ನಮ್ಮ ದೇಶದ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಗಳ ಅಭಿವೃದ್ಧಿಗೆ ಕೃಷಿ ಕ್ಷೇತ್ರದ ಕೊಡುಗೆ ಅಪಾರ, ಅಲ್ಲದೆ ಈ ಕ್ಷೇತ್ರ ಇವೆಲ್ಲದರ ಆಧಾರಸ್ತಂಭವಾಗಿದೆ. ಅನಾದಿಕಾಲದಲ್ಲಿ ಹಳ್ಳಿಗಳಲ್ಲಿ ನೆಲೆಸಿದ್ದ ಜನರು ಅವರವರ ಅಗತ್ಯಕ್ಕನುಗುಣವಾಗಿ ಕೃಷಿ ಚಟುವಟಿಕೆಗಳನ್ನು ಕೈಗೊಂಡು ಜೀವನ ನಡೆಸುತ್ತಿದ್ದರು. ಆದರೆ ಕಾಲಕ್ರಕಮೇಣ ಜನರ ಬಯಕೆಗಳು ಹೆಚ್ಚಾಗಿ ಅದರೊಂದಿಗೆ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಾದ ಬದಲಾವಣೆಗಳೂ ಸೇರಿ ಕೃಷಿಯೆಂಬುದು ಕೇವಲ ಜೀವನೋಪಾಯಕ್ಕೆ ಮಾತ್ರ ಸೀಮಿತವಾಗದೆ ವಾಣಿಜ್ಯ ದೃಷ್ಟಿಯನ್ನಿಟ್ಟುಕೊಂಡು ಹೊರಹೊಮ್ಮಿತು. ಇದರಿಂದಾಗಿ ಕೃಷಿ ಕ್ಷೇತ್ರದ ಮೇಲಿನ ಅವಲಂಬನೆ ಹೆಚ್ಚುತ್ತಾ ಹೋಗಿ ಇಲ್ಲಿ ನಾನಾ ರೀತಿಯ ಕೃಷಿಯುತ್ಪನ್ನಗಳ ಉತ್ಪಾದನೆಗೆ ಆಸಕ್ತಿ ಕಂಡು ಬಂತು. ಪರಿಣಾಮವಾಗಿ ದೇಶದ ಬಹುಪಾಲು ಜನರು ಈ ಕ್ಷೇತ್ರವನ್ನು ನೆಚ್ಚಿಕೊಳ್ಳುವಂತಾಯಿತು. ಹೀಗಿದ್ದರೂ ಈ ಕ್ಷೇತ್ರದಲ್ಲಿಂದು ತೃಪ್ತಿಕರವಾದ ಬೆಳವಣಿಗೆಯನಿನನ್ನೂ ಕಂಡುಕೊಳ್ಳಲಾಗಿಲ್ಲ ಈ ರೀತಿಯ ಸ್ಥಿತಿಗೆ ಕಾರಣಗಳು ಹತ್ತು ಹಲವು, ಇವುಗಳಲ್ಲಿ ಬಹುಮುಖ್ಯವಾದ ಕಾರಣವೆಂದರೆ ವ್ಯವಸ್ಥಿತ ರೀತಿಯ ಮಾರುಕಟ್ಟೆಯ ಅಭಾವ.

ಕೃಷಿ ಮಾರುಕಟ್ಟೆಯೆಂದರೇನು:

ಮಾರುಕಟ್ಟೆಯೆಂದರೆ ಸಾಮಾನ್ಯ ಅರ್ಥದಲ್ಲಿ ಹೇಳುವುದಾದರೆ ಇದೊಂದು ಬಗೆ ಬಗೆಯ ವಸ್ತುಗಳ ವಿನಿಯಮ ಕೇಂದ್ರ. ಇಲ್ಲಿ ಮಾರುವವರು ಮತ್ತು ಕೊಂಡುಕೊಳ್ಳುವವರು ಒಂದಾಗಿ ತಮ್ಮ ತಮ್ಮ ಅಗತ್ಯಗಳನ್ನು ಈಡೇರಿಸಿಕೊಳ್ಳುತ್ತಾರೆ.

ಕೃಷಿ ಮಾರುಕಟ್ಟೆಯೆಂಬುದು ಒಂದು ಕೃಷಿ ಕ್ಷೇತ್ರದ ಕಚ್ಛಾ ವಸ್ತು ಮತ್ತು ಕೃಷಿಯುತ್ಪನ್ನಗಳು ಉತ್ಪಾದಕ ಯಾ ಕೃಷಿಕನಿಂದ ಅಂತಿಮ ಗ್ರಾಹಕನಿಗೆ ತಲುಪುವಲ್ಲಿ ಒಳಗೊಂಡಿರುವ ಎಲ್ಲಾ ಚಟುವಟಿಕೆಗಳಿಂದ ಕೂಡಿದ್ದಾಗಿದೆ. ಇಲ್ಲಿ ಈ ಉತ್ಪನ್ನದ ಸಂಸ್ಕರಣಾ ಹಂತದಲ್ಲಿ ಇದೊಮ್ಮೆ ತಾತ್ಕಾಲಿಕವಾಗಿ ಪರಿವರ್ತನೆಗೊಳಪಟ್ಟು ಮುಂದಕ್ಕೆ ಚಲಿಸುವುದು.

ಕೃಷಿ ಮಾರುಕಟ್ಟೆಯಲ್ಲಿ ಅಡಗಿರುವ ಅಂಶಗಳು:

ಕೃಷಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಉತ್ಪನ್ನವನ್ನು ಉತ್ಪದನಾ ಪ್ರದೇಶದಲ್ಲಿ ನಿರ್ವಹಿಸುವಿಕೆ, ಆರಂಭದ ಸಂಸ್ಕರಣೆ, ಗುಣಮಟ್ಟಕ್ಕನುಗುಣವಾಗಿ ವರ್ಗೀಕರಣ, ಗುಣಮಟ್ಟವನ್ನು ಕಾಪಾಡಲು ಮತ್ತು ಉತ್ಪನ್ನ ಹಾಳಾಗುವುದನ್ನು ತಪ್ಪಿಸಲು ಸರಿಯಾದ ಪ್ಯಾಕಿಂಗ್‌ ಒಳಗೊಂಡಿದ್ದು, ಇವುಗಳೊಂದಿಗೆ ಉತ್ಪನ್ನವನ್ನು ಕೃಷಿಕರ ಭೂಮಿಯಿಂದ ಸ್ಥಳೀಯ ಅಥವಾ ಕೇಂದ್ರೀಯ ಮಾರುಕಟ್ಟೆಗಳಿಗೆ ಮತ್ತು ಗ್ರಾಹಕರಿಗೆ ವಿತರಿಸಲು ಸರಿಯಾದ ಸಾಗಾಟ ವ್ಯವಸ್ಥೆಯೂ ಸೇರಿದೆ.

ಮಾರಾಟ ಮತ್ತು ಬೆಲೆ ನಿರ್ಧರಿಸುವಿಕೆಯಲ್ಲಿ ಮಾರಾಟ ಸಂಸ್ಥೆಗಳು ವಿಧಿಸುವ ಶುಲ್ಕ, ತೆರಿಗೆ, ಲಾಭಾಂಶ ಇತ್ಯಾದಿಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಇದು ಉತ್ಪಾದಕ ಗಳಿಸುವ ಮತ್ತು ಗ್ರಾಹಕ ಕೊಡುವ ಬೆಲೆಗಳ ನಡುವಿನ ಅಂತರವನ್ನು ತಿಳಿಸುತ್ತದೆ.

ದಕ್ಷ ರೀತಿಯ ಕೃಷಿ ಮಾರುಕಟ್ಟೆ ವ್ಯವಸ್ಥೆಯನ್ನು ಕಂಡುಕೊಳ್ಳಬೇಕಿದ್ದಲ್ಲಿ ಉತ್ಪನ್ನದ ಪೂರೈಕೆ ಮತ್ತು ಬೇಡಿಕೆ ಈ ಎರಡೂ ವಿಚಾರಗಳ ಬಗ್ಗೆ ಯೋಜನಾಬದ್ಧವಾದ ಮಾಹಿತಿ ಮತ್ತು ಪೂರ್ವ ನಿರ್ಧರಿಸುವಿಕೆ ಅತೀ ಅಗತ್ಯ ಅಲ್ಲದೆ ಮಹತ್ತರವಾದದ್ದು. ಇದರೊಂದಿಗೆ ಉತ್ಪನ್ನದ ಶೇಖರಣೆ, ಶೀತಲೀಕರಣ, ಸಾಲದ ವ್ಯವಸ್ಥೆ ಇವೆಲ್ಲಾ ಕೃಷಿ ಮಾರುಕಟ್ಟೆಯನ್ನು ವ್ಯವಸ್ಥಿತವಾಗಿ ಕೊಂಡೊಯ್ಯಬಲ್ಲ ಅಂಶಗಳಾಗಿವೆ.

ಆಧುನಿಕ ಜಗತ್ತಿನಲ್ಲಿ ಕೃಷಿ ಮಾರುಕಟ್ಟೆ ವ್ಯವಸ್ಥೆಯು ಹಂತ ಹಂತವಾಗಿ ಅವಿಷ್ಕಾರಗಳಿಗೊಳಪಟ್ಟು ಮೌಲ್ಯವರ್ಧನೆ ಎಂಬ ಅಂಶಕ್ಕೆ ಒತ್ತು ನೀಡುತ್ತಲಿವೆ. ಒಟ್ಟಾರೆಯಾಗಿ ದಕ್ಷ ರೀತಿಯ ಕೃಷಿ ಮಾರುಕಟ್ಟೆ ವ್ಯವಸ್ಥೆ ಮೇಲಿನ ಎಲ್ಲಾ ಅಂಶಗಳನ್ನೊಳಗೊಂಡಿದ್ದು, ಇದು ದೇಶದ ಅಭಿವೃದ್ಧಿಯ ಪಥದ ಪ್ರತಿಯೊಂದು ಹಂತದಲ್ಲೂ ತನ್ನದೆ ಆದ ಪರಿಣಾಮವನ್ನು ಬೀರುತ್ತದೆ.

ಉತ್ತಮ ಕೃಷಿಯುತ್ಪನ್ನ ಮಾರುಕಟ್ಟೆಯ ಲಕ್ಷಣಗಳು:

ಒಂದು ಕೃಷಿಯುತ್ಪನ್ನ ಮಾರುಕಟ್ಟೆ ವ್ಯವಸ್ಥೆಯು ದೇಶದ ಅಭಿವೃದ್ಧಿಗೆ ಅತ್ಯಗತ್ಯ. ಈ ಮಾರುಕಟ್ಟೆಯು ಉತ್ಪಾದಕನಿಂದ ಹಿಡಿದು ಅಂತಿಮ ಗ್ರಾಹಿಕನ ತನಕ ಎಲ್ಲರನ್ನೂ ತೃಪ್ತಿಪಡಿಸುವಂತಿರಬೇಕು. ಈ ನಿಟ್ಟಿನಲ್ಲಿ ಇದು ಭೌತಿಕ ಮತ್ತು ವಿತರಣಾ ದಕ್ಷತೆಯನ್ನು ಹೊಂದಿ ಕಾರ್ಯನಿರ್ವಹಿಸಬೇಕು. ಪರಿಪೂರ್ಣ ರೀತಿಯ ಭೌತಿಕ ದಕ್ಷತೆಯನ್ನು ತೋರಿಸಲು ಸಾರಿಗೆ, ಶೇಖರಣೆ ಮತ್ತು ಸಂಸ್ಕರಣೆ ಇತ್ಯಾದಿಗಳಲ್ಲಿ ಅತ್ಯಂತ ಹೆಚ್ಚಿನ ಉತ್ಪಾದಕತೆಯನ್ನು ಸಾಧಿಸಬೇಕು. ಇದರೊಂದಿಗೆ ವಿತರಣಾ ವ್ಯವಸ್ಥೆಯು ಸಮಯ, ಪ್ರದೇಶ ಮತ್ತು ಉತ್ಪನ್ನದ ರೂಪಗಳಲ್ಲಿ ಮಧ್ಯವರ್ತಿಗಳು ಮತ್ತು ಗ್ರಾಹಕರಿಗೆ ದಕ್ಷ ರೀತಿಯಲ್ಲಿ ತಲುಪುವಂತಿರಬೇಕು. ಈ ರೀತಿಯ ಸಾಧನೆಗೆ ಉತ್ಪನ್ನದ ಬೆಲೆಯು ಇಡೀ ಮಾರುಕಟ್ಟೆ ವ್ಯವಸ್ಥೆಯಲ್ಲಲಿ ಯಾ ಮಾರುಕಟ್ಟೆ ಪದ್ಧತಿಯುದ್ದಕ್ಕೂ ದಕ್ಷ ರೀತಿಯದ್ದಾಗಿಬೇಕು.

ದಕ್ಷ ರೀತಿಯ ಬೆಲೆ ಯಾ ಧಾರಣೆಯನ್ನು ಹೊಂದಲು ಅಗತ್ಯವಿರುವ ಅಂಶಗಳು:

೧) ಉತ್ಪನ್ನದ ಬೆಲೆಯು ಪ್ರದೇಶಕ್ಕನುಗುಣವಾಗಿ ಅವುಗಳ ಸಾಗಣೆ ವೆಚ್ಚಕ್ಕನುಗುಣವಾಗಿ ಬದಲಾಗಬೇಕು.

೨) ಉತ್ಪನ್ನದ ಬೆಲೆಯು ಕಾಲದಿಂದ ಕಾಲಕ್ಕೆ ಶೇಖರಣಾ ವೆಚ್ಚವನ್ನು ಹೊರತು ಪಡಿಸಿ ಸ್ಥಿರತೆಯನ್ನು ಹೊಂದಿರಬೇಕು.

೩) ಉತ್ಪನ್ನದ ಬೆಲೆಯು ಸಂಸ್ಕರಣಾ ವೆಚ್ಚವನ್ನು  ಹೊರತು ಪಡಿಸಿ ಸ್ಥಿರತೆಯನ್ನು ಸಾಧಿಸುತ್ತಿರಬೇಕಕು.

೪) ದಕ್ಷ ರೀತಿಯಲ್ಲಿ ಕಾರ್ಯ ನಿರ್ವಹಿಸದಿರುವ ಮಾರುಕಟ್ಟೆಯ ಮೇಲೆ ಸರಕಾರದ ಹಸ್ತಕ್ಷೇಪವಿರಬೇಕು. ಉತ್ಪನ್ನಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡದ ರೀತಿಯ ಹಸ್ತಕ್ಷೇಪ ಅಗತ್ಯ.

೫) ಉತ್ಪಾದಕ ಮತ್ತು ಗ್ರಾಹಕರ ನಿರ್ಧಾರಕ್ಕನುಗುಣವಾಗಿ ಮಾರುಕಟ್ಟೆ ವ್ಯವಸ್ಥೆಯು ಸ್ವತಂತ್ರವಾಗಿ ಆದರೆ ಕ್ರಮಬದ್ಧವಾಗಿ ಕಾರ್ಯನಿರ್ವಹಿಸಬೇಕು.

೬) ಬದಲಾಗುತ್ತಿರುವ ಆರ್ಥಿಕ, ಸಾಮಾಜಿಕ ಮತ್ತಿತರ ವಿಚಾರಗಳಿಗನುಗುಣವಾಗಿ ಮಾರುಕಟ್ಟೆ ಪದ್ಧತಿಯಲ್ಲಿ ಅಭಿವೃದ್ಧಿಯಾಗುತ್ತಿರಬೇಕು..

೭) ಬೇಡಿಕೆ ಮತ್ತು  ಪೂರೈಕೆಗಳನ್ನು ಸಮತೋಲನಕ್ಕೆ ತರುವ ರೀತಿಯ ಮಾರುದಕಟ್ಟೆ ಪದ್ಧತಿಯಿರಬೇಕು.

೮) ದಕ್ಷ ರೀತಿಯ ಮಾರುಕಟ್ಟೆ ವ್ಯವಸ್ಥೆಯು ಹೆಚ್ಚಿನ ಸಂಖ್ಯೆಯ ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡುವುದು.

೯) ದಕ್ಷ ಮಾರುಕಟ್ಟೆ ವ್ಯವಸ್ಥೆಯು ಗ್ರಾಹಕರಿಗೆ ವೈವಿಧ್ಯಮಯವಾದ ಸಂಸ್ಕರಿಸಲ್ಪಟ್ಟ ಅಥವಾ ಮೌಲ್ಯವರ್ಧಿತ ಉತ್ಪನ್ನಗಳ ಪೂರೈಸಿ ಅವರನ್ನು ತೃಪ್ತಿಪಡಿಸುತ್ತದೆ. ಈ ರೀತಿಯ ಪೂರೈಕೆಯು ಗ್ರಾಹಕರ ರುಚಿ, ಶುಚಿ, ಚಟ ಮತ್ತು ಆದಾಯಕ್ಕನುಗುಣವಾಗಿರುತ್ತದೆ.

೧೦) ಗ್ರಾಹಕರನ್ನು ಆಕರ್ಷಿಸಲು ಪ್ರಚಾರ ಕಾರ್ಯಗಳು ಇಲ್ಲಿರುತ್ತದೆ.

ಉತ್ಪಾದಕ ಯಾ ಕೃಷಿಕನಿಗೆ ಅಧಿಕ ಲಾಭ ತರಬಲ್ಲ ವೈಜ್ಞಾನಿಕ ಮಾರುಕಟ್ಟೆ ಪದ್ಧತಿ:

ನಮ್ಮ ಕೃಷಿಕರಿಗೆ ತಾವು ಬೆಳೆದ ಉತ್ಪನ್ನಗಳಿಗೆ ಯೋಗ್ಯ ಪ್ರತಿಫಲ ದೊರೆಯಬೇಕಿದ್ದಲ್ಲಿ ಅವರು ತಮ್ಮ ಉತ್ಪನ್ನಗಳನ್ನು ವೈಜ್ಞಾನಿಕ ರೀತಿಯ ಕಟ್ಟಳೇಗಳಿಗೆ ಅಳವಡಿಸಿಕೊಳ್ಳಲೇಬೇಕು. ಈ ಕಟ್ಟಳೆಗಳೆಂದರೆ:-

) ಉತ್ಪನ್ನವನ್ನು ಶುದ್ದಗೊಳಿಸಿ ಮಾರಾಟ ಮಾಡುವುದು: ಕೃಷಿಕರು ತಾವು ಬೆಳೇದ ಉತ್ಪನ್ನವನ್ನು ಮಾರುಕಟ್ಟೆಗೆ ತರುವಾಗ ಅವನ್ನು ಚೊಕ್ಕಟಗೊಳಿಸಿರಬೇಕು. ಯಾವುದೇ ಉತ್ಪನ್ನ ಕಲಬೆರೆಕೆಗೊಳಪಟ್ಟಿದಲ್ಲಿ ಇಲ್ಲವೆ ಅಶುದ್ಧವಾಗಿದ್ದಲ್ಲಿ ಅದಕ್ಕೆ ದೊರಕುವ ಧಾರಣೆ ಅತ್ಯಲ್ಪ. ಇದರೊಂದಿಗೆ ಈ ರೀತಿಯ ಅಶುದ್ಧ, ಕಲಬೆರೆಕೆಯುಕ್ತ ಉತ್ಪನ್ನದ ಮಾರಾಟ ಇಡೀ ಉತ್ಪನ್ನದ ಉತ್ಪಾದಕರ ಮೇಲೆ ದುಷ್ಪರಿಣಾಮ ಬೀರಿ ಧಾರಣೆಯನ್ನು ಅಲ್ಲೋಲಕಲ್ಲೋಲಗೊಳಸಿಬಹುದು. ಒಮ್ಮೆ ಒಂದು ಉತ್ಪನ್ನ ಕಲಬೆರಕೆಗೊಳಪಟ್ಟು ಮಾರುಕಟ್ಟೆ ಪ್ರವೇಶಿಸಿದಲ್ಲಿ ಅದರ ಮೇಲೆ ಶಾಶ್ವತವಾಗಿ ಕೆಟ್ಟ ದೃಷ್ಟಿ ಬೀಳುವುದು.

) ಗುಣಮಟ್ಟಕ್ಕನುಗುಣವಾಗಿ ಉತ್ಪನ್ನದ ಮಾರಾಟ: ಉತ್ಪಾದಕನು ಮಾರುಕಟ್ಟೆಯಲ್ಲಿ ತನ್ನ ಉತ್ಪನ್ನವನ್ನು ಅವುಗಳ ಗುಣಮಟ್ಟಕ್ಕನುಗುಣವಾಗಿ ಬೇರೆ ಬೇರೆಯಾಗಿ ಮಾರಾಟ ಮಾಡುವುದು ಅತ್ಯಗತ್ಯ. ನಮ್ಮಲ್ಲಿಂದು ಹೆಚ್ಚಿನ ಸಣ್ಣ ರೈತರು ತಾವು ಬೆಳೆದ ಅಲ್ಪ ಪ್ರಮಾಣದ ಉತ್ಪನ್ನಗಳನ್ನು  ಒಟ್ಟಾಗಿ ಮಾರಿ ಕಡಿಮೆ ಧಾರಣೇ ಗಳಿಸಿಕೊಳ್ಳುತ್ತಿದ್ದು ಇದು ಉತ್ಪಾದಕನಿಗೆ ಮತ್ತು ಗ್ರಾಹಕನಿಗೆ ತೃಪ್ತಿಯನ್ನು ತರುತ್ತಿಲ್ಲ.

) ಉತ್ಪನ್ನವನ್ನು ವರ್ಗೀಕರಿಸಿ ಮಾರಾಟ ಮಾಡುವುದು: ಉತ್ಪಾದಕ ತನ್ನ ಉತ್ಪನ್ನಗಳನ್ನು ಗ್ರಾಹಕನ ಬೇಡಿಕೆಗನುಗುಣವಾಗಿ ವರ್ಗೀಕರಿಸಿ ಮಾರಾಟ ಮಾಡಿದಲ್ಲಿ ಯೋಗ್ಯ ಬೆಲೆ ಗಳಿಸಿಕೊಳ್ಳಲು ಸಾಧ್ಯ.

) ಮಾರುಕಟ್ಟೆಯ ಬಗ್ಗೆ ಮಾಹಿತಿಯನ್ನು ಸದಾ ಹೊಂದಿರುವುದು: ಬೇರೆ ಬೇರೆ ಮಾರುಕಟ್ಟೆಗಳಲ್ಲಿ ಚಾಲ್ತಿಯಲ್ಲಿರುವ ಧಾರಣೆಯ ಬಗ್ಗೆ ಉತ್ಪಾದಕನು ಮಾಹಿತಿಗಳನ್ನು ಸಂಗ್ರಹಿಸುತ್ತಲಿರಬೇಕು. ಇದರಿಂದಾಗಿ ತನ್ನ ಉತ್ಪನ್ನವನ್ನು ನಿರೀಕ್ಷೆಯ ಬೆಲೆಗನುಗುಣವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಾಧ್ಯ.

) ನಿಗಡಿಪಡಿಸಿದ ತೂಕದ ಚೀಲಗಳಲ್ಲಿ ಉತ್ಪನ್ನವನ್ನು ತುಂಬಿಸಿ ಮಾರಾಟಕ್ಕೆ ತರುವುದು: ನಿಗದಿತ ತೂಕದ ಚೀಲಗಳಲ್ಲಿ ಉತ್ಪನ್ನಗಳನ್ನು ತೂಕ ಮಾಡಿ ತುಂಬಿಸಿ ಮಾರಾಟಕ್ಕೆ ಒಯ್ದಲ್ಲಿ ತೂಕದಲ್ಲಿ ಕಂಡು ಬರುವ ಮೋಸ, ಅನಗತ್ಯ ಸುಂಕ, ಸಾರಿಗೆ ವೆಚ್ಚ ಇತ್ಯಾದಿಗಳನ್ನು ತಪ್ಪಿಸಬಹುದು.

) ಕೊಯ್ಲಿನ ತಕ್ಷಣ ಮಾರಾಟ ಮಾಡುವುದನ್ನು ನಿಲ್ಲಿಸುವುದು: ಕೊಯ್ಲಿನ ತಕ್ಷಣ ಉತ್ಪನ್ನವನ್ನು ಮಾರಾಟಕ್ಕೆ ಬಿಡುಗಡೆ ಮಾಡಿದಲ್ಲಿ ಪೂರೈಕೆಯ ಹೆಚ್ಚಳದಿಂದಾಗಿ ಬೆಲೆ ಕುಸಿಯುವುದು.

) ಸಹಕರ ಮಾರುಕಟ್ಟೆ ವ್ಯವಸ್ಥೆಯ ಮೂಲಕ ಉತ್ಪನ್ನವನ್ನು ಮಾರಾಟ ಮಾಡುವುದು: ಇದರಿಂದಾಗಿ ಮಧ್ಯವರ್ತಿಗಳ ಹಾವಳಿ, ತೂಕದಲ್ಲಿನ ವಂಚನೆ, ಇತ್ಯಾದಿಗಳನ್ನು ತಪ್ಪಿಸಿ ಯೋಗ್ಯ ಬೆಲೆ, ಸಹಕರಿಯ ಲಾಭಾಂಶದಲ್ಲಿ ಪಾಲು ಇತ್ಯಾದಿಗಳನ್ನು ಗಳಿಸಿಕೊಳ್ಳಬಹುದು.

) ನಿಯಂತ್ರಿತ ಮಾರುಕಟ್ಟೆಯಲ್ಲಿ ಉತ್ಪನ್ನದ ಮಾರಾಟ: ಈ ಮಾರುಕಟ್ಟೆ ಕೇಂದ್ರಗಳಲ್ಲಿ ಮಾರಾಟ ವ್ಯವಸ್ಥೆಯು ಸರಕಾರದ ಯಾ ಮಾರುಕಟ್ಟೆಯ ಸಮಿತಿಯ ಹತೋಟಿಯಲ್ಲಿದ್ದು ಇದರಿಂದಾಗಿ ಉತ್ಪಾದಕ ಮೋಶ ಹೋಗುವುದನ್ನು ತಪ್ಪಿಸಬಹುದು. ಅಲ್ಲದೆ ಉತ್ಪಾದಕ ಇಲ್ಲಿ ಯಾವುದೇ ರೀತಿಯ ಮಾರಾಟ ವೆಚ್ಚವನ್ನು ಭರಸಬೇಕಿಲ್ಲ.

ನಮ್ಮಲ್ಲಿರುವಮಾರಾಟಮತ್ತುಕೊಂಡುಕೊಳ್ಳುವವಿಧಗಳು.

) ಬಟ್ಟೆಯೊಳಗೆ ಉತ್ಪನ್ನವನ್ನಿಟ್ಟು:

ಈ ಪದ್ಧತಿಯಲ್ಲಿ ಮಾರಾಟಗಾರನ ದಲ್ಲಾಳಿ ಮತ್ತು ಗ್ರಾಹಕ ಬಟ್ಟೆಯೊಳಗಿರುವ ಉತ್ಪನ್ನ ಯಾ ಉತ್ಪನ್ನಕ್ಕೆ ಬಟ್ಟೆಯೊಂದು ಹೊದಿಸಲ್ಪಟ್ಟಾಗ ಅದರ ಮೇಲೆ ಕೈಯಾಡಿಸಿ (ಉತ್ಪನ್ನವನ್ನು ಕಣ್ಣಾರೆ ನೋಡದೆ) ಸಂಜ್ಞೆಗಳ ಮೂಲಕ ವ್ಯಾಪಾರ ಕೈಗೊಳ್ಳಲಾಗುವುದು. ಇಲ್ಲಿ ಸೇರಿದಂತೆ ಎಲ್ಲಾ ಗ್ರಾಹಕರು ಅವರವರ ಬೆಲೆಯನ್ನು ಸೂಚಿಸಿ, ಅಂತಿಮವಾಗಿ ಅತೀ ಹೆಚ್ಚಿನ ಬೆಲೆ ಸೂಚಿಸುವಾತನಿಗೆ ದಲ್ಲಾಳಿಯು ಉತ್ಪನ್ನವನ್ನು ಮಾರಾಟ ಮಾಡುತ್ತಾನೆ. ಆದರೆ ಈ ಪದ್ಧತಿಯಲ್ಲಿ ಉತ್ಪಾದಕ ಯಾ ಮಾರಾಟಗಾರನಿಗೆ ಬೇರೆ ಬೇರೆ ಗ್ರಾಹಕರು ನಿಗದಿ ಪಡಿಸುವ ಬೆಲೆಯ ಬಗ್ಗೆ ಅರಿವಿಲ್ಲದೆ ಮೋಸ ಹೋಗಲು ಸಾಧ್ಯ. ಈ ದೃಷ್ಟಿಯಿಂದ ಸರಕಾರ ಈ ಪದ್ಧತಿಯನ್ನು ನಿಷೇಧಿಸಿದೆ. ಹೀಗಿದ್ದರೂ ಈ ಪದ್ಧತಿ ನಮ್ಮ ದೇಶದ ಹಲವು ಭಾಗಗಳಲ್ಲಿ ಚಾಲ್ತಿಯಲ್ಲಿದೆ.

) ಖಾಸಗಿ ಹೊಂದಾಣಿಕೆ:

ಇದರ ಪ್ರಕಾರ ಉತ್ಪಾದಕ ಮತ್ತು ಖಾಸಗಿ ವ್ಯಾಪಾರಸ್ಥ ಬೆಲೆಯಲ್ಲಿ ಹೊಂದಾಣಿಕೆಯೊಂದನ್ನು ಮಾಡಿಕೊಳ್ಳುತ್ತಾರೆ. ಇಲ್ಲಿ ಉತ್ಪಾದಕ ಖಾಸಗಿ ವ್ಯಾಪಾರಸ್ಥನಿಗೆ ತಾನು ಇಚ್ಛಿಸುವ ಬೆಲೆಯೊಂದನ್ನು ತಿಳಿಸಿ ಆ ಬಳಿಕ ಅದರ ಬಗ್ಗೆ ಚರ್ಚೆಗಳಾಗಿ ಬೆಲೆ ನಿಗದಿಯಾಗುವುದು. ಈ ರೀತಿಯ ವ್ಯವಸ್ಥೆಯು ಅನಿಯಂತ್ರಿತ ಮಾರುಕಟ್ಟೆ ಯಾ ಗ್ರಾಮೀಣ ಮಾರುಕಟ್ಟೆಗಳಲ್ಲಿರುವುದು.

) ದಲ್ಲಾಳಿಗಳು ಉತ್ಪನ್ನದ ಮಾದರಿ ಮೇಲೆ ಚಾಲ್ತಿಧಾರಣೆ ಹೆಸರಿಸುವುದು:

ಇಲ್ಲಿ ದಲ್ಲಾಳಿಗಳು ರೈತರಿಂದ ಉತ್ಪನ್ನದ ಮಾದರಿ ಪಡೆದು ಅದಕ್ಕೆ ಚಾಲ್ತಿಯಲ್ಲಿರುವ ಬೆಲೆಯೊಂದನ್ನು ಮುಂದಿರುಸುತ್ತಾರೆ. ಯಾವ ದಲ್ಲಾಳಿಯು ಅಧಿಕ ಬೆಲೆಯನ್ನು ಹೆಸರಿಸುತ್ತಾನೊ ಆತನಿಗೆ ಉತ್ಪನ್ನ ವಿಕ್ರಯವಾಗುವುದು.

) ದಾರಾ ಮಾರಾಟ:

ಈ ಪದ್ಧತಿಯಡಿಯಲ್ಲಿ ಬೇರೆ ಬೇರೆ ಪಾಲುಗಳನ್ನು ಒಟ್ಟು ಮಾಡಿ ಅದನ್ನು ಒಂದೇ ಪಾಲಾಗಿಸಿ ಮಾರಾಟ ಮಾಡಲಾಗುವುದು. ಈ ಪದ್ಧತಿಯ ಒಂದು ಲಾಭವೆಂದರೆ ಇಡೀ ಪಾಲು ಒಂದೇ ಸಲ ಮಾರಾಟವಾಗುವುದು. ಆದರೆ ಇಲ್ಲಿ ಬರುವ ಬೇರೆ ಬೇರೆ ಪಾಲುಗಳ ಗುಣಮಟ್ಟ ವಿಭಿನ್ನವಾಗಿರುವುದರಿಂದ ಉತ್ತಮ ಗುಣಮಟ್ಟದ ಉತ್ಪನ್ನಕ್ಕೆ ಸಿಗುವ ಧಾರಣೆ ಕೆಳದರ್ಜೆಯ ಉತ್ಪನ್ನಕ್ಕೆ ದೊರಕಲುವ ಧಾರಣೆಯೆ ಆಗಿರುತ್ತದೆ.

) ಮೋಗುಮ್ ವ್ಯಾಪಾರ:

ಇಲ್ಲಿ ಮಾರಾಟಗಾರ ಮತ್ತು ಗ್ರಾಹಕನ ನಡುವೆ ವ್ಯಾಪಾರವು ಬೆಲೆ ಮೊದಲೆ ನಿಗದಿಯಾಗದೆ ನಡೆಯುವುದು. ಆದರೆ ಚಾಲ್ತಿಯಲ್ಲಿರುವ ಬೆಲೆಯನ್ನು ಗ್ರಾಹಕ ಮಾರಾಟಗಾರನಿಗೆ ಕೊಡುವ ಒಂದು ಒಪ್ಪಂದ ಇವರಲ್ಲಿರುತ್ತದೆ. ಈ ಪದ್ಧತಿ ಕೃಷಿಕ ಸಾಲದ ಭಾದೆಯಿಂದ ತತ್ತರಿಸುತ್ತಿರುವಾಗ ಹೆಚ್ಚಾಗಿ ಜ್ಯಾರಿಯಲ್ಲಿರುವುದು. ಸಾಲ ಪಡೆದಾತನಿಗೆ ಉತ್ಪನ್ನವನ್ನು ಮಾರಾಟ ಮಾಡುವಂತ ವ್ಯವಸ್ಥೆಯಿಲ್ಲಿರುವುದು.

) ಮುಕ್ತ ಹರಾಜು ಪದ್ಧತಿ:

ಈ ಪದ್ಧತಿಯಲ್ಲಿ ಉತ್ಪನ್ನವನ್ನು ಕೊಂಡುಕೊಳ್ಳಲು ಆಸಕ್ತಿ ಹೊಂದಿರುವ ಗ್ರಾಹಕರೆಲ್ಲಾ ದಲ್ಲಾಳಿಗಳ ಅಂಗಡಿ ಯಾ ಮಾರುಕಟ್ಟೆಯಲ್ಲಿ ಸೇರಿ ಅಲ್ಲಿ ರಾಶಿ ಬಿದ್ದಿರುವ ಇವನ್ನು ಪರೀಕ್ಷಿಸಿ ಅವರು ಕೊಡಮಾಡುವ ಬೆಲೆಯನ್ನು ಹೆಸರಿಸುತ್ತಾರೆ. ಇಲ್ಲಿ ಅತ್ಯಧಿಕ ಬೆಲೆಯನ್ನು ಹೆಸರಿಸಿದ ಗ್ರಾಹಕನಿಗೆ ಉತ್ಪಾದಕ ಯಾ ಮಾರಾಟಗಾರನ ಅನುಮತಿಯೊಂದಿಗೆ ಉತ್ಪನ್ನವನ್ನು ಮಾರಾಟ ಮಾಡಲಾಗುತ್ತದೆ. ಈ ರೀತಿಯ ವ್ಯವಸ್ಥೆಯು ನಿಯಂತ್ರಿತ ಮಾರುಕಟ್ಟೆ ಕೇಂದ್ರಗಳಲ್ಲಿ ಲಭ್ಯವಿದ್ದು ಇದು ಉಳಿದೆಲ್ಲಾ ವ್ಯವಸ್ಥೆಗಳಿಗಿಂತ ಉತ್ತಮವಾಗಿದೆ.

) ಮುಚ್ಚಿದ ದರ ಪದ್ಧತಿ:

ಇದು ಮುಕ್ತ ಹರಾಜು ಪದ್ಧತಿಯಂತಿದ್ದು, ಇಲ್ಲಿ ವ್ಯಾಪಾರಿ ಯಾ ಗ್ರಾಹಕನು ಉತ್ಪನ್ನದ ಮೇಲೆ ನಿಗದಿ ಪಡಿಸಬಹುದಾದ ಬೆಲೆಯನ್ನು ಆಹ್ವಾನಿಸಲಾಗುವುದು. ಇಲ್ಲಿ ಉತ್ಪನ್ನವನ್ನು ದಲ್ಲಾಳಿಗಳು ಮುಕ್ತವಾಗಿರಿಸಿ ಗ್ರಾಹಕರನ್ನು ಆಹ್ವಾನಿಸುತ್ತಾರೆ. ಗ್ರಾಹಕನಿಲ್ಲಿ ಉತ್ಪನ್ನವನ್ನು ಪರೀಕ್ಷಿಸಿ ತಾನು ಕೊಂಡುಕೊಳ್ಳಲಿಚ್ಛಿಸುವ ಉತ್ಪನ್ನಕ್ಕೆ ತನ್ನದಾದ ಬೆಲೆ ನಿಗದಿಪಡಿಸಿ ಅದನ್ನು ಒಂದು ನಿಗದಿತ ರಶೀದಿಯಲ್ಲಿ ನಮೂದಿಸಿ ಅಲ್ಲಿರಿಸಿದ ಮುಚ್ಚಲ್ಪಟ್ಟ ಪೆಟ್ಟಿಗೆಯೊಂದಕ್ಕೆ ಹಾಕುತ್ತಾನೆ. ಹರಾಜಿನ ಅವಧಿ ಮುಗಿದ ನಂತರ ದಲ್ಲಾಳಿಯು ಪೆಟ್ಟಿಗೆಯನ್ನು ತೆರೆದು ಅದರಲ್ಲಿರುವ ರಶೀದಿಗಳನ್ನು ಉತ್ಪನ್ನಗಳ ಸಂಖ್ಯೆಗನುಗುಣವಾಗಿ ಇರಿಸಿ, ಅತೀ ಹೆಚ್ಚಿನ ಬೆಲೆಯನ್ನು ಸೂಚಿಸಿದ ಗ್ರಾಹಕ ಯಾ ವ್ಯಾಪಾರಿಗೆ ಉತ್ಪನ್ನವನ್ನು ಉತ್ಪಾದಕನ ಒಪ್ಪಿಗೆಗನುಗುಣವಾಗಿ ಬಿಟ್ಟುಕೊಡುತ್ತಾನೆ. ಆದರೆ ಈ ವ್ಯವಸ್ಥೆಯಲ್ಲಿ ದಕ್ಷತೆಯನ್ನು ಕಂಡುಕೊಳ್ಳಬೇಕಿದ್ದಲ್ಲಿ ದಲ್ಲಾಳಿ ಯಾ ಮಾರುಕಟ್ಟೆ ಸಮಿತಿಯು ದಕ್ಷ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರಬೇಕು.

ಬೇಡಿಕೆಯನ್ನು ಸೃಷ್ಟಿಸುವುದು:

ಮಾರಾಟ ವ್ಯವಸ್ಥೆಯಲ್ಲಡಗಿರುವ ಒಂದು ಪ್ರಮುಖ ಅಂಶ ಬೇಡಿಕೆಯನ್ನು ಸೃಷ್ಟಿಸುವುದಾಗಿದ್ದು, ಇಲ್