ಏಮಿಸ್ತೆ ಏಮಿ ಪೇರುಂಟದಿ ಮಾಯಯ್ಯ
ಮಾಕುಲಮೇನೆ ಸೂಸ್ತೆ ಮಿಂಡ್ಲಿಕ್ಕಿ ಪುಟ್ಟಿನ ಕುಲುಮು
ಮಲ್ಲೆನುಗ ಪಿಲಿಪಂಜೆ ಪಿನ್ನಿಸುತ್ತೂರ ಪಿಲ್ಲಾಲು
ನೀರಿಗಂಟೆ ತಾನಾಮು ಈ ಗೌಡಾ ವೋ

ಸೂರಿದು ಹುಟ್ಟೀದುತಾಕೆ ಶಂದುರು ಮುಣಿಗಿದುತಾಕೆ
ಎಂಥ ವರವೆ ಕೇಳಿದಲೆ ಮತ್ತೆ ಬ್ಯಾಡಾರ್ಹುಡುಗಾ
ಕೊಟ್ಟೇ ಹೋಗಯ್ಯ ನಿಮ್ಮರಮನಿಯೇ ವೋ

ನೀರಿಗಂಟೆ ತಾನಾಮು ತಕ್ಕಂಡು ಬ್ಯಾಡಾರ್ಹುಡುಗ
ಅವರರಮನಿಗೆ ಅವನೇ ಬರುತಾನಣ್ಣಾ ವೋ

ಬಾರೆಬಾರೇ ಗಂಗಮ್ಮ
ಎತ್ತಯ್ಯನ ಎತ್ತಾವು
ಎತ್ಯಯ್ಯಾನೆ ನೋಡು
ಆಶೆಗಡ್ಡೇ ಹೋಗಬೇಕು
ಒಣಿಗೆ ಬಂಡೋಟೋಳಿಯೆ ಬಿಡಬೇಕಂದಾ ವೋ

ಆಶೇ ಗಡ್ಡೀಗೇನು ಹೋಗಬೇಕು ಅಂದಾರೆ
ಗಂಗಮ್ಮುನ ಸಾಜ ಕೊಡಬೇಕಂದ ವೋ

ನನಿಯಕ್ಕಿ ನೆನುಗಡಲೆ ಕಡದೇಬೇ ಕಬ್ಬಿನ ಕೋಲು
ಸುಲುದು ತೆಂಗಿನ ಕಾಯಿ ಐದೆಲಿಯೆ ಐದಡಿಕೆ
ಐದೇ ಅಂಗೂದಾರ ಮತ್ತೇನೆ ಆವಾಗ
ಗಂಗಮ್ಮನ ಸಾಜಾ ಕೊಡುತಾನಣ್ಣಾ ವೋ

ಗಂಗಮ್ಮನ ಸಾಜಾನೆ ಕೊಡುತಾನೆ ಎತ್ತಯ್ಯ
ಅತ್ತುಲು ನೀರು ನೋಡ ಅತ್ತುಲುಗೆ ನಿನ್ನಾವು
ಇತ್ತುಲು ನೀರು ನೋಡು ಇತ್ತುಲಾಗೆ ನಿಮ್ಮಾವು
ನಡಿವೇನೆ ಗಂಗಮ್ಮ ಬಾಜೇನೆ ಬಿಡುತಾಳೆ
ಆಸೇ ಗಡ್ಡೀಗಾಗ ಬರುತಾರಣ್ಣಾ ವೋ

ಬಾವ ಬಾ ಮೈದುನುರು ಹೋಗುತಾರೆಯೆ ನೋಡು
ಸೊಂಡುಲೂರು ಎರಿಯಾಗೆ ಬಿಳುಜ್ವಾಳುದ ಸೊಪ್ಪ್ಯಾಗೆ
ಎರಡ್ಹೋರಿ ಕಾಡುತಪ್ಪಿ ಮೇಯೋವಮ್ಮಾ ವೋ

ಬಾರಯ್ಯ ವಲಿಗಾನೆ ಮತ್ತೇನೆ ಮಲ್ಲಯ್ಯೋ
ನಮ್ಮೆರಡ್ಹೋರಿಯೆ ನೋಡು ನಮ್ಮೂವಾಗಿದಾವೆ
ಕೂಗಯ್ಯ ವಲಿಗಾನೆ ಬರುಲಂದಾ ವೋ

ಅಲೆ ಎರಡ್ಹೋರೆ ಆವಾಗ
ಕೂಗಿದಾಗ ಮಲ್ಲಯ್ಯ
ಓಡೋಡಿ ಎರಡ್ಹೋರಿ ಬರುತಾವಮ್ಮಾ ವೋ

ಅಲ್ಲೇ ಬಾವಮೈದುನುರು ಎರಡ್ಹೋರಿ ವಡಕಂಡು
ಹೋಗುತಾರೆ ಹಿಂದೆಮುಂದೆ
ಆಲೋಜಿ ಸಾವೂಕಾರ
ಅವರೀಗೆ ಎದರೀಗೆ ಬರುತಾನಣ್ಣಾ ವೋ

ಏನಯ್ಯಾ ಎತ್ತಿನಗೌಡ ಎತ್ತಯ್ಯ
ಎರಡೋರಿ ನಿನ್ನವುಕೆ ಬೆಲೆ ಹೇಳಯ್ಯ ವೋ

02_85_KK-KUH

ಎತ್ತಿನಗೌಡ ಎತ್ತಯ್ಯ ಆಲೋಜಿ ಸಾವುಕಾರ
ಬೆಲಿಯೆ ಹೇಳುತಾನೋ ಮೈಗುದು ಗೌಡಾ ವೋ

ತೆಲಿಗೀಲಿ ಹೇಳಾತಿ ಕನ್ನುಡುವೆ ಹೇಳಾಲ
ಕನ್ನಡುಡುವೆ ಹೇಳಿದುರೆ ನನ್ನಿಗೆ ತಿಳಿಯೋದಿಲ್ಲ
ತೆಲುಗೆ ಹೇಳಬೇಕೋ ಮೈಗುದು ಗೌಡಾ ವೋ

ಎತ್ತಿನಗೌಡ ಎತ್ತಯ್ಯ ಬೆಲಿಯೇ ಹೇಳುತಾನಣ್ಣ
ಮುಂದ್ರಕಾಡ್ಲುಕಿ ಮುಪ್ಪಯ್ಯ ಎನಿಕಿಕಾಡ್ಲುಕಿ ಎನುಬೈಯ್ಯಿ
ತ್ವಾಕೂಕಿ ತೊಂಬಯ್ಯ ನೆಡ್ಹೀಕಿ ಡೆಬ್ಬಯ್ಯಿ
ಕೊಂಬುಲುಕೇನೆ ನೂರು ಬೆಲಿಮುಗಿತೇ ಸೆಟ್ಟಿ ಬಿಲಿಮುಗಿತಣ್ಣಾ ವೋ

ಅಲೆ ಲೆಕ್ಕಾವಿಲ್ಲಾದಣುವೆ ಗಕ್ಕುನೆ ಸುರಿವೈದಾನೆ
ವಡಿಯನ ಗಂಟನೋಡು ಬಂದೈತೆ ಸಾವುಕಾರ
ನಮ್ಮೆಂಟಾಣಿ ಮಾತ್ರ ಕೊಡಬೇಕಂದಾ ವೋ

ಲೆಕ್ಕಾವಿಲ್ಲಾದ್ಹಣುವೆ ಗಕ್ಕುನ ಸುರಿವೈದೀನಿ
ಎಂಟಾಣಿ ನಾನು ಕೊಡುಲಾರೆಂದಾ ವೋ
ವಡಿಯಿನ ಗಂಟೀನಾಗೆ ಕಡಿಮಾದುರು ಶಿಂತಿಲ್ಲ
ನಮ್ಮೆಂಟಾಣಿ ನಾನು ಬಿಡುಲಾರೆಂದಾ ವೋ

ಕಾಲುರಿ ದುಡ್ಡುನೋಡು ಎಂಟಾಣಿ ಅಂದವನೆ
ಲೆಕ್ಕಾವಿಲ್ಲಾದಣುಪಿ ಗಕ್ಕನು ಸುರಿವೈದೀನಿ
ಎಂಟಾಣಿ ನಾನೇ ಕೊಡುಲಾರೆಂದಾ ವೋ

ಅಲೆ ಕೊಡುದಿದ್ದರೆ ಶಿಂತಿಲ್ಲ ಅಂದವನೆ ಎತ್ತಯ್ಯ
ಹಗ್ಗ ಬೀಸವನಣ್ಣ ತೆಕ್ಕೆ ಹಾಕಿದುನಣ್ಣ
ಒಂದೇಣತ್ತೀಗೆ ಒಂದೇಣಿಳಿಯತ್ತೀಗೆ
ಎರಡೋರಿ ಹುರ್ಲು ಬಿದ್ದು ಸಾಯಿಲಂದ ಎತ್ತಯ್ಯ
ಎರಡೋರಿ ಆವಾಗ ವಡುಕೋಡುತಾವಣ್ಣಾ ವೋ

ಒಂದೇಣತ್ತೊದಂತೆ ಒಂದೇಣಿಳಿಯೋವಣ್ಣ
ಎರಡೋರಿ ಹುರ್ಲುಬಿದ್ದು ಸಾಯೋವಣ್ಣ ವೋ

ಅಲೆಬಾರಯ್ಯ ಎಲೆ ಗೌಡ
ಎತ್ತಿನಗೌಡೆತ್ತಯ್ಯ
ನಿಮ್ಮೆಂಟಾಣಿ ಕೊಡತೀನಿ
ನಮ್ಮೆರಡ್ಹೋರಿ ಎಬ್ಬಿಸಿ ಕೊಡಬೇಂಕದಾ ವೋ

ಎಂಟಾಣಿ ಕೊಡುತಾನೆ
ಆಲೋಜಿ ಸಾವುಕಾರ
ಆವುಕಾಯೋ ನಾಗುವಳ್ಳಿ
ಬೆತ್ತಾವೆ ತಕ್ಕಂಡು
ಬಡುದು ಬಡುದೇ ಎರಡ್ಹೋರಿ ಎಬ್ಬುಸೋನಣ್ಣಾ ವೋ

ಎತ್ತಿನ ಗೌಡೆತ್ಯಯ್ಯ ಆಲೋಜಿ ಸಾವುಕಾರ
ಅಂಜು ಮುತ್ತೀನಳ್ಳೆ ಅಂಬೊ ಊರೊಂದೆ ಕಟ್ಟಿಸಿದುರಣ್ಣ
ಸ್ವಾಮಾರುದು ಸಂತೇ ಮೆರಿಸಿದುರಣ್ಣಾ ವೋ

ಸ್ವಾಮಾರ ಸಂತೇನೆ ಮೆರಿಸವರೆ ಆವಾಗ
ಅಣವಿನ ಕಾಯೋಟು ದೂಪ ಅಡ್ಡನ ದೂಪಾನೊಯ್ದು
ಮೂರೇನ ಕಣ್ಣನದು ಕರಿಯಾನೆ ಸಿಪ್ಪಿನುದು
ದೃಷ್ಠಿಯನ್ನಾ ಕಾಯಿ ತಕ್ಕಂಡು ನಿನ್ನೆತ್ತಯ್ಯ
ತಳಕಿನ ಬೆಟ್ಟಾಕಾಗ ಬರುತಾನಣ್ಣಾ ವೋ

ತಳಕಿನ ಬೆಟ್ಟಾಕೇನೆ ಬಂದವನೆ ಎತ್ತಯ್ಯ
ಗೊಡ್ಡ ಗಾಳೀ ಬಟ್ಟಣ್ಣ
ತಳಕಿನ ಬೆಟಟ್ದ ಮ್ಯಾಲೆ
ಅಣ್ಣಾ ತಂಗಿ ಅಲ್ಲಿ ಮನಿಗವರಣ್ಣಾ ವೋ

ಮದ್ದೀಗೇರಿ ಕಂಬುಳಿ ಒಳ್ಳೆ ತಿದ್ದೀ ಗದ್ದಿಗಿ ಮಾಡಿ
ಅಡಡಾಬೀಳುತಾನೋ ಮೈಗುದು ಗೌಡಾ ವೋ

ಮೂಡಾಲಡ್ಡು ಬಿದ್ದಾರೆ ಪಡುವುಲು ಮಕುನಾಗೋದು
ಟೆಂಕಾಲಡಡು ಬಿದ್ದಾರೆ ಬೆಡಗುಲು ಮಕುನಾಗೋದು
ಎತ್ತೀನ ಮನುಯಾವಾಗ ತಿರುವಿದುನಣ್ಣಾ ವೋ

ಅಲ್ಲೇ ಅಡಿವಿನ ಕಾಯಿ ಅಡಿದೂಪ
ಅಡ್ಡಾವ ದೂಪಾಸುಟ್ಟು
ಮೂರೇನೆ ಕಣ್ಣಿನುದು
ಕರಿಯಾನೆ ಸಿಪ್ಪಿನುದು
ದೃಷಿ ಯನ್ನ ಕಾಯೆ
ವಡದವನೇ ಎತ್ತಯ್ಯ
ಎತ್ತಿನ ಮನುವಾಗ ತಿರುವಿದುನಣ್ಣಾ ವೋ

ಎತ್ತಾವು ಎತ್ತಲಾಗೆ ಹೋದಾವಮುತ ಕೇಳಿದುರೆ
ಸುತ್ತಾ ಮುತ್ತು ಹೋದಾವು ಅತ್ತಿ ಬರುತಾವೆತ್ತಯ್ಯ
ಸೊಂಡುಲೂರಿಗೆ ಹೋದಾವೆ ಬರುಲಿಲ್ಲಾ ವೋ

ಬಿಟ್ಟಕೈಯಿ ಬೀಸಿದ್ಹಂಗೆ ಮತ್ತೇನೆ ಎತ್ತಯ್ಯ
ಸೊಂಡುಲೂರಿಗೆ ಆಗ ಬರುತಾನಣ್ಣಾ ವೋ

ಸೊಂಡಲೂರು ಬೋಮ್ಮಯ್ಯ ಹಿಂದುಲಾವು ಮುಂದಲಾವು
ಎತ್ತಾವೆ ವಡಕಂಡ ಮತ್ತೇನೆ ಬೊಮ್ಮಯ್ಯ
ನೆಡಿವೆಕುಂತಾನೋ ಬೊಮ್ಮಯ್ಯ ವೋ

ನಿನ್ನಾನೆ ಸೀಮೀಗೆ ನೀನೊಬ್ಬ ಶರಣಯ್ಯ
ನನ್ನಾನೆ ಸೀಮೀಗೆ ನಾನು ಒಬ್ಬ ಶೆರಣಯ್ಯ
ನನ್ನ ಸೀಮಿಗೆ ನೋಡು ನೀನ್ನಾವಾದರು ಬರಬವುದು
ಇದಕ್ಕೆಲ್ಲೋ ಕರ್ತ್ತೋರು ಮತ್ತೇನೆ ಎತ್ತಯ್ಯ
ನಾನು ನೀನು ಕಲತು ಮತ್ತೇನೆ ಎತ್ತಯ್ಯ
ಸಣ್ಣಾದೊಂದು ನ್ಯಾಯ ಮಾಡಬೇಕಂದ ವೋ

ನ್ಯಾಯಾನೆ ಮಾಡಕೆ ಮತ್ತೇನೆ ಬೊಮ್ಮಯ್ಯ
ನಿನ್ನ ಆದ್ದೇವುಗಳು ಇಲ್ಲಾದವೆ ನೋಡು
ನನ್ನ ಆದ್ದೇವುಗಳು ಅಲ್ಲೈದಾವೆ ನೋಡು
ಮೂರು ದಿನಕೆ ವಾದ ಪಂತ ಕಟ್ಟೇನಮ್ಮಾ ವೋ

ನಾನೇ ಬರುದಿದ್ದಾರೆ ನಿನ್ನಿಗೇನ ನಡಿಯಂದ
ನೀನೆ ಬರದಿದ್ದರೆ ನನ್ನಿಗೇನ ನಡಿಯಂದ
ಮೂರ ದಿನಕೆ ವಾದ ಪಂತ ಕಟ್ಟಿಕಂಡ ಎತ್ತಯ್ಯ
ಎತ್ತಾವೆ ವಡಕಂಡೆ ಬರತಾನಣ್ಣಾ ವೋ

ಅಲೆ ಮುಂದ ಮುಂದೇ ಬಂದವನೆ
ಸೊಂಡಲೂರು ಬೊಮ್ಮಯ್ಯ
ಬರಗಿನ ಮುಳ್ಳು ನೋಡು
ಎದುರೊಂದು ಮಾಡೀಕಂಡು
ಗಂಜೀ ಅಚ್ಯುಡುವೇನೆ ವದ್ದುಕಂಡು ಬೊಮ್ಮಯ್ಯ
ಸೀಗೆ ಪದಿಯಾಗೇನೆ ಕುಂತಕಂಡು ಬೊಮ್ಮಯ್ಯ
ಎಳಗರು ಅರಿಚಿದ್ಹಂಗೆ ಅರಿಚಿದುನಣ್ಣಾ ವೋ

ಸೀಗೇನೆ ಪೊದಿಯಾಗೆ
ಕುಂತಕಂಡೇ ಬೊಮ್ಮಯ್ಯ
ಎಳಗರು ಅರಿಸಿದ್ಹಂಗೆ
ಅರಿಸುದುನಣ್ಣಾ ವೋ

ಮುಗೀಮಣಕಾ ಈದೈತೆ
ಮುದಿಯಾವು ಈದೈತೆ
ಕರುವೇಳಾಲಿಲ್ಲೆಂದ
ಮತ್ತೇನೆ ಎತ್ತಯ್ಯ
ಸೀಗೆ ಪೊದಿಯಾಕೇನೆ
ಬಗ್ಗೀನೆ ನೋಡಿದುರು
ಆಲುಗಳ್ಳ ಕುಪ್ಪೇನೆ
ಬೀಳ್ಹಂಗೆ ವಡುದವನೆ
ಸೊಂಡಲೂರು ಬೊಮ್ಮಯ್ಯ
ಓಡ್ಹೋದಾ ಬೊಮ್ಮಯ್ಯ ಓಡ್ಹೋದಾ ವೋ

ಇವನು ಹುರಿಗಣ್ಣು ಬಿಟ್ಟಾರೆ
ಉರುದು ಹೋಗುತಿದ್‌ದವನು
ಕಿಡಿಗಣ್ಣು ಬಿಟ್ಟಾರೆ
ಸಿಡಿದು ಬೀಳೂತಿದ್ದವುನು
ಎಷ್ಟು ಎಷ್ಟು ನೆಮ್ಮಿದುರೆ
ಬ್ಯಾಡರನ್ನ ನೆಮ್ಮುಬಾರ್ದು
ಬೇವಿನ ಕಾಯೋಟಿಸುವೆ
ಬಿಡಲಿಲ್ಲ ಅಂದವನೆ
ಓಡ್ಹೋದನ ಮೇಲೆ ಕೈಯಿ ನಾನು ಹೆಂಗೆ ಬಿಡುಲಂದಾ ವೋ

ಆಲುಗಳ್ಳೆ ತಕ್ಕಂಡ ಡಕ್ಕಿಗೆ ತುಂಬೀಕಂಡ
ಪಟ್ಟೆದಟ್ಟಿ ಬಿಗುದೆ ಕಟ್ಟಿದುನಣ್ಣಾ ಎತ್ತಯ್ಯ
ಎತ್ತಾವೆ ವಡಕಂಡೆ ಬರುತಾನಣ್ಣಾ ವೋ

ಹಾಲೀನಂಥಾ ಮಕುವೆ ನೀರಾಗಿ ಬರುತಾನೆ
ಹೂವ್ವೀನಂತಾ ಮಕುವೆ ಬಾಡಿ ಬತ್ತಿ ಬರುತಾನೆ
ಯಾಕೋ ನಮ್ಮ ಭಾವಯ್ಯ ಸಪ್ಪುಗು ಬರುತಾನಂದು
ಶಿಂತೆ ಮಾಡುತಾನೋ ಮಲ್ಲಯ್ಯ ವೋ

ಹಾಲೀನಂಥಾ ಮಕುವೆ ನೀರಾಗಿ ಬಂದೀಯೆ
ಹೂವ್ವೀನಂಥಾ ಮಕುವೆ ಬಾಡಿಬತ್ತಿ ಬಂದೀಯೆ
ಯಾಕೋ ಬಾವಯ್ಯ ಸಪ್ಪಗೆ ಬರ್ತೀಯಂದಾ ವೋ

ಒಂದಗಲ್ಲು ಬಡುದಾರೆ ಆಲಂಬ ವಲಿಗಾನೆ
ಒಂದಗಲ್ಲು ಬಡುದಾರೆ ನೀರಂಬ ವಲಿಗಾನೆ
ಹಸುಮಗನ ಕೂಟೇನ್ಹೇಳಾಲಂದಾ ವೋ

ಹೇಳಬೇಕೋ ಭಾವಯ್ಯ ಅಂದವನೆ ಮಲ್ಲಯ್ಯ
ಸೂಂಡಲೂರು ಬೊಮ್ಮಯ್ಯ ಎತ್ತಾವು ತರಬಿದ್ದ

ನಿನ್ನಾ ಸೀಮೀಗೆನೆ ನೀನೊಬ್ಬ ಶರಣಯ್ಯ
ನನ್ನಾ ಸೀಮೀಗೇನು ನಾನು ಒಬ್ಬ ಶರಣಯ್ಯ
ನನ್ನಾ ಸೀಮೀಗೇನೆ ನಿನ್ನಾವಾದುರು ಬರಬೋದು
ನಿನ್ನಾ ಸೀಮೀಗೇನೆ ನನ್ನಾವಾದುರು ಬರಬೋದು
ಇದಕ್ಕೆಲ್ಲೆ ಕರ್ತೋರು ಮತ್ತೇನೆ ಬೊಮ್ಮಯ್ಯ
ನಮ್ಮೆತ್ತಾವುಗಳು ಮತ್ತೇ ಕೈಬಿಡಂದಾ ವೋ

ಇಲ್ಲಿ ನಾನೇನು ಕಲತು ಮತ್ತೇನೆ ಎತ್ತಯ್ಯ
ಸಣ್ಣಾದೊಂದು ನ್ಯಾಯ ಮಾಡಬೇಕಂದಾ ವೋ

ನ್ಯಾಯಾ ಮಾಡಾಕೆ ಮತ್ತೇನೆ ಬೊಮ್ಮಯ್ಯ
ನಿನ್ನಾ ಆದ್ಯೇವುಗಳು ಇಲ್ಲೈದಾವೆ ನೋಡು
ನನ್ನ ಆದ್ದೇವುಗಳು ಅಲ್ಲೈದಾವೆ ನೋಡು
ಮೂರು ದಿನಕೇ ನೋಡು ವಾದ ಪಂಥ ಕಟ್ಟೇನು
ನಾನೇ ಬರದಿದ್ದಾರೆ ನನ್ನೀಗೆ ನಡಿಯಂದ
ನೀನೇ ಬರದಿದ್ದಾರೆ ನನ್ನಗೇನೀ ನಡಿಯಂದ
ವಾದ ಪಂಥ ಕಟ್ಟಿಕಂಡು ಎತ್ತಾವು ಬಿಡಿಸಿಕಂಡು
ಮುಂದ ಮುಂದೆ ಬಂದವನೆ ಸೊಂಡಲೂರು ಬೊಮ್ಮಯ್ಯ
ಗಂಜೀಯಚುಡುವೇನೆ ವದ್ದಕಂಡು ಬೊಮ್ಮಯ್ಯ
ಸೀಗೆ ಪದಿಯಾಗೇನೆ ಕುಂತಕಂಡು ಬೊಮ್ಮಯ್ಯ
ಎಳಿಗರುವರಿಸಿದ್ಹಂಗೆ ಅರಿಸಿದುನಣ್ಣ ವೋ

ಮೂಗು ಮಣುಕ ಈದೈತೆ ಮುದಿಯಾವು ಈದೈತೆ
ಕರುವೇಳಾಲಿಲ್ಲೆಂದು ಬಗ್ಗಿ ನಾನು ನೋಡಿದೆ
ಹಾಲುಗಳ್ಳೆ ಕುಪ್ಪೇನೆ ಬೀಳ್ಹಂಗೆ ಹೊಡದು
ಓಡ್ಹೋದ ಬೊಮ್ಮ ಓಡ್ಹೋದಾ ವೋ

ಎಳ್ಳುಕಾಳೋಟು ನೋಡು ಮುಳ್ಳೇನೆ ಮನಿಯೋಟೆ
ವರುವೇನೆ ಕೊಡುಬೇಕು ಮತ್ತೇನೆ ಭಾವಯ್ಯ
ಶಿನ್ನುದ ಸಿರಿವಗ್ಗಾನೆ ಕೊಟ್ಟಾರೆ ಭಾವಯ್ಯ
ತಣ್ಣನ್ನವು ಮೂರರಿಕೆ ಕೊಟ್ಟಾರೆಯೇ ನೋಡು
ಈಗ ತರತೀನವುನ ತಲಿಯಂದಾ ವೋ

ಎಳ್ಳಕಾಳೋಟು ನೋಡು ಮುಳ್ಳೇನೆ ಮನಿಯೋಟು
ವರುವೇನೆ ಕೊಡುತಾನೆ ಮತ್ತೇನೆ ಎತ್ತಯ್ಯ
ಶಿನ್ನುದ ಸಿರಿವಗ್ಗಾನೆ ಕೊಟ್ಟಾವನೆ ಎತ್ತಯ್ಯ
ತಣ್ಣನ್ನವು ಮೂರರಿಕೆ ಕೊಡುತಾನಣ್ಣಾ ವೋ

ಸೊಂಡಲೂರಿಗೆ ನೋಡು ಬಂದವನೆ ಮಲ್ಲಯ್ಯ
ಆಡೋ ಹಸುಮಗನಾದ ವಲಿಗಾನೆ ಮಲ್ಲಯ್ಯ
ನೀರುಬಣಸೋ ಬಾವಿತಾಗೆ ಕುಂತವನಣ್ಣಾ ವೋ

ಸೊಂಡಲೂರು ಬೊಮ್ಮಯ್ಯ
ಸತ್ತೇದಲ್ಲೆ ಶರಣು
ಉತ್ತಮುರೇನೆ ಮಗಾ
ಎತ್ತಯ್ಯನ್ನ ನಾನು
ನಟಟ್ಮುರುದು ಬಂದೀವಿನಿ
ಹಾಲು ತುಪ್ಪ ತರಿಸೀನಿ
ಬೆಳ್ಳೀ ಬಟ್ಟಲುದಾಗ
ಅರವತ್ತು ಕಂಡೂಗ
ಅಕ್ಕಿ ಬೇಸ್ಕೆದಾನೆ
ಊರುಸುತ್ತಾ ಕ್ವಾಟಿ ಕಟ್ಟಿಸೆವನಣ್ಣಾ ವೋ

ಊರುಸುತ್ತ ಕ್ವಾಟೇನೆ ಕಟ್ಟಿಸವನೆ ಬೊಮ್ಮಯ್ಯ
ಅರವತ್ತು ಕಂಡೂಗ ಅಕ್ಕಿ ಬೇಸ್ಕೆದಾನೆ
ಊರಿಗನ್ನ ಹಾಕಿಸಿ ಪುಣ್ಯೇವು ಪಡಿಬೇಕಂದು
ಆಗಾನೆ ಬೊಮ್ಮಯ್ಯ ಮಾಡವನಣ್ಣಾ ವೋ

ಹೊಸ ಮನುಷ್ಯರು ಬರುದ್ಹಂಗೆ ಮತ್ತೇನೆ ಬೊಮ್ಮಯ್ಯ
ಊರುಸುತ್ತ ಕ್ವಾಟೆ ಕಟ್ಟಿಸೆವುನಣ್ಣಾ ವೋ

ಆಡೋ ಹಸುಮಗುವಾದ ವಲಿಗಾನೆ ಮಲ್ಲಯ್ಯ
ನೀರು ಬಳಸೋ ಬಾವಿತಾಗೆ ಕುಂತಗಂಡೆ ಮಲ್ಲಯ್ಯ
ಕನ್ನೇ ಹೆಣ್ಣುಮಕ್ಕಾಳು ನೀರೀಗೆ ಹೋಗ್ಯವ್ರೆ
ಕಾರುಕಾರು ಅಂಬೂತ ಅಡಿವಿಗೆ ಬರುತಾನಣ್ಣಾ
ಎಲ್ಡುಕಣ್ಣು ಕಾಣಾದ ಕುಲ್ಡಮುಂಡೆಯೇ ನೋಡು
ಬುಡ್ಡೀನೆ ತಕ್ಕಂಡು ನೀರೀಗೆ ಬಂದಾರೆ
ಮಕ್ಕಳಿಲ್ಲ ಮರಿಯಿಲ್ಲ ಮತ್ತೇನೆ ಕುರುಡಮುಂಡೆ
ಈ ಹುಡುಗುರ ಎತ್ತಿಕಂಡ್ಹೋಗಿ ಸಾಕಂದ್ರೋ ವೋ

ಬಾರಪ್ಪ ನನ್ನ ಮಗನೆ ಅಂದಾರೆ ಕುಲ್ಡುಮುಂಡೆ
ಕಂಕುಳಕೆ ಮಲ್ಲಯ್ಯ ಬರುತಾನಣ್ಣಾ ವೋ

ನೆತ್ತಿಮ್ಯಾಲೇಯೆ ನೋಡು ಬುಡ್ಡೀನೆ ಹೊತ್ತುಕೊಂಡು
ಕಂಕುಳುದಾಗೆ ನೋಡು ಮಲ್ಲಯ್ಯನ ಎತ್ತಿಗಂಡು
ಸೊಂಡಲೂರು ಊರಾಕೆ ಬಂದವಳೇಯೇ ನೋಡು
ಯಾಕಜ್ಜಿ ನಿಮ್ಮೂರು ಹಿಂಗೈತಂದಾ ವೋ

ಸತ್ತೇದಲಿ ಶರಣಂತೆ ಉತ್ತುಮುರು ಮಗುನಂತೆ
ಎತ್ತುತುಪ್ಪದಾಗೆ ಹುಟ್ಟಿದ ಎತ್ತಯ್ಯನ್ನಾ ನೋಡು
ಸೊಂಡಲೂರು ಬೊಮ್ಮಯ್ಯ ನಟ್ಟಮುರುದು ಬಂದವನೆ
ಬೆಳ್ಳೀ ಬಟ್ಟುಲುದಾಗೆ ಹಾಲು ತುಪ್ಪವಯ್ಕಂಡು
ಇಸಬಾಯಿ ತೊಳಿತಾನಂತೆ ನನಕಂದ ವೋ

ಅರವತ್ತು ಕಂಡೂಗ ಅಕ್ಕೀ ಬೇಸೈದಾನೆ
ಊರೀಗನ್ನ ಹಾಕಿಸಿ ಪುಣ್ಣೆವು ಪಡಿತಾನಂತೆ
ಬಾರಜ್ಜಿ ನಾವು ನೋಡಾಕೆ ಹೋಗೋನಂದಾ ವೋ