ಕೃಷಿಯುತ್ಪನ್ನಗಳ ಮಾರುಕಟ್ಟೆಯ ಬಗ್ಗೆ ಪುಸ್ತಕವೊಂದನ್ನು ಹೊರ ತರಬೇಕೆಂಬ ಇಚ್ಛೆ ಹಲವು ವರ್ಷಗಳಿಂದ ಸದಾ ಕೊರೆಯುತ್ತಿತ್ತು. ಇದು ಈಗ ಚಿಕ್ಕ ಪುಸ್ತಕದ ರೂಪದಲ್ಲಿ ತಮ್ಮ ಮುಂದಿದೆ. ನನ್ನ ಆಸೆ ಇದೊಂದು ಪರಿಪೂರ್ಣ ಕೃತಿಯಾಗಬೇಕೆಂದಿದ್ದರೂ ಅದಕ್ಕಿನ್ನೂ ಸಮಯ ಕೂಡಿ ಬಂದಿಲ್ಲ. ಆದರೂ ಈ ಒಂದು ಪ್ರಯತ್ನ ತಮಗಿಷ್ಟವಾಗಬಹುದೆಂಬ ಅನಿಸಿಕೆ ನನ್ನದು.

ನನ್ನ ಬರವಣಿಗೆಗಳಿಗೆ ಸದಾ ಪ್ರೋತ್ಸಾಹವನ್ನಿಯುತ್ತಿರುವ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಮಿತ್ರರು ಮತ್ತು ನನ್ನ ಕುಟುಂಬದ ಸದಸ್ಯರುಗಳಿಗೆ ನಾನು ಋಣಿಯಾಗಿದ್ದೇನೆ.

ಡಾ| ವಿಘ್ನೇಶ್ವರ ವರ್ಮುಡಿ
ವರ್ಮುಡಿ ಗುಂಪೆ
೦೧-೦೭-೨೦೦೪