ಕೆಲವರಿಗೆ ಇದ್ದಕ್ಕಿದ್ದಂತೆ
ಹುತಾತ್ಮರಾಗುವ ಬಯಕೆ ;
ಅದಕ್ಕೆ ಕಂಡ ಕಂಡದ್ದಕ್ಕೆ
ಹರಿ ಹಾಯ್ದು ಗುದ್ದುತ್ತಾರೆ.
ಆದರೂ ಹೋಗುವುದಿಲ್ಲ, ಪ್ರಾಣ ;
ಒಂದಷ್ಟು ಕಡಮೆಯಾಗುತ್ತದೆ
ಮೈಯೊಳಗಿನ ತ್ರಾಣ !