ಹಿಂದಕೊಬ್ಬಾರಿಲ್ಲ ಮುಂದಾಕೆ ಒಬ್ಬಾರಿಲ್ಲ
ಬಾಲುವಾನ ಯಾರೆ ಬಡುದಾರೆ
ಯಾರೇನೆ ಬಡುದಿಲ್ಲ ಯಾರೇ ಹೊಡುದಿಲ್ಲ
ಪೂಲಪುರಿಯಂದು ಜಿಗಿಟೀದೆ ನನ್ನ ತಂಗ್ಯಮ್ಮ
ಬಾಲಮ್ಮ ಕಾರೊಂದೆ ಅರೀಸ್ಯಾನೆ
ಕೊಜೆರುಗು ಉಟ್ಟಾಳೆ ಕೊಜೆರಗು ಮುಸುಗಿಟ್ಟಾಳೆ
ಹೆಚ್ಚಿಯಾದಾವೆಲ್ಲ ಯದಿಗವುಚಿ | ನೇ ಸುಬದ್ರ
ಕುಡುಗೋಲು ಬೇವು ಕೈಲ್ಹಿಡದು | ನೇ ಸುಭದ್ರ
ಕಾಡಿಬಿದ್ದೇನಂದು ಕಯಿಮುಗುದು
ಹಟ್ಟ್ಯಾಗಳು ಮಕ್ಕಾಳು ಇಚ್ಚೀಲಿ ಆಡುತಾರೆ
ಅಕ್ಕಯ್ಯ ನಿನಮಗ ದಳದೂಳಿ | ಆಡಿದು ಚೆಂಡು
ಪಟ್ಟಾನೆ ಸಾಲೆಲ್ಲ ಕುಣಿಬಿದ್ದು | ನನ್ನ ಅಕ್ಕಯ್ಯ
ಪುತ್ರಾನೆ ಕರಕಂಡು ಹೊರಡಮ್ಮ
ಓಣ್ಯಾಗಳು ಮಕ್ಕಾಲು ಸಾರಿಲೀ ಆಡುತಾರೆ
ಸ್ವಾದುರೂವೆ ನಿನಮಗ ದುಳದೂಳು | ಆಡಿದ ಚೆಂಡು
ಸಾಮಾನೆ ಸಾಲೆಲ್ಲ ಕುಣಿಬಿದ್ದು | ನನ್ನ ತಂಗ್ಯಮ್ಮ
ಬಾಲಾನ ಕರಕಂಡು ಹೊರಡಾಮ್ಮ
ಅಕ್ಕಿಗಿವುನೆ ಮೂಲ ನುಚ್ಚೂಈಗೇ ಇವುನೇ ಮೂಲ
ಉತ್ತುತ್ತಿ ಹಣ್ಣೀಗೆ ಇವನೇ ಮೂಲ | ಅಕ್ಕಯ್ಯ
ಪುತ್ತಾನ ಕರಕಂಡು ಹೊರುಡಾಮ್ಮ
ಬೆಲ್ಲಕ್ಕಿವುನೇ ಮೂಲ ಬ್ಯಾಳೀಗೆ ಇವುನೇ ಮೂಲ
ಬಾಳೀಯ ಹುಣ್ಣೀಗೆ ಇವುನೆ ಮೂಲ | ನನ್ನ ತಂಗ್ಯಮ್ಮ
ಬಾಲಾನ ಕರಕಂಡು ಹೊರಡಮ್ಮ
ಅಕ್ಕೀಯ ಮಾಡೇನು ತುಪ್ಪವಾನೇ ನಾನು ಕಾಸೇನು
ತೊತ್ತೀಯಾರು ಮಾಡೂವ ಕಲುಸಾವ | ನನು ಮಾಡೇನು
ನಾನೆಲ್ಲಿಗ್ಹೋಗಲು ಅರಿಯಾನೆ
ಅಕ್ಕಿಮಾಡೋರವರೆ ತುಪ್ಪಾನೇ ಕಾಸೋರವರೆ
ಮತ್ತೇ ನಾಲೋರವರೆ ಮಿಗಿರವರೆ | ನನ್ನ ಅಕ್ಕಯ್ಯ
ಪುತ್ರಾನ ಕರಕಂಡೆ ಹೊರಡಮ್ಮ
ಬಾನುಗಳು ಬಸುದೇನು ಹಾಲುಗಳುನೇ ಕಾಸೇನು
ದಾದಿಯಾರ ಮಾಡೂವ ಕೆಲುಸಾವ | ನಾನು ಮಾಡೇನು
ನಾನೆಲ್ಲಿಗ್ಹೋಗಾಲು ಅರಿಯಾನೆ
ಅಕ್ಕಿಮಾಡೋರವರೇ ತುಪ್ಪಾನೇ ಕಾಸೋರವರೆ
ಮತ್ತೇ ನಾಲೋರವರೆ ಮಿಗುಲವರೆ | ನನ್ನ ಅಕ್ಕಯ್ಯ
ಪುತ್ರಾನ ಕರಕಂಡೆ ಹೊರುಡಮ್ಮ
ಬಾನ ಬಸಿಯಾರವರೆ ಹಾಲಾನೇ ಕಾಸೋರವರೆ
ಮ್ಯಾಲೆನಾಲಾರವರೆ ಮಿಗುಗುಲವರೆ | ನನ್ನ ತಂಗ್ಯಮ್ಮ
ಬಾಲಾನ ಕರಕಂಡೆ ಹೊರುಡಮ್ಮ
ಹತ್ತುದಿನುದ ಕೂಸು ತೆಕ್ಕೀಗೆ ಆವುಸಿಕಂಡು
ಲಚ್ಚಿಯಾಣಪುರದಿಂದ ಹೊರುಟಾಳೆ
ಆರು ದಿನದ ಕೂಸೂ ತೋಳಿಗೆ ಆವುಸಿಕಂಡು
ನಾರಂದನ ಪುರುವೆ ಬಿಟ್ಟು ಹೊರುಟಾಳೆ
ವಕ್ಕಲುಗಿತ್ತೇರೆಲ್ಲ ವಕ್ಕಾನೆ ತಿಪ್ಪೇಯೇರಿ
ಅಕ್ಕಯ್ಯಾ ಬಂತೇನೇ ವನುವಾಸ | ನಾರೊಂದಾನ
ವಟ್ಟೆನಾಮದಿಂದೆ ಉರಿಯಾಲೆ
ವಾರೆಗಿತ್ತೇರೆಲ್ಲ ವಾರೀಲಿ ತಿಪ್ಪೇಯೇರಿ
ತಾಯಮ್ಮ ಬಂತೇನೆ ವನುವಾಸ | ನಾರೊಂದಾನ
ಮಾರಿನಿಂದು ಉರಿಯಲಿ
ಓದೂವ ಮಠದಾಗೆ ಹೋದೂವನೇ ಸುರಿದಾರ
ನಿಮ್ಮತ್ತೆ ಹೋಗುತಾಳೆ ವನುವಾಸ
ಓದುತ್ತಿದ್ದ ಹಲಿಗೆ ಗ್ವಾಡಿಗೇನೇ ನಿಂದುರಿಸಿ
ಸರಸ್ವತಿಗೆ ಕರುವ ಮುಗುದಾನೆ | ಸೂರಿದಾರ
ಬಂದಾನೆ ಅತ್ತ್ಯಮ್ಮನ ಬಳಿಗುಂಟ
ನಿಮ್ಮಪ್ಪ ಬಯ್ದನ್ಹೋಗ ನಿಮ್ಮಮ್ಮ ಬೈಯಾಲಿ
ನಿಮ್ಮಣ್ಣಾನೇ ಕಾಮಣ್ಣ ಬಡುದಾನ್ಹೋಗೋ
ನಮ್ಮಪ್ಪ ಬಯ್ಯಾಲಿ ನಮ್ಮಮ್ಮ ಬೈದಾಳ್ಹೋಗ
ನಮ್ಮಣ್ಣ ಕಾಮಣ್ಣ ಬಡಿಯಾಲಿ | ನನ್ನ ಅತ್ತ್ಯಮ್ಮ
ಸಣ್ಣಬಾವುನ ಬಿಟ್ಟು ಇರುಲಾರೆ
ಹಟ್ಟ್ಯಾಗ ನಾರಂದ ಜಟ್ಟೀನೇ ಸಾಧುಕರನೆಲ್ಲ
ಗೊಕ್ಕಾನೆ ನಾರಂದ ಕರಿಸ್ಯಾನೆ | ಅವರಿಗ್ಹೇಳ್ಯಾನೆ
ಅಕ್ಕಯ್ಯನ ಪ್ರಾಣ ಉಳವೀರಂದ | ನೇ ಪಾಂಡವರ
ಕಂದುವಾನ ತೆಲಿಯ ವಯಿರಂದ
ಓಣ್ಯಾಗೆ ನಾರಂದ ಜಾಣಾನೆ ಸಾದುಕರನೆಲ್ಲ
ಬೇಗಾನೆ ನಾರಂದ ಕರಿಸ್ಯಾನೆ | ಆವ್ರಿಗ್ಹೇಳ್ಯಾನೆ
ತಂಗಿಯಮ್ಮುನ ಪ್ರಾಣ ಉಳಿಸಿರಾಂದ | ನೇ ಪಾಂಡವರ
ಬಾಲುವಾನ ತೆಲಿಯ ವಯಿರಂದ
ಡಿಮಿಡಿಮಿ ರವಳಶಂಕಾ ಪಾಂಡವರ ಇಂದ್ರ ಮೊಮ್ಮಗನೆ ಬಂದ || ದನಿ ||
ಹೆತ್ತವಮ್ಮುನ ಸೀರೆ ಗಕ್ಕಾನೆ ಹರುದಾನೆ
ಕುಕ್ಕೂಸಿ ಪುಳ್ಳೆ ಮುರುದಾನೆ || ಡಿಮಿಡಿಮಿ
ಕುಕ್ಕೂಸಿ ಪುಳೆ ಮುರುದು ಅಂಬು ಮಾಡಿ
ಹೋಳಾಬೀಳಾ ಅವರ ಹೊಡೆದಾನೆ || ಡಿಮಿಡಿಮಿ ||
ಹೋಳಾ ಬೀಳಾಲವರ ಹೊಡದು ಅಣ್ಣಾಗಳಿರ
ಹೇಳಿಕಳ್ಳಿರಿ ನಿಮ್ಮ ವಡಿಯಾಗ || ಡಿಮಿಡಿಮಿ ||
ತಾಯಯಮ್ಮುನ ಸೀರೆ ಜಾಗುರುಸಿ ಹರುದಾನೆ
ಕಾಮೂಸಿ ಪುಳ್ಳೆ ಮುರುದಾನೆ || ಡಿಮಿಡಿಮಿ ||
ಕಾಮುಸಿ ಪುಳ್ಳೆ ಮುರುದು ಅಂಬು ಮಾಡಿ
ಹೋಳುಬೀಳಾಲವರ ಹೊಡುದಾನೆ || ಡಿಮಿಡಿಮಿ ||
ಹೋಳುಬೀಳಾಲವರ ಹೊಡದು ಅಣ್ಣಾಗಳಿರ
ಹೇಳಿಕಳ್ಳಿರಿ ನಿಮ್ಮ ವಡೀಯಾಗೆ || ಡಿಮಿಡಿಮಿ ||
ತಂಗಿಯಮ್ಮಾ ನೀನು ವಬ್ಬಾಳೆ ಹೋಗೊಳಂದು
ನಾನು ಬಂದೆ ನಿನ್ನಾ ಬಳಿಗುಂಟಾ
ಕೆಟ್ಟಾಗಾಲಾಳೆದ್ದಾವು ಕೇಡೇನೆ ಮಳಿ ಸುರುದಾವೋ
ಬಾಲುವಾತನತಾರೆ ನಮುಕೈಗೆ | ಅಂದು ನಾರಂದ
ಹಾಗೆಂಬುತಲಿ ಜಲದಾಕೆ ಬಿಡುತಾನೆ
ಮಾವ ಬಿದ್ದ ತಗ್ಗೀಗೆ ಅಳಿಯ ಬಿದ್ದಾನೆ ದಿಬ್ಬಕೆ
ಹೋಗುತಾನರಿಯಾನು ಹೊಳಿಗುಂಟಾ | ನನ್ನ ಕಂದಮ್ಮ
ಜುಟ್ಟಿಡುದು ಮ್ಯಾಲಾಕೆ ಯಳಕಳ್ಳಿ
ನನ್ನಿಗಾದಾರಣ್ಣ ನಿನಗೆ ಸೋದಾರಮಾವ
ಹೋಗುತಾನೆ ಹರಿಯಾ ಹೊಳಿಗುಂಟಾ | ನನ್ನ ಕಂದಮ್ಮ
ಜುಟ್ಟಿಡುದು ಮ್ಯಾಲಾಕ ಯಳಕಳ್ಳೆ | ನೇ ನಿಂದುರಿಸಿ
ಸೂಳಿಯನ್ನ ಮಗನೆ ಕೊಡು ಮಗಳ
ಒಂಟೆ ಹೋರುವಾ ಭಾರ ನೀನ್ಹೊತ್ತಾರೆ ಅಭಿಮಾನ್ಯ
ನೀನು ಎಂಟು ಹೆಜ್ಜೆ ನಡುದಾರ | ನೇ ಕೆಳಕ್ಹಾಕು
ನಾನು ನಿನಗೆ ಮಗುಳ ಕೊಡುತಿನಿ
ಪಾಲಗಿರಿ ಪಚ್ಚಗಿರಿ ನೀಲಗಿರಿ ಪರೂವೂಲೆ
ಹಾಂಗೆಂಬುತಲಿ ಜಜಲದ್ಹಾಕಿ ಬಿಡುತಾನೆ
ಮಾವ ಬಿದ್ದ ತಗ್ಗೀಗೆ ಅಳಿಯ ಬೆದ್ದಾನೆ ದಿಬ್ಬಾಕೆ
ಹೋಗುತಾನರಿಯಾನು ಹೊಳಿಗುಂಟಾ
ನನ್ನಿಗಾದರಣ್ಣ ನಿನಗೆ ಸ್ವಾದರಮಾವ
ಹೋಗುತಾನೆ ಹರಿಯಾ ಹೊಳಿಗುಂಟಾ | ನನ್ನ ಕಂದಮ್ಮ
ರಟ್ಟಿಡುದು ಮ್ಯಾಲಾಕೆ ಯಳುಕಳ್ಳೆ | ನೇ ನಿಂದುರಿಸಿ
ತತ್ತಿಯನ್ನ ಮಗುನೆ ಕೊಡು ಮಗುಳ
ಆನೆ ಹೋರುವ ಭಾರ ನಿನ್ಹೊತ್ತಾರೆ ಅಭಿಮಾನ್ಯ
ನೀನು ಯೇಳು ಹೆಜ್ಜೆ ನಡುದಾರೆ | ನೇ ಕೆಳಕ್ಹಾಕು
ನಾನು ನಿಗೆ ಮಗುಳ ಕೊಡುತಿನಿ
ಅತ್ತ್ಯಮ್ಮಾ ಮುಂದಮುಂದೆ ಸೂರಿದಾರಾನೇ ಹಿಂದ್ಹಿಂದೆ
ಮೂವಾರು ಹಾದೀಲಿ ನೆಡುದಾರೆ || ಡಿಮಿಡಿಮಿ ||
ಅಜ್ಜಮ್ಮ ಕಟ್ಟಸಿದ ಬಿಂಕಾದ ಏರೀಮ್ಯಾಲೆ
ತಾಯಮ್ಮ ಮೊಲಿಗಳು ಕೊಡು ಎನಗೆ || ಡಿಮಿಡಿಮಿ ||
ಅಜ್ಜಮ್ಮ ಕಟ್ಟಿಸಿದ ಬಿಂಕಾದ ಏರೀಮ್ಯಾಲೆ
ಬಾಲಮ್ಮ ಮೊಲಿಗಳು ಉಣಬಾರ || ಡಿಮಿಡಿಮಿ ||
ದೊಡ್ಡಮ್ಮ ಕಟ್ಟಿಸಿದ ದುರುಗಾದ ಏರೀಮ್ಯಾಲೆ
ತಾಯಮ್ಮ ಮೊಲಿಗಳು ಕೊಡು ಎನಗೆ || ಡಿಮಿಡಿಮಿ ||
ದೊಡ್ಡಮ್ಮ ಕಟ್ಟಿಸಿದ ದುರುಗಾದ ಏರೀಮ್ಯಾಲೆ
ಬಾಲಮ್ಮ ಮೊಲಿಗಳು ಉಣಬಾರೆ || ಡಿಮಿಡಿಮಿ ||
ಅರುಜುಣರು ಕಟ್ಟಸಿದ ಅರುಗಾದ ಏರಿಮ್ಯಾಲೆ
ಬಾಲಮ್ಮ ಮೊಲಿಗಳು ಉಣಬಾರಾ || ಡಿಮಿಡಿಮಿ ||
ಭೀಮಾರು ಕಟ್ಟಿಸಿದ ಬಿಂಕಾದ ಏರೀಮ್ಯಾಲೆ
ತಾಯಮ್ಮ ಮೊಲಿಗಳು ಕೊಡುಯನಗ || ಡಿಮಿಡಿಮಿ ||
ಭೀಮಾರು ಕಟ್ಟಸಿದ ಬಿಂಕಾದ ಏರೀಮ್ಯಾಲೆ
ಬಾಲಮ್ಮ ಮೊಲಿಗಳು ಉಣುಬಾರಾ || ಡಿಮಿಡಿಮಿ ||
ಧರ್ಮಾರು ಕಟ್ಟಿಸಿದ ದುರುಗಾದ ಏರಿಮ್ಯಾಲೆ
ತಾಯಮ್ಮಾ ಮೊಲಿಗಳು ಕೊಡುಯನಗೆ || ಡಿಮಿಡಿಮಿ ||
ಧರ್ಮಾರು ಕಟ್ಟಿಸಿದ ದುರುಗಾದ ಏರಿಮ್ಯಾಲೆ
ಬಾಲಮ್ಮ ಮೊಲಿಗಳು ಉಣುಬಾರೊ || ಡಿಮಿಡಿಮಿ ||
ಸತ್ತ್ಯುಳ್ಳ ಪಾಂಡವರು ಪಟ್ಟಣುಕೆ ಬರುತಾರಂದ
ಸತ್ತಿದ್ದ ಕೋಗುಲಿ ಶೇಲಿವಯ್ದು || ಡಿಮಿಡಿಮಿ ||
ದೇವುಳ್ಳ ಪಾಂಡವರು ನಾಡಿಗೇ ಬರುತಾರಂದ
ಬಾಡೀದ ಬಾವಿ ಫಲುವಾಗಿ || ಡಿಮಿಡಿಮಿ ||
ದೇವುಳ್ಳ ಪಾಂಡವರು ನಾಡಿಗೇ ಬರುತಾರಂದ
ಬತ್ತೀದ ಬಾವಿ ಜಲಾತುಂಬಿ || ಡಿಮಿಡಿಮಿ ||
ಸತ್ತ್ಯುಳ್ಳ ಪಾಂಡವರು ಅತ್ತೆ ಮಾವಾದಾರೆ
ಹಾಕಿದನ್ನ ಬೀಗ ಹರುಗಾಗಿ | ಅಂದು ಸುಭದ್ರ
ಸತ್ಯವರಿಗೆ ಕರವ ಮುಗುದಾಳೆ
ಸತ್ತ್ಯವುಳ್ಳ ಪಾಂಡವರು ಅತ್ತೆ ಮಾವಾದಾರೆ
ರಾವುರಂಗಿ ಕೀಲು ಸೋಡಿಲಾವೆ | ಅಂದು ಸುಭದ್ರ
ಪಾಂಡುವುರಿಗೆ ಕರವ ಮುಗುದಾಳೆ
ಅಳುವುತ್ತಿದ್ದ ಮಗುನ ತೊಡಿಯಾ ಮ್ಯಾಲೇರೀಸಿಗಂಡು
ಅಳುವರೇನೊ ಕಂದ ಅಭಿಮಾನ್ಯ | ಮುಂದೆ ನಾವು
ಪಡದೊಟಲ್ಲುದೆ ಮಿಗಿಲಿಲ್ಲ || ದನಿ ||
ತುಪ್ಪಬಾನಾ ಉಂಡು ಇಪ್ಪತ್ತು ವಿಳ್ಯವು ಮಿಂದು
ಪಟ್ಟೆಮಂಚುದು ಮ್ಯಾಲೆ ಸುಖಾನಿದ್ರೆ | ನೇ ಅಂದಾರೆ
ನಿಮ್ಮಜ್ಜೀನೆ ಕುಂತ್ಯಮ್ಮಾ ಅವರೀಗ
ಅವುರನ್ನ ನೋಡಾಕೆ ನಮಿಗೆನೆ ಪುಣ್ಯವಿಲ್ಲ
ಅವುರನ್ನ ಪಾದಾಕೆ ನಮುಶರುನ | ಅಂದು ಅಭಿಮಾನ್ಯು
ತೋರ್ಯಾನೆ ಕೆಂಗಣ್ಣಿಲುದುಕಾವ || ಅಳುವುತ್ತಿದ್ದ ಮಗನ ||
ಹಾಲುಬಾನಾ ಉಂಡು ನಲವತ್ತು ಈಳ್ಳೆವು ಮಿಂದು
ಸಾಲೆಮಂಚುದು ಮ್ಯಾಲೆ ಸುಖಾನಿದ್ರೆ | ನೇ ಮಾಡೋರು
ಇವರ್ಯಾರೆ ನನ್ನ ಹಡುದಮ್ಮ | ನೇ ಅಂದಾರೆ
ನಿಮ್ಮ ದೊಡ್ಡಮ್ಮ ದ್ರೌಪದಿ ಅವರೀಗ
ಅವುರನ್ನ ನೋಡಾಕೆ ನಮಿಗೆನೆ ಪುಣ್ಯವಿಲ್ಲ
ಅವುರನ್ನ ಪಾದಾಕೆ ನಮುಶರುನ | ಅಂದು ಅಭಿಮಾನ್ಯ
ತೋರ್ಯಾನೆ ಕೆಂಗಣ್ಣಿಲುದುಕಾವ || ಅಳುವುತ್ತಿದ್ದ ಮಗನ ||
ಕಟ್ಟ್ಯಾಗೆ ಮೇಯಾವು ಕರಿಮಚ್ಚೆನೇ ಸೇದೀಯ
ಕರುದನ್ನ ಮೈವರಸಿ ಕೃಪಾನಿಟ್ಟು | ನೇ ಸೇದೀಯ
ಏರಿರುವರ್ಯಾರೆ ಹಡುದಾಮ್ಮ | ನೇ ಅಂದಾರೆ
ನಿಮ್ಮಡದಪ್ಪ ಅರುಜುಣರು ಅವರೀಗ
ಅವುರನ್ನ ನೋಡಾಕೆ ನಮಿಗೆನೆ ಪುಣ್ಯವಿಲ್ಲ
ಅವುರನ್ನ ಪಾದಾಕೆ ನಮುಶರುನ | ಅಂದು ಅಭಿಮಾನ್ಯ
ತೋರ್ಯಾನೆ ಕೆಂಗಣ್ಣಿಲುದುಕಾವ || ಅಳುವುತ್ತಿದ್ದ ಮಗನ ||
ಅಳುವುತ್ತಿದ್ದ ಮಗನ ತೊಡಿಯ ಮ್ಯಾಲೇರಿಸಿಕ್ಯಂಡು
ಅಳುವರೆನೋ ಕಂದ ಅಭಿಮಾನ್ಯ | ಮುಂದೆ ನಾವು
ಪಡದೋಟಲ್ಲದೆ ಮಿಗಿಲಿಲ್ಲ
ಅವುರನ್ನ ನೋಡಾಕೆ ನಮಿಗೆನೆ ಪುಣ್ಯವಿಲ್ಲ
ಅವುರನ್ನ ಪಾದಾಕೆ ನಮುಶರುನ | ಅಂದು ಅಭಿಮಾನ್ಯ
ತೋರ್ಯಾನೆ ಕೆಂಗಣ್ಣಿಲುದುಕಾವ || ಅಳುವುತ್ತಿದ್ದ ಮಗನ ||
ಉಕ್ಕೀನ ಉರಗಡಲೆ ಮುರುಗುಕ್ಕೀಗೆಮೇಯಾ ಸೇದಿಯಾ
ಏರಿರುವರ್ಯಾರೆ ಹಡುದಮ್ಮ ದುರುಮಾರು ಅವರೀಗ
ಅವುರನ್ನ ನೋಡಾಕೆ ನಮಿಗೆನೆ ಪುಣ್ಯವಿಲ್ಲ
ಅವುರನ್ನ ಪಾದಾಕೆ ನಮುಶರುನ | ಅಂದು ಅಭಿಮಾನ್ಯ
ತೋರ್ಯಾನೆ ಕೆಂಗಣ್ಣಿಲುದುಕಾವ || ಅಳುವುತ್ತಿದ್ದ ಮಗನ ||
ಕೆರಿಯ್ಯಾಗೆ ಮೇಯಾವು ಬಿಳಿಮಚ್ಚೆ ನೇ ಸೇದಿಯಾ
ಕರದನ್ನ ಮೈವರಿಸಿ ಕೃಪಾನಿಟ್ಟು | ನೇ ಸೇದಿಯಾ
ಏರೀರುವರ್ಯಾರೆ ಹಡುದಮ್ಮ | ನೇ ಅಂದಾರೆ
ನಿಮ್ಮ ಶಿಕ್ಕಪ್ಪ ನಕಲೋರು ಅವರೀಗ
ಅವುರನ್ನ ನೋಡಾಕೆ ನಮಿಗೆನೆ ಪುಣ್ಯವಿಲ್ಲ
ಅವುರನ್ನ ಪಾದಾಕೆ ನಮುಶರುನ | ಅಂದು ಅಭಿಮಾನ್ಯ
ತೋರ್ಯಾನೆ ಕೆಂಗಣ್ಣಿಲುದುಕಾವ || ಅಳುವುತ್ತಿದ್ದ ಮಗನ ||
ಕಾಸಿಗಳು ಹಾಕ್ಕವನೆ ಮೀಸಿಗುಳುನೇ ತಿರುವ್ಯಾನೆ
ಎರಡು ಕೈಯೊಳಗೆರಡು ತಾಳಿಮರ | ನೇ ಹಿಡಿದಿಡುವ
ಇವುರ್ಯಾರೆ ನನ್ನ ಹಡುದಮ್ಮ | ನೇ ಅಂದಾರೆ
ನಿಮ್ಮ ದೊಡ್ಡಪ್ಪ ಭೀಮಾರು ಅವರೀಗ
ಅವುರನ್ನ ನೋಡಾಕೆ ನಮಿಗೆನೆ ಪುಣ್ಯವಿಲ್ಲ
ಅವುರನ್ನ ಪಾದಾಕೆ ನಮುಶರುನ | ಅಂದು ಅಭಿಮಾನ್ಯ
ತೋರ್ಯಾನೆ ಕೆಂಗಣ್ಣಿಲುದುಕಾವ || ಅಳುವುತ್ತಿದ್ದ ಮಗನ ||
ಒಂದಂಬ ಬಾಗುಲಿಗೆ ಹೋದಾಳೇ ನೇ ಸುಬದ್ರ
ಒಂದು ಸಲ ಕರವೆತ್ತಿ ಮುಗುದಾಳೆ
ಎರಡಂಬ ಬಾಗುಲಿಗೆ ಹೋದಾಳೇ ನೇ ಸುಬದ್ರ
ಎರಡೆ ಸಲ ಕರವೆತ್ತಿ ಮುಗುದಾಳೆ
ಮೂರಂಬ ಬಾಗುಲಿಗೆ ಹೋದಾಳೇ ನೇ ಸುಬದ್ರ
ಮೂರೆ ಸಲ ಕರವೆತ್ತಿ ಮುಗುದಾಳೆ
ನಾಕಂಬ ಬಾಗುಲಿಗೆ ಹೋದಾಳೇ ನೇ ಸುಬದ್ರ
ನಾಕ ಸಲ ಕರವೆತ್ತಿ ಮುಗುದಾಳೆ
ಐದೆಂಬ ಬಾಗುಲಿಗೆ ಹೋದಾಳೇ ನೇ ಸುಬದ್ರ
ಐದೆ ಸಲ ಕರವೆತ್ತಿ ಮುಗುದಾಳೆ
ಆರೆಂಬ ಬಾಗುಲಿಗೆ ಹೋದಾಳೇ ನೇ ಸುಬದ್ರ
ಆರೆ ಸಲ ಕರವೆತ್ತಿ ಮುಗುದಾಳೆ
ಏಳೆಂಬ ಬಾಗುಲಿಗೆ ಹೋದಾಳೇ ನೇ ಸುಬದ್ರ
ಏಳೆ ಸಲ ಕರವೆತ್ತಿ ಮುಗುದಾಳೆ
ಎಂಟೆಂಬ ಬಾಗುಲಿಗೆ ಹೋದಾಳೇ ನೇ ಸುಬದ್ರ
ಎಂಟೆ ಸಲ ಕರವೆತ್ತಿ ಮುಗುದಾಳೆ
ಒಂಬತ್ತುನೇ ಬಾಗುಲಿಗೆ ಹೋದಾಳೇ ನೇ ಸುಬದ್ರ
ತುಂಬಿದ್ದ ಕರವೆತ್ತಿ ಮುಗುದಾಳೆ
ತುಂಬಿದ್ದ ಜ್ಯೋತಿಗೆ ಕರವ ಮುಗುದಾಳೆ ನೇ ಸುಭದ್ರ
ತುಂಬಿದ್ದ ಕರವೆತ್ತಿ ಮುಗುದಾಳೆ
ಉಪ್ಪುರಿಗ್ಯಾರ ಮನಿಯಾಗ ಹೋದಾಳೆ ನೇ ಸುಭದ್ರ
ಬುಟ್ಟ ರಾಜಣಕ್ಕಿ ಮರತುಂಬ | ನೇ ತಕ್ಕಂಡು
ಪಟ್ಟಸಾಲೆಗೆ ತಂದು ಸುರಿವ್ಯಾಳೆ
ವಾವುರಿಗ್ಯಾರ ಮನಿಯಾಗ ಹೋದಾಳೆ ನೇ ಸುಭದ್ರ
ಬುಟ್ಟ ರಾಜಣಕ್ಕಿ ಮರತುಂಬ | ನೇ ತಕ್ಕಂಡು
ಸಾಮಸಾಲೆಗೆ ತಂದು ಸುರಿವ್ಯಾಳೆ
ಗದ್ದ್ಯಾಗೆ ಹುಟ್ಟಾವು ಗದ್ದ್ಯಾಗೇನೆ ಬೆಳಿಯಾವು
ಸೂರಿದನ ರವಸೀಗೆ ಬೆಳಿಯಾವು | ನೇ ಸಣ್ಣಕ್ಕಿ
ನಾರ್ಯಾರ್ನ ಮಾಡಿ ಇಳುವ್ಯಾರೆ
ಕೆಸುರಾಗ ಹುಟ್ಟೋವು ಕೆಸುರಾಗೆ ನೇ ಬೆಳಿವೊವು
ಶೆಂದುರನ ರವಸೀಗೆ ಬೆಳಿಯಾವು | ಅಂಥ ಸಣ್ಣಕ್ಕಿ
ರಂಬೆರನ್ನ ಮಾಡಿ ಇಳುವ್ಯಾರೆ
ಕರಿಯ ಕುಂಬುಳಕಾಯಿ ಕರಿಯಾನೇ ಬದನೇಕಾಯಿ
ನುಗ್ಗಿಯನ್ನ ಕಾಯಿ ನೆಲಗುಳಿಸಿ || ನೇ ತಾಳಾಲು
ಭಧ್ರೆರನ್ನಾ ಮಾಡಿ ಇಳುವ್ಯಾರೆ
ಶಿಕ್ಕೂಡೀಕಾಯಿ ತೊಟ್ಟೂನೆ ತಗಡೀಡ್ಯಾಡಿ
ತೊಟ್ಟ ಎಣ್ಣೆಬಿಟ್ಟು ಮೆಣಸೀಟ್ಟು | ನೇ ತಾಲಾಲು
ಮಿತ್ರೆರನ್ನ ಮಾಡಿ ಇಳುವ್ಯಾರೆ
ಕಾಯೀಲಿ ಕಡುಜಾಣೆ ಹುವ್ವೀಲಿ ಸುಬಜಾಣೆ
ಕಾಮದೇನು ಅಂಬ ಹುಣಾಸೀಯ | ಸಾರೂಮಾಡಿ
ನಾರೆರನ್ನ ಮಾಡಿ ಇಳುವ್ಯಾರೆ
ಕಂಡೂಗ ಹಿಡವ ಗಿಂಡಿಯಾ ಅರಿವಾಣಾಕ
ಸುಣ್ಣ ಕೆಮ್ಮಣ್ಣಿಟ್ಟು ಬೆಳಿಗ್ಯಾಳೆ | ಅಂದರಾಕೆ
ಪನ್ನೀರು ಹಾಕಿ ತೊಳುದಾಳೆ
ಮುತ್ತೀನ ಗಿಂಡ್ಯಾಗೆ ಉತುಮಾದ ಗಂಗಿ ತಂದು
ಅಚ್ಚೀತುನ ಮಗನೆ ಮಕತೊಳಿಯೋ
ಶಿನ್ನಾದ ಗಿಂಡ್ಯಾಗೆ ಮುಮ್ಮಾಯಿದ ಗಂಗಿ ತಂದು
ಪಾಂಡುವುರು ಮಗನೆ ಮಕಾ ತೊಳಿಯೋ
ಭಾಮೈದ್ನರಿಬ್ಬಾರು ಜೋಡಿಲಿ ಕೈತೊಳುದಾರೆ
ಸೂರಿದುಗೆ ಕರವ ಮುಗುದಾರೆ | ಅವರಿಬ್ಬಾರು
ಜೋಡೀಲಿ ಹೋಗಿ ಕುಳುತಾರೆ | ಅವರಿಬ್ಬಾರು
ಅತ್ತೆಮ್ಮ ಉಂಬಾಕ ಇಡುತಾಳೆ
ನಿಂಬೀಯ ಯಲಿಯ್ಹಾಕಿ ರೆಂಭೇರು ಕಾಸಿದ ತುಪ್ಪ
ನಾರಂದನ ಪುರುಕೆ ಯಸುದಾವೆ | ನಾರಂದಾನ
ಅಕ್ಕುವಯ್ಯ ಅಡಿಗೆ ಸವುದಾಳೊ
ಬಾಳೀಯ ಯಲಿಯ್ಹಾಕಿ ನಾರ್ಯಾರು ಕಾಸಿದ ತುಪ್ಪ
ಚಲ್ಲೀಯಾಣ ಪುರುಕೆ ಯಸುದಾವೆ | ನಾರಂದಾನ
ತಂಗಿಯಮ್ಮ ಅಡಿಗೆ ಸವುದಾಳೊ
Leave A Comment