ಪಲ್ಲವಿ : ಕೃಷ್ಣ ದೇವನೇ ನನ್ನ ಕಾವನೇ
ನಿನ್ನ ಭಜಿಪೆನು ನಿಜವ ತೋರಯ್ಯಾ

ಚರಣ :  ವೇಣು ವಾದನ ಕೇಳಬಂದೆನು
ನಾದ ಕೇಳಿಸಿ ಉದ್ಧರಿಸೆನ್ನನು  

ಕಂಸ ಮರ್ದನ ವಂಶ ರಕ್ಷಕ
ರಸ ಕ್ರೀಡಕ ಮಾಯಾ ವೇಷಕ

ಚಕ್ರಧಾರನೇ ಶಂಖ ಪೂರಕ
ಗದಾ ಪಾಣಿಯೇ ಪದ್ಮ ಹಸ್ತನೇ

ಗರುಡ ವಾಹನ ಪದ್ಮನೇತ್ರನೇ
ನೀಲ ವರ್ಣನೇ ನಿತ್ಯ ತೃಪ್ತನೇ

ಸಚ್ಚಿದಾನಂದನೇ ಸರ್ವಪಾಲನೇ
ಜಯವು ನಿನಗಯ್ಯ ಜಗನ್ನಾಥನೇ