ಭಂಡ ನಾದೆನು ನಾನು ಸಂಸಾರದಿ ಕಂಡು ಕಾಣದ ಹಾಗೆ ಇರಬಹುದೆ ನರ ಹರಿಯೇ ಕಂಡು ಕಲ್ಲುಗಳಿಗೆ ಕೈ ಮುಗಿದು ಸಾಕಾದೆ ಹಿಂಡೆ ಕಾರರ ಮನೆಗೆ ಬಲುತಿರುಗಿದೆ ಶುಂಡಾಲ ನಂತೆನ್ನ ಮತಿ ಮಂದವಾಯಿತೇ ಪುಂಡರೀ ಸಾಕ್ಷೆ ನೀ ಕರುಣೆ ತೋರಿಸೊ ಬೇಗ ಭಂಡನಾಧೆನೋ ನಾನ ವೃತಂಗಳನು ನಾ ಮಾಡಿ ಬಳದೆನೋ ಏನಾದರು ಎನಗೆ ಫಲವಿಲ್ಲ ಆ ನಾಡೋ ಈನಾಡು ಸುತ್ತಿ ನಾಮರುಳಾದೆ ನೀನಾದರು ಕೃಪೆಯಿಡುತ ಬೇಗ ಹರಿಯೇ || ಪ || ಬಂಢನಾದೆನೋ || ಬುದ್ದಿ ಹೀನರ ಮಾತು ಕೇಳಿ ನಾ ಮರುಳಾದೆ ಬುದ್ಧಿಯಿಲ್ಲದೆ ಮನವು ಕೆಟ್ಟು ಹೊಯ್ತಿ ಸಿದ್ದನುತ ಸಾರಿ ಪುರಂದರ ವಿಠಲ ತತ್ವದಾ ಸಿದ್ದಿಯನು ದಯಗೈದು ಉಳಿಸು ನೀ ಎನ್ನ || ಪ || ಭಂಡನಾದೆನೋ ನಾನು ಸಂಸಾರದಿ ||