ಬಾರಯ್ಯ ಒಲಿಗ್ಯಾನೆ ಮತ್ತೇನೆ ಮಲ್ಲಯ್ಯ
ಹಳ್ಳಿಪಳ್ಳಿ ವಡ್ಡುರುನ ಬಿಟ್ಟ ಸಾರಂಗಿಡುಸಿದುರೆ
ಬೊರುನ ತಿಪ್ಪೆ ತೊರಿಯೆ ತಿರುವಿಕೊಂಡೆ ಬಂದಾರೆ
ನಮ್ಮೆತ್ತಾವಿಗೆ ಗಾಡಿ ಮುಗಿದಿತಂದ್ಹೇಳಿದೆ

ನೀವು ಸತ್ಯದಲ್ಲಿ ಶರಣಾರು
ಉತ್ತಮುರ ಮಕ್ಕಾಳು
ನಿಮ್ಮ ಸತ್ತೆವು ಭಾವಾ ನಮ್ಮಿಗೆ ಬಂದೀತೆ

ಆಗುಸುರು ಮ್ಯಾಲೆ ಹೋಗೊ ತಬ್ಸಿ ಹೂವ್ವಿನ ಬೂದ
ಆರೋರ ಮ್ಯಾಲ್ಹೋಗೊ ಆಲು ಮುಸುಕದ್ವಾರಿ ಪುಲ್ಲು
ತುರುಕುರು ಮ್ಯಾಲೆ ಹೋಗೊ ತುಂಬುರು ಬಡ್ಡಿ ಕೇಳೊ
ಇಳ್ಳಿಕಿ ಪಾರಿ ತಿರುಗೊ ಗರ್ಡಿನೆ ಹನುಮಂತ
ಹಿಂದ್ಲಾವಿನಾಗೆ ನೆಡಿಯೋ ಕಂದ ಕೊಂಬಿನದೊಂದಂತೆ
ಸೊಂಡಲೂರು ಕೆರಿಯಾಗ ದುಂಡಾಪೊಮೇದೋಳೆ

ಹೊಸ ಹುಲ್ಲು ಮೇದಾವೆ ಹೊಸ ನೀರು ಕುಡ್ದಾವೋ
ಎತ್ತ ನಿಲ್ಲದಿಲ್ಲ ಕಣೊ ಮಲ್ಲಯ್ಯ
ಕುರಿಯಾಳಿರಿಯಟ್ಟಿಗೆ ತಾವರಿಗಿರಿ ಬಸವಂತೆ
ಸೀಮಿಗೆ ನಿನ್ಹೋಗೊ ಮತ್ತೇನೆ ಮಲ್ಲಯ್ಯ

01_85_KK-KUH

ಅಡ್ಕೆ ಕಾಯಾಗ ನೀರು ಕಾರೆ ಕಾಯಾಗ ಮಜ್ಜೀಗೆ
ತಕ್ಕೊಂಡೆ ವಲಿಗಾನೆ ಮತ್ತೇನೆ ಮಲ್ಲಯ್ಯ
ತಕ್ಕೊಂಡೆ ಬರ್ಬೇಕಂದಾ
ಉಗುಳೋಯ್ದು ಉಗುಳು ಆರೋಟ್ಹೋತ್ತಿಗೆ
ಆಗತ್ತು ತಪ್ಪಿದುರೆ ಮತ್ತೇನೆ ಮಲ್ಲಯ್ಯ
ಕೆಟ್ಟಾ ಜ್ಯಾತೆನಂದು ಕರ್ದನಂದಾ ವೋ

ಕುರಿಯಾಳ್ಹಿರಿಯ್ಹಟ್ಟಿ ಒಳ್ಳೆ ತಾವುರಗಿರಿ ಬಸವಂಗೆ
ನಾನೇ ಕಾಣೆ ಕಣೊ ಭಾವಯ್ಯ ವೋ

ಹಾಂಗೆಂಬ ಶಬ್ದನೇ ಕೇಳಿದುರೆ ಎತ್ತಯ್ಯ
ಕುರಿಯಾಳ್ಹಿರಿಯ್ಹಟ್ಟಿ ಒಳ್ಳೆ ತಾವುರಗಿರಿ ಬಸವಂಗೆ
ನಾನೇ ಕಾಣೆ ಕಣೋ ಭಾವಯ್ಯ ವೋ

ಹಾಂಗೆಂಬ ಶಬ್ದನೇ ಕೇಳಿದ್ರೆ ಎತ್ತಯ್ಯ
ಮುತ್ತೈದುತನುಗಳ ಹೆಗಲಿಗ್ಹಾಕಿದುನಣ್ಣ
ಮಲ್ಲಯ್ಯನ ಕೊರಳಿಗ್ಹಾಕಿದುನಣ್ಣಾ ವೋ

ಅಗಿಯರು ಕೈಯಡಿಯಾಗಿ ನಿಮ್ಮ ಕೈಯೆ ಮೇಲಾಗಿ
ದುಸ್ಮಾನರು ಕೈ ಅಡಿಯಾಗೆ ಬರ್ಲೆಂದ
ನಿಮ್ಮಗಾರೆವು ದೇವಗಾರೆವು ಬಂದವ್ನೆ
ತಣ್ಣನೆ ಮೂರರಿಕೆ ಕೊಡ್ತಾನೆ ಎತ್ತಯ್ಯ
ಕುರಿಯಾಳ್ಹಿರಿಯ್ಹಟ್ಟಿಗೆ ತಾವುರುಗಿರಿ ಬಸವಂಗೆ
ಸೀಮೆಗೆ ಮಲ್ಲಯ್ಯ ಬರ್ತಾನಣ್ಣಾ ವೋ

ಕುರಿಯಾಳ್ಹಿರಿಯ್ಹಟ್ಟಿಗೆ ತಾವುರುಗಿರಿ ಬಸವಂಗೆ
ಸೀಮೆಗೆ ಬಂದವ್ನೆ ವಲಿಗ್ಯಾನೆ ಮಲ್ಲಯ್ಯ
ನೀರ ಬಳಸೊ ಬಾವಿತಾಗೆ ಕುಂತವ್ನಣ್ಣಾ ವೋ

ಕನ್ನೇ ಹೆಣ್ಣು ಮಕ್ಕಾಳು ನೀರಿಗೆ ಬರುತಾರಣ್ಣಾ
ಅವ್ರು ಅಕ್ಕಾನ ಸಂಗಾತ ಹೇಳವ್ನೆ ಮಲ್ಲಯ್ಯ
ನಮ್ಮಕ್ಕ ಮಲ್ಲಮ್ಮ ಮತ್ತೇನೆ ನೋಡು
ನಿನತಮ್ಮ ವಲಿಗಾನೆ ಮಲ್ಲಯ್ಯ ಬಂದವ್ನೆ
ನೀರು ಬಳಸೊ ಬಾವಿತಲ್ಲೆ ಕುಂತ್ವನೆ ಅಂಬುತ್ಲೆ
ನಮ್ಮಕ್ಕ ಮಲ್ಲಮ್ಮಗೆ ಹೇಳೀರಮ್ಮಾ ವೋ

ಕನ್ನೇ ಹೆಣ್ಣುಮಕ್ಕಾಳು ಬಂದಾರೆ ನೋಡು
ನಿನ್ನ ತಮ್ಮ ವಲಿಗಾನೆ ಮಲ್ಲಯ್ಯ ಬಂದಾನೆ
ನೀರು ಬಳಸೋ ಬಾವಿತಲ್ಲಿ ಕುಂತವ್ನೆ ಅಂಬುತ್ಲೆ
ಮಲ್ಲಮ್ಮುಗೆ ಆ ಮಾತು ಹೇಳಿದ್ರು ವೋ

ಬುದ್ಧಿವಂತರ ಮಗ್ಳು ಜಾಣೆ ಕಾಣೊ ಮಲ್ಲಮ್ಮ
ಜ್ಞಾನವಂತರ ಮಗಳೆ ಮಲ್ಲಮ್ಮಾ ವೋ

ನನ ತಮ್ಮ ವಲಿಗಾನೆ ಮಲ್ಲಯ್ಯ ಬಂದವನೆಂದು
ಮಾಡಬಾರ್ದ ಅಡಿಗಿನೆ ಮಾಡಿದಳು ಮಲ್ಲಮ್ಮಾ
ಸಗಿಬಾರದ ಅಡಿಗೆ ಸಗುದಾಳಣ್ಣಾ ವೋ

ಜಾಲಿ ಜಂಬಿ ಎಲಿಯೆ ಪತ್ತರುವಳ್ಳೆ ಕಟ್ಟಿ
ವಲಿಗ್ಯಾನ ಮಲ್ಲಯ್ಯನ ಕರಿಯಲು ಕಳಿಸಿದುಳು ವೋ

ಬಾರಯ್ಯಾ ವಲಿಗಾನೆ ಮತ್ತೆನೇ ಮಲ್ಲಯ್ಯಾ
ಸಣ್ಣದೊಂದದೂಟಾ ಮಾಡೋಣ್ಣಾ ವೋ

ಒಂದೇ ಪತ್ತುರುಳಿಯ ಕಟ್ಟಿಯಾ ಅಕ್ಕಯ್ಯ
ಎರ್ಡೇ ಪತ್ತುರುಳಿಯ ಕಟ್ಟಿಯ ಎಂದಾ ವೋ

ಊರ ಮುಂದೆ ಇರುವಂತ ಆಂಜನೆಯ ಮೂರುತಿಗೆ
ಅಕ್ಕಿ ಬ್ಯಾಳಿ ಕೊಟ್ಟವ್ಳೆ ಮತ್ತೇನೆ ಮಲ್ಲಮ್ಮಾ
ಪೂಜೆ ಪುಸ್ಕಾರವ ಮಾಡಿಸಿದಳು ಮಲ್ಲಮ್ಮ
ಗಂಜಿ ಹಚ್ಚುಡುವೆನೆ ತೆರಿಯೇನೆ ಹಿಡ್ಕೊಂಡು
ವಲಿಗನ ಮಲ್ಲಯ್ಯನ ಕರೆಕಳಿಸಿದುಳೊ

ಹಿಂದೆ ಮುಂದೆ ನೋಡು ಮಕವನ್ನೆ ನೋಡಿಕ್ಯಂಡು
ನನ ತಮ್ಮ ವಲಿಗಾನೆ ಮಲ್ಲಯ್ಯ ಬಂದವ್ನೆ
ಅವ್ರ ಅರಮನಿಗಿ ಕರಕೊಂಡು ಬರ್ತಾಳಣ್ಣಾ ವೋ

ನಾನುನೇ ಕೂಡಾ ಉಂಬೋನಂದು
ಒಂದೇ ಪತ್ತುರಳಿಗೆ ಕಟ್ಟಿದುನಂದೋ
ಅಕ್ಕಂಬ ಕಿಚ್ಚೀಗೆ ಇವತ್ತುಣತೀನಕ್ಕ
ಬೆಳಗಾದ್ರೆ ನಮ್ಮಾ ಭಾವುನ ಕೂಟ ಹ್ಯಾಂಗೆ ಉಣಲಂದಾ ವೋ

ಹಂಗೆಂಬ ಶಬ್ದನೆ ಕೇಳವಳೆ ಮಲ್ಲಮ್ಮ
ಎರ್ಡೆ ಪತ್ತರಳಿಗೆ ಕಟ್ಟಿದುಳಣ್ಣಾ ವೋ

ಅಕ್ಕ ತಮ್ಮ ನೋಡೋ ಸವಪಂತಿಲಿ ಕುಂತ್ಕೊಂಡು
ಅಗ್ಗಣಿಯ ತಕ್ಕೊಂಡು ಮಜ್ಜುಣ ನೀಡಿಕಂಡು
ಸಣ್ಣದೊಂದೂಟ ಮಾಡಿದರಣ್ಣಾ ವೋ

ಸಣ್ಣದೊಂದೂಟನೆ ಮಾಡಿಕೊಂಡ ಮಲ್ಲಯ್ಯ
ಸಣ್ಣದೊಂದಿಳ್ಳೇ ಧರಿಸಿದುರಣ್ಣಾ ವೋ

ಸ್ವಾಮಾರದ್ಹೊತ್ತುಗಳು ಕೆಡ್ತಾವೆ ಅಕ್ಕಯ್ಯ
ಎತ್ತು ನಿಲ್ಲೊದಿಲ್ಲಮ್ಮಾ ಅವು ನಿಲ್ಲೊದಿಲ್ಲಮ್ಮ
ಅಡ್ಕೆ ಕಾಯಾಗ ನೀರು ಕಾರೆಕಾಯಾಗ ಮಜ್ಜಿಗೆ
ತಕ್ಕೊಂಡು ನಮ್ಮ ಭಾವ ಮತ್ತೇನೆ ಅಕ್ಕಯ್ಯ
ಉಗುಳೈದು ಉಗುಳಾರೋಟ್ಹೊತ್ತಿಗೆ
ಆಗ್ಯತ್ತು ತಪ್ಪಿದುರೆ ಮತ್ತೇನೆ ನೋಡು
ಹೀನು ಜಾತಿಯವ್ನೆಂದು ಕರ್ದಾನಮ್ಮ ವೋ

ಮೂಗುತಿ ಮುರುವುದ ಕಂಡೆ
ಮುಂಬಲು ಸುರಿಯೋದು ಕಂಡೆ
ನೆಡಿಗಲ್ಲು ಬೆಟ್ಟಕ್ಕೆ ಬ್ಯಾಗೆ ಬೀಳೋದು ಕಂಡೆ
ಸೊಂಡುಲೂರು ಸಿಮ್ಯಾಗೆ ದಂಡಿನಾಗೆ ಹೋಗೊತಲ್ಲಿಯೆ
ನಾನು ಕಂಡೆ ಮಲ್ಲಯ್ಯ
ಕಳ್ಳ ಕಾಕೂರು ಸೀಮಿಗೆ ಹೋಗಬ್ಯಾಡಪ್ಪಾ ವೋ

ಸ್ಯಾವೆಸಪ್ಪೆಬಣಿವೆ ಕೊಂಡು ಹಾಕಿಸೇನು
ಕಲ್ಲು ಬಾವಿ ನೀರೇನೆ ಕಪ್ಪಿಲಿ ಕಟ್ಟಿ ವಡಿಸೇನು
ಕಳ್ಳ ಕಾಕೂರು ಸೀಮಿಗೆ ಹೋಗುಬ್ಯಾಡಮ್ಮಾ ವೋ

ನಾನು ಹೇಳಿದ ಮತು ನಮ್ಮ ಭಾವ ಕೇಳಿಲಿಲ್ಲ
ನೀನೆ ಬಂದು ಅಲ್ಲೇ ಹೇಳಕ್ಕಾ ವೋ

ಹಂಗೆಂಬ ಶಬ್ದನೆ ಕೇಳಿದಳು ಮಲ್ಲಮ್ಮ
ವಾಡೆದು ನೀರು ಒಂದು ಒಡೆದೊಡೆದು ಕಾಸಿದುಳು
ಕೀಲು ನೀರೂನೇ ನೋಡು ಕೆಲ ಕೆಲದು ಕಾಸಿದ್ಳು
ನಾಗಾಭರಣದಾಗಿದ್ದಂತ ಸೀರೇನ
ಸೆಳದುಟ್ಟಾಳೆ ಮಲ್ಲಮ್ಮ
ಅಡ್ಕೆ ಕಾಯಗ ನೀರು ಕಾರೆ ಕಾಯಗ ಮಜ್ಜಿಗೆ
ತಕ್ಕೊಂಡು ಮಲ್ಲಮ್ಮ ಮತ್ತೇನೆ ನೋಡು
ಎತ್ತಿಗೆ ಮಲ್ಲಮ್ಮ ಬರ್ತಾಳಮ್ಮಾ ವೋ

ಅಕ್ಕ ತಮ್ಮಾ ನೋಡೊ ಹಿಂದೆ ಮುಂದೆ ಹೋಗೋರ
ಬಾರೆ ಬಾರೆ ಅಕ್ಕಯ್ಯ ಮತ್ತೇನೆ ಮಲ್ಲಮ್ಮಾ
ಒಬ್ಬೂರು ಬರುಲಾರಾದ ಪೆಟ್ಟನನ್ನ  ನೀ ಸೂಳೆ
ಹೆಂಗಸನ್ನ ಕರ್ಕೊಂಡು ಬಂದವ್ನೆ ಅಂಬತಾನೆ
ಒಂದೆ ಗಳಿಗೆ ಹಿಂದೆ ಬಾರಕ್ಕಾ ವೋ

ಒಂದು ಗುಂಡಿನ ಮರಿಯಲ್ಲೆ ಕುಂತ್ಕೊಂಡು ಮಲ್ಲಮ್ಮ
ಮೂಡಲ ಮಕನಾಗೆ ನಿತ್ಕೊಂಡ ಎತ್ತಯ್ಯ
ಊರಗೋಲು ತಿವಿಕೊಂಡು ಮತ್ತೇನೆ ನೋಡು
ವಿಳ್ಳೇವು ಗುಡಿಸೊನಣ್ಣಾ ಮಯಿಗೂದ ಗೌಡಾ ವೋ

ಒಪ್ಪಿಕೊಂಡ ಭಾವಯ್ಯ ಮೆಚ್ಚಿಕೊಂಡ ಅಂದಾನೆ
ಒಪ್ಪಿಕೊಂಡ ಕಣೆ ಮಲ್ಲಮ್ಮಾ ವೋ

ಭಾವ ಭಾವಮೈದುನರು ಮಾತನಾಡುತ್ತಾರಣ್ಣ
ಮುತ್ತೀನ ಶೆರಗ್ಹಾಸ್ಯಾವ್ಳೆ ಮತ್ತೇನೆ ಮಲ್ಲಮ್ಮಾ
ಬಟ್ಟಣ್ಣೆ ಅಡ್ಡ ಬೀಳವ್ಳಂತಾ ವೋ

ಮೂಗುತಿ ಮುರುವುದು ಕಂಡೆ ಮುಂಬಲು ಸುರಿಯೋದು ಕಂಡೆ
ನೆಡಿಗಲ್ಲು ಬೆಟ್ಟಾಕೆ ಬ್ಯಾಗೆ ಬಿಳೋದು ಕಮಡೆ
ಸೊಂಡಲೂರು ಸೀಮ್ಯಾಗೆ ದುಂಡಿನಾಗ್ಹೋಗೊತಲ್ಲಿಯೆ
ನಾನ ಕಂಡೆ ಬಟ್ಟಣಾ ಕಳ್ಳ ಕಾಕುವಾರು ಸೀಮೆಗೆ ಬ್ಯಾಡಪ್ಪಾ ವೋ

ಸ್ಯಾವೆ ಸಪ್ಪೆ ಬಣಿವೆ ಕೊಂಡು ಹಾಕಿಸೇನು
ಕಲ್ಲು ಬಾವಿ ನೀರು ಕಪ್ಪಿಲಿ ಕಟ್ಟಿ ಹೊಡಿಸೇನು
ಕಳ್ಳ ಕಾಕೂರು ಸೀಮಿಗೆ ಹೋಗುಬ್ಯಾಡಯ್ಯವೊ
ಆ ಮಾತು ಕೇಳವ್ನೆ ಮತ್ತೇನೆ ಎತ್ತಯ್ಯ
ಕೈಯಾಗ ಇದ್ದಂತ ಸುಣ್‌ಗಾದೆ ತೊಕ್ಕೊಂಡು
ಒಂದೇ ಪೆಟ್ಟಿಗೆ ಗೌಡ ಹೊಡ್ದವ್ನಣ್ಣಾ ವೋ

ಸ್ವಾಮಾರ ಹೊತ್ತುಗಳು ಕೆಡ್ತಾ ವಲಿಗಾನಯ್ಯ
ಸಿಳ್ಳೆ ಹೊಡ್ದೆ ನೋಡೊ ಚಿಟ್ಗಿಲಿ ಹಾಕಯ್ಯಾ
ಎಣಿಕಲ್ಲು ಮಕ್ಕೆ ಕೈತಳ್ಳು ಅಂದಾ ವೋ

ಗ್ವಾವಿಯ ಸೀಮಿಗೆ ಆವೆದ್ದು ಹೋದಾರ
ಗ್ವಾವಿಯ ಸೀಮೆ ತೆಲಗಾರೋ | ಹೆಣುಮಕ್ಕಾಳು
ಆವಿಗೆ ಆರುತಿಯೆ ಬೆಳುಗಿದ್ರೊ | ಹಾಲುನೆ ಕೊಡ್ತಾವೊ
ಆವಿನ ಮುಂದೆ ಬರುವ ಗೌಡಾಗೋ | ಬೆಳಗಿದುರ
ನಮ್ಮ ಮಕ್ಕಳ ಫಲವೆ ಕೊಡ್ತಾನೋ

ಗುತ್ತೀಯ ಸೀಮಿಗೆ ಒಳ್ಳೆ ಎತ್ತೈದ್ದು ಹೋದಾರೆ
ಗುತ್ತಿಯನಾ ಸೀಮೆ ತೆಲ್ಗಾರೋ | ಹೆಣುಮಕ್ಕಾಳು
ಎತ್ತಿಗೆ ಆರುತಿಯೆ ಬೆಳ್ಗಿದ್ರೊ | ಎತ್ತೇನು ಕೊಡ್ತಾವೆ
ಎತ್ತಿನ ಮುಂದೆ ಬರುವ ಗೌಡಾಗೋ | ಬೆಳ್ಗಿದ್ರುವೆ
ನಮ್ಮ ಮುತ್ತೈದೆತನುಗಳ ಪಡದಾನೋ

ಹೊತ್ತುಗಳು ತಪ್ಪುತಾವೆ ಒಳ್ಳೆ ಹೊತ್ತುಗಳು ಮೀರ್ಯಾವೋ
ಸ್ವಾಮಾದ್ಹೊತ್ತುಗಳು ಕೆಡ್ತಾವೆ | ವಲಿಗ್ಯಾನಯ್ಯ
ಎಣಿಕಲ್ಲು ಮಕ್ಕೆ ಕೈತೊರಂದಾ ವೋ

ಬಲದಲ್ಲಿ ಕಣ್ಣೀರೆ ಎಡದಲ್ಲಿ ವರ್ಸೋನಣ್ಣಾ
ಎಡದಲ್ಲಿ ಕಣ್ಣೀರೆ ಬಲದಲ್ಲಿ ವರ್ಸೋನಣ್ಣಾ
ಹಿಂದಕ ನೋಡ್ಯಾನಣ್ಣಾ ವಲಿಗಾನೆ ಮಲ್ಲಯ್ಯ
ಎಣಿಕಲ್ಲೆ ಮಕ್ಕೆ ಕೈ ತೋರಿದುನೋ ವೋ

ಹಿಂದಕ ನೋಡೋನಣ್ಣಾ ಮುಂದಕ ನಡಿಯೋನಣ್ಣಾ
ಒಂದೇಣಿ ಹತ್ತೋರಂತೆ ಒಂದೇಣಿ ಇಳಿಯೋರಂತೆ
ಅವ್ರಕ್ಕನ ಮ್ಯಾಗಾಳಾಸಿ ಮಾರ್ತಾವರಣ್ಣ | ಮಲ್ಲಮ್ಮ
ಅವ್ರ ಭಾವಾನಾ ಪಂಥಿಲಿ ನಡಿಯೋನಣ್ಣಾ ವೋ

ಎಣಿಕಲ್ಲು ಕಾವಿಲಿವಳಿಗೆ ಮತ್ತೇನೆ ಬೀದೀನೆ ಬೀಡಂದ
ಎತ್ತಯ್ಯನ ಎತ್ತಾವು ಹೋಗಾನೆ ನಿಬ್ಬುರಕೆ
ಅತ್ತುಲು ಸೀಮೇ ಬಂದು ಅತ್ತಕೊತ್ತುಲು ಆಗೋದು
ಇತ್ತಲು ಸೀಮೇ ಬಂದು ಕತ್ತುಲುಗವ್‌ಕಂಬೊದು
ಸುತ್ತೇಳು ರಾಜ್ಯವುಕೆ ಮತ್ತೇಯೇನೇ ನೋಡು
ಮುತ್ತಿನ ಮಳಿ ಸುರುದುಂಗ ಸುರಿಯೋದು ಮೋ

ದಂಡೇ ಬರುತ್ತೈತಂಗೋ ದಳವೆ ಬರುತ್ತೈತಂಗೋ
ಮಂದಿ ಬರುತ್ತೈತಂಗೋ ಮರ್ಬಲ ಬರ್ತಾವಂದು
ಗುಡ್ಡಾದ ಬೋರಮ್ಮ ಅಲ್ಲೆ ನನಿಗನ್ನ ಒಂದೇನೆ
ಉತ್ತರುವೇ ಕಳವುಲಿಲ್ಲ ಅಂದವ್ಳೆ ಬೋರಮ್ಮ
ಊರುಸುತ್ತ ಕ್ವಾಟೆಕಟ್ಟಸೋಳನ್ಣ ವೋ ಬೋರಮ್ಮ ವೋ

ಆಲಂಗುದ ಕ್ವಾಟೆ ಕಟ್ಸಿದುಳಣ್ಣ ಬೋರಮ್ಮ
ಎಣಿಕಲ್ಲು ಕಾವಿಲಿಗೆ ಮತ್ತೇಯಾನೇ ನೋಡು
ಎತ್ತುಯ್ಯನ ಎತ್ತೇ ವದಗಿದುವಣ್ಣಾ ವೋ

ಎಣಿಕಲ್ಲು ಕಾವಿಲಿಗೆ ಎತ್ತೇ ವದಗಿದುವಣ್ಣಾ
ಕವುಜಾಡಿದ ಪೆಂಟೀಗೆ ಕಂಬಿ ಇಳಿವಿದುರಣ್ಣ
ಡುಕ್ಕುಸಾರೇ ಗಾಡೀಗೆ ಎತ್ತೇ ಕೆದರಿದುವಣ್ಣಾ
ಕವುಜಾಡಿದ ಪೆಂಟೀಗೆ ಕಳ್ಳೇನೆ ಕಡುದವರಣ್ಣಾ
ಹುಲಿಯಾಡಿದ ಪೆಂಟೀಗೆ ಗೂಡೆಕಟ್ಟಿದುರೋ

ಕಾರೆಕಳ್ಳೆ ಕಡುದವನ್ನೆ ಕರಿವಿನ ಗೋಡತ್ತಿದುರುಣ್ಣ
ಊಲೀ ಕಳ್ಳೇ ಕಡದು ಉದಿಮೋರತ್ತಿದುರಣ್ಣ
ಅಂದಾ ಶೆಂದುದ ಕಳ್ಳೆ ಗಂದಮಾವುದು ಬೆರಗಣ್ಣ
ಅಚ್ಚನ್ನ ಕಳ್ಳಂತೆ ಪಚ್ಯೇದು ಬೆರಗಣ್ಣ
ಹೂವ್ವಿನುಕ್ಕುಡುದ್ಯಾವ್ರು ಬೆರುಗಣ್ಣಾ ವೋ

ಉಳಿವೇ ಕೋಲು ನೋಡು ಉಗ್ಗುದ ಗಡಿಗೇ ನೋಡು
ಉಕ್ಕುಡುದಾ ಕೋಪೀಗೆ ಇಟ್ಟವನೆ ಎತ್ತಯ್ಯ
ಅಡಿಯಾ ಸಿಗಿ ಸರುದವನೆ ಬೆಂಕಿಮಾಡಿದು ಕಣ
ಮೂರೇನೆ ಕಣ್ಣಿನುದು ಕರಿಯಾನೆ ಸಿಪ್ಪಿನಿದು
ದುಷ್ಟಿಯನ್ನಾ ಕಾಯಿ ವಡದವ್ನೆ ಎತ್ತಯ್ಯ
ಎತ್ತೇ ಗೂಡಿಗೆ ತಿರಗರುದವುನೊ
ಮೋವುದಾರಿನ ಕರೂವೇನೆ ಬಿಟ್ಟವನೆ ಮಲ್ಲಯ್ಯ
ವಳಸಾರೀ ವಳುಸಾರ ಹಾಲೇನೇ ಕರಕಂಡು
ಅಡಿಗೇ ಮಾಡೇನೆ ಕಾಣೇ ಮಲ್ಲಯ್ಯ ವೋ

ಎಲ್ಲೇ ಕರುವು ಅಲ್ಲೆ ಕಟ್ಟಿಗಂಡ ಎತ್ತಯ್ಯ
ಉಕ್ಕುಡುದಾ ಕೋಪಿನಾಗೆ ಕುಂತವನಣ್ಣಾ ವೋ
ಎತ್ತಯ್ಯ ವೋ
ಪಟ್ಟೇದಟ್ಟ್ಯಾಗೆ ಕೈಹಿಡುತಾನಣ್ಣಾ ವೋ
ಎತ್ತಯ್ಯ ವೋ

ಬಾರಾಯ್ಯ ವಲಿಯಾನೆ ಮತ್ತೇನೆ ಮಲ್ಲಯ್ಯ
ಎಂತವಸ್ತು ನಾವು ಮರುತು ಬಂದೀವಂದಾ ವೋ

ದಿನವಂದೆ ಮನಿಯೋ ಕಟ್ಟುತೀವೆ ಭಾವಯ್ಯೋ
ದಿನವಂದೆ ಮನಿಯಾ ಬಿಡತೀವಮ್ಮಾ ವೋ ಭಾವಯ್ಯ ವೋ

ಅಂಗ್ಯಲ್ಲ ವಲಿಗಾನೆ ಇಂಗ್ಯಲ್ಲ ವಲಿಗಾನೆ
ಇಳ್ಳವಡುದ ಗೂಡಿನಾಗೆ ಮತ್ತೇನೆ ಮಲ್ಲಯ್ಯ
ಸುಣ್ಣಗಾವಿ ಮರತೇ ಬಂದೀನಮ್ಮ ವೋ

ನಾಳೇನೆ ಭಾವಯ್ಯ ನಮ್ಮ ಆವು ವಡುಕಂಡ್ಹೋಗಿ
ನಾಳೇ ತರಾನೇಳೇ ಭಾವಯ್ಯ ವೋ

ಅಂಗ್ಯಲ್ಲ ವಲಿಗಾನೆ ಇಂಗ್ಯಲ್ಲ ವಲಿಗಾನೆ
ನೀನಡಿಗೆ ಮಾಡಿ ನೋಡು ಚಾಲಿಜಂಬೀ ಎಲಿಯಾ
ಪತ್ತುರುವಳ್ಳೇ ಕಟ್ಟಿ ಅಗ್ಗುಣಿಯೆ ತಕ್ಕಂಡು
ಸಣ್ಣಾದೊಂದು ನೋಡು ಊಟಮಾಡೋ ವತ್ತೀಗೆ
ಎಲ್ಲಿದ್ದರು ನಾನೇ ಬರ್ತಿನಂದಾ ವೋ

ಆಗತ್ತು ತಪ್ಪಿದುರೆ ಮತ್ತೇನೆ ಮಲ್ಲಯ್ಯ
ಕೆಟ್ಟಜಾತ್ಯೊನೆಂದು ಕರಿಯಮ್ಮಾ ವೋ

ಅಗೆಯರ ಕೈ ಅಡಿಯಾಗಿ ನಿಮ್ಮ ಕೈ ಮೇಲಾಗಿ
ದುಸ್ಮಾನ ಹುಡುಗಾರೇ ಅಡಿಯಾಗಿ ಬರಲಂದ
ನಿಮ್ಮಗಾರೆ ಓ ಭಾವ ದೇವಗಾರಿ ಅಂದವನೆ
ತಣ್ಣನ್ನವು ಮೂರರಿಕೆ ಕೊಡುತಾನೆ ಮಲ್ಲಯ್ಯ
ಈಳ್ಳೆವಡದೇ ಗೂಡೀಗೆ ಬರುತಾನಣ್ಣಾ ವೋ

ಕಾಲು ಗಡಸೋನಣ್ಣ ತೋಳೆ ಬೀಸೋನಣ್ಣ
ಎಡವೀದ ಕಲ್ಲೆ ಪುಡಿಪುಡಿಯಣ್ಣಾ ವೋ
ಈಳ್ಳೆವಡದೆ ಗೂಡಿಗೆ ಬಂದವನೆ ಎತ್ತಯ್ಯ ವೋ
ಗೂಡಿನಾಗೆ ಮಲ್ಲಮ್ಮ ಮನಿಗವಳೋ ವೋ

ನೋಡವ್ನೆ ಎತ್ತಯ್ಯಾ ಒಳ್ಳೆ ಮತ್ತೇನೇ ನೋಡು
ಉಡಿ ದಟ್ಟ್ಯಾಗ ಇದ್ದಂತ ಸಂಜೀವಿನಿ ಮೂರೂತಿ
ತಕ್ಕಂಡ ಎತ್ತಯ್ಯ ಮತ್ತೇನೆ ಯೇನೆ ನೋಡು
ಸೂರಿದುಗೊಂದು ಭಾಗ ಚಂದುರುಗೊಂದು ಭಾಗ
ನಿವ್ವಾಳಿ ತಗುದವ್ನೆ ಮತ್ತೇನೆ ಎತ್ತಯ್ಯ
ಮಲ್ಲಮ್ಮನ ಮಂಡೆಮ್ಯಾಲೆ ಹಿಡಿತಾನಣ್ಣಾ ವೋ

ಹರಹರನೆ ಶಿವು ಶಿವುನೆ
ಉಜ್ಜಣಿ ಪರುಮೂತಿ ಸ್ವಾಮಿ
ಇಷ್ಟೊತ್ತು ನಾವು ನಿದ್ದೆ ತಡದೇವು ಅಂದವಳೆ
ಅಷ್ಟುಂಗುದುಲೇ ಎದ್ದವಳೆ
ಅಬುಗಾನೆ ಮಲ್ಲಮ್ಮ
ಎತ್ತಯ್ಯನಾ ಪಾದಾಕೆ ಎರಗಿದುಲಣ್ಣಾ ವೋ

ಬಾರೆಬಾರೆ ಎಲುಮಲ್ಲಿ
ಈ ಬುದ್ದಿ ನಿನಗೆ ತರುವಲ್ಲ ಎಲುಮಲ್ಲಿ
ನಾನು ಉಲಿಗುರಿಗ್ಹೋಗುಲುವಾಗ
ಅಡ್ಡಾ ಆಗಬೋದೆನೆ
ಆಗಾನೇ ನೋಡು ಮತ್ತೇನೆ ಎತ್ತಯ್ಯ
ಇದ್ದೀ ವ್ಹೇಳಿದುನಣ್ಣ ಬುದ್ದಿ ಹೇಳಿದುನಣ್ಣ
ಅವರರುಮುನಿಗೆ ಕರಕಂಡು ಬರುತಾರಣ್ಣಾ ವೋ

ಕುರಿಯಾಳ ಹಿರಿಯ್ಹಟ್ಟೀಗೆ ತಾವುರಿಗಿರಿ ಬಸುವಂಗೆ
ಸೀಮೀಗೆ ಕರಕಂಡು ಬಂದವನೆ ಎತ್ತಯ್ಯ
ಅವುರರಮನಿಗೆ ಗವುಡಾ ಬಿಡುತಾನಣ್ಣಾ ವೋ

ವತ್ತುಗುಳೇ ತಪ್ಪು ತಾವು ಗೋತ್ತುಗಳು ಮೀರ್ಯಾವೋ
ಆವೇಳೊದೊತ್ತಾಗಿ ಬರುತಾವೆ ಏಳುಮಲ್ಲಿ
ತಣ್ಣನ್ನವು ಮೂರರಿಕೆ ಕೊಡುಬೇಕಂದಾ ವೋ
ಕಳ್ಳಕಾಕುರು ಸೀಮೀಗೆ ಹೋಗುತೀರೇ ಗೌಡ
ನೀವು ಸತ್ತೆ ಸಾವೂದೇನೋ ಬದುಕಿದ ಬಾಳು ಏನು
ನನಗ್ಹೆಂಗೆ ತಿಳಿಬೇಕು ಮೈಗುದು ಗವುಡಾ ವೋ