ಅಕ್ಸಾಲೇರು – ಅಕ್ಕಸಾಲಿಗರು
ಅಕ್ಕ್ಯಾಗಿ – ಹಕ್ಕಿಯಾಗಿ, ಪಕ್ಷಿಯಾಗಿ
ಅಕ್ಕಿಗೀಟು – ಪಕ್ಷಿಗೆದ ಇಷ್ಟು
ಅಕ್ಕಿ – ಅಕ್ಷತೆ
ಅಕ್ಕುಡಿಶೆಡ್ಡೆ – ಬಿತ್ತಲು ಬಳಸುವ ಬಿದಿರಿನ ಕೊಳವೆಗಳು, ಬುಕ್ಕಾ
ಅಗಲೆ – ಹಗಲು
ಅಗಣಿ – ಬಾಗಿಲಕೊಂಡಿ
ಅಗರಣ – ಸೋಜಿಗ, ಪ್ರಕರಣ
ಅಗಲೂಟ – ಹಗಲು ಊಟ, ಮಧ್ಯಾನ್ಹದ ಊಟ
ಅಗಲೋದ – ಅಗಲಿಹೋದ, ಬಿಟ್ಟುಹೋದ
ಅಗ್ಗಣದೇವಿ – ಅಗ್ನಿದೇವಿ
ಅಗ್ಗುಣಿ – ಮೋಡ, ಮಳೆನೀರು
ಅಗ್ಗುರದ – ಅಗ್ರದ, ಚಿಗುರಾದ, ಎತ್ತರದ
ಅಗುಳಿ – ಚಿಲಕ
ಅಚ್ಚಡ – ಹೊದಿಕೆ, ದುಪ್ಪಡಿ
ಅರ್ಚಾವೆ – ಅರ್ಚನ, ಹರಿಸೇವೆ
ಅರ್ಚಿಯಿತನ – ಅಚ್ಚುತನ, ಬಲರಾಮನ
ಅಟ್ಟೇರು – ಹಟ್ಟಿಯವರು
ಅಡಕೀರಿ – ಒಂದೆಡೆ ಸೇರಿಸುವುದು
ಅಡಾಡ್ಕಂಡು – ಅರಚಿಕೊಂಡು ಬಿದ್ದು ಬಿದ್ದು ಅಳುತ್ತಾ ಶೋಕ ವ್ಯಕ್ತಪಡಿಸುವುದು
ಅಡಿವಂತೆ – ಅಡವಿಯಂತೆ
ಅಣ್ಣಿನ್ಹೆಡಿಗೆ – ದೇವರಿಗೆ ಸಂಬಂಧಿಸಿದ ಹಣ್ಣಿನ ಬುಟ್ಟಿ
ಅಣೆಯಾಗಳ – ಹಣೆಯ ಮೇಲಿನ
ಅತ್ತಿದ್ದ – ಅಲ್ಲಿದ್ದ, ಆ ಕಡೆಯಿಂದ
ಅತ್ತಿಯ ಸೆಕ್ಕೆ – ಅತ್ತಿಮರದ ಚೆಕ್ಕೆ
ಅರ್ತಿಂದ – ಪ್ರೀತಿಯಿಂದ
ಅದ್ಯಾವಾರು – ಅಸ್ತ್ರ, ಕತ್ತಿ, ಕಠಾರಿ
ಅದಿಗೆ – ಎದುರಿಗೆ
ಅನುವಾದ – ಒಳ್ಳೆಯ, ಸೊಗಸಾದ
ಅನ್ಸುತಿದ್ದೆ – ಹೇಳಿಸುತ್ತಿದ್ದೆ
ಅನ್ನೆಲ್ಡು – ಹನ್ನೆರಡು
ಅಪ್ಪನಿನ್ನಂದಾಲು – ಅಪ್ಪನ ಪಾಲಿಕೆ
ಅಪಿಸ್ಯಾಳೆ – ಅರ್ಪಸ್ಯಾಳೆ
ಅಬ್ಬ – ಹಬ್ಬ
ಅಬಿಗೆ – ಹತ್ತಿರಕ್ಕೆ
ಅಬಿಲೆದ್ದ – ಮೇಲಕ್ಕೆದ್ದ
ಅಬುಗೋಳು – ಅಡವಿಗೊಲ್ಲರಲ್ಲಿಯ ಒಂದು ಬೆಡಗಿನ ಹೆಸರು
ಅಯ್ಯ (ತೆ) – ತಂದೆ
ಅರಗಾಗು – ದಾರಿಬಿಡು, ಪಕ್ಕಕ್ಕೆ ಸರಿ
ಅರಗಿದ – ಹಸನುಮಾಡಿದ; ಸಮಗೊಳಿಸಿದ
ಅರಗು – ಮರೆಯುವುದು
ಅರಡಿ – ಹೇಳು, ಬಿತ್ತರಿಸು
ಅರಣೆ – ಭರಣಿ, ಐರಾಣಿ
ಅರದಿ – ಮಾರಮ್ಮನ ಅಡ್ಡ ಹೆಸರು
ಅರಸೆ – ಅರಸ, ರಾಜ
ಅರಿನೀರು – ಶಳೆನೀರು, ಹರಿಯುವ ನೀರು
ಅರಿಮಾ – ಆಕಾಶ, ಸ್ವರ್ಗ
ಅರಿವಾಣ – ಬೋಗುಣೆ, ಅಗಲವಾದ ಕಂಚಿನ ತಟ್ಟೆ
ಅರಿವೆ – ಕೊಡ, ಚರಿಗೆ, ಹರವಿ
ಅರುಕಾಳೊ – ತೀರಿಸಿಕೊಳ್ಳೊ, ಬಗೆ ಹರಿಸಿಕೊಳ್ಳೊ
ಅರುಳೆ – ರಾತ್ರಿ, ದನಗಳು
ಅರುದಾವೇನೆ – ತೀರ‍್ಯಾವೇನೆ
ಅರುದಾರಿ – ಹರಿದಾರಿ, ೩ ಮೈಲಿ
ಅರುದೇನು – ಕೀಳುವೇನು, ಕೀಳಿದೆನು
ಅರುವ – ಹಿರಯುವ
ಅರುವಯ್ಯ – ಹಾರುವಯ್ಯ, ಬುದ್ಧಿವಂತ
ಅರುವೀರಿ – ತಿಳಿಸಿರಿ, ಹೇಳಿರಿ
ಅರುಸುನ – ಅರಿಷಿಣ
ಅಲಗಿ – ಹಲಗಿ ಮಣೆ
ಅವುಳ – ಹವಳ
ಅವುಳದ – ಹವಳದ
ಅವುಸಿಕೊಂಡು – ತಬ್ಬಿಕೊಂಡು
ಅಸ್ಯಾವುಕೆ – ಅಚೆಕಡೆಗೆ
ಅಸೀಗೆ – ಆಸೆಗೆ, ಮದುವೆಯಲ್ಲಿ ಅಕ್ಕಿ ಹಸೆ ಹಾಕುವುದು
ಅಳವಳಸು – ಶರಣನ್ನು
ಅಳ್ಳದಾಗಿರುವೋಳೆ – ಹಳ್ಳದಲ್ಲಿ ಇರುವವಳೆ, ಗಂಗಮ್ಮ, ನೀರು
ಅಳ್ಳಾದ – ಹಳ್ಳದ
ಅಳೆಸುತ್ತಿ – ಅರಳೆಸುತ್ತಿ
ಅಳ್ಳೆಳ್ಳೆದ್ಹೊವ – ಅರಳಿದ ಹೂ
ಅಂಗನೂಲ – ಅರಿಷಿನ ಲೇಪಿತದಾರ, ಮುಂಗೈಗೆ ಕಟ್ಟಿದದದಾರ
ಅಂಗೂಡಿ – ಅಂಗಡಿ
ಅಂಚನ್ನ – ಹಂಚಿಕೊಂಡು
ಅಂದಲ – ಪಲ್ಲಕ್ಕಿ, ಮೇನೆ
ಅಂದದಲಿ – ಆನಂದದಲಿ
ಅಂದಾಲು – ಕುದುರೆ
ಅಂದಾರ – ಚಪ್ಪರ
ಅಂಬಲು – ಅನ್ನಲು
ಅಂಬಾರ – ಆಕಾಶ
ಅಂಬಾರದುದ್ದಕ್ಕೆ – ಆಕಾಶದ ಉದ್ದಕ್ಕೆ
ಅಂಬು – ಬಿಲ್ಲು
ಅಂಬುವಾರದಲಿಂದ – ಆಕಾಶದಿಂದ
ಅಂಬ್ರಾವೆ – ಸಾರು


ಆಗ್ರದಳಿಯಡಿಕೆ – ಅಗ್ರಭಾಗದಿಂದ ತೆಗೆದ ಚಿಗುರು ಅಡಿಕೆ
ಆಗ್ದೆಳು – ಆಗದವಳು, ಇಷ್ಟವಿಲ್ಲದವಳು
ಆಡ – ಹಾಸ್ಯ, ಕಟ್ಟು
ಆದ್ಯಾವು – ಆಯುಧವು
ಆದಿ – ಹಾದಿ
ಆದಿಸಕ್ತೆ – ಆದಿಶಕ್ತಿ
ಆದೇನ – ಸಿದ್ದವಾದಂತಹ, ಆಗಿರುವಂತಹ
ಆಯಾ – ಗಳಿಗೆ
ಆಯ್ದಾಳು – ತೆಗೆದಳು, ಆರಿಸಿದಳು
ಆರುವಾನೂರು – ಒಂದು ಬ್ರಾಹ್ಮಣರಂತಹ ಜಾತಿ. ಆಳುವ ಜಾತಿ
ಆರುಸುವಲ್ಲೆ – ಆರು ಬಾಗಿಲಿನ ಮನೆ
ಆರೇನೆ – ಆರು
ಆರೋರು – ಬ್ರಾಹ್ಮಣರಂತಹ ಉಚ್ಚಜಾತಿಯವರು
ಆಲೋಜಿ ಸಾವುಕಾರ – ಕ್ವಾಮುಟ್ರಶೆಟ್ಟಿ
ಆವು (ತೆ) – ಆಕಳು
ಆವುದಾನ – ಗೋವದಾನ
ಆವುರವು – ಆ ಉರಿನವು
ಆವುರಿಗೆ – ಮಹಡಿಮನೆ ’
ಆವುಳಿ  – ಸುದ್ದಿ
ಆವುರ‍್ಯಾವೊ – ಆಹಾರ
ಆಸಗಲ್ಲು – ಮಲಗಿದ ಕಲ್ಲು, ಚಪ್ಪಟೆಕಲ್ಲು
ಆಸೆ – ಆಚೆ
ಆಳುಮಾಡಿ – ಸರ್ವನಾಶಮಾಡಿ
ಆಂತುರಿಸಿ – ಆತುರಿಸಿ, ಕಾತುರಿಸಿ


ಇಕ್ಯಾಳೆ – ಇಟ್ಟಿದ್ದಾಳೆ
ಇಗ್ಗಣೇರ್ಶವರ – ವಿಘ್ನೇಶ್ವರ
ಇಚ್ಚಿಲಿ – ಇಚ್ಛೆಯಿಂದ, ಹೆಚ್ಚಿಗೆ
ಇಟ್ – ಹಿಟ್ಟು
ಇಟ್ಲ – ಪಿಂಟೆ ಜಗಳ ಹಚ್ಚುವವ
ಇಟ್ಟುಶಿಗುಳೆ – ಎಳ್ಳಿನ ಉಂಡೆ
ಇಡಿರ‍್ಪ – ಹಿಡಿಯಿರಪ್ಪಾ
ಇದ್ಯ – ವಿದ್ಯೆ
ಇದಿ – ವಿಧಿ
ಇದ್ದುದಲಿ – ಯುದ್ಧದಲ್ಲಿ
ಇದ್ಯೇಕಾರರು – ವಿದ್ಯಾವಂತರು ಚತುರರು
ಇನುವಂದಲು – ಚೆನ್ನಾಗಾಯಿತು, ಸರಿ ಹೋಯಿತು
ಇಬೂತಿ – ವಿಭೂತಿ
ಇಮಾನ – ಚಟ್ಟ, ವಿಮಾನ
ಇರುಪಾಕ್ಸ – ವಿರೂಪಾಕ್ಷ
ಇರುಳೆ – ರಾತ್ರಿ
ಇಲ್ದೇಸು – ಇಲ್ಲೆ ಎಷ್ಟು
ಇಸಲಿಂದ – ಈಚೆಯೆಂದ , ಈ ಕಡೆಯಿಂದ
ಇಸುದ – ವಿಷದ
ಇಳಿದಳಾಗ – ಬಂದಳು ಆಗ
ಇಳ್ಯೇವು – ವಿಳ್ಯೇವು
ಇಂಗ್ಡ – ಬೇರೆ ಮಾಡು
ಇಂಗುಡಿಸಿ – ವಿಂಗಡಿಸಿ
ಇಂಗೆಣ್ಣೆ – ಹೊಂಗೆ ಎಣ್ಣೆ
ಇಂಬು – ಜಾಗ, ಸ್ಥಳ
ಇಂಬೇ – ಸ್ಥಳ, ಜಾಗ

ಈ – ಕೊಡು
ಈಟೀಟೆ – ಇಷ್ಟಿಷ್ಟೇ, ಸ್ವಲ್ಪ ಸ್ವಲ್ಪ
ಈಡಯ್ಯ – ಇಡು
ಈಡಾಡಿ – ಹೊಡೆಯಿರಿ
ಈಬೂತಿ – ವಿಭೂತಿ
ಈರಣ್ಣಗಲುಗು – ಈರಣ್ಣನಿಗೆ ಕತ್ತಿ
ಈರಣಗಲುಗು – ಈರಣ್ಣನಿಗೆ ಕತ್ತಿ
ಈರಬಡಮ್ಮ – ಗೊಲ್ಲರ ಹೆಣ್ಣು ದೈವ
ಈರಬಡಕ್ಕ – ಬೊಮೈಲಿಂಗನ ತಂಗಿ
ಈರೇ – ಹಿರಿಯ
ಈರಂಬು – ಈರಣ್ಣನ ಅಂಬು, ಬಾಣ
ಈಸಾವಿಲ್ಲ – ವಿಷವಿಲ್ಲ
ಈಸೆ – ಇಚೆಗೆ


ಉಕ್ಕೇಗೆ – ಅಕ್ಕೇಗೆ, ದನಕಟ್ಟುವ ಸ್ಥಳ
ಉಗ್ಗ್ಯಾರೆ – ಚೆಲ್ಲಿದ್ದಾರೆ
ಉಗುರೆಣ್ಣೆ – ಉಗುರಿಗೆ ಎಣ್ಣೆ
ಉಚ್ಚಾಯ – ತೇರು
ಉಡಲರಿಯ – ಉಡುವುದು ಗೊತ್ತಿಲ್ಲ
ಉಡಿಉಡಿ – ಪುಡಿಪುಡಿ
ಉಡುಗಾಗೆ – ಹುಡುಗನಿಗೆ
ಉತ್ತತ್ತಿ – ಒಣ ಖರ್ಜುರ
ಉತ್ತಾದ – ಹುತ್ತದ
ಉತ್ರಾಸ – ಹೊಸ್ತಿಲು, ಬಾಗಿಲು, ಉತ್ತರ ದಿಕ್ಕು
ಉತ್ತುಲೆಗಮಲ – ಹೂ
ಉದರ – ಪ್ರತ್ಯೇಕ, ಹೊಟ್ಟೆ
ಉದ್ದಾನುಂಡಲಿಗೆ – ಉದ್ದಿನ ಕಾಳೀನಿಂದ ಮಾಡಿದ ತಿಂಡಿ
ಉದಿ – ದನಗಳು ಕೂಡಿ ಹಾಕುವ ರಪ್ಪ
ಉದ್ದೀಯ ಕೆರೆ – ಊರ ಹೆಸರು
ಉದಿಯಾಗ – ಕುರಿ, ದನದ ಹಟ್ಟಿ
ಉದುಕಾವ – ಉದುಕ, ನೀರು
ಉದ್ರೂಸ್ತ – ಉದರಿಸುತ್ತ
ಉಬತ್ತಿ – ಊಬುಮುಳ್ಳು ಹತ್ತಿ
ಉಬ್ಬಿಲಿ – ಸಿಟ್ಟಿನಿಂದ, ಗರ್ವದಿಂದ
ಉಮ್ಮಾಮದಿಂದ – ಊಟಮಾಡೋಣ ಅಂದಿದ್ದ
ಉರಿಮೆ – ಚರ್ಮವಾದ್ಯ
ಉರ‍್ಲಾಕಿ – ನೇಣುಹಾಕಿ ಉರುಲು ಹಾಕಿ
ಉರಿ – ಹೊಕ್ಕಳಬಳ್ಳಿ, ಹುರಿ
ಉರಿಗೆಜ್ಜೆ – ಸಣ್ಣಗೆಜ್ಜೆ
ಉಲಗಲೆಣ್ಣೆ – ವಿಶೇಷ ಎಣ್ಣೆ
ಉಲುಗುಲಿ – ದಿಟ್ಟವಾದ ಪೊದೆ
ಉಲ್ಡಿಬಿಟ್ಟು – ಉರುಳಿಬಿಟ್ಟು
ಉಸುವಾಗಿ – ಹುಲುಸಾಗಿ, ಚೆನ್ನಾಗಿ
ಉಳವಿಲ್ಲ – ಉಳಗಲವಿಲ್ಲ
ಉಳಿಬಾಳ – ಬಹಳ ಹುಳಿ
ಉಳವಾನ – ಉಳಿದುಕೊಳ್ಳೋಣ
ಉಳುಗಡ್ಡೆ – ಇರುಳ್ಳಿ
ಉಂಬಾಕೆ – ಊಟಮಾಡುವುದಕ್ಕೆ
ಊರುಣ – ಹೂರಣ

ಎಡಿ – ಎಡೆ
ಎಣ್ಣೆ – ಹೆಣ್ಣೆ
ಎತ್ತರಿಗೆ – ಹೆತ್ತವರಿಗೆ
ಎತ್ತಂಗಣ – ಹೆತ್ತವರ ಆಣೆಗೂ
ಎತ್ತಿನಬೊಮ್ಮ – ಬೊಮ್ಮೈಲಿಂಗ
ಎದ್ದಾವುಲು (ತೆ) – ಎತ್ತು ಆಕಳುಗಳು
ಎನ್ನರಿಸಿ – ಹೆಂಡತಿ, ರಾಣಿ
ಎನಿಕಿ ಕಾಡ್ಲುಕಿ (ತೆ) – ಹಿಂದಿನ ಕಾಲುಗಳಿಗೆ
ಎನುಬ್ಬಯ್ಯ (ತೆ) – ಎಂಬತ್ತು
ಎರುಡಾನಿ – ಎರಡು ಆನೆ
ಎಲಬುಗು – ಮೂಳೆ
ಎಲಿಗಣಸ – ಪಟ್ಟಕಟ್ಟುವಾಗ ಕಣಸದ ಚೆಂಬಿಗೆ ಕಟ್ಟುವ ಎಲೆ (ಎಲೆಯಿಂದ ಕಟ್ಟಿದ ಕಣಸ)
ಎಸರು – ಪಾಕಕ್ಕೆ ಬಂದ ನೀರು, ಬಿಸಿ ನೀರು

ಏಕಾಂಗಿ – ಏಕಾಂಗಿ, ಯಾತಕ್ಕಾಗಿ
ಏಗಿ – ಯೋಗಿ
ಏಚೀಕೆ – ಹೇಸಿಗೆ
ಏಣಾತಿ – ಹೆಂಡತಿ
ಏದಾನುರು – ದಾನರು
ಏದೀನಮುಳ್ಳು – ಮುಳ್ಳಹಂದಿ
ಏಮಿ (ತೆ) – ಏನು
ಏಮಿಸ್ತೆ (ತೆ) – ಏನುಕೊಟ್ರೆ
ಏರುಗಳ – ಸರಕುಗಳ, ದಿನ್ನೆಗಳ
ಏರ‍್ನವ್ನೆ – ಏರಿದ್ದಾನೆ, ಹೇರಿದ್ದಾನೆ
ಏರ‍್ಯಾರೆ – ಹತ್ತಿದ್ದಾರೆ
ಏರಿಕಂಡು – ಹೇರಿಕೊಂಡು
ಏರೆ – ಕುಳಿತುಕೊಳ್ಳು
ಏಳದ್ಕಿನ್ನ – ಎದ್ದೇಳುವ ಮುನ್ನ
ಐತಾರ – ಆದಿತ್ಯವಾರ, ಭಾನುವಾರ, ರವಿವಾರ
ಐತಿ – ಇದೆ
ಐದಾರೆ – ಇದ್ದಾರೆ
ಐಬೆಳಕಂಬೆ – ಬೆಳೆಯುವೆ
ಐಭೂತ – ಅದ್ಭುತ, ರಾಕ್ಷಸ ವಿಶೇಷ
ಐಯ್ಯಾದ – ಆಯವಾದ, ಅನುಕೂಲವಾದ

ಒಕ್ಕಲ್ರು – ಒಕ್ಕಲಿಗರು
ಒಕ್ಕುಳ – ಒಂದು, ಒಮ್ಮೆ, ೬೪ ಸೇರು ಅಥವಾ ಕೆ. ಜಿ.
ಒತ್ತೀಗೆ – ಹೊತ್ತಿಗೆ, ಸಮಯ
ಒತ್ತುರಿಸಿ – ಹೇಗಾದರೂ ಹೋಗಿ
ಒರಿಯಾಕೆ – ಹೊರಕ್ಕೆ
ಒಲಬೀಗೆ – ಗಡಿ, ಹೊಲಬು
ಒಲಾಪಿಗೆ – ಸೊಂಟಕ್ಕೆ
ಒಲಿಮಾರಿ – ಹೊಲೆಮಾರಿ
ಒಲುಮಾರೆ – ಗಡಿಯಾಚೆ
ಒಳಲು ಹೊಕ್ಕು – ಒಳಗೆ ಪ್ರವೇಶಿಸು
ಒಳದಿರ‍್ಗಿ – ಅಂಗಡಿಗಳೆಲ್ಲ ತಿರುಗಿ ನೋಡುವುದು
ಒಂದೀನಾಡುತಾವೆ – ಒಂದುದಿನ ಮೇಯುತ್ತಾವೆ
ಒಂದೇಟಿಗೆ – ಒಂದೇ ಹೊಡೆತಕ್ಕೆ
ಒಂಬು – ಅಂಬು
ಓದಾನೆ – ಹೋಗಿದ್ದಾನೆ
ಓವರಳತ್ತೀಲಿ – ಹೂವು ಅರಳುವ ಹೊತ್ತಿನಲ್ಲಿ
ಓವಂದೇ – ಓಗೊಟ್ಟು
ಓಸಾಳು – ಅಷ್ಟೊಜನರು, ಎಲ್ಲರು


ಕಕ್ಕೂಸಿ – ಕುಕ್ಕ, ಹುಲ್ಲು
ಕಗ್ಗವ – ಸಂಪತ್ತು, ಖಡ್ಗ
ಕಟ್ಟಾಣಿ – ಪ್ರೀತಿಯಿಂದ (ಮುದ್ದಿನಿಂದ) ಕರೆಯುವ ಬಗೆ
ಕಡಿಗೆದ್ದ – ಕೊನೆಯಲ್ಲಿ ಎದ್ದ
ಕಡಿಬಸುರಿ – ತುಂಬುಬಸುರಿ
ಕಡಿಯಾಲ – ಕೊನೆಯ
ಕಡುಕಂಡೆ – ತುಂಡುಮಾಡಿಕೊಂಡೆ, ಕಳಚಿಕೊಂಡೆ
ಕಣಜ – ಧಾನ್ಯ ಸಂಗ್ರಹಿಸಿಡುವ ಸ್ಥಳ
ಕಣಲ – ಹೆರಿಗೆಯಾದ ಮುಸುದ ಪೂಜೆ
ಕತ್ರಿ – ಖಡ್ಗ
ಕತ್ರಿಸಿದ – ತುಂಡುಮಾಡಿದ, ಕತ್ತರಿಸಿದ
ಕತ್ತುಲಿಗೆ – ಕತ್ತಲಿಗೆ
ಕದರು – ಬಿದಿರು
ಕನಗುಲು – ಕಣಗಿಲ ಹೂ, ಹೊಂಗೆ ಹೂ
ಕನಿಕಷ್ಟ – ಬಹಳ ಕಷ್ಟ
ಕಪ್ಪುಗೊಜ್ಜುರ – ಓಲೆಗೆ ವಜ್ರ, ಜುಮಿಕಿ, ಲೋಲಕು
ಕಪ್ಪುಗೊಜ್ಜುರುವ – ಕಿವಿಯಿಂದ ಕೇಳುವುದು
ಕರಡಿಗೆ – ಭರಣಿ
ಕರಪುರ – ಕರ್ಪೂರದ
ಕರಬಾನ – ಕಪ್ಪದ ಗುಡಾನ
ಕರ‍್ತಾನೆ – ಅದ್ಯಕ್ಷ, ಮುಖ್ಯಸ್ಥ
ಕರಿಕಾಮಿ – ಕಪ್ಪುಬೆಕ್ಕು
ಕರಿಯ ಜಾಡಿ – ಕರಿಯ ಕಂಬಳಿ
ಕರಿಯೆಲೆ – ಬಲಿತಿ ವೀಳ್ಯದೆಲೆ
ಕರಿವಾರು – ಕರೆಯುವರು
ಕರುವಾಕೆ – ಕರೆಯಲಿಕ್ಕೆ
ಕಲ್ಡಿ – ಕರಡಿ
ಕಳಪುಂಟು – ದೋಷ ಉಂಟು
ಕಳಿಯಾಗೆ – ಆಕರ್ಷವಾಗಿ, ಚೆನ್ನಾಗಿ
ಕಳ್ಳೆ ಬೇಲಿ – ಹಟ್ಟಿಯ ಸುತ್ತಲ ಕಳ್ಳೆಯ ಬೇಲಿ
ಕಳ್ಳೆನು – ಕಳ್ಳಿ
ಕಾಕ್ಯಾರೆ – ಕಾಗೆ ಹಾರಿಬಂದಂತೆ
ಕಾಕಿ – ಕಾಗೆ ತಿನ್ನುವ ಒಮದು ರೀತಿಯ ಕಪ್ಪು ಬಣ್ಣದ ಹಣ್ಣು
ಕಾಣಾಸಿ – ದೆವರು ಹುಟ್ಟಿದ ಸ್ಥಳ ಕಟ್ಟೆಮನೆ
ಕಾತೆ – ಸುಂದರ, ಚಿಕ್ಕ, ಒಳ್ಳೆಯ, ಚಿಗುರು
ಕಾತೊರುಟಾಳೆ – ಕಾಂತೆ ಹೊರಟ್ಟಿದ್ದಾಳೆ
ಕಾದಾಡ – ಜಗಳವಾಡು
ಕಾರೆಕಾಯಿ – ಒಂದು ವಿಧದ ಹಣ್ಣು
ಕಾಲಪಿಲ್ಲಿ – ಕಾಲಿನ ಆಭರಣ
ಕಾಲುರಿದುಡ್ಡ – ಅಗ್ಗದಕಾಸು
ಕಾಲ್ಲೇವೆ – ಕಾಲುವೆ
ಕಾವುಗಡ್ತ್ರ – ಕಾವು ಗಾತ್ರದ್ದು, ಗಾತ್ರವನ್ನು ಸೂಚಿಸುವ ಶಬ್ದ
ಕಾಳೆ – ಕಹಳೆ
ಕಾಳೆಗತ್ತಿಗೆ – ಕಹಳೆನಾದಕ್ಕೆ
ಕಾಳ್ಹೋರಿ – ಕಪ್ಪು ಹೋರಿ
ಕ್ಯಾಸರ – ಭತ್ತದ ಪೊರೆ ತೆಗೆದು ಕಾಳು ನಯಗೊಳಿಸುವುದು
ಕ್ವಾಟೆ – ಕೋಟೆ, ಬತೇರಿ
ಕ್ವಾಣನೋರು – ಒಂದು ಬೆಡಗು
ಕ್ವಾಣೇಕೆ – ಕೊಠಡಿಗೆ, ದೇವರ ಮನೆಗೆ
ಕ್ವಾಮಾರ – ಮಗ
ಕ್ವಾಮಾರಗ್ಗಾಳಿ – ಗರ್ಜಿಸುವ ಕಹಳೆ
ಕ್ವಾಮೀಗೆ – ಹುತ್ತದ ಮೇಲಿನ ಬಿಲಕ್ಕೆ
ಕ್ವಾಲೆ – ಕೊಲೆ
ಕಿಚ್ಚಂಬು – ಉರಿಯ ಅಂಬು, ಬಾಣ
ಕಿಚ್ಚೀಗೆ – ಮತ್ಸರ‍್ಯಕ್ಕೆ
ಕಿರ್ಣಲಿ – ಜೋರಾಗಿ, ಸರಸರನೆ
ಕಿತ್ಗಂಡ – ಕಸಿದುಕೊಂಡ
ಕಿರುಣಕುಂಡ – ಕರ್ಣಕುಂಡಲ
ಕೀಲಕಳಿ – ಚಿಲಕ ತೆಗೆ
ಕೀಲುಕಾರ – ಕೋಲಕಾರ
ಕುಗ್ಗದಲಿ – ಕುಂದದೆ
ಕುಚ್ಚ – ಗುಚ್ಚ
ಕುಚ್ಚಗ್ಹೂವ್ವಾ – ಗೊಂಚಲು ಹೂ
ಕುಟ್ಟುಗಳು – ಹೊಟ್ಟೆನೋವು
ಕುತ್ತುವಾಸಕೆ – ಬಲವಂತಕ್ಕೆ
ಕುಪ್ಪೆ – ಹಸು ಕರು
ಕುರಿಹಟ್ಟಿ – ಕುರಿ ಕೂಡಿಸುವ ಸ್ಥಳ
ಕುರಿಯೋರು – ಒಂದು ಬೆಡಗು
ಕುರುಬಿಣಿದಾರ – ಕುರುಬರು ಮುಂಗೈಗೆ ಕಟ್ಟಿಕೊಳ್ಳುವ ಕುರಿತುಪ್ಪಳದ ದಾರ
ಕುಲಕ್ಕೆ – ವಂಶಕ್ಕೆ
ಕುಲಮೋಜಿ – ಕುಲಗೆಸುವವ, ಮರೆಮಾಡುವವ
ಕುಲಾಯಿ – ಟೊಪ್ಪಿಗೆ
ಕುಲುಮು (ತೆ) – ಕುಲ
ಕುಲುಮೇನೆ (ತೆ) – ಕುಲುವೇನೆ
ಕೂಟೆ – ಜೊತೆಯಲ್ಲಿ
ಕೂಮಿ – ಬಿಲ
ಕೆಸ್ರಾಗದೆ – ಕೊಳೆಯಾಗಿದೆ
ಕೇಡು – ಕೆಟ್ಟ
ಕೇರಿಯಾಗೆ – ಹಟ್ಟಿಯಾಗೆ, ಅಂಗಳದಾಗೆ
ಕೊಕ್ಕಿಪುಳ್ಳೆ – ಬಾಣ ಮಾಡಲು ಬಳಸುವ ಕಟ್ಟಿ
ಕೊಚ್ಚಕ್ಕಿಬಾನ – ಸಣ್ಣಕ್ಕಿ ಅನ್ನ
ಕೊಣಲೂದಿ – ಕೊಳಲು ಊದಿ
ಕೊತ್ತಲ – ಕೋಟೆ
ಕೊಪ್ಪರಿಗೆ – ಅಗಲವಾದ ಬಾಯಿಯುಳ್ಳ ಲೋಹದ ಪತ್ರೆ
ಕೊಯ್ಯನು – ಕೊಯ್ಯುವೆನು
ಕೊಸರಿ – ಬಿಡಿಸಿಕೊಳ್ಳಲು ಹೆಣಗುವುದು
ಕೋಡು – ನದಿ
ಕೋರಳ – ಕುತ್ತಿಗೆ
ಕೋರೆರು – ಕಂಬಳಿಯವರು
ಕಂಟುಮ್ಯಾಲೆ – ಜನಿಗೆ ಎತ್ತು
ಕಂಡಾರ – ಬೇರೆಯವರ, ಕಂಡವರ
ಕಂಡುಗ – ೧೨ ಚೀಲ, ೨೦ ಕುರಿಗಳು
ಕಂಬಳಿಕಂತೇರು – ಗೊರವರು, ಕಂಬಳಿ ಉಳ್ಳವರು
ಕುಂಚಿಗೆ – ಅಂಗಿ
ಕುಂದ – ಬಾಡಿದ, ಕೆಟ್ಟ
ಕುಂದಾರೆ – ಬಾಡುವುದು, ಕುಂದುವುದು
ಕುಂದ್ರಾಕಾಕಿ – ಕುಳಿತುಕೊಳ್ಳಲು ಹಾಕಿ
ಕುಂದೇನದ – ಕೆಡಕೆನಿದೆ
ಕೆಂಗಲ್ಲು – ಕೆಂಪು ಕಲ್ಲು
ಕೆಂಭತ್ತನ್ನ – ಕೆಂಪು ನೆಲ್ಲಿನ ಅನ್ನ
ಕೊಂಬುಲುಕೆ (ತೆ) – ಕೋಡುಗಳಿಗೆ
ಖಾತೆ – ಹೆಂಡತಿ


ಗಕ್ಕುನೆ – ಬೇಗನೆ
ಗಕ್ನೆ – ಬೇಗ
ಗಟ್ಟಿ ಅರಿವಾಣ – ಗಟ್ಟಿಯಾ ದೊಡ್ಡ ಸಂದೂಕ ಪೆಟ್ಟಿಗೆ
ಗಡಾನೆ – ಬೇಗನೆ
ಗದ್ದಿಗೆ – ಕಂಬಳಿ ಪೀಠ
ಗನ್ನೋಡಿದ – ಕನ್ನಡಿ ನೋಡಿದ
ಗರತಿ – ಮುತ್ತೈದೆ
ಗಲುವಾಡಿ – ಗಡಸುತನ
ಗವ್ವಾಸುಲಿ – ಗವಾಕ್ಷಿ, ಬದಾಳ
ಗವಿರಣ್ಣ – ಮುಚ್ಚಿರಣ್ಣ, ಹೊದಿಸಿರಣ್ಣ
ಗವುಡು – ಗೌಡ
ಗವುಡಾ ಮುದ್ದೆ – ಬಾಳೆಹಣ್ಣು, ಬೆಲ್ಲ, ತುಪ್ಪ ಅನ್ನದಲ್ಲಿ ಕಲೆಸಿ ತಯಾರಿಸಿದ ಮುದ್ದೆ
ಗಳಿಗೆ – ಉದ್ದನೆ ಬಿದಿರು ಕೋಲು, ಸಮಯ
ಗಳ್ಸೀದ – ಕೂಡಿಟ್ಟ, ಗಳಿಸಿದ್ದ
ಗಾಮದಾರಿ – ಗಾಂಧಾರಿ
ಗಾವುದ – ಸುಮಾರು ಒಂದು ಕಿ. ಮೀ
ಗಾವುದೈತೆ – ದೂರ ಇದೆ, ಗಾವುದ ಇದೆ
ಗಾಸೆದ್ದು – ಗಾಬರಿಗೊಂಡು
ಗ್ಯಾನ – ಜ್ಞಾನ
ಗ್ಯಾನದ್ಧರಿಯೇ – ಬುದ್ದಿವಂತ
ಗ್ಯಾರ ಪುಲ್ಹೋರಿ – ಗೇರುಬಣ್ಣದ ಹುಲಿಯಂತಹ ಹೋರಿ
ಗ್ಯಾರೆಬಣ್ಣ – ಗಿಣಿ ಬಣ್ಣ
ಗ್ವಾರ – ಗಂಜಿ, ಗೋಮೂತ್ರ
ಗ್ವಾವೆ – ಹೂವಿನ ವಿಶೇಷ
ಗ್ವಾವೆದುರ್ಗ – ಈಗಿನ ಚಿತ್ರದುರ್ಗ
ಗಿದ್ದನದಾಗೆ – ನಾಲ್ಕುಸೇರು ಒಂದು ಅಳತೆ ಮಾಪನ
ಗಿಳ್ಳೆವಾಗೆ – ಬಟ್ಟಟಾಗೆ, ಮೆಳ್ಳಗೆ
ಗುಕ್ಕೀಗೆ – ತುತ್ತಿಗೆ
ಗುದನೇಣು – ಹಿಡಿಹಗ್ಗ
ಗೆಣಿಯಾರು – ಗೆಳೆಯರು
ಗೆರೆಗೊಯ್ಯ – ಗೆರೆಕೊಯ್ಯ (ಮಾತುಕೊಡು)
ಗೇನುಸಿ – ಜ್ಞಾಪಿಸಿ (ನೆನೆಸಿ) ಕೊಂಡು
ಗೊಕ್ಕಾನೆ – ಬೇಗಾನೆ
ಗೊಡವೆ – ಗೋಜು
ಗೊಲ್ಲಾಳಿ – ಬಾಗಿಲ ಕಾವಲುಗಾರ, ಗೊಲ್ಲವರವನು
ಗೋಣು – ಕುತ್ತಿಗೆ
ಗೋಮಾರ – ಕುಮಾರ
ಗೌಡ – ಗೌಡತಿಯ ಸೇವಕಿ
ಗೌದಾವೆ – ಮುಚ್ಚಾವೆ, ಅಡ್ಡಗಟ್ಟಿದ್ದಾವೆ
ಗೌರಕೆ – ಗೌರವಕ್ಕೆ, ಮೂಲಾಜಿಗೆ
ಗೌಳಿ – ಹಲ್ಲಿ
ಗಂಗಳ – ಕಂಚಿನ ತಟ್ಟೆ
ಗಿಂಡಲಿ – ಚಿಕ್ಕಚೆಂಬು
ಗುಂಡೇಗೆ – ತೆಗ್ಗು, ಕುಣಿಗೆ
ಗೊಂಚಿಕಾರ – ಶ್ರೀಮಂತ
ಘನವಾಗಿ – ಚೆಂದವಾಗಿ, ಚೆನ್ನಾಗಿ


ಚದುರಿಗಿ – ದಡಕ್ಕೆ
ಚನ್ನವಾಗಿ – ಚೆನ್ನಾಗಿ
ಚಿಕ್ಕಮರಳು – ಚಿಕ್ಕಹಳ್ಳ, ತೋರಿ, ನದಿ
ಚುಕ್ಕೆ – ನಕ್ಷತ್ರ
ಚಂದಿರು – ಚಂದ್ರ
ಛತ್ರಿಯರ – ಕ್ಷತ್ರಿಯರ, ಚಕ್ರವರ್ತಿಯವರ
ಜಗುನ – ಮೂಲೆ
ಜಗುಲಿ – ಪಡಸಾಲೆ, ನಡುಮನೆ
ಜಡತೀಯ – ಎದುರು ಮಾತು
ಜಡುದಾರೆ – ಹಾಕಿದರೆ
ಜತುನ – ಜೋಪಾನ
ಜಲದಿ – ವಾರೆಗಿತ್ತಿ, ನೀರು
ಜಲಪಾಕೋ – ನೀರಿಗೆ, ಗಂಗಿಗೆ
ಜಲವು – ನೀರು
ಜವುದಾರಿ ಹಣ್ಣು – ಒಂದು ತರಹದ ಹಣ್ಣು
ಜಾಡಿ – ಕಂಬಳಿ
ಜಾಡೆಲೆ – ಒಣಗಿರುವ ಎಲೆ, ಜಿಡ್ಡಾದ ಎಲೆ
ಜಾಬು (ತೆ) – ಹೆಜ್ಜೆ
ಜಾಲ – ಎತ್ತಿನ ಹೆಸರು
ಜಾಲದುರುಬಿನ – ಜಡ್ಡು ತುರುಬಿನ
ಜಾಲಬಾಕೊ – ಗಂಗೀಗೆ, ನೀರಿಗೆ
ಜ್ವಾಳ – ಜೋಳ, ಧಾನ್ಯ
ಜ್ವಾಳೆಲೆ – ಜೋಳದ ದಂಟಿನ ಗರಿ
ಜೊತ್ತಾಗಿ – ಜತೆಯಾಗಿ
ಜೊತ್ತಿಲಿ – ಜೊತೆಯಲ್ಲಿ
ಜೋಡುಲುಗ – ಎರಡು ಮುಖದ ಕತ್ತಿ
ಜೋತುರ – ಪಂಚೆ, ಧೋತರ, ಮಂಪುರು
ಜಂಬಿ – ಬನ್ನುಮರ, ಅಸ್ತ್ರ


ಟೀಗಿ – ನಡುಪಟ್ಟಿ, ಸೊಂಟಕ್ಕೆ ಬಿಗಿಯುವ ಪಟ್ಟಿ
ಟೆಂಕಲು – ತೆಂಕಲು, ದಕ್ಷಿಣ ದಿಕ್ಕು
ಡೀರೇವು – ಡೇರೆ, ಗುಡಿಸಲು
ಡೆಬ್ಬಯ್ಯಿ (ತೆ) – ಎಪ್ಪತ್ತು
ಡಂಕೋಣೆ – ಡೊಂಕಾದ ಕೋಣೆ


ತಕ್ಕ – ತೆಗೆದುಕೊ
ತಗರು – ಟಗರು
ತಗುತಾರೊ – ಕೊಂಡು ಬಾರೊ
ತಟ್ಟೇನೆ – ಗುಂಪು
ತಡದಿದ್ರೆ – ನಿಲ್ಲಿಸಿದ್ದರೆ
ತತ್ತಿಯನ್ನ – ಬೈಗಳು
ತನಿ – ನೀರು, ಹಾಲು
ತನಿಯ – ಹಾಲು
ತಪ್ಪೀನ – ಮೀಸಲು ಕಾಯಿ, ಮುಡುಪಿನ ಕಾಯಿ
ತಬುಕ – ಕಟ್ಟುಗಳು
ತಮ್ಮುಟ – ತಂಬಿಟ್ಟು, ಹಿಟ್ಟಿನ ಕುಟ್ಟಿಗಿ
ತರಿಬಾಳೆ – ತರಿಬಿದ್ದಾಳೆ, ತರಿಬ್ಯಾಳೆ
ತರಿಯ – ಕುರಿ, ದನ ನಿಲ್ಲಿಸುವ ಗಿಡದ ನೆರಳು
ತರುಗು – ಎಲೆಗಳು
ತರುವಪ್ಪ – ನಿಲ್ಲಿಸಪ್ಪ, ಅಡ್ಡಗಟ್ಟುವಪ್ಪ
ತ್ರಣಸೀನ – ಒಮದು ಬಗೆಯ ತರಕಾರಿ
ತ್ವಗೆ – ಹದಮಾಡಿದ ಸಾರು
ತ್ವರಿಯಾಲ – ತೊರೆಯ ದಡದ, ಆಲದ ಮರ
ತಾವೊರ‍್ಹೊಳಿ – ತಾವೂರಿನ ಹೊಳೆ
ತಾವೇ – ಸ್ಥಳ, ಜಾಗ
ತಾವೇರಿ – ತಾವರೆ ಹೂವು
ತಾಳಲು – ಬೇಯಿಸು, ಸೊಪ್ಪಿನಿಂದ ಮಾಡಿದ ಪಲ್ಯ
ತಾಳಿಕಂಡು – ಸಹಿಸಿಕೊಂಡು
ತ್ಯಾರಕ್ಕ – ತೇಗದ ಮರ
ತ್ರಾಣದೀಗೆ – ಕಾಲುದೀಪ
ತ್ರಾಸ – ಸಮಯ, ಗಂಟೆ ತಾಸು
ತಿದಿವೂದಿ – ತತ್ತೂರಿ ಊದಿ
ತಿರುನಾಳು – ಮರಳಿ ಆಳು, ಅಜರಾಮರ
ತೀರ  – ಬೇಗ, ಸಮೀಪ, ಬಹಳ ಹತ್ತಿರ
ತೀರ‍್ಯಾನೆ -ಸತ್ತಿದ್ದಾನೆ
ತಗ್ಗುಲಿ – ಒಂದು ಮರದ ಬಗೆ
ತುತ್ತು – ಊಟ, ಊಟದ ಒಂದು ಹಿಡಿ
ತುರಸೀನ – ತುರ್ಚಿಗಿಡ, ಈ ಗಿಡದ ಒಂದು ಎಲೆ ಸೋಕಿದರೆ ಕಡಿತ ಉಂಟಾಗುತ್ತದೆ
ತುರುಗ – ಕುದುರೆ
ತುರುಬೆ – ತುರುಬು
ತೂಗೇನು – ತೂಗುವೆನು
ತೆಪ್ಪ – ನೀರಿನಲ್ಲಿ ಹಾಯಲು ಮಾಡಿಕೊಂಡ ದೋಣಿ
ತೆಪ್ಪಡಿದು – ಸೇರಿನ ಮೇಲ್ಭಾಗಕ್ಕೆ ಅಂಗೈ ಅಡ್ಡಹಿಡಿಯುವುದು
ತೆಪ್ಪೆ – ಸೆಗಣಿ
ತೆರ – ವಧುದಕ್ಷಿಣೆ
ತೆರಗಟ್ಟಿ – ಅಡ್ಡಗಟ್ಟಿ
ತೆರನ್ಹೇಳು – ಕಾರಣ ಹೇಳು, ಬೆಲೆ ಹೇಳು
ತೆರಿಳ್ಯಾಳೆ – ಹಿಂತಿರುಗಿ ಬಂದಿದ್ದಾಳೆ
ತೆರುವೇನು – ಸುದ್ದಿಯೇನು
ತೇದುವಮ್ಮ – ತೀಡುವಮ್ಮ, ಅರೆಯುವಮ್ಮ
ತೊಡ್ರಮಿಣೆ – ಎತ್ತಿನ ಕೊರಳಗೆ ಕಟ್ಟುವ ಹಗ್ಗ ದಂಡ
ತೊಡಿರ‍್ಯಾಳೆ – ತೊಡಗಿದ್ದಾಳೆ
ತೊಮ್ಮಟದುಂಡೆ – ತಂಬಿ‌ಟ್ಟಿನಿಂದ ಮಾಡಿದ ಉಂಡೆ (ಅಕ್ಕಿ ಬೆಲ್ಲ ಹಾಕಿ ಕುಟ್ಟಿದ್ದು ಹಸ್ಹಿಟ್ಟು)
ತೊಳಸುತ – ಕುಟ್ಟುತ
ತೋತುರಿಸಿ – ಸ್ತೋತ್ರಮಾಡಿ
ತೋಪಿ -ಟೋಪಿ
ತಂಗಳರಿವೆ – ತೋಯಿಸಿದ ಬಟ್ಟೆ
ತಂಡರಕ – ಚಾಡಿ ಹೇಳುವವ
ತಂದದ್ನಿ – ತಂದಿದ್ದೀನಿ
ತಂಬೊಲಿ – ತಾಂಬೂಲೆಲೆ
ತುಂಬು – ತೊಟ್ಟು


ದಗುನಾಕ – ಗಗನಕ್ಕ, ಆಕಾಶಕ್ಕ
ದಗುನಾವ – ಹೊದಿಕೆ
ದಟ್ಟಿ – ತುಂಡು ಸೀರೆ
ದಟ್ಟಾದ – ದಟ್ಟವಾದ
ದಡ್ಡಿಬ್ಬೆ – ದೊಡ್ಡ ಅಕ್ಕಿಯ ನಿಧಿ
ದಣಾಲಿ – ಶಬ್ದದ ಬಗೆ
ದನಕಾರು – ಧನಿಕರು, ಶ್ರೀಮಂತರು
ದರಬಾಳೆ – ಬಾಳೆಗೊನೆ
ದಸಲಿ – ಲುಂಗಿಯಂತಹ ಬಟ್ಟೆ
ದಳದೂಳಿ – ವದಿಯುವುದು, ಹೊಡೆಯವುದು
ದ್ರಯಾವಾಗು – ದಯವರಿಲಿ, ದಯಮಾಡೆ
ದಾನುರು – ದಾನವರು
ದಾರಿ – ಧಾರೆ
ದಾರುವಂದ್ರ – ಮಾಳಿಗೆ ಮನೆಗೆ ಹಾಕಿದ ಅಡ್ಡ ತೊಲೆಗಳು
ದಾವಾನೆ (ತೆ) – ದಾರಿಯನ್ನು
ದಾವುತಿ – ಆತುರ, ಆಯಾಸ
ದಾವುನಾವು – ದವುನ, ದೇವರಿಗೆ ಅರ್ಪಿಸುವ ಸುವಾಸನೆ ಬೀರುವ ಒಂದು ಪತ್ರೆ, ಹಾರ, ಮಾಲೆ
ದ್ರಾಯಗಳ – ಪಗಡೆಗಳ
ದಿಗ್ಗಾನೆ – ಬೇಗನೆ
ದುಡ – ಸತ್ಯ
ದುರ್ದೀರ – ಕೋಪಿಷ್ಟ, ಕೆಟ್ಟವನು
ದುಪ್ಪಿಗಳು – ಕಾಡು ಪ್ರಾಣೀಗಳಲ್ಲಿ ವಿಶೇಷ
ದುಸ್ಸಾಸನ – ದುಶ್ಯಾಸನ
ದೂರಕ – ನಿಂದಕ
ದೆಸಿವಂತ – ಅದೃಷ್ಟವಂತ
ದೆಸೆ – ದಿಕ್ಕು
ದೇವತರು – ದೇವತೆಯರು
ದ್ರೈದಾಕೆ – ಬಾಯಿಗೆ
ದ್ರೈದಾಕೆ – ಬಾಯಿಗೆ
ದ್ರೈವ – ದೈವ
ದೊಡ್ಡ ಪಾಗು -ದೊಡ್ಡ ರುಮಾಲು
ದೊಡ್ಡ ಹಕ್ಕಿ – ಬನ್ನಿಮರ
ದೊಬ್ಬಯ್ಯ (ತೆ) – ನೂಕಯ್ಯ
ದೋಗಿ – ಗಾಯ
ದೋಸ – ದೋಷ
ದೋಸಿಗ – ಜೋಯಿಸ
ದಿಂಡವ್ವ – ಹೂವಿನ ಮುಡಿದಂಡೆ
ದಿಂಡಿರಕೆ – ಹೆಚ್ಚುಗಾರಿಕೆ
ಧರಮಾರ – ಧರ್ಮವಂತರ, ಪಾಂಡವರ, ಧರ್ಮರಾಯ
ಧೂಳಮರಿ – ಕುರಿಮರಿ


ನಡಿವೋಗ – ನಡುವೆ ಹೋಗು
ನತ್ರಾ – ನೆತ್ತರು, ರಕ್ತ
ನಯಸ್ವಾರೆ – ನುಣುಪಾದ ಮಣ್ಣಿನ ಸೋರೆ
ನಸರಿ – ಕುರಿ ಆಡುಗಳ ಮೊಲೆಗೆ ಕಟ್ಟುವ ಬಟ್ಟೆ
ನಾ (ತೆ) – ನನ್ನ
ನಾಗಬೂಸುರ – ನಾಗರ ಹಾವಿನಂಹ ಶೂರ
ನಾಗಳ – ನಾಲ್ಕು ಕೊಳಗ
ನಾದ್ನೋರು – ನಾದುನಿಯರು
ನಾರಾಯಣಸ್ವಾಮಿ – ನಾರದ, ನಾರಾಯಣ
ನಾಲಗೆರಡು – ಬದಲಾದ ಮಾತುಗಳು
ನಾಲುನಲುದೆ – ನೋವು ಅನುಭವಿಸುವುದು
ನ್ಯಾರ – ನೇರ
ನ್ಯಾರನ್ನಳು – ಚೆಂದವಾಗಿರುವವಳು
ನಿಟ್ಟಿರುಳ – ಮಧ್ಯರಾತ್ರಿ
ನಿಟ್ಟೆಗೆಟ್ಟಂಗೆ – ಜ್ಞಾನವಿಲ್ಲದ್ಹಂಗ ಪ್ರಜ್ಞಾಹೀನ
ನಿತ್ತೆ – ಪ್ರತಿದಿನ
ನಿನ್ನಿಂದೆ – ನಿನ್ನ ಹಿಂದೆ
ನಿಪ್ತಿಯ – ಕ್ಷುಲ್ಲಕ
ನಿಸ್ತ್ರೆ – ಸ್ತ್ರೀಯರಯ
ನೀರಾಗ್ಗಣಿಯ – ನೀರುಳ್ಳ ಬಾವಿ
ನುಗ್ಗಿ – ತಗ್ಗಾಗಿದೆ, ಬಗ್ಗಿದೆ
ನುಗ್ಗಿಯ – ಮರದ ಹೆಸರು
ನುಡಿದಾವು – ಮಾತಾಡಿದವು
ನುರಿಯಾಗದೆ – ಚೂರಾಗದೆ
ನೆಗ್ಗಾಳಿ -ದೊಡ್ಡ ಕಹಳೆ
ನೆಗುದಾಡಿ – ನೆಗೆದಾಡಿ, ಕುಣಿದಾಡಿ
ನೆಗುದೊದ್ದ – ಜಾಡಿಸಿ ಒದ್ದ
ನೆಡುವಾಕ – ನಡುವೆ
ನೆತ್ತರಗಣ್ಣ – ಕೆಂಪಾದ ಕಣ್ಣು
ನೆತ್ತವರಿಸಲಾರೆ – ಅನುಭವಿಸಲಾರೆ, ಸಹಿಸಲಾರೆ
ನೆನಗಡಲೆ – ನೆಲಗಡಲೆ, ಶೇಂಗಕಾಯಿ
ನೆನದಾರೆ – ಜ್ಞಾಪಿಸಿಕೊಂಡಾರೆ
ನೆಮಿಸ್ಯಾಳೆ – ಮುಗಿದಾಳೆ
ನೆರವ – ತಿಳಿಸುವ
ನೆರಿವ್ಯಾರೆ – ಹರಡಿದ್ದಾರೆ
ನೆರಿವ್ಯಾನೆ- ಕೊಟ್ಟನು
ನೆಲಬಳುದೆ – ನೆಲಸಾರಿಸಿ
ನೆಲುಗಾರೆ- ನೆಲದಗಾರಿ, ತಗ್ಗು, ಸಮಾಧಿ
ನೇಮುಕವ – ನಿಯಮವ
ನೇವಾರಣ್ಣ – ನೇಯ್ಗೆಯಣ್ಣ
ನೊಸಲು – ಹಣೆ
ನಂದೆಂದು – ನಂದಿ ಎಂದು
ನಿಂಗಾನ – ನಿಂಗಣ್ಣನ
ನಿಂದೇ – ನಿನ್ನದೇ


ಪಚ್ಚೇದ – ಹೊಸದಾದ ಹಸಿರಾದ, ಹಸರು ಬಣ್ಣದ
ಪಟಸಾಲೆ – ಪಡಸಾಲೆ, ಜಗಲಿ
ಪಟ್ಟವ – ಕಣಿ
ಪಟ್ಟೇದಟ್ಟೇರನ – ಕಾಶಿ ( ಕಚ್ಚೀ) ಹಾಕಿದವ
ಪಡಿ – ನಾಲ್ಕು ಸೇರಿನ ಅಳತೆ ಮಾಪನ
ಪಡುದೆಮ್ಮ – ಹಡದಮ್ಮ
ಪದಾರಿ ಗೆಜ್ಜೆ – ಪಾದದ ಗೆಜ್ಜೆ
ಪದುಮಾವ – ಪಾದ
ಪನ್ನಂಗ – ತೆರೆ, ಅಡ್ಡಗಟ್ಟುವ ಬಟ್ಟೆ, ಅಂಗಳದಲ್ಲಿ ನಾಯಿಗೆ ಕುಡಿಯಲು ಇಡುವ ಹರಿವಾಣ
ಪರಸಿತ್ತ – ಪರಚಿತ್ತ
ಪರಿನಾತ – ವಾಸನೆಯ ಒಂದು ಬಗೆ
ಪರುದಾನಿ – ಪ್ರಧಾನಿ
ಪರುಶ – ಜಾತ್ರೆ, ಹಬ್ಬ, ಉತ್ಸವ
ಪವಳೀಗೆ – ಜಾತ್ರೆ ನಡುಯುವ ಸ್ಥಳಕ್ಕೆ
ಪವಳೀಯ – ದೇವಸ್ಥಾನ ಆವರಿಸಿಕೊಂಡಿರುವ ಪ್ರದೇಶ
ಪವಾಡ – ಬಟ್ಟೆ
ಪಾಗದ – ಶಲ್ಯೆಯ ಹೆಗಲಿನ ವಸ್ತ್ರ
ಪಾಚ್ಚ್ಯಾದ ತೆನಿ – ಕ್ಯಾದಿಗೆ ತೆನೆ
ಪಾಡಾರು – ಹಾಡುವವರು
ಪಾಪಸು – ಸೂಜಿ ಮುಳ್ಳಿ ಗಿಡ
ಪಾಲಕಿ – ಪಲ್ಲಕ್ಕಿ
ಪಾವಾಡ – ತಲೆಗೆ ಸುತ್ತಿದ ಪೇಟ
ಪಾವುಟಿಗೆ – ಮೆಟ್ಟಿಲು
ಪಾವುರಗೊಂಡು – ಸುತ್ತುವರೆದುಕೊಂಡು
ಪ್ರಾಣಗೊಲ್ಲಪ್ಪ – ಪ್ರಾಣ ಉಳಿಸಿದವನು
ಪ್ರಾವಡೂಸು – ಆಸೀನನಾಗು, ಪೂರೈಸು
ಪಿಲ್ಲಿ – ಕಾಲಿನ ಬೆರಳಿನ ಆಭರಣ
ಪೀಣೀಗಿ (ತೆ) – ಹೆಣ
ಪುಟಗೇಲಿ – ಪುಟ್ಟಿಗೆಯಲ್ಲಿ
ಪುಟ್ಟಿನ (ತೆ) – ಹುಟ್ಟೀದ
ಪುರತ್ರ – ಪುರಾಣ
ಪುರಸ್ನ – ಪುರುಶನ
ಪುರುಸಾನ – ಪುರುಷ
ಪುಲ್ಹೋರಿ – ಹುಲಿ ಬಣ್ಣದ ಹೋರಿ
ಪುಳಿಮಾವೆ – ಹುಳಿ ಮಾವೆ
ಪುಳ್ಳೇಯ – ಕಡ್ಡಿ
ಪೆಟ್ಟಿಂಟಿವ್ರಂದ (ತೆ) – ಇಟ್ಟಿದ್ದೆಯೇನೊ ಅಂದ
ಪೆಳಿಯ – ಗುಡಿಯ ಸುತ್ತ
ಪೆಳಿಯಾಗೆ – ಪೊದೆಯಲ್ಲಿ
ಪೇರುಂಟದಿ (ತೆ) – ಹೆಸರಿರುತ್ತದೆ
ಪೊಪ್ಪದ – ಮಲ್ಲಿಗೆ ಹೂವಿನ ಮೊಗ್ಗು
ಪೋರಾನ – ತುಂಟನ, ಹುಡುಗನ
ಪಂಜೆ – ಪಂಚೆ
ಪೆಂಡ್ಯಾ – ಗಂಟು


ಬಗ್ಗಲಕೆಂಡ – ಬೂದಿಯಾದ ಕೆಂಡ, ಬೆಂಕಿ
ಬಗುಸ್ಯಾಕೆ – ಬೊಗಸೆಯಲ್ಲಿ
ಬಗೆಯೇನು – ಕಾರಣವೇನು
ಬಜಾರ – ಬೀದಿ, ಪೇಟೆ
ಬಟ್ಟ – ಸಣ್ಣ
ಬಟ್ಟಣ್ಣ – ದನಕರು
ಬಟ್ಲಾ – ಬಟ್ಟಲು
ಬಟ್ಟುಂಗರ – ಬೆರಳಿನ ಉಂಗುರ
ಬಟ್ನೋರು – ನಾಮ ಇಟ್ಟವರು
ಬಡಗ – ಉತ್ತರದಿಕ್ಕು
ಬಡಿಗೆ – ದೊಣ್ಣೆ
ಬಡುದಾನೆ – ಹೊಡುದಾನೆ
ಬಣಸೊ – ಬಳಸುವ
ಬಣ್ಣದ ಭರಣಿ – ಕುಂಕುಮ ತುಂಬುವ ಬಟ್ಟಲು
ಬದಿಗೆ – ಹತ್ತಿರಕ್ಕೆ ಮುಂದಕ್ಕೆ
ಬದ್ರೆ – ಹೆಣ್ಣನ್ನು ಸಂಬೋಧಿಸುವ ಬಗೆ
ಬನ್ನೆ – ಬನ್ನಿ ಮರ
ಬಯಗಾಗಿ – ಸಾಯಂಕಾಲವಾಗಿ
ಬಯ್ಹಿರಾನ – ಭೈರನ
ಬರಲಂದ – ಬರಲಾರೆಂದ
ಬಲಕುಚ್ಚು – ಅಲಂಕಾರದ ವಸ್ತು
ಬಲಗರ್ದೆವೊ – ನೆನೆದೇವೊ
ಬಲ್ಲೆದೊನ – ದೊಡ್ಡವನ, ಮಹಾತ್ಮನ
ಬವುನಾಸಿ – ದಾಸಯ್ಯ ಪ್ರಸಾದವನ್ನು ನೀಡಿಸಿಕೊಳ್ಳಲಿರುವ ರಾಗಿಯ (ತಾಮ್ರದ) ತಂಬಿಗೆ
ಬಸಣ್ಣ – ಅಗ್ರಹಾರದ ಛಲವಾದಿಯ ಉರಿಮೆಯವನು
ಬಸುವಾಳೆ – ಮಾಡಿದವಳೆ
ಬಳಗೂಡಿ – ಬಂಧುಗಳನ್ನು ಕೂಡಿ
ಬಳ್ಳಾದ – ಧಾನ್ಯ ಅಳೆಯುವ ಒಂದು ಅಳತೆ
ಬಳೆಮಾಲಾರುನು – ಬಳೆ ಮಾರುವವನು
ಬಕ್ಷಾವ – ಭೋಜನ
ಬ್ರತ – ವ್ರತ
ಬ್ರತುಗಟ್ಟೆ – ವ್ರತಗೆಟ್ಟೆ
ಬ್ರತುವ – ವ್ರತ (ಒಪ್ಪತ್ತು)
ಬಾಕು – ಚೂರಿ, ಮಾರಕಾಸ್ತ್ರ
ಬಾಜೇನೆ – ಜಾಗ
ಬಾನ – ಅನ್ನ
ಬಾಪುರಿ – ತೋಳಬಂದಿ
ಬಾಲಾಲ – ಬಾಲಕರ, ಮಕ್ಕಳ
ಬಾವಕ್ಕೆ – ನೋಟಕ್ಕೆ, ಭಾವಕ್ಕೆ
ಬಾವುನ್ದಲಿ – ನೋಡುವುದರಲ್ಲಿ, ಭಾವನೆಗಳಲ್ಲಿ
ಬಾವುಸಿ – ಬಯಸಿ, ಮೆಚ್ಚಿ
ಬಾಸಿ – ಬಾಚಿ
ಬಾಳ್ಳೇವು – ಜೀವನ
ಬಿಗವುತ – ಬಿಗಿಯತ್ತ
ಬಿಗ್ದಾರೆ – ಕಟ್ಟಿದ್ದಾರೆ
ಬಿಡ್ಲು (ತೆ) – ಮಕ್ಕಳು
ಬಿರಿದ – ಮಾಗಿದ
ಬಿರುಮಟ್ಟೆ – ಬಿಗಿಯಾಗಿ ಕಟ್ಟಿದ ಪೆಂಡೆ
ಬಿಸ – ಬಿಸಿ
ಬಿಳಿಯೆಲೆ – ಎಳೆಯ ವೀಳ್ಯದೆಲೆ
ಬೀಗ – ನೆಂಟ, ಸಂಬಂಧಿ
ಬೀಡಾ – ತಂಗಿರುವ ಗುಂಪು
ಬುಕ್ಕಿಟ್ಟು – ಹಣೆಗೆ ಇಡುವ ವಿಶೇಷ ಹಿಟ್ಟು
ಬುಗಾಲಿ – ಶಬ್ದದ ಬಗೆ
ಬುಟ್ಟ – ಸಣ್ಣ
ಬುಟ್ಟುರಾಜಣಕ್ಕಿ – ಸಣ್ಣ ಅಕ್ಕಿ
ಬುಟ್ಟು ರಾಜನ ಗದ್ದೆ – ಸಣ್ಣ ನೆಲ್ಲಿನ ಗದ್ದೆ
ಬುಡಕನ್ನ – ತಳಕನ್ನ, ಬಡ್ಡೆಗನ್ನ
ಬುತ್ತೈತೆ – ಬುತ್ತಿ ಇದೆ, ಊಟದ ಗಂಟು ಇದೆ
ಬೂದಬೆಳವ – ಬೆಳಕ್ಕಿ
ಬೂದಿಗೆ – ಕಂಬದ ಮೇಲೆ ಆಧಾರವಾಗಿ ನಿಲ್ಲುವ ಚಿಕ್ಕ ಮರದ ತುಂಡು (ಬೋದಿಗೆ)
ಬೆರಗು – ಚಪ್ಪರದ ನೆರಳು
ಬೆರಳ್ಯಾನೆ – ಬೆವತಾನೆ
ಬೆರುದಾಳೆ – ಬೆರಿಸ್ಯಾಳೆ
ಬೆಸುಗೊಳೆ – ಹೇಳಿಕೊಳ್ಳೆ, ಬೇಡಿಕೊಳ್ಳೆ
ಬೆಳಕಂಬೆ – ಬೆಳೆಯುವೆ
ಬೇಗ್ನ – ಬೇಗ
ಬೇಸ್ತ್ರಿ – ಮೂಗುಬೊಟ್ಟು
ಬೇಸೈದನೆ – ಚೆನ್ನಾಗಿದ್ದಾನೆ
ಬೈಗಾದವಲ್ಲೇ – ಸಂಜೆ ಆಯಿತಲ್ಲೇ
ಬೊಮ್ಮನೋರು – ಒಂದು ಬೆಡಗು
ಬೊವ್ಯಾರು – ಬೋವಿ ಜಾತಿಯವರು
ಬೋರಣ್ಣೆ – ಬಾರೆಹಣ್ಣು
ಬೋವಂದವಾಗಿ – ಬಹಳ ಚೆಂದವಾಗಿ
ಬಂದಿ – ತೋಳ ಬಂದಿ, ತೋಲುಗಳಲ್ಲಿ ತೊಡುವ ಆಭರಣ
ಬಿಂದಿಗಿ – ಮಣ್ಣಿನ ಸಣ್ಣ ಕೊಡ
ಭ್ರಮಿಕೆ – ಬಯಕೆ
ಭಾಸೆ – ವಚನ
ಭೂದನ – ಎತ್ತಿನ ಹೆಸರು
ಭೂಮ – ಅನ್ನ
ಭೂಮಪ್ಪನೋರು – ಒಂದು ಬೆಡಗು


ಮಕಚೌರ – ಮುಖಕ್ಷೌರ
ಮಕಮು (ತೆ) – ಮುಖವನ್ನು
ಮಕರಂಭ – ಎತ್ತಿನ ಮುಖದೆ ಆಭರಣ
ಮಗಿ – ಮಾಗಿದ
ಮಜ್ಜಣ – ನದಿ ನೀರು
ಮಜಾರೆ ಸಣ್ಣ – ಸಮಾಧಿ ಮಾಡಿದರು
ಮಟ್ಟಮಧ್ಯಾನ್ಹ – ೧೨ ಗಂಟೆ ಸಮಯ
ಮಡುದಾಗೆ – ಮಠದಾಗೆ
ಮಡ್ಲಿಗೋಯ್ದರೆ – ಒಡಲಿಗೆ ಹೊಯ್ಯದರೆ
ಮಡುಗಲಿ – ಇಡಲಿ, ಸಾಯಲಿ
ಮಡುಗು – ಇಡು
ಮಣಿಸ್ವಾರೆ – ಮಣ್ಣಿನ ಸೋರೆ, ಗುಡಾಣ
ಮತ್ತೇಯ – ಮತ್ತೊಮ್ಮೆ
ಮದಗ – ನದಿ, ನೀರು
ಮದ್ಗಾನೆ – ಮದಿಸಿದ ಆನೆ
ಮದ್ಗಾರೊ – ದೊಡ್ಡಯ್ಯ, ಮಹಾತ್ಮರು
ಮದ್ದೆ – ಔಷಧಿ, ಮದ್ದು
ಮನಲೆಗ್ಗಿ – ಬೇಕಾದಷ್ಟು
ಮನ್ಗಲೇಳು – ಮಲಗಲೇಳು
ಮರ್ನ – ಮರ
ಮನಿಗ್ಯಾವೆ – ಮಲಿಗ್ಯಾವೆ
ಮನೆರ್ತಾಗೆ – ಮನೆಯವರ ಹತ್ತಿರ
ಮಯದುನ – ಮೈದುನ
ಮರಡಿ ಸರಪಣಿ – ಕಬ್ಬಿಣದ ಸರಪಣಿ
ಮರಬಿಲ್ಲು – ಎತ್ತಯ್ಯನ ಬಿಲ್ಲು, ಮರದಬಿಲ್ಲು
ಮರುಗಕೆ – ಅನುಕಂಪ ಪಡುವುದಕ್ಕೆ
ಮರುಮಲದಾವೆ – ಹಿಂದಕ್ಕೆ ತಿರುಗಿಕೊಂಡಾವೆ
ಮರುಳ – ಹಕ್ಕಿಗಳ ಹಿಂಡು
ಮಲಸೀಮೆ – ತೀರುಪತಿ ಸೀಮೆ
ಮಾ ( ತೆ ) – ನಮ್ಮ
ಮಾಡಾ – ಮೋಡ
ಮಾನಂಗಿ – ಒಂದು ತರಹದ ಹುಲ್ಲು
ಮಾಯಯ್ಯ ( ತೆ ) – ನಮ್ಮ ತಂದೆ
ಮಾರನೋರು – ಕೃಷ್ಣಗೊಲ್ಲರ ಒಂದು ಬೆಡಗಿನ ಹೆಸರು
ಮಾರ ಮಧ್ಯಾನ್ಹ – ೧ ಗಂಟೆ ಮಧ್ಯಾಹ್ನ
ಮಾಲಿಂಗ – ನಿಂಗಣ್ಣ
ಮ್ಯಾಲೆ – ಮೇಲೆ
ಮಿ ( ತೆ ) – ನಿಮ್ಮ
ಮಿಕ – ಕಾಡ್ಹಂದಿ
ಮಿಣಿ – ಹುಟೆಹಗ್ಗ
ಮಿತ್ತ – ಹಣೆ
ಮಿದನುಳ್ಳ – ಮೃದವುಳ್ಳ
ಮಿನುದಿಲ್ಲ – ಸ್ಥಾನ ಮಾಡಿಲ್ಲ
ಮುಕ್ಕಣ್ಣ – ನಿಂಗಣ್ಣ
ಮುಗಲಾಗೇರಿ – ಒಂದು ಹಳ್ಳಿ
ಮುಗಲಿಗೆ – ಆಕಾಶಕ್ಕೆ, ಮೋಡಕ್ಕೆ
ಮುಟ್ಟೋ  – ಹಗ್ಗ
ಮುತ್ತುಗಿನ್ನರಿ – ಮುತ್ತಿನ ಕಿನ್ನರಿ
ಮುಪ್ಪಯ್ಯಿ – ಮೂವತ್ತು
ಮೂಗಂಡದ – ದೊಡ್ಡೊವ್ನು
ಮೂಡಲಾನಾಡ – ಮೂಡಲ ದಿಕ್ಕಿಗಿರುವ ನಾಡು, ತಿರುಪತಿ
ಮೆಟ್ಟು – ಜೋಡು, ಚಪ್ಪಲಿ
ಮೆಯ್ಲಿ – ತಿನ್ನಲಿ
ಮೈಮರಿಗೆ – ಮಹಿಮಾವಂತರಿಗೆ
ಮೈಮೆ – ಮಹಿಮೆ
ಮೊಗ್ಗರಳ್ಹೊತ್ತೀಲಿ – ಮೊಗ್ಗು ಅರಳುವ ಹೊತ್ತಿಗೆ
ಮೋವಕ್ಕೆ – ಪ್ರೀತಿಗೆ, ಮೋಹಕ್ಕೆ
ಮಂಗಾರೆಗಿಡ – ಕಾರೆಗಿಡ
ಮಿಂಡ್ಲಿಕಿ ( ತೆ ) – ಮಿಂಡ್ರಿಗೆ
ಮುಂಜ್ಯಾಲೆ – ಬೆಳಗಿನ ಜಾವ
ಮುಂಡಗೀಯ – ಪೇಟ, ರುಮಾಲು
ಮುಂದ್ರ ಕಾಡ್ಲುಕಿ ( ತೆ ) – ಮುಂದಿನ ಕಾಲುಗಳಿಗೆ
ಮೂಂಟೆ – ಮೂಟೆಕಟ್ಟು

ಯಗಾಲಿಟ್ಟ – ಹೆಗಲಿಟ್ಟ
ಯಡಿ – ಎಡೆ, ನೈವೆದ್ಯ
ಯಡ್ಡು – ಹೆಡ್ಡ, ಬುದ್ಧಿಯಿಲ್ಲದ
ಯಪ್ಪುತುವೆ ( ತೆ ) – ಅಪ್ಪನನ್ನು
ಯಮಗಂಡ – ಶನಿ, ವಿಷಮಕಾಲ
ಯಮುನಕ್ಕೆ – ಪ್ರೌಢಾವಸ್ಥೆಗೆ, ಪ್ರಾಯಕ್ಕೆ
ಯರಿಯಲೇನು – ಹುಯ್ಯಲೇನು
ಯರಿಯಾಗ – ಏಳಜಂಬೆತಲ್ಲಿಯ ಎರಿಹೊಲದಾಗ
ಯಳಿಗಾಯಿ – ತೆಂಗಿನಕಾಯಿ
ಯಾಡ (ತೆ ) – ಎಲ್ಲಿ
ಯಾಡಲು ( ತೆ ) – ಹೆಂಡತಿಯರು
ಯಾವಾರಿಲ್ಲ – ಯಾರು ಇಲ್ಲ
ಯಾಳ್ಯೇವು – ಸಮಯ
ಯಿಟೀಯ – ಭರ್ಜಿಯ
ಯೋಟು – ಅಷ್ಟು, ಎಷ್ಟು


ರಟ್ಟ್ಯಾಳ – ರಟ್ಟಿ (ಕೈ ಮೇಲಿನ ಭಾಗ)
ರಪ್ಪ – ಕುರಿಹಟ್ಟಿ
ರವಸೀಗೆ – ಬಿಸಿಲು, ರಬಸ, ಬೆಳಗು
ರವಿರಂಜೆ – ಬಾಗಿಲಿಗೆ ಹಾಕಿದ ಚಿಲಕ
ರವೆರವೆ – ಮೈತುಂಬ ಕಣ್ಣು
ರಯಿತಾ – ರಕ್ತ
ರ‍್ಯವಿ – ರೆಪ್ಪೆ, ರೆವೆ
ರಾಗಿ – ತೌದಿ
ರಾಜಂಗಳ – ರಾಜಬೀದಿ
ರಾಸಡಿಕೆ – ರಾಶಿ ಅಡಿಕೆ
ರೂಢಿ – ಭೂಮಿ
ರೂಪಗೊಳ್ಳೋರು – ಒಂಡು ಬೆಡಗು
ರೇವಣ್ಣ – ನಿಂಗಣ್ಣ
ರಂಗುಳುಸುತಾವೆ – ರಂಜಿಸುತ್ತವೆ
ಲಾವುಣು – ಒಂದು ಬಗೆಯ ಕಾಲಿನ ಆಭರಣ
ಲೆಗ್ಗಿಗೆ – ಕಾಳಗಕ್ಕೆ
ಲೆತ್ತವಾಡೋರು – ಪಗಡಿ ಆಡದ ತರಹ ಒಂದು ಆಟ ಆಡುವವರು
ಲೋಬಿ – ದುರದೃಷ್ಟ
ಲಂಕ್ಯ – ಸುತ್ತು


ವಚ್ಚದ ಮಾತು – ಕೆಟ್ಟ ಮಾತು ( ಹೆಚ್ಚಿನ ಮಾತು )
ವಡಗೊಂಡು – ಕೂಡಿಕೊಂಡು
ವಡ್ಡಿಗಟ್ಟಿ – ಒಂದು ಹಳ್ಳದ ಹೆಸರು
ವಡೇವು – ಧಾನ್ಯ ಶೇಖರಿಸಿಡುವ ಕಣಜ
ವತ್ತೀಲಿ – ಒಂದಕೊಂದು ಅಂಟಿಕೊಂಡಂತೆ
ವನಸಾಲಿಗೆ – ಹೊಲಸು ಮಾತು
ವಪ್ಪವಾಗಿ – ಓರಣವಾಗಿ
ವರಗಳ – ವರಹಗಳ
ವರವ – ಹರಿವ
ವರುಣವೆ – ಸಮಜೋಡಿ
ವಲವಲುದೆ – ಸುತ್ತಿ ಸುತ್ತಿ
ವಲ್ಲಿ – ವಸ್ತ್ರ
ವಲುಕೆ – ಹೊಲಕ್ಕೆ
ವಸ – ಹೊಸ
ವಸಾವಂತು – ಓಕುಳಿ
ವಳಿದು – ಹೊಳಿ
ವಾಗ – ಯೋಗ
ವಾರಿಗಿ – ಪಕ್ಕಕ್ಕೆ
ವಾವುರಿಗೆ ಮನಿ – ಉಪ್ಪರಿಗೆ ಮನೆ, ಹೊರಮನೆ
ವ್ಯಾಳ – ವೇಳೆ
ವುಸಿ – ಸ್ವಲ್ಪ
ವೋಸೊಳು – ಎಲ್ಲರೂ
ವಂದಿಗೆ – ಜೊತೆಗೂಡಿ, ತುಂಬಿಕೊಂಡು


ಶದುರ – ದೇವರ ಕಬ್ಬಿಣದ ಮಂಚ
ಶ್ರಭಿಯಾಗೆ – ಸಭೆಯಲ್ಲಿ
ಶಾಜ – ಅರ್ಘ್ಯ, ತರ್ಪಣ
ಶಾಬ್ರ – ಕಷ್ಟಕಾಲ, ಬರಗಾಲ
ಶಿಕ್ಕ – ಚಿಕ್ಕ
ಶಿತ್ತದ್ದಾಗಿರುವೋಳೆ – ಮನದಾಗಿರುವೋಳೆ, ಚಿತ್ತದಾಗಿರುವೋಳೆ
ಶಿನ್ನಾದ – ಚಿನ್ನಾದ
ಶೆಟ್ಟಿಗೆ – ಸಣ್ಣ ಗಡಿಗೆ
ಶೆಲುವುರಿಕೆ – ಚೆಲುವಿಕೆ
ಶಂದುರ – ಚಂದ್ರ
ಶಿಂತಿಲ್ಲ – ಚಿಂತೆಯಿಲ್ಲ
ಶೆಂಡು – ಶಿರ, ರುಂಡ


ಸಕ್ಕ – ಸಕ್ಕತ್ತು
ಸಕುಣ – ಶಕುನ
ಸಚ್ಚೇದೆ ( ತೆ ) – ಸತ್ತಿದೆ
ಸಣ್ಣಪಾಗು – ಸಣ್ಣ ರುಮಾಲು
ಸತ್ತಿರಿಗಿ – ಛತ್ರಿ
ಸದ್ದಿಕೆ – ರುದ್ರಾಕ್ಷಿ ಸರ
ಸಪುನ – ಸಪ್ನ, ಕನಸು
ಸಬೂರ – ಲಗಾಮು
ಸರುವಾಗಿ – ಸಣ್ಣ ಹಳ್ಳಾಗಿ
ಸರುಳಂಬ – ಸಲಾಕೆಗಳು (ಮಾರಕಾಸ್ತ್ರ)
ಸಲಮುಡಿಗೆ – ತುರುಬು
ಸಲಿಸ್ಯಾರೆ – ಅರ್ಪಿಸಿದ್ದಾರೆ
ಸಲಿಸ್ಹೋದ – ತಿಂದು ಹೋದ
ಸವದಿಗ – ಸೌದೆ, ಕಟ್ಟಿಗೆ
ಸಳಿಮಂಚ – ಜೀಗುಟ್ಟುವ ಮಂಚ
ಸ್ರಮಯಕ್ಕೆ – ಸಮಯಕ್ಕೆ
ಸವುಲಗ್ಗಿ – ಜಗಳಕ್ಹೋಗು, ಸಮ ಜಗಳ
ಸಾಗಿಗಣ್ಣು – ಬಿದರಿನ ಕಣ್ಣು
ಸಾಣೆಗಲ್ಲು – ಮಸಗಲ್ಲು
ಸಾದಿನ – ಕುಂಕುಮ
ಸಾಪಾನ – ಸೋಪಾನ
ಸಾಮಸಾಲಿ – ಮನೆಯ ಪಡಸಾಲಿ, ನಡುಮನೆ
ಸಾಮಾರ – ಸೋಮುವಾರ
ಸಾಮುರಾಣಿ – ಸಾಂಬ್ರಾಣಿ
ಸಾರುತಾನೆ – ಬಾರಿಸುತ್ತಾನೆ, ಹೇಳುತ್ತಾನೆ
ಸಾವಾಲಗಣ್ಣು – ಸಣ್ಣು ಕಣ್ಣು
ಸಾವುಗಾಲಿ – ಉತ್ತಮ ಗಾಲಿ, ಚಂದದ ಗಾಲಿ
ಸಾಸಾಣ – ನಾಮಫಲಕ
ಸ್ರಾಬಿಯಾಗೆ – ಸಭೆಯಲ್ಲಿ
ಸ್ವಾಮನೋರು – ಕೃಷ್ಣಗೊಲ್ಲರಲ್ಲಿಯ ಒಂದು ಬೆಡಗಿನ ಹೆಸರು
ಸಿಕ್ಕಣ್ಣ – ಚಿಕ್ಕಣ್ಣ
ಸಿಕ್ಕಪ್ಪ – ಚಿಕ್ಕಪ್ಪ
ಸಿಗಪ್ಪ – ಚಿಕ್ಕಪ್ಪ
ಸಿಗುದ್ದಾನೆ – ಹೋಳು ಮಾಡಿದನೆ, ಸೀಳಿದನೆ
ಸಿಮ್ಮಾಸುಣುವ – ಸಿಂಹಾಸನ
ಸಿಮೀಗೆ – ನಾಡಿಗೆ, ಸರಹದ್ದಿಗೆ
ಸ್ಥಿರನಾಳೆ – ಚೀರಂಜಿವಿಯಾಗಿ
ಸಿಲುಕ – ತಿಲಕ
ಸಿಲುಕಿದ – ಹಚ್ಚಿದ
ಸಿವುಡು – ಸೂಡು (ಜೋಳದ ಸೂಡಿನ ತರಹ )
ಸೀಮಯ – ಸೀಮೆ
ಸುಕ್ಕೆ ಬಣ್ಣ – ಗಿಣಿಬಣ್ಣ
ಸುರಿಬೆಯ – ಜನಗಿ ಹಾಲು
ಸುರುವ್ಯಾಳೆ – ಸುರುದಾಳೆ, ಸುರಿವ್ಯಾಳೆ
ಸುರುವಿ – ಈದಿಲ್ಲದ ಹಸು
ಸೂಡಕುಣ್ಣಟ್ಲ ( ತೆ ) – ನೋಡದಿದ್ದಂಗೆ
ಸೂಡಿ – ಒತ್ತಾಗಿ ಕಟ್ಟಿರುವಂತಹದ್ದು
ಸೂಡು ( ತೆ ) – ನೋಡು
ಸೂಪುಸ್ತಾನಂದಾ ( ತೆ ) – ತೋರಿಸುತ್ತೇನಂದ
ಸೂಪುಸುನಾಕೆ ( ತೆ ) – ತೋರಿಸುವುದಕ್ಕೆ
ಸೂರಿದ – ಸೂರ್ಯ
ಸೂರೆ – ವಧುವಿನ ತಲೆಯ ಮೇಲೆ ಹಾಕುವ ಮಲ್ಲಿಗಿ ಹೂವಿನ ಗುಚ್ಚು
ಸೂಸುಗುದಹುಲ್ಲು – ಒಂದು ವಿಧದ ಹುಲ್ಲು
ಸೊಸ್ತೆ ( ತೆ ) – ನೋಡಿದುರೆ
ಸೆಜ್ಜೋರು – ಒಂದು ಬೆಡಗು
ಸೆಡ್ಡೇಕಿ – ಬೆನ್ನೀಗೆ
ಸೆರ‍್ಮ – ಚರ್ಮ
ಸೆಯ್ಯದ್ದು ( ತೆ ) – ಮಾಡಬೇಡ
ಸೆಳಿಕೊಲ – ಕಬ್ಬಿಣದ ಸಲಾಕೆ
ಸೆಳಿದೇನು – ಹೊಡದೇನು
ಸೆಳೆದುಟ್ಟೆ – ಮಡಿ ಮಾಡಿ ಉಟ್ಟೆ
ಸೇಕಣ – ಶಕುನ
ಸೆಜಿ – ಕುದುರೆ
ಸೊಡಾಲೂಸಿ – ಬಿಡಿಸುವುದು
ಸೊಸ್ತೇರು – ಸೊಸೆಯರು
ಸೋಕ – ಶೋಕ
ಸಂಗಾಟ – ಸಂಗಡ
ಸಂಜೇಲಿ – ಸಾಯಂಕಾಲ
ಸಂಪುಗ್ಹೊತ್ತಿಲೆ – ಒಳ್ಳೆಹೊತ್ತಿನಲ್ಲಿ
ಸಿಂಟ್ಹೋರಿ – ಸಿಂಹದ ಬಣ್ಣದ ಹೋರಿ

 ಹ
ಹಣುವಿನ ಕಾಯಿ – ಹಣಕೊಟ್ಟು ಪಡೆದ ಕಾಯಿ
ಹರ್ತಿ – ಜಾತ್ರೆ
ಹಯವಾಗಿ – ಅಂದವಾಗಿ
ಹಲಗಲ್ಲು – ಹಾಲ್ಲಿನಂತ ಕಲ್ಲು
ಹಾಲಿಸೆಟ್ಟಿ – ಹಾಲಿನ ಮಡಕೆ
ಹಾವುಳಿ – ಗದ್ದಲ
ಹಾಳೆ ಬಾಸಿದ – ಎಲ್ಲೆಯಲ್ಲಿಯ ಮುಸುರಿ ತಿಂದ ನಾಯಿ
ಹುಟ್ಟುನೊಕ್ಕಲುಮಗ – ಹರಳಯ್ಯ ( ಹರಿಜನ )
ಹುಟ್ಟಿಲ್ವೆ – ಸಿಗಲಿಲ್ಲವೆ
ಹುರುಕೊಂಡು – ಬೇಯಿಸಿಕೊಂಡು
ಹುಲ್ಲೆ – ಜಿಂಕೆ
ಹುಳ್ಳಿ – ಹುರುಳಿಕಾಳು
ಹೆಡಿಗೆ – ಎಡೆ ಇಡುವ ಬುಟ್ಟಿ
ಹೊಕ್ಕನೆ – ಹೋದನೆ
ಹೊತ್ತಿಲಿ – ಪಕ್ಕದಲ್ಲಿ ಸಮೀಪದಲ್ಲಿ
ಹೊನ್ನ – ಬಂಗಾರ
ಹೊಲ್ಟ – ಹೊರಟ
ಗಂಗುನಗರಿ – ಹಂಗು ಪಕ್ಷಿ
ಹಿಂಡೆ – ಗುಂಪು
ಹೆಂಡೆ – ಸಗಣಿ
ಹೊಂಬಾಳೆಗಮಲ – ಬಾಳೆ ಹೂ
ಹೊಂಬುತಿರುಗು – ಕೊಂಬೆ ತಿರುಗು