತಿಸಿ- ಅಥವಾ ಚರ್ಚೆಯನ್ನು ಮುಂದೂಡಿ, ಆದರೆ ಸಕಾರಾತ್ಮಕವಾಗಿ ಒಪ್ಪಂದವನ್ನು ಸಾಧಿಸಿ. ಪರ-ಪಕ್ಷವು ಯಾವ ಸುಸಾಧ್ಯವೆನಿಸುವ ಸಲಹೆ ಕೊಡಬಹುದೋ, ಅದನ್ನೂ ವಿವೇಚಿಸಿ.
 • ಈ-ಮೈಲ್ ಮೂಲಕ ಒಪ್ಪಂದ ಸಾಧಿಸುವುದು ಸೂಕ್ತವಲ್ಲ. ಈ-ಮೈಲ್‌ನಲ್ಲಿ ಭೌತಿಕ, ಸಾಮಾಜಿಕ ಸಂವೇದನೆಗಳು ಇರುವುದಿಲ್ಲ. ಈ ಅಂಶಗಳೇ ಒಪ್ಪಂದ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎನ್ನುವುದು ನೆನಪಿರಲಿ. ಅದಕ್ಕೆ ತಕ್ಕಂತಹ ಫಲ ನಿಮಗೆ ದೊರೆಯುತ್ತದೆಯೇ ಹೊರತು, ನಿಮ್ಮ ಅರ್ಹತೆಗೆ ಅನುಗುಣವಾಗಲ್ಲ.
 • ವಿನಂತಿ ಮಾಡಲು ಅತ್ಯುತ್ತಮ ಸಮಯ, ನೀವು ಒಪ್ಪಂದವನ್ನು ಸಾಧಿಸುವ ಮುನ್ನ, ಆಗಲೇ ನಿಮ್ಮ ಪರ ಬಲ ಹೆಚ್ಚು ಇರುತ್ತದೆ.
 • ಸರಿಯಾದ ಸಿದ್ಧತೆ ಮಾಡಿಕೊಂಡಿರಿ.
 • ಗೆಲುವಿನ ಮನೋಭಾವನೆ ಇರಲಿ.
 • ತಾಳ್ಮೆ ಕಳೆದುಕೊಳ್ಳದಿರಿ.
 • ಗಮನವಿಟ್ಟು ಆಲಿಸಿ ಮತ್ತು ತುಂಬಾ ಮಾತಾಡುವುದನ್ನು ತಡೆಯಿರಿ.
 • ವಾದ ಮಾಡಬೇಡಿ, ಆದರೆ ಪ್ರಭಾವ ಬೀರಿ.
 • ಸಂಘರ್ಷವನ್ನು ಅಲಕ್ಷ್ಯ ಮಾಡಬೇಡಿ, ಬದಲಾಗಿ ಅದರ ಪರಿಹಾರವನ್ನು ಮಾಡಿ.

ಅಭ್ಯಾಸ

(ಬಾಲ್ಯ, ಶಾಲಾ ದಿನಗಳು, ಮನೆ, ಕಾಲೇಜು, ಬಂಧು ಮಿತ್ರರ ವಲಯದಲ್ಲಿ ಅಥವಾ ಇತರ ವ್ಯಕ್ತಿಗಳೊಂದಿಗೆ) ನೀವು ಬಯಸಿಯೂ ಪಡೆಯಲು ಕಷ್ಟವಾದ ೧೦ ವಿಭಿನ್ನ ಸನ್ನಿವೇಶಗಳನ್ನು ಪಟ್ಟಿ ಮಾಡಿ. ಆ ಸಂದರ್ಭದಲ್ಲಿ ನೀವೇನು ಮಾಡಿದಿರಿ ಎನ್ನುವುದನ್ನು ಬರೆಯಿರಿ. ಆ ವಿಚಾರವನ್ನು ಕೈಬಿಟ್ಟಿರಾ ಅಥವಾ ಅದನ್ನು ಪಡೆಯಲು ಪ್ರಯತ್ನಿಸಿದಿರಾ?

ನಿಮಗೆ ಬೇಕಾದುದನ್ನು ಅಥವಾ ಆಸೆ ಪಟ್ಟಿದ್ದನ್ನು ಪಡೆಯಲು ನೀವು ಇನ್ನೂ ಹೆಚ್ಚಿನ ಪ್ರಯತ್ನ ಮಾಡಬಹುದಿತ್ತು ಎಂದು ನಿಮಗೆ ಅನ್ನಿಸುತ್ತಿದೆಯೇ? ಈ ಅಧ್ಯಾಯವನ್ನು ಓದಿದ ಮೇಲೆ ನಿಮಗೆ ಬೇಕಾದುದನ್ನು ಪಡೆಯಲು, ನೀವು ಯಾವುದಾದರೊಂದು ಪದ್ಧತಿಯನ್ನು ಅನುಸರಿಸಬಹದು.

೧)

೨)

೩)

೪)

೫)

೬)

೭)

೮)

೯)

ಉತ್ತರಗಳು – ಅಭ್ಯಾಸಗಳು – ೫ : ೧- i,  ೨- ii  ,  ೩ – i   ,  ೪- ii,  ೫- i

ಇದನ್ನು ಓದಿ ನೀವು ಆನಂದಿಸಿರಬಹುದು, ಮಾಹಿತಿ ಪಡೆದಿರಬಹುದು ಮತ್ತು ಪರಿವರ್ತನೆಯನ್ನು ಹೊಂದಿರಬಹುದು, ಅಲ್ಲವೆ?!

ಗ್ರಂಥ ಸಲಹೆ:

Successful Negotiation – Third edition by Robert – B – Maddux

ಅಂತರ್ಜಾಲ ಮೂಲ:

http://www.virginia.edu/upr/postdoc/docs/niegiotiations-pdf

http://www.authorstream.com/presentation/sabra3/3-135954

negotiation-skills-entertainment-ppt-powerpoint