ಪ್ರ. .. ಜೈವಿಕ ವೈವಿಧ್ಯತೆ ಅಥವಾ ಜೀವಿ ವೈವಿಧ್ಯತೆ ಎಂದರೇನು?

: ಸರಳವಾಗಿ ಹೇಳುವುದಾದಲ್ಲಿ ‘ಜೈವಿಕ ವೈವಿಧ್ಯತೆ’(Biodiversity) ಪದದ ಅರ್ಥ ಭೂಮಿಯ ಮೇಲಿನ ಎಲ್ಲ ಜೈವಿಕ ರೂಪಗಳ ವೈವಿಧ್ಯತೆ. ಅದು ಪ್ರಭೇದಗಳ

(Species) ನಡುವಿನ ಹಾಗೂ ಪ್ರಭೇದಗಳೊಳಗಿನ ವಿವಿಧ ರೂಪ ಮತ್ತು ವೈವಿಧ್ಯತೆಯನ್ನು ಒಳಗೊಂಡಿದೆ. ಅದು ಪರಿಸರ ವ್ಯವಸ್ಥೆಯ ವೈವಿಧ್ಯತೆಯನ್ನೂ ಒಳಗೊಳ್ಳುತ್ತದೆ. ಜೈವಿಕ ವೈವಿಧ್ಯತೆಯು,

 • ಸಸ್ಯಗಳ, ಪ್ರಾಣಿಗಳ ಮತ್ತು ಸೂಕ್ಷ್ಮಜೀವಿಗಳ ಕಾಡು ಪ್ರಭೇದಗಳು ಮತ್ತು ತಳಿಗಳು
 • ಬೇಸಾಯದ ಬೆಳೆಗಳು, ಜಾನುವಾರು ಮತ್ತು ಕುಕ್ಕುಟಗಳಂತಹ ಮಾನವನಿಂದ ಸಾಕಲ್ಪಡುತ್ತಿರುವ ಪ್ರಭೇದಗಳು ಮತ್ತು ತಳಿಗಳು
 • ಕಾಡು, ಮರುಭೂಮಿ ಮತ್ತು ಕರಾವಳಿಗಳಂತಹ ಪ್ರಾಕೃತಿಕ ಪರಿಸರ ವ್ಯವಸ್ಥೆಗಳು
 • ಕೃಷಿಭೂಮಿಯಂತಹ ಕೃಷಿಪರಿಸರ ವ್ಯವಸ್ಥೆಗಳನ್ನು ಒಳಗೊಂಡಿದೆ.

ಪ್ರ. .. ಜೈವಿಕ ಸಂಪನ್ಮೂಲಗಳೆಂದರೆ ಏನು?

: ಜೈವಿಕ ವೈವಿಧ್ಯತೆಯಿಂದ ಪಡೆಯುವಂಥವು ಜೈವಿಕ ಸಂಪನ್ಮೂಲಗಳು (Biological Resources). ಜೈವಿಕ ಸಂಪನ್ಮೂಲಗಳು ಮಾನವನಿಗೆ ಉಪಯುಕ್ತವಾಗಬಲ್ಲ ಅಥವಾ ಮೌಲ್ಯಯುತವಾಗಬಲ್ಲ ಯಾವುದೇ ಜೀವಿ ಅಥವಾ ಜೈವಿಕ ಅಂಶವಾಗಬಹುದು. ಅಂದರೆ  ಇದು ಎಲ್ಲ ರೀತಿಯ ಸಸ್ಯಗಳು, ಸೂಕ್ಷ್ಮಜೀವಿಗಳು ಮತ್ತು ಪ್ರಾಣಿಗಳು (ಹಾಲಿನಂತಹ ಪ್ರಾಣಿಜನ್ಯ ಉತ್ಪನ್ನಗಳನ್ನೂ ಒಳಗೊಂಡಂತೆ) ಹಾಗೂ ಅವುಗಳ ಭಾಗ ಅಥವಾ ಅಂಗಗಳನ್ನು ಒಳಗೊಂಡಿರುತ್ತದೆ.

ಪ್ರ. .. ಬೌದ್ಧಿಕ ಆಸ್ತಿ ಎಂದರೇನು?

: ವ್ಯಕ್ತಿಯೊಬ್ಬನ ‘ಆಸ್ತಿ’ ಎಂದರೆ ಆತನ/ಆಕೆಯ ಮನೆಯ ಅಥವಾ ವಾಹನದ ಮೇಲಿನ ಆತನ ಹಕ್ಕಿನಂತೆ, ವ್ಯಕ್ತಿಯೊಬ್ಬನ ‘ಬೌದ್ಧಿಕ ಆಸ್ತಿ’ ಎಂದರೆ ಆತನ ವಿಚಾರ, ಮಾಹಿತಿ, ಸಂಶೋಧನೆ ಅಥವಾ ಆವಿಷ್ಕಾರದ ಮೇಲಿನ ಆತನ ಹಕ್ಕು. ಅಂದರೆ, ಆತನ ಬುದ್ಧಿಮತ್ತೆಯಿಂದ ಹೊರಹೊಮ್ಮಿರುವುದು.

ಪ್ರ .: ಬೌದ್ಧಿಕ ಆಸ್ತಿ ಹಕ್ಕುಗಳು (IPR) ಎಂದರೇನು?

: ಬೌದ್ಧಿಕ ಆಸ್ತಿ ಹಕ್ಕುಗಳು ಎಂದರೆ ಬೌದ್ಧಿಕ ಆಸ್ತಿಯ ಮೇಲಿನ ವ್ಯಕ್ತಿಯೊಬ್ಬನ ಅಥವಾ ಸಂಸ್ಥೆಯೊಂದರ ಕಾನೂನಿನ ಹಕ್ಕುಗಳು. ಬೌದ್ಧಿಕ ಆಸ್ತಿಗೆ ಬೌದ್ಧಿಕ ಆಸ್ತಿ ಹಕ್ಕುಗಳು ‘ರಕ್ಷಣೆ’ಯನ್ನು ಒದಗಿಸುತ್ತವೆ. ಅಂದರೆ, ಬೌದ್ಧಿಕ ಆಸ್ತಿ ಹಕ್ಕನ್ನು ಪಡೆದುಕೊಂಡಿದ್ದಲ್ಲಿ, ಆ ಬೌದ್ಧಿಕ ಆಸ್ತಿಯನ್ನು ಹಕ್ಕುದಾರನ ಅನುಮತಿಯಿಲ್ಲದೆ ಯಾರೂ ಕಾನೂನಿನ್ವಯ ಬಳಸುವಂತಿಲ್ಲ (ಸಾಮಾನ್ಯವಾಗಿ ಬೌದ್ಧಿಕ ಆಸ್ತಿಯ ವಾಣಿಜ್ಯ ಬಳೆಯನ್ನು ಮಾತ್ರ ಬೌದ್ಧಿಕ ಆಸ್ತಿ ನಿಯಂತ್ರಿಸುತ್ತದೆ). ಬೌದ್ಧಿಕ ಆಸ್ತಿ ಹಕ್ಕನ್ನು ವಿದ್ಯುನ್ಮಾನ ಸಂಶೋಧನೆಗಳಿಗೆ, ಪದ್ಯಗಳಿಗೆ ಅಥವಾ ಸಸ್ಯ ತಳಿಗಳಂತಹ ವಿಸ್ತೃತ ವ್ಯಾಪ್ತಿಯ ಉತ್ಪನ್ನಗಳಿಗೆ ನೀಡಲಾಗುತ್ತದೆ. ವಿವಿಧ ರೀತಿಯ ಬೌದ್ಧಿಕ ಆಸ್ತಿಗಳ ಸಂರಕ್ಷಣೆಗೆ ವಿವಿಧ ರೀತಿಯ ಬೌದ್ಧಿಕ ಆಸ್ತಿ ಹಕ್ಕುಗಳನ್ನು ವಿನ್ಯಾಸಗೊಳಿಸಲಾಗುತ್ತದೆ. ಉದಾಹರಣೆಗೆ, ‘ಸಸ್ಯ ತಳಿಸಂವರ್ಧಕರ ಹಕ್ಕು’ಗಳೆಂಬ ಬೌದ್ಧಿಕ ಆಸ್ತಿ ಹಕ್ಕುಗಳು ಸಸ್ಯ ತಳಿಗಳನ್ನು ಸಂರಕ್ಷಿಸುತ್ತದೆ ಹಾಗೂ ‘ಕಾಪಿರೈಟ್‌’ ಎಂಬುದು ಕಲೆ ಮತ್ತು ಸಾಹಿತ್ಯದ ಕೃತಿಗಳನ್ನು ಸಂರಕ್ಷಿಸುತ್ತದೆ.

ಪ್ರ. .: ಬೌದ್ಧಿಕ ಆಸ್ತಿ ಹಕ್ಕು ಹೊಂದುವ ಉದ್ದೇಶವೇನು?

: ಆವಿಷ್ಕಾರಗಳಿಗೆ ಮತ್ತು ನವೀನ ಶೋಧಗಳನ್ನು ಅಭಿವೃದ್ಧಿಪಡಿಸಲು ಉತ್ತೇಜನ ನೀಡುವುದು, ಸ್ಪರ್ಧಿಯೊಬ್ಬ ಆ ಆವಿಷ್ಕಾರವನ್ನು ನಕಲು ಮಾಡಬಹುದೆನ್ನುವ ಹೆದರಿಕೆ ಇಲ್ಲದೆ ಸಂಶೋಧಕರಿಗೆ ತಮ್ಮ ಆವಿಷ್ಕಾರಗಳಿಂದಾಗಿ ಸೂಕ್ತ ಆರ್ಥಿಕ ಲಾಭ ದೊರೆಯುವುದನ್ನು ಖಾತ್ರಿ ಪಡಿಸುವುದು ಬೌದ್ಧಿಕ ಆಸ್ತಿ ಹಕ್ಕು ವ್ಯವಸ್ಥೆಯ ಉದ್ದೇಶವಾಗಿದೆ. ಆವಿಷ್ಕಾರವನ್ನು ಇತರರು  ನಕಲು ಮಾಡಿ, ವಾಣಿಜ್ಯವಾಗಿ ತಯಾರಿಸದಂತೆ, ಮಾರಾಟ ಮಾಡದಂತೆ ಹಾಗೂ ಬಳಸದಂತೆ ಮಾಡುವುದರಿಂದ ಬೌದ್ಧಿಕ ಆಸ್ತಿ ಹಕ್ಕು ಒಂದು ನಿರ್ದಿಷ್ಟ ಅವಧಿಯವರೆಗೆ ಸಂಶೋಧಕನಿಗೆ ತನ್ನ ಆವಿಷ್ಕಾರದ ಮೇಲೆ ಏಕಸ್ವಾಮ್ಯದ ಹಕ್ಕು ನೀಡುತ್ತದೆ ಹಾಗೂ ಆತನಿಗೆ ಗರಿಷ್ಠ ಲಾಭ ದೊರಯುವಂತೆ ಮಾಡುತ್ತದೆ.

ಪ್ರ .: ಬೌದ್ಧಿಕ ಆಸ್ತಿ ಹಕ್ಕುದಾರನಿಗೆ ಯಾವ್ಯಾವ ಹಕ್ಕುಗಳು ಇರುತ್ತವೆ?

: ಇತರ ವ್ಯಕ್ತಿಗಳು ಬೌದ್ಧಿಕ ಆಸ್ತಿ ಹಕ್ಕು ಸಂರಕ್ಷಿತ ಆವಿಷ್ಕಾರವನ್ನು ಅಥವಾ ಮಾಹಿತಿಯನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸದಂತೆ ತಡೆಯುವ ಹಕ್ಕಿದೆ ಹಾಗೂ ಯಾರಾದರೂ ಅದನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವ ಇಚ್ಛೆ ತೋರಿಸಿದಲ್ಲಿ, ಅವರಿಂದ ಹಣ ಪಡೆಯುವ (ಉದಾ: ರಾಯಧನ) ಹಕ್ಕಿದೆ. ಅನುಮತಿಯಿಲ್ಲದೆ ಯಾರಾದರೂ ಬೌದ್ಧಿಕ ಆಸ್ತಿ ಹಕ್ಕು ರಕ್ಷಿತ ವಸ್ತುವನ್ನು ವಾಣಿಜ್ಯವಾಗಿ ಬಳಸಿದಲ್ಲಿ ಬೌದ್ಧಿಕ ಆಸ್ತಿ ಹಕ್ಕುದಾರ ಅವರ ಮೇಲೆ ಕಾನೂನು ಕ್ರಮ ಜರುಗಿಸಬಹುದು. ಸಾಮಾನ್ಯವಾಗಿ ಬೌದ್ಧಿಕ ಆಸ್ತಿ ಹಕ್ಕುಗಳು ಸೀಮಿತ ಅವಧಿಯ ಸಿಂಧುತ್ವವನ್ನು ಮಾತ್ರ ಹೊಂದಿರುತ್ತವೆ.

ಪ್ರ. .: ವ್ಯಕ್ತಿಯೊಬ್ಬ ಬೌದ್ಧಿಕ ಆಸ್ತಿ ಹಕ್ಕನ್ನು ಪಡೆಯುವುದು ಹೇಗೆ?

: ವ್ಯಕ್ತಿಯೊಬ್ಬ ತನ್ನ ದೇಶದಲ್ಲಿನ ಪೇಟೆಂಟ್‌ಕಚೇರಿಗೆ (ಅಥವಾ ಸಮಾನಾಂತರ) ಅರ್ಜಿಯೊಂದನ್ನು ಸಲ್ಲಿಸಬೇಕು. ಬೌದ್ಧಿಕ ಆಸ್ತಿ ಹಕ್ಕನ್ನು ಮೂಲ ಸಂಶೋಧಕರಿಂದ ಅಥವಾ ಬೌದ್ಧಿಕ ಆಸ್ತಿ ಹಕ್ಕುದಾರರಿಂದ ಕೊಂಡುಕೊಳ್ಳಬಹುದು ಅಥವಾ ಪರವಾನಗಿ ಪಡೆದು ಬಳಸಬಹುದು.

ಪ್ರ. .: ಬೌದ್ಧಿಕ ಆಸ್ತಿ ಹಕ್ಕಿನ ಉಗಮ ಹೇಗಾಯಿತು?

: ಬಹಳ ಹಿಂದೆಯೇ ಬೌದ್ಧಿಕ ಆಸ್ತಿ ಹಕ್ಕು ಪರಿಕಲ್ಪನೆ ರೂಪುಗೊಂಡಿದೆ. ಜಗತ್ತಿನ ಮೊಟ್ಟ ಮೊದಲ ಬೌದ್ಧಿಕ ಆಸ್ತಿ ಹಕ್ಕು ಒಂದು ಪೇಟೆಂಟ್‌ಆಗಿದ್ದು (ಪೇಟೆಂಟ್‌ಗಳ ವಿವರಣೆಗಾಗಿ ಪ್ರ. ೨.೧೦ ಮತ್ತು ೨.೧೧ನ್ನು ನೋಡಿ) ಅದನ್ನು ೧೪೪೯ರಲ್ಲಿ ಇಂಗ್ಲೆಂಡಿನ ರಾಜ ಹೆನ್ರಿ ಸ್ಟೈನ್ಡ್‌ಗ್ಲಾಸ್‌ತಯಾರಿಕೆಗೆ ಉಟ್ಯಾನ್‌ನ ಜಾನ್‌ಎಂಬ ಪ್ಲೆಮಿಶ್‌ವ್ಯಕ್ತಿಗೆ ೨೦ ವರ್ಷಗಳ ಪೇಟೆಂಟ್‌ನೀಡಿದರು. ಉತ್ತರ ಅಮೆರಿಕದ ಮೊಟ್ಟ ಮೊದಲ ಪೇಟೆಂಟ್‌೧೭೯೦ ರಲ್ಲಿ ಫಿಲಡೆಲ್ಫಿಯಾದ ಸ್ಯಾಮ್ಯುಯಲ್‌ಹಾಪ್‌ಕಿನ್ಸ್‌ಎಂಬಾತನಿಗೆ ಸೋಪ್‌ತಯಾರಿಕೆಯಲ್ಲಿನ ಶುದ್ಧಗೊಳಿಸುವ ಫಾರ್ಮುಲಾ ‘ಕುಡಿಕೆ ಮತ್ತು ಮುತ್ತಿನ ಬೂದಿ’ ತಯಾರಿಕೆಗೆ ನೀಡಲಾಯಿತು.

ಪ್ರ .: ವಿವಿಧ ರೀತಿಯ ಬೌದ್ಧಿಕ ಆಸ್ತಿ ಹಕ್ಕುಗಳು ಯಾವುವು?

: ಈ ಮುಂದಿನವು ಅಂತರರಾಷ್ಟ್ರೀಯವಾಗಿ ಸ್ವೀಕೃತವಾದ ಬೌದ್ಧಿಕ ಆಸ್ತಿ ಹಕ್ಕುಗಳು:

 • ಪೇಟೆಂಟ್‌ಗಳು (Patents)
 • ಸಸ್ಯತಳಿ ಸಂವರ್ಧಕರ ಹಕ್ಕುಗಳು (Plant Breeder’s Rights)
 • ಭೌಗೋಳಿಕ ಸೂಚಕಗಳು (Geographical Indications)
 • ಕಾಪಿ ರೈಟ್‌ಗಳು (Copy Rights)
 • ಟ್ರೇಡ್‌ಮಾರ್ಕ್‌‌ಗಳು (Trademarks)
 • ಕೈಗಾರಿಕಾ ವಿನ್ಯಾಸಗಳು (Industrial Designs)
 • ವ್ಯಾಪಾರ ರಹಸ್ಯಗಳು (Trade secrets)
 • ಇಂಟಿಗ್ರೇಟೆಡ್‌ಕಂಪ್ಯೂಟರ್ ಸರ್ಕೂಟ್‌ಗಳ ವಿನ್ಯಾಸ ಲೇಔಟ್‌ಗಳ ಹಕ್ಕುಗಳು (Rights of Layout Designs of Intregrated Computer Circuits)

ಇವುಗಳಲ್ಲಿ ಜೀವವೈವಿಧ್ಯತೆಯ ಚರ್ಚೆಗೆ ಮುಖ್ಯವಾದುವುಗಳೆಂದರೆ ಪೇಟೆಂಟ್‌ಗಳು, ಸಸ್ಯ ತಳಿ ಸಂವರ್ಧಕರ ಹಕ್ಕುಗಳು ಹಾಗೂ ಭೌಗೋಳಿಕ ಸೂಚಕಗಳು.     

ಇವುಗಳ ವಿವರಗಳನ್ನು ಈ ಮುಂದೆ ನೀಡಲಾಗಿದೆ (ಪ್ರತಿಯೊಂದು ಬೌದ್ಧಿಕ ಆಸ್ತಿ ಹಕ್ಕಿನ ಬಗ್ಗೆ ಸಾಮಾನ್ಯ ವಿವರಣೆ ನೀಡುವುದು ಇಲ್ಲಿನ ಉದ್ದೇಶವಾಗಿದೆ. ವಿವಿಧ ಬೌದ್ಧಿಕ ಆಸ್ತಿ ಹಕ್ಕುಗಳ ಬಗೆಗೆ ಆಯಾ ದೇಶಗಳು ತಮ್ಮದೇ ನಿರ್ದಿಷ್ಟ ಕಾನೂನುಗಳನ್ನು ಹೊಂದಿವೆ. ಬೌದ್ಧಿಕ ಆಸ್ತಿ ಹಕ್ಕು ಹಾಗೂ ಜೀವವೈವಿಧ್ಯತೆಯ ಬಗೆಗಿನ ಭಾರತದ ಕಾನೂನುಗಳ ಮಾಹಿತಿಗೆ ಅನುಬಂಧ ನೋಡಿ).

ಪೇಟೆಂಟ್‌ಗಳು

ಪ್ರ. .೧೦ ಪೇಟೆಂಟ್‌ಎಂದರೇನು?

: ಆವಿಷ್ಕಾರವನ್ನು ವಾಣಿಜ್ಯವಾಗಿ ತಯಾರಿಸುವ, ಬಳಸುವ ಅಥವಾ ಮಾರಾಟ ಮಾಡುವ ಸಂಪೂರ್ಣ ಕಾನೂನಿ ಹಕ್ಕನ್ನು ಹೊಂದಿರುವುದೇ ಪೇಟೆಂಟ್‌. ಆ ಆವಿಷ್ಕಾರವನ್ನು ಇತರರು ವಾಣಿಜ್ಯವಾಗಿ ಬಳಕೆ ಮಾಡಲು ಬಯಸಿದಲ್ಲಿ ಅವರು ಪೇಟೆಂಟ್‌ಹೊಂದಿರುವವರ ಅನುಮತಿ ಪಡೆಯಬೇಕು ಹಾಗೂ ಸಾಮಾನ್ಯವಾಗಿ ಅವರಿಗೆ ರಾಯಧನವನ್ನು ಪಾವತಿಸಬೇಕಾಗುತ್ತದೆ. ಬಹುಪಾಲು ಎಲ್ಲ ಬೌದ್ಧಿಕ ಆಸ್ತಿ ಹಕ್ಕುಗಳಂತೆಯೇ ಪೇಟೆಂಟ್‌ಹೊಂದಿರುವವರಿಗೆ ಪೇಟೆಂಟ್‌ಒಂದು ತಾತ್ಕಾಲಿಕ ಏಕಸ್ವಾಮ್ಯವನ್ನು ನೀಡುತ್ತದೆ ಹಾಗೂ ಇನ್ನೂ ಒಂದಷ್ಟು ಹೆಚ್ಚಿನ ಆವಿಷ್ಕಾರಗಳನ್ನು ಅಭಿವೃದ್ಧಿಪಡಿಸಲು ಪ್ರೋತ್ಸಾಹಕವಾಗಿಯೂ ಇರುತ್ತದೆ.

ಇತರ ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಹೋಲಿಸಿದಲ್ಲಿ, ಸಂರಕ್ಷಿತ ಆವಿಷ್ಕಾರವನ್ನು ಬೌದ್ಧಿಕ ಆಸ್ತಿ ಹಕ್ಕುದಾರರನ್ನು ಹೊರತುಪಡಿಸಿ ಇತರರು ಹೇಗೆ ಬಳಸಬಹುದೆನ್ನುವ ನಿಬಂಧನೆಗಳ ಬಗೆಗೆ ಕಡಿಮೆ ವಿನಾಯಿತಿಗಳನ್ನು ಹೊಂದಿರುವ ಪೇಟೆಂಟ್‌ಅತ್ಯಂತ ಬಲಿಷ್ಠ ರೂಪದ್ದಾಗಿದೆ. ಉದಾಹರಣೆಗೆ, ಪೇಟೆಂಟ್‌ಸಂರಕ್ಷಿತ ಸಸ್ಯ ತಳಿಗಳನ್ನು ಮುಂದಿನ ತಳಿಸಂವರ್ಧನೆಗೆ ಬಳಸುವುದು ಸಸ್ಯ ತಳಿ ಸಂವರ್ಧಕ ಹಕ್ಕುಗಳಿಗೆ (ನೋಡಿ ಪ್ರ. ೨.೧೨) ಹೋಲಿಸಿದಲ್ಲಿ ಸಾಮಾನ್ಯವಾಗಿ ತೀರಾ ಕಷ್ಟಕರವಾದುದು. ಪೇಟೆಂಟ್‌ಗಳು ಪೇಟೆಂಟ್‌ಹೊಂದಿರುವವರಿಗೆ ಪೇಟೆಂಟ್‌ಆಗಿರುವ ವಸ್ತುವಿನ ಮೇಲೆ ಬಲವಾದ ನಿಯಂತ್ರಣವನ್ನು ನೀಡುತ್ತದೆ.

ಪ್ರ. .೧೧ ಪೇಟೆಂಟ್‌ನ ಮುಖ್ಯ ವೈಶಿಷ್ಟ್ಯಗಳೇನು?

: ಪೇಟೆಂಟ್‌ನ ಮುಖ್ಯ ವೈಶಿಷ್ಟ್ಯಗಳೇನೆಂದರೆ:

 • ಆವಿಷ್ಕಾರವು ನಾವೀನ್ಯತೆಯನ್ನು ಹೊಂದಿದ್ದು, ಉಪಯುಕ್ತಕರವಾಗಿದ್ದರೆ (ಅಂದರೆ ಔದ್ಯೋಗಿಕ ಬಳಕೆಯ ಸಾಧ್ಯತೆಯನ್ನು ಹೊಂದಿದ್ದಲ್ಲಿ) ಹಾಗೂ ಆಯಾ ಕ್ಷೇತ್ರದ ತಜ್ಞರಿಗೆ ತಿಳಿದಿಲ್ಲದ ಒಂದು ಹೊಸ ಹಂತವನ್ನು ಆಧರಿಸಿದ್ದಲ್ಲಿ ಮಾತ್ರ ಪೇಟೆಂಟ್‌ಗಳನ್ನು ಕೊಡಲಾಗುತ್ತದೆ.
 • ಪೇಟೆಂಟ್‌ಗಳನ್ನು ಉತ್ಪನ್ನಗಳಿಗೆ ಹಾಗೂ ವಿಧಾನಗಳಿಗೂ ಸಹ ನೀಡಲಾಗುತ್ತದೆ (ಉದಾ: ಈಗಿರುವ ಉತ್ಪನ್ನದ ತಯಾರಿಕೆಯ ಹೊಸ ವಿಧಾನಕ್ಕೂ ಪೇಟೆಂಟ್‌ನೀಡುವುದು ಸಾಧ್ಯವಿದೆ).
 • ಸಾರ್ವಜನಿಕ ಹಿತಾಸಕ್ತಿಯಿಂದ, ಕೆಲವು ದೇಶಗಳು ಕೆಲವು ಉತ್ಪನ್ನಗಳಿಗೆ ಹಾಗೂ ಉತ್ಪದನಾ ವಿಧಾನಗಳಿಗೆ ಪೇಟೆಂಟ್‌ನೀಡುವುದಿಲ್ಲ (ಉದಾ: ಔಷಧಗಳು ಅಥವಾ ಆಹಾರ).
 • ಪೇಟೆಂಟ್‌ಅನ್ನು ಒಂದು ನಿರ್ದಿಷ್ಟ ಅವಧಿಗೆ ನೀಡಲಾಗುತ್ತದೆ. ಈ ಅವಧಿಯ ಅಂತರರಾಷ್ಟ್ರೀಯ ನಿಯಮವು ೨೦ ವರ್ಷಗಳಾಗಿದೆ.
 • ಪೇಟೆಂಟ್‌ಗಳನ್ನು ಕೊಳ್ಳಬಹುದು, ಮಾರಾಟ ಮಾಡಬಹುದು ಅಥವಾ ಬಾಡಿಗೆಗೆ ನೀಡಬಹುದು.
 • ಸಾಮಾನ್ಯವಾಗಿ ಪೇಟೆಂಟ್‌ಯಾವ ದೇಶದಲ್ಲಿ ನೀಡಲಾಗಿರುತ್ತದೆಯೋ ಆ ದೇಶದಲ್ಲಿ ಮಾತ್ರ ಸಿಂಧುವಾಗಿರುತ್ತದೆ. ಬೇರೆ ದೇಶಗಳಲ್ಲಿ ಅರ್ಜಿ ಸಲ್ಲಿಸಿರದಿದ್ದ ಆ ದೇಶಗಳಲ್ಲಿ ಅದು ಸಿಂಧುವಾಗಿರುವುದಿಲ್ಲ. ಆದರೆ, ಪೇಟೆಂಟ್‌ಗಳು ಸ್ಥಳೀಯವಾಗಿ ಅಥವಾ ಜಾಗತಿಕವಾಗಿ ಅನ್ವಯಿಸುವಂತೆ ಮಾಡುವ ಪ್ರವೃತ್ತಿ ಹೆಚ್ಚುತ್ತಿರುವಂತೆ ಇದೂ ಬದಲಾಗುತ್ತಿದೆ.
 • ಪೇಟೆಂಟ್‌ಪಡೆಯಬೇಕಾದಲ್ಲಿ, ಒಬ್ಬ ನುರಿತ ತಜ್ಞ ಆವಿಷ್ಕಾರವನ್ನು ನಕಲು ಮಾಡಲು ಸಾಧ್ಯವಾಗುವಂತೆ ಆ ಆವಿಷ್ಕಾರದ ತಯಾರಿಕಾ ವಿಧಾನದ ವಿವರಣೆಯನ್ನು ಅರ್ಜಿದಾರನು ಸಾಮಾನ್ಯವಾಗಿ ಸರ್ಕಾರಿ ಪೇಟೆಂಟ್‌ಕಚೇರಿಗೆ ನೀಡಬೇಕಾಗುತ್ತದೆ.

ಸಸ್ಯತಳಿ ಸಂವರ್ಧಕರ ಹಕ್ಕುಗಳು

ಪ್ರ. .೧೨: ಸಸ್ಯತಳಿ ಸಂವರ್ಧಕರ ಹಕ್ಕುಗಳು ಯಾವುವು?

: ಸಸ್ಯತಳಿ ಸಂವರ್ಧಕರ ಹಕ್ಕುಗಳು ಒಂದು ವಿಧದ ಬೌದ್ಧಿಕ ಆಸ್ತಿ ಹಕ್ಕುಗಳಾಗಿದ್ದು ಅವು ನಿರ್ದಿಷ್ಟವಾಗಿ ಸಸ್ಯ ತಳಿಗಳಿಗೆ ಮಾತ್ರ ಅನ್ವಯಿಸುತ್ತವೆ. ಒಂದು ಸಸ್ಯ ತಳಿಯೆಂದರೆ ಸಸ್ಯ ಪ್ರಭೇದವೊಂದರ ಉಪ-ವಿಭಾಗ ಅಥವಾ ವಿಧ (ಉದಾ: ಭತ್ತವು ಒಂದು ಪ್ರಭೇದವಾಗಿದ್ದು ಅದು ಬಾಸುಮತಿ ಭತ್ತ ಅಥವಾ ಮಲ್ಲಿಗೆ ಭತ್ತ ಮುಂತಾದ ತಳಿಗಳನ್ನು ಒಳಗೊಂಡಿರುತ್ತದೆ). ಹಾಗಾಗಿ ಸಸ್ಯತಳಿ ಸಂವಧ್ಕರ ಹಕ್ಕುಗಳನ್ನು ಪಡೆಯುವ ನಿರ್ಣಾಯಕ ಅಂಶಗಳಿಗಿಂತ ವಿಭಿನ್ನವಾಗಿರುತ್ತವೆ. ಸಸ್ಯತಳಿ ಸಂವರ್ಧಕರ ಹಕ್ಕುಗಳು ಸಸ್ಯತಳಿಗಳು ‘ಅಭಿವೃದ್ಧಿಪಡಿಸಿದವು, ‘ಆವಿಷ್ಕಾರಗಳಲ್ಲ’ ಎನ್ನುವ ಪರಿಕಲ್ಪನೆಯನ್ನು ಆಧರಿಸಿದೆ (ಪೇಟೆಂಟ್‌ಗಳು ಆವಿಷ್ಕಾರಗಳಿಗೆ ಅನ್ವಯಿಸುತ್ತವೆ). ಆದರೂ, ಕೆಲದೇಶಗಳು ಸಸ್ಯತಳಿಗಳಿಗೆ ಸಸ್ಯತಳಿ ಸಂವರ್ಧಕರ ಹಕ್ಕುಗಳು ಹಾಗೂ ಪೇಟೆಂಟ್‌ಎರಡನ್ನೂ ನೀಡುತ್ತವೆ.

ಸಾಂಪ್ರದಾಯಕವಾಗಿ ರೈತರು ತಮ್ಮ ಹಿಂದಿನ ವರ್ಷದ ಬೆಳೆಯಿಂದ ಬಿತ್ತನೆ ಬೀಜಗಳನ್ನು  ಮಾರಾಟಮಾಡುತ್ತಾರೆ, ವಿನಿಮಯಮಾಡಿಕೊಳ್ಳುತ್ತಾರೆ ಅಥವಾ ತಾವೇ ಸ್ವತಃ ಬಿತ್ತನೆಗೆ ಬಳಸುತ್ತಾರೆ. ಹಾಗಾಗಿ ಇದರಿಂದ ಸಸ್ಯ ತಳಿ ಸಂವರ್ಧಕರು ತಮ್ಮ ಸಸ್ಯತಳಿಗಳ ಪುನರ್ ಮಾರಾಟ ಕುಂಠಿತವಾಗುತ್ತದೆಂದು ಭಾವಿಸುತ್ತಾರೆ. ಆಯಾ ದೇಶವು ತನ್ನ ಬೌದ್ಧಿಕ ಆಸ್ತಿ ಹಕ್ಕು ಹೇಗೆ ಜಾರಿಗೆ ತರುತ್ತದೆ ಎನ್ನುವುದನ್ನು ಅವಲಂಬಿಸಿ ಸಸ್ಯತಳಿ ಸಂವರ್ಧಕರ ಹಕ್ಕುಗಳನ್ನು ರೈತರು ಸಸ್ಯತಳಿ ಸಂವರ್ಧಕರ ಹಕ್ಕು ರಕ್ಷಿತ ಸಸ್ಯತಳಿಗಳ ಬೀಜಗಳನ್ನು ಬಿತ್ತನೆಗೆ ಮಾರುವುದನ್ನು ಅಥವಾ ಸ್ವತಃ ಬಿತ್ತನೆ ಮಾಡಿಕೊಳ್ಳುವುದರ ಮೇಲೆ ನಿರ್ಬಂಧ ಹೇರಲು ಬಳಸಬಹುದು. ಇದರಿಂದ ರೈತರು ತಳಿಸಂವರ್ಧಕರಿಂದ ಹೊಸ ಬಿತ್ತನೆಯನ್ನು ಕೊಳ್ಳುವುದು ಅವಶ್ಯಕವಾಗುವಂತೆ ಮಾಡಬಹುದು.

ಪ್ರ. .೧೩: ಸಸ್ಯತಳಿ ಸಂವರ್ಧಕರ ಹಕ್ಕುಗಳ ಪ್ರಮುಖ ವೈಶಿಷ್ಟ್ಯಗಳೇನು?

: ಸಂರಕ್ಷಿತ ಸಸ್ಯತಳಿಗಳನ್ನು ಉತ್ಪಾದಿಸಲು ಹಾಗೂ ಮಾರಾಟಮಾಡಲು ಹಕ್ಕುದಾರನಿಗೆ ಸಸ್ಯತಳಿ ಸಂವರ್ಧಕರ ಹಕ್ಕುಗಳು ಸಂಪೂರ್ಣ ಅಧಿಕಾರ ನೀಡುತ್ತವೆ ಅಥವಾ ಸಸ್ಯತಳಿ ಸಂವರ್ಧಕರ ಹಕ್ಕುದಾರನಿಗೆ ಹಣಪಾವತಿಯ ಆಧಾರದ ಮೇಲೆ ಆತ ಇತರರಿಗೆ ಉತ್ಪಾದಿಸಿ ಮಾರಾಟ ಮಾಡಲು ಅನುಮತಿ ನೀಡುವ ಅಧಿಕಾರವನ್ನು ನೀಡಿರುತ್ತದೆ.

ಸಸ್ಯತಳಿ ಸಂವರ್ಧಕರ ಹಕ್ಕಿನಡಿ ಸಸ್ಯ ತಳಿಯೊಂದನ್ನು ತರಬೇಕಿದ್ದಲ್ಲಿ ಆ ತಳಿಯು,

 • ವಿಶಿಷ್ಟವಾಗಿರಬೇಕು: ಆ ತಳಿಯು ಇತರ ತಳಿಗಳಿಗಿಂತ ವೈಶಿಷ್ಟ್ಯಗಳಲ್ಲಿನ ವ್ಯತ್ಯಾಸಗಳಿಂದಾಗಿ ಸ್ಫುಟವಾಗಿ ಗುರುತಿಸುವಂತಿರಬೇಕು.
 • ಸಮರೂಪ ಹೊಂದಿರಬೇಕು: ಬೆಳೆಯ ಎಲ್ಲ ಕೊಯಿಲಿನಲ್ಲೂ ಸಮರೂಪದ ಅಥವಾ ನಿರ್ದಿಷ್ಟ ಲಕ್ಷಣಗಳನ್ನು ತೋರಿಸುವಂತಿರಬೇಕು. ಬಿತ್ತನೆಯ ಅಥವಾ ಸಂವರ್ಧನೆಯ ಪರಿಸ್ಥಿತಿಗಳನ್ನು ಆಧರಿಸಿ ಸ್ವಲ್ಪ ವ್ಯತ್ಯಾಸಗಳಿಗೆ ಮಾತ್ರ ಅವಕಾಶವಿರುತ್ತದೆ.
 • ಸ್ಥಿರವಾಗಿರಬೇಕು: ಪುನರಾವರ್ತಿತ ಸಂವರ್ಧನೆಯ ನಂತರವೂ ಮುಂದಿನ ತಲೆಮಾರುಗಳಲ್ಲಿ ಮೂಲ ಗುಣಲಕ್ಷಣಗಳನ್ನು ಆ ತಳಿಯು ಉಳಿಸಿಕೊಳ್ಳಬೇಕು.
 • ನಾವೀನ್ಯತೆ ಹೊಂದಿರಬೇಕು: ಅದು ಪ್ರಸ್ತುತ ಬಳಕೆಯಲ್ಲಿರುವ ತಳಿಗಳಿಗಿಂತ ವಿಭಿನ್ನವಾಗಿರುವ ಹೊಸತಳಿಯಾಗಿರಬೇಕು. (ಸಸ್ಯಗಳ ಹೊಸ ತಳಿಗಳ ಅಂತರರಾಷ್ಟ್ರೀಯ ಸಂರಕ್ಷಣಾ ಸಮಾವೇಶದ
  [UPOV] ಸದಸ್ಯರಾಗಿರುವ ಕೆಲದೇಶಗಳು, ತಳಿಯೊಂದು ಈಗಾಗಲೇ ಅಸ್ತಿತ್ವದಲ್ಲಿಯೇ ಅಥವಾ ಇಲ್ಲವೇ ಎಂಬುದರ ಆಧಾರದ ಮೇಲೆ ನಾವೀನ್ಯತೆಯನ್ನು ಗುರುತಿಸುವುದಿಲ್ಲ. ಬದಲಿಗೆ ಈ ಹಿಂದೆ ಅದು ವಾಣಿಜ್ಯವಾಗಿ ಮಾರಾಟ ಮಾಡಲ್ಪಟ್ಟಿದೆಯೇ ಎಂಬುದರ ಆಧಾರದ ಮೇಲೆ ಗುರುತಿಸುತ್ತಾರೆ.  UPOV ಬಗೆಗಿನ ವಿವರಗಳಿಗೆ ಅನುಬಂಧ ೧ ನೋಡಿ.

ಪ್ರ. .೧೪: ಸಸ್ಯ ತಳಿ ಸಂವರ್ಧಕರ ಹಕ್ಕುಗಳು ಹಾಗೂ ಸಸ್ಯ ತಳಿಹಕ್ಕುಗಳ ನಡುವಣ ವ್ಯತ್ಯಾಸವೇನು?

: ಸಸ್ಯ ತಳಿ ಸಂವರ್ಧಕರ ಹಕ್ಕುಗಳು ಹಾಗೂ ಸಸ್ಯ ತಳಿಹಕ್ಕುಗಳು ಎರಡೂ ಒಂದೇ. ಬೌದ್ಧಿಕ ಆಸ್ತಿ ಹಕ್ಕುಗಳ ಸಂಬಂಧಿತ ಬರಹಗಳಲ್ಲಿ ಆ ಪದಗಳನ್ನು ಅದಲುಬದಲಾಗಿ ಬಳಸುವುದರಿಂದ ಗೊಂದಲಕ್ಕೆಡೆಮಾಡಿಕೊಡುತ್ತದೆ. ಆ ರೀತಿಯ ಗೊಂದಲಕ್ಕೆಡೆಮಾಡಿಕೊಡದಂತೆ ಈ ಪುಸ್ತಕದಲ್ಲಿ ಸಸ್ಯ ತಳಿ ಸಂವಧಕರ ಹಕ್ಕು (PBR) ಗಳ ಬಗ್ಗೆ ಮಾತ್ರ ಉಲ್ಲೇಖಿಸಲಾಗುತ್ತದೆ.

ಭೌಗೋಳಿಕ ಸೂಚಕಗಳು

ಪ್ರ .೧೫: ಭೌಗೋಳಿಕ ಸೂಚಕಗಳು ಯಾವುವು?

: ಭೌಗೋಳಿಕ ಸೂಚಕಗಳು ಮೂಲಭೂತವಾಗಿ ಒಂದು ಉತ್ಪನ್ನದ ವಿವರಣೆ ಹಾಗೂ ಆ ವಿವರಣೆ ಒಂದು ನಿರ್ದಿಷ್ಟ ಭೌಗೋಳಿಕ ಸ್ಥಾನದೊಂದಿಗೆ ಆ ಉತ್ಪನ್ನವನ್ನು ಗುರುತಿಸುತ್ತದೆ. ಒಂದು ನಿರ್ದಿಷ್ಟ ಭೌಗೋಳಿಕ ಸ್ಥಾನದಲ್ಲಿ ತಯಾರಾಗುವ ಉತ್ಪನ್ನಗಳಿಗೆ ಮಾತ್ರ ಭೌಗೋಳಿಕ ಸೂಚಕಗಳು ಅನ್ವಯಿಸುತ್ತವೆ. ಆ ಸ್ಥಾನವು ಉತ್ಪನ್ನದ ಗುಣಲಕ್ಷಣಗಳು, ಅದರ ಖ್ಯಾತಿ ಮತ್ತು ಗುಣಮಟ್ಟದೊಂದಿಗೆ ಸಂಬಂಧ ಹೊಂದಿರಬೇಕು . ಭೌಗೋಳಿಕ ಸೂಚಕ ರಕ್ಷಣೆಯನ್ನು ಪಡೆದುಕೊಳ್ಳುವುದರ ಅರ್ಥವೇನೆಂದರೆ, ಇತರ ಯಾವುದೇ ಸ್ಥಾನದಿಂದ ತಯಾರಾಗುವ ಅಂಥದೇ ಉತ್ಪನ್ನಗಳಿಗೆ ಭೌಗೋಳಿಕ ಸೂಚಕವನ್ನು ಬಳಸಲಾಗದು. ಉದಾಹರಣೆಗೆ ‘ಶಾಂಪೇನ್‌’ ಒಂದು ಭೌಗೋಳಿಕ ಸೂಚಕ . ಅಂದರೆ ಫ್ರಾನ್ಸ್‌ನ ಶಾಂಪೇನ್‌ಪ್ರದೇಶದಲ್ಲಿ ತಯಾರಾಗುವ ಥಳಥಳಿಸುವ ಬಿಳಿ ವೈನ್‌ಅನ್ನು ‘ಶಾಂಪೇನ್‌’ ಎಂದು ವಿವರಿಸಲಾಗುತ್ತದೆ. ಇತರ ಸ್ಥಾನಗಳಲ್ಲಿ ತಯಾರಾಗುವ ಥಳಥಳಿಸುವ ಬಿಳಿಯ ವೈನ್‌ಅನ್ನು ‘ಶಾಂಪೇನ್‌’ ಪದದಿಂದ ವಿವರಿಸುವುದನ್ನು ಕಾನೂನಿನ್ವಯ ನಿಷೇಧಿಸಲಾಗಿದೆ. ಏಕೆಂದರೆ ಆ ವಿವರಣೆ ಭೌಗೋಳಿಕ ಸೂಚಕ ರಕ್ಷಣೆಯಡಿ ಬರುತ್ತದೆ.

ಭೌಗೋಳಿಕ ಸೂಚಕವು ಬೌದ್ಧಿಕ ಆಸ್ತಿ ಹಕ್ಕುಗಳಿಗಿಂತ ಕೊಂಚ ಭಿನ್ನವಾದುದು. ಭೌಗೋಳಿಕ ಸೂಚಕ ಹಕ್ಕುಗಳನ್ನು ಯಾವುದೇ ಒಬ್ಬ ವ್ಯಕ್ತಿಗೆ ನೀಡಲಾಗುವುದಿಲ್ಲ. ಬದಲಿಗೆ ಅದಕ್ಕಾಗಿ ಅರ್ಜಿಸಲ್ಲಿಸುವ ಹಲವಾರು ವ್ಯಕ್ತಿಗಳಿಗೆ ಅದನ್ನು ನೀಡಲಾಗುತ್ತದೆ. ಅಂದರೆ, ಭೌಗೋಳಿಕ ಸೂಚಕಗಳು, ಯಾವುದೇ ಒಬ್ಬ ವ್ಯಕ್ತಿಗೆ ಏಕಸ್ವಾಮ್ಯ ಹಕ್ಕುಗಳನ್ನು ನೀಡುವುದಿಲ್ಲ. ಈ ಮೇಲೆ ಸೂಚಿಸಿದ ಅವಶ್ಯಕತೆಗಳಿಗೆ ತಮ್ಮ ಉತ್ಪನ್ನ ಅನುಗುಣವಾಗಿದ್ದಲ್ಲಿ ಎಷ್ಟು ಜನ ಉತ್ಪಾದಕರು ಬೇಕಾದರೂ ಬೌದ್ಧಿಕ ಸೂಚಕವನ್ನು ಬಳಸಲು ಅರ್ಜಿಸಲ್ಲಿಸಬಹುದು. ಉದಾಹರಣೆಗೆ: ಭೌಗೋಳಿಕ ಸೂಚಕ ‘ಶಾಂಪೇನ್‌’ ಎಂಬ ಹೆಸರು ಶಾಂಪೇನ್‌ಪ್ರದೇಶದಲ್ಲಿನ ಹಲವಾರು ಉತ್ಪಾದಕರಿಂದ ಬಳಸಲ್ಪಡುತ್ತದೆ. ಇತರ ಬೌದ್ಧಿಕ ಆಸ್ತಿ ಹಕ್ಕುಗಳು ಹಾಗಲ್ಲದೆ, ಭೌಗೋಳಿಕ ಸೂಚಕವನ್ನು ಯಾವುದೇ ಒಂದು ಆವಿಷ್ಕಾರಕ್ಕೆ ನೀಡಲಾಗುವುದಿಲ್ಲ ಬದಲಿಗೆ ಬಹಳ ಸಮಯದಿಂದ ಗುಣಮಟ್ಟಕ್ಕಾಗಿ ಹೆಸರುವಾಸಿಯಾಗಿರುವ ಉತ್ಪನ್ನವೊಂದಕ್ಕೆ ನೀಡಲಾಗುತ್ತದೆ.

ಭೌಗೋಳಿಕ ಸೂಚಕಗಳು ಟ್ರೇಡ್‌ಮಾರ್ಕ್‌‌ಗಳ ಹಾಗೆಯೇ ವರ್ತಿಸುತ್ತವೆ. ಅಂದರೆ ಹೇಗೆ ಟ್ರೇಡ್‌ಮ