ಮೇಲಿನ ಚಿತ್ರವನ್ನು ನೋಡಿ ವಿಶ್ಲೇಷಿಸಿ, ನಿಮ್ಮ ಅನಿಸಿಕೆಗಳನ್ನು ಬರೆಯಿರಿ

   

 
 

ಅಧ್ಯಾಯದ ಪರಿಕಲ್ಪನೆ

ಅಧ್ಯಾಯದ ಕಲಿಕೆಯ ಉದ್ದೇಶಗಳು

 • ತಂಡದ ಲಕ್ಷಣಗಳನ್ನು ಅರಿಯುವುದು.
 • ‘ಗುಂಪು’ ಮತ್ತು ‘ತಂಡ’ಗಳ ವ್ಯತ್ಯಾಸವನ್ನು ಅರಿಯುವುದು.
 • ತಂಡದ ಕಾರ್ಯದ ಬಗ್ಗೆ ವಿಶ್ಲೇಷಣೆ- ಮಂಜುಗಡ್ಡೆಯ ಸಿದ್ಧಾಂತ.
 • ತಂಡದ ವಿಕಸನದ ಹಂತಗಳ ಕುರಿತಾಗಿ ಅರಿವು.
 • ತಂಡವು ಅತ್ಯುತ್ತಮ ಕಾರ್ಯವನ್ನು ನಿರ್ವಹಿಸಲು ಏಕೆ ಸಾಧ್ಯವಾಗುವುದಿಲ್ಲ ?

ಚಟುವಟಿಕೆ
ಪ್ರಭಾವೀ
ತಂಡದ ನಿರ್ಮಾಣಕ್ಕಾಗಿ ಬಳಸುವ ಯೋಜನೆಗಳನ್ನು ಚರ್ಚಿಸಿ

ಪರಿಚಯ

ತಂಡಕಾರ್ಯಕ್ಕೆ ಸಂಬಂಧಿಸಿದ ಹಳೆಯ ಸುಪ್ರಸಿದ್ಧ ಕಥೆಆಮೆ ಮತ್ತು ಮೊಲ

ಹಿಂದೆ ಒಂದು ಬಾರಿ ಅಮೆ ಮತ್ತು ಮೊಲದ ನಡುವೆ ‘ಇಬ್ಬರಲ್ಲಿ ಯಾರು ವೇಗವಾಗಿ ಓಡುತ್ತಾರೆ’ ಎಂದು ವಾದವಾಯಿತು. ನಿರ್ಣಯ ಮಾಡಿಯೇ ಬಿಡೋಣವೆಂದು ಇಬ್ಬರೂ ಓಟದ ಪಂದ್ಯಕ್ಕಿಳಿದರು. ಅದಕ್ಕಾಗಿ ಒಂದು ಮಾರ್ಗವನ್ನು ಆಯ್ದುಕೊಂಡದ್ದೂ ಆಯಿತು. ಪಂದ್ಯ ಪ್ರಾರಂಭವಾಯಿತು. ಮೊಲವು ರಭಸದಿಂದ ಓಡಿ ಮುನ್ನಡೆ ಸಾಧಿಸಿತು. ತಾನು ಆಮೆಗಿಂತ ಬಹಳ ಮುಂದೆ ಇದ್ದೇನೆ ಎಂದು ತಿಳಿದ ಮೊಲವು- ‘ಹೇಗಿದ್ದರೂ ಆಮೆಯು ಬಹಳ ಹಿಂದಿದೆ. ಅದು ಬರುವಷ್ಟರೊಳಗೆ, ನಾನು ಇಲ್ಲೇ ಮರದ ಕೆಳಗೆ ಸ್ವಲ್ಪ ವಿಶ್ರಮಿಸಿ ಆ ಬಳಿಕ ಓಟವನ್ನು ಮುಂದುವರೆಸುತ್ತೇನೆ’ ಎಂದು ಆಲೋಚಿಸಿ ಮಲಗಿತು. ಸ್ವಲ್ಪ ಹೊತ್ತಿನಲ್ಲೇ ನಿದ್ರೆ ಆವರಿಸಿತು. ಅಷ್ಟರಲ್ಲಿ ಆಮೆಯು ನಡೆಯುತ್ತ ಬಂದು ಗುರಿಯನ್ನು ಮುಟ್ಟಿತು. ಯಾವ ತರಹದ ವಿವಾದವೂ ಇಲ್ಲದೆ ಜಯ ಗಳಿಸಿತು. ನಿದ್ರೆಯಿಂದ ಎಚ್ಚೆತ್ತಾಗಲೆ ಮೊಲಕ್ಕೆ ಅರಿವಾದದ್ದು- ತಾನು ಸೋತಿದ್ದೇನೆ ಎಂದು. ಈ ಕಥೆಯ ನೀತಿ – ನಿಧಾನವಾದರೂ ನಿರಂತರವಾದ ಪ್ರಯತ್ನದಿಂದ ಸಫಲತೆ ಸಿದ್ಧಿಸುತ್ತದೆ(‘slow and steady wins the race’). ಈ ಕಥೆ ನಮಗೆಲ್ಲಾ ಚಿರಪರಿಚಿತವೇ.

ಸ್ವಾರಸ್ಯವೇನೆಂದರೆ ಈ ಕಥೆ ಮುಂದುವರೆಯುತ್ತದೆ….!

ಪಂದ್ಯದಲ್ಲಿ ಸೋತ ಮೊಲಕ್ಕೆ ನಿರಾಶೆಯಾಯಿತು. ಅದು ಆತ್ಮಾವಲೋಕನ ಮಾಡಿಕೊಂಡಿತು. ತನ್ನ ಸೋಲಿಗೆ ಮಿತಿಮೀರಿದ ನಂಬಿಕೆ, ಎಚ್ಚರಗೇಡಿತನ ಮತ್ತು ಔದಾಸೀನ್ಯಗಳೇ ಕಾರಣ. ತನ್ನಲ್ಲಿ ಇಂತಹ ಮಿತಿಮೀರಿದ ಆತ್ಮವಿಶ್ವಾಸವಿರದಿದ್ದರೆ, ಆಮೆಗೆ ತನ್ನನ್ನು ಸೋಲಿಸುವ ಸಾಮರ್ಥ್ಯ ಖಂಡಿತವಾಗಿ ಇರುತ್ತಿರಲಿಲ್ಲ ಎಂದು ಅರಿವಾಯಿತು.

ಮೊಲವು ಆಮೆಯನ್ನು ಮತ್ತೆ ಪಂದ್ಯಕ್ಕೆ ಆಹ್ವಾನಿಸಿತು. ಆಮೆಯೂ ಒಪ್ಪಿತು. ಈ ಬಾರಿ ಮೊಲವು ಎಲ್ಲೂ ನಿಲ್ಲದೆ ಓಡಿ ಗುರಿಯನ್ನು ಮುಟ್ಟಿ ಬಹಳ ದೊಡ್ಡ ಅಂತರದಲ್ಲಿ ಜಯ ಗಳಿಸಿತು. ಈ ಕಥೆಯ ನೀತಿ- ಕೇವಲ ವೇಗ ಮತ್ತು ಸ್ಥಿರತೆಯುನಿಧಾನ ಹಾಗೂ ನಿರಂತರ ಪ್ರಯತ್ನದ ಮೇಲೆ ಜಯ ಸಾಧಿಸುತ್ತದೆ. (‘fast and steady wins over slow and steady’). ನಿಮ್ಮ ಸಂಸ್ಥೆಯಲ್ಲಿ ಇಬ್ಬರು ವ್ಯಕ್ತಿಗಳಿದ್ದಾರೆ ಎಂದು ಭಾವಿಸಿ. ಒಬ್ಬರು ನಿಧಾನ ಮತ್ತು ವ್ಯವಸ್ಥಿತ ಸ್ವಭಾವದವರು ಹಾಗೂ ನಂಬಿಕಸ್ಥರು (reliable). ಇನ್ನೊಬ್ಬರು ‘ವೇಗ’ದವರು ಹಾಗೂ ನಂಬಿಕಸ್ಥರು. ವೇಗ ಹಾಗೂ ನಂಬಿಕಸ್ಥ ವ್ಯಕ್ತಿಯು ನಿಧಾನ ಹಾಗೂ ನಂಬಿಕಸ್ಥ ವ್ಯಕ್ತಿಗಿಂತ ವೇಗವಾಗಿ ಸಂಸ್ಥೆಯಲ್ಲಿ ಯಶಸ್ಸನ್ನು ಕಾಣುತ್ತಾನೆ. ನೀತಿ- ನಿಧಾನ ಹಾಗೂ ನಿರಂತರ ಪ್ರಯತ್ನ ಒಳ್ಳೆಯದೇ, ಆದರೆ ವೇಗ ಹಾಗೂ ನಂಬಿಕಸ್ಥರಾಗಿರುವುದು ಇನ್ನೂ ಒಳ್ಳೆಯದು.

ಸ್ವಾರಸ್ಯವೆಂದರೆ ಇಲ್ಲಿಗೇ ಕಥೆ ಮುಗಿಯುವುದಿಲ್ಲ….

ಈಗ ಆಮೆಯು ಆಲೋಚಿಸತೊಡಗಿತು. ಯಾವ ರೀತಿಯಲ್ಲಿಯೂ ಈಗಿರುವ ಪರಿಸ್ಥಿತಿಯಲ್ಲಿ ಅದು ಮೊಲವನ್ನು ಸೋಲಿಸಲು ಸಾಧ್ಯವಿಲ್ಲ ಎಂದೆನಿಸಿತು. ಹಾಗಾಗಿ ಬೇರೊಂದು ಉಪಾಯವನ್ನು ಚಿಂತಿಸಿ ಆಮೆಯು ಮೊಲವನ್ನು ಮತ್ತೆ ಪಂದ್ಯಕ್ಕೆ ಆಹ್ವಾನಿಸಿತು. ಈ ಬಾರಿ ಪಂದ್ಯದಲ್ಲಿ ಓಡುವ ಪಥವು ವಿಭಿನ್ನ ಎಂದು ನಿರ್ಧರಿಸಿತು. ಮೊಲವು ಒಪ್ಪಿತು. ಪಂದ್ಯ ಶುರುವಾಯಿತು. ಮೊಲ ಆಮೆಗಿಂತ ವೇಗವಾಗಿ ಓಡಿ ಮುಂದುವರೆಯಿತು, ಆದರೆ ಒಂದು ಅಗಲವಾದ ನದಿಯ ಬಳಿ ಬಂದಾಗ ನಿಂತು ಬಿಟ್ಟಿತು. ಗುರಿಯನ್ನು ತಲುಪಲು ಕೆಲವೇ ಮೀಟರ್ ದೂರವಿತ್ತು. ಆದರೆ ಅದು ನದಿಯ ಆಚೆಯ ದಡದಲ್ಲಿತ್ತು. ಮೊಲವು ಅಸಹಾಯಕವಾಗಿ ದಡದಲ್ಲೇ ನಿಂತಿತ್ತು. ಅಷ್ಟರಲ್ಲಿ ಆಮೆಯು ತೆವಳಿಕೊಂಡು ಬಂದು ನೀರಿನೊಳಗೆ ಇಳಿದು ಈಜಿ ಹೋಗಿ ನದಿಯ ಆಚೆಯ ದಡವನ್ನು ತಲುಪಿ ಜಯಗಳಿಸಿತು. ಕಥೆಯ ನೀತಿ- ಮೊದಲು ನಿಮ್ಮ ಸಾಮರ್ಥ್ಯದ ಬಗ್ಗೆ ಅರಿತುಕೊಳ್ಳಿ, ಆ ಬಳಿಕ ನಿಮಗೆ ಸೂಕ್ತವಾದ ದಾರಿಯನ್ನು ಆಯ್ದುಕೊಳ್ಳಿ.

ಸಂಸ್ಥೆಯಲ್ಲಿ ಒಂದು ವೇಳೆ ನೀವು ಒಳ್ಳೆಯ ಮಾತುಗಾರರಾಗಿದ್ದರೆ ಒಂದು ಸಂದರ್ಭವನ್ನು ಸೃಷ್ಟಿಸಿ ಮ್ಯಾನೇಜ್‌ಮೆಂಟ್ ಸದಸ್ಯರ ಮುಂದೆ ಮಾತನಾಡಲು ಪ್ರಯತ್ನಿಸಿ. ನಿಮ್ಮ ಸಾಮರ್ಥ್ಯದ ಬಗ್ಗೆ ನೀವೇ ಪರಿಶೀಲಿಸಿಕೊಳ್ಳಿ, ನೀವು ವಿಶ್ಲೇಷಣೆಯಲ್ಲಿ ಸಾಮರ್ಥ್ಯ ಹೊಂದಿದ್ದರೆ ಒಂದು ವರದಿ ಮಾಡಿ ಮೇಲ್ಮನೆಗೆ ರವಾನಿಸಿ. ನಿಮ್ಮ ವ್ಯಕ್ತಿವಿಕಸನ ಕಾರ್ಯ ವ್ಯರ್ಥವಾಗುವುದಿಲ್ಲ, ಮತ್ತ್ತೊಬ್ಬರ ಗಮನಕ್ಕೂ ಬರುತ್ತದೆ ಮತ್ತು ಅವಕಾಶಕ್ಕೂ, ಬೆಳವಣಿಗೆಗೂ ಸಹಾಯವಾಗುತ್ತದೆ.

ಇಲ್ಲಿಗೂ ಕಥೆ ಮುಗಿಯಲಿಲ್ಲ…  

ಈ ಮಧ್ಯೆ ಮೊಲ ಮತ್ತು ಆಮೆಯ ನಡುವೆ ಗೆಳೆತನ ಬೆಳೆಯಿತು. ಇಬ್ಬರೂ ಆಲೋಚಿಸಿದರು. ಚರ್ಚೆ ಮಾಡಿದರು. ಆಲೋಚಿಸಿ ಪ್ರಯತ್ನಿಸಿದ್ದಲ್ಲಿ ಹಿಂದಿನ ಪಂದ್ಯದಲ್ಲಿ ಇನ್ನೂ ಚೆನ್ನಾಗಿ ಓಡಬಹುದಾಗಿತ್ತು ಎಂದು ಮನವರಿಕೆಯಾಯಿತು. ಕಡೆಯ ಬಾರಿ ಅವರಿಬ್ಬರೂ ಪಂದ್ಯಕ್ಕಿಳಿಯಬೇಕು ಎಂದು ನಿರ್ಧರಿಸಿದರು. ಈ ಬಾರಿ ಒಂದೇ ತಂಡವಾಗಿ ಒಂದುಗೂಡಿದರು. ಮೊಲವು ಆಮೆಯನ್ನು ತನ್ನ ಬೆನ್ನ ಮೇಲೆ ಕೂಡಿಸಿಕೊಂಡು ಓಡಿತು. ನೀರಿನ ಭಾಗ ಬಂದಾಗ ಆಮೆಯು ಮೊಲವನ್ನು ತನ್ನ ಬೆನ್ನ ಮೇಲೆ ಕೂಡಿಸಿಕೊಂಡು ನದಿಯಲ್ಲಿ ಈಜಿತು. ನಂತರ ಮತ್ತೆ ಮೊಲವು ಆಮೆಯನ್ನು ತನ್ನ ಬೆನ್ನ ಮೇಲೆ ಕೂಡಿಸಿಕೊಂಡು ಗುರಿಯನ್ನು ಮುಟ್ಟಿತು. ಇಬ್ಬರಿಗೂ ಸಾಫಲ್ಯದ ಸಂತೋಷ ಸಿಕ್ಕಿತು.

ಕಥೆಯ ನೀತಿ: ಸ್ವತಃ ಬುದ್ಧಿವಂತನಾಗಿರುವುದು ಮತ್ತು ಉತ್ತಮ ಸಾಮರ್ಥ್ಯವನ್ನು ಹೊಂದಿರುವುದು ಬೇರೆ. ತಂಡದಲ್ಲಿದ್ದು ಪರಸ್ಪರರ ಸಾಮರ್ಥ್ಯವನ್ನು ಅರಿತು ಕೆಲಸಮಾಡುವುದು ಬೇರೆ. ಅನೇಕ ಬಾರಿ ನಾವೇ ಕಾರ್ಯವನ್ನು ನಿರ್ವಹಿಸಿದಾಗ ಅದು ಅಪೇಕ್ಷಿತ ಫಲವನ್ನು ನೀಡದೇ ಇರಬಹುದು, ಕೆಲವು ಸಂದರ್ಭಗಳಲ್ಲಿ ನಮ್ಮ ಕಾರ್ಯ ವಿಫಲವಾದಾಗ ಮತ್ತೊಬ್ಬರು ಅದನ್ನು ಚೆನ್ನಾಗಿ ಮಾಡಬಲ್ಲರು. ಈ ನಯವರಿತು ಪರಸ್ಪರರೊಂದಿಗೆ ಕೂಡಿ ಕಾರ್ಯವೆಸಗುವುದೇ ತಂಡಕ್ಕೆ ಸಾಫಲ್ಯದ ದಾರಿಯಾಗುತ್ತದೆ.

ಮೊಲ ಮತ್ತು ಆಮೆಯ ಕಥೆಯಲ್ಲಿ ನಾವು ಕಲಿಯಬೇಕಾದ ಅಂಶಗಳು:

 • ಸೋತ ಮೇಲೆ ನಿಮ್ಮ ಧ್ಯೇಯವನ್ನು ಬಿಡಬೇಡಿ.
 • ‘ವೇಗ ಮತ್ತು ಸ್ಥಿರತೆ’ಗಳ ಕಾರ್ಯವಿಧಾನವು ‘ನಿಧಾನ ಮತ್ತು ಸ್ಥಿರವೂ’ ಆದ ಕಾರ್ಯವಿಧಾನಕ್ಕಿಂತ ಉತ್ತಮವಾದುದು.
 • ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾದ ಕೆಲಸ ಮಾಡಿ.
 • ಪರಿಸ್ಥಿತಿಯನ್ನು ಎದುರಿಸಿ; ವ್ಯಕ್ತಿಯನ್ನಲ್ಲ.
 • ಸಾಧನಗಳನ್ನು ಏಕತ್ರಗೊಳಿಸಿ ತಂಡದೊಂದಿಗೆ ಮಾಡಿದಾಗ ಸಿಕ್ಕುವ ಪ್ರತಿಫಲ ಒಬ್ಬ ವ್ಯಕ್ತಿ ಮಾಡಿದ್ದಕ್ಕಿಂತ ಹೆಚ್ಚಿನ ಗುಣಮಟ್ಟದ್ದಾಗಿರುವ ಸಾಧ್ಯತೆ ಇದೆ.

ಗುಂಪು ಮತ್ತು ತಂಡದ ನಡುವಿನ ವ್ಯತ್ಯಾಸ:

ಒಂದು ಸಂಸ್ಥೆಯಲ್ಲಿ ಕೆಲಸ ಮಾಡುವ ಜನರ ಸಮೂಹವು ‘ಗುಂಪು’, ಆದರೆ ಅದು ಒಂದೇ ಗುರಿಯನ್ನು ಪಡೆದಿದ್ದಲ್ಲಿ ಅದು ‘ತಂಡ’ವಾಗಿ ನಿರ್ಮಾಣವಾಗುತ್ತದೆ. ಒಂದು ಸಮಾನ ಗುರಿಯನ್ನು ಮುಟ್ಟಲು ಕಾರ್ಯ ನಿರ್ವಹಿಸುವವರು ‘ತಂಡದ ಸದಸ್ಯರು’.

ಗುಂಪು ಮತ್ತು ತಂಡದ ಸ್ವಭಾವಗಳಲ್ಲಿ ವ್ಯತ್ಯಾಸ

ಕೆಳಕಂಡ ವಾಕ್ಯಗಳ ಮಹತ್ವವನ್ನು ಗುರುತಿಸಬಲ್ಲಿರಾ?

MY SUPERVISXR TXLD ME THAT TEAMWXRK DEPENDS XN THE PERFXRMANCE XF EVERY SINGLE PERSXN IN THE TEAM. I IGNXRED THAT IDEA UNTIL MY SUPERVISXR SHXWED ME HXW THE XFFICE TYPEWRITER PERFXRMS WHEN JUST XNE SINGLE KEY IS XUT XF XRDER.  ALL THE XTHER KEYS IN XUR TYPEWRITER WXRK JUST FINE EXCEPT XNE

BUT THAT XNE DESTRXYS THE EFFECTIVENESS XF THE TYPEWRITER.  NXW I KNXW THAT EVEN THXUGH I AM XNLY XNE PERSXN

I AM NEEDED IF THE TEAM IS TX WXRK AS A SUCCESSFUL TEAM.

X ಅಕ್ಷರವನ್ನು ತೆಗೆದು ಅಲ್ಲೆಲ್ಲ O ಜೋಡಿಸಿ ಬಳಿಕ ವಾಕ್ಯಗಳನ್ನು ಪುನಃ ಬರೆಯಿರಿ:

   

 
 

ತಂಡಕಾರ್ಯದ ಕುರಿತಾಗಿ ಕೊಕ್ಕರೆಗಳಿಂದ ಸಂದೇಶ-

ವಲಸೆ ಹೋಗುವ ಕೊಕ್ಕರೆಗಳನ್ನು ನೀವು ನೋಡಿರಬಹುದು. ಅದು ಶೀತಲ ಪ್ರದೇಶದಿಂದ ತನ್ನನ್ನು ರಕ್ಷಿಸಿಕೊಳ್ಳಲು ಬಿಸಿಲು-ಪ್ರದೇಶಕ್ಕೆ ಹೋಗುತ್ತವೆ… ಗಮನಿಸಬೇಕಾದ ಅಂಶವೆಂದರೆ ಅವು ಹಾರುವಾಗ ಆಂಗ್ಲ ಭಾಷೆಯ > ಆಕಾರದಲ್ಲಿ ಹಾರುತ್ತವೆ. ಅದಕ್ಕೆ ಕಾರಣಗಳೇನೆಂದು ಗೊತ್ತೆ?-

ಆಕಾರಗಳು ಪಾಠ
ಒಂದು ಕೊಕ್ಕರೆ ತನ್ನ ರೆಕ್ಕೆಗಳನ್ನು ಬಡಿದಾಗ, ಅದು ಪಕ್ಷಿಯ ಎತ್ತರದ ಜಿಗಿತಕ್ಕೆ ಕಾರಣವಾಗುತ್ತದೆ. > ಆಕಾರದಲ್ಲಿ ಪಕ್ಷಿಗಳ ಗುಂಪು ಹಾರಿದಾಗ ಪ್ರತಿಶತ ೭೧ ಅಧಿಕ ಜಿಗಿತ ಇರುತ್ತದೆ. ಆದರೆ ಒಂದೇ ಪಕ್ಷಿ ಹಾರಿದಾಗ ಹಾಗಾಗುವುದಿಲ್ಲ. ಒಂದು ತಂಡ ಸಮಾನ ದಿಕ್ಕಿನೆಡೆಗೆ ಪರಸ್ವರ ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸಿದರೆ, ಗುರಿಯೆಡೆಗೆ ವೇಗವಾಗಿಯೂ, ಸುಲಭವಾಗಿಯೂ, ತಲುಪಬಹುದು. ಸ್ವಸಹಾಯ ಪದ್ಧತಿಯಿಂದ ಸಫಲತೆಯ ಪ್ರಮಾಣ ದೊಡ್ಡದಿರುತ್ತದೆ.
   
ಯಾವ ಕೊಕ್ಕರೆ > ಆಕಾರದಿಂದ ಹೊರಗೆ ಬರುತ್ತದೆಯೋ ಅದಕ್ಕೆ ‘ತಾನು ಏಕಾಕಿ’ ಎಂಬ ಭಾವನೆ ಉಂಟಾಗಿ ಬಲಗುಂದುತ್ತದೆ. ಆದ್ದರಿಂದ ಆದಷ್ಟು ಬೇಗ ಆಕಾರದಲ್ಲಿ ಸೇರಿಕೊಂಡು ಬೇರೆ ಪಕ್ಷಿಗಳ ವೇಗಕ್ಕೆ ಹೊಂದಿಕೊಳ್ಳುತ್ತದೆ. ಒಂದೇ ದಿಕ್ಕಿನತ್ತ ಸಾಗುವಾಗ, ಐಕ್ಯ ಮತ್ತು ಸಾಮ್ಯಗಳು ಇರುವುದರಿಂದ ಶ್ರಮ ಕಡಿಮೆ ಆಗುತ್ತದೆ. ಗುರಿಯನ್ನು ಮುಟ್ಟುವುದು ಸುಲಭವೂ ಹೌದು. ಕೆಲಸದಲ್ಲಿ ಎಲ್ಲ ಸದಸ್ಯರ ಸಹಕಾರವೂ ಇರುತ್ತದೆ.
ಆಯಾಸವಾದಾಗ ನಾಯಕ ಕೊಕ್ಕರೆ > ಆಕಾರದ ಕಡೆಯ ಭಾಗಕ್ಕೆ ಹೋಗಿ ಸೇರುತ್ತದೆ. ಆಗ ಬೇರೊಂದು ಕೊಕ್ಕರೆ ನಾಯಕತ್ವವನ್ನು ವಹಿಸಿಕೊಂಡು ಮುಂಚೂಣಿಗೆ ಬರುತ್ತದೆ. ನಾಯಕತ್ವದ ನಿರ್ವಹಣೆಯಲ್ಲಿ ಕಠಿಣವಾದ ಸಮಸ್ಯೆಗಳನ್ನು ನಿಭಾಯಿಸಬೇಕಾಗುವುದು. ಇದು ನಾಯಕನ ಸಾಮರ್ಥ್ಯ, ವಿಭಿನ್ನ ವಿಷಯತಜ್ಞರ ಸಹಕಾರ ಹಾಗೂ ವಿವಿಧ ಸಾಧನಗಳ ಅಗತ್ಯವನ್ನು ಅಪೇಕ್ಷಿಸುತ್ತದೆ.
> ಆಕಾರದಲ್ಲಿ ಹಾರುತ್ತಿರುವ ಪಕ್ಷಿಗಳು ಕೂಗುತ್ತಾ ತನ್ನ ಮುಂದಿರುವ ಪಕ್ಷಿಗಳನ್ನು ಹುರಿದುಂಬಿಸುತ್ತವೆ. ಈ ರೀತಿ ಅವು ಸಮಾನವಾಗಿ ವೇಗವನ್ನು ಕಾಪಾಡಿಕೊಳ್ಳುತ್ತವೆ. ಶಕ್ತಿ ಮತ್ತು ಉತ್ತೇಜನಗಳು ಇದ್ದಲ್ಲಿ ಮಹತ್ತರ ಉನ್ನತಿ ಸಾಧ್ಯ. ಕಾಲೋಚಿತವಾಗಿ ಉತ್ತೇಜನದ ಮಾತುಗಳನ್ನು ಬಳಸಿದಲ್ಲಿ ಅದು ಪ್ರೇರಕವಾಗಿದ್ದು ಶಕ್ತಿಯನ್ನು ಹೆಚ್ಚಿಸುತ್ತದೆ, ಉತ್ತಮ ಫಲಕ್ಕೆ ಕಾರಣವಾಗುತ್ತದೆ.
ಯಾವುದಾದರೂ ಒಂದು ಕೊಕ್ಕರೆಗೆ ಕಾಯಿಲೆ, ಬಳಲಿಕೆ ಅಥವಾ ಗಾಯವಾದಾಗ, ಅದು ಆಕಾರವನ್ನು ತ್ಯಜಿಸಿ ಹೊರಗೆ ಬರಬೇಕು. ಆಗ ಇನ್ನಿತರ ಕೊಕ್ಕರೆಗಳು ಆಕಾರದಿಂದ ಹೊರಬಂದು ಬಳಲಿದ ಕೊಕ್ಕರೆಯ ರಕ್ಷಣೆಯಲ್ಲಿ ತೊಡಗಬೇಕು. ಅವು ಅದರ ಜೊತೆಯಲ್ಲಿ ಸಾಯುವವರೆಗೂ ಅಥವಾ ಚೇತರಿಸಿಕೊಂಡು ಮತ್ತೇ ಹಾರುವವರೆಗೂ ಇರುತ್ತವೆ. ಅವು ತಂಡದೊಂದಿಗೆ ಸೇರಿ ಹಾರುತ್ತವೆ ಅಥವಾ ಬೇರೊಂದು > ಆಕಾರದಲ್ಲಿ ಹಾರುತ್ತವೆ. ಎಂತಹ ಕಠಿಣ ಸಮಯವೇ ಆಗಲಿ, ವ್ಯತ್ಯಾಸಗಳೇ ಆಗಲಿ ಎಂದೂ ತಂಡವನ್ನು ತೊರೆಯಬಾರದು. ವಿಶೇಷವಾಗಿ ಕಷ್ಟ ಮತ್ತು ಸಮಸ್ಯೆಗಳ ಸಮಯದಲ್ಲಿ ಹೊಂದಿಕೊಂಡು ಒತ್ತಾಸೆಯಾಗಿ ಇರಬೇಕು. ಭಿನ್ನಾಭಿಪ್ರಾಯವೂ ಇಲ್ಲದೆ ತಂಡದ ಜೊತೆಗಿದ್ದರೆ ಎಂತಹ ಕಷ್ಟ ಸಂದರ್ಭವನ್ನಾದರೂ ಎದುರಿಸಬಹುದು.

ತಂಡ ಹೇಗೆ ಕಾರ್ಯವನ್ನು ನಿರ್ವಹಿಸುತ್ತದೆ?

ತಂಡದ ಪ್ರಭಾವವು ಅದರ ಸದಸ್ಯರ ವಿಚಾರ ವಿನಿಮಯ ಸಾಮರ್ಥ್ಯ, ಏಕಾಗ್ರತೆ, ಕಾರ್ಯಕ್ಷಮತೆ ಮತ್ತು ತಂಡದ ನಿರ್ಣಯಗಳನ್ನು ಅವಲಂಬಿಸಿರುತ್ತದೆ.

 
 
  

ತಂಡದ ಮೂರು ಅವಶ್ಯಕತೆಗಳು:

. ಕೆಲಸಕ್ಕೆ ಸಂಬಂಧಿಸಿದ ಅವಶ್ಯಕತೆಗಳು

. ವೈಯಕ್ತಿಕ ಆವಶ್ಯಕತೆಗಳು

. ತಂಡದ ಆವಶ್ಯಕತೆಗಳು

. ಕೆಲಸಕ್ಕೆ ಸಂಬಂಧಿಸಿದ ಅವಶ್ಯಕತೆಗಳು:

 • ತಂಡದ ಮುಖ್ಯ ಉದ್ದೇಶ
 • ಸ್ಪಷ್ಟವಾದ ಲಕ್ಷ್ಯ
 • ಧ್ಯೇಯದ ಬಗ್ಗೆ ಸಮ್ಮತಿ
 • ಧ್ಯೇಯ ಸಾಧಿಸಲು ಕಾರ್ಯಯೋಜನೆ
 • ಧ್ಯೇಯ ಸಾಧಿಸಿದ ನಂತರ ಅದರ ಬಗ್ಗೆ ಅರಿವು

. ವೈಯಕ್ತಿಕ ಅವಶ್ಯಕತೆಗಳು:

ಈ ತಂಡದಲ್ಲಿ ನಾನು ಯಾರು? ನನ್ನನ್ನು ನಾನು ಎಲ್ಲಿ ಹೊಂದಿಸಿಕೊಳ್ಳಬಹುದು? ನನ್ನ ಮೇಲೆ ಎಷ್ಟು ಫ್ರಭಾವ ಆಗಬಹುದು? ಅನ್ಯ ಸದಸ್ಯರನ್ನು ಎಷ್ಟರಮಟ್ಟಿಗೆ ನಂಬಬಹುದು?

 • ಒಂದಾಗುವ ಅವಶ್ಯಕತೆ.
 • ಕೊಡುಗೆಯ ಅವಶ್ಯಕತೆ.
 • ಸ್ಥಾನದ ಅವಶ್ಯಕತೆ.
 • ಅಧಿಕಾರದ ಅವಶ್ಯಕತೆ.
 • ಸ್ವಾತಂತ್ರ್ಯದ ಅವಶ್ಯಕತೆ.
 • ಅವಲಂಬನೆಯ ಅವಶ್ಯಕತೆ.
 • ತನ್ನನ್ನು ಗುರುತಿಸಿಕೊಳ್ಳುವ ಬಗ್ಗೆ ಅವಶ್ಯಕತೆ.
 

. ತಂಡದ ಅವಶ್ಯಕತೆಗಳು:

 • ಕೆಲಸ ಪೂರ್ಣಗೊಳ್ಳುವವರೆಗೂ ಸದಸ್ಯರು ಒಟ್ಟಾಗಿದ್ದು, ಸದಸ್ಯರ ನಡುವೆ ಸಂಬಂಧ ಉತ್ತಮವಾಗಿರಬೇಕು.
 • ಅರ್ಥಮಾಡಿಕೊಳ್ಳುವುದರಲ್ಲಿ ಸುಧಾರಣೆಯ ಅವಶ್ಯಕತೆ.
 • ಸಹಕಾರದ ಅವಶ್ಯಕತೆ.
 • ವೈಮನಸ್ಯ ಬಂದಾಗ ಒಬ್ಬರಿಗೊಬ್ಬರ ನಡುವೆ ಸಹಕಾರದ ಅವಶ್ಯಕತೆ.
 • ಸ್ಪಷ್ಟತೆ ಹೊಂದುವ ಅವಶ್ಯಕತೆ.
 

ತಂಡದ ನಿರ್ಮಾಣ: ನಾಲ್ಕು ಹಂತಗಳ ನಿರ್ಮಾಣ:

ತಂಡನಿರ್ಮಾಣ; ತಂಡವನ್ನು ಕಟ್ಟುವಾಗಿನ ೪ ಹಂತಗಳು

ರಚನೆ  ಸದಸ್ಯರು ‘ನಾವು ಇಲ್ಲಿ ಏತಕ್ಕಾಗಿ ಇದ್ದೇವೆ?’ ಎಂದು ಇನ್ನೂ ಆಲೋಚಿಸುವ ಸ್ಥಿತಿ. ಅಂದರೆ, ‘ಏನು ಕೆಲಸ? ನಾವು ಸಧ್ಯಕ್ಕೆ ಏನು ಮಾಡಬೇಕು? ಇತರ ಸದಸ್ಯರು ಯಾರು? ಅವರ ಪಾತ್ರವೇನು?’ ಇತ್ಯಾದಿಗಳ ಕುರಿತಾದ ಗೊಂದಲ. ತಂಡದ ಸದಸ್ಯರು ಬದಲಾದಾಗಲೆಲ್ಲ ಈ ಸ್ಥಿತಿ ಮರುಕಳಿಸುತ್ತದೆ. ತಂಡದಲ್ಲಿ ಆತಂಕ ಪ್ರಧಾನವಾಗಿರುತ್ತದೆ.
ಸಂಘರ್ಷಣೆ  ಮೌಲ್ಯ ಮತ್ತು ಸಾಧ್ಯತೆಗಳ ಪ್ರಶ್ನೆ. ಸಿದ್ಧಾಂತ ಮತ್ತು ವಿಧಾನಗಳ ಕುರಿತಾದ ವಿವಾದಗಳಾಗುತ್ತವೆ. ನಾಯಕ/ ತಂಡದ ಕೆಲಸಕ್ಕೆ ಸಂಬಂಧಿಸಿದ ಪ್ರಾಮಾಣಿಕತೆ ಮತ್ತು ಪ್ರತಿಭಟನೆಗಳೆಂಬ ಎರಡು ವಿರುದ್ಧ ಕವಲುಗಳಲ್ಲಿ ಹಂಚಿಹೋದ ಅಭಿಪ್ರಾಯಗಳು ಆಗಾಗ ಏಳುತ್ತಲೇ ಇರುತ್ತವೆ. ಸದಸ್ಯರು ಒಬ್ಬರನ್ನೊಬ್ಬರು ಪರೀಕ್ಷಿಸುತ್ತಲೇ ಇರುತ್ತಾರೆ. ಗುಂಪುಗಾರಿಕೆಯ ನಡವಳಿಕೆ ಕಾಣಿಸಬಹುದು. ಈ ಸ್ಥಿತಿಯಲ್ಲಿ ಯಾವುದೇ ಫಲದಾಯಕ ಕಾರ್ಯ ನಡೆಯುವುದಿಲ್ಲ. ತಂಡದಲ್ಲಿ ಸಂಘರ್ಷಪ್ರಧಾನವಾಗಿರುತ್ತದೆ
ಒಗ್ಗೂಡುವಿಕೆ ಯೋಜನೆ ಪ್ರಾರಂಭವಾಗುತ್ತದೆ. ಸಿದ್ಧಾಂತಗಳನ್ನು ಕೂಡಿ ನಿಶ್ಚಯಿಸಲಾಗುತ್ತದೆ. ಕಾರ್ಯ ಸಂಬಂಧಗಳನ್ನು ಅರ್ಥಮಾಡಿಕೊಳ್ಳುವುದು, ಪಾತ್ರಗಳನ್ನು ಸ್ಪಷ್ಟಪಡಿಸಿಕೊಳ್ಳುವುದು, ಇತ್ಯಾದಿ. ತಂಡದೊಂದಿಗೆ ಗುರುತಿಸಿಕೊಳ್ಳುವ ಭಾವ ಮೂಡುತ್ತ ಹೋಗುತ್ತದೆ. ತಮ್ಮ ಅಭಿಪ್ರಾಯವನ್ನು ಮಂಡಿಸಲು ಎಲ್ಲರಿಗೂ ಸ್ವಾತಂತ್ರ್ಯವಿರುತ್ತದೆ. ಪರಸ್ಪರ ಸಹಕಾರವೇ ತಂಡದ ಪ್ರಧಾನ ಗುಣವಾಗಿರುತ್ತದೆ.
ಕಾರ್ಯ ಪ್ರದರ್ಶನ(ಅಭಿವ್ಯಕ್ತಿ) ಸಮಸ್ಯೆಗಳಿಗೆ ಪರಿಹಾರಗಳು ಹುಟ್ಟಿಕೊಳ್ಳುತ್ತವೆ; ಕಾರ್ಯದಲ್ಲಿ ಸಮಯದ ಸಾರ್ಥಕ ಉಪಯೋಗ ಮಾಡಲಾಗುತ್ತದೆ. ಪರಿಣಾಮಗಳಲ್ಲಿ ಗುಣಮಟ್ಟ ಹೆಚ್ಚುತ್ತದೆ. ಕೆಲಸಗಳು ಕೈಗೂಡುತ್ತವೆ. ಪಾತ್ರಗಳು ತುಂಬ ಬಿಗಿಯಾಗಿರುವುದಿಲ್ಲ. ತಂಡದ ಸದಸ್ಯರು ಹೇಗೆ ಕಾರ್ಯವೆಸಗುತ್ತಾರೆ ಎನ್ನುವುದರ ಬಗ್ಗೆ ಉತ್ತಮ ತಿಳುವಳಿಕೆ ಇರುತ್ತದೆ; ಆತ್ಮವಿಶ್ವಾಸವು ವ್ಯಕ್ತಿಗಳಲ್ಲೂ ತಂಡದಲ್ಲೂ ಕಂಡುಬರುತ್ತದೆ. ಪರಸ್ಪರ ನಂಬಿಕೆ ಮತ್ತು ಆತ್ಮವಿಶ್ವಾಸಗಳು ತಂಡದ ಪ್ರಧಾನ ಗುಣಗಳಾಗಿರುತ್ತವೆ.

ಪ್ರಶ್ನಾವಳಿಗಳ ಪರಿಶೀಲನೆ: ನಿಮ್ಮ ಪ್ರತಿಕ್ರಿಯೆಯನ್ನು ನಮೂದಿಸಿ

೧) ಈ ಹಂತದಲ್ಲಿ ತಂಡದ ಗುಣಲಕ್ಷಣಗಳು: ಭಿನ್ನಾಭಿಪ್ರಾಯ, ಪ್ರಗತಿಯು ಕಾಣದಿದ್ದಾಗ ಕಸಿವಿಸಿ, ಸಾಧಾರಣವಾಗಿ ಅಸಹನೆ ಉಂಟಾಗುವುದು, ಇತ್ಯಾದಿ.

(a) ರಚನೆ (b) ಸಂಘರ್ಷಣೆ
(c) ಒಗ್ಗೂಡುವಿಕೆ (d) ಕಾರ್ಯಪ್ರದರ್ಶನ

ಉತ್ತರ: ಸಂಘರ್ಷಣೆ

ಸಾಮಾನ್ಯವಾಗಿ ಈ ಘಟ್ಟದಲ್ಲಿ ತಂಡವು ಅಧಿಕಾರ ಸಂಬಂಧಿಯಾದ ವಿವಾದಗಳನ್ನು ಎದುರಿಸಬೇಕಾಗುತ್ತದೆ. ಯಾರು ಏನನ್ನು ನಿರ್ಣಯಿಸಬೇಕು? ಯಾರು ಜವಾಬ್ದಾರಿ ವಹಿಸಬೇಕು? (ಸಂಘರ್ಷಣೆಯ ಹಂತದಲ್ಲಿ ತಂಡವು ತನ್ನ ಭಿನ್ನತೆಗಳನ್ನು ವ್ಯಕ್ತಪಡಿಸುತ್ತದೆ)

೨) ಸಂಘರ್ಷದ ಹಂತದಲ್ಲಿ ಯಾವ ತಂತ್ರ ಉಪಯುಕ್ತವಾದೀತು?

(a) ವಿಷಯಗಳನ್ನು ಸಂಪೂರ್ಣವಾಗಿ ಗ್ರಹಿಸಲು ಅನುಕೂಲ ಮಾಡುವುದು. (b) ಪ್ರಾರಂಭಿಕ ನಿಯಮಗಳನ್ನು ಮತ್ತೆ ನೋಡುವುದು
(c) ಪೂರ್ತಿಯಾಗಿ ಕಡೆಗಣಿಸುವುದು. (d) ತಂಡದ ನಾಯಕರು ಮಿಕ್ಕ ಸದಸ್ಯರಿಗೆಲ್ಲಾ ಶಾಂತಿಯಿಂದ ಇರಲು ಹೇಳುವುದು.

ಉತ್ತರ : ಪ್ರಾರಂಭಿಕ ನಿಯಮಗಳನ್ನು ಮತ್ತೆ ನೋಡುವುದು

ಸಂಘರ್ಷಣೆಯ ಹಂತದಲ್ಲಿರುವಾಗ ತಂಡವನ್ನು ಯುಕ್ತ ಹಾದಿಗೆ ಮರಳಿ ತರಲು, ಪ್ರಾರಂಭಿಕ ನಿಯಮಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕು. ಇದು ಸದಸ್ಯರಲ್ಲಿ ಏಕಮುಖ ಗಮನ ಮತ್ತು ಒಪ್ಪಂದವನ್ನು ಉಂಟುಮಾಡುತ್ತದೆ.

೩) ಈ ಹಂತದಲ್ಲಿ ತಂಡವು ದೌರ್ಬಲ್ಯ ಮತ್ತು ಅತಿ ವಿನಮ್ರತೆಗಳಿಂದ ಕೂಡಿರುತ್ತದೆ. ಸದಸ್ಯರು ಉನ್ನತ ಸೈದ್ಧಾಂತಿಕ ಉಪಾಯಗಳನ್ನೇ ಮುಂದಿಡುವ ಸಾಧ್ಯತೆ ಇದೆ.

(a) ರಚನೆ (Forming) (b) ಸಂಘರ್ಷಣೆ (Storming)
(c) ಒಗ್ಗೂಡುವಿಕೆ (Norming) (d) ಅಭಿವ್ಯಕ್ತಿ (Performing)

ಉತ್ತರ: ಸರಿಯಾದ ಪ್ರತಿಕ್ರಿಯೆ: ರಚನೆ (Forming)

ರಚನೆಯ ಹಂತದಲ್ಲಿ ಇರುವ ತಂಡಗಳು ‘ನಿಮ್ಮನ್ನು ಅರಿಯುತ್ತಿರುವ’ ಹಂತವಿದು. ಯಾರೂ ತಪ್ಪು ಮಾಡಲು ಬಯಸುವುದಿಲ್ಲ, ಎಲ್ಲರೂ ಎಚ್ಚರವಾಗಿರುತ್ತಾರೆ.

೪. ಒಗ್ಗೂಡುವಿಕೆಯ ಹಂತದಲ್ಲಿ ತಂಡಕ್ಕೆ ಈ ವಿಷಯಗಳು ಸಹಜವೇ.

(a) ಹೆಚ್ಚಿನ ಹಿಮ್ಮಾಹಿತಿ, ಮಿತವಾದ ಉದ್ದೇಶಾಂಶಗಳು, ಸದಸ್ಯರ ಗಮನ ಯಶಸ್ಸಿನ ಕಡೆಗೆ. (b) ಕಡಿಮೆ ಚರ್ಚೆ, ಅತಿಯಾದ ವಿನಯ
(c) ತಂಡದ ಸಭೆ ಬೇಗ ಚಲಿಸುತ್ತದೆ, ಸಮಯಕ್ಕೆ ಸರಿಯಾಗಿ ಮುಗಿಯುತ್ತದೆ, ಸಾಕಷ್ಟು ಸಾಧನೆ ಆಗಿದೆ. (d) ಭಿನ್ನಾಭಿಪ್ರಾಯ, ಪ್ರಭಾವ ಬೀರುವ ಸಲುವಾಗಿ ಹೆಸರು-ಕೀರ್ತಿಯನ್ನು ನಿರ್ಮಿಸಿಕೊಳ್ಳುವುದು.

ಉತ್ತರ: ಸರಿಯಾದ ಪ್ರತಿಕ್ರಿಯೆ” ಬಹಳಷ್ಟು ಹಿಮ್ಮಹಿತಿ, ಮಿತವಾದ ಉದ್ದೇಶಾಂಶಗಳು, ಸದಸ್ಯರ ಗಮನವೆಲ್ಲ ಯಶಸ್ಸಿನ ಕಡೆಗೆ. ರಚನೆಯ ಹಂತದಲ್ಲಿ ಇರುವ ತಂಡಗಳು ತಮ್ಮ ಮುಂದಿರುವ ಗುರಿಯತ್ತ ಗಮನ ಹರಿಸಲು ಬಯಸುತ್ತಾರೆ, ಮಾರ್ಗಸೂಚಿಯನ್ನೇ ಹೆಚ್ಚು ಅವಲಂಬಿಸಿರುತ್ತಾರೆ. ಒಬ್ಬರನ್ನೊಬ್ಬರು ಅರಿಯಬೇಕಾದ ಹಂತಕ್ಕಿಂತ ಅವರು ಎಷ್ಟೋ ಮುಂದುವರೆದಿರುತ್ತಾರೆ ಹಾಗೂ ತಮ್ಮ ಭಿನ್ನಾಭಿಪ್ರಾಯಗಳನ್ನು ಸಾಕಷ್ಟು ಬಗೆಹರಿಸಿಕೊಂಡಿರುತ್ತಾರೆ. ಅವರು ಯಶಸ್ಸಿಗೆ ಸಿದ್ಧರಾಗಿರುತ್ತಾರೆ.

೫. ತಂಡದ ಬೆಳವಣಿಗೆಯ ವಿಷಯದಲ್ಲಿ ಸಹಾಯಕನ ಪಾತ್ರ:

(a) ಆದಷ್ಟು ಬೇಗ ತಂಡವನ್ನು ಮುನ್ನಡೆಸುವುದು. (b) ಹಂತದಿಂದ ಹಂತಕ್ಕೆ ಪ್ರಗತಿಯನ್ನು ಪ್ರಾರ್ಥಿಸುವುದು.
(c) ಸಂಘರ್ಷಣೆಯ ಹಂತವನ್ನು ಕೈಬಿಟ್ಟು ಮುಂದೆ ಹೋಗುವುದು (d) ತಂಡದ ಬೆಳವಣಿಗೆಯು ನೈಜವಾದ ವಿಕಾಸವೇ ಎಂದು ಗುರುತಿಸುವುದು

ಉತ್ತರ: ತಂಡ ಬೆಳವಣಿಗೆಯು ನೈಜವಾದ ವಿಕಾಸವೇ ಎಂದು ಗುರುತಿಸುವುದು.

ತಂಡವು ಈ ನಾಲ್ಕು ಹಂತಗಳಲ್ಲೂ ಬೆಳೆಯಬೇಕು. ಈ ಪ್ರಣಾಳಿಕೆಯನ್ನು ಅನುಕೂಲಕರವಾಗಿಯೂ ಮತ್ತು ಉತ್ತೇಜಕವಾಗಿಯೂ ಮಾಡಬಹುದು. ಆದರೆ ಕಾರಣವಿಲ್ಲದೆ ತಪ್ಪಿಸಿಕೊಳ್ಳುವುದಾಗಲೀ ಅಥವಾ ಕಾರಣವಿಲ್ಲದೇ ಅವಸರಿಸುವುದಾಗಲಿ ಮಾಡಬಾರದು.

ತಂಡವು ನಿಷ್ಕ್ರಿಯವಾಗಲು ಕಾರಣಗಳು:

ಅಪೇಕ್ಷಿಸಿದಂತೆ ತಂಡವು ಕಾರ್ಯನಿರ್ವಹಿಸದಿದ್ದರೆ, ಕಾರ್ಯಕ್ಕೆ ಜವಾಬ್ದಾರರಾದ ಜನಗಳ ಕಡೆಗೆ ಬೆರಳು ತೋರಿ ಆಪಾದಿಸುತ್ತಾರೆ. ಇದಕ್ಕೆ ಉತ್ತರವು ತಂಡವನ್ನು ಬದಲಾಯಿಸುವುದೋ ಅಥವಾ ‘ಹರಕೆಯ ಕುರಿ’ ಆಗುವುದೋ ಎಂದಲ್ಲ. ಆದರೆ ಉತ್ತರವು ಈ ಪ್ರಶ್ನೆಗಳನ್ನು ಉತ್ತರಿಸುವುದರಲ್ಲಿದೆ- ‘ಯಾವ ಕಾರಣದಿಂದಾಗಿ?’, ‘ಏಕೆ ಗುಂಪು ಸೋತಿತು?’ ಎಲ್ಲಿಯವೆರೆಗೆ ನಾವು ಮೂಲ ಕಾರಣಗಳನ್ನು ಗುರುತಿಸುವುದಿಲ್ಲವೋ ಅಲ್ಲಿಯವೆರೆಗೆ ನಮಗೆ ಪರಿಹಾರ ಸಿಗಲಾರದು.

ಒಂದು ತಂಡದ ವೈಫಲ್ಯಕ್ಕೆ ಕಾರಣಗಳು- ವೈಯಕ್ತಿಕ ಅಥವಾ ವ್ಯಕ್ತಿಗತ ಲಕ್ಷಣಗಳು ಮತ್ತು ಸಂಸ್ಥೆಯ ಲಕ್ಷಣಗಳು. ವೈಯಕ್ತಿಕ ಲಕ್ಷಣಗಳಲ್ಲಿ- ಪರಿಣಾಮದ ಕಡೆ ಗಮನವಿಲ್ಲದಿರುವುದು, ಜವಾಬ್ದಾರಿಯನ್ನು ಬದಿಗೊತ್ತುವುದು ಮತ್ತು ಕಾರ್ಯಬದ್ಧತೆ ಇಲ್ಲದಿರುವುದು- ಇವು ಸೇರಿವೆ. ಸಂಸ್ಥೆಯ ಲಕ್ಷಣಗಳಲ್ಲಿ- ಅಸ್ಪಷ್ಟ ಧ್ಯೇಯಗಳು, ಸಂಘರ್ಷದ ಭಯ ಮತ್ತು ವಿಶ್ವಾಸವಿಲ್ಲದಿರುವಿಕೆ- ಇವು ಸೇರಿವೆ.

ಪ್ರಭಾವಶಾಲಿ ತಂಡದ ನಿರ್ಮಾಣಕ್ಕೆ ಸಲಹೆಗಳು

ಅತ್ಯುತ್ತಮವಾದ ತಂಡ-ನಿರ್ಮಾಣಕ್ಕೆ ಬೇಕಾಗುವುದು ಸ್ಥೈರ್ಯ, ಪರಿಶ್ರಮ ಹಾಗೂ ಮೂಲ ಉದ್ದೇಶಗಳ ಮೇಲೆ ಸದಾ ಗಮನವಿರುವುದು. ತಂಡ-ನಿರ್ಮಾಣದ ಪ್ರಣಾಳಿಕೆ ಒಳ್ಳೆಯದೋ ಕೆಟ್ಟದ್ದೋ ಎನ್ನುವುದು ನಾಯಕತ್ವವನ್ನು ಆಧರಿಸಿರುತ್ತದೆ. ಸಫಲ ನಾಯಕತ್ವದಿಂದ ಉತ್ತಮ ದರ್ಜೆಯ ತಂಡ-ನಿರ್ಮಾಣ ಹಾಗೂ ಫಲಪ್ರಾಪ್ತಿ ಸಾಧ್ಯ. ಯಶಸ್ವೀ ನಾಯಕನು ವಿಶೇಷವೆನಿಸುವ ತಂಡವನ್ನು ಕಟ್ಟುತ್ತ, ಸತ್ವಸಂಪನ್ನ ಜನರನ್ನು ತನ್ನ ತಂಡದಲ್ಲಿ ಕೂಡಿಸಿಕೊಂಡು ಪ್ರತಿಯೋರ್ವ ಸದಸ್ಯನಿಗೂ ಈ ಕೆಳಕಂಡ ಮೂಲಭೂತ ಸಿದ್ಧಾಂತಗಳನ್ನು ಮನಗಾಣಿಸುತ್ತಾನೆ-

ಸಮಾನ ದೃಷ್ಟಿಕೋನ ಅಳವಡಿಸಿಕೊಳ್ಳುವುದು: ತಂಡದ ಎಲ್ಲ ಸದಸ್ಯರಿಗೂ ಧ್ಯೇಯ ಮತ್ತು ಹೊಣೆಗಾರಿಕೆಯ ಅರಿವು ಮೂಡಿಸಬೇಕು. ಪುನರಾವೃತ್ತಿ ಮತ್ತು ವ್ಯಕ್ತ್ತಿಶಃ ಪಾಲುಗಾರಿಕೆಯಿಂದ ತಂಡದ ಸದಸ್ಯರಲ್ಲಿ ಧನಾತ್ಮಕ ಭಾವನೆಗಳನ್ನು ಮೂಡಿಸಬೇಕಾದದ್ದೂ ಮುಖ್ಯ.

 
ಅಳವಡಿಕೆಗೆ ಪ್ರೋತ್ಸಾಹ: ತಂಡದ ಲಕ್ಷ್ಯವನ್ನು ಮುಟ್ಟಲು ಪ್ರತಿಯೊಬ್ಬ ಸದಸ್ಯನ ಪ್ರತಿಭೆ ಮತ್ತು ಕೌಶಲಗಳನ್ನು ಉಪಯೋಗಿಸಿ ಉತ್ತಮ ಫಲಕ್ಕಾಗಿ ಉತ್ತೇಜನ ಕೊಡಬೇಕು.

ಸಂವಹನೆ: ಮುಕ್ತ ಹಾಗೂ ಪ್ರಾಮಾಣಿಕ ವಿನಿಮಯವಾಗಲಿ. ಜನರು ತಮ್ಮ ಅಭಿಪ್ರಾಯಗಳನ್ನು ಭಯವಿಲ್ಲದೆ ವ್ಯಕ್ತಪಡಿಸಲು ಸಾಧ್ಯವಾಗಲಿ. ಎಲ್ಲ ಸದಸ್ಯರನ್ನೂ ತಮ್ಮ ಚಿಂತನೆ ಹಾಗೂ ಪರಿಹಾರೋಪಾಯಗಳನ್ನು ಮಂಡಿಸಲು ಪ್ರೋತ್ಸಾಹಿಸಿ. ಪ್ರತಿಯೋರ್ವ ಸದಸ್ಯನನ್ನೂ ಗೌರವಿಸಿ. ಅವರೆಲ್ಲರ ಪ್ರಶ್ನೆಗಳನ್ನು ಆಲಿಸುವ ತಾಳ್ಮೆ ಇರಲಿ.

ವೈಯಕ್ತಿಕ ಪ್ರತಿಸ್ಪಂದನಉಪಾಯಗಳು, ದೃಷ್ಟಿಕೋನಗಳು, ಚಟುವಟಿಕೆಗಳು ಹಾಗೂ ಪರಿಣಾಮಗಳನ್ನು ವ್ಯಕ್ತಪಡಿಸುವಂತಹ ಪ್ರಾಮಾಣಿಕ ಅಭಿಪ್ರಾಯಗಳನ್ನು ಕೊಡುವ-ಪಡೆಯುವ ಪರಿಪಾಟು ಇರಲಿ.

ಶಿಸ್ತಿನ ನಿರ್ಮಾಣ

ತಂಡದ ಗುಣಮಟ್ಟಧ್ಯೇಯವನ್ನು ಉತ್ತಮಪಡಿಸಿ ಹಾಗೂ ಬೇರೆಯ ಉತ್ತಮ ಕಾರ್ಯವಿಧಾನಗಳನ್ನು ಮೆಚ್ಚಿ.

ಆದರವನ್ನು ಬೆಳೆಸಿ ಶಾಂತಿಯನ್ನು ನಿರ್ಮಿಸುವವರಾಗಿ. ತಂಡದ ಸದಸ್ಯರ ಕುರಿತಾಗಿ ಕಾಳಜಿಯಿರಲಿ. ಸಮಸ್ಯೆಗಳನ್ನು ಹಾಗೂ ಸಂಘರ್ಷಗಳನ್ನು ಪರಿಹರಿಸಲು ಇತರರಿಗೆ ಸಹಾಯ ಮಾಡಿ. ಜನರು ಸೌಹಾರ್ದದಿಂದಿದ್ದಾಗ ತಂಡವು ಕಾರ್ಯವನ್ನು ಚೆನ್ನಾಗಿ ಎಸಗಬಲ್ಲುದು.

ಸಮತೋಲನವನ್ನು ಸಾಧಿಸಲು ಯತ್ನಿಸಿ ತಂಡದ ಲಕ್ಷ್ಯ-ಸಾಧನೆಯ ಹಾಗೂ ಸದಸ್ಯರ ವೈಯಕ್ತಿಕ ಅಗತ್ಯಗಳು ಹಾಗೂ ಗುರಿಗಳ ನಡುವೆ ಸಾಮರಸ್ಯವನ್ನು ಸಾಧಿಸಲು ಯತ್ನಿಸಿ.

ಈ ಮೂಲಭೂತ ಸಿದ್ಧಾಂತಗಳು ನಿಮಗೂ ಉಪಯುಕ್ತವಾಗುವುದಲ್ಲದೆ ತಂಡರಚನೆಯ ಕಾರ್ಯದಲ್ಲೂ ಸಹಾಯಕವಾಗುತ್ತವೆ. ಇವುಗಳನ್ನು ಪ್ರತಿಯೋರ್ವ ಸದಸ್ಯನೊಡನೆ ಕುಳಿತು ಪುನರವಲೋಕಿಸಿ. ಸದಾ ಕೂಡಿ ಕಲಿಯುವ ಪದ್ಧತಿಯನ್ನು ರೂಢಿಸಿಕೊಳ್ಳಿ ಹಾಗೂ ಪರಸ್ಪರರೊಂದಿಗೆ ಸಂತೋಷ ಪಡುವುದನ್ನು ಮರೆಯಬೇಡಿ.

ಗ್ರಂಥ ಸಲಹೆ:

The Big Book of Team Building Games, By: Edward Scannell and John Newstrom – McGraw-Hill

Effective Team Building by Donald H. Weiss, Goyal Publishers.

ಅಂತರ್ಜಾಲ ಮೂಲ:

www.teachmeteamwork.com

.