ವೈಣಿಕರ ಮನೆತನದಲ್ಲಿ ೧೯೧೭ರಲ್ಲಿ ಬೆಂಗಳೂರು ಜಿಲ್ಲೆಯ ಕನಕಪುರ ತಾಲ್ಲೂಕಿನ ಅರಳಾಳು ಗ್ರಾಮದಲ್ಲಿ ಜನಿಸಿದವರು ರಾಜಅಯ್ಯಂಗಾರ್. ತಂದೆ ವೀಣಾ ರಾಮಸ್ವಾಮಿ ಅಯ್ಯಂಗಾರ್ ಅವರೇ ಗುರುಗಳಾಗಿ ಪುತ್ರನಿಗೆ ವೀಣಾ ವಾದನದಲ್ಲಿ ಪಾಂಡಿತ್ಯ ಗಳಿಸಿಕೊಟ್ಟರು. ನಂತರ ಹೆಚ್‌.ಆರ್. ರಾಮಕೃಷ್ಣಶಾಸ್ತ್ರಿ, ಎಸ್‌.ಚಂದ್ರಪ್ಪ, ಡಿ. ಸುಬ್ಬರಾಮಯ್ಯ ನಂತಹವರ ಮಾರ್ಗದರ್ಶನದಲ್ಲಿ ತಮ್ಮ ಪಾಂಡಿತ್ಯವನ್ನು ವೃದ್ಧಿಗಳಿಸಿಕೊಂಡ ರಾಜಅಯ್ಯಂಗಾರ್ ಶಿವಮೊಗ್ಗ ಜಿಲ್ಲೆಯಲ್ಲಿ ಐದು ದಶಕಗಳಿಗೂ ಮೀರಿ ಉತ್ತಮ ಬೋಧಕರಾಗಿ ಸೇವೆ ಸಲ್ಲಿಸಿದರು.

ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರಸಾರದಲ್ಲಿ ನಿರತರಾಗಿದ್ದ ಇವರನ್ನು ಹಲವಾರು ಸಂಸ್ಥೆಗಳು ಗೌರವಿಸಿವೆ. ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾ ತಿಲಕ’ ಪ್ರಶಸ್ತಿಯನ್ನೂ ಪಡೆದಿದ್ದರು.

ಶ್ರೀಯುತರು ಈಗ ಇಲ್ಲದಿದ್ದರೂ ಇವರ ನೆನಪನ್ನು ಹಸಿರಾಗಿ ಉಳಿಸುವ ಶಿಷ್ಯರು ಇದ್ದಾರೆ.