ಚೆಂಗುಲಾಬಿ ಮುದ್ದು ಮಗು
ಪುಟಿವ ಚಿಲುಮೆಯಂಥ ನಗು.
ಚಿಕ್ಕೆಯಂತೆ ಹೊಳೆವ ಕಣ್ಣು
ಬೆಳುದಿಂಗಳ ರಸದ ಹಣ್ಣು.
ಆನಂದವೆ ಮೂರ್ತಗೊಂಡು
ಪುಟ ಪುಟ ಪುಟ ಪುಟಿವ ಚೆಂಡು.
ಅಹಾ ಹೊಸತು ಹೊಸತು ಜಗ
ಕ್ಷಣ ಕ್ಷಣಕ್ಕೂ ಸೋಜಿಗ.
ಹೊಂಬಿಸಿಲಲಿ ತೆಂಗಿನ ಗರಿ
ತೂಗಾಡುತ ಹೊಳೆವ ಪರಿ
ಲಕಲಕಿಸುವ ಮೊಮ್ಮಗಳು
ಗರಿಗೆದರುತ ಕುಣಿವ ನವಿಲು.
ಎಲ್ಲಿಂದಳೊ ಇವಳು ಬಂದು
ಮನೆ ಮಂದಿಯ ಕೇಂದ್ರಬಿಂದು.
Leave A Comment