೧. ನಿಸರ್ಗದ ನಿಯಮಕ್ಕೆ ಸಮನ್ವಯಗೊಳ್ಳದ ನಿಸರ್ಗ ವಿರೋಧಿ ಅನ್ವೇಷಣೆಗಳು

೨. ಸಾರ್ವಜನಿಕ ಆರೋಗ್ಯ, ಕಾನೂನಿನ ನೀತಿಗೆ ಹಾನಿಕಾರಕವಾದ ಯಾವುದೇ ಅನ್ವೇಷಣೆಗಳು

೩. ಜನಸಾಮಾನ್ಯರಲ್ಲಿ ಬಳಕೆಯಲ್ಲಿರುವ ಉಪಕರಗಳು ಅಥವಾ ವಿಧಾನಗಳು ಮತ್ತವುಗಳಲ್ಲಿನ ಸರಳ ಮಾರ್ಪಾಡುಗಳು.

೪. ಪರಮಾಣು ಕುರಿತ ಅನ್ವೇಷಣೆಗಳು

೫. ವೈಜ್ಞಾನಿಕ ತತ್ವಗಳು

೬. ಗಣಿತದ ಸೂತ್ರಗಳು

೭. ಮಾನಸಿಕ ಕ್ರಿಯೆಯನ್ನು ಒಳಗೊಂಡ ಯಾವುದೇ ವಿಧಾನಗಳು

೮. ಕೃಷಿ ಪದ್ಧತಿಗಳು

೯. ಮಾಹಿತಿಗಳ ನಿರೂಪಣಾ ಶೈಲಿ, ಕಾವ್ಯವಿಧಾನ ಇತ್ಯಾದಿ

೧೦. ಪ್ರಾಣಿಗಳು ಅಥವಾ ಸಸ್ಯಗಳು (ಸೂಕ್ಷ್ಮಜೀವಿಗಳನ್ನು ಹೊರತು ಪಡಿಸಿ)

೧೧. ರಾಸಾಯನಿಕವಾಗಿ ಉತ್ಪಾದಿಸಿದ ಆಹಾರ ಮತ್ತದರ ಉತ್ಪನ್ನ.

ಪೇಟೆಂಟು ಮಾಡಲು ಅಗತ್ಯವಾಗಿ ತಿಳಿದಿರಬೇಕಾದ ಮಾಹಿತಿಗಳೂ ಮುಖ್ಯವಾದುದು. ಇವು ಅನ್ವೇಷನೆಗಳನ್ನು ಪೇಟೆಂಟು ಮಾಡಲು ಸಹಾಯಕವಾಗುತ್ತವಲ್ಲದೆ, ಪೇಟೆಂಟು ಮಾಡುವ ಕುರಿತು ಅನೇಕ ವಿಚಾರಗಳನ್ನು ತಿಳಿಸುತ್ತವೆ.