೧. ಪೇಟೆಂಟ್ ಪಡೆಯಲು ಅನ್ವೇಷಣೆಯು ವಿಶಿಷ್ಟ ಪ್ರಕಾರದ್ದಾಗಿರಬೇಕು, ಹಿಂದೆಂದು ಅದರ ಯಾವುದೇ ಸರಿಹೊಂದುವ ಮಾದರಿಯದ್ದಾಗಿರಬಾರದು.

೨. ಹೊಸ ಅನ್ವೇಷಣೆಯ ಕುರಿತು ಪೇಟೆಂಟ್ ನಿರೂಪಿಸುವಾಗ ಅದೇ ರೀತಿಯ ಯಾವುದೇ ಹಿಂದಿನ ಅನ್ವೇಷಣೆಗಳ ಸಂಪೂರ್ಣ ತಿಳುವಳಿಕೆ ಅಗತ್ಯ.

೩. ಪೇಟೆಂಟ್ ಪಡೆಯಲು ಅನ್ವೇಷಣೆ ಕುರಿತ ಸಂಪೂರ್ಣವಾದ ವಿವರಗಳ ಅರ್ಜಿ

೪. ತಮ್ಮ ಅನ್ವೇಷಣೆಯನ್ನು ಸ್ವತಂತ್ರ ಹಾಗೂ ಸಮರ್ಥಿಸುವ ವಿವರವಾದ ನಿರೂಪಣೆಯ ಪೂರೈಕೆಯ ಸಾಮರ್ಥ್ಯ

೫. ಪೇಟೆಂಟ್ ಕಛೇರಿಯ ತಾಂತ್ರಿಕ ತಪಾಸಣೆಗೆ ಮಾಹಿತಿ ಒದಗಿಸುವುದು.

೬. ಪೇಟೆಂಟ್ ಪಡೆಯಲು ಎದುರಾಗಬಹುದಾದ ವಿರೋಧಗಳು ಮತ್ತು ಎದುರಾದಾಗ ಸಮರ್ಥನೆ.

೭. ಪೇಟೆಂಟ್ ಒಪ್ಪಿಗೆಯಾಗಿ ಗೆಜೆಟ್‌ನಲ್ಲಿ ಪ್ರಕಟವಾದ ಮೇಲೆಯೇ ಪೇಟೆಂಟ್ ನೀಡಿಕೆ ಹಾಗೂ ಹಕ್ಕು ಸಾಧಿಸಲು ಸಾಧ್ಯ ಎನ್ನುವ ವಿಚಾರ.

೮. ಪೇಟೆಂಟ್ ಪಡೆದ ಮೇಲೆ ಅದನ್ನು ನವೀಕರಿಸುತ್ತಾ ಜೀವಂತವಾಗಿರಿಸುವುದು.

ಉತ್ಪನ್ನ ಪೇಟೆಂಟು ಮತ್ತು ಪ್ರಕ್ರಿಯೆ ಪೇಟೆಂಟು:

ಈಗ ಹೊಸತಾಗಿ ಪೇಟೆಂಟೀಕರಣಗೊಳ್ಳುವ ವಿಚಾರದಲ್ಲಿ ಪ್ರಮುಖವಾಗಿ ಆರಂಭವಾಗಿರುವ ಹೊಸ ವಿಚಾರವಿದೆ. ಅದೆಂದರೆ ಉತ್ಪನ್ನ ಪೇಟೆಂಟು. ಅಂದರೆ ಈ ವರೆಗೆ ಪ್ರಕ್ರಿಯೆ ಪೇಟೆಂಟು ಜಾರಿಯಲ್ಲಿತ್ತು. ಅದರ ಪ್ರಕಾರ ಪ್ರಕ್ರಿಯೆಯು ಮಾತ್ರವೇ ಬೌದ್ಧಿಕ ಆಸ್ತಿ ಹಕ್ಕಿನಲ್ಲಿ ಸೇರಿತ್ತು. ಇದರಿಂದಾಗಿ ಕೆಲವು ಬದಲಾವಣೆಗಳೊಂದಿಗೆ ನೂತನ ಪ್ರಕ್ರಿಯೆಯಿಂದ ಅಭಿವೃದ್ಧಿಶೀಲ ರಾಷ್ಟ್ರಗಳು ಉತ್ಪಾದನೆಯಲ್ಲಿ ತೊಡಗಬಹುದಿತ್ತು. ಉತ್ಪನ್ನ ಪೇಟೆಂಟಿನಿಂದಾಗಿ ಹಾಗಾಗುವಂತಿಲ್ಲ. ಇಲ್ಲಿ ಆಯಾ ಉತ್ಪನ್ನಕ್ಕೇ ಪೇಟೆಂಟಿನ ರಕ್ಷಣೆ ಇರುವುದು. ಆಗ ಅದನ್ನು ಯಾರೂ ಯಾವುದೇ ವಿಧಾನದಿಂದಲೂ ತಯಾರಿಸುವಂತಿಲ್ಲ. ಇದರ ಭಯ ಏನೆಂದರೆ ಕೆಲವು ಪದಾರ್ಥಗಳು ದುಬಾರಿಯಾಗುವ ಅನುಮಾನಗಳೆದ್ದಿವೆ. ಇದರ ಪ್ರಕಾರ ಯಾರಾದರೂ ಸೋಪಿಗೆ ಪೇಟೆಂಟು ಮಾಡಿದ್ದಾರೆಂದರೆ ಯಾರೂ ಯಾವ ಬಗೆಯ ಸೋಪನ್ನೇ ತಯಾರಿಸುವಂತಿಲ್ಲ. ಈ ಹಿಂದಾದರೆ ಯಾವುದಾದರೂ ಹೊಸ ವಿದಾನದಲ್ಲಿ ಇತರರು ಬೇರೆಬಗೆಯ ಸೋಪನ್ನು ತಯಾರಿಸಬಹುದಿತ್ತು. ಮುಂದೆ ಇಡಿ ಸೋಪು ಅಥವಾ ಯಾವುದೇ ಉತ್ಪನ್ನವು ಪೇಟೆಂಟಿನ ಒಳಗೆ ಬರಲಿದೆ. ಅಲ್ಲದೆ ಪೇಟೆಂಟು ವಿಚಾರದಲ್ಲಿ ಈ ಮೇಲೆ ಚರ್ಚಿಸಿದ ಮಾಹಿತಿಯೂ ಅಲ್ಲದೆ, ನಮ್ಮ ದೇಶವೇ ಅನೇಕ ರೀತಿ ರಿವಾಜುಗಳನ್ನು ರೂಪಿಸಿಕೊಂಡು ಈವರೆಗೂ ಕಾಪಾಡಿಕೊಂಡು ಬಂದಿದೆ. ಮುಂದೆಯೂ ಜಾಗತಿಕವಾಗಿ ಅಗತ್ಯ ಪೈಪೋಟಿಯನ್ನು ನೀಡಲು ಸನ್ನದ್ದವಾಗಿದೆ.