ಪಲ್ಲವಿ : ಕೃಷ್ಣನಾ ನೋಡಲೆಂದು ಶಿವದೇವನೋಡಿ ಬಂದ
ಜಂಗಮನ ವೇಷದಲ್ಲಿ ಪಾರ್ವತಿ ಜೊತೆಯಲ್ಲಿ
ಚರಣ : ಮುದ್ದುಕೃಷ್ಣ ನಡಿಗೆಯನು ಮೋದದಿಂದ ನೋಡಿದ
ಗೆಜ್ಜೆಗಳ ತೊಡಿಸಿ ಶಿವ ಮೆಚ್ಚಿಕೊಂಡ ನಡಿಗೆಯನು
ಮುದ್ದಿನಾ ಮುಖವನ್ನು ಸದ್ದಿಲ್ಲದೇ ಪಕ್ಕದಲ್ಲಿ
ನಿಂತು ನೋಡಿ ಆನಂದದಿ ಮೈಮರೆತನು ಶಿವನು
ತೊದಲಿನ ಮಾತ ಕೇಳಿ ತನ್ನ ತಾನೇ ಮರೆತನು
ನಂದಿಯೊಡಗೂಡಿ ಸ್ವಾಮಿ ಕುಣಿದು ಕುಣಿದು ನಲಿದನು
ಜಾತಕವ ನುಡಿವೆನೆಂದು ಕೈಹಿಡಿದು ನೋಡಿದ ಶಿವ
ಇಬ್ಬರ ದೃಷ್ಟಿ ಸೇರಿತು ಹರಿ ಹರರು ಒಂದಾದರು
ಒಬ್ಬರಿಗೊಬ್ಬರು ಜಯವನ್ನು ಸಂತಸದಿ ನುಡಿದರು
ಜಗಕ್ಕೆ ಶಾಂತಿ ತಂದರು ಶಂಕರ ಕೃಷ್ಣರಿಬ್ಬರು
Leave A Comment