. ಉಳ್ಳಿಬಡಮ್ಮ

ಮೈತ್ರಿ – ನಿಮ್ಮ ಹೆಸರೇನಮ್ಮ

ಬಡಮ್ಮ – ಉಳ್ಳಿ ಬಡಮ್ಮ

ಗಂಡನ ಹೆಸ್ರು

ದೊಡ್ಡೀರಪ್ಪ

ವಯಸ್ಸು ಎಷ್ಟು ನಿಮಗೀಗ

ನನಗೆ ಅರವತ್ತ ಇರಬೋದು

ನಿಮ್ದ ಯಾ ಊರು

ಬಂಜಿಗೆರೆ

ನೀವು ಏಷ್ಟು ವರ್ಷದಿಂದ ಹಾಡಾಕತ್ತಿರಿ

ಮದಿವಿ ಆದ ಮೇಲೆ ಹಾಡಾಕತ್ತಿನಿ

ನೀವು ಹೆಂಗ ಕಲತ್ರಿ ಹಾಡಾಕ

ಸಿರಿ ಅಜ್ಜಿಯಿಂದ ಕಲತ್ಕೊಂಬಿಟ್ಟಿವಿ, ನಮ್ಮ ಜತಿಗಿ ಬರೋಳ ಆವಾಗ,

ನೀವು ಹಾಡ ಹಾಡತೀರಲ್ಲ, ನಿಮಗೆ ಏನೇನ ಕಷ್ಟ ಅನಸ್ತದ

ಕೆಮ್ಮು ಪಮ್ಮು ಅಷ್ಟೆ

ನೀವು ಯಾವಾಗ ಹೇಳ್ತಿರಿ ಹಾಡ

ಜಾತ್ರ‍್ಯಾಗ, ಹಾಲಸ್ತ ಮಾಡುವಾಗ ಹೇಳ್ತಿವಿ

ನೀವು ಹಾಡ ಹೇಳುವುದರಿಂದ ನಿಮಗ ಖುಶಿ ಅನಸ್ತದ

ಹೂಂ ಮತ್ತೇ

ನೀವು ಯಾವ ಯಾವ ಊರಿಗಿ ಹೋಗಿ ಹಾಡಿರಿ

ಇಲ್ಲ, ಯಾವೂರಿಗೆ ಹೋಗಿಲ್ಲ ಕ್ಯಾತಪ್ಪನ ಜಾತ್ರೆಯ್ಲಿ ಹೇಳಿವಿ, ಏಳ ಜಂಬಿಗಿ ದೇವ್ರಲ್ಲಿ ಹೇಳಿವಿ, ನಮ್ಮೂರ ಹತ್ತಿರ ಅಷ್ಟೆ

ನಿಮಗ ಯಾರಾದ್ರು ಬಂದು ಕರದ್ರಾ ಹಾಡಾಕ

ಮಸ್ತ ಕರದ್ರ ನಾವು ಹೋಗಲಿಲ್ಲ

ಯಾಕ

ನಮ್ಮ ಕೆಲ್ಸ ಮನ್ಯಾಗೆ

ನೀವ್ ಎಷ್ಟು ಜನರಿಗೆ ಕಾವ್ಯ ಹಾಡೋದು ಕಲಿಸೀರಿ

ಇಲ್ಲ ಕಲಸಿಲ್ಲ, ಯಾರೂ ಕಲಿಯಲ್ಲ ಸಾರ ಈಗ

 

ಅಜ್ಜಿಮಜ್ಜಿಗೋಳಗೌರಮ್ಮ

ಮೈತ್ರಿ – ನಿಮ್ಮ ಹೆಸರೇನಮ್ಮ

ಗೌರಮ್ಮ – ಅಜ್ಜಿಮಜ್ಜಿಗೋಳ ಗೌರಮ್ಮ

ಗಂಡನ ಹೆಸ್ರು

ಈರಣ್ಣ

ವಯಸ್ಸು ಎಷ್ಟು ನಿಮಗೀಗ

ಐವತ್ತೈದು

ಯಾವೂರು ನಿಮ್ಮದು, ಯಾವ ಜನ

ಬಂಜಿಗೆರೆನೇ, ಕೃಷ್ಣಗೊಲ್ಲರು, ಅಡವಿಗೊಲ್ಲರ ಅಂತಾರ

ನೀವು ಕಾವ್ಯಗಳನ್ನು ಏಷ್ಟು ವರ್ಷದಿಂದ ಹಾಡಕತ್ತಿರಿ

ನಾನು ಇಪ್ಪತ್ತು ಇಪ್ಪತ್ತೊಂದು ವರ್ಷದಾಕಿದ್ದಾಗಿಂದ ಹಾಡಾಕತ್ತಿನಿ

ನೀವು ಈ ಹಾಡುಗಳು ಯಾವಾಗ ಹಾಡತ್ತೀರಿ

ಮದುವೆ ಟೈಮಿಗಿ ಹಾಡತೀವಿ, ಮತ್ತೇ ಎಲ್ಲ್ಯಾನ ಹಿಂಗೆ ಗದ್ದೆ ಕಳಿಗೆ, ರಾಗಿ ಸಸಿಗೆ ಹೋಗತಿವಲ್ಲಾ ಆವಾಗ ಹಾಡತಿವಿ

ನೀವು ಹಾಡ ಹಾಡತೀರಲ್ಲ, ನಿಮಗೆ ಏನೇನ ಕಷ್ಟ ಅನಸ್ತದ

ಸ್ವಲ್ಪ ಉಬ್ಬಸ ಬಂದ್ಹಂಗ ಆಕ್ಕೈತಿ ಜಾಸ್ತಿ ಹೇಳಿದ್ರೆ ಅಷ್ಟೆ

ನೀವು ಯಾವಾಗ ಹೇಳ್ತರಿ ಹಾಡ

ಜಾತ್ರ‍್ಯಾಗ, ಹಾಲಸ್ತ ಮಾಡುವಾಗ ಹೇಳ್ತಿವಿ

ನೀವು ಹಾಡ ಹೇಳುವುದರಿಂದ ನಿಮಗ ಖುಶಿ ಅನಸ್ತದ

ಹೂಂ ಮತ್ತೇ

ನೀವು ಯಾವ ಯಾವ ಊರಿಗಿ ಹೋಗಿ ಹಾಡಿರಿ

ಇಲ್ಲ, ಯಾವೂರಿಗೆ ಹೋಗಿಲ್ಲ ಕ್ಯಾತಪ್ಪನ ಜಾತ್ರೆಯ್ಲಿ ಹೇಳಿವಿ, ಏಳ ಜಂಬಿಗಿ ದೇವ್ರಲ್ಲಿ ಹೇಳಿವಿ, ನಮ್ಮೂರ ಹತ್ತಿರ ಅಷ್ಟೆ

ನಿಮಗ ಯಾರಾದ್ರು ಬಂದು ಕರದ್ರಾ ಹಾಡಾಕ

ಮಸ್ತ ಕರದ್ರ ನಾವು ಹೋಗಲಿಲ್ಲ

ಯಾಕ

ನಮ್ಮ ಕೆಲ್ಸ ಮನ್ಯಾಗೆ ಹೆಚ್ಚದ

ನೀವ್ ಎಷ್ಟು ಜನರಿಗೆ ಕಾವ್ಯ ಹಾಡೋದು ಕಲಿಸೀರಿ

ಇಲ್ಲ ಕಲಸಿಲ್ಲ, ಯಾರೂ ಕಲಿಯಲ್ಲ ಸಾರ ಈಗ

 

. ಕುರಿಯಜ್ಜಿಯೋರಸಣ್ಣಈರಮ್ಮ

ಮೈತ್ರಿ – ನಿಮ್ಮ ಹೆಸರೇನಮ್ಮ

ಸಣ್ಣ ಈರಮ್ಮ – ಸಣ್ಣ ಈರಮ್ಮ

ಗಂಡನ ಹೆಸ್ರು

ಕುರಿ ಈರಣ್ಣ

ಎಷ್ಟು ವಯಸ್ಸ ನಿಮಗೆ

ಮುವತ್ತೈದು ಇರಬೋಜು ಸಾರ್

ನಿಮ್ಮ ಊರು, ನಿಮ್ಮ ತೌರ ಮನಿ

ಬಂಜಿಗೆರೆನೇ

ನೀವು ಏಷ್ಟು ವರ್ಷದಿಂದ ಕಾವ್ಯಗಳನ್ನು ಹಾಡಕತ್ತಾ ಇದ್ದೀರಿ

ಭಾಳ ದಿಸ ಆಗಿಲ್ಲ ಸಾರ, ಒಂದ ಐದಾರ ವರ್ಷ ಆಗಿರಬೋದು

ಯಾವ ಜನ

ಕೃಷ್ಣಗೊಲ್ಲರು, ಅಡವಿ ಗೊಲ್ಲರಂತಾರ

ನೀವು ಈ ಹಾಡುಗಳು ಯಾವಾಗ ಹಾಡತ್ತೀರಿ

ನೀವು ಹಾಡ ಹಾಡತೀರಲ್ಲ, ನಿಮಗೆ ಏನೇನ ಕಷ್ಟ ಅನಸ್ತದ

ಏನು ಕಷ್ಷ ಆಗಲ್ಲ ಸರ

ನೀವು ಯಾವಾಗ ಹೇಳ್ತಿರಿ ಹಾಡ

ಜಾತ್ರ‍್ಯಾಗ, ಹಾಲಸ್ತ ಮಾಡುವಾಗ ಹೇಳ್ತಿವಿ

ನೀವು ಹಾಡ ಹೇಳುವುದರಿಂದ ನಿಮಗ ಖುಶಿ ಅನಸ್ತದ

ಹೂಂ, ಮತ್ತೇ

ನೀವು ಯಾವ ಯಾವ ಊರಿಗಿ ಹೋಗಿ ಹಾಡಿರಿ

ಇಲ್ಲ, ಯಾವೂರಿಗೆ ಹೋಗಿಲ್ಲ ಕ್ಯಾತಪ್ಪನ ಜಾತ್ರೆಯ್ಲಿ ಹೇಳಿವಿ, ಏಳ ಜಂಬಿಗಿ ದೇವ್ರಲ್ಲಿ ಹೇಳಿವಿ, ನಮ್ಮೂರ ಹತ್ತಿರ ಅಷ್ಟೆ

ನಿಮಗ ಯಾರಾದ್ರು ಬಂದು ಕರದ್ರಾ ಹಾಡಾಕ

ಮಸ್ತ ಕರದ್ರ ನಾವು ಹೋಗಲಿಲ್ಲ

ಯಾಕ

ನಮ್ಮ ಕೆಲ್ಸ ಮನ್ಯಾಗೆ ಮನಿಮಾರಿಂದು

 

ಶ್ರೀಮತಿದೊಡ್ಡಈರಮ್ಮ

ಮೈತ್ರಿ – ನಿಮ್ಮ ಹೆಸರೇನಮ್ಮ

ದೊಡ್ಡ ಈರಮ್ಮ – ದೊಡ್ಡ ಈರಮ್ಮ

ಏಷ್ಟು ವಯಸ್ಸ ನಿಮಗೆ

ಆರವತ್ತು ಮ್ಯಾಲಾಗ್ಯಾವ

ನಿಮ್ಮ ಊರು

ಚಳ್ಳಿಕೆರಿ ತಾಲೂಕಿನ ಕಸ್ತೂರ ತಮ್ಮನ್ಹಳ್ಳಿ

ನೀವು ಏಷ್ಟು ವರ್ಷದಿಂದ ಕಾವ್ಯಗಳನ್ನು ಹಾಡಕತ್ತಾ ಇದ್ದೀರಿ

ಸುಮಾರು ನಲವತ್ತು ವರ್ಷದಿಂದ

ನಿಮ್ಮ ತೌರ ಮನಿ ಯಾವುದು ಮತ್ತು ಯಾವ ಜನ ನೀವು

ತೌರಮನಿ ಸಿದಕ್ನಳ್ಳಿ, ಕೃಷ್ಣಗೊಲ್ಲರು, ಅಡವಿ ಗೊಲ್ಲರಂತಾರ

ನೀವು ಹಾಡ ಹಾಡತೀರಲ್ಲ, ನಿಮಗೆ ಏನೇನ ಕಷ್ಟ ಅನಸ್ತದ

ಉಬ್ಬಸ ಬರ‍್ತದ

ನೀವು ಯಾವಾಗ ಹೇಳ್ತಿರಿ ಹಾಡ

ಜಾತ್ರ‍್ಯಾಗ, ಹಾಲಸ್ತ ಮಾಡುವಾಗ ಹೇಳ್ತಿವಿ

ನೀವು ಹಾಡ ಹೇಳುವುದರಿಂದ ನಿಮಗ ಖುಶಿ ಅನಸ್ತದ

ಹೂಂ ಮತ್ತೇ

ನೀವು ಯಾವ ಯಾವ ಊರಿಗಿ ಹೋಗಿ ಹಾಡಿರಿ

ಇಲ್ಲ, ಯಾವೂರಿಗೆ ಹೋಗಿಲ್ಲ ಕ್ಯಾತಪ್ಪನ ಜಾತ್ರೆಯ್ಲಿ ಹೇಳಿವಿ, ಏಳ ಜಂಬಿಗಿ ದೇವ್ರಲ್ಲಿ ಹೇಳಿವಿ, ನಮ್ಮೂರ ಹತ್ತಿರ ಅಷ್ಟೆ

ನಿಮಗ ಯಾರಾದ್ರು ಬಂದು ಕರದ್ರಾ ಹಾಡಾಕ

ಮಸ್ತ ಕರದ್ರ ನಾವು ಹೋಗಲಿಲ್ಲ

ಯಾಕ

ನಮ್ಮ ಕೆಲ್ಸ ಮನ್ಯಾಗೆ ಮನಿಮಾರಿಂದು

ನೀವ್ ಎಷ್ಟು ಜನರಿಗೆ ಕಾವ್ಯ ಹಾಡೋದು ಕಲಿಸೀರಿ

ಇಲ್ಲ ಕಲಸಿಲ್ಲ. ಯಾರೂ ಕಲಿಯಲ್ಲ ಸಾರ ಈಗ

ಈಗ ರಿಕಾರ‍್ಡ ಆಗಕತ್ತಾದಲ್ಲ ನಿಮ್ಮ ಹಾಡು ಪುಸ್ತಕ ಆಗ್ತದ ಪುಸ್ತಕ ಆದಮ್ಯಾಲೆ ನಿಮ್ಗ

ಹ್ಯಾಂಗ್ ಅನಸ್ತದ

ಛಲೋ ಅನಸ್ತದ