“ಕಲೆಯ ಬೆಳವಣಿಗೆಗೆ ಸಾಧನೆಯೇ ಮುಖ್ಯ” ಎಂದು ನಂಬಿರುವ ನೃತ್ಯ ಶಿಕ್ಷಕ ಜನಪ್ರಿಯ ಭರತನಾಟ್ಯ ಗುರು, ಸಂಯೋಜಕ ಹಾಗೂ ನರ್ತಕ ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರಿಯ ನಾಟ್ಯ ಪ್ರಕಾರ “ಯಕ್ಷಗಾನ”ದ ಹಿನ್ನೆಲೆಯುಳ್ಳ ಶಿವರಾವ್ ಹೆಸರು ಮಾಡಿರುವುದು ಭರತನಾಟ್ಯ ಗುರುವಾಗಿ, ಆ ಶೈಲಿಯನ್ನು ಬಳಸಿಕೊಂಡು ನಿರ್ಮಿಸಿರುವ ನೃತ್ಯ-ನಾಟಕಗಳಿಂದಾಗಿ ಸುಮಾರು ೪೦ ವರುಷಗಳಿಂದ ನಡೆಯುತ್ತಿರುವ ಶ್ರೀಯುತರ ನೃತ್ಯ ಶಾಲೆಯಿಂದ ತಯಾರಾಗಿ ಖ್ಯಾತಿ ಪಡೆದಿರುವ ಕಲಾವಿದರು ಅನೇಕ. ಅವರಲ್ಲಿ ಹಲವಾರು ತನ್ನ ಗುರುವಿನ ವೃತ್ತಿಯನ್ನೇ ಮುಂದುವರಿಸಿ ನೃತ್ಯ ಶಿಕ್ಷಣವನ್ನು ಒದಗಿಸುತ್ತಿರುವವರೂ ಇದ್ದಾರೆ. ಇಂಥಹವರಲ್ಲಿ ಅವರ ಸುಪುತ್ರ ಕೆ. ಎನ್. ಭವಾನೀ ಶಂಕರ್ ಮತ್ತು ಸೊಸೆ ತನುಜ “ಸಮುದ್ರ” ಎಂಬ ತಮ್ಮ ನೃತ್ಯ ಸಂಗೀತ ಕಲಾಶಾಲೆಯಿಂದ ಲಂಡನ್‌ನಲ್ಲಿ ಯಶಸ್ಸನ್ನು ಗಳಿಸಿದ್ದಾರೆ. ಭವಾನೀ ಶಂಕರ್ ಮೃದಂಗ ವಾದನದಲ್ಲಿ ಹೆಚ್ಚಿನ ಪ್ರಾವೀಣ್ಯತೆಯನ್ನು ಗಳಿಸೀರುವ ಕಲಾವಿದಕೂಡ.

ಅಂತೆಯೇ ಶಿವರಾವ್ ಸಹ ತಮ್ಮ ಮತ್ತು ತಮ್ಮ ಶಿಷ್ಯರಿಂದೊಡಗೂಡಿ ದೇಶ-ವಿದೇಶಗಳಲ್ಲಿ ತಮ್ಮ ಕಾರ್ಯಕ್ರಮಗಳನ್ನಿತ್ತು ಜಯಶೀಲರಾಗಿದ್ದಾರೆ. ಇಂತಹ ಅವರ ಕಾರ್ಯಕ್ರಮಗಳಲ್ಲಿ ತಿರುಪತಿ ವೆಂಕಟೇಶ್ವರನ ಸನ್ನಿಧಿಯಲ್ಲಿ, ರಾಘವೇಂದ್ರಸ್ವಾಮಿಗಳ ೩೦೦ನೇ ಜಯಂತೋತ್ಸವದಲ್ಲಿ ಧರ್ಮಸ್ಥಳದ ಮಂಜುನಾಥೇಶ್ವರನ ದಿವ್ಯ ಸನ್ನಿಧಿಯಲ್ಲಿ ಅಲ್ಲದೇ ಕಟೀಲ ಕೊಳ್ಳೋರು ದೇವಸ್ಥಾನಗಳಲ್ಲಿ ಪ್ರದರ್ಶಿಸಲಾದ ನಾಟ್ಯ ರೂಪಕಗಳು ಉಲ್ಲೇಖಾರ್ಹ ಇದಲ್ಲದೇ ಉಡುಪಿ, ಹಂಪೆ, ಪಟ್ಟದಕಲ್ಲುಗಳಲ್ಲಿ ಜರುಗಿದ ನೃತ್ಯೋತ್ಸವಗಳಲ್ಲೂ ಭಾಗವಹಿಸಿ ಸಾರ್ಥಕವನ್ನು ಪಡೆದಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳಲ್ಲು ಸ್ವತಃ ಶಿವರಾವ್‌ರವರೇ ಮುಖ್ಯ ಭೂಮಿಕೆಯಲ್ಲಿ ನರ್ತಿಸಿ ಪ್ರದರ್ಶಸಿದ ಯಶಸ್ಸಿಗೆ ಕಾರಣರಾಗಿದ್ದಾರೆ ಎಂಬುದೂ ನಿಜ.

ಇದಲ್ಲದೇ ರಾಜ್ಯ ಸರಕಾರವು ೧೯೬೩ರಿಂದ ನೃತ್ಯದ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಪರೀಕ್ಷೆಗಳಲ್ಲಿ ಪರೀಕ್ಷಕರಾಗಿ, ಪರೀಕ್ಷಣ ಮಂಡಲಿಯ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಹೀಗೆ ಹಲವಾರು ನೃತ್ಯಕಾಂಕ್ಷಿಗಳ ಬೆಳವಣಿಗೆಗೆ ನೆರವಾಗಿ ನೃತ್ಯ ಪ್ರೇಕ್ಷಕರ ಮನ್ನಣೆಯನ್ನು ಗಳಿಸಿ ನೃತ್ಯ ಕಲೆಗೇ ಜೀವನವನ್ನು ಮೂಡಿಪಾಗಿಟ್ಟಿರುವ ಕೆ. ಶಿವರಾವ್‌ಗೆ ರಾಜ್ಯ ಸಂಗೀತ -ನೃತ್ಯ ಅಕಾಡೆಮಿ ೧೯೯೫-೯೬ನೇ ಸಾಲಿನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.