ಯಾವ ಯಾವುದೋ ಸಂದರ್ಭಗಳಲ್ಲಿ ನಾನು ಬರೆದಿದ್ದ ಕೆಲವು ಲೇಖನಗಳನ್ನು ಆಯ್ದು ಪ್ರಿಯ ಮಿತ್ರ ಪ್ರೋ. ಮಲ್ಲೇಪುರಂ ವೆಂಕಟೇಶ ಅವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಾಸಾರಾಂಗದಿಂದ ಪ್ರಕಟಿಸುತ್ತಿದ್ದಾರೆ. ಇವುಗಳನ್ನೆಲ್ಲ ಅವರು ಯಾವ ಕಾರಣಕ್ಕಾಗಿ ಮೆಚ್ಚಿದ್ದಾರೋ ನನಗೆ ತಿಳಿಯದು. ಆದರೆ ಅವರ ಅಂತಃಕರಣಕ್ಕೆ ನಾನು ಮಾರುಹೋಗಿ ಇವುಗಳ ಪ್ರಕಟಣೆಯಲ್ಲಿ ಅಲ್ಪಸ್ವಲ್ಪ ಉತ್ಸಾಹ ತಾಳಿದ್ದೇನೆ.

ಈ ಲೇಖನಗಳನ್ನು ಪ್ರಕಟಿಸಲು ದೊಡ್ಡ ಮನಸ್ಸು ಮಾಡಿದವರು ಮೊದಲಿಗೆ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ನನ್ನ ಮಾನ್ಯ ಮಿತ್ರ ಡಾ. ಬಿ.ಎ. ವಿವೇಕ ರೈ ಅವರು; ಈ ಸಂಕಲನವು ಈಗ ಪ್ರಕಟಣೆಯ ಹಂತವನ್ನು ತಲುಪಿದ್ದು ಮಿತ್ರರಾದ ಪ್ರೊ. ಮಲ್ಲೇಪುರಂ ವೆಂಕಟೇಶ ಮತ್ತು ಡಾ. ಎಚ್. ಎನ್. ಮುರಳೀಧರ ಅವರ ವಿಶ್ವಾಸಪೂರ್ವಕರ ಶ್ರಮದಿಂದ. ಈ ಮಿತ್ರತ್ರಯರಿಗೆ ನಾನು ಅತ್ಯಂತ ಕೃತಜ್ಞವಾಗಿದ್ದೇನೆ.

ಅಚ್ಚುಕಟ್ಟಾಗಿ ಈ ಲೇಖನಗಳ ಅಕ್ಷರ ಸಂಯೋಜನೆ ಮಾಡಿದ ಶ್ರೀಮತಿ ವಸಂತಲಕ್ಷ್ಮಿ ಅವರಿಗೂ ಶ್ರದ್ಧೆಯಿಂದ ಕರಡು ತಿದ್ದು ಸಹಕರಿಸಿದ ಶ್ರೀ ಅನ್ನದಾನೇಶ್ ಹಾಗೂ ಶ್ರೀ ಕಾರ್ತಿಕ್ ಅವರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು.

ಪ್ರಭುಶಂಕರ