ಪಲ್ಲವಿ : ಕೃಷ್ಣ ಕೃಷ್ಣ ಅನ್ನಬೇಕು ಕಷ್ಟವೆಲ್ಲ ಮರೆಯಬೇಕು
ದುಷ್ಟಸಂಗ ಬಿಡಲು ಬೇಕು ಶಿಷ್ಟಸಂಗ ಬಯಸಬೇಕು

ಚರಣ :  ಅಷ್ಟೋ ಇಷ್ಟೋ ನಾಮವನ್ನು ಇಷ್ಟದಿಂದ ಮಾಡುವೆ
ಅರಿಷ್ಟವೆಲ್ಲ ದೂರ ಮಾಡಲೆಂದು ಭಜಿಸುವೆ
ನಿಷ್ಠೆ ಇಲ್ಲದಿದ್ದರೂ ರವಷ್ಟು ಭಕ್ತಿ ಇದ್ದರೂ
ಎಷ್ಟೋ ಬೇಗ ಮುಕ್ತಿ ಪಡೆದು ಧನ್ಯರಾದರು

ಬುದ್ಧಿಮಂದನಾಗಿ ನಾನು ಬಿದ್ದುಕೊಂಡು ಇದ್ದ ಸಮಯ
ಕೃಷ್ಣನಾಮ ಕೇಳಿದರೆ ಬ್ರಹ್ಮಲೋಕ ಪ್ರಾಪ್ತಿಯು
ಉಸಿರು ಆಡುವಾಗಲೆಲ್ಲ ತಿಳಿಯದಂತೆ ಕೃಷ್ಣನಾಮ
ಮಾಡಿದರೆ ನಿಶ್ಚಯವು ಜಯವು ನಿರತವು