ಮಾಡಬಾರದು ಮುಂದೆ ಕೇಡು
ತನಿಗದು || ಬೇಡಿ ಪಲವ
ದಂಬದಿಂದ ಕೂಡಿ ಕಾಮ್ಯಾ ಪೂಜೆಗಳನು || ಮಾಡ ||

ಸುತನೊಳಿರುವ ಹಿತವ ಪ್ರಮದ ಪತಿಯೊಳಿಡು
ತನ್ನದೇಕ ಮತಿಯ ದನವ ಕೂಡದೆ ಶಿವಗೆ
ಸುತದ ಹಿತವ ಬಯಸಿ ನುತಿಯ || ಮಾಡ ||

ಸಿರಿಯು ಹರುಷವಿರಲು ತನಿಗೆ ಮರೆತು
ಹರನ ಚರಣಗಳೆನು ಮರಣ ಭೀತಿ ಬರಲು
ಹರನೆ ಪೆಕ್ಷಿಯೋ ಎಂಬ ಕಾಮ್ಯಜಪಮ || ಮಾಡ ||

ಪರಮ ಸದ್ಗುರು ಶಂಕರಾರ್ಯನ ಚರಣ
ಕೃಪೆಗೆ ದೂರನಾಗಿ ಧರೆಯ ಭೋಗಕಾಗಿ
ಬರಿದೆ ಸಿರಿಯ ಬಯಸಿಕ್ರೂರ ತಪವಂ || ಮಾಡ ||