ಇದೊಂದು ಸಂಕಲನ ಗ್ರಂಥ. ಇದರಲ್ಲಿ ಮದುವೆಯ ಸೋಬಾನ ಪದಗಳು, ಮಂಗಲ ಹಾಡುಗಳು, ಮತ್ತು ನಾಡ ಕೋಲ ಪದಗಳು ಎಂಬ ಹೆಸರಿನಡಿಯಲ್ಲಿ ಗೌರಿಸೀಗೆಯ ಹಬ್ಬದ ಕೋಲು ಪದಗಳು, ನಾಡಪದಗಳು ಮತ್ತು ಚಾರಿತ್ರಿಕ ಅಂಶಗಳನ್ನುಳ್ಳ ಹಲವಾರು ಕೋಲುಪದಗಳು ಮೊದಲಾದ ಅನೇಕ ಸುಂದರವಾದ ಹಾಡುಗಳನ್ನು ಗದ್ದಗಿಮಠರು ಸಂಗ್ರಹಿಸಿ ಸಂಕಲನ ಕೃತಿಯನ್ನಾಗಿಸಿದ್ದಾರೆ. ಲೋಕಗೀತೆ ಕೃತಿಯನ್ನು ಮೈಸೂರು ರಾಜ್ಯದ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಇಲಾಖೆಯು ಪ್ರಕಟಿಸಿದ್ದಾರೆ. ಇದು ಉತ್ತಮೊತ್ತಮ ಸಂಕಲನವೆಂದು ಬಹುಮಾನ ಪಡೆದಿದೆ.