ಹಂಡ ಕುಡಿಯೋರಿವ್ರು ಖಂಡ ತಿಂಬೋರಿವ್ರು
ಹೆಂಡಗುಡುಕರಿವ್ರು ತುರುಕಾರ | ನೆರಿಯಾಗ
ಹ್ಯಾಗಿದ್ದೆ ನನ್ನ ನಿಜಲಿಂಗ || ತಂದಾನ್ನ ತಾನ ||

ನಾಗಲ್ಹೂವ ಹಾಸಿದ್ದೆ ನಾಗಲ್ಹೂವ ಹೊದ್ದಿದ್ದೆ
ನಾಗಾಳ ಸಾಂಬ್ರಾಣಿ ಸುಡಸಿದ್ದೆ | ಹೊನ್ನಬಂಡಿ
ವಾವುರಿಗ್ಯಾಗಿದ್ದೆ ವಸದೀಯ || ತಂದಾನ್ನ ತಾನ ||

ಒಕ್ಕೂಳ್ಹೂವ ಹಾಸಿದ್ದೆ ಒಕ್ಕೂಳ್ಹೂವ ಹೊದ್ದಿದ್ದೆ
ಒಕ್ಕೂಳ ಸಾಂಬ್ರಾಣಿ ಸುಡಸಿದ್ದೆ | ಹೊನ್ನಬಂಡಿ
ಉಪ್ಪರಿಗ್ಯಾಗಿದ್ದೆ ವಸದೀಯ || ತಂದಾನ್ನ ತಾನ ||

ಗಂಜೀಯ ಸೀರೆಯೋಳೆ ಗಂಧದ ಬಟ್ಟಿನೊಳೆ
ಕಂದ ರಾಮಾನ ಹಡದೋಳೆ | ಮಾರಕ್ಕ
ಚಂದ್ರ ನಿಮಗೆಲ್ಲಿ ಮುಣುಗ್ಯಾವೆ | ಮಲ್ಲಾಸಂದ್ರ
ಗುಂಪು ತುಗ್ಗೂಲೀ ವನಗುಳಿಗೆ || ತಂದಾನ್ನ ತಾನ ||

ಬಂಡಿಯ ಹೊಡಕೊಂಡು ಬಂಢಾರ ಹಿಡಕೊಂಡು
ಬಂದಾ ದುರುತರುನ ವಡುಗೊಂಡು | ಗೌರಸಂದ್ರ
ಸತ್ಯವ್ವ ದುರ್ಗ ಹೋಗುತಾಳೆ || ತಂದಾನ್ನ ತಾನ ||

ಗಾಲೀಯ ಹೊಡಕೊಂಡು ಬೇವು ಕೈಲ್ಹಿಡಿಕೊಂಡು
ವಾರೀಲಿ ದುರುತರುನ ವಡುಗೊಂಡು | ಗೌರಸಂದ್ರ
ತಾಯ್ಯವ್ವ ದುರ್ಗ ಹೋಗುತಾಳೆ || ತಂದಾನ್ನ ತಾನ ||

ಹತ್ತು ಸಾವಿರ ಬಾಣ ಬೊಕ್ಕಸದಾಗಿಟ್ಟುಕೊಂಡು
ಜೊತ್ತಿಲಿ ದುರುತರೆನ್ನ ಕರಕೊಂಡು | ಮಾರಕ್ಕ
ಸತ್ತ್ಯವ್ಯ ದುರುಗಕ್ಕ ಹೋಗುತಾಳೆ || ತಂದಾನ್ನ ತಾನ ||

ಆರು ಸಾವಿರ ಬಾಣ ಜೇಬಿನಾಗಿಟ್ಟುಕೊಂಡು
ಜೋಡಿಲಿ ದುರುತರೆನ್ನ ಕರಕೊಂಡು | ಮಾರಕ್ಕ
ತಾಯವ್ವ ದುರುಗಕ್ಕ ಹೋಗುತಾಳೆ || ತಂದಾನ್ನ ತಾನ ||

ಬಟ್ಟೀಗೆ ಕಂಚಿನುಂಗುರ ರಟ್ಟಿಗೊಂದ್ಹಿತ್ತಾಳೆ
ಮತ್ತೇ ಗುಲಗುಂಜಿ ಮಣಿಶಂಕು | ಕುರುಬಿಣಿದಾರ
ತಾಯವ್ವ ದುರುಗಕ್ಕ ಹೋಗುತಾಳೆ || ತಂದಾನ್ನ ತಾನ ||

ಕಾಲೀಗೆ ಕಂಚಿನುಂಗುರ ಬೆರಳಿಗೊಂದ್ಹಿತ್ತಾಳೆ
ಮ್ಯಾಲೆ ಗುಲಗುಂಜಿ ಮಣಿಶಂಕು | ಕುರುಬಿಣಿದಾರ
ಸುತ್ತವ್ಯ ದುರುಗ ಹೋಗುತಾಳೆ || ತಂದಾನ್ನ ತಾನ ||

ಬೆಳ್ಳಿಯ ಕೋಡಣಸು ಬಂಗಾರದ ಹುರಿಗೆಜ್ಜೆ
ಮೂಲೆ ಮೂಲೆಗೆ ಗಾಡಿ ತಿರುವ್ಯಾಳೆ || ತಂದಾನ್ನ ತಾನ ||

ಅಚ್ಚು ಹಾಕಿದ ಬಂಡಿ ಇಪ್ಪತ್ತು ಸಾವಿರ ಬಂದ
ಸೊಪ್ಪಿನ ಪ್ಯಾಟ್ಯಾಗ ನಿಲ್ಲುತಾವೆ | ಸುಡುಗಾಡಿಗೆ
ಕುಟ್ಟಿಸುತ್ತಾಳೆ ಹೆಣಗಾಳು || ತಂದಾನ್ನ ತಾನ ||

ಹಾರೆ ಹಾಕಿದ ಬಂಡಿ ಆರವತ್ತು ಸಾವಿರ ಬಂದು
ರಾಗಿ ಫ್ಯಾಟ್ಯಾಗ ನಿಲುತಾವೆ | ಸುಡುಗಾಡಿಗೆ
ಏರಿಸುತ್ತಾಳೆ ಹೆಣಗಾಳು || ತಂದಾನ್ನ ತಾನ ||

ಆ ಕೇರಿ ಹೊಕ್ಕಾರೆ ಈ ಕೇರಿ ಹಾಳಾದಾವೆ
ಮ್ಯಾಲೊಂದು ಕೇರಿ ಹೋಗುತಾಳೆ | ಸುಡುಗಾಡಿಗೆ
ಏರಿಸುತ್ತಾಳೆ ಹೆಣಗಾಳು || ತಂದಾನ್ನ ತಾನ ||

ಇಕ್ಕಿದ ಅಗಣೆ ಇಕ್ಕಿದ್ಹಂಗೆ ಇರುತಾವೆ
ಆಕ್ಕೊಂದುತಾವ್ ಹೋಗುತಾಳೆ | ಸುಡುಗಾಡಿಗೆ
ಇಕ್ಕಿಸುತಾಳೆ ಹೆಣಗಾಳು || ತಂದಾನ್ನ ತಾನ ||

ಹಾಕಿದ ಅಗಣೆ ಹಾಕಿದ್ದಂಗೆ ಇರುತಾವೆ
ಆಕೊಂದುತಾವ್‌ವು ಹೋಗುತಾಳೆ | ಸುಡುಗಾಡಿಗೆ
ಹಾಕಿಸುತಾಳೆ ಹೆಣಗಾಳು || ತಂದಾನ್ನ ತಾನ ||

ಚಿಕ್ಕಸಂತರಕಲ್ಲು ಗಚ್ಚೀನರುಮನ್ಯಾಗ
ಶೆಟ್ಟಿ ಶೆಟ್ಟ್ಯೋರೆ ತಲಿದೂಗಿ | ಮಾತನಾಡುವಾಗ
ಮುತ್ತೀನೊಟಾಗಿ ಉದರ್ಯಾವೆ || ತಂದಾನ್ನ ತಾನ ||

ರಾಯ ಸಿಂತರಕಲ್ಲು ಗಾರೆ ಅರಮನ್ಯಾಗ
ರಾಯ ರಾಯೋರು ತಲಿದೂಗಿ | ಮಾತನಾಡುವಾಗ
ಹೂವ್ವಿನೊಟಾಗಿ ಉದರ್ಯಾವೆ || ತಂದಾನ್ನ ತಾನ ||

ಅಕ್ಕ ಮಾರಮ್ಮ ಗಕ್ನ ಕೊರವಂಜ್ಯಾಗಿ
ನೆಟ್ಟ ಬೀದ್ಯಾಗ ಬರುತಾಳೆ | ಕೊರವಂಜಿಯ
ಶೆಟ್ಟೇರು ಕೈ ಬೀಸಿ ಕರುದಾರೆ || ತಂದಾನ್ನ ತಾನ ||

ತಾಯ ಮಾರಕ್ಕ ಭ್ಯಾಗ್ನೆ ಕೊರಮುತ್ಯಾಗಿ
ಇನ್ನ ಬೀದ್ಯಾಗ ಬರುತಾಳೆ | ಮಾರಕ್ಕನ
ಮಾನ್ಯರು ಕೈಬೀಸಿ ಕರುದಾರ || ತಂದಾನ್ನ ತಾನ ||

ಎತ್ತಲ ಸೀಮೆಯಮ್ಮ ಎತ್ತಲ ರಾಜ್ಯವಮ್ಮ
ಎತ್ತಲ ರಾಜ್ಯದ ಕೊರಮೂತಿ | ಕೊರಮಾರಜ್ಜಿ
ನಮ್ಮ ಕಷ್ಟಕ ವದಗಿದ್ದಿ || ತಂದಾನ್ನ ತಾನ ||

ಇತ್ತಲ ದೇಶವಲ್ಲ ಇತ್ತಲ ರಾಜ್ಯವಲ್ಲ
ಗುತ್ತಿ ಮಲೆನಾಡ ಮಲೆಸೀಮೆ | ನಮದಯ್ಯ
ಚಿತ್ತವ್ಹರದಿತ್ತು ತಿರುಗಿದ್ದೆ || ತಂದಾನ್ನ ತಾನ ||

ಯಾವ ಸೀಮೆಯಮ್ಮ ಯಾವ ರಾಜ್ಯವಮ್ಮ
ಯಾವ ಸೀಮೆಯ ಕೊರಮೂತಿ | ಕೊರಮಾರಜ್ಜಿ
ನಮ್ಮ ಕಷ್ಟಕ ವದಗಿದ್ದಿ || ತಂದಾನ್ನ ತಾನ ||

ಈವಾನೇ ಸೀಮೆಯಲ್ಲ ಈವಾನೇ ರಾಜ್ಯವಲ್ಲ
ಗ್ವಾವೆ ಮಲೆನಾಡ ಮಲೆಸೀಮೆ | ನಮದಯ್ಯ
ಗ್ಯಾನವರ್ದಿತ್ತು ತಿರುಗಿದ್ದೆ || ತಂದಾನ್ನ ತಾನ ||

ಕಣಿಯ ಕೇಳ್ಯಾರೆ ಕಣಿಯ
ರಾಯಸಿಂತರಕಲ್ಲು ದೊರಿಗಳಾರ ಪ್ಯಾಟ್ಯಾಗ
ದೇವಿ ಹೇಳ್ಯಾಳೆ ಕಣಿಯಾ || ದನಿ ||

ಎತ್ಲಿಂದ ಬಂದ್ಯಮ್ಮ ಮುತ್ತೀನ ಮುಡಿಯಮ್ಮ
ಮುತ್ತೀನ ಕೊರವಂಜಿ ಬಲಗೈಲಿ | ಹಿಡಕಂಡು
ಹಟ್ಟ್ಯಾಗ್ಹೇಳಮ್ಮ ಕಣಿಗಳು || ಕಣಿಯ ||

ಎಲ್ಲಿಂದ ಬಂದ್ಯಮ್ಮ ಮಲ್ಲೀಗೆ ಮುಡಿಯಮ್ಮ
ಬೆಳ್ಳಿಯ ಕೊರವಂಜಿ ಬಲಗೈಲಿ | ಹಿಡುಕಂಡು
ಓಣ್ಯಾಗ್ಹೇಳಮ್ಮ ಕಣಿಗಳು || ಕಣಿಯ ||

ಆ ಕೈಲಿ ಪನ್ನೀರು ಈ ಕೈಲಿ ಗೋವಿನ ಸಗಣಿ
ನಾಲಕ್ಕೆ ಮೂಲೆ ಚದುರಂಗ | ಮೂಲೀಗೆ
ಮಾನಮುತ್ತುಗಳು ನಿಧೀವಯ್ಯಿ || ಕಣಿಯ ||

ಅಂಗೈಲಿ ಪನ್ನೀರು ಮುಂಗೈಲಿ ಗೋವಿನ ಸಗಣಿ
ಎಂಬತ್ತೆ ಮೂಲೆ ಚದುರಂಗ | ಮೂಲೀಗೆ
ದುಂಡೊಮುತ್ತುಗಳು ನಿಧೀವಯ್ಯಿ || ಕಣಿಯ ||

ಬಾಕುನೆ ಕಿತ್ತ್ಯಾಳೆ ಬಾಲಾನೆ ಮಾಡ್ಯಾಳೆ
ಸಾಲ್ಯದ ಸೀರೆ ಯದಿಗಿಟ್ಟಿ | ಗೌರುಸಂದ್ರ
ದೇವಿ ಕುಂತವಳೆ ಕಣಿಹೇಳಾ || ಕಣಿಯ ||

ಕತ್ತೀನೆ ಕಿತ್ತ್ಯಾಳೆ ಪುತ್ರಾನೆ ಮಾಡ್ಯಾಳೆ
ಪಟ್ಟೇದ ಸೀರೆ ಯದಿಗಟ್ಟಿ | ಗೌರುಸಂದ್ರ
ಸತ್ತ್ಯ ಕುಂತವಳೆ ಕಣಿಹೇಳಾ || ಕಣಿಯ ||

ಆಕುರುಸೊ ಮಗನೀಗೆ ಊಕುರುಸಿ ಮೊಲಿಯಾಕೊಟ್ಟು
ಕ್ಯಾಸೂರಿ ಕೆದರಿ ಬ್ಯಾರಳೂಡಿ | ಮಡಿಗಾಲೊಯ್ದು
ಕಾಂತೆ ಕುಂತವಳೆ ಕಣಿಹೇಳಾ || ಕಣಿಯ ||

ಅಂಬುಲುಸೊ ಮಗನೀಗೆ ನಂಬೂಸಿ ಮೊಲಿಯಾಕೊಟ್ಟು
ಕೆಂದೂರಿ ಕೆದರಿ ಬ್ಯಾರಳೂಡಿ | ಮಡಿಗಾಲೊಯ್ದು
ರಂಭೆ ಕುಂತವಳೆ ಕಣಿಹೇಳಾ || ಕಣಿಯ ||

ದೊಡ್ಡ ದೊಡ್ಡ ಮುತ್ತು ದೊಡ್ಡಮರಕ್ಹೊಯಕಂಡು
ವಜ್ರುದಾ ನೆರಿಗೆ ವದರುತಾ | ಗೌರಸಂದ್ರ
ಭದ್ರೆ ಕುಂತವಳೆ ಕಣಿಹೇಳಾ || ಕಣಿಯ ||

ಸಣ್ಣಾ ಸಣ್ಣಾ ಮುತ್ತು ಸಣ್ಣಾಮರಕ್ಹೊಯಕಂಡು
ಬಿನ್ನಾರಿ ನೆರಿಗೆ ವದರುತಾ | ಗೌರುಸಂದ್ರ
ಕನ್ನೆ ಕುಂತವಳೆ ಕಣಿಹೇಳಾ || ಕಣಿಯ ||

ಕೆಂಪು ಕಣ್ಣಿನ ಕಾಯಿ ಕೆಂಬೊತ್ತೆ ನಿದಿವಯ್ಯ
ಯಂಬತ್ತು ಮಂದಿ ಹಿರಿಯಾರುನು | ಕರ್ಸಿದ್ರೆ
ಬಂದ್ಹಂತ ನುಡಿಯ ನುಡದೇನು || ಕಣಿಯ ||

ಕರಿಯ ಕಣ್ಣಿನ ಕಾಯಿ ಕಡಲೀನ ನಿದಿವಯ್ಯ
ನಲವತ್ತು ಮಂದಿ ಹಿರಿಯಾರುನು | ಕರ್ಸಿದ್ರೆ
ಧರುಮಾದ ನುಡಿಯ ನುಡದೇನು || ಕಣಿಯ ||

ಆಕಾಶವೇಣಿ ಬಾರೆ ಭೂಮಿತಾಯಿ ಬಾರೆ
ಯೋಗಿ ಬಾ ನನ್ನ ಘನಗುರುವಂದು | ಮಾರಕ್ಕ
ಮಣಿಗಳ್ಹಾಕ್ಯಾಳ ಹಿಡಿತುಂಬಾ || ಕಣಿಯ ||

ಮುಕ್ಕುವಣ್ಣಾ ಬಾರೊ ಮೂರುಕಣ್ಣಯ್ಯ ಬಾರೊ
ಮಾಲಿಂಗ ಬಾ ನನ್ನ ಸಪನಾಕ | ಮಾರಕ್ಕ
ಕವಡೆ ಹಾಕ್ಯಾಳ ಹಿಡಿತುಂಬಾ || ಕಣಿಯ ||

ತಪ್ಪಂದು ತಪ್ಪಂದು ತಪ್ಪಂದು ಅಡ್ಡಬೀಳು
ಇಪ್ಪತ್ತೇ ಹೊನ್ನು ಮುಡುಪೆ ಕಟ್ಟು | ಭರಮಪ್ಪ ತನ್ನ
ಮುತ್ತೀನ ಕೊರವಂಜಿಗೆ ಅಳವುಳಸು || ಕಣಿಯ ||

ಹರನ್ನೆನ್ನ ಹರನ್ನೆನ್ನ ಹರನೆಂದು ಅಡ್ಡಬೀಳು
ನಲವತ್ತೇ ಹೊನ್ನು ಮುಡುಪೆ ಕಟ್ಟು | ಭರಮಪ್ಪ ತನ್ನ
ಹವಳದ ಕೊರವಂಜಿಗೆ ಅಳವುಳಸು || ಕಣಿಯ ||

ಮುತ್ತಿನ್ಹಂತ ದೇವರುನ ಮುಟ್ಟುದಲ್ಲ ಭರಮಪ್ಪ
ಪಟ್ಟದ್ಹೆಂಡತಿಗೆ ಉಳಿವಿಲ್ಲ | ಈ ದೇವುರುನ
ಬಿಟ್ಟು ಬನ್ನಿರಿ ಅವರ ಹಿರಿಯರಿಗೆ || ಕಣಿಯ ||

ಕೆಂಡದ್ಹಂತ ದೇವರುನ ತಂದೆಲ್ಲ ಭರಮಪ್ಪ
ಹೆಂಡರು ಮಕ್ಕುಳಿಗೆ ಉಳಿವಿಲ್ಲ | ಈ ದೇವುರುನ
ತೋರಿ ಬನ್ನಿರಿ ಅವರ ಹಿರಿಯರಿಗೆ || ಕಣಿಯ ||

ಹಟ್ಟೀಯ ಗೊಲ್ಲಾಗ ಸತ್ಯವಿನ್ನೆಲ್ಲೇದೆಂದೆ
ಮುಟ್ಟಿ ತೆಗಿಯಿಂದ ಕಣುಸಾವ | ಭರಮಪ್ಪ ತನ್ನ
ಮಕ್ಕುಳು ಸಾಯೋದು ತಿಳಿಲಿಲ್ಲ || ಕಣಿಯ ||

10_85_KK-KUH

ಹಟ್ಟೀಯ ಗೊಲ್ಲಾನ ಸತ್ಯವು ನೋಡೇನಮ್ಮ
ಮಕ್ಕಾಳ ಪ್ರಾಣ ಉಳಿಸಿದ್ರೆ || ಕಣಿಯ ||

ಹಟ್ಟೀಯ ಗೊಲ್ಲಾನ ಸತ್ಯವು ನೋಡಲು ಬ್ಯಾಡ
ಮಕ್ಕಳ ಪ್ರಾಣ ಉಳಿಯುವುದಿಲ್ಲಾ || ಕಣಿಯ ||

ಅಡವೀಯ ಗೊಲ್ಲಾನ ದುಡುಗಾಳು ನೋಡೇನಮ್ಮ
ಮಡದೀಯ ಪ್ರಾಣ ಉಳಿಸಿದ್ರೆ || ಕಣಿಯ ||

ಅಡವಿಯ ಗೊಲ್ಲಾನ ದುಡುಗಾಳು ನೋಡಲು ಬ್ಯಾಡ
ಮಡದಿಯ ಪ್ರಾಣ ಉಳಿಯುವುದಿಲ್ಲಾ || ಕಣಿಯ ||

ಜಡಿಯ ಮಾನ್ಯವರು ಕಣೆ
ಜಡಿಯ ಮಾನ್ಯವರೆಂದು ತಿರುಗಿ ನೋಡಿದರೆ ತರಿಯದ ಕೆಂಡ ಕಣೆ || ದನಿ ||

ಚಿಕ್ಕಸಿಂತರಕಲ್ಲು ಗಚ್ಚಿನ ಅರಮನ್ಯಾಗ
ಶೆಟ್ಟಿ ಶೆಟ್ಟೋರು ತೆಲಿದೂಗಿ | ಮಾತ್ನಾಡುವಾಗ
ಮುತ್ತೀನೊಟಾಗಿ ಉದುರ್ಯಾವೆ | ಈ ದೇವುರನ
ಕೊಟ್ಟು ಬನ್ನಿರವರ ಹಿರಿಯರಿಗೆ || ಜಡಿಯ ||

ಕೊಟ್ಟೂನೆ ಬಂದಾರೆ ಮತ್ತೇ ಹೋಗೋನಲ್ಲ
ಪಟ್ಟೇದಾನೆಲ್ಲ ಕುದುರೆಲ್ಲ | ಸಿಂತರಕಲ್ಲು
ಸುಟ್ಟ್ಹೋಗುದೆ ದುರುಗ ಇಳಿಯಲ್ಲ || ಜಡಿಯ ||

ರಾಯ ಸಂತರಕಲ್ಲು ಗಾರೆ ಚಾವುಡ್ಯಾಗ
ರಾಯ ರಾಯರು ತೆಲಿದೂಗಿ | ಮಾತ್ನಾಡುವಾಗ
ಹೂವ್ವಿನೊಟಾಗಿ ಉದುರ್ಯಾವೆ | ಈ ದೇವುರನ
ತೋರಿಬನ್ನಿರವರ ಹಿರಿಯರಿಗೆ || ಜಡಿಯ ||

ತೋರಿನೆ ಬಂದಾರೆ ನಾನು ಹೋಗೋನಲ್ಲ
ಲಾಯದಾನೆಲ್ಲ ಕುದುರೆಲ್ಲ | ಸಿಂತರಕಲ್ಲು
ಹಾಳುಮಾಡದೆ ದುರುಗ ಇಳಿಯಲ್ಲ || ಜಡಿಯ ||

ಆಯಾನೆ ಈಯಾನೆ ಕಾಲೆ ಪೆಂಡೇದಾನೆ
ಮಾಳೀಗೆಗಿರುವ ಯರೀಯಾನೆ | ಕೊಲ್ಲುದಲೆ
ಮಾಲಿಂಗ ದುರುಗ ಇಳಿಯನಂದ || ಜಡಿಯ||

ಪಟ್ಟಾದ ಕುದುರಿಗೆ ಕಟ್ಟುಗಳು ತರಿಸ್ಯಾನೆ
ಅಪ್ಪ ದೋಡ್ಡೆವ್ನು ಜಡಿಯವ್ನು | ಸಿಂತರಕಲ್ಲು
ಸುಟ್ಟಾನೆ ದುರುಗ ಗಳಿಗ್ಯಾಗ || ಜಡಿಯ ||

ಲಾಯಾದ ಆನಿಗಳಿಗೆ ಬ್ಯಾನಿಗಳು ತರಿಸ್ಯಾನೆ
ಸ್ವಾಮಿ ದೊಡ್ಡೊವ್ನು ಜಡಿಯವ್ನು | ಸಿಂತರಕಲ್ಲು
ಹಾಳು ಮಾಡಿದ ದುರುಗ ಗಳಿಗ್ಯಾಗ || ಜಡಿಯ ||

ಇಪ್ಪೇಯ ಹೂವಿಲಿ ಕೊತ್ತುಲವ ಕಟ್ಟಿಸಿದ
ಅಪ್ಪ ದೊಡ್ಡವ್ನು ಜಡಿಯವ್ನು | ಸಿಂತರಕಲ್ಲು
ಸುಟ್ಟಾನೆ ಕಾಲ ಗಳಿಗ್ಯಾಗ || ಜಡಿಯ ||

ದಾಗೂಡಿ ಬಳ್ಳಿಲಿ ಹೂಡೇವು ಕಟ್ಟಸಿದ
ಸ್ವಾಮಿ ದೊಡ್ಡವ್ನು ಜಡಿಯವ್ನು | ಸಿಂತರಕಲ್ಲು
ಹಾಳು ಮಾಡಿದ ಕಾಲ ಗಳಿಗ್ಯಾಗ || ಜಡಿಯ ||

ಹತ್ತು ಸಾವಿರ ಮುತ್ತು ಕೊಳ್ಳಯ್ಯ ಗೊಲ್ಲಗೌಡ
ಗಚ್ಚೀನ ಬಾಗಲ ಇಳಿರಪ್ಪ | ನೀವು ನಿಮ್ಮ
ದೇವುರು ಕರಕಂಡು ನಡಿರಪ್ಪ || ಜಡಿಯ ||

ಆರು ಸಾವಿರ ಮುತ್ತು ಕೊಳ್ಳಯ್ಯ ಗೊಲ್ಲಗೌಡ
ಗಾಜೀನ ಬಾಗಿಲು ಇಳಿರಯ್ಯ | ನೀವು ನಿಮ್ಮ
ಸ್ವಾಮೀನ ಕರಕಂಡು ನಡಿರಯ್ಯ || ಜಡಿಯ ||

ಹೆಚ್ಚಳವ ಅವನಿಗ್ಯಾಕ ಹಟ್ಟೀಯ ಗೊಲ್ಲಗ
ಹತ್ಹಿಂಡಿನಾಗ ಸವುಲವ | ಹಕಿಸಿಕ್ಯಂಬ
ಹೆಚ್ಚಳ ನನ್ನಯ್ಯಗೆ ತರನಲ್ಲ || ಜಡಿಯ ||

ಉಡುಗೋರೆ ಅವನಿಗ್ಯಾಕ ಅಡವೀಯ ಗೊಲ್ಲಗ
ನಡುವ್ಹಂಡಿನಾಗ ಸವುಲವ | ಹಾಕಿಸಿಕ್ಯಂಬ
ಉಡುಗೋರೆ ನನ್ನಯ್ಯಗೆ ತರನಲ್ಲ || ಜಡಿಯ ||

ಹೊಕ್ಕುಳ ಕಂಡದಾಗ ಇಕ್ಕುಳ ಧೂಪವನ್ಹೊಯ್ದು
ಮತ್ತಿಳಿ ನಿಂಗಣ್ಣ ದುರುಗವ | ಭರಮಪ್ಪ
ಇಪ್ಪತ್ತು ಕಾಯಿ ಶರಣಂದ ||ಜಡಿಯ||

ನಾಗಾಳ ಕಂಡದಾಗ ಮೂಗುಳ ಧೂಪವನ್ಹೋಯ್ದು
ನೀನಿಳಿ ನಿಂಗಣ್ಣಾ ದುರುಗವ | ಭರಮಪ್ಪ
ನಾಲ್ವತ್ತು ಕಾಯಿ ಶರಣಂದ || ಜಡಿಯ ||

ಪಟ್ಟಪಟ್ಟಣಕ್ಕೆಲ್ಲ ಕುಟ್ಟ್ಯಾರೆ ಡಂಗೂರವ
ಮುತ್ತೀನ ಕೋಲು ತಳುವಾರ | ಭರಮನ ಮನಿಯ
ಮುತ್ತೀನಾರುತಿಯ ಬರಲಂದ || ಜಡಿಯ ||

ಹೂಡೆಹೂಡೆಕ್ಕೆಲ್ಲ ಕಲ್ಲು ಸಾರ್ಯಾರೆ ಡಂಗೂರವ
ಹೂವ್ವೀನ ಕೋಲು ತಳುವಾರ | ಭರಮುನ ಮನಿಯ
ಹೂವ್ವೀನಾರುತಿಯ ಬರಲಂದ || ಜಡಿಯ ||

ಚಿಕ್ಕ ಸಿಂತರಕಲ್ಲು ಗಚ್ಚೀನ ಬಾಗಲಾಗ
ಅಪ್ಪ ನಿಂಗಣ್ಣಗೆ ಬರಿನಂದ | ಭರಮಪ್ಪ
ನಿಚ್ಚಣಿಗೆಯನ್ಹಾಕಿ ಇಳಿಸ್ಯಾನೆ || ಜಡಿಯ ||

ರಾಯ ಸಿಂತರಕಲ್ಲು ಗಾರೇಯ ಬಾಗಲಾಗ
ಸ್ವಾಮಿ ನಿಂಗಣ್ಣಗೆ ಬರಿನಂದ | ಭರಮಪ್ಪ
ಏಣೀಯನ್ಹಾಕಿ ಇಳಿಸ್ಯಾನೆ || ಜಡಿಯ ||

ಹತ್ತು ಪಂಜಿನ ಕೋಲು ಮುತ್ತೀನ ಕೈತಾಳ
ಮುಕ್ಕಣ್ಣ ದುರುಗ ಇಳಿವಾಗ | ಸಿಂತರಕಲ್ಲು
ಮಕ್ಕಳು ಕೈಯತ್ತಿ ಮುಗುದಾರೆ || ಜಡಿಯ ||

ಆರು ಪಂಜಿನ ಕೋಲು ಹೂವ್ವಿನ ಕೈತಾಳ
ರೇವಣ್ಣ ದರುಗ ಇಳಿವಾಗ | ಸಿಂತರಕಲ್ಲು
ಬಾಲಾರು ಕೈಯೆತ್ತಿ ಮುಗುದಾರೆ || ಜಡಿಯ ||

ದುರುಗಾವ ಇಳಿಯುತ್ತ ಗಡಿಬಿಡಿಯೆನ್ನುತ್ತ
ಕಡಗಾದ ಕಾಲು ತಿರುವುತ್ತ | ನಿಂಗಣ್ಣ
ನಡೆದಾನೆ ದೊರೆಗಳಿಗೆ ಎದುರಾಗಿ || ಜಡಿಯ ||

ಭಂಡೀಯ ಹೊಡಕೊಂಡು ಭಂಡಾರ ಹಿಡುಕೊಂಡು
ಬಂದ ದುರುತರೆನ್ನ ವಡಗೊಂಡು | ಗೌರಸಂದ್ರ
ಸತ್ತ್ಯವ್ವ ದುರುಗ ಇಳುದಾಳೆ || ಜಡಿಯ ||

ಗಾಲೀಯ ಹೊಡಕೊಂಡು ಬೇವು ಕೈಲ್ಹಿಡಕೊಂಡು
ವಾರಿಲಿ ದುರುತರೆನ್ನ ವಡಗೊಂಡು | ಗೌರಸಂದ್ರ
ತಾಯವ್ವ ದುರುಗ ಇಳದಾಳೆ || ಜಡಿಯ ||

ಗಿಡದ ಗಿಡದಗುಂಟ ಅಡಗದೀರ ಭರಮ
ಖಡಗಾದ ಕಾಲು ನಿಜಲಿಂಗ | ಬರುವಾಗ
ಗಿಡ ನಿಮ್ಮನ ಕವಲರಿಯಾವು || ಜಡಿಯ ||

ಗುಂಡು ಗುಂಡುಗುಂಟ ಅಂಜದಿರ ಭರಮ
ಪೆಂಡೇದೆ ಕಾಲು ನಿಜಲಿಂಗ | ಬರುವಾಗ
ಗುಂಡು ನಿಮ್ಮನ ಕಾವಲರಿಯವು || ಜಡಿಯ ||

ಹಿಂದಕ್ಕ ರದ್ದನಕೇರಿ ಮುಂದಕ್ಕೆ ಮುದ್ದನಕೇರಿ
ಚಂಡನಾಡುತ್ತ ಬರುವವರಿವರ‍್ಯಾರೆ | ಹೊನ್ನಂಡೆ
ನಿಂಗಣ್ಣ ಅಲ್ಲದೆ ಪರವರಲ್ಲ || ಜಡಿಯ ||

ಆಚೇಗೆ ರದ್ದನಕೇರಿ ಇಚೇಗೆ ಮದ್ದನಕೇರಿ
ಮಾತನಾಡುತ್ತ ಬರುವವರಿವರ‍್ಯಾರೆ | ಹೊನ್ನಬಂಡೆ
ಭೂಪರಲ್ಲದೆ ಪರವರಲ್ಲ || ಜಡಿಯ ||

ಅಂಟು ಮುಂಟಾಗೈದಿನಿ ಏಳುಕಳ್ಳೆ ಹೊರಗೈದಿನಿ
ನೀವು ಮಾವುಗಳು ಬರುಬೇಕು || ಜಡಿಯ ||

ಜಂಗಮ ಬಂದ ಕಣೆ
ಲಿಂಗಾಕೆ ತಕ್ಕಂತ ಜಂಭೂ ಧರಿಸಿಕಂಡು ನಿಂಗಣ್ಣ ಬಂದ ಕಣೆ ||ದನಿ||

ದೊಡ್ಡವ್ನು ಕಾಟಯ್ಯ ಸಣ್ಣವ್ನು ಚಿತ್ತಯ್ಯ
ಗಂಗಿ ತೀರಥಕ್ಕ ಬರಬೇಕು || ಜಂಗಮ ||

ಮುತ್ತೀನ ಶತ್ತುರಿಕಿ ಇಪ್ಪತ್ತು ಜಗ ಜಂಪು
ನೆತ್ತೀಯ ಮ್ಯಾಲೆ ಅರುಳ್ಹೋತ್ತಿ | ಶತ್ತುರಿಕಿ
ಅಪ್ಪ ನಿಂಗಣ್ಣಗೆ ಇಡಿಸ್ಯಾರೆ || ಜಂಗಮ ||