ಅಚ್ಚ್ಯುತ –   ಸುಭದ್ರಮ್ಮನ ಅಣ್ಣ ಬಲರಾಮ
ಅಪಿಮಾನ್ಯು – ಅಭಿಮನ್ಯು, ಅರ್ಜುನ ಸುಭದ್ರಮ್ಮನ ಮಗ
ಅರುಜುಣರಾಯ – ಅರ್ಜುನ, ಕುಂತಿಯ ಮಗ
ಆಲೋಜಿ – ಸಾಹುಕಾರ ದನಗಳ ವ್ಯಾಪಾರಿ, ಎತ್ತಯ್ಯನ ಹೋರಿಗಳ ವ್ಯಾಪರಸ್ಥ
ಈರಮ್ಮ – ಪೂಜಾರಿ ಕೃಷ್ಣಪ್ಪನ ತಾಯಿ
ಈರಣ್ಣ – ಕಾಟಯ್ಯ, ಕಾವ್ಯದ ನಾಯಕ, ಕೃಷ್ಣಗೊಲ್ಲರ ಅಧಿದೈವ, ಕರುಡಮ್ಮನ ಮಗ
ಈರಬಡಕ್ಕ – ಬೊಮ್ಮೆಲಿಂಗನ ತಂಗಿ
ಎತ್ತಮ್ಮ – ಹೆತ್ತತಾಯಿ, ಪೂಜಾರಿ ಚಂದ್ರಣ್ಣನ ತಾಯಿ
ಎತ್ತಯ್ಯ – ಕೃಷ್ಣಗೊಲ್ಲರ ಆದಿ ಅಧಿಧೈವ, ಎತ್ತಿನ ಬೊಮ್ಮ, ಗೌರಸಂಸ್ರಮಾರಮ್ಮನ ಸಾಕುಮಗ, ಗೆಜ್ಜೆಕಾಲು ಮಲ್ಲಮ್ಮನ ಗಂಡ
ಎತ್ತಿನ ಬೊಮ್ಮ – ಬೊಮೈಲಿಂಗ
ಓಬಳಪತಿ – ಮ್ಯಾಸಬೇಡರ ನಾಯಕ, ಚಿತ್ತಯ್ಯ ಕಾಟಯ್ಯನ ತಮ್ಮ
ಕರಿಯಕ್ಕ – ಸುಪ್ಪಕ್ಕನ ಮಗಳು
ಕರಿಯಮ್ಮ – ನಿಂಗಣ್ಣನ ಅಕ್ಕ, ಬೊಮೈಲಿಂಗನ ಅಕ್ಕ
ಕೃಷ್ಣಪ್ಪ – ಪೂಜಾರಿ, ಈರಮ್ಮನ ಮಗ
ಕಾಟಯ್ಯ – ಕೃಷ್ಣಗೊಲ್ಲರ ಅಧಿದೈವ, ಈರಣ್ಣ
ಕಾಮಣ್ಣ – ಸುಪ್ಪಕ್ಕನ ಮಗ
ಕ್ಯಾತಣ್ಣ – ಬಂಜಿಗೆರೆ ಕೃಷ್ಣಗೊಲ್ಲರ ಗೌಡರು
ಕುರುಡಮ್ಮ – ಈರಣ್ಣನ ತಾಯಿ, ಗವಾಸರಾಯನ ಗುಡ್ಡದ ವಾಸಿ, ಸಣ್ಣಮಲೈಗೊಂಡನ ಮಗಳು
ಕೆಂಚಮ್ಮ – ಬ್ಯಾಡರೆಡ್ಡಿ ಹಳ್ಳಿಯ ಗೊಲಲರ ದೇವರು
ಗಂಗಿ ಮಾಳಮ್ಮ – ಮೈಲಾರಲಿಂಗನ, ಚಿತ್ತಯ್ಯನ ಹೆಂಡತಿ
ಚಿತ್ತಯ್ಯ – ಕೃಷ್ಣಗೊಲ್ಲರ ಅದಿದೈವ, ಕಾಟಯ್ಯ ಓಬಳಪತಿಯ ಅಣ್ಣ, ಗಂಗಿಮಾಳಮ್ಮನ ಗಂಡ
ಚಂದ್ರಣ್ಣ – ಎತ್ತಮ್ಮನ ಮಗ, ನಿಂಗಣ್ಣನ ಪ್ರಸ್ತುತ ಪೂಜಾರಿ
ಧರಿಣಮ್ಮ – ಸುಭದ್ರೆಯ ದೊಡ್ಡ ಚಿಕ್ಕಪ್ಪನ ಮಗಳು
ಬಡಮ್ಮ – ನಿಂಗಣ್ಣನ ತಂಗಿ
ಬಸಣ್ಣ – ಅಗ್ರಹಾರದ ಛಲವಾದಿ ಉರಿಮೆಯವರು
ಬಯ್ಹಿರಾ – ಗ್ರಾಮ ದೇವತೆ. ಭೈರವ
ಬೊಮೈಲಿಂಗ – ಎತ್ತಿನ ಭೊಮ್ಮ, ಮಾರಮ್ಮನ ತಮ್ಮ
ಬೋರಮ್ಮ – ಎಣಿಕಲ್ಲು ಗುಡ್ಡದ ಅರಸಿ, ಸೊಂಡಲೂರು ಬೊಮ್ಮನ ಪ್ರೇಯಸಿ
ಭರಮಪ್ಪ – ಮುಸ್ಲಿಂ ರಾಜರ ಮುಖಂಡ
ಭಿಮಣ್ಣ – ಸುಪ್ಪಕ್ಕನ ಮಗ
ಭೂತಯ್ಯ – ಪೂರ್ಲಳ್ಳಿ ಭೂತಯ್ಯ, ಗೌರಸಂಸ್ರ ಮಾರಮ್ಮನ ಅಣ್ಣ
ಭೂಪ – ಈರಣ್ಣ, ದೇವರ ಹೆಸರು
ಮರಿಯಕ್ಕ – ಸುಪ್ಪಕ್ಕನ ಮಗಳು
ಮಲ್ಲಮ್ಮ – ಎತ್ತಯ್ಯ ಹೆಂಡತಿ, ಮಲ್ಲಯ್ಯನ ಅಕ್ಕ
ಮಲ್ಲಯ್ಯ – ಎತ್ತಯ್ಯನ ಭಾವಮೈದುನ, ಎತ್ತಯ್ಯನ ಸಹಾಯಕ, ಮಲ್ಲಮ್ಮಳ ತಮ್ಮ
ಮಹಾದೇವಮ್ಮ – ಸುಪ್ಪಕ್ಕನ ಮಗಳು, ಅಭಿಮನ್ಯುವಿನ ಹೆಂಡತಿ
ಮಾಯಣ್ಣ – ಗೌರಸಂದ್ರ ಮಾರಮ್ಮನ ಅಣ್ಣ
ಮಾರಮ್ಮ – ಗೌರಸಂದ್ರ ಮಾರಮ್ಮ, ನಿಂಗಣ್ಣನ ಅಕ್ಕ, ಬೊಮ್ಮೆಲಿಂಗನ ಅಕ್ಕ
ಮೈಗುದ ಗೌಡ – ಎತ್ತಯ್ಯ
ರಾಯಗೌಡರು – ಕೃಷ್ಣಗೊಲ್ಲರ ಗೌಡರು
ಸಕಲೇರು – ನಕುಲ ಸಹದೇವರು
ಸಂಗಮ್ಮ – ಸೂಲಗಿತ್ತಿ, ಅಚ್ಚ್ಯುತನ ಸೂಲಗಿತ್ತಿ
ಹೊನ್ನೂರಪ್ಪ – ಎತ್ತಯ್ಯನ ಸಹಾಯಕ, ಬೇಡರ ಹುಡುಗ, ನೀರಗಂಟಿ