ಜೆ.ಕೆ. ಅವರ ಪ್ರಕಾರ ಸ್ವಾತಂತ್ಯ್ರಶಿಸ್ತಿಲ್ಲದೆ ಇರಲು ಶಕ್ಯವಿಲ್ಲ. ಸ್ವಾತಂತ್ಯ್ರ ಶಿಸ್ತು ಜೊತೆ ಜೊತೆಯಾಗಿ ಇರುತ್ತವೆ. ಎರಡೂ ಅವಿಭಾಜ್ಯವಗಿವೆ. “ನನ್ನ ಇಷ್ಟವಿದ್ದ ಹಾಗೆ ಮಾಡುವ ಮನಸ್ಸಿಗೆ ಬಂದಾಗ ಊಟ ಮಾಡುವೆ-ಇಷ್ಟ ಬಂದಾಗ ವರ್ಗಕ್ಕೆ ಬರುವೆ” ಎಂದರೆ ಅಶಿಸ್ತು ನಿರ್ಮಾಣವಾಗುವುದು. ಇತರರು ಏನು ಬಯಸುತ್ತಾರೆಂಬುದನ್ನು ಗಮನಿಸಬೇಕು. ವ್ಯವಸ್ಥೆ ಸರಿಯಾಗಿರಲು ಸಮಯ ಪಾಲಿಸಬೇಕು. ಇತರರ ಬಗ್ಗೆ ಸಂವೇದನಾಶೀಲರಾದಾಗ ನಮ್ಮಲ್ಲಿ ಶಿಸ್ತು ಮೂಡುತ್ತದೆ. ಆ ಶಿಸ್ತಿನಿಂದ ಸ್ವಾತಂತ್ಯ್ರ ಬರುತ್ತದೆ.

ವಿಶ್ವಾದ್ಯಂತ ಸೈನಿಕರು ಕವಾಯತು ನಡೆಸುತ್ತಾರೆ. ಸಾಲಿನಲ್ಲಿ ನಡೆಯಲು ಅವರಿಗೆ ಹೇಳಿರುತ್ತಾರೆ. ವಿಚಾರಿಸದೆ ಅವರು ಆಜ್ಞೆ ಪಾಲಿಸುತ್ತಾರೆ. ಅಂತಹ ತರಬೇತಿಯಿಂದ ಮನಸ್ಸು ಮಂದವಾಗುತ್ತದೆ. ಅದು ಚುರುಕುತನವನ್ನು ಕಳೆದುಕೊಳ್ಳುತ್ತದೆ. ಬಾಹ್ಯದಿಂದ ಹೇರಲ್ಪಡುವ ಶಿಸ್ತು ಮನಸ್ಸನ್ನು ಮಂದವನ್ನಾಗಿ ಮಾಡುತ್ತದೆ. ಆದರೆ ನಿರೀಕ್ಷಣೆಯಿಂದ ಆಲಿಸುವುದರಿಂದ ಇತರರ ಬಗ್ಗೆ ಸಹಾನುಭೂತಿ ಹೊಂದುವುದರಿಂದ ಹಾಗೂ ಆಂತರಿಕ ಶಿಸ್ತಿನಿಂದ ವರ್ತಿಸಿದರೆ ಶಿಸ್ತು ಬಂದೇ ಬರುತ್ತದೆ. ಶಿಸ್ತು ಇದ್ದಲ್ಲಿ ಯಾವಾಗಲೂ ಸ್ವಾತಂತ್ಯ್ರ ಇರುತ್ತದೆ. ಕೂಗಿದರೆ, ಗೊಂದಲ ಮಾಡಿದರೆ ಶಿಸ್ತು ರೂಢಿಗೊಳ್ಳುವುದಿಲ್ಲ. ಶಾಂತವಾಗಿ ಕುಳಿತಾಗ ಮಾತ್ರ ಕೇಳಲು ಶಕ್ಯವಾಗುವುದು.

ಜೀವನದಲ್ಲಿ ಸ್ವಾತಂತ್ಯ್ರ ಹಾಗೂ ಶಿಸ್ತಿನ ಸಮಸ್ಯೆ ದೊಡ್ಡದು. ಇದೊಂದು ಸಂಕೀರ್ಣ ಸಮಸ್ಯೆ ನೀವು ಸ್ವತಂತ್ರರಾಗದೆ ಹೋದರೆ ಅರಳಲು ಶಕ್ಯವಿಲ್ಲ. ಪಕ್ಷಿ ಬಂಧನದಲ್ಲಿಟ್ಟರೆ ಹಾರಲು ಶಕ್ಯವಿಲ್ಲ. ಬೀಜ ನೆಲದ ಹೊರಗೆ ಬರಲು ಅನುಮತಿ ಸಿಗದೆ ಹೋದರೆ ಜೀವಿಸುವದಿಲ್ಲ. ಪ್ರತಿಯೊಂದು ವಸ್ತುವಿಗೆ ಸ್ವಾತಂತ್ಯ್ರ ಬೇಕು. ಮಾನವಜೀವಿಗಳು ಸ್ವಾತಂತ್ಯ್ರದಿಂದ ಭಯಭೀತರಾಗಿದ್ದಾರೆ. ಅವರಿಗೆ ಸ್ವಾತಂತ್ಯ್ರ ಬೇಡ.

ಪಕ್ಷಿಗಳು, ನದಿಗಳು, ಮರಗಳು ಸ್ವಾತಂತ್ಯ್ರ ಬಯಸುತ್ತವೆ. ಮಾನವನೂ ಕೂಡ ಬಯಸತಕ್ಕದ್ದು ಜೀವನದಲ್ಲಿ ತನಗೆ ಅನ್ನಿಸಿದ್ದನ್ನು ಅಭಿವ್ಯಕ್ತಿ ಪಡಿಸುವ ಸ್ವಾತಂತ್ಯ್ರ. ಇಷ್ಟ ಬಂದುದನ್ನು ಮಾಡುವ ವ ಸ್ವಾತಂತ್ಯ್ರ ಬಹಳ ಮಹತ್ವದ್ದಾಗಿದೆ. ಸಿಟ್ಟು ಅಸೂಯೆ, ಕ್ರೌರ್ಯ, ಪಾಶವೀಯತೆಯಿಂದ ಮುಕ್ತರಾಗುವುದು ಕಠಿಣ ಹಾಗೂ ಅಪಾಯಕಾರಿಯಾಗಿದೆ ಎಲ್ಲರೂ ಸ್ವತಂತ್ರರಿರುವದರಿಂದ ಸ್ವಾತಂತ್ಯ್ರ ಹಾಗೂ ಶಿಸ್ತು ಅವಿಭಾಜ್ಯವಾಗಿವೆ.