ತಮಿಳುನಾಡಿನ ತಂಜಾವೂರು, ಸಂಗೀತಕ್ಕೇರುವಂತೆ ನೃತ್ಯಕ್ಕೂ ಹೆಸರಾದ ಕ್ಷೇತ್ರ. ಹದಿನೇಳು-ಹದಿನೆಂಟನೆಯ ಶತಮಾನಗಳಲ್ಲಿ ಇಲ್ಲಿ ಆಳಿದ ಮರೇಡಾ ವಂಶಸ್ತರು, ಈ ಎರಡೂ ಶಾಸ್ತ್ರೀಯ ಕಲೆಗಳಿಗೆ ಅತಿಶಯ ಪ್ರೋತ್ಸಾಹವನ್ನಿತ್ತಿದ್ದರು. ಹಾಗೆ ಪ್ರೋತ್ಸಾಹ ಪಡೆದ ಮನೆತನಗಳಲ್ಲಿ ತಂಜಾವೂರಿನ ನಾಲ್ವರು ಎಂದೇ ಪ್ರಖ್ಯಾತರಾದ ಚಿನ್ನಯ್ಯ, ಪೊನ್ನಯ್ಯ, ಶಿವಾನಂದಂ ಮತ್ತು ವಡಿವೆಲು ಈ ಎರಡೂ ಕಲೆಗಳಲ್ಲಿ ಪರಿಶ್ರಮ ಹೊಂದಿದ್ದು, ಅವರ ಮನೆತನದ ಕೀರ್ತಿ ಇಂದಿಗೂ ಅಚ್ಚಳಿಯದಂತೆ ಉಳಿಯಲು ಕಾರಣ ಭರತನಾಟ್ಯ ಕಚೇರಿಗೆ ಅವಶ್ಯಕವಾದ ಸುವಿಖ್ಯಾತ ಪದವರ್ಣಗಳು ಅವರಿಂದ ರಚಿತ ಜಾವಳಿ, ತಿಲ್ಲಾನಗಳೂ ಅಷ್ಟೇ ಪ್ರಸಿದ್ಧ.

ಅಂತಹ ಶ್ರೇಷ್ಠ ಮನೆತನಕ್ಕೂ ಸೇರಿದವರು ಕೆ.ಸಿ. ಕಿಟ್ಟಪ್ಪ ಪಿಳ್ಳೆ, ತಂದೆ ಪೊನ್ನಯ್ಯರಿಂದ ಶ್ರೀಯುತರು ಸಂಗೀತವನ್ನು ಕರಗತ ಮಾಡಿಕೊಂಡರೆ, ಮಾತಾಮಹ ಮೀನಾಕ್ಷಿ ಸುಂದರಾ ಪಿಳ್ಳೆಯವರಿಂದ ಭರತನಾಟ್ಯದಲ್ಲಿನ ನಾಟ್ಯರಂಗವನ್ನು ಕಲಿತರು. ಹೆಸರಾಂತ ನೃತ್ಯಕಲಾವಿದೆಯರಾದ ವೈಜಯಂತಿ ಮಾಲಾ, ಹೇಮಾಮಾಲಿನಿಯವರಂತೆ ಅನೇಕ ಶಿಷ್ಯರನ್ನು ಹೊಂದಿರುವ ಶ್ರೀಯುತರು ೧೯೫೧ರಿಂದ ಬೆಂಗಳೂರಿನಲ್ಲಿ ನೆಲಸಿ, ನಾಟ್ಯಾಚಾರ್ಯರಾಗಿ ಅನೇಕ ಶಿಷ್ಯರಿಗೆ ಪಾಟಾಂತರವನ್ನೊದಗಿಸಿದ್ದಾರೆ. ಅವರಲ್ಲಿ ಪ್ರಸಿದ್ಧಿ ಪಡೆದವರಲ್ಲಿ ಪ್ರಸ್ತುತ ಚೆನ್ನೈನಿವಾಸಿ ಯಾದ ಸುಧಾರಾಣಿ ರಘುಪತಿ, ನರ್ಮದಾ, ಪದ್ಮಿನೀರಾವ್, ಪದ್ಮಜಾ ಶ್ರೀನಿವಾಸನ್ ಹೆಸರಿಸುವಂತಹದು. ಅಲ್ಲದೇ ತಮ್ಮ ಮಾತುಲ ಪಂದನಲ್ಲೂರು ಮುತ್ತಯ್ಯ ಪಿಳ್ಳೆಯವರೊಡಗೂಡಿ ಲೀಲಾ ರಾಮನಾಥನ್, ಆಶಾ-ರೇವತಿ, ಶಾರದಾ ರುದ್ರರವರುಗಳು ನೃತ್ಯ ಶಿಕ್ಷಣಕಲಾ ಕಾರಣೀ ಭೂತರಾಗಿದ್ದಾರೆ. ಇದೇ ಜೋಡಿ ಕೆಲಕಾಲ ಲೀಲಾ ರಸರಿಂದ ಸ್ಥಾಪಿತ ಮೀನಾಕ್ಷಿಸುಂದರಂ ಪಿಳ್ಳೆ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್‌ ಮತ್ತು ಭಾರತೀಯ ವಿದ್ಯಾಭವನದಲ್ಲೂ ನೃತ್ಯ ಶಿಕ್ಷಕರಾಗಿ ಸೇವೆಸಲ್ಲಿಸಿದ್ದಾರೆ. ಮೃದಂಗ ವಾದನದಲ್ಲೂ ಪರಿಶ್ರಮವಿದ್ದ ಶ್ರೀಯುತರು ತಮ್ಮ ಶಿಷ್ಯರಲ್ಲನೇಕರ ಕಾರ್ಯಕ್ರಮಗಳಲ್ಲಿ ನಟುವಾಂಗದ ಜೊತೆಗೆ ಬಾಯಿ ಹಾಡುಗಾರಿಕೆಯಲ್ಲೂ ಸಹಕರಿಸಿರುವುದು ವಿಶೇಷ. ಅಂತಹ ಕಾರ್ಯಕ್ರಮಗಳು ಮರೆಯಲಾಗದ ಅನುಭವ ಎಂದೇ ಹೇಳಬೇಕು.

ಕಿಟ್ಟಪ್ಪ ತಮ್ಮ ಮನೆತನವನ್ನು ಕುರಿತ ಕಿರು ಪುಸ್ತಕವನ್ನಲ್ಲದೇ, “ತೇವಾದ ಇಶ್ಯೆ” ಎಂಬ ತಮಿಳು ಭಕ್ತಿ ಸಂಗೀತದ ಪ್ರಚಾರಕ್ಕೂ ನೆರವಾದರು. ಅಂತೆಯೇ ಷಹಜೀಯವರ ರಚನೆಗಳಿಗೆ ಸಂಗೀತ ಸಂಯೋಜನೆಯನ್ನು ಮಾಡಿ, ನೃತ್ಯಕ್ಕೆ ಅಳವಡಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಅಪರೂಪವಾದ “ನವಸಂಧಿಕೌತ್ವಂ” ಎಂಬ ವಿಶೇಷ ನೃತ್ಯ ಸಂಯೋಜನೆಯನ್ನು ಶಿಷ್ಯರಮೂಲಕ ಪ್ರಚಾರಕ್ಕೆ ತಂದ ಶ್ರೇಯಸ್ಸು ಇವರಿಗೆ ಸಲ್ಲಬೇಕು. ಅಂತಹ ಶಿಷ್ಯರಲ್ಲಿ ಅವರ ಹಿರಿಯ ಶಿಷ್ಯಯರಾಗಿದ್ದ ಬೆಂಗಳೂರಿನ ಪೊನ್ನಯ್ಯ ಲಲಿತಕಲಾ ಅಕಾಡೆಮಿಯ ಪದ್ಮಿನೀ ರಾವ್ ಮೊದಲಿಗರು.

ಕರ್ನಾಟಕ ಸರಕಾರದಿಂದ ವಿಶೇಷ ಪ್ರಶಸ್ತಿಯನ್ನು ಪಡೆಯುತ್ತಿದ್ದ ಕಿಟ್ಟಪ್ಪರು ಚೆನ್ನೈನ ತಮಿಳು ಇಶ್ಯೆ ಸಂಘದ ೧೯೮೫ನೇ ಸಾಲಿನ ವಾರ್ಷಿಕ ಉತ್ಸವದ ಅಧ್ಯಕ್ಷತೆ ವಹಿಸಿ “ಇಶ್ಯೆ ಪರಿಜ್ಞರ್” ಎಂಬ ಬಿರುದನ್ನು ಪಡೆದವರಲ್ಲದೇ ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯ ಪ್ರಶಸ್ತಿಯಿಂದಲೂ ಪುರಸ್ಕೃತರು.

ತಂದೆ ಪೊನ್ನಯ್ಯ ತಂಜಾವೂರಿನ ತಮಿಳು ವಿಶ್ವವಿದ್ಯಾನಿಲಯದ ಸಂಗೀತ ವಿಭಾಗ ೧೫ ಮುಖ್ಯಸ್ಥರಾಗಿದ್ದಾರೆ. ಕಿಟ್ಟಪ್ಪ ಅದೇ ವಿಶ್ವವಿದ್ಯಾನಿಲಯದ ನೃತ್ಯ ವಿಭಾಗದ ಮುಖ್ಯಸ್ಥರಾಗಿದ್ದರೂ ಎಂಬುದು ಗಮನಾರ್ಹ.