ಮನೆ ದೇವರ ಹಾಡು
ಲೆಲ್ಲೋಲೇಲೋ ಹಾಡುವ
ಲೆಲ್ಲೋ ಲೇಲೋ ಹಾಡುವ

ಬಾಳಾಲಿ ಬಾಳಿ ನಾವೆಲ್ಲ
ಬಾಳಿ ಬಾಳಲಿ ನಮ್ಮಯ ಗುರುವು
ಮಾದೇವನೆ ಬಾಳಸಲೆಮ್ಮೆಲ್ಲ
ಬಾಳಲಿ ಬಾಲಲಿ ಮಹದೇವ

ಬಾಳು ಭೂಮಿ ಜನ್ಮದ ಭೂಮಿ
ಬಾಳಲಿ ಭೂಮಿ ಜಮ್ಮೊದ ಭೂಮಿ
ಬಾಳಾಲಿ ಜಂಬೂ ದ್ವೀಪದ ಭೂಮಿ
ಬೆಂಗ್ಲಿ (ಕೆಳಗೆ) ನಿಂತ ಭೂಮಿ ಇದರಲಿ
ಬೊಗ್ಗಿ ಕೆಳಗೆ ನಿಂತ ಈ ಭೂಮಿ ಮೇಲಿ
ಸ್ವಾಮಿ ಐವತ್ತು ನಾಡು ದೇಶದಿ
ಆದೇಶದೊಳಗೆ ಯಾವದದು ?
ಎಂದು ಕೇಳಿ ತಿಳಿಯುವ
ಈಮೇಲೆ ಕೊಡಗಿನಲ್ಲಿ ಅಮ್ಮಂಜತ್ತಿ ನಾಡಿನ
ನಾಡ ನಡುವಿನೊಳಗೆ

ಹಟ್ಟಿಯಂತ ಊರದು
ಈ ವಾರ ನಡುವೊಳೂ
ಏನೆಂದು ಕೇಳಿ ಅರಿಯುವ
ಯಾವುದೆಂದು ತಿಳಿಯುವ
ಹೊಳೆವ ಮಾಲೆ ದೇವಿಯು
ಹೊಳೆವ ಮಾಲೆ ದೇವಿಯು
ಎಲ್ಲಾ ನೆಲೆಯ ಪಡೆದಳೊ
ನೋವು ಮೇವ ಜಾಗದಲ್ಲಿ
ಅಲ್ಲಿ ಬಂದು ನಿಂದಿರೆ
ಹೊತ್ತಲ್ಲದ ಹೊತ್ತಿನಲ್ಲಿ
ದೇವರನ್ನೆ ಕೇಳಲೆಂದು
ಓಡಿ ಹಾರಿ ಬರುವಲ್ಲಿ
ಓಡಿ ಹಾರಿ ಬಂದಾಗ
ದೇವರಾಣೆ ಕೈಗೊಂಡು
ತಂಬು ಕುಟ್ಟು ಕುಟುಂಬದಿ
ಬಣ್ಣ ಕುಟ್ಟು ಕುಟುಂಬದಿ
ಒಳ್ಳೆ ನಾಡು ಕಂಡಲ್ಲಿ
ನೆರೆಯ ಪಡೆದು ನಿಂತಲ್ಲಿ
ಊರಿನವರು ಸೇರಿಕೊಂಡು
ಮೀನ ಮಾಸ ಮುಗಿಯುವಲ್ಲಿ
ಹಬ್ಬವನ್ನು ಮಾಡ್ವರು

ಮುತ್ತಿನಂತ ಮುಹೂರ್ತದಲ್ಲಿ
ಮಾಲೆಯಂತೆ ಹಬ್ಬವು
ಮಾಲೆಯಂತೆ ಮಂಗಲವು

ಉಮ್ಮತ್ತಾಟೆ ಹಾಡು

ಲೆಲ್ಲೋಲೆಲ್ಲ……ಹಾಡುವ
ಲೆಲ್ಲೋಲೆಲ್ಲ……ಹಾಡುವಾಗ
ಯಾವುದದು ವೆಂದಲ ಹಾಡು?
ಬಾಳಲಿ ಬಾಳಲಿ ನಾವು ಎಲ್ಲರು
ಬಾಳಲಿ ಬಾಳಲಿ ಮಾದೇವರು

ಬಾಳಲಿ ಭೂಮಿ ಜನ್ಮದ ಭೂಮಿ
ಬಾಳಲಿ ಭೂಮಿ ಜಮ್ಮದ ಭೂಮಿ
ಬಾಳಿ ಜಿಂಬೂ ದ್ವೀಪದ ಭೂಮಿ
ಈಜಂಬೂ ದ್ವೀಪದ ಭೂಮಿಯಲಿ
ಈ ಜಂಬೂ ದ್ವೀಪದ ಭೂಮಿಯ ಮೇಲೆ
ಎಂತದೆಲ್ಲ ಕತೆಏನು ಸೋಜಿಗ
ಈ ಜಮ್ಮದ ಭೂಮಿಯ ಮೇಲೆ
ವರುಷಕೊಂದು ಬಾರಿ ಕಾಣಲು

ಜರತಾತಿ ಉಟ್ಟ ಸಿಂಗಾರಿಯಂತೆ
ಅಮ್ಮಂಜತ್ತಿ ನಾಡ ಊರಿದು
ಲೇಲೆಲ್ಲ ಹಾಡು ಮಾಲೆ ಮಾಲೆ
ಪೊಮ್ಮಾಲೆ ಕೊಡಗಿನಲ್ಲಿ
ನಾವು ನಾಲ್ವರು ಮಕ್ಕಳಿಹೆವು
ಪೊವ್ವೊದಮ್ಮೆ ದೇವಿಗೆ
ತುಂಬುಕುಟ್ಟ ನಿಂತ ಊರಿದು
ಕೆಂಪು ನೆಲದ ನಾಡಿನಲ್ಲಿ
ಬಂದು ನಿಂತ ಊರಿದು
ಇಂದು ಬೇಡಿ ದೇವರ
ಜ್ಯೋತಿ ಇರಲು ಮುಂದೆಯೆ
ನಾಲ್ಕು ಶಬ್ದ ನಮಗೆ ತೋಚಿ
ತಾಳ ಮೂರು ಬಾರಿ ಹಾಕಿ
ಹಾಡುವ ಚಂದ ಹಾಡುತಿರುವ
ನಮ್ಮ ತಪ್ಪು ನೆಪ್ಪು ಇಡಲು
ಪೊವ್ವೆದಮ್ಮ ದೇವಿ ನೆತಿಯು
ಕೆಂಪು ಮಣ್ಣು ಹಟ್ಟಿಗಿರಲು
ಕಿಲ್ಲಿ ತಪ್ಪು ನೆಪ್ಪು ಇಡುವೆವು

ದೇವಿ ಮೇಲೆ ಹಾಡಲೆನಲು
ದೇವಿ ಭಕ್ತಿ ಹಾಡಲೆನಲು
ನಾಲೆನಿನ್ನೆ ದೊರಕದದೆನೆ
ಹಾಸಿ ಆಗದಿರಲು ನವೆನೆ
ಇಂದೆ ಹಾಡ ಚಂದ ಹಾಡುವ
ಹೂವ ಮುಡಿಸಿ ಗಂಧ ಹಚ್ಚಿ
ಹಾಡ ಹಾಡಿ ಹಾಡ ಇಡುವವ
ಆದಿ ಮೂಲನೆ ಅಮೂಲಾಗ್ರನೆ ಲೆಲ್ಲೆಲೋ

(ಅಮ್ಮತ್ತಿ ಬಿಳುಗುಂದದ ಎತ್ತು ಕುಟ್ಟಡ ಮುತ್ತಪ್ಪ ಹಾಇದವರರು)

ಮಗು ತೂಗುವ ಹಾಡು

ಜೂಜೂ ಮಾಡವ್ವ ಚಂದದ ಮಗುವೇ
ಬೇಸರ ವಿಲ್ಲದೆ ಚಂದದ ತೊಟ್ಟಿಲ
ಒಳಗೆ ಮಲಗವ್ವ ಸುಖದಿ ಮಗುವೇ
ಜೂಜು ಮಾಡವ್ವ ಚಂದದ ಮಗುವೇ

ಅವ್ವನ ಮೋಹದ ಮಗುವೆ ನೀನು
ಅಪ್ಪನ ಆಟದ ಮಗುವೆ ನೀನು
ದೇವರ ಮುತ್ತಿನ ಮಗುವೆ ನೀನು

ಜೂಜೂ ಮಾಡವ್ವ ಮಗುವೇ
ಮನೆಗೆ ಜೋಡಿಮಾಲೆ ತೆರದಿ ಬೆಳೆದು
ಮನಕೆ ನೀನೆ ಕಾಂತಿ ನೀನೆ ಶಾಂತಿ
ಜನಕೆಲ್ಲ ನೀನೆ ಪ್ರೀತಿಯ ಮಗುವು
ಜೂಜೂ ಮಾಡವ್ವ ಮಗುವೇ

ಹತ್ತಿ ತಿಂಗಳ ಹೊತ್ತು ಹೆತ್ತ ಕೂಸಾಗಿ
ನೆತ್ತಿಯ ಕಣ್ಣಾಗಿ ತಿಳಿವನು ತಂದಿರುವೆ
ಸತ್ಯದಿಂದಲಿ ಬಾಳು ಮುತ್ತಿನ ಮಗುವೆ
ಜೂ ಜೂ ಮಾಡವ್ವ ಮಗುವೆ

ಮನುಜರ ಮಾಣಿಕ್ಯ ಒಕ್ಕದ ಚಾಣಿಕ್ಯ ಮುಕ್ಕೆಣ್ಣ ಎಂದೂನು ಪೊರೆಯಲಿ ವಿನ್ನ ಮುಕ್ಕಣ್ಣ ಎಂದೊನು ಪೊರೆಯಲಿ ನಿನ್ನ ಜೂ ಜೂ ಮಾಡವ್ವ ಚಂದದ ಮಗುವೆ

 

ಹುಲುಕೋಡಯ್ಯನ ಪ್ರೇಮ ಪ್ರಸಂಗದ ಹಾಡು

ಒಂದಕ್ಕ ಬೆಳೆಯ ಖಂಡುಗ ಗದ್ದೆ ಬಯಲು
ಮಾದ್ದಿತ್ತಿ ಬಂದಳು ಹಿಡಿಲ ಹೊತ್ಕೊಂಡು
ಊರ ಮುಂದೆ ಬರುವಾಗ ಸ್ವಾಮಿ ಹುಳ್ಕೊಡಯ್ಯ
ಊರ ಕಟ್ಟಿಯ ಮೇಲೆ ಕುಳಿತಿದ್ರು ಯಾವ ಸೂಳೆ
ಬರುವಳು ಎಮದು ಕಟ್ಟಿಂದ ಕೆಳಗೆ ಇಳಿದರು
ಹಿಡಿಲನು ಕೇಳಿ ಗುಡಿಸಲಿಗೆ ಬೇಕು ಅಮದರು
ಹಿಡಿಲನು ತೆಗೆದು ಅಂಗೇಯ ಕಳಿಸಬ್ಯಾಡಿ
ಅವಳಿಗೆ ಹಾಲು ಅನ್ನವ ಊಟಕೆ ಇಡಿ.

ತಲೆಗೆ ಎಣ್ಣೆಯು ಹಾಕಿ ಕ್ಯಾಸಕ್ಕಿ
ಮಡಿಲಕ್ಕೆ ಒಂದು ಪಡಿ ಉಯ್ಯಿರಿ ತಾಯಿ
ನೀನು ಇನ್ನು ಅವಳಿಗೆ ದಾರೀಯ ತೋರಿ ಬರುತೇನಿ
ಅವರ ತಾಯಿಗೇನ ಹೇಳಿ ಅವಳ ಹಿಂದೆ ಬಂದರು
ದಾರಿ ಬುಟ್ಟುದಾರಿ ತೋರಿಸಿ ಹೋಗುವಾಗ

ಇದ್ಯಾಕ ಸ್ವಾಮಿ ಬ್ಯಾಡ ದಾರಿ ಬ್ಯಾಕಿ
ದಾರಿ ಬುಟು ಟೀಕೆ ತೋರಿಸ ಬ್ಯಾಡ
ದಾರಿ ಬುಟ್ಟು ದಾರಿ ತೋರಿಸೋಕೆ ಬಂದೋ
ನಾವು ನಿನ್ನ ಒಪ್ಪಿದೀವಿ ಬರಿಗೈಲಿ ಬಾಸೆ ಕೊಡೆಣ್ನೆ
ನೀವು ಹೆಂಡರು ಮಕ್ಕಳು ಉಳ್ಕೊರು ಸ್ವಾಮಿ
ನೀವು ತಾಯಿ ತಂದೆ ಉಳ್ಳೊರುಸ್ವಾಮಿ
ನಾನು ಪರಕಲು ಟಾಸೆ ಎಂಗೆ ನೀಡಲಿ ಸ್ವಾಮಿ
ತಂದೆ ಇದ್ದರೆ ಇರಲಿ, ಮಕ್ಕಳು ಇದ್ದರೆ ಇರಲಿ
ಹೆಂಡತಿ ಇದ್ದರೆ ಇರಲಿ, ತಾಯಿ ಇದ್ದರೆ ಇರಲಿ
ಯಾರು ಇದ್ದರೆ ಇರಲಿ ಕೊಡು ಹೆಣ್ಣೆ ಬಲಗೈ ಬಾಸೆಯ

ಬಾಸೆಕೊಟ್ಟಳು ಮಾದಿಗಿತ್ತಿಯು ಆಗ
ನುಡಿದರು ಡುಲುಕೋಡಯ್ಯ
ನಿನ್ನ ಹಲ್ಲು ನೋಡಿದರೆ ಸೀಗೆಬಿತ್ತ
ನಿನ್ನ ನಾಲಗೆ ನೋಡಿದರೆ ಬಿಂಕದ ತುಟಿಯು
ನಿನ್ನ ಹುಟ್ಟು ನೋಡಿದರೆ ಕಾಮನಬಿಲ್ಲು
ನಿನ್ನ ತೋಳು ನೋಡಿದರೆ ಉಂಗುರ ಹಿಡಿಸದು
ನಿನ್ನ ಕಾಲು ನೋಡಿದರೆ ಕದಳಿ ಕಂಬ
ಬಲಗೈ ಬಾಸೆಯ ಕೊಟ್ಟರು ಬಾಸೆಯ ತೆಗೆದರು
ಸ್ವಾಮಿ ತೊದೆತಟ್ಟಿ ಹಾಕಿ ಹೊಡೆದರು
ಅವರ ಸೆಣಸಿನ ಗುಡಿಸಿಗೆ ಕೂರಸಿ
ಬೆಲ್ಳಿಯ ಕೊಡೆಯ ಮಾಲೆ ಮಾಡು ತಮ್ಮ
ಅರಮನೆಗೆ ದಯಮಾಡಿಸಿ ಹೋದರು.

ಭತ್ತದ ಕೋರಣ್ಯಕ್ಕೆ ಹೋಗಿದ್ದೆ ಮಹಡಿ
ಭತ್ತದ ಕಾಳು ಸಿಗಲಿಲ್ಲ
ನಿನ್ನೆ ವಜ್ರದ ಬಾಗಿಲ ತೇಗೀ ಬಾಕಿ
ವೆಂಕಲ ದೇಶಕ್ಕೆ ಹೋಗಿದ್ದೆ ಮಡದಿ
ರಾಗಿ ಕೋರಣ್ಣ ಹೋಗಿದ್ದೆ ಮಡದಿ
ರಾಗಿಯೇ ಕಾಳು ಸಿಗಲಿಲ್ಲ ನಿನ್ನ ವಜ್ರದ ಬಾಗಿಲು ತೆಗಿಯೆ ಮಡದಿ
ಬಣ್ಣ ಬಣ್ಣಾದ ಮಾತ ಬಲ್ಲೆ ಸ್ವಾಮಿ
ಮಾದಿಗಿತ್ತೀನ ಗೆಣಸಿನ ಗುಡಿಯಲಿ
ತೂರಿಸಿ ಅರಮನೆಗೆ ಬಂದಿರಸ್ವಾಮಿ
ಆಗ ಮುಚ್ಚಿದ ಬಾಗಿಲ ಒದ್ದರು ಸ್ವಾಮಿ
ಒದ್ದು ಬೀಳಿಸಿ ಒಳಗೆ ಹೋದರು ಸ್ವಾಮಿ
ವಜ್ರದ ಮತ್ತು ರನ್ನ ಎಲ್ಲವಗಂಟು
ಕಟ್ಟಿಕೊಂಡು ರಾತ್ರಿ ಒಂದು ಗಂಟೇಲಿ
ಸೂಳೆ ಕಟ್ಟಿಗೆ ಬಂದು ನಿಂತರು.

ಕತೆಗಳು
ಪೌರಾಣಿಕ ಕಥೆಗಳು
ಬೈತೂರಪ್ಪನ ಕತೆ

ಇದು ಕೇರಳದಲ್ಲಿ ಕಿರಾತಶಿವ, ಅರ್ಜುನರ ನಡುವೆ ನಡೆದ ತಾಳಗದ ಕತೆ ಅವರಿಬ್ಬರ ನಡುವೆ ಆದ ಯುದ್ಧದಲ್ಲಿ ಶಿವ ಕೆಳಗೆ ಬಿದ್ದ. ತಲೆಗೆ ಕಲ್ಲು ತಾಗಿತು ರಸ್ತೆ ಬಂತು. ಆಗ ಪಾರ್ವತಿ ಅರ್ಜುನನೇ ಹೇಳಿ ಹಸುವಿನ ತುಪ್ಪ ತರಿಸಿ ಗಾಯಕ್ಕೆ ಲೇಪಿಸಿದಳಂತೆ, ಶವ ಬಿದ್ದ ಸ್ಥಳದಲ್ಲಿ ಶಿವಲಿಂಗ ಉದ್ಭವವಾಯಿತು. ಶಿವ ಬಿದ್ದ ಊರು ಬಿದ್ದೂರು ಆಗಿ ನಂತರ ಬೈತೂರು ಆಯಿತು. ಅಲ್ಲಿ ಮೂಡಿದ ಶಿವಲಿಂಗ ಬೈತೋರಪ್ಪ ಆಯಿತು. ಅರ್ಜುನನಿಗೆ ಆಗ ಪಾಶು ಪತಾಸ್ತ್ರವೂ ಅಲ್ಲಿ ದೊರೆಯುವಂತೆ ಆ ಬೈತೂರಪ್ಪನಿಗೆ ಹರಕೆ ಬೈವಾಡಾಗಿ ಹಾಲು, ಹಸುವಿನ ತುಪ್ಪ,, ಅಕ್ಕಿ ಹೇರಿನ ಎತ್ತು ಹೊರಳವನ್ನು ಕೊಲ್ಲಿ ಬೋಟಿ ಬಳಿ ಪ್ರಾರ್ಥಿಸಿ ಬಯ್ಯುವರಂತೆ.

ಕೇರಳದಲ್ಲಿ ನಿಂತ ಆಬೈತೂರಪ್ಪನಿಗೆ ಕೊಡಗಿನ ಮೇಲೆ ಬಹಳ ದುಷ್ಟಿಯಿಂತೆ. ಅಂತಹ ಕಷ್ಟ ನಷ್ಟಿಗಳ ಸಂದರ್ಭದಲ್ಲಿ ಪ್ರಣಾಳಿಕೆ ಸಮಯದಲ್ಲಿ ಮೃತ್ಯುಂಜಯ ಜಪ ಮಾಡಿ ಹರಕೆ ಬೈವಾಡು ಒಯ್ದು ಅಲ್ಲಿಂದ ತುಪ್ಪ ಪ್ರಸಾದ ತರುವಂತೆ ರೋಗಿಗೆ ಹಚ್ಚಿಸಿದರೆ ಒಳಿತಾಗುವುದಂತೆ ಕೆಂಬಟ್ಟಿಗಳಿಗೂ ಇದೇ ನಂಬಿಕೆ ಇದೆ.

ಕಾವೇರಮ್ಮ ಕಥೆ

ಕೆಂಬಟ್ಟಿಗಳಲ್ಲಿ ಕಾವೇರಿಯ ಕುರಿತಾದ ಕತೆ ಅವರ ಜನಪದ ಹಾಡಿನಲ್ಲಿ ಬರುತ್ತದೆ. ಸ್ಕಾಂದ ಪುರಾಣದ ಸಂಸ್ಕೃತೀಕರಣದ ಕತೆಯ ಸರಳರೂಪವೋ, ಮೂಲರೂಪವೋ ಆಗಿ ಕೆಲಮಟ್ಟಿಗೆ ವಿಭಿನ್ನತೆಯನ್ನು ಹೊಂದಿದೆ.

ಕೊಡಗಿನ ಕಾವೇರಿ ಬ್ರಹ್ಮಗಿರಿಯಲ್ಲಿ ಹುಟ್ಟಿದ್ದಾಕೆ. ಬ್ರಹ್ಮದೇವರಾಯ ಸಾಕಿದಂತ ಮಗಳು. ಅಗಸ್ತ್ಯ ಹಾಗೂ ಕದ್ಯಪ ಮುನಿಗಳು ಕಾವೇರಿಯ ಚೆಲುವಿಗೆ ಮರುಳಾಗುತ್ತಾರೆ. ಇಬ್ಬರಿಗೂ ಆಕೆಯ ಮೇಲೆ ಕಣ್ಣು. ಕೊನೆಗೆ ಚೆಲುವಿಗೆ ಮರುಳಾಗುತ್ತಾರೆ. ಇಬ್ಬರಿಗೂ ಆಕೆಯ ಮೇಲೆ ಕಣ್ಣು. ಕೊನೆಗೆ ಅಗಸ್ತ್ಯಮುನಿಯೊಡನೆ ಅವಳದು ಮದುವೆ ಆಗುತ್ತದೆ. ಜಾತಕವಿಲ್ಲದಿದ್ದಾಗ ಹೂವನ್ನು ಎತ್ತಿ ಮದುವೆಯನ್ನು ನಿರ್ಧರಿಸಿ ಮಾಡುವುದೇ ಹೂ ಮದುವೆ. ಕಾವೇರಿಯನ್ನು ಹೂ ಮದುವೆ ಮಾಡಿಕೊಂಡ ಅಗಸ್ತ್ಯನು ಕಾವೇರಿಗೆ ನುಡಿಯುತ್ತಾನೆ. ಕನ್ನಿಕೆ ನದಿಯಲ್ಲಿ ಮಿಂದು ಬರುತ್ತೇನೆ. ಹಿಂದಿರುಗಿ ಬರುವವರೆಗು ನನ್ನನ್ನು ಕಾಯುತ್ತಿರುವ ಎನ್ನುತ್ತಾನೆ. ಆದರೆ ಕಾವೇರಿ ಶರತ್ತು ಹಾಕುತ್ತಾಳೆ. ಅಗಸ್ತ್ಯನು ಕನ್ನಿಕೆಯಲ್ಲಿ ಮೀಯುತ್ತಿರುವಲ್ಲಿ ಮೂರು ಬಾರಿ ಕೂಗುತ್ತೇನೆ. ಅದನ್ನು ಕೇಳಿಸಿಕೊಂಡು ಅಷ್ಟರಲ್ಲಿ ಹಿಂದಿರುಗಿ ಬಂದರೆ ಅವನೊಡನೆ ಹೆಂಡತಿಯಾಗಿ ಬಾಳ್ವೆ ಮಾಡುತ್ತೇನೆ. ಇಲ್ಲವಾದರೆ ನೀರಾಗಿ ಹರಿದುಹೋಗುತ್ತೇನೆ ಎಂದು ಎಚ್ಚರಿಸಿ ನುಡಿಯುತ್ತಾಳೆ. ಆಗ ಭಾಷೆಯನ್ನು ಇಡುತ್ತಾಳೆ. ಆದರೆ ಅಗಸ್ತ್ಯನು ಮಾತಿನಂತೆ ನಡೆದುಕೊಳ್ಳಲಿಲ್ಲ. ಅಲ್ಲದೆ ಹೊಂಗೆಳಶ ಪಾತ್ರೆಯನ್ನು ನೂರೊಂದು ಬ್ರಾಹ್ಮರಣ ಕೈಯಲ್ಲಿ ಕೊಟ್ಟು, ಕಾವೇರಿಯನ್ನು ಅದರಲ್ಲಿ ಮರೆಮಾಡಲು ಹೇಳಿ ದಂಡವನ್ನಿಟ್ಟು ತಡೆ ಕಟ್ಟಿ ಹಾಕಿರುತ್ತಾನೆ.

ಕಾವೇರಿ ಮೂರು ಬಾರಿ ಅಗಸ್ತ್ಯನು ಕನ್ನಿಕೆಯಲ್ಲಿ ಮೀಯುವಾಗ ಕರೆಯುತ್ತಾಳೆ. ಅಗಸ್ತ್ಯ ಬರುವುದಿಲ್ಲ. ಬ್ರಾಹ್ಮಣರು ಹೊಂಗಳಶ ಪಾತ್ರೆಯನ್ನು ಓಡಿ ಅಗಸ್ತ್ಯನ ಬಳಿ ತರುವಲ್ಲಿ ಹೆಜ್ಜೆ ತಪ್ಪಿ ಬೀಳುತ್ತಾರೆ. ಆಗ ಪಾತ್ರೆ ಒಡೆದು ಹೋಗುತ್ತದೆ. ಕಾವೇರಿ ಅಲ್ಲಿಂದ ಉಕ್ಕಿ ಹೊಳೆಯಾಗಿ ಹರಿದು ಹೋಗುತ್ತಾಳೆ.

ಈ ಸರಳ ಕತೆಯ ಸಂದರ್ಭದಲ್ಲಿ ಅಗಸ್ತ್ಯ ಕಾವೇರಿಯ ನಡುವಿನ ಮಾತುಗಳ ಸಾಕ್ಷಿಯಾಗಿ ಕೆಂಬಟ್ಟಿಗಳ ಕುರಿತ ಕತೆ ಇದೆ. ಈ ಮಾತು ಕತೆಗಳಲ್ಲಿ ಅಗಸ್ತ್ಯರ ಪರವಾಗಿ ಅಮ್ಮಕೊಡವರು, ಮಾರಂಗಿ ಹಾಗೂ ಮೇದರು ನಿಂತರಂತೆ. ಕಾವೇರಿ ಪರ ಸಾಕ್ಷಿಯಾಗಿ ಕೊಡವರು ಮತ್ತು ಕೆಂಬಟ್ಟಿಗಳು ನಿರಂತರಂತೆ ಕೊನೆಗೆ ಕಾವೇರಿ ಗೆದ್ದಳು. ಅಂತಾಗಿ ಅವರ ಪರವಾಗಿ ನಿಂತವರ ಆರೊಕ್ಕಲು ನೂರೊಕ್ಕಲಾಗಲಿ ಎಂಬ ವರವನ್ನು ಕಾವೇರಿ ನೀಡಿದಳಂತೆ. ಕೆಂಬಟ್ಟಿ ಎಂಬ ಹೆಸರನ್ನು ಆಕೆ ಹೋಗುವಾಗ ಕೆಂಬಟ್ಟಿಯವರಿಗೆ ನೀಡಿದಳಂತೆ. ಅವರು ಕೇಚಕ್ಕಿ ಕೂಳಿನವರು ಎಂದಳಂತೆ, ಸೊಪ್ಪು ಸಾರು ಕೇಚಕ್ಕಿ ಅನ್ನ ಅವರು ಊಟ ಮಾಡಲಿ, ಹೆಣ್ಣು ಮಣ್ಣು ಅನ್ಯರಿಗೆ ಕೊಡಕೂಡದು ಎಂದಳಂತೆ. ಹೀಗಾಗಿ ಕೊಡವರ ಪದ್ದತಿ ಆಚಾರ ಇವರಿಗೂ ಇದೆ.

ದೇವಮಕ್ಕಳ ಜನಪದ ಕತೆಗಳು

ಪನ್ನಂಗಾಲ ತಮ್ಮೆಕತೆ : ಪಟೋಲಿ ಪಳಮೆಯಲ್ಲಿ ಎವ್ವ ಮಕ್ಕದೇಬುವಡ ಪಾಟ್‌ನಲ್ಲಿ ಬಹಳ ವಿವರವಾಗಿ ಆಕೆಯ ಹುಟ್ಟು ಬೆಳವಣಿಗೆನಿಂತನೆಲೆ, ಅಣ್ಣಂದಿರನೊಡನಾಟದ ಸಂಬಂಧವಾರಿ ಬಂದಿದೆ. ಆ ಕುರಿತ ಹಾಡನ್ನೂ ಹಾಡಿನ ವಿಭಾಗದಲ್ಲಿ ಕೃತಿಯಲ್ಲಿ ನೀಡಲಾಗಿದೆ. ಅದು ತೀರ ಸರಳೀಕರಣಗೊಂಡು ಕೆಂಬಟ್ಟಿಯವರಲ್ಲಿರುವ ಒಂದು ಮಾದರಿಯಲ್ಲಿದೆ. ಹಾಡಿನ ಕತೆ ಹೀಗಿದೆ.

ಮಾಣಿಕ್ಯ ಮಲನೆನಾಡೆನಿಸುವ ಮಾಂಡಾಳೋ ದೇಶ ಐದು ಖಂಡದ ಭೂಮಿಯಾಗಿದೆ. ಅಲ್ಲಿನ ಹಾಲ್ಗಡಲ ನಾಡು ಒಳ್ಳೆಯ ಹೆಸರು ಪಡೆದಂತ ನಾಡಾಗಿದೆ. ಅಲ್ಲಿ ಪನ್ನಂಗಾಲ ತಮ್ಮೆ ಸೂರ್ಯನಂತೆ, ಮಹಾಮಾಯದಿಂದ ಹುಟ್ಟಿದಳು, ಬೆಳೆದಳು, ಅದು ಹೀಗಿದೆ.

ಜತ್ತಾಲ ಮರದ ಕೊಂಬೆಗಳ ಗೆಲ್ಲುಗಳನ್ನು ಹೊಂದಿವೆ. ಪೂರ್ವ ಹಬ್ಬಿದಂತ ಕೊಂಬೆಯಲ್ಲಿ ಶಂಖಗಳು ಇದ್ದುವು. ಗಾಳಿಯು ಜೋರಾಗಿ ಬೀಸಿದಾಗ ಕೊಂಬೆಗಳು ಪರಸ್ಪರ ತಾಗಿದುವು. ಶಂಖಗಳು ಪರಸ್ಪರ ತಾಗಿದವು. ಆಗ ಕೊಂಬು ಊದಿದಂತಹ ಶಬ್ದ ದುಡಿಯನ್ನು ಬಡಿದ ಶಬ್ದವು ಬಂದಿತು. ಅದು ದೇವಿಯ ಅವತಾರವನ್ನು ತೋರಿತು. ಆಕೆಯೇ ಪನ್ನಂಗಾಲ ತಮ್ಮೆ. ಆಕೆಯ ಬರವಿಗಾಗಿ ಅರಮೇರಿ ಕೋರಿಯೇ ಕಾದು ನಿಂತಿತ್ತು. ದೇಶವನ್ನೆಲ್ಲ ಸುತ್ತಿ ಕೊನೆಗೆ ಆನೆ ಇಟ್ಟಂತ ನಾಡಾಗ ವಜ್ರದಂತಹ ಕಳೆಯುಳ್ಳ ಅರಮೇರಿಗೂ ಬಂದು ನೆಲೆಯೊಂದನ್ನು ಇಟ್ಟಳು. ಅಲ್ಲಿ ಗುಡಿಯಲ್ಲಿದ್ದು ಎಲ್ಲರನ್ನೂ ಬಾಳಿಸುತ್ತ ಬಂದಿದ್ದಾಳೆ.

ತಾಕೋಟಚ್ಚನ ಕತೆ

ಪಟ್ಟೋಲೆ ಪಳಮೆಯಲ್ಲಿ ಬರುವ ಇಬ್ಬ ಮಕ್ಕದೇಬುವಡ ಪಾಲ್‌ನಲ್ಲಿ ಬರುವ ಕತೆಯಲ್ಲಿ ಕೊಂಬ ಮೀಸೆ ದೇವಯ್ಯ ಕಾಕೋಲಚ್ಚನಾಗಿ ಅವರ ತಂಗಿ ಅಕ್ಕವ್ವನಾಗಿ ಕೆಂಬಟ್ಟಿ ಕಾರಿಕೊಟ್ಟ ಚಾಂಡಾಳನೊ ದೇವರಾಗಿ ಕಾಕೋಟು ಪರಂಬುವಿನಲ್ಲಿ ನಿಂತ ಪೂರ್ಣ ವಿವರದ ಜನಪದ ಕತೆ ಇದೆ.

ಏಳು ಕಡಲುಗಳ ನಡುವಿನ ಹಾಲು ಕಡಲಿನಲ್ಲಿ ಕೊಂಬು ಮೀಸೆ ಅಚ್ಚಯ್ಯ, ಮುತ್ತಿನ ಕೊಡೆಯ ಅಕ್ಕವ್ವ, ಹುಟ್ಟಿದ್ದು ಹೀಗಿದೆ. ಮರಳಿನ ಮೇಲೆ ಹಾವಸೆ ಬೆಳೆದು ಅದರ ಮೇಲೆ ಕೆಂಪುಹುತ್ತ ಬೆಳೆಯಿತು. ಹುತ್ತದಿಂದ ಚಿತ್ತಾಲ ಮರವು ಹುಟ್ಟಿ, ಕೊಂಬೆಗಳು ವಿಶಾಲವಾಗಿ ಹರಡಿ ಬೆಳೆದವು. ಜೋರಾಗಿ ಗಾಳಿ ಬೀಸಿದಾಗ ಕೊಂಬೆಗಳು ತಾಗಿ ಅವುಗಳಲ್ಲಿದ್ದ ಹಾಲು ಸೋರೆಕಾಯಿಯಿಂದ ಈ ಇಬ್ಬರು ದೇವ ಮಕ್ಕಳು ಹುಟ್ಟಿದರು. ಅವರು ಬೆಳೆದ ಮೇಲೆ ಕೇರಳವನ್ನು ಬಿಟ್ಟುಕೊಡಗಿಗೆ ಬರುವಲ್ಲಿ ಕಂಬಕ್ಕೆ ಗಿಡುಗನ ಸಹಾಯದಿಂದ ಏರಿ ಬಂದು ತಣ್ಣಾನುರಿನಲ್ಲಿ ಇಳಿದರು. ನಂತರ ಕೇರಳದ ಊರುಗಳನ್ನು ದಾಟಿ, ಯಾವ ದೇವರುಗಳು ತಡೆದರೂ ನಿಲ್ಲದೆ ದಾಟಿ ಕೊಡಗಿನ ಕಾಡುಗಳನ್ನು ಹೊಕ್ಕರು. ಅಂತಹ ಒಂದು ಕಾಡಿನಲ್ಲಿ ಬಾಚಾಮ್ಮಂಡ ಒಕ್ಕದಾಳು ಕೆಂಬಟ್ಟಿ ಕಾರಿಕೊಟ್ಟ ಚಾಂಡಾಳನು ಮರ ಕಡಿಯುತ್ತಿರುವದನ್ನು ಕಂಡರು. ದಾರಿ ತಪ್ಪಿ ಹೋಗಿದ್ದು ತೋರಿಸಲು ಹೇಳಿದರು. ಈರ್ವರ ತೇಜೆಸ್ಸನ್ನು ಕಂಡು ನಮಿದು ಅವರೊಡನೆ ಅವನೂ ಹೊರಟನು. ಆಗ ಕಾರ್ಯಪ್ಪ ಎಂಬ ಹೆಸರು ಹೊತ್ತು ಆ ದೇವ ಮಕ್ಕಳಲ್ಲಿ ಒಬ್ಬನಂದನು. ಹೀಗೆ ಮೂರುದೇವ ಮಕ್ಕಳಾಗಿ ಕೊಡಗಿನ ವಿವಿಧ ಭಾಗಗಳನ್ನು ಸಾಗುತ್ತಾ ಸೂಕ್ತ ನೆಲೆಯಲ್ಲಿ ನಿಲ್ಲಲು ಅರಸುತ್ತ ಬರುತ್ತಿದ್ದರು. ಇಗ್ಗತಪ್ಪ ದೇವರ ನೆಲೆ ಪಾಡಿ ಹಾಗೂ ಪಲೂರಪ್ಪನ ನೆಲೆ ಪಾಲೂರು ತಮಗೆ ಸೂಕ್ತವಾಗದೆಂದು ಆನೆ ಬೆಪ್ಪು ನಾಡಿನ ನಾಲ್ಕೇರಿ ಊರ ಬಳಿ ಬಂದರು. ಅಲ್ಲಿಂದ ದನಕಾಯ್ದ ಮಕ್ಕಳ ಮೇಲೆ ಮೈದೋರಿ ಬಂದರು. ಅದನ್ನು ತಿಳಿದ ಅಮ್ಮಂಡಿರ ಮನೆತನದ ಹಿರಿಯನು ಊರಿನವರೊಡನೆ ಬಂದು ಮೈದೋರಿದ ದೇವತೆಗಳನ್ನು ಪ್ರಾರ್ಥಿಸಿದರು. ದೇವ ಮಕ್ಕಳ ಬಯಕೆಯಂತೆ ನೆಲೆಕೊಟ್ಟ ಗುಡಿಕಟ್ಟಿದರು. ಆ ದೇವ ಮಕ್ಕಳು ತಾಕೋಟಪಚ್ಚ ದೇವಯ್ಯ, ಮುತ್ತಿನ ಕೊಡೆ ಅಕ್ಕವ್ವ, ಕಾರ್ಯಪ್ಪ ಎಂದು ಹೆಸರಾದರು. ಕೆಂಬಟ್ಟಿ ಹರಿಜನ ಕಾರಿಕೊಟ್ಟ ಚಾಂಡಾಳನು ಹೀಗೆ ಕಾರ್ಯಪ್ಪನಾಗಿ ಪೂಜೆಗೊಂಡನು. ವಾರ್ಷಿಕವಾಗಿ ಅವರುಗಳಿಗೆ ಪೂಜೆ ನಡೆಸಿ ಹಾಡಬೇಕೆಂದು ಊರಿನವರು ತೀರ್ಮಾನಿಸಿದರು.

ಕಾಕೋಟಚ್ಚಪ್ಪನು ಕಾಲಭೈರವನ ಅವತಾರವೆಂದು ಅಲ್ಲಿನ ಜನಪದರ ನಂಬಿಕೆಯಾಗದೆ. ಕೆಂಬಟ್ಟಿಗಳಲ್ಲಿ ಈ ಕತೆ ಇನ್ನೂ ಸರಳಗೊಂಡಿದೆ. ಕಾರ್ಯಪ್ಪನ ಕಾರಣವಾಗಿ ಕಾಕೋಟಚ್ಚಪ್ಪನ ಆರಾಧನೆ ಇದೆ. ಕೇರಳದ ಬೈರೂರಪ್ಪನ ಜೊತೆ ಹೊಂದಿಸಿಕೊಂಡ ಜಿಂಕೆ ಮಾವನ ಮಾರ್ಕಂಡೇಯನ ಕತೆಯೊಡನೆ ಮಿಳಿತಮಾಡಲಾಗಿದೆ.

ಗಾದೆಗಳು

೧. ಅಪಕುಳ್ಳಿದಾ ಯೊಂವಿ ಬರತಿತ್‌ಬಿತ್ತುವೆ.
– ಬಿತ್ತಲು ಬರದಿದ್ದರೂ ಆಪತ್ತಿಗೆ ಆಗುವ ಅತ್ತೆ ಇದ್ದರೆ ಸಾಕು.

೨. ಆಳ್‌ಅರಿಯತೆ ಮೋವಳ ಪುಡಿ ಚನಕೆ.
– ಆಳು ಯಾರೆಂದು ತಿಳಿಯದೆ ಮಗಳನ್ನು ಹಿಡಿದ.
ಮನುಷ್ಯ ಅಂತ ತಿಳಿದು ಮಗಳನ್ನೆ ಅಪ್ಪಿದ.

೩. ಅರಮನೆ ಕತ್ತಿಕ್‌ದಂಡ ಬರಿಬಾಯಿ
– ಅರಮನೆಯ (ಸರ್ಕಾರ) ಕತ್ತಿಗೆ ಎರಡೂ ಕಡೆ ಬಾಯಿ

೪. ಅತ್ತೆ ಮರಂರ್ಜ ಕಟ್ಟ್‌ ಇತ್ತೆ ಮರಂಜಕ್‌ ಮೆತ್ತೆ
– ಆ ಕಡೆ ಮಗುಚಿದರೆ ಮಂಚ ಈ ಕಡೆ ಮಗುಚಿದರೆ ಹಾಸಿಗೆ.

೫. ಅಪ್ಪಂಡ್‌ನೇದಂಡ್‌ಅವ್ವಂಡ್‌ಪತ್ತಿಯಂಟ್‌
– ಅಪ್ಪ ಅಟ್ಟದ ಮೇಲಿದ್ರ ಅವ್ವ ಹತ್ತಿ ಹೋಗ್ತಾಳೆ.

೬. ಇಪ್ಪಕ್‌ನರಿತೀನಿ ಇಲ್ಲ ತಿಪ್ಪಕ ನರಿ ಪಟ್ಟಗಿ
– ಇದ್ದಾಗ ಹುಲಿಯಂತೆ ತಿನ್ನುವುದು ಇಲ್ಲದಿದ್ದಾಗ
ಹುಲಿಯಂತೆ ಹಸಿದು ಇರುವುದು.

೭. ಉಳ್ಳದ್‌ಪರೆವಕ್‌ಉಳ್ಳಿ ಉರ್‌ಂ ಜನ್ನಕೆ
–  ಇರೋದನ್ನು ಹೇಳಿದರೆ ಕೆಂಡದಂತೆ ಕೋಪ

೮. ತವುಡು ತಿಂದಕ್‌ತಗರಿಸಿ ಬುಡ
– ತೌಡು ತಿಂದರೂ ಗತ್ತ ಬಿಡ.

೯. ಪುತ್ತರಿ ಚೆತ್ತೆಕೆ ಪೋನನೆ ಕಾಚಿ.
ಬೊಳ್ಳೆಂ ಅಬ್ಬೆರ ತೇಕನನೆಕಾಚಿ
– ಹುತ್ತಿರಿ ಸಂತೆಗೆ ಹೋದಂಗೂ ಆಯ್ತು
ಕೊಡವರನ್ನು ತಾಗಿ ದಂಗೂ ಆಯ್ತು

೧೦. ಪೊಲೆಯಡ ಬೆಂದು ಉಪ್ಪ್‌ಕ್ ನಾಜ
ಅಬ್ಬೆಡ ಬೆಂದು ಪರಂಚಕ್‌ನಾಜ
– ಹೊಲೆಯನ ನೆಂಟು ಉಪ್ಪಿಗಾಗಿ
ಅಬ್ಬೆಯ ನಂಟು ಚಾಪೆಗಾಗಿ

ಒಗಟುಗಳು

೧. ಅಡ್ಡ ಮರತ್‌ದೊಡ್ಡ ಚಕ್ಕೆ
– ಅಡ್ಡಮರದಲ್ಲಿ ದೊಡ್ಡ ಕಾಯಿ (ಹಲಸಿನಕಾಯಿ)

೨. ಆನೆಬುದ್ದಲಿ ಆಯಿರ ಮೊಟ್ಟ್‌
– ಆನೆ ಬಿದ್ದಲ್ಲಿ ಸಾವಿರ ಹೆಜ್ಜೆ (ಹಲಸಿನಕಾಯಿ)

೩. ಎನೆ ಬೇವೋ ಆನೆ ತೊಡೆ ಬೇವುಲೆ
– ಆನೆ ಬೆಂದರು ಆನೆ ತೊಡೆ ಬೇಯಲಿಲ್ಲ (ಮನೆಯ ಗೋಡೆ)

೪. ಆಯಿರ ಮಕ್ಕ ನೀರ್‌ಗಿಳಿಯೋ
– ಸಾವಿರ ಮಕ್ಕಳು ನೀರಿಗೆ ಇಳಿದರು (ಅಕ್ಕಿ ತೊಳೆಯುವುದು)

೫. ಆಯಿರ ಗಿಣಿಕ್‌ಒಂದೇಕೊಕ್ಕ್‌
– ಸಾವಿರ ಗಿಣಿಗಳಿಗೆ ಒಂದೇ ಕೊಟ್ಟ (ಬಾಳೆಗೊನೆ ಮೋತೆ)

೬. ಇಲ್ಲಿಂದ್‌ಪೋಪರ್‌ಮುಂಡತೆ
ಪೋಪು ಕಾಡಲ ಪೋಯಿತ್‌ಸದ್ದ್‌ಮಾಡವ್‌
– ಇಲ್ಲಿಂದ ಹೋಗುವಾಗ ಸುಮ್ಮನೆ ಹೋಗ್ತ
ಕಾಡಿಗೆ ಹೋಗಿ ಸದ್ದು ಮಾಡ್ತದೆ (ಮರ ಕೊಡಲಿ)

೭. ಉದ್ದ ಮರತ್‌ಕೆಂಪು ಸವ್ಯಾಸಿ
– ಉದ್ದನೆಯ ಮರದಲ್ಲಿ ಕೆಂಪು ಸನ್ಯಾಸಿ (ಅಡಕೆ ಕಾಯಿ)

೮. ಎತ್ತ್‌ಬದ್ದೋ ಕೇಕ್‌ಮೇವೋ
– ಎತ್ತು ಬಿದ್ದುಕೊಂಡಿಂದೆ ಹಗ್ಗ ಮೇಯ್ತಿದೆ (ಕುಂಬಳಕಾಯಿ)

೯.  ಆಯಿರ ಮಕ್ಕಕ್ ಕೆಮಿ ಕುತ್ತಿ ಮಂಗಲ
– ಸಾವಿರ ಮಕ್ಕಳಿಗೆ ಕಿವಿಚುಚ್ಚಿದೆ (ಮೇಲ್ಚಾವಣಿಗಳು)

೧೦. ಬಂದ್‌ಆಡಿ ಆಡಿ ಒಂದ್‌ಓಡಿ ಓಡಿ
– ಬಂದು ಆಡ್ತಿತ್ತು ಒಂದು ಓಡಿತ್ತು (ಓಡುವ ನಾಯಿ)

೧೧. ಕಣ್ಣ್‌ಕಾಂಗತಜ್ಜಿ ಪಾಲದಾಟು
– ಕಣ್ಣು ಕಾಣದ ಅಜ್ಜಿ ತೋಡು ದಾಟಿದಳು (ಜಿಗಣೆ)

೧೨. ಮನೆ ಸುತ್ತ ಓಡಿ ಕಳಬೆತ್‌ಒಳಕ್‌ಕೂಡ್‌
– ಮನೆಸುತ್ತ ಓಡಿ ಆಡಿ ಒಳಗೆ ಸೇರಿದೆ (ಪೊರಕೆ)

೧೩. ಮನೆಸುತ್ತ ಕಣ್ಣೀರಿಸುವ
– ಮನೆ ಸುತ್ತ ಕಣ್ಣೀರು ಇಡುತ್ತಿದೆ (ಹೆಂಚಿನ ಮಳೆ ನೀರು)

೧೪. ಮುಳ ಮುಳ್ಳ ಮತರವ ಮುತ್ತ್‌ಕಾಯಿ
– ಮುಳ್ಳುಮುಳ್ಳಿನ ಮರದಲ್ಲಿ ಮುತ್ತಿನಕಾಯಿ (ನಿಂಬೆಕಾಯಿ)

೧೫. ಪಳೆಯ ಚೀಲ ಭತ್ತ ತಿಬೋ
– ಹಳೆಯ ಚೀಲ ಭತ್ತ ತಿನ್ನುತ್ತದೆ. (ಭತ್ತ ತುಂಬುವುದು)

ಪರಾಮರ್ಶನ ಗ್ರಂಥಗಳು

೧. ಕೊಡಗಿನ ಇತಿಹಾಸ: ಡಿ.ಎನ್‌.ಕೃಷ್ಣಯ್ಯ, ಮೈಸೂರು ವಿವಿ-೧೯೭೪.

೨. ಪಟೋತಿ ಪಳಮೆ: ನಡಿಕೇರಿಯಂಡ ಚಿಣ್ಣಪ್ಪ. ಪ್ರಸಾರಂಗ, ಮೈಸೂರು ವಿವಿ.

೩. ಜಗತ್ತಿಗೊಂದು ಕೊಡಗು: ಕೆ.ಪಿ.ಮುತ್ತಣ್ಣ, ಬೆಂಗಳೂರು-೧೯೬೯.

೪. ನೆಲ್ಲಕ್ಕೆ ನಡುಬಾಡೆ: ಪುಣ್ಣೇರ, ಪಿ.ಬಿಬದ್ದಪ್ಪ. ವಿರಾಜಪೇಟೆ-೧೯೯೧ – (ಸಂ)-೧೯೯೨.

೬. ಕಾವೇರಿ ವೈಭವ. ಎದುಕಾಳ, ಕೆ.ಶಂಕರನಾರಾಯಣ ಭಟ್‌, ಭಾಗಮಂಡಲ- ೧೯೮೭

೭. ಕೆಂಬಟ್ಟಿ ಹೊಲೆಯರ ಸಂಸ್ಕೃತಿ: ಎಂ.ಟಿ.ನಾಗರಾಜ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು-೧೯೯೩.

೮. ಕೊಡವ ಭಾಷೆಯ ವ್ಯಾಕರಣ: ಹೆಚ್‌.ಎಂ.ಶಂಕರನಾರಾಯಣ ಭಟ್‌, ಬಾಳೆಲೆ, ಕೊಡಗು-೧೯೮೪.

೯. ಕೊಡಗು ಜಿಲ್ಲೆಯ ಸುಗ್ಗಿಕಟ್ಟೆಗಳು : ಎಂ.ಜಿ.ನಾಗರಾಜ್‌, ಗೌರಿಗಂಗ ಪ್ರಕಾಶನ ಬೆಂಗಳೂರು. ೧೯೮೯.

೧೦. ಕೊಡವರು : ಬಿ.ಡಿ.ಗಣಪತಿ ೧೯೬೨.

೧೧. ಬುಡಕಟ್ಟು ಅಧ್ಯಯನ: ತಿ.ನಂ.ಶಂಕರನಾರಾಯಣ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು.

ಸಂದರ್ಶಿಸಿದ ವ್ಯಕ್ತಿಗಳು (ಮಾಹಿತಿ ನೀಡಿದವರು)

೧. ಚಟ್ಟ ಕುಟ್ಟಡ ಅಪ್ಪಚ್ಚು: ನಿವೃತ್ತ ಅರಣ್ಯಾಧಿಕಾರಿ, ವಿರಾಜಪೇಟೆ.

೨. ಚಿಮ್ಮ : ಅಧ್ಯಾಪಕರು ಅರುವತ್ತೊಕ್ಕಲು, ಪೊನ್ನಂಪೇಟೆ.

೩. ರತ್ನ : ಮತ್ತೂರು ಪೊನ್ನಂಪೇಟೆ.

೪. ಅಕ್ಕಮ್ಮ : ಮತ್ತೂರು ವಿರಾಜಪೇಟೆ ತಾಲೂಕು.

೫. ಸೀತಮ್ಮ : ಕೋತೂರು.

೬. ಸುಬ್ಬಯ್ಯ: (ಅರುವತ್ತೊಕ್ಕಾಲು) ಸಮಾಜ ಕಲ್ಯಾಣ ಇಲಾಖೆ, ಪೊನ್ನಂಪೇಟೆ.

೭. ಹೆಚ್‌.ಮಾಡು : ದೇವಣಗೇರಿ.

೮. ಗೋಪಿ : ಮುಖ್ಯ ಶಿಕ್ಷಕಿ (ರಾಷ್ಟ್ರಪಶ್ರಶಸ್ತಿ ಪುರಸ್ಕೃತೆ) ವಿರಾಜಪೇಟೆ.

* * *