ಅಧ್ಯಾಯದ ಪರಿಕಲ್ಪನೆ

 

ಅಧ್ಯಾಯದ ಕಲಿಕೆಯ ಉದ್ದೇಶಗಳು:

 • ಸಂಘರ್ಷ ಎಂದರೇನು?
 • ಸಂಘರ್ಷದ ಬಗೆಗಳು
 • ಸಂಘರ್ಷಕ್ಕೆ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು
 • ಪ್ರಭಾವಶಾಲಿ ಸಂಘರ್ಷನಿರ್ವಹಣೆಗೆ ಅನೇಕ ತಂತ್ರಗಳನ್ನು ಗಮನಿಸುವುದು
 • ಸಂಘರ್ಷ-ನಿವಾರಣೆಯ ಶೈಲಿಗಳನ್ನು ಗಮನಿಸುವುದು

ಇತಿಹಾಸದ ಪುಟದಿಂದ———

ಸಂಘರ್ಷ ನಿವಾರಣೆಗೆ ಒಂದು ಉತ್ಕೃಷ್ಠ ಉದಾಹರಣೆ- ಭಾರತದ ಏಕೀಕರಣದಲ್ಲಿ ಸರ್ದಾರ್ ವಲ್ಲಭ್ಭಾಯಿ ಪಟೇಲ್ರವರ ಪಾತ್ರ ‘ಭಾರತದ ಕಬ್ಬಿಣದ ಮನುಷ್ಯ’ ಸರ್ದಾರ ಪಟೇಲ್‌ರವರು, ಸೌಜನ್ಯ, ಕಾರ್ಯದಕ್ಷತೆ, ಆತ್ಮಸ್ಥೈರ್ಯ ಹಾಗೂ ಧೃಡನಿರ್ಧಾರಗಳಿಗೆ ಹೆಸರಾದವರು. ಆಗ ತಾನೇ ಸ್ವಾತಂತ್ರ್ಯ ಪಡೆದಿದ್ದ ಭಾರತದೇಶವು ಶತಮಾನಗಳ ಪರಕೀಯರ ಆಡಳಿತದಿಂದಾಗಿ ಛಿದ್ರಛಿದ್ರವಾಗಿದ್ದ ತನ್ನ ಆರ್ಥಿಕ ಹಾಗೂ ರಾಜಕೀಯ ವ್ಯವಸ್ಥೆಗಳನ್ನು ಕಟ್ಟುವತ್ತ ಶ್ರಮಿಸುತ್ತಿದ್ದ ಕಾಲ ಅದು.

ಆಗಿನ ಬಹಳಷ್ಟು ಪ್ರಾಂತೀಯ ರಾಜ್ಯಗಳು ಭಾರತದ ಗಣರಾಜ್ಯದಲ್ಲಿ ಸೇರಲು ಹಿಂಜರಿದವು. ಇದಕ್ಕೆ ಹಲವು ಕಾರಣಗಳಿದ್ದವು. ತಮ್ಮ ಸಾಂಸ್ಕೃತಿಕ ಮತ್ತು ರಾಜನೈತಿಕ ಅಸ್ತಿತ್ವವನ್ನು ಕಳೆದುಕೊಳ್ಳುವ ಭೀತಿ, ಚಿಕ್ಕ ರಾಜ್ಯಗಳು ದೊಡ್ಡ ಸಾರ್ವಭೌಮ ಶಕ್ತಿಗೆ ಅಧೀನವಾಗಲು ಅಭಿಮಾನದ ತಡೆ, ಅಸುರಕ್ಷೆಯ ಭಯ, ಇತ್ಯಾದಿ. ಈ ಮಧ್ಯೆ, ಜುನಾಘಡದ ನವಾಬ್ ಹಾಗೂ ಹೈದರಾಬಾದಿನ ನಿಝಾಮ್ ಪಾಕಿಸ್ತಾನವನ್ನು ಸೇರುವ ರಹಸ್ಯ ಷಡ್ಯಂತ್ರದಲ್ಲಿ ತೊಡಗಿದ್ದರು. ಕಾಶ್ಮೀರದ ಮಹಾರಾಜ ಹರಿಸಿಂಗ್ ಭಾರತವನ್ನು ಸೇರುವುದೊ ಪಾಕಿಸ್ತಾನವನ್ನು ಸೇರುವುದೊ ಅಥವಾ ಸ್ವತಂತ್ರವಾಗಿ ನಿಲ್ಲುವುದೋ ಎನ್ನುವ ಅನಿಶ್ಚಿತಭಾವದಲ್ಲಿದ್ದ. ಅಂದಿಗೆ ಇದೇ ಒಂದು ದೊಡ್ಡ ರಾಜಕೀಯ ಗೊಂದಲವಾಗಿತ್ತು. ಎಲ್ಲ ಬಗೆಯ ಮಾತುಕತೆ, ಬಲಪ್ರಯೋಗಗಳನ್ನು ಮಾಡಿಯೂ ಸ್ವಯಂ ಪ್ರಧಾನಮಂತ್ರಿಯಿಂದಲೂ ಇದನ್ನು ಪರಿಹರಿಸಲಾಗಲಿಲ್ಲ.

ಆಗ ಸರ್ದಾರ್ ಪಟೇಲ್‌ರು ಮುಂದೆ ಬಂದರು. ಇವರ ರೀತಿಯೇ ಬೇರೆ, ಇವರ ನೈಪುಣ್ಯಯುತ ತಂತ್ರ ಪರಿಣಾಮಕಾರಿಯಾಯಿತು. ಅವರು ಸಮಸ್ಯಾತ್ಮಕ ರಾಜ್ಯಗಳನ್ನು ಒಪ್ಪಿಸಲು ಅತ್ಯುತ್ತಮವಾದ ರಾಜನೈತಿಕ ತಂತ್ರಗಳನ್ನು, ಚಾತುರ್ಯ, ಛಲ, ಬಲಗಳನ್ನು, ನೈಪುಣ್ಯದಿಂದ ಬಳಸಿಕೊಂಡರು. ಭಾರತದ ಗಣರಾಜ್ಯದಲ್ಲಿ ಸೇರುವುದರಿಂದ ಆಗುವ ಅನುಕೂಲತೆಗಳನ್ನು ಮತ್ತು ಸ್ವತಂತ್ರವಾಗಿರುವುದರ ಅಪಾಯಗಳನ್ನು ತಿಳಿಹೇಳಿದರು. ಬಹಳ ಚಾತುರ್ಯದಿಂದ ಚತುರೋಪಾಯಗಳಾದ ಸಾಮ, ದಾನ, ಭೇದ, ದಂಡಗಳನ್ನು ಬಳಸಿ, ಎಡೆಬಿಡದ ಪ್ರಯತ್ನದಿಂದ ಎಲ್ಲಾ ರಾಜ್ಯಗಳನ್ನು ಭಾರತದ ಗಣರಾಜ್ಯದಲ್ಲಿ ವಿಲೀನಗೊಳಿಸುವಲ್ಲಿ ಸಫಲರಾದರು. ಇಷ್ಟಾದರೂ ಅತಿ ಮೊಂಡುತನದ ಹೈದರಾಬಾದಿನ ನಿಜಾಮನು ಗುಟ್ಟಾಗಿ ಪಾಕಿಸ್ತಾನಕ್ಕೆ ಸೇರಿಬಿಡುವ ಕುತಂತ್ರ ಮಾಡುತ್ತಲೇ ಇದ್ದ. ಆದರೆ ಸರದಾರ್ ಪಟೇಲರು ತ್ವರಿತ ಗತಿಯಿಂದ ರಾಜಕೀಯ ಬಲವನ್ನು ಉಪಯೋಗಿಸಿ ಅವನನ್ನು ತಡೆದರು. ಕೊನೆಗೂ ಹೈದರಾಬಾದ್ ಭಾರತದ ಗಣರಾಜ್ಯದಲ್ಲಿ ಸೇರುವಂತಾಯಿತು. ಹೀಗೆ ಭಾರತದ ಗಣರಾಜ್ಯವನ್ನು ರಚಿಸುವಲ್ಲಿ ಪಟೇಲರು ಯಶಸ್ವಿಯಾದರು.

ವಿವರಿಸಿ:-

೧) ಸರದಾರ್ ಪಟೇಲರು ಈ ಸಮಸ್ಯೆಯನ್ನು ಹೇಗೆ ನಿಭಾಯಿಸಿದರು?

೨) ಈ ಸಂದರ್ಭದಲ್ಲಿ ಬಲ ಪ್ರಯೋಗ ಏಕೆ ಫಲಕಾರಿಯಾಗಲಿಲ್ಲ?

೩) ಸಂಘರ್ಷ-ನಿವಾರಣಾ ಘಟ್ಟದಲ್ಲಿ ರಾಷ್ಟ್ರೀಯತೆಯ ಪ್ರಭಾವ ಹೇಗೆ ಸಹಕಾರಿಯಾಯಿತು?

ಸಮಸ್ಯೆಯು ತುರ್ತು ಪರಿಸ್ಥಿತಿಗೆ ತಲುಪುವ ಮುನ್ನವೇ ಅದನ್ನು ಗುರುತಿಸುವ ಕೌಶಲವೇ ನಾಯಕತ್ವಕ್ಕೆ ಸವಾಲು – Arnold Glasgow
  

ಸಂಘರ್ಷಎಂದರೇನು?

‘ಅಭಿಪ್ರಾಯಭೇದ ಅಥವಾ ಉದ್ದೇಶಗಳ ವೈರುಧ್ಯದಿಂದ ಉಂಟಾಗುವ ಮಾನಸಿಕ ಗೊಂದಲ, ಕಲಹ, ವೈಮನಸ್ಯ, ಬಿಸಿಬಿಸಿ ವಾದ ವಿವಾದವನ್ನೇ ಸಂಘರ್ಷ ಎನ್ನಬಹುದು’.

ಅಗತ್ಯ, ಮೌಲ್ಯಗಳು ಹಾಗೂ ಒಲವುಗಳ ನಡುವಿನ ವಿರೋಧವನ್ನೇ ಸಂಘರ್ಷವೆಂದು ಗುರುತಿಸಲಾಗುತ್ತದೆ. ಇದು ಆಂತರಿಕವು (ತನ್ನೊಳಗೆ) ಅಥವಾ ಬಾಹ್ಯವೂ (ಬೇರೆಯವರೊಂದಿಗೆ) ಇರಬಹುದು.

ಸಂಘರ್ಷವು ಜೀವನದಲ್ಲಿ ಸಹಜವೇ. ಆದರೆ ನಾವು ಅದಕ್ಕೆ ಹೇಗೆ ಪ್ರತಿಸ್ಪಂದಿಸುತ್ತೇವೆ ಎನ್ನುವುದು ಅದರ ಮುಂದಿನ ಗತಿಯನ್ನು ನಿರ್ಧರಿಸುತ್ತದೆ ಹಾಗೂ ಅದನ್ನು ಅರ್ಥೈಸುವ ಹಾಗೂ ಮುನ್ನಡೆಸುವ ಸಾಧನವಾಗಿದೆ.

ಸಂಘರ್ಷವು ಸದಾ ಕಾಲವೂ ಕೆಟ್ಟದ್ದೇನಲ್ಲ. ಬೆಳವಣಿಗೆ ಹಾಗೂ ಅರಿವಿಗಾಗಿ ಅದು ಅಗತ್ಯ. ‘ಸೈದ್ಧಾಂತಿಕ-ಸಂಘರ್ಷ’ ಒಳ್ಳೆಯದೆ. ಅದು ಉದ್ಧಾರ ಹಾಗೂ ಪ್ರಗತಿಗಳತ್ತ ಸಾಗಲು ಹೊಸ ಅವಕಾಶ ಮತ್ತು ಆಯ್ಕೆಗಳನ್ನು ಮೂಡಿಸುತ್ತದೆ. ಆದರೆ ‘ವೈಯಕ್ತಿಕ-ಸಂಘರ್ಷ’ ಅಪಾಯಕಾರಿ. ಅದು ಆತಂಕ, ಅನಾರೋಗ್ಯಗಳನ್ನುಂಟುಮಾಡುತ್ತದೆ ಹಾಗೂ ದಿಕ್ಕುತಪ್ಪಿಸುತ್ತದೆ.

ಸಂಘರ್ಷಗಳಿಂದಉಂಟಾಗುವಂತಹವು ಇವು

೧) ಮಾನಸಿಕ ಒತ್ತಡ

೨) ತೀವ್ರ ತಾಪ/ ಚಡಪಡಿಕೆ

೩) ಹಗೆತನ / ಶತ್ರುತ್ವ

೪) ತಪ್ಪು ನಿರ್ಣಯದಿಂದ ಆಗುವ ದುಷ್ಫಲ

೫) ಸ್ವಾತಂತ್ರ್ಯಕ್ಕೆ ನಿರ್ಬಂಧ

೬) ಅಮೂಲ್ಯ ಶಕ್ತಿಯ ವ್ಯಯ

೭) ಇತರ ಕಾರ್ಯಕರ್ತರ ಮೇಲೆ ನಕಾರಾತ್ಮಕ ಪ್ರಭಾವ

೮) ನಾಯಕರ / ಆಡಳಿತಗಾರರಲ್ಲಿನ ಆತ್ಮವಿಶ್ವಾಸವನ್ನು ಕುಂದಿಸುತ್ತದೆ.

೯) ಗುರಿ /ಉದ್ದೇಶಗಳನ್ನು ಸಾಧಿಸುವ ಮಾರ್ಗದಿಂದ ನಮ್ಮನ್ನು ವಿಚಲಿತಗೊಳಿಸುತ್ತದೆ.

ನಿಮ್ಮ ಜೀವನದ ಸಂಘರ್ಷಾತ್ಮಕ ಸನ್ನಿವೇಶಗಳನ್ನು ವಿವರಿಸಿ  ನೀವು ಅವುಗಳನ್ನು ನಿಭಾಯಿಸಿದ
ರೀತಿಯನ್ನು ವಿವರಿಸಿ 
ವ್ಯಕ್ತಿ ಕ್ರಿಯೆ / ಪ್ರಯತ್ನ  ಸಂಬಂಧ ಪ್ರಕ್ರಿಯೆ /
ವಿಧಾನ 
ಸಮೂಹ / ಗುಂಪು      
ಸಂಸ್ಥೆ / ಸಂಘಟನೆ      

ಬಾಹ್ಯ ಹಾಗೂ ಆಂತರಿಕ ಸಂಘರ್ಷಗಳು

 • ಬಾಹ್ಯ-ಸಂಘರ್ಷಗಳು ಗುಂಪುಗಳ ನಡುವೆ ಭಿನ್ನಾಭಿಪ್ರಾಯದಿಂದಾಗುವ ವೈಮನಸ್ಯದ ಪರಿಣಾಮ.
 • ಆಂತರಿಕ ಸಂಘರ್ಷಗಳು ವ್ಯಕ್ತಿಯ ಒಳಗಿನ ವಿಚಾರಗಳು ಮತ್ತು ಒಲವುಗಳ ನಡುವೆ ಉಂಟಾಗುವ ವಿರೋಧಗಳೇ ಆಗಿದೆ.

ಸಂಘರ್ಷಕ್ಕೆ ಕೆಳಕಂಡ ಕಾರಣಗಳಿರಬಹುದು

 • ಯಾರು ಏನು ಮಾಡಬೇಕು?

  ಉದಾ- ನನಗಿಂತ ಅವರಿಗೆ ಉತ್ತಮ ಕೆಲಸ ಸಿಕ್ಕಿದೆ.

 • ಹೇಗೆ ಕೆಲಸಗಳನ್ನು ಮಾಡಬೇಕು?

  ಉದಾ- ನನ್ನ ಅಭಿಪ್ರಾಯಕ್ಕೆ ಬೆಲೆಯೇ ಇಲ್ಲ.

 • ವ್ಯಕ್ತಿತ್ವ ಮತ್ತು ಶೈಲಿ

  ಉದಾ- ನನಗೆ ಅವನು / ಅವಳು ಹತ್ತಿರ ಇರುವುದನ್ನು ಸಹಿಸಲು ಸಾಧ್ಯವಾಗುವುದಿಲ್ಲ.

ಸಂಘರ್ಷಗಳು ಎರಡು ಬಗೆಪರಿಹರಿಸಲಾಗದ ಅಥವಾ ಪರಿಹರಿಸಬಹುದಾದ ಸ್ಥಿತಿ.

. ಪರಿಹರಿಸಲಾಗುವ ಸನ್ನಿವೇಶ

ಪರಿವರ್ತನೆ, ನಿಯಂತ್ರಣ ಅಥವಾ ಬದಲಾವಣೆ

ಉದಾ: – ಸ್ವಚ್ಛತೆ, ದುರಸ್ತಿ, ಚರ್ಚೆಗಳು ಮುಂತಾದವು

ಪರಿಹಾರ ಗೆಲುವಿಗಾಗಿ ವ್ಯವಹರಿಸು – ಗೆಲುವಿನ ಸನ್ನಿವೇಶ

. ಪರಿಹರಿಸಲಾಗದ ಸನ್ನಿವೇಶ

ನಿಮಗೆ ನಿಯಂತ್ರಣ ಮತ್ತು ಆಯ್ಕೆಯ ಸ್ವಾತಂತ್ರ್ಯವಿಲ್ಲದ ಸನ್ನಿವೇಶಗಳು.

ಉದಾ: ಮೃತ್ಯು ಅಥವಾ ಪ್ರಾಣಾಂತಿಕವಾದ ದುರ್ಘಟನೆಯಿಂದ ಒದಗಿದ ಸ್ಥಿತಿ

ಪರಿಹಾರ ನಿಮ್ಮ ಪ್ರತಿಕ್ರಿಯೆ / ಪ್ರತ್ಯುತ್ತರಗಳನ್ನು ಬದಲಾಯಿಸಿಕೊಳ್ಳಿ.

೮೦ % ಸಂದರ್ಭಗಳು ಬಗೆಹರಿಸಲಾರದಂತಹವು, ೨೦% ಸಂದರ್ಭಗಳು ಬಗೆಹರಿಸಬಲ್ಲಂತಹವು

ಸಂಘರ್ಷಕ್ಕೆ ಸಾಮಾನ್ಯ ಕಾರಣಗಳು –  

a) ವಿರುದ್ಧ ದೃಷ್ಟಿಕೋನಗಳು

 • ಅಭಿಪ್ರಾಯಗಳಲ್ಲಿ ವ್ಯತ್ಯಾಸ.
 • ಯಾವ ಸಂದರ್ಭದಲ್ಲಿಯೂ ರಾಜಿಯಾಗಲು ಸಾಧ್ಯವಿಲ್ಲ ಎನ್ನುವ ಮನೋಭಾವ.

b) ಪ್ರಭಾವಶಾಲಿಯಲ್ಲದ ಸಂವಹನ

 • ಸಂವಹನದಲ್ಲಿ ಅಂತರ / ತಪ್ಪು ತಿಳುವಳಿಕೆ.

  (ಉದಾ- ಹೊಸ ನಿರ್ಣಯದ ಬಗ್ಗೆ ನನಗೆ ಸೂಚನೆಯೇ ಸಿಗಲಿಲ್ಲ)

 • ಸಂದೇಶ ನನಗೆ ತಡವಾಗಿ ತಲುಪಿದೆ.
 • ೯೦ % ಸಂಘರ್ಷಗಳಿಗೆ ಕಾರಣ ‘ಹೇಳಿ’ದ ಮಾತಲ್ಲ, ಆದರೆ ಆ ಮಾತನ್ನು ಹೇಳಿದ ‘ಶೈಲಿ’.
 • ಒರಟು ಮಾತು / ಚುಚ್ಚು ಮಾತು.
 • ಅಸಮಂಜಸ ಸ್ವರ ಮತ್ತು ಹಾವಭಾವ.

c) ಮನೆಯ ಕಷ್ಟಗಳ ಭಾವನೆಗಳನ್ನು ಮನಸ್ಸಿನಲ್ಲಿ ಹೊತ್ತು ತರುವುದು.

ಉದಾ – 

 • ಮನೆಯ ಸಮಸ್ಯೆಗಳ ಬಗ್ಗೆ ಚಿಂತಿಸುವುದು.
 • ಮನಸ್ಸಿನಲ್ಲಿ ಹಳೆಯ ವೈರತ್ವವನ್ನಿಟ್ಟುಕೊಂಡಿರುವುದು.
 • ಸ್ಥಾನಮಾನದ / ಗುರುತಿಸುವಿಕೆ ಬಗ್ಗೆ ದುರಾಸೆ.

d) ಒಬ್ಬರ ಬಗ್ಗೆ ಪೂರ್ವಗ್ರಹ (ಮೋಹ/ ವೈಮನಸ್ಯ) –

ಉದಾ

 • ಅವನು / ಅವಳು ಬಳಿಯಿದ್ದರೆ ನನಗೆ ಸಹಿಸಲಾಗುವುದಿಲ್ಲ.
 • ಅವನಿಲ್ಲದೆ ಅಭ್ಯಾಸ / ಕೆಲಸ ಮಾಡಲಾಗುವುದಿಲ್ಲ.

e) ಅವಿಶ್ವಾಸ 

ಉದಾ- 

 • ಅವಳು ಒಮ್ಮೆ ಮೋಸ ಮಾಡಿದ್ದಳು; ಆದ್ದರಿಂದ ಅವಳನ್ನು ಇನ್ನು ಮುಂದೆ ನಂಬಲಾರೆ.
 • ಶಿಕ್ಷಕ ಪಕ್ಷಪಾತಿ. ನಾನು ಅವರ ಸಲಹೆಗಳನ್ನು ಸ್ವೀಕರಿಸಲಾರೆ.

f) ಸ್ವಾಭಿಮಾನಕ್ಕೆ ಪೆಟ್ಟು

ಉದಾ – 

 • ನನಗೆ ಯೋಗ್ಯ ಗೌರವ ಸಿಗುತ್ತಿಲ್ಲ.
 • ವಾದದ ಮುಖ್ಯ ಉದ್ದೇಶ ಗೆಲುವು ಸಾಧಿಸುವುದಲ್ಲ, ಬದಲಾಗಿ, ಪ್ರಗತಿ ಹೊಂದುವುದೇ ಆಗಿದೆ.    

Joseph Joubert

 • ನನ್ನನ್ನು ಅನುಮಾನದಿಂದ ನೋಡಲಾಗುತ್ತಿದೆ.
 • ಅಧಿಕಾರಿಗಳು ಪ್ರಭುತ್ವ ಚಲಾಯಿಸುತ್ತಾರೆ
 • ನಾನು ನಿರ್ಲಕ್ಷ್ಯಕ್ಕೊಳಗಾಗಿದ್ದೇನೆ.

g) ನಿರಾಶೆ

ಉದಾ –

ಸ್ನೇಹಿತರು ನನಗೆ ಸಹಾಯ ಮಾಡುವುದಿಲ್ಲ.

ಶಿಕ್ಷಕರು ನನನ್ನು ಪ್ರೋತ್ಸಾಹಿಸುವುದಿಲ್ಲ.

ಒಂದೇ ಕೆಲಸವನ್ನು ಪದೇ ಪದೇ ಮಾಡಲು ಬೇಸರ ಆಗುತ್ತದೆ.

h) ಆರೋಗ್ಯದ ಸಮಸ್ಯೆಯಿಂದ ಮಾನಸಿಕ ಒತ್ತಡ 

೫.  ಚಟುವಟಿಕೆ – ಸ್ವಯಂ-ಮೌಲ್ಯಮಾಪನ

ಪ್ರಶ್ನೆ  ಹೌದು  ಇಲ್ಲ  ಆಗಾಗ್ಗೆ 
ನಾನು ಒಳ್ಳೆಯ ಕೇಳುಗನೇ?      
ಮನ ನೊಂದಾಗ ನಾನು ಕೋಪದಿಂದ ಪ್ರತಿಕ್ರಿಯಿಸುತ್ತೇನೆಯೇ?      
ನನ್ನ ಸ್ನೇಹಿತರು ತಪ್ಪು ಮಾಡಿದಾಗಲೂ ಅವರ ಪರ ವಹಿಸುತ್ತೇನೆಯೇ?      
ಸ್ನೇಹಿತರ ನಡುವಿನ ಸಂಘರ್ಷದ ಬಗ್ಗೆ ಮಾತುಕತೆ ನಡೆಯುವಾಗ ನಾನು ಮೌನವಾಗಿರುತ್ತೇನೆಯೆ?      
ನಾನು ಹಳೆಯದನ್ನು ಮರೆತು ಕ್ಷಮಿಸಬಲ್ಲೆನೆ?      
ರೋಹನ್ ಮತ್ತು ಸೋಹನ್ ಕಾಡಿನಲ್ಲಿ ಸುತ್ತಾಡುತ್ತಿದ್ದರು. ಮಾತುಕತೆ ಘೋರ ವಾದಕ್ಕೆ ತಿರುಗಿತು. ರೋಹನ್ ಕೋಪದಿಂದ ಸೋಹನ್‌ನ ಕೆನ್ನೆಗೆ ಹೊಡೆದ. ಆದರೆ ಸೋಹನ್ ಹಿಂತಿರುಗಿ ಹೊಡೆಯದೆ ಮರಳ ಮೇಲೆ ಬರೆದ – “ರೋಹನ್ ಇಂದು ನನಗೆ ಹೊಡೆದ”. ಅವರು ಮುಂದೆ ನಡೆಯುತ್ತಿರುವಾಗ ಆಕಸ್ಮಿಕವಾಗಿ ಸೋಹನ್ ಒಂದು ಹಳ್ಳದಲ್ಲಿ ಬಿದ್ದು ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡ. ರೋಹನ್ ತಕ್ಷಣವೇ ಅವನನ್ನು ಮೇಲಕ್ಕೆತ್ತಿದ. ಹೊರಗೆ ಬಂದ ಸೋಹನ್ ಒಂದು ಬಂಡೆಯ ಮೇಲೆ ಬರೆದ – “ರೋಹನ್ ನನ್ನ ಪ್ರಾಣ ಉಳಿಸಿದನು”. ಕುತೂಹಲದಿಂದ ರೋಹನ್ ಕೇಳಿದ “ಒಂದನ್ನು ಮರಳ ಮೇಲೆ ಮತ್ತು ಇನ್ನೊಂದನ್ನು ಬಂಡೆಯ ಮೇಲೆ ಬರೆಯುವ ಉದ್ದೇಶವೇನು? ಸೋಹನ್ ಉತ್ತರಿಸಿದ – “ಯಾರಾದರೂ ನೋಯಿಸಿದಾಗ, ಸಮಯದ ಅಲೆಯಲ್ಲಿ ಕೊಚ್ಚಿ ಹೋಗುವಂತೆ ಮರಳ ಮೇಲೆ ಬರೆಯಬೇಕು. ಯಾರಾದರೂ ಸಹಾಯ ಮಾಡಿದಾಗ ಸಮಯದ ಅಲೆಯಿಂದ ಅಳಿಸಿ ಹೋಗದಂತೆ ಕಲ್ಲಿನ ಮೇಲೆ ಬರೆಯಬೇಕು’.

ಮರೆಯಲು ಮತ್ತು ಕ್ಷಮಿಸಲು ಸಾಧ್ಯವಾದಲ್ಲಿ ಸಂಘರ್ಷಗಳ ಸಾಧ್ಯತೆ ಕಡಿಮೆಯಾಗುತ್ತದೆ.
(ಚಿತ್ರ ೨೩೩) 

 
ನಾಲಿಗೆ ಮತ್ತು ಹಲ್ಲು ಒಂದು ವಾದದಲ್ಲಿ ತೊಡಗಿದವು. ಹಲ್ಲು ಗರ್ವದಿಂದ ಟೀಕಿಸಿತು – “ನೀನು ಮಾಂಸದ ಮುದ್ದೆ!  ನಾನು ನಿನ್ನನ್ನು ಗಟ್ಟಿಯಾಗಿ ಕಚ್ಚಿದರೆ, ನೀನು ಎರಡು ತುಂಡಾಗುತ್ತೀಯಾ.
ನಾಲಿಗೆಗೆ ತುಂಬಾ ನೋವಾಯಿತು ಮತ್ತು ಪ್ರತಿ ಉತ್ತರ ನೀಡುತ್ತಾ ಹೇಳಿತು –
“ಪಾಪಿಗಳೆ, ಎಚ್ಚರಿಕೆ! ನಾನು ಯಾರಿಗಾದರೂ ಕೆಟ್ಟ ಮಾತುಗಳನ್ನು ಆಡಿದರೆ, ಒಂದೇ ಸಲಕ್ಕೆ ನೀವೆಲ್ಲರೂ ಚೂರು ಚೂರಾಗುತ್ತೀರಿ”!
ಪ್ರತಿಯೊಬ್ಬರೂ ತಮ್ಮ ತಮ್ಮ ಸ್ಥಾನಗಳಲ್ಲಿ ಶ್ರೇಷ್ಠ – ಯಾವತ್ತೂ ಇನ್ನೊಬ್ಬರ ಪಾತ್ರಗಳ ಬಗ್ಗೆ ಪ್ರಚೋದನಕಾರಿ ಹೇಳಿಕೆಗಳನ್ನು ಮಾಡಬೇಡಿ.
 

ಸಂಘರ್ಷದ ನಿವಾರಣೆಗೆ ಪ್ರಕಾರಗಳು

ಪೀಟರ್, ಫಿರೋಜ್, ಪಾಟೀಲ್, ಸುಮೀತ ಮತ್ತು ಪ್ರಿಯಾಂಕ ಕಾಲೇಜಿನ ಹೌಸ್ ಕ್ಯಾಪ್ಟನ್‌ಗಳು ಆಗಿದ್ದರು. ಕಾಲೇಜಿನ ನಿಯಮವನ್ನು ಜಾರಿಗೊಳಿಸುವಾಗ ಅವರಲ್ಲಿ ಭಿನ್ನಾಭಿಪ್ರಾಯಗಳು ಬೆಳೆದುಕೊಂಡವು. ಇದೇ ಸಂಘರ್ಷವಾಯಿತು. ಅವರೊಬ್ಬೊಬ್ಬರ ಅಭಿಮತ ಹೀಗಿದ್ದವು-

ವಿದ್ಯಾರ್ಥಿ  ಅಭಿಪ್ರಾಯ  ಸಂಘರ್ಷದೆಡೆ ಸಾಧನಗಳು  ವರ್ತನೆ 
ಪೀಟರ್  ನಿಮ್ಮೆಲ್ಲರಿಗಿಂತ ನನಗೆ ಚೆನ್ನಾಗಿ ತಿಳಿದಿದೆ. ಆದ್ದರಿಂದ ನನ್ನ ಮಾತೇ ನಡೆಯಬೇಕು. ಇಲ್ಲದಿದ್ದಲ್ಲಿ ನಾನು ಬಿಟ್ಟು ಹೊರಡುತ್ತೇನೆ.

 
ಬಲವಂತ 

ಉದ್ದೇಶಏನಾದರೂ ಮಾಡಿ ತನ್ನ ಮಾತೇ ನಡೆಯುವಂತಾಗಬೇಕು.
ಪರಿಣಾಮಅಧಿಕಾರ ಚಲಾಯಿಸುವಿಕೆ, ಬೇರೆಯವರಿಗೆ ಅವಮಾನ ಮಾಡುವುದು. 
ಶಾರ್ಕ್ಮೀನಿನಂತೆ ಆಕ್ರಮಣಕಾರಿ ಸ್ವಭಾವ. ದಬ್ಬಾಳಿಕೆ ಹಾಗೂ ತನ್ನ ಮಾತೇ ನಡೆಯಬೇಕೆಂಬ ಹಠ.

 
ಫಿರೋಜ್  ಹೊಸ ನಿಯಮಗಳನ್ನು ರಚಿಸುತ್ತ ಸಮಯವನ್ನೇಕೆ ವ್ಯರ್ಥ ಮಾಡಬೇಕು? ಎಂದಿನಂತೆಯೇ ಎಲ್ಲ ನಡೆದುಕೊಂಡುಹೋಗಲಿ. ಹೇಗಿದ್ದರೂ ನಾವು ಕ್ಯಾಪ್ಟನ್‌ಗಳಂತೂ ಆಗಿಬಿಟ್ಟಿದ್ದೇವೆ. ಯಾರೂ ನಮ್ಮನ್ನು ಪ್ರಶ್ನಿಸುವಂತಿಲ್ಲ. ಪಲಾಯನವಾದ 

ಉದ್ದೇಶಸಂಘರ್ಷದಿಂದ ತಪ್ಪಿಸಿಕೊಳ್ಳುವುದು.
ಪರಿಣಾಮ ನೀವು ಉದಾಸೀನ ಮಾಡುವ ಸ್ವಭಾವದವರೆನ್ನುವ ಅಭಿಪ್ರಾಯ ಮೂಡೂತ್ತದೆ. 
ಆಮೆಯಂತೆ ತನ್ನೊಳಗೆ ತಾನೇ ಸೇರಿ, ಸಂಘರ್ಷವನ್ನು ಎದುರಿಸದೆ ತಪ್ಪಿಸಿಕೊಳ್ಳುವುದು ದೂರವಿರುವುದು.

ಪಾಟೀಲ್  ಅಯ್ಯೋ, ಯಾಕೆ ಈ ತಲೆ ನೋವು. ಬೇಗ ಯಾವುದೋ ಒಂದನ್ನು ನಿರ್ಧರಿಸಿ ಮನೆಗೆ ಹೊರಡೋಣ. ರಾಜಿ ಮಾಡಿಕೊಳ್ಳುವಿಕೆ ಉದ್ದೇಶ ಆದಷ್ಟು ಬೇಗ ಯಾವುದೋ ಒಂದು ಒಪ್ಪಂದಕ್ಕೆ ಬರುವುದು 

ಪರಿಣಾಮಪರಿಹಾರ ಹುಡುಕುವುದಕ್ಕಿಂತ ವಾದವನ್ನು ಮುಗಿಸುವ ಆತುರ. 
ನರಿಯಂತೆಚಿಕ್ಕ ಲಾಭಕ್ಕಾಗಿ ಗುರಿಯನ್ನು ಕೈಬಿಟ್ಟು ರಾಜಿಯಾಗುತ್ತಾರೆ.

ಸುಮೀತ  ಆಯ್ತು ಪೀಟರ್, ವಾದಬೇಡ ನೀನು ಹೇಳಿದಂತೆ ಆಗಲಿ.  ನಮ್ಮ ಸ್ನೇಹವನ್ನು ಹಾಳುಮಾಡಿಕೊಳ್ಳುವುದು ಬೇಡ. ಬಿಟ್ಟುಕೊಡುವುದು ಉದ್ದೇಶಇನ್ನೊಬ್ಬರಿಗೆ ನೋವನ್ನುಂಟು ಮಾಡಬಾರದು.

ಪರಿಣಾಮ ನ್ಯಾಯ ಸಿಕ್ಕಬಹುದು ಸಿಗದೇ ಹೋಗಬಹುದು. ಜನರು ನಿಮ್ಮ ಮೃದುತ್ವವನ್ನು ದುರುಪಯೋಗಪಡಿಸಿಕೊಳ್ಳಬಹುದು. 
ಟೆಡ್ಡಿ ಬೇರ್ನಂತೆ‘ಎಲ್ಲರಿಗೂ ಒಳ್ಳೆಯನಾಗುವ’ ಭರದಲ್ಲಿ ಲಕ್ಷ್ಯ ಮತ್ತು ನ್ಯಾಯವನ್ನು ಕೈಬಿಡುವರು.  

ಪ್ರಿಯಾಂಕ  ಹೇಗಾದರೂ ಮಾಡಿ ನ್ಯಾಯಯುತ ಪರಿಹಾರವನ್ನು ಹುಡುಕಲೇ ಬೇಕು. ಸಮಂಜಸವಾದ ರೀತಿಯಲ್ಲಿ  ಚರ್ಚೆ ಮಾಡಿ ಒಂದು ನಿರ್ಧಾರಕ್ಕೆ ಬರೋಣ. ಎಲ್ಲರ ಅಭಿಪ್ರಾಯಕ್ಕೂ ಮನ್ನಣೆ ಇರಲಿ. ಸಂಘಟನಾತ್ಮಕ ಉದ್ದೇಶಜೊತೆಗೂಡಿ ಸಮಸ್ಯೆಯನ್ನು ಪರಿಹರಿಸುವುದು. 

ಪರಿಣಾಮ ಎಲ್ಲರನ್ನೂ ಸೇರಿಸಿಕೊಂಡು ಪರಿಹಾರವನ್ನು ಕಂಡುಕೊಳ್ಳುವುದು. 
ಗೂಬೆಯಂತೆ ನ್ಯಾಯಸಮ್ಮತ ವ್ಯವಹಾರಗಳಲ್ಲಿ ವಿಶ್ವಾಸ. ಇಬ್ಬರಿಗೂ ಒಪ್ಪಿಗೆಯಾಗುವ ಪರಿಹಾರವನ್ನು ಹುಡುಕಬೇಕು ಎನ್ನುವ ಭಾವ.

ನಿಮ್ಮ ಸ್ನೇಹಿತ ನಿಮಗೆ ತೊಂದರೆ ಕೊಟ್ಟರೆ, ಇನ್ನೂ ಸ್ನೇಹಿತನಂತೆ ನಟಿಸುತ್ತಿರಬೇಡೀ—-ಆತನನ್ನು ದ್ವೇಷಿಸಲೂಬೇಡಿ, ಸಂಘರ್ಷವನ್ನು ಚಾಕಚಕ್ಯತೆಯಿಂದ ಪಹಿಹರಿಸಲು ಪ್ರಯತ್ನಿಸಿ.

ಸಂಘರ್ಷ ಪರಿಹಾರದ ಮಾರ್ಗಗಳು:-

. ನೈತಿಕತೆ

 • ವೈಯಕ್ತಿಕ ಸಂಬಂಧ ಮತ್ತು ಭಾವನೆಗಳನ್ನು ಬದಿಗೊತ್ತಿ.
 • ಆಯಾಸವೋ ಹಸಿವೆಯೋ ಆಗಿದ್ದರೆ ನೀವು ನಿಮ್ಮ ಜೊತೆಗಿರುವವರಿಗೆ ಸೌಖ್ಯವುಂಟಾಗುವ ತನಕ ಕಾಯಿರಿ.
 • ಸಮಸ್ಯೆಯನ್ನು ಎದುರಿಸಿ, ವ್ಯಕ್ತಿಯನ್ನಲ್ಲ.

. ಶೋಧಿಸಿ 

 • ಸಂಘರ್ಷ ಹೇಗೆ ಹುಟ್ಟಿತೆಂದು ವಿಶ್ಲೇಷಿಸಿ.
 • “ಯಾವುದೂ ಸಾಧ್ಯವಿಲ್ಲ” ಎಂಬ ನಿರ್ಣಯಕ್ಕೆ ಬೇಗ ಬರಬೇಡಿ.
 • ಹೊಸ ಸಮಾಧಾನಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿ.
 • ಸಮಯ, ಸ್ಥಾನ, ಸ್ಥಿತಿ ಮತ್ತು ವ್ಯಕ್ತಿಗಳ ಬಗ್ಗೆ ಗಮನಿಸಿ ಸೃಜನಶೀಲ ಪರಿಹಾರಗಳನ್ನು ಹೊರ ತನ್ನಿ.

. ಆಲಿಸಿರಿ 

 • ಕೊನೆಯ ತನಕ ವಾದಗಳನ್ನು ತಾಳ್ಮೆಯಿಂದ ಆಲಿಸಿ.
 • ಮತ್ತೊಬ್ಬರ ಅಭಿಪ್ರಾಯವನ್ನು ಅರ್ಥ ಮಾಡಿಕೊಳ್ಳಿ.
 • ಅಡಚಣೆಯಿಲ್ಲದೆ ಮತ್ತೊಬ್ಬರ ಜೊತೆ ಮಾತನಾಡಿ.
ಸಕ್ರಿಯ ಕೇಳುವಿಕೆ ಹೇಗೆ ಸಾಧ್ಯ

 • ವ್ಯಕ್ತಿಯನ್ನು ನೇರವಾಗಿ ಎದುರಿಸಿ
 • ಔದಾರ್ಯವನ್ನು ಪ್ರದರ್ಶಿಸುವ ಭಂಗಿಯಲ್ಲಿ ಕುಳಿತುಕೊಳ್ಳಿ
 • ಕೇಳುವಾಗ ಆ ವ್ಯಕ್ತಿಯತ್ತ ಸ್ವಲ್ಪ ಮುಂದೆ ಬಾಗಿ
 • ಸುಮಾರು ೧ ಮೀಟರ್‌ನಷ್ಟು ಅಂತರವಿರಲಿ
 • ಕೇಳುವಾಗ ನಿಮ್ಮಿಬ್ಬರ ಕಣ್ಣ ನೋಟಗಳು ಕಲೆತಿರಲಿ
 • ಕೇಳುವಾಗ ವಿಶ್ರಾಂತಭಾವದಲ್ಲಿರಿ 
 

. ಕೌಶಲಗಳು

 • ಸಮಸ್ಯೆಯನ್ನು ಬಗೆಹರಿಸಲು ಆದಷ್ಟು ಮಟ್ಟಿಗೆ ಮೂರನೆಯವರ ಸಹಾಯಬೇಡ.
 • ಒಂದು ಬಾರಿಗೆ ಒಂದೇ ಸಮಸ್ಯೆಯ ಬಗ್ಗೆ ಯೋಚಿಸಿ.
 • ಬೇರೆಯವರ ಹಾವಭಾವಗಳಿಂದ ಅವರನ್ನು ತಿಳಿಯಲು ಯತ್ನಿಸಿ.
 • ಬೇರೆಯವರ ದೃಷ್ಠಿಯಿಂದಲೂ ಸಮಸ್ಯೆಯನ್ನು ಪರಿಶೀಲಿಸಿ.
 • ಪರಸ್ಪರರ ಅಭಿಪ್ರಾಯಗಳ ಬಗ್ಗೆ ಆದರವಿರಲಿ.
 • ಸಾಧ್ಯವಾದಷ್ಟು ಉಭಯ ಪಕ್ಷಗಳನ್ನೂ ತೃಪ್ತಿಪಡಿಸಿ.  ಮೃದು ಶಬ್ದಗಳನ್ನು ದೃಢ ವಾದಗಳನ್ನು ಬಳಸಿ.
 • ಏನೇ ಆಗಲಿ ನೈತಿಕತೆಯನ್ನು ಕೈ ಬಿಡಿಬೇಡಿ.
ಮೃದು ಶಬ್ದಗಳನ್ನು ದೃಡ ವಾದಗಳನ್ನು ಬಳಸಿ
ಆಂಗ್ಲ ಗಾದೆ
ಸಂಘರ್ಷಣೆಗೆ ಒಳಗಾಗದವರಿಗೆ ಕಿವಿ ಮಾತು

೧) ಯಾರ ಪರ ವಹಿಸಬೇಡಿ.

೨) ಚಾಡಿ ಮಾತು ಹೇಳದಿರಿ / ಕೇಳದಿರಿ.

೩) ಸಂಘರ್ಷವನ್ನು ಉತ್ತೇಜಿಸಬೇಡಿ.

 

 
 

ಅಂತಿಮ ನಿರ್ಣಯ ಮಾಡುವಾಗ

 • ಅಗತ್ಯವಿದ್ದರೆ, ನ್ಯಾಯವೆನಿಸಿದರೆ ಹೊಂದಾಣಿಕೆ- ರಾಜಿ ಮಾಡಿಕೊಳ್ಳಿ.
 • ಅನ್ಯಾಯದ ವರ್ತನೆ ಕಂಡುಬಂದಲ್ಲಿ ನ್ಯಾಯಕ್ಕಾಗಿ ಬಲವಂತದ ಅಭಿಮತವನ್ನು ಮಂಡಿಸುವುದು ತಪ್ಪಲ್ಲ.
 • ಎಲ್ಲರಿಗೂ ಒಪ್ಪಿಗೆಯಾಗಬಲ್ಲ ಹಾಗೂ ನ್ಯಾಯವೆಸಗುವಂತಹ ಪರಿಹಾರವನ್ನು ಹುಡುಕಿ. ಇದರಿಂದಾಗಿ ಸಂಘರ್ಷ ಮತ್ತೆ ಮುಂದುವರೆಯುವುದನ್ನು ತಪ್ಪಿಸಬಹುದು.
 • ಆದಷ್ಟು ಗೆಲುವಿನ ನಿರ್ಧಾರವಿರಲಿ (ಎರಡು ಪಕ್ಷಗಳಿಗೂ ತೃಪ್ತಿ ಹಾಗೂ ಉದ್ದೇಶ ಸಿದ್ಧಿ ಆಗುವಂತಹ ನಿರ್ಧಾರ)
 • ವಾದದಲ್ಲಿ ಎರಡು ಪಕ್ಷದವರಿಗೂ ‘ನಮಗೆ ಸಮಾನ ಪ್ರಾಮುಖ್ಯತೆ ದೊರಕಿದೆ’ ಎಂದೆನಿಸುವಂತೆ ನಡೆದುಕೊಳ್ಳಿ.
 • ಭಿನ್ನಾಭಿಪ್ರಾಯಗಳನ್ನು ಅಂಗೀಕರಿಸಿ
 • ಪರಸ್ಪರರ ಆಸಕ್ತಿಗಳನ್ನು ಗೌರವಿಸಿ
 • ನಿಮ್ಮ ಪ್ರೇರಣ ಕೌಶಲವನ್ನು ಹೆಚ್ಚಿಸಿಕೊಳ್ಳಿ
 • ಆಲಿಸುವ ಕೌಶಲಗಳನ್ನು ಹೆಚ್ಚಿಸಿಕೊಳ್ಳಿ
 • ಯಾಂತ್ರಿಕ ಕಲಾಪಗಳನ್ನು ಬಿಟ್ಟು ಸೃಜನಶೀಲರಾಗಿ
 • ವೈಮನಸ್ಯವಿಲ್ಲದೆ ಒಪ್ಪುವುದನ್ನು ಕಲಿಯಿರಿ
 • ಗೆಲುವಿನ ಪರಿಹಾರಗಳು ಸಿಗುವುದೆಂಬ ಆತ್ಮವಿಶ್ವಾಸವಿರಲಿ.
 • ಕೋಪ ಮತ್ತು ಇನ್ನಿತರ ಭಾವನೆಗಳನ್ನು ಗುರುತಿಸಿ/ಒಪ್ಪಿಕೊಳ್ಳಿ/ಪರಿಷ್ಕರಿಸಿಕೊಳ್ಳಿ.
   
ಪ್ರಯತ್ನಿಸುತ್ತಲೇ ಇರಿ

ಒಂದು ವೇಳೆ ನೀವು ಒಪ್ಪಂದಕ್ಕೆ ತಲುಪದಿದ್ದರೂ, ಆತಂಕಗೊಳ್ಳದೆ ಮತ್ತೊಮ್ಮೆ ಪ್ರಯತ್ನಿಸಿ.

ಕೆಲವು ಬಾರಿ ಸಂಘರ್ಷವನ್ನು ಹಂತ ಹಂತವಾಗಿ ಪರಿಹರಿಸಲು ಪ್ರಯತ್ನಿಸಿ. ಅದರಿಂದಾಗಿ ಪ್ರತಿಯೊಬ್ಬರಿಗೂ ಆಲೋಚಿಸಲು ಸಮಯ ದೊರಕುತ್ತದೆ ಎಂದೂ ಪ್ರಯತ್ನವನ್ನು ಕೈ ಬಿಡಬೇಡಿ.

ಮಾಡಬೇಕಾದದ್ದು  ಮಾಡಬೇಕಾದದ್ದು  ಮಾಡಬಾರದ್ದು  ಮಾಡಬಾರದ್ದು 
ಒಂದಲ್ಲ ಒಂದು ಪರಿಹಾರ ಇದ್ದೇ ಇದೆಯೆಂದು ನಂಬುವುದು ನೀವು ಕೇಳುತ್ತಿದ್ದೀರಿ ಮತ್ತು ಅರ್ಥಮಾಡಿಕೊಂಡಿದ್ದೀರಿ ಎಂಬುದನ್ನು ಆ ವ್ಯಕ್ತಿಗೆ ಅರ್ಥಪಡಿಸಿ ಪರಿಣಾಮಗಳ ಭಯ ಆಪಾದಿಸುವುದು
ಬೇರೆ ವ್ಯಕ್ತಿಯ ಅಗತ್ಯಗಳನ್ನು  ಗೌರವಿಸುವುದು ಆಲಿಸುತ್ತಿರುವಾಗ, ‘ನಾನು ಮುಂದೆ ಏನು ಹೇಳಬೇಕು?’ ಎನ್ನುವುದನ್ನೇ ಚಿಂತಿಸುತ್ತ ಆ ಸಮಯವನ್ನು ವ್ಯರ್ಥ ಮಾಡಬೇಡಿ ಹಳೆಯ ವಿಷಯಗಳನ್ನು ಕೆದಕುವುದು ಟೀಕಿಸುವುದು
ಕೊನೆಯವರೆಗೂ ಉದ್ದೇಶವರಿತು ಆಲಿಸುವುದು ಒಬ್ಬರಿಗೊಬ್ಬರು ಮಾತಾಡುವಾಗ ಪರಸ್ಪರರನ್ನು ನೋಡುವುದು ಆಜ್ಞೆ ಮಾಡುವುದು ಅವಹೇಳನ
ಮಾಡುವುದು      
ಬೇರೆಯವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವುದು ಆಮೇಲೆಯೂ ನಿರಂತರ ಸಂಪರ್ಕ ಇಟ್ಟುಕೊಂಡು ಸ್ನೇಹವನ್ನು ಬೆಳೆಸುವುದು ಎಚ್ಚರಿಕೆ / ಬೆದರಿಸುವುದು ಊಹಿಸುವುದು
ಪರಸ್ಪರರಲ್ಲಿ ಯಾವ ಅಡೆತಡೆಯಿಲ್ಲದೆ ಮಾತನಾಡುವುದು ನೀವು ಯಾವ ವಿಚಾರವನ್ನು ಒಪ್ಪುವಿರಿ ಮತ್ತು ಯಾವುದನ್ನು ಒಪ್ಪುವುದಿಲ್ಲ ಎಂಬುದನ್ನು ತಿಳಿಯಪಡಿಸಿ ಉಪದೇಶಗೈಯುತ್ತ ಹೋಗುವುದು ಪ್ರಚೋದನಾತ್ಮಕ ಟೀಕೆ
    ತನ್ನ ಪರ ವಹಿಸಲು ಸ್ನೇಹಿತರನ್ನು ಅಥವಾ ಕುಟುಂಬದವರನ್ನೂ ಎಳೆದು ತರುವುದು ‘ಹೇಳಿಕೆ’ಗಳನ್ನು ನೀಡುವುದು
      ಸಾರ್ವಜನಿಕರ ಗಮನಕ್ಕೆ ಬರುವಂತೆ ಸಂಘರ್ಷವನ್ನು ನಡೆಸುವುದು

. ಚಟುವಟಿಕೆಪಾತ್ರಾಭಿನಯ 

ವಿಷಯ – ಕಾಲೇಜಿನ ಅವರಣದಲ್ಲಿ ಒಂದು ಕಾಲ್ಪನಿಕ ಸಂಘರ್ಷದ ಚಿತ್ರಣ.

 • ಸಮವಸ್ತ್ರವನ್ನು ಜಾರಿಗೊಳಿಸುವ ಕುರಿತಾಗಿ ವಿದ್ಯಾರ್ಥಿಗಳಿಂದ ವಿರೋಧ ಹಾಗೂ ಶಿಕ್ಷಕರಿಂದ ಸಮಾಧಾನಪಡಿಸುವಿಕೆ.
 • ಕಾಲೇಜಿನ ಉಪನ್ಯಾಸಕರು ಕಾಲೇಜಿನ ಆವರಣದಲ್ಲಿ ಶಿಸ್ತನ್ನು ಅಳವಡಿಸಲು ಮಾಡಿದ ಭಾರಿ ಪ್ರಯತ್ನಗಳು.

 ಗ್ರಂಥ ಸಲಹೆ:

Basic managerial skills for all. E.H. Mcgrath. Prentice Hall. India 

 ಅಂತರ್ಜಾಲ ಮೂಲ:

http://managementhelp.org/intrpsnl/basics.htm

 .